Tag: ಅಮೆರಿಕ ರಾಯಭಾರ ಕಚೇರಿ

  • India Strikes | ಯುಸ್‌ ನಾಗರಿಕರು ಪಾಕ್‌ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ

    India Strikes | ಯುಸ್‌ ನಾಗರಿಕರು ಪಾಕ್‌ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ

    ಇಸ್ಲಾಮಾಬಾದ್/ಶ್ರೀನಗರ: ಭಾರತದ 15 ನಗರಗಳನ್ನು ಟಾರ್ಗೆಟ್‌ ಮಾಡಿದ್ದ ಪಾಕಿಸ್ತಾನ ತಕ್ಕ ಶಾಸ್ತಿ ಮಾಡಿಸಿಕೊಂಡಿದೆ. ಭಾರತದ ಕ್ಷಿಪಣಿಗಳ ದಾಳಿಗೆ ಲಾಹೋರ್‌ನ ರೆಡಾರ್‌ ಕೇಂದ್ರವೇ (Lahore Radar Systems) ಧ್ವಂಸವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು (US Embassy) ಪಾಕ್‌ನಲ್ಲಿರುವ ಯುಎಸ್‌ ಪ್ರಜೆಗಳು ಕೂಡಲೇ ದೇಶ ತೊರೆಯುವಂತೆ ಹೇಳಿದೆ.

    ಭಾರತೀಯ ನಗರಗಳನ್ನ (Indian Cities) ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ದಿಟ್ಟ ಉತ್ತರ ನೀಡಿದ ಭಾರತೀಯ ವಾಯುಸೇನೆ, ಲಾಹೋರ್‌ನಲ್ಲಿರುವ ರೆಡಾರ್‌ ಕೇಂದ್ರವನ್ನೇ ಧ್ವಂಸ ಮಾಡಿದೆ. ಶೇಖ್‌ಪುರ, ಸಿಯಾಲ್‌ ಕೋಟ್‌, ಗುಜರನ್‌ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್‌ ಮೇಲೂ ಭಾರತದ ಕಾಮಕಾಜಿ ಡ್ರೋನ್‌ ದಾಳಿ ನಡೆಸಿದೆ. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿದೆ ಇದರಲ್ಲಿ 7 ಇಸ್ಲಾಮಾಬಾದ್‌ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿವೆ. ಇದನ್ನೂ ಓದಿ: ಪಾಕಿಸ್ತಾನದ HQ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಕೇಂದ್ರಗಳೇ ಉಡೀಸ್‌

    ಲಾಹೋರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿದ ಬೆನ್ನಲ್ಲೇ ಎಚ್ಚೆತ್ತ ಅಮೆರಿಕ ರಾಯಭಾರ ಕಚೇರಿ ತನ್ನೆಲ್ಲಾ ಸಿಬ್ಬಂದಿಗೆ ಆಶ್ರಯ ನೀಡುವಂತೆ ಕೇಳಿದೆ. ಅಲ್ಲದೇ ಸಂಘರ್ಷ ಪೀಡಿತ ಪ್ರದೇಶಗಳಲ್ಲಿರುವ ಅಮೆರಿಕದ ನಾಗರಿಕರು ಕೂಡಲೇ ದೇಶ ತೊರೆಯುವಂತೆ ಸೂಚನೆ ನೀಡಿದೆ. ಎಲ್ಲ ಯುಎಸ್‌ ನಾಗರಿಕರು ಸಾಧ್ಯವಾದ್ರೆ ಈ ಕೂಡಲೇ ಹೊರಡಿ ಅಥವಾ ಪಾಕ್‌ನ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳಿ ಎಂದು ಎಚ್ಚರಿಸಿದೆ. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼದಲ್ಲಿ 100 ಉಗ್ರರ ಹತ್ಯೆ – ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರದಿಂದ ಮಾಹಿತಿ

  • ಬೆಂಗಳೂರಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭ; ಪ್ರಧಾನಿ ಪ್ರಯತ್ನ ಶ್ಲಾಘಿಸಿದ ಬಿಜೆಪಿ ಮುಖಂಡ ಆನಂದ್

    ಬೆಂಗಳೂರಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭ; ಪ್ರಧಾನಿ ಪ್ರಯತ್ನ ಶ್ಲಾಘಿಸಿದ ಬಿಜೆಪಿ ಮುಖಂಡ ಆನಂದ್

    ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಅಮೆರಿಕ ಉಪರಾಯಭಾರಿ (US Consulate) ಕಚೇರಿ ತೆರೆಯಲು ತೀರ್ಮಾನಿಸಿರುವ ಕ್ರಮವನ್ನು ಬಿಜೆಪಿ ಮುಖಂಡ ಎ.ಹೆಚ್.ಆನಂದ್‌ ಸ್ವಾಗತಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಾತುಕತೆಯ ಫಲವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಐಟಿ-ಬಿಟಿ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭಿಸಲು ಮುಂದಾಗಿರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ

    ಈ ಹಿಂದೆ ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ಮತ್ತು ಹಾಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಬೆಂಗಳೂರಿನಲ್ಲಿ ಉಪರಾಯಭಾರಿ ಕಚೇರಿ ಪ್ರಾರಂಭಿಸಲು ನವದೆಹಲಿಯಲ್ಲಿ ಭೇಟಿ ಮಾಡಿದ ನಿಯೋಗದಲ್ಲಿ ರಣಜಿತ್ ಕುಮಾರ್, ಮಾಗಡಿ ವೇಣುಗೋಪಾಲ್ ಮನವಿ ಪತ್ರವನ್ನು ನೀಡಲಾಗಿತ್ತು. ಇದರ ಪರಿಣಾಮವೇ ಇಂದು ಅಮೆರಿಕ ಸರ್ಕಾರ ದೇಶದ ಎರಡು ಕಡೆ ಉಪರಾಯಭಾರಿ ಕಚೇರಿಗಳನ್ನು ಪ್ರಾರಂಭಿಸಲು ಮುಂದಾಗಿದೆ. ಅದರಲ್ಲೂ ನಾಡಪ್ರಭು ಕೆಂಪೇಗೌಡ ನಿರ್ಮಿತ ಬೆಂಗಳೂರಿನಲ್ಲಿ ಈ ಕಚೇರಿ ಪ್ರಾರಂಭವಾಗುತ್ತಿರುವುದು ಕರುನಾಡಿನ ಮುಕುಟಕ್ಕೆ ಹೆಮ್ಮೆ ತಂದಿದೆ ಎಂದು ಬಣ್ಣಿಸಿದ್ದಾರೆ.

    ಸಾಮಾನ್ಯವಾಗಿ ಅಮೆರಿಕಕ್ಕೆ ತೆರಳಬೇಕಾಗಿದ್ದ ಉದ್ಯೋಗಾಕಾಂಕ್ಷಿಗಳು ಹಾಗೂ ಉನ್ನತ ಶಿಕ್ಷಣ ಪಡೆಯಲು ಹೋಗಬೇಕಾಗಿದ್ದ ವಿದ್ಯಾರ್ಥಿಗಳು ಚೆನ್ನೈಗೆ ತೆರಳಿ ವಿಸಾ ಪಡೆಯಬೇಕಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಉಪರಾಯಭಾರಿ ಕಚೇರಿ ತೆರೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 3,200 ಕೋಟಿ ಹೂಡಿಕೆ ಮಾಡಲಿದೆ ಸೆಮಿಕಂಡಕ್ಟರ್ ಕಂಪನಿ Applied Materials

    ಎ.ಹೆಚ್.ಆನಂದ್ ಅವರು ಮನವಿ ಮಾಡಿಕೊಂಡ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬೆಂಗಳೂರಿನಲ್ಲಿ ಹೆಚ್ಚುವರಿ ರಾಯಭಾರಿ ಕಚೇರಿಯನ್ನು ತೆರೆಯಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ಆಶ್ವಾಸನೆ ನೀಡಿದ್ದರು.

    ಪ್ರಸ್ತುತ ಚೆನ್ನೈನಲ್ಲಿರುವ ಉಪರಾಯಭಾರಿ ಕಚೇರಿಗೆ ಕರ್ನಾಟಕದಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ವಿಸಾ ಪಡೆಯಲು ತೆರಳಲು ಹೆಚ್ಚಿನ ಸಮಯಾವಕಾಶ ಮತ್ತು ಹೋಗಿಬರಲು ಹಣದ ಸಮಸ್ಯೆಯೂ ಎದುರಾಗುತ್ತದೆ ಎಂಬುದು ನನ್ನ ಗಮನದಲ್ಲಿದೆ. ಬೆಂಗಳೂರಿನ ಸೂಕ್ತ ಪ್ರದೇಶದಲ್ಲಿ ಉಪರಾಯಭಾರಿ ಕಚೇರಿಯನ್ನು ತೆರೆಯಲು ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನ ಕೇಳಬೇಕಿತ್ತು – ಬರಾಕ್ ಒಬಾಮಾ

    ಬೆಂಗಳೂರಿನಲ್ಲಿ ಈ ಕಚೇರಿಯನ್ನು ಪ್ರಾರಂಬಿಸುವುದರಿಂದ ವಿದೇಶಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ. ನಮ್ಮ ಸರ್ಕಾರ ಖಂಡಿತವಾಗಿಯೂ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಫಲವಾಗಿ ಬೆಂಗಳೂರಿನಲ್ಲಿ ಉಪರಾಯಭಾರಿ ಕಚೇರಿ ಶೀಘ್ರದಲ್ಲೇ ತಲೆ ಎತ್ತಲಿದೆ.

  • ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ

    ಕೊರೊನಾ ಸಂಕಷ್ಟ- ಆದಷ್ಟು ಬೇಗ ಭಾರತ ತೊರೆಯಿರಿ, ತನ್ನ ಪ್ರಜೆಗಳಿಗೆ ಅಮೆರಿಕ ಸೂಚನೆ

    ನವದೆಹಲಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಅಲ್ಲದೆ ಭಾರತದಲ್ಲಿರುವ ಅಮೆರಿಕ ಪ್ರಜೆಗಳು ಆದಷ್ಟು ಬೇಗ ತೊರೆಯಿರಿ ಎಂದು ತನ್ನ ಪ್ರಜೆಗಳಿಗೆ ಅಮೆರಿಕ ಸಲಹೆ ನೀಡಿದೆ.

    ಅಮೆರಿಕ ಭಾರತವನ್ನು ಲೆವೆಲ್ 4 ಟ್ರಾಲೆವ್ ಅಡ್ವೈಸರಿಯಲ್ಲಿರಿಸಿದ್ದು, ಭಾರತದಲ್ಲಿ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ, ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ, ಭಾರತದಲ್ಲಿನ ಅಮೆರಿಕನ್ನರು ಸಹ ತಾಯ್ನಾಡಿಗೆ ಮರಳಿ ಎಂದು ಅಮೆರಿಕ ತಿಳಿಸಿದೆ.

    ಭಾರತದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಕಾರಣ ವೈದ್ಯಕೀಯ ಆರೈಕೆ ತುಂಬಾ ಸೀಮಿತವಾಗಿದೆ. ಹೀಗಾಗಿ ಅಮೆರಿಕ ಪ್ರಜೆಗಳು ಆದಷ್ಟು ಬೇಗ ಮರಳಲು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಿ. ದಿನ ನಿತ್ಯ ಅಮೆರಿಕಕ್ಕೆ ವಿಮಾನಗಳಿದ್ದು, ಪ್ಯಾರಿಸ್ ಹಾಗೂ ಫ್ರಾಂಕ್‍ಫರ್ಟ್ ಮಾರ್ಗವಾಗಿ ಸಂಚರಿಸಲಿವೆ ಎಂದು ಟ್ರಾವೆಲ್ ಸ್ಟೇಟ್ ಡಿಪಾರ್ಟ್‍ಮೆಂಟ್ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಅಮೆರಿಕ ನಾಗರಿಕರು ಸ್ಟೆಪ್(ಸ್ಮಾರ್ಟ್ ಟ್ರಾವೆಲರ್ ಎನ್ರೋಲ್‍ಮೆಂಟ್ ಪ್ರೊಗ್ರಾಮ್) ನಲ್ಲಿ ನೋಂದಾಯಿಸಿಕೊಳ್ಳಬಹುದು. step.state.gov ವೆಬ್‍ಸೈಟ್‍ನಲ್ಲಿ ಭಾರತದಲ್ಲಿ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ರಾಯಭಾರ ಕಚೇರಿಯಿಂದ ಮಾಹಿತಿ ಪಡೆಯವಹುದು ಎಂದು ತಿಳಿಸಿದೆ.

    ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಮತ್ತು ಮೃತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,645 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಮರಣ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಎರಡನೇ ಅಲೆಯ ಆತಂಕ ಜನರಲ್ಲಿ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ 3,79,257 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದೆ.