ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿಯ (Gandhad Gudi) ‘ಜರ್ನಿ ಆಫ್ ಗಂಧದಗುಡಿ’ ವಿಡಿಯೋ ಬಿಡುಗಡೆ ಆಗಿದೆ. ಈ ಪ್ರಾಜೆಕ್ಟ್ ಹಿಂದಿನ ಕಥೆಯನ್ನು ನಿರ್ದೇಶಕ ಅಮೋಘ ವರ್ಷ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸವಿವರವಾಗಿ ಹಂಚಿಕೊಂಡಿದ್ದಾರೆ. ಗಂಧದ ಗುಡಿ ಶುರುವಾಗಿದ್ದು ಹೇಗೆ? ಅದನ್ನು ಮೊದಲು ಯಾವ ಹೆಸರಿನಿಂದ ಪ್ರಾರಂಭಿಸಲಾಯಿತು. ನಂತರ ಏನೆಲ್ಲ ಬದಲಾವಣೆಗಳು ಆದವು ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ನಿರ್ದೇಶಕ ಅಮೋಘ ವರ್ಷ ಪ್ರಕೃತಿಯ ಸೌಂದರ್ಯ, ಕಾಡು ಮೇಡುಗಳ ಅಚ್ಚರಿಗಳನ್ನು ಚಿತ್ರೀಕರಿಸಿ ಪುನೀತ್ (Puneeth Rajkumar) ಅವರ ಮುಂದಿಟ್ಟಾಗ ಸ್ವತಃ ಅಪ್ಪು ಅವರೇ ಅದನ್ನು ಬೆರಗಿನಿಂದ ನೋಡಿದರಂತೆ. ಅಲ್ಲದೇ, ತಮ್ಮ ಆಸೆಗಳನ್ನೂ ಅಮೋಘ ಜೊತೆ ಹಂಚಿಕೊಂಡಿದ್ದರಂತೆ. ಈ ಕನಸಿಗೆ ಅವರು ಇಟ್ಟಿದ್ದ ಹೆಸರು ‘ಜರ್ನಿ ಟು ರಿಮೆಂಬರ್’. ಇದೇ ಹೆಸರಿನಲ್ಲೇ ಮೊದಲು ಪ್ರಾಜೆಕ್ಟ್ ಶುರು ಮಾಡಿದ್ದರಂತೆ. ಆನಂತರ ಇದಕ್ಕೆ ಗಂಧದ ಗುಡಿ ಅಂತ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

ಕಾಡಿನಲ್ಲಿ ಜೀವಂತ ಆನೆ ಮತ್ತು ಹುಲಿಯನ್ನು ಒಮ್ಮೆಯಾದರೂ ನೋಡಬೇಕು ಎನ್ನುವುದು ಪುನೀತ್ ಅವರ ಆಸೆಯಾಗಿತ್ತಂತೆ. ಆನೆ ಸಿಗಬಹುದು. ಆದರೆ, ಹುಲಿಯನ್ನು ನೋಡುವುದು ತೀರಾ ಕಷ್ಟ ಮತ್ತು ವಿರಳ. ಆದರೆ, ಪುನೀತ್ ಅವರಿಗೆ ಮೊದಲ ದಿನವೇ ಹುಲಿಯನ್ನು ನೋಡುವಂತಹ ಬಂಪರ್ ಅವಕಾಶ ಸಿಕ್ಕಿತ್ತಂತೆ. ಈ ಕುರಿತು ಅಮೋಘ ಮಾತನಾಡುತ್ತಾ, ‘ಹುಲಿಯನ್ನು ನೋಡಲು ಹತ್ತಾರು ದಿನಗಳ ಕಾದಿದ್ದಿದೆ. ಎಷ್ಟೋ ಜನರಿಗೆ ಮೂರ್ನಾಲ್ಕು ವರ್ಷ ಕಾದರೂ ಸಿಗುವುದಿಲ್ಲ. ಆದರೆ, ಅಪ್ಪು ಅವರಿಗೆ ಮೊದಲ ದಿನವೇ ಹುಲಿ ಕಂಡಿತ್ತು. ಅವರ ಸಂಭ್ರಮಿಸಿದ್ದು ಇನ್ನೂ ಕಣ್ಮುಂದಿದೆ’ ಎಂದಿದ್ದಾರೆ.

ಪುನೀತ್ ಅವರು ತಾವು ಕಾಡಿಗೆ ಹೋಗುತ್ತೇನೆ ಎಂದು ಹೇಳಿದಾಗ ಪತ್ನಿ ಅಶ್ವಿನಿ (Ashwini) ಅವರಿಗೆ ಸಖತ್ ಭಯವಾಗಿತ್ತಂತೆ. ಇದೆಲ್ಲ ನಿಮಗೆ ಬೇಕಾ ಅಂತಾನೂ ಕೇಳಿದ್ದರಂತೆ. ಆದರೆ, ಪುನೀತ್ ಅವರ ಉತ್ಸಾಹಕ್ಕೆ ಸುಮ್ಮನಾಗಿದ್ದರಂತೆ. ಹಾಗಂತ ಸುಮ್ಮನಿರುವುದಕ್ಕೂ ಆಗುತ್ತಿರಲಿಲ್ಲ. ಪ್ರತಿ ದಿನವೂ ಕಾಲ್ ಮಾಡಿ ಮಾತನಾಡುತ್ತಿದ್ದರು. ಅಲ್ಲಿಯ ಅನುಭವಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು ಎಂದು ಸ್ವತಃ ಅಶ್ವಿನಿ ಅವರೇ ಮಾತನಾಡಿದ್ದಾರೆ.


















ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಪುನೀತ್ ಮತ್ತು ಅಮೋಘ ವರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ `ಗಂಧದ ಗುಡಿ’ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಪುನೀತ್, ಕರ್ನಾಟಕದ ಹಲವು ಜಾಗಗಳಿಗೆ ಭೇಟಿ ನೀಡಿ, ಬೆಟ್ಟ ಗುಡ್ಡ ಪರಿಸರಗಳ ಮಧ್ಯೆ ಚಿತ್ರೀಸಿರೋ ಈ ಚಿತ್ರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ತೆರೆಗೆ ಬದರಲು ಸಿದ್ದವಾಗಿದೆ ಎನ್ನುತ್ತಿದೆ ಗಾಂಧಿನಗರದ ಮೂಲಗಳು.
