Tag: ಅಮ್ಮಾವ್ರ ಗಂಡ

  • ಕನ್ನಡದ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ್ದ ಭಾಗ್ಯಶ್ರೀ ಹಣೆಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಕನ್ನಡದ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ್ದ ಭಾಗ್ಯಶ್ರೀ ಹಣೆಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ಶಿವಣ್ಣ ನಟನೆಯ ‘ಅಮ್ಮಾವ್ರ ಗಂಡ’ (Ammavara Ganda Film) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಭಾಗ್ಯಶ್ರೀ (Bhagyashree) ಹಣೆಗೆ ಪೆಟ್ಟಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಡ್ ಮೇಲೆ ಮಲಗಿರುವ ನಟಿಯ ಫೋಟೋ ವೈರಲ್ ಆಗ್ತಿದ್ದಂತೆ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಆದಷ್ಟು ಬೇಗ ಭಾಗ್ಯಶ್ರೀ ಅವರು ಚೇತರಿಸಿಕೊಳ್ಳಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

    ನಟಿ ಭಾಗ್ಯಶ್ರೀ ಪಿಕಲ್‌ಬಾಲ್ ಆಡುವಾಗ ಪೆಟ್ಟು ಮಾಡಿಕೊಂಡಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಸರ್ಜರಿ ಮಾಡಿದ್ದು, ನಟಿಯ ಹಣೆಗೆ 13 ಹೊಲಿಗೆ ಹಾಕಿದ್ದಾರೆ. ಆಪರೇಷನ್ ಥಿಯೇಟರ್‌ನಲ್ಲಿ ಭಾಗ್ಯಶ್ರೀ ಮಲಗಿರುವ ಫೋಟೋ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಗಾಬರಿಗೊಂಡಿದ್ದಾರೆ.

    ಅವರ ಆರೋಗ್ಯದ ಕುರಿತು ಭಾಗ್ಯಶ್ರೀ ಅವರಿಂದಾಗಲಿ, ಕುಟುಂಬ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ ಆತಂಕಪಡುವಂಥದ್ದು ಏನಾಗಿಲ್ಲ ಎಂದು ಹೇಳಲಾಗುತ್ತಿದೆ. ನಟಿಯ ಕಡೆಯಿಂದ ಸ್ಪಷ್ಟನೆ ಸಿಗುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಇನ್ನೂ 1989ರಲ್ಲಿ ‘ಮೈನೆ ಪ್ಯಾರ್ ಕಿಯಾ’ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ನಟಿಸಿದರು. ಬಹುಭಾಷಾ ನಟಿಯಾಗಿ ಗುರುಸಿಕೊಂಡಿದ್ದಾರೆ. ಕನ್ನಡದಲ್ಲೂ ಶಿವಣ್ಣ ಜೊತೆ ಭಾಗ್ಯಶ್ರೀ ತೆರೆಹಂಚಿಕೊಂಡಿದ್ದಾರೆ.

  • ಕನ್ನಡಕ್ಕೆ ಅಮ್ಮಾವ್ರ ಗಂಡ ನಾಯಕಿಯ ಮಗಳು

    ಕನ್ನಡಕ್ಕೆ ಅಮ್ಮಾವ್ರ ಗಂಡ ನಾಯಕಿಯ ಮಗಳು

    ಬಾಲಿವುಡ್ ನಟಿ ಭಾಗ್ಯಶ್ರೀ ಮಗಳು ಆವಂತಿಕಾ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ನಟನೆಯ ‘ಕ್ಯೂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

    ಹಿಂದಿಯ ‘ಮಿಥ್ಯ’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆವಂತಿಕಾಗೆ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಈ ಹಿಂದೆ ತೆಲುಗಿನಲ್ಲೂ ಇವರು ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಕನ್ನಡ ಚಿತ್ರದ ಮೂಲಕ ಹಿರಿತೆರೆಗೆ ಆವಂತಿಕಾ ಪ್ರವೇಶ ಮಾಡುತ್ತಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

    1997ರಲ್ಲಿ ತೆರೆಕಂಡ ಶಿವರಾಜ್ ಕುಮಾರ್ ನಟನೆಯ ‘ಅಮ್ಮಾವ್ರ ಗಂಡ’ ಸಿನಿಮಾದ ಮೂಲಕ ಭಾಗ್ಯಶ್ರೀ ಚಂದನವನಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾದಲ್ಲಿಯ ರಾಣಿ ಪಾತ್ರದ ಮೂಲಕ ಅವರು ಮನೆಮಾತಾದರು. 22 ವರ್ಷಗಳ ನಂತರ ಮತ್ತೆ ಭಾಗ್ಯಶ್ರೀ ಕನ್ನಡ ಚಿತ್ರ ಒಪ್ಪಿಕೊಂಡಿದ್ದು, 2019ರಲ್ಲಿ ಬಿಡುಗಡೆಯಾದ ನಿಖಿಲ್ ಕುಮಾರ್ ಸ್ವಾಮಿ ನಟನೆಯ ‘ಸೀತಾರಾಮ್ ಕಲ್ಯಾಣ’ ಚಿತ್ರ. ಈ ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳ ನಂತರ ಮಗಳು ಆವಂತಿಕಾರನ್ನು ‘ಕ್ಯೂ’ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯ ಮಾಡುತ್ತಿದ್ದಾರೆ ಭಾಗ್ಯಶ್ರೀ. ಇದನ್ನೂ ಓದಿ : ಸೆಟ್ಟೇರಿತು ರಾಜವರ್ಧನ್ ಮೂರನೇ ಸಿನಿಮಾ

    ಕನ್ನಡ, ತಮಿಳು, ಹಿಂದಿ, ಭೋಜಪುರಿ, ಮರಾಠಿ, ತೆಲುಗು ಹೀಗೆ ಹಲವು ಭಾಷೆಗಳಲ್ಲಿ ಭಾಗ್ಯಶ್ರೀ ನಟಿಸಿದ್ದರೂ, ಮಗಳು ಮಾತ್ರ ಕನ್ನಡದ ಸಿನಿಮಾದ ಮೂಲಕವೇ ಚಿತ್ರರಂಗ ಪ್ರವೇಶ ಮಾಡಬೇಕು ಎನ್ನುವುದು ಆಸೆಯಾಗಿತ್ತಂತೆ. ತಮ್ಮ ಆಸೆಗೆ ತಕ್ಕಂತೆ ಕನ್ನಡ ಸಿನಿಮಾ ರಂಗದಿಂದಲೇ ಆಫರ್ ಬಂದಿದ್ದು ಖುಷಿ ತಂದಿದೆ ಎಂದಿದ್ದಾರೆ.