Tag: ಅಮೋಲ್ ಕಾಳೆ

  • ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸೇನಾಧಿಕಾರಿ ಕೈವಾಡ ಶಂಕೆ?

    ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮಾಜಿ ಸೇನಾಧಿಕಾರಿ ಕೈವಾಡ ಶಂಕೆ?

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಬಂಧಿತ ಆರೋಪಿಗಳ ವಿಚಾರಣೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತದ್ದಾರೆ. ಗೌರಿ ಲಂಕೇಶ್ ಹತ್ಯೆಮಪ್ರಕರಣದಲ್ಲಿ ಮಾಜಿ ಸೇನಾಧಿಕಾರಿಯ ಕೈವಾಡ ಇರೋ ಬಗ್ಗೆ ವಿಶೇಷ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಲಪಂಥೀಯ ಸಂಘಟನೆಯೊಂದರಲ್ಲಿ ಪ್ರಮುಖ ಹುದ್ದೆಯಲ್ಲಿರುವ ನಾಲ್ವರಲ್ಲಿ ಒಬ್ಬರು ನಿವೃತ್ತ ಕರ್ನಲ್. ಇವರೇ ಪ್ರಮುಖ ಆರೋಪಿಯಾಗಿರುವ ಅಮಿತ್ ಕಾಳೆಗೆ ಗೌರಿ ಹತ್ಯೆ ಮಾಡುವಂತೆ ಸೂಚನೆ ನೀಡಿದ್ದರು ಬಗ್ಗೆ ಶಂಕೆಗಳು ವ್ಯಕ್ತವಾಗಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಸಂಚು ರೂಪಿಸಿದ ಬಳಿಕ ಹತ್ಯೆಗೆ ಬೇಕಾದ ತಯಾರಿಗಾಗಿ ಪ್ರತಿ ತಿಂಗಳು ಆ ಬಲಪಂಥೀಯ ಸಂಘಟನೆ ಕಾಳೆಗೆ 1 ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿದೆಯಂತೆ. ಇನ್ನು ಪ್ರಕರಣದಲ್ಲಿ ಇನ್ನೂ ಮೂರು ಮಂದಿಗಾಗಿ ಹುಡುಕಾಟ ನಡೆಯುತ್ತಿದ್ದು ಅವರು ತಪ್ಪಿಸಿಕೊಂಡು ಓಡಾಡಲು ಆ ಸಂಘಟನೆಯೇ ನೆರವು ನೀಡ್ತಿದೆ ಅಂತ ಎಸ್‍ಐಟಿ ಮೂಲಗಳು ತಿಳಿಸಿವೆ.

  • ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ

    ಗೌರಿ ಲಂಕೇಶ್ ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಎಂದು ಹೇಳಲಾಗುತ್ತಿದೆ. ಪುಣೆಯ ಅಮೋಲ್ ಕಾಳೆಗೆ ಗೌರಿಯವರನ್ನು ಹತ್ಯೆಗೈಯಲು ಸಂಘಟನೆಯೊಂದು ಸುಪಾರಿ ನೀಡಿತ್ತು ಎಂಬ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ವಾಗ್ಮೋರೆ ಓರ್ವ ಧರ್ಮ ರಕ್ಷಕ – ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕೊಂಡ ಶ್ರೀರಾಮ ಸೇನೆ ಸಂಚಾಲಕ

    ಸಂಘಟನೆ ನೀಡಿದ್ದ ಕೆಲಸವನ್ನು ನಿರ್ವಹಿಸಲು ಅಮೋಲ್ ಕಾಳೆ ಒಂದು ವರ್ಷದಿಂದ ಸ್ಕೆಚ್ ಹಾಕಿದ್ದನು. ಹತ್ಯೆಗೂ ಒಂದು ವಾರ ಮುನ್ನವೇ ಬೆಂಗಳೂರಿಗೆ ಬಂದಿದ್ದ ಅಮೋಲ್ ಕಾಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಎರಡು ತಿಂಗಳ ಹಿಂದೆ ಬಂಧಿತನಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನೇ ನಾಯಂಡಹಳ್ಳಿ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದನು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯಲು ಸುಳಿವು ನೀಡಿತ್ತು ಕಾಯಿನ್ ಬಾಕ್ಸ್!

    ಬೆಂಗಳೂರಿಗೆ ಬಂದಿದ್ದ ಅಮೋಲ್ ಕಾಳೆ ಹಂತಕರ ಟೀಂಗಾಗಿ ಹುಡುಕಾಟ ನಡೆಸಿದ್ದನು. ಈ ವೇಳೆ ಅಮೋಲ್ ಕಾಳೆಗೆ ಸಿಕ್ಕಿದ್ದು, ಬರೋಬ್ಬರಿ 9 ಜನ. ಈ ಎಲ್ಲರಲ್ಲಿ ಗೌರಿಯವರನ್ನು ಕೊಲ್ಲಲು ನೇಮಕವಾದವನೇ ಸಿಂಧಗಿಯ ಪರಶುರಾಮ್ ವಾಗ್ಮೋರೆ. ಇದನ್ನೂ ಓದಿ: ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?

    ಕೊಲೆಗೂ ಎರಡು ದಿನ ಮುನ್ನ ಅಂದರೆ ಸೆ.3ರಂದು ಪರಶುರಾಮ್ ಬೆಂಗಳೂರಿಗೆ ಬಂದಿದ್ದು, ಸೆ.4ರಂದು ಗೌರಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದ್ರೆ ಸರಿಯಾದ ಸಮಯ, ಸ್ಥಳ ನಿಗದಿಯಾಗದ ಹಿನ್ನೆಲೆಯಲ್ಲಿ ಪ್ಲಾನ್ ಫೇಲ್ ಆಗಿತ್ತು. ಸೆ.5ರಂದು ಹಂತಕರು ಪ್ಲಾನ್ ಮಾಡಿದ್ದಂತೆ ಗೌರಿಯವರನ್ನು ಕೊಂದು ಹಾಕಿದ್ದರು. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    https://www.youtube.com/watch?v=Muzh1bCrCp8

    https://www.youtube.com/watch?v=1Ik_Z5XZXfY