Tag: ಅಮೆರಿಕ ಚುನಾವಣೆ

  • ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

    ಭಾರತದಲ್ಲಿ ಒಂದೇ ದಿನ 64 ಕೋಟಿ ಮತ ಎಣಿಕೆ – ಮಸ್ಕ್‌ ರಿಯಾಕ್ಷನ್‌ ಏನು?

    ವಾಷಿಂಗ್ಟನ್‌: ಈ ಹಿಂದೆ ಚುನಾವಣೆಗಳಲ್ಲಿ ಬಳಸುವ ಇವಿಎಂ (EVM) ಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ (Elon Musk) ಇದೀಗ ಭಾರತದಲ್ಲಿ ಮತ ಎಣಿಕೆಯ ಕುರಿತು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

    ನಿನ್ನೆಯಷ್ಟೇ ಜಾರ್ಖಂಡ್‌, ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇದರೊಂದಿಗೆ 14 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಏಣಿಕೆಯೂ ಒಂದೇ ದಿನ ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಮಸ್ಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಇವಿಎಂ ಹ್ಯಾಕ್ ಮಾಡಬಹುದು – ಭಾರತದಲ್ಲಿ ಕಿಚ್ಚು ಹೊತ್ತಿಸಿದ ಮಸ್ಕ್!

    ಮತದಾನದ 19 ದಿನಗಳ ನಂತರವೂ ಕ್ಯಾಲಿಫೋರ್ನಿಯಾದಲ್ಲಿ (California) ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟಿಸದ ಹಿನ್ನೆಲೆಯಲ್ಲಿ ಎಲಾನ್‌ ಮಸ್ಕ್‌ ವರದಿಯೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅಮೆರಿಕ ಚುನಾವಣೆಯ ಮತ ಏಣಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಖಾತೆ ತೆರೆಯದ ʻಜನ್‌ ಸೂರಜ್‌ʼ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್‌ಗೆ ಮುಖಭಂಗ

    ಭಾರತವು ಒಂದೇ ದಿನ 64 ಕೋಟಿ ಮತಗಳನ್ನು ಎಣಿಕೆ ಮಾಡಿದೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಎಣಿಕೆ ನಡೆಯುತ್ತಲೇ ಇದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ತಲೆ ಬಡಿದುಕೊಳ್ಳುತ್ತಿರುವ (ಕರ್ಮ ಎನ್ನುವಂತೆ) ಎಮೋಜಿಯೊಂದನ್ನ ಹಂಚಿಕೊಂಡಿದ್ದಾರೆ.

    ಕ್ಯಾಲಿಫೋರ್ನಿಯಾದಲ್ಲಿ 98 ಪ್ರತಿಶತದಷ್ಟು ಮತ ಎಣಿಕೆ ಪೂರ್ಣಗೊಂಡಿದೆ ಆದ್ರೆ ಅಧಿಕೃತ ಪ್ರಕಟಣೆ ಇನ್ನೂ ಬಾಕಿಯಿದೆ. ಅಮೆರಿಕದ ಅತಿದೊಡ್ಡ ನಗರವಾಗಿರುವ ಕ್ಯಾಲಿಪೋರ್ನಿಯಾ ಸುಮಾರು 3.9 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಈ ಕೈಪಿ 1.6 ಕೋಟಿಗಿಂತಲೂ ಅಧಿಕ ಜನ ನವೆಂಬರ್‌ 5ರಂದು ಮತದಾನದಲ್ಲಿ ಭಾಗಿಯಾಗಿದ್ದರು.

    ಸದ್ಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಾಗಲೇ ಡೊನಾಲ್ಡ್‌ ಟ್ರಂಪ್‌ 2ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಜನವರಿ ವೇಳೆಗೆ ಅಧಿಕೃತ ಘೋಷಣೆಯಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?

    ಈ ಹಿಂದೆ ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದರು. ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂಗಳನ್ನು ಹ್ಯಾಕ್ (Hacking) ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಮಸ್ಕ್ ಹೇಳಿದ್ದರು.

  • ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

    ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

    ನ್ಯೂಯಾರ್ಕ್‌: ಭಾರಿ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಲು ಸಜ್ಜಾಗಿರುವ ಟ್ರಂಪ್‌, ವಿಶ್ವದ ದೊಡ್ಡಣ್ಣ ರಾಷ್ಟ್ರದಲ್ಲಿ 2ನೇ ಬಾರಿಗೆ ಚುಕ್ಕಾಣಿ ಹಿಡಿದು ಇತಿಹಾಸ ಸೃಷ್ಟಿಸಲಿದ್ದಾರೆ.

    ಈ ಚುನಾವಣೆಯಲ್ಲಿ ವಿಜೇತರನ್ನು ನಿರ್ಧರಿಸುವ ಎಲೆಕ್ಟೋರಲ್ ಕಾಲೇಜ್‌ (ಚುನಾಯಿತರ ಕೂಟ) ಸಂಖ್ಯೆಗಳಿಗೆ ಸಂಬಂಧಿಸಿದಂತೆ, ಟ್ರಂಪ್ 267 ರೊಂದಿಗೆ ಮುನ್ನಡೆಯಲ್ಲಿದ್ದು, ಪ್ರಚಂಡ ಗೆಲುವಿನ ಅಂಚಿನಲ್ಲಿದ್ದಾರೆ. ಆದರೆ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ 214 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕವೇ ಆಗಿರುವ 7 ಸ್ವಿಂಗ್‌ ರಾಜ್ಯಗಳ ಪೈಕಿ ನಾಲ್ಕರಲ್ಲಿ ಟ್ರಂಪ್‌ ಜಯಭೇರಿ ಬಾರಿಸಿದ್ದಾರೆ.

    ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕೆರೊಲಿನಾ, ಟೆಕ್ಸಾಸ್, ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಒಳಗೊಂಡಂತೆ 30 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೇವಲ 20 ರಾಜ್ಯಗಳಲ್ಲಿ ಜಯಗಳಿಸಿದ್ದಾರೆ.

  • US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

    US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

    – ತವರು ನ್ಯೂಯಾರ್ಕ್‌ನಲ್ಲೇ ಟ್ರಂಪ್‌ಗೆ ಮುಖಭಂಗ

    ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಐತಿಹಾಸಿಕ ಗೆಲುವು ದಾಖಲಿಸುವ ಸನಿಹದಲ್ಲಿದ್ದಾರೆ. ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಮ್ಮ ಚುನಾವಣಾ ರಾತ್ರಿ ಭಾಷಣವನ್ನು ರದ್ದುಗೊಳಿಸಿದ್ದಾರೆ.

    ಟ್ರಂಪ್ ಅವರು ಎಲ್ಲಾ ಏಳು ಸ್ವಿಂಗ್ ರಾಜ್ಯಗಳಲ್ಲಿ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ಅವರಿಗಿಂತ ಮುಂದಿದ್ದಾರೆ. ಉತ್ತರ ಕೆರೊಲಿನಾ ಮತ್ತು ಜಾರ್ಜಿಯಾವನ್ನು ಟ್ರಂಪ್ ಗೆದ್ದಿದ್ದಾರೆ. ಅರಿಜೋನಾ, ಮಿಚಿಗನ್, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿಯೂ ಮುಂದಿದ್ದಾರೆ.

    ಡೊನಾಲ್ಡ್ ಟ್ರಂಪ್ 63,873,712 (51.1%) ಮತಗಳೊಂದಿಗೆ 230 ಸ್ಥಾನಗಳಲ್ಲಿ ಮುಂದಿದ್ದಾರೆ. ಕಮಲಾ ಹ್ಯಾರಿಸ್ 59,292,585 (47.5%) ಮತಗಳೊಂದಿಗೆ 210 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

    ತವರಿನಲ್ಲಿ ಟ್ರಂಪ್‌ಗೆ ಮುಖಭಂಗ
    ನ್ಯೂಯಾರ್ಕ್‌ನಲ್ಲಿ ಕಮಲಾ ಹ್ಯಾರಿಸ್ ರಾಜ್ಯದ 28 ಚುನಾವಣಾ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ನ್ಯೂಯಾರ್ಕ್ 1984ರ ಚುನಾವಣೆಯಲ್ಲಿ ರೊನಾಲ್ಡ್ ರೇಗನ್ ಅವರಿಗೆ ಅನುಮೋದನೆ ನೀಡಿತ್ತು. ನಂತರದ ಪ್ರತಿ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಡೆಮಾಕ್ರಟಿಕ್‌ಗೆ ಮತ ನೀಡಿದೆ. ನ್ಯೂಯಾರ್ಕ್ ಡೊನಾಲ್ಡ್ ಟ್ರಂಪ್ ಅವರ ತವರು ರಾಜ್ಯ. ತವರಲ್ಲಿ ಗೆಲುವು ಸಾಧಿಸಲು ಸತತವಾಗಿ ಹೆಣಗಾಡುತ್ತಿದ್ದಾರೆ. ಈವರೆಗೆ ಸ್ಪರ್ಧಿಸಿದ ಮೂರು ಚುನಾವಣೆಯಲ್ಲೂ ನ್ಯೂಯಾರ್ಕ್​ನಲ್ಲಿ ಸೋಲು ಅನುಭವಿಸಿದ್ದಾರೆ.

    ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ನ್ಯೂ ಮೆಕ್ಸಿಕೋ, ಒರೆಗಾನ್, ವರ್ಜೀನಿಯಾದಲ್ಲಿ ಕಮಲಾ ಹ್ಯಾರಿಸ್ ಜಯಗಳಿಸಿದ್ದಾರೆ. ನಾರ್ಥ್‌ ಕೆರೊಲಿನಾ, ಮೊಂಟಾನಾ, ಕಾನ್ಸಾಸ್‌ನಲ್ಲಿ ಟ್ರಂಪ್ ಗೆದ್ದಿದ್ದಾರೆ.

  • ಅಮೆರಿಕದಲ್ಲಿ ಇಂದು ಚುನಾವಣೆ – ಕಮಲಾ ಅರಳುತ್ತಾ? ಮತ್ತೊಮ್ಮೆ ಟ್ರಂಪ್‌ಗೆ ಸಿಗುತ್ತಾ ಅಧಿಕಾರ?

    ಅಮೆರಿಕದಲ್ಲಿ ಇಂದು ಚುನಾವಣೆ – ಕಮಲಾ ಅರಳುತ್ತಾ? ಮತ್ತೊಮ್ಮೆ ಟ್ರಂಪ್‌ಗೆ ಸಿಗುತ್ತಾ ಅಧಿಕಾರ?

    ನ್ಯೂಯಾರ್ಕ್‌: ಅಮೆರಿಕಾ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ.

    ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್‌ವಿಲ್ಲೆ ನಾಚ್‌ನ ಸಣ್ಣ ಟೌನ್‌ಶಿಪ್‌ನಲ್ಲಿ 2024 ರ ಅಧ್ಯಕ್ಷೀಯ ಚುನಾವಣೆಗಳಿಗಾಗಿ ಮೊದಲ ಮತದಾನವನ್ನು ಚಲಾಯಿಸಲಾಗಿದೆ. ಇಂದು ಮತ್ತು ನಾಳೆ (ನ.5 ಮತ್ತು ನ.6) ಮತದಾನ ನಡೆಯಲಿದೆ. ಟೌನ್‌ಶಿಪ್ ಯುಎಸ್-ಕೆನಡಾ ಗಡಿಯಲ್ಲಿದೆ ಮತ್ತು ನ್ಯೂ ಹ್ಯಾಂಪ್‌ಶೈರ್‌ನ ಉತ್ತರ ತುದಿಯಲ್ಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

    ಅಮೆರಿಕಾದ 50 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಯಾವ ಪಕ್ಷವನ್ನು ಬೆಂಬಲಿಸುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಪೆನ್ಸಿಲ್ವೇನಿಯಾ, ಮಿಚಿಗನ್, ನಾರ್ತ್ ಕರೋಲಿನಾ, ಜಾರ್ಜಿಯಾ, ನೆವಡಾ, ಅರಿಜೋನ ಸೇರಿ ಏಳು ರಾಜ್ಯಗಳ ಮೂಡ್ ಮಾತ್ರ ಯಾವ ಪಕ್ಷದತ್ತ ಇರುತ್ತೆ ಎನ್ನುವುದು ಗೊತ್ತಾಗಲ್ಲ. ಈ ರಾಜ್ಯಗಳಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಹೆಚ್ಚು ಆದ್ಯತೆ ನೀಡ್ತಾರೆ. ಈ ರಾಜ್ಯಗಳ ಎಲೆಕ್ಟೋರಲ್ ಮತಗಳ ಸಂಖ್ಯೆ 93. ಈ ಪೈಕಿ ಹೆಚ್ಚು ಮತ ಗಳಿಸುವ ಅಭ್ಯರ್ಥಿಗಳು ಅಧ್ಯಕ್ಷ ಪೀಠವನ್ನು ಏರುತ್ತಾರೆ. ಅಂದ ಹಾಗೇ, ಈಗಾಗಲೇ 6.8 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

    538 ಎಲೆಕ್ಚರ್ಸ್ ಅಮೆರಿಕಾದ ಅಧ್ಯಕ್ಷರ ಭವಿಷ್ಯ ನಿರ್ಧರಿಸಲಿವೆ. ಅಮೆರಿಕ ಅಧ್ಯಕ್ಷರಾಗಲು ಕನಿಷ್ಠ 270 ಮತಗಳ ಅಗತ್ಯವಿದೆ. ಜನರು ಇಲ್ಲಿ ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಪ್ರತಿಯೊಂದು ರಾಜ್ಯವು ಜನ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ಜನಪ್ರತನಿಧಿಗಳನ್ನು ಒಳಗೊಂಡಿದೆ. ಕ್ಯಾಲಿಫೋರ್ನಿಯಾ 54 ಸ್ಥಾನಗಳೊಂದಿಗೆ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ನಂತರ ಟೆಕ್ಸಾಸ್ (40) ಮತ್ತು ಫ್ಲೋರಿಡಾ (30). ಮತ್ತೊಂದೆಡೆ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಡೆಲವೇರ್ ಮತ್ತು ವರ್ಮೊಂಟ್‌ನಂತಹ ರಾಜ್ಯಗಳು ಕನಿಷ್ಠ 3 ಸ್ಥಾನಗಳನ್ನು ಹೊಂದಿವೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

    ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಲಿ ಡೆಮಾಕ್ರಟಿಕ್‌ ಪಕ್ಷದಿಂದ ಅಭ್ಯರ್ಥಿಯಾಗಿದ್ದು, ಅವರು ಯುಎಸ್‌ನ ಮೊದಲ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಆಯ್ಕೆಯಾದರೆ, ಯುನೈಟೆಡ್ ಸ್ಟೇಟ್ಸ್‌ನ ಮೊದಲ ಭಾರತೀಯ ಮೂಲದ ಅಧ್ಯಕ್ಷರೂ ಆಗುತ್ತಾರೆ. ಮತ್ತೊಂದೆಡೆ, ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರಲ್ಲಿ ಕಹಿ ನಿರ್ಗಮನದ ನಂತರ ಶ್ವೇತಭವನಕ್ಕೆ ಐತಿಹಾಸಿಕ ಪುನರಾಗಮನವನ್ನು ಬಯಸಿದ್ದಾರೆ.

    ಮತದಾನದ ಸಮಯದಲ್ಲಿ ಪ್ರತಿ ರಾಜ್ಯಕ್ಕೂ ಸಮಯದಲ್ಲಿ ಬದಲಾವಣೆ ಇರುತ್ತದೆ. ಅಮೆರಿಕ ಕಾಲಮಾನದ ಪ್ರಕಾರ, ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ ವರೆಗೆ ಮತದಾನ ನಡೆಯುತ್ತದೆ.

    ಮೊದಲ ಮತದಾನವು ಜಾರ್ಜಿಯಾ ಸೇರಿದಂತೆ ಆರು ರಾಜ್ಯಗಳಲ್ಲಿ ಸುಮಾರು 7 pm ET (5:30 am ಭಾರತೀಯ ಸಮಯ) ಕ್ಕೆ ಮುಕ್ತಾಯಗೊಳ್ಳಲಿದೆ. ಅಂತಿಮ ಮತದಾನವು ನೀಲಿ ರಾಜ್ಯವಾದ ಹವಾಯಿಯಲ್ಲಿ ಮತ್ತು ಕೆಂಪು ರಾಜ್ಯವಾದ ಅಲಾಸ್ಕಾದಲ್ಲಿ 12 am ET (10:30 am ಭಾರತೀಯ ಕಾಲಮಾನ) ಕ್ಕೆ ಮುಕ್ತಾಯಗೊಳ್ಳುತ್ತದೆ. 1 pm ET (11:30 am ಭಾರತೀಯ ಕಾಲಮಾನ) ಕ್ಕೆ ಮತದಾನ ಮುಕ್ತಾಯಗೊಳ್ಳಲಿದ್ದು, ನಂತರ ಮತ ಎಣಿಕೆ ಪ್ರಾರಂಭವಾಗಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

    ಸ್ವಿಂಗ್‌ ರಾಜ್ಯಗಳೇ ನಿರ್ಣಾಯಕ
    ಅಮೆರಿಕ ಅಧ್ಯಕ್ಷ ಭವಿಷ್ಯವನ್ನು ಸ್ವಿಂಗ್ ರಾಜ್ಯಗಳು ನಿರ್ಧರಿಸಲಿವೆ. ಒಟ್ಟು 50 ರಾಜ್ಯಗಳಿದ್ದರೂ ಈ ಏಳು ರಾಜ್ಯಗಳ ಮೇಲೆಯೇ ಸ್ಪರ್ಧಿಗಳ ಕಣ್ಣಿರುತ್ತದೆ. ಏಳು ರಾಜ್ಯಗಳು ಹೊರತುಪಡಿಸಿ ಬಾಕಿ ರಾಜ್ಯಗಳಲ್ಲಿ ಎರಡು ಪಕ್ಷಗಳಿಗೆ ಸಾಂಪ್ರದಾಯಿಕ ಮತಗಳು ಇವೆ. ಉತ್ತರ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಪ್ರತಿ ಬಾರಿಯೂ ಇಲ್ಲಿ ಜನರು ಪಕ್ಷದ ಆಯ್ಕೆ ಬದಲಿಸುತ್ತಾರೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ.

  • US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

    US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

    ವಾಷಿಂಗ್ಟನ್‌: ಅಮೆರಿಕ ಚುನಾವಣೆಗೆ (US Election) ಇನ್ನು ಒಂದು ದಿನ ಬಾಕಿಯಿದೆ. ಆದರೆ ಈಗಾಗಲೇ ಸುಮಾರು 7.7 ಕೋಟಿ ಜನ ಮತದಾನ (Early Voting) ಮಾಡಿದ್ದಾರೆ.

    ಹೌದು. ಮಂಗಳವಾರ ಅಮೆರಿಕದಲ್ಲಿ ಚುನಾವಣೆ ನಡೆಯಲಿದೆ. ಆದರೆ ಅಮೆರಿಕದಲ್ಲಿ ಸುಮಾರು ಎರಡು ವಾರಗಳ ಮೊದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಕಳೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ರಿಪಬ್ಲಿಕನ್‌ ಪಕ್ಷ (Republican Party) ಆರೋಪಿಸಿತ್ತು. ನಂತರ ಸಂಸತ್‌ ಮೇಲೆ ದಾಳಿ ನಡೆದಿತ್ತು. ಹೀಗಾಗಿ ಟ್ರಂಪ್‌ ಅವರು ಈ ಬಾರಿಯ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮೊದಲೇ ಮತದಾನ ಮಾಡುವಂತೆ ಬೆಂಬಲಿಗರಿಗೆ ಮನವಿ ಮಾಡುತ್ತಿದ್ದರು. ಈ ಕಾರಣಕ್ಕೆ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ನಡೆದಿದೆ. ಅದಲ್ಲೂ ರಿಪಬ್ಲಿಕನ್‌ ಪಕ್ಷದ ಬೆಂಬಲಿಗರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

    ಯಾಕೆ ಮೊದಲೇ ಮತದಾನ:
    ನ.5 ರಂದು ಬೇರೆ ಕಾರ್ಯಕ್ರಮ ನಿಗದಿ, ಅನಾರೋಗ್ಯ ಇತ್ಯಾದಿ ಕಾರಣದಿಂದ ಹಲವು ಮಂದಿ ಮೊದಲೇ ಮತದಾನ ಮಾಡಿದ್ದಾರೆ. ಇನ್ನು ಕೆಲವರು ಮತದಾನ ಮಾಡಲು ಆಸಕ್ತಿ ತೋರದವರಿಗೆ ಸ್ಪೂರ್ತಿಯಾಗಲೆಂದು ಮೊದಲೇ ಮತದಾನ ಮಾಡಿದ್ದಾರೆ.  ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

    ಮೊದಲೇ ಮತದಾನ ಮಾಡಿದ್ದರಿಂದ ಚುನಾವಣಾ ಸಮೀಕ್ಷೆಗಳಿಗೆ ನಿಖರ ಫಲಿತಾಂಶವನ್ನು ಊಹಿಸಲು ಸಹಾಯವಾಗುತ್ತದೆ.

    ನಿರ್ಣಾಯಕ ರಾಜ್ಯಗಳು:
    ಅಮೆರಿಕ ಚುನಾವಣೆ ನಾರ್ಥ್‌ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.

    ಈ ರಾಜ್ಯದ ಜನತೆ ಒಂದು ಬಾರಿ ರಿಪಬ್ಲಿಕನ್‌ ಅಭ್ಯರ್ಥಿಗೆ ಮತ ಹಾಕಿದರೆ ಇನ್ನೊಂದು ಬಾರಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಅಧಿಕೃತವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಈ ಕಾರಣಕ್ಕೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲ ಈ ರಾಜ್ಯಗಳನ್ನು ʼSwing States’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ.  ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

     

    2016ರಲ್ಲಿ ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ಟ್ರಂಪ್‌ ಅಧಿಕಾರಕ್ಕೆ ಏರಲು ಮತ್ತು 2020ರಲ್ಲಿ ಟ್ರಂಪ್‌ ಅವರನ್ನು ಸೋಲಿಸಿ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಏರಲು ಈ ರಾಜ್ಯಗಳೇ ನಿರ್ಣಾಯವಾಗಿದ್ದವು. ಹೀಗಾಗಿ ಈ 7 ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಕಮಲಾ ಹ್ಯಾರಿಸ್‌ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸದ್ಯ ಈ ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮುನ್ನಡೆಯಲ್ಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

     

  • ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

    ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

    ವಾಷಿಂಗ್ಟನ್‌: ಅಮೆರಿಕ ಚುನಾವಣೆಗೆ ಇನ್ನು ಎರಡು ದಿನ ಬಾಕಿಯಿದೆ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆಯಿದೆ. ನೇರಾನೇರ ಸ್ಪರ್ಧೆಯಿದ್ದರೂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು 7 ರಾಜ್ಯದ ಜನತೆ.

    ಹೌದು. ಅಮೆರಿಕದಲ್ಲಿ ನೇರವಾಗಿ ಅಧ್ಯಕ್ಷ ಅಭ್ಯರ್ಥಿಗಳಿಗೆ ಜನರು ಮತವನ್ನು ಹಾಕುವುದಿಲ್ಲ. ಅದರ ಬದಲು ʼಎಲೆಕ್ಟರ್ಸ್‌ʼಗೆ ಮತವನ್ನು ಹಾಕುತ್ತಾರೆ. ಜನಸಂಖ್ಯೆಯ ಆಧಾರದಲ್ಲಿ ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳನ್ನು ವಿಂಗಡಿಸಲಾಗಿದೆ.

     

    55 ಎಲೆಕ್ಟೋರಲ್​ ವೋಟ್​ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದ್ದರೆ 38 ವೋಟ್​ಗಳೊಂದಿಗೆ ಟೆಕ್ಸಾಸ್​, ನ್ಯೂಯಾರ್ಕ್​​ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್​ ಮತ್ತು ಪೆನ್ಸಿಲ್ವೇನಿಯಾ ತಲಾ 19, ಓಹಿಯೊ 18, ಜಾರ್ಜಿಯಾ ಮತ್ತು ಮಿಷಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್​ ಮತಗಳನ್ನು ಹೊಂದಿವೆ.

    ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೋರಲ್​ ಮತಗಳು ಇದೆ. ಈ ಪೈಕಿ 270 ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಮತದಾರರು ನಂತರ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನೇರ ಮತಗಳನ್ನು ಹಾಕುತ್ತಾರೆ. ಅದನ್ನು ಚುನಾವಣಾ ಮತಗಳು ಎಂದು ಕರೆಯಲಾಗುತ್ತದೆ.

    ಮೊದಲೇ ಹೇಳಿದಂತೆ 7 ರಾಜ್ಯದ ಜನತೆ ಯಾವ ಪಕ್ಷಕ್ಕೆ ಹೆಚ್ಚು ಮತಗಳನ್ನು ಹಾಕುತ್ತಾರೋ ಅವರು ಆಯ್ಕೆ ಆಗುತ್ತಾರೆ. ಆದರೆ ಜನತೆ ಮತ ಮಾಡುವಾಗ ಅಭ್ಯರ್ಥಿ ಮತ್ತು ಪಕ್ಷವನ್ನು ನೋಡಿಕೊಂಡೇ ಮತವನ್ನು ಹಾಕುತ್ತಾರೆ. ಹೀಗಾಗಿ ಎಲೆಕ್ಟರ್ಸ್‌ಗೆ ಮತ ಹಾಕಿದರೂ ಅದು ಅಧ್ಯಕ್ಷನಿಗೆ ಬಿದ್ದ ಮತ ಎಂದೇ ಪರಿಗಣಿಸಲಾಗುತ್ತದೆ.

    ನಿರ್ಣಾಯಕ ರಾಜ್ಯಗಳು:
    ಅಮೆರಿಕ ಚುನಾವಣೆ ನಾರ್ಥ್‌ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.

    ಈ ರಾಜ್ಯದ ಜನತೆ ಒಂದು ಬಾರಿ ರಿಪಬ್ಲಿಕನ್‌ ಅಭ್ಯರ್ಥಿಗೆ ಮತ ಹಾಕಿದರೆ ಇನ್ನೊಂದು ಬಾರಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಅಧಿಕೃತವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಈ ಕಾರಣಕ್ಕೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲ ಈ ರಾಜ್ಯಗಳನ್ನು ʼSwing States’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ.

     

    ಮುನ್ನಡೆಯಲ್ಲಿ ಟ್ರಂಪ್‌:
    2016ರಲ್ಲಿ ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ಟ್ರಂಪ್‌ ಅಧಿಕಾರಕ್ಕೆ ಏರಲು ಮತ್ತು 2020ರಲ್ಲಿ ಟ್ರಂಪ್‌ ಅವರನ್ನು ಸೋಲಿಸಿ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಏರಲು ಈ ರಾಜ್ಯಗಳೇ ನಿರ್ಣಾಯವಾಗಿದ್ದವು. ಹೀಗಾಗಿ ಈ 7 ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಕಮಲಾ ಹ್ಯಾರಿಸ್‌ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸದ್ಯ ಈ ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮುನ್ನಡೆಯಲ್ಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

    ಯಾವ ರಾಜ್ಯದಲ್ಲಿ ಎಷ್ಟು ವೋಟ್‌?
    ನಾರ್ಥ್‌ ಕೆರೊಲಿನಾ (16 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಟ್ರಂಪ್‌ಗೆ ಜಯ (ಟ್ರಂಪ್‌ 50.5%, ಕ್ಲಿಂಟನ್‌ 46.8%)
    2020 – ಟ್ರಂಪ್‌ಗೆ ಜಯ (ಟ್ರಂಪ್‌ 50.1%, ಕ್ಲಿಂಟನ್‌ 48.7%)

    ಅರಿಜೋನಾ (11 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಟ್ರಂಪ್‌ಗೆ ಜಯ (ಟ್ರಂಪ್‌ 49%, ಕ್ಲಿಂಟನ್‌ 45.5%)
    2020 – ಬೈಡನ್‌ಗೆ ಜಯ (ಬೈಡನ್‌ 49.4%, ಟ್ರಂಪ್‌ 49.1%)

    ನೆವಾಡ (6 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಕ್ಲಿಂಟನ್‌ಗೆ ಜಯ (ಕ್ಲಿಂಟನ್‌ 47.9%, ಟ್ರಂಪ್‌ 45.5%)
    2020 – ಬೈಡನ್‌ಗೆ ಜಯ (ಬೈಡನ್‌ 50.1%, ಟ್ರಂಪ್‌ 47.7%)

    ಜಾರ್ಜಿಯಾ (16 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಟ್ರಂಪ್‌ಗೆ ಗೆಲುವು (ಟ್ರಂಪ್‌ 51%, ಕ್ಲಿಂಟನ್‌ 45.9%)
    2020 – ಬೈಡನ್‌ಗೆ ಗೆಲುವು (ಬೈಡನ್‌ 49.5%, ಟ್ರಂಪ್‌ 49.3%)

    ಮಿಷಿಗನ್ (15 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಟ್ರಂಪ್‌ಗೆ ಗೆಲುವು (ಟ್ರಂಪ್‌ 47.6%, ಕ್ಲಿಂಟನ್‌ 47.4%)
    2020- ಬೈಡನ್‌ಗೆ ಗೆಲುವು (ಬೈಡನ್‌ 50.6%, ಟ್ರಂಪ್‌ 47.8%

    ವಿಸ್ಕಾನ್ಸಿನ್(10 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಟ್ರಂಪ್‌ಗೆ ಗೆಲುವು (ಟ್ರಂಪ್‌ 47.8%, ಕ್ಲಿಂಟನ್‌ 47%)
    2020 – ಬೈಡನ್‌ಗೆ ಗೆಲುವು (ಬೈಡಬ್‌ 49.6%, ಟ್ರಂಪ್‌ 48.9%)

     

    ಪೆನ್ಸಿಲ್ವೇನಿಯಾ (19 ಎಲೆಕ್ಟ್ರೋರಲ್‌ ವೋಟ್ಸ್‌)
    2016 – ಟ್ರಂಪ್‌ಗೆ ಜಯ ( ಟ್ರಂಪ್‌ 48.6%, ಕ್ಲಿಂಟನ್‌ 47.9%)
    2020 – ಬೈಡನ್‌ಗೆ ಜಯ (ಬೈಡನ್‌ 50%, ಟ್ರಂಪ್‌ 48.8%)

  • US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

    US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

    ವಾಷಿಂಗ್ಟನ್‌: ಇಡೀ ವಿಶ್ವವೇ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್‌ 5 ರಂದು ನಡೆಯಲಿದೆ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆಯಿದ್ದು ಈ ಬಾರಿ ಅಧ್ಯಕ್ಷರಾಗಿ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

    ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂದಾಗ ಟ್ರಂಪ್‌ ಗ್ರಾಫ್‌ ಏರಿತ್ತು. ನಂತರ ಜೋ ಬೈಡನ್‌ ರೇಸ್‌ನಿಂದ ಹಿಂದಕ್ಕೆ ಸರಿದು ಕಮಲಾ ಹ್ಯಾರಿಸ್‌ ಸ್ಪರ್ಧೆಗೆ ಇಳಿದಾಗ ಟಂಪ್‌ ಗ್ರಾಫ್‌ ಸ್ವಲ್ಪ ಇಳಿಕೆಯಾಗಿತ್ತು. ಆದರೆ ಅಕ್ಟೋಬರ್‌ ಕೊನೆಯ ವಾರದಲ್ಲಿ ಇಬ್ಬರ ಮಧ್ಯೆ ಭಾರೀ ಸ್ಪರ್ಧೆ ಇರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ನವೆಂಬರ್‌ 5 ಯಾಕೆ?
    ಅಮೆರಿಕದಲ್ಲಿ ಈ ಬಾರಿ ನವೆಂಬರ್‌ 5 ರಂದು ಚುನಾವಣೆ ನಡೆಯುತ್ತದೆ. ನ.5 ರಂದು ಚುನಾವಣೆ ನಡೆಯಲು ಕಾರಣ ಇದೆ. ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಚುನಾವಣೆ ನಡೆಯಲಿದೆ. ಅಲ್ಲಿನ ಸಂವಿಧಾನದ ಪ್ರಕಾರ ನವೆಂಬರ್‌ ತಿಂಗಳ ಮೊದಲ ಮಂಗಳವಾರ ಚುನಾವಣೆ ನಡೆಯಬೇಕು. ಹೀಗಾಗಿ ಪ್ರತಿ ಬಾರಿ ನವೆಂಬರ್‌ನಲ್ಲೇ ಚುನಾವಣೆ ನಡೆಯುತ್ತಾ ಬಂದಿದೆ. ಅಮರಿಕದ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

     

    ಚುನಾವಣೆ ಹೇಗೆ ನಡೆಯುತ್ತದೆ?
    ಅಮೆರಿಕದಲ್ಲಿ ನೇರವಾಗಿ ಅಧ್ಯಕ್ಷ ಅಭ್ಯರ್ಥಿಗಳಿಗೆ ಜನರು ಮತವನ್ನು ಹಾಕುವುದಿಲ್ಲ. ಅದರ ಬದಲು ʼಎಲೆಕ್ಟರ್ಸ್‌ʼಗೆ ಮತವನ್ನು ಹಾಕುತ್ತಾರೆ. ಜನ ಸಂಖ್ಯೆಯ ಆಧಾರದಲ್ಲಿ ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳನ್ನು ವಿಂಗಡಿಸಲಾಗಿದೆ. ಇದನ್ನೂ ಓದಿ: ಕಮಲಾಗೆ ಶಾಕ್‌ – ಟ್ರಂಪ್‌ ಪರ ಅನಿವಾಸಿ ಭಾರತೀಯರ ಒಲವು ಏರಿಕೆ

    55 ಎಲೆಕ್ಟೋರಲ್​ ವೋಟ್​ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದ್ದರೆ 38 ವೋಟ್​ಗಳೊಂದಿಗೆ ಟೆಕ್ಸಾಸ್​, ನ್ಯೂಯಾರ್ಕ್​​ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್​ ಮತ್ತು ಪೆನ್ಸಿಲ್ವೇನಿಯಾ ತಲಾ 20, ಓಹಿಯೊ 18, ಜಾರ್ಜಿಯಾ ಮತ್ತು ಮಿಚಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್​ ಮತಗಳನ್ನು ಹೊಂದಿವೆ.

    ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೋರಲ್​ ಮತಗಳು ಇದೆ. ಈ ಪೈಕಿ 270 ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಮತದಾರರು ನಂತರ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನೇರ ಮತಗಳನ್ನು ಹಾಕುತ್ತಾರೆ. ಅದನ್ನು ಚುನಾವಣಾ ಮತಗಳು ಎಂದು ಕರೆಯಲಾಗುತ್ತದೆ.

    ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಜಾರ್ಜಿಯಾ, ಮಿಷಿಗನ್, ಅರಿಝೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ವಿಸ್ಕಾನ್ಸಿನ್ ಮತ್ತು ನೆವಾಡಾ ಈ ಏಳು ರಾಜ್ಯಗಳು ನಿರ್ಣಾಯಕ ಎನಿಸಿವೆ. ಈ ಕಾರಣಕ್ಕೆ ಟ್ರಂಪ್‌ ಮತ್ತು ಹ್ಯಾರಿಸ್‌ ಈ ರಾಜ್ಯಗಳಲ್ಲಿ ಹೆಚ್ಚಿನ ಪ್ರಚಾರಗಳನ್ನು ನಡೆಸಿದ್ದಾರೆ.  ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲಿ ಈಗ ʼಕಸʼ ಪಾಲಿಟಿಕ್ಸ್ – ಕಸದ ಲಾರಿ ಚಲಾಯಿಸಿ ಬೈಡನ್‌ಗೆ ಟ್ರಂಪ್ ಟಾಂಗ್

    ಮತ ಎಣಿಕೆ ಯಾವಾಗ?
    ಈಗಾಗಲೇ ಸುಮಾರು 6.83 ಕೋಟಿ ಜನ ಮೊದಲೇ ಮತದಾನ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಚುನಾವಣೆ ನಡೆದ ದಿನವಾದ ನ.5 ರಂದೇ ಮತ ಎಣಿಕೆ ಆರಂಭವಾಗುತ್ತದೆ. ಈ ಮತ ಎಣಿಕೆ ಫಲಿತಾಂಶ ಪ್ರಕಟವಾಗಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಕಳೆದ ಬಾರಿ ಜೋ ಬೈಡೆನ್‌ ಫಲಿತಾಂಶ ಮತ ಎಣಿಕೆ ಆರಂಭವಾದ 4 ದಿನಗಳ ನಂತರ ಪ್ರಕಟವಾಗಿತ್ತು. 2016 ರಲ್ಲಿ ಚುನಾವಣೆ ಕಳೆದ ಮರುದಿನವೇ ಫಲಿತಾಂಶ ಪ್ರಕಟವಾಗಿತ್ತು.

    ಡಿ.17 ರಂದು ಮತದಾನ
    ಎಲೆಕ್ಟರ್ಸ್‌ ಡಿ.17 ರಂದು ಅಮೆರಿಕದ ಕಾಂಗ್ರೆಸ್‌(ಸಂಸತ್‌ನಲ್ಲಿ) ಅಧ್ಯಕ್ಷ ಚುನಾಣೆಯ ಅಭ್ಯರ್ಥಿಗಳಿಗೆ ಮತವನ್ನು ಹಾಕುತ್ತಾರೆ. ಜ.06 ರಂದು ಸಂಸತ್ತಿನ ಜಂಟಿ ಅಧಿವೇಶನ ನಡೆಯುವ ಮತ ಎಣಿಕೆ ನಡೆಯುತ್ತದೆ. ಇಲ್ಲಿ ಯಾರು 270 ಮತಗಳನ್ನು ಪಡೆಯುತ್ತಾರೋ ಅವರನ್ನು ಅಧಿಕೃತವಾಗಿ ವಿಜಯಿ ಎಂದು ಘೋಷಿಸಲಾಗುತ್ತದೆ. ಜನವರಿ 20 ರಂದು ಅಮೆರಿಕ ಅಧ್ಯಕ್ಷರ ಪ್ರಮಾಣವಚನ ನಡೆಯಲಿದೆ.

    ಮೊದಲೇ ಫಲಿತಾಂಶ ಪ್ರಕಟ:
    ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲು ಹಲವು ದಿನಗಳನ್ನು ತೆಗೆದುಕೊಂಡೂ ಅಮೆರಿಕದ ಮಾಧ್ಯಮಗಳು ಚುನಾವಣೆ ಮುಕ್ತಾಯಗೊಂಡು ಮತ ಎಣಿಕೆ ನಡೆಯುವ ಸಮಯದಲ್ಲೇ ಫಲಿತಾಂಶವನ್ನು ಪ್ರಕಟಿಸುತ್ತವೆ.

     

  • ಕಮಲಾಗೆ ಶಾಕ್‌ – ಟ್ರಂಪ್‌ ಪರ ಅನಿವಾಸಿ ಭಾರತೀಯರ ಒಲವು ಏರಿಕೆ

    ಕಮಲಾಗೆ ಶಾಕ್‌ – ಟ್ರಂಪ್‌ ಪರ ಅನಿವಾಸಿ ಭಾರತೀಯರ ಒಲವು ಏರಿಕೆ

    ವಾಷಿಂಗ್ಟನ್: ಅಮೆರಿಕ ಚುನಾವಣೆಗೆ (USA Election) ದಿನಗಣನೆ ಆರಂಭವಾಗುತ್ತಿದ್ದಂತೆ ಕಮಲಾ ಹ್ಯಾರಿಸ್‌ಗೆ (Kamala Harris) ಅನಿವಾಸಿ ಭಾರತೀಯರು (NRI) ಶಾಕ್‌ ನೀಡುವ ಸಾಧ್ಯತೆ ಹೆಚ್ಚಿದೆ.

    ಹೌದು. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಡೆಮಾಕ್ರಟಿಕ್ (Democratic) ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅನಿವಾಸಿ ಭಾರತೀಯರ ಒಲವು ರಿಪಬ್ಲಿಕನ್‌ (Republican) ಪಕ್ಷದ ಕಡೆಗೆ ವಾಲಿದೆ. ಹೀಗಿದ್ದರೂ ಒಟ್ಟಾರೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್‌ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ.

    ಭಾರತೀಯ ಅಮೆರಿಕರನ್ನು ಗುರಿಯಾಗಿಸಿ ಕಾರ್ನೆಗೀ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್ ಪೀಸ್‌’ ಸಂಸ್ಥೆ ನಡೆಸಿದ ಅನ್‌ಲೈನ್ ಸಮೀಕ್ಷೆಯಲ್ಲಿ 61%ರಷ್ಟು ಮಂದಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ನೀಡಿದರೆ 32% ಜನರು ರಿಪಬ್ಲಿಕನ್ ಪಕ್ಷದ ಪರ ಒಲವು ತೋರಿದ್ದಾರೆ.

    2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಕಡೆಗೆ ಭಾರತೀಯರು ಚಲಾಯಿಸಿದ್ದ ಮತಗಳನ್ನು ಲೆಕ್ಕ ಹಾಕಿದಾಗ ಈ ಬಾರಿ ಕಮಲಾ ಹ್ಯಾರಿಸ್ ಪಕ್ಷದ ಪರ ಒಲವು ಸ್ವಲ್ಪ ಇಳಿದಿದ್ದು, ಟ್ರಂಪ್ (Donald Trump) ಪರ ಹೆಚ್ಚು ಮತಗಳು ಬೀಳಬಹುದು ಎಂದು ಸಮೀಕ್ಷೆ ತಿಳಿಸಿದೆ.

    ಸೆಪ್ಟೆಂಬರ್‌ 18ರಿಂದ ಅಕ್ಟೋಬರ್‌ 15ರ ನಡುವೆ 714  ಅನಿವಾಸಿ ಭಾರತೀಯರು ಆನ್‌ಲೈನ್‌ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.

    ಅಮೆರಿಕದಲ್ಲಿ ಭಾರತ ಮೂಲದ 52 ಲಕ್ಷ ಜನ ವಾಸವಾಗಿದ್ದು, ಈ ಪೈಕಿ 39 ಲಕ್ಷ ಜನರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಅನಿವಾಸಿ ಭಾರತೀಯರು ಅಮೆರಿಕದಲ್ಲಿ ನೆಲೆಸಿರುವ ಎರಡನೇ ಅತಿ ದೊಡ್ಡ ವಲಸಿಗರ ಗುಂಪಿಗೆ ಸೇರಿದ್ದಾರೆ.

    ನವೆಂಬರ್‌ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 96% ರಷ್ಟು ಅನಿವಾಸಿ ಭಾರತೀಯರು ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.

     

  • US Presidential Election 2024 | ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಟ್ರಂಪ್‌ಗೆ ಮುನ್ನಡೆ

    US Presidential Election 2024 | ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ ಟ್ರಂಪ್‌ಗೆ ಮುನ್ನಡೆ

    ವಾಷಿಂಗ್ಟನ್‌: ಅಮೆರಿಕದ ಚುನಾವಣೆ (US Election) ದಿನಾಂಕ ಹತ್ತಿರ ಬರುತ್ತಿದ್ದಂತೆ ಬೆಟ್ಟಿಂಗ್‌ ಮಾರುಕಟ್ಟೆಯಲ್ಲಿ (Betting Market) ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮುಂದಿದ್ದಾರೆ.

    ಕೆಲವು ಸಮೀಕ್ಷೆಗಳು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಬಿರುಸಿನ ಸ್ಪರ್ಧೆ ಇದೆ ಎಂದು ತೋರಿಸುತ್ತಿದ್ದರೂ, ಕ್ರಿಪ್ಟೋ ಆಧಾರಿತ ಪಾಲಿಮಾರ್ಕೆಟ್ 60 ಪ್ರತಿಶತ ಗೆಲ್ಲುವ ಅವಕಾಶದೊಂದಿಗೆ ಟ್ರಂಪ್ ಅವರು ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದೆ.  ಇದನ್ನೂ ಓದಿ: ಆರ್‌ಸಿಬಿ ಸೇರುವಂತೆ ರೋಹಿತ್‌ಗೆ ಆಫರ್‌ – ಹಿಟ್‌ಮ್ಯಾನ್‌ಗೆ ಆಫರ್‌ ಕೊಟ್ಟಿದ್ಯಾರು?

    ನವೆಂಬರ್‌ 5 ರಂದು ಚುನಾವಣೆ ನಡೆಯಲಿದ್ದು ಅಮೆರಿಕದ ಮಾಧ್ಯಮಗಳು ನಡೆಸುವ ಬಹುತೇಕ ಸಮೀಕ್ಷೆಯಲ್ಲಿ ಇಬ್ಬರ ಗ್ರಾಫ್‌ ಏರಿಳಿತವಾಗುತ್ತಿದೆ.

    projects.fivethirtyeight ಎಲ್ಲಾ ಸಮೀಕ್ಷೆಗಳನ್ನು ಕ್ರೋಢಿಕರಿಸಿ ಅಪ್‌ಡೇಟ್‌ ನೀಡುತ್ತಿದೆ. ಸದ್ಯದ ಟ್ರೆಂಡ್‌ ಪ್ರಕಾರ ಕಮಲಾ ಹ್ಯಾರಿಸ್‌ ಅವರನ್ನು 48.4% ಜನ ಬೆಂಬಲಿಸಿದ್ದರೆ ಟ್ರಂಪ್‌ ಅವರನ್ನು 46.3% ಮಂದಿ ಬೆಂಬಲಿಸುತ್ತಿದ್ದಾರೆ.

     

  • ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಅಮೆರಿಕದಲ್ಲಿ ಬೆಂಗಳೂರು ಅರ್ಚಕರಿಂದ ವಿಶೇಷ ಪ್ರಾರ್ಥನೆ!

    – ರಾಕೇಶ್‌ಭಟ್ ಬಗ್ಗೆ ಪೇಜಾವರ ಶ್ರೀ ಮೆಚ್ಚುಗೆ

    ವಾಷಿಂಗ್ಟನ್: ಅಮೆರಿಕದ (USA) ಚಿಕಾಗೋದಲ್ಲಿ ನಡೀತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ (Democratic National Convention) 3ನೇ ದಿನ ಹಿಂದೂ ಸಂಪ್ರದಾಯಂತೆ ವೇದ ಮಂತ್ರಗಳೊಂದಿಗೆ ಆರಂಭವಾಗಿದ್ದು ವಿಶೇಷ.

    ಅಮೆರಿಕದಲ್ಲಿ ಈ ರೀತಿ ನಡೀತಿರೋದು ಇದು ಮೊದಲ ಬಾರಿ. ದೇಶದ ಐಕ್ಯತೆಯನ್ನು ಪ್ರತಿಪಾದಿಸಿದ ಬೆಂಗಳೂರು ಮೂಲದ ಅರ್ಚಕ ರಾಕೇಶ್ ಭಟ್ (Bengaluru Priest Rakesh Bhatt), ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾ ದೇವರ ಆಶೀರ್ವಚನ ಕೋರಿದ್ರು.

    ನಾವೆಲ್ಲ ಒಂದೇ ಕುಟುಂಬ.. ಸತ್ಯವೇ ನಮ್ಮ ಬುನಾದಿ.. ಅದೇ ನಮ್ಮನ್ನು ಗೆಲ್ಲಿಸುತ್ತದೆ.. ಕತ್ತಲಿನಿಂದ ಬೆಳಕಿನೆಡೆಗೆ.. ಸಾವಿನಿಂದ ಅಮರತ್ವದವರೆಗೂ ನಮ್ಮನ್ನು ನಡೆಸಿ ಎಂದು ಆ ದೇವರನ್ನು ಕೋರುತ್ತಿರುವೆ. ಓಂ ಶಾಂತಿ.. ಶಾಂತಿ ಶಾಂತಿ ಎಂದು ರಾಕೇಶ್ ಭಟ್ ಪ್ರಾರ್ಥಿಸಿದ್ರು.

    ಈ ಬಗ್ಗೆ ಅಮೆರಿಕದಲ್ಲಿರುವ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ಹಿಂದೂ ಸಮಾಜಕ್ಕೆ ಹೆಚ್ಚುತ್ತಿರುವ ಆದರಣೆ, ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ ಎಂದು ಹಿಂದೂ ಮುಖಂಡರು (Hindu Leader) ಹೇಳಿದ್ದಾರೆ. ಪೇಜಾವರ ಶ್ರೀಗಳು ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರಿನ ಪೇಜಾವರ ಮಠದಲ್ಲಿ ಶಿಕ್ಷಣ ಪಡೆದಿರುವ ರಾಕೇಶ್ ಭಟ್, 2013ರಿಂದ ಮೇರಿಲ್ಯಾಂಡ್‌ನ ಶಿವವಿಷ್ಣು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸ್ತಿದ್ದಾರೆ.