Tag: ಅಮೆಜಾನ್ ಕಾಡು

  • ಅಮೆಜಾನ್ ಕಾಡಲ್ಲಿ 40 ದಿನಗಳ ಬಳಿಕ ಪತ್ತೆಯಾಗಿ ಆಸ್ಪತ್ರೆ ಸೇರಿದ್ದ ಮಕ್ಕಳು ಡಿಸ್ಚಾರ್ಜ್

    ಅಮೆಜಾನ್ ಕಾಡಲ್ಲಿ 40 ದಿನಗಳ ಬಳಿಕ ಪತ್ತೆಯಾಗಿ ಆಸ್ಪತ್ರೆ ಸೇರಿದ್ದ ಮಕ್ಕಳು ಡಿಸ್ಚಾರ್ಜ್

    ಬೊಗೋಟಾ: ದಕ್ಷಿಣ ಕೊಲಂಬಿಯಾದ (South Colombia) ಅಮೆಜಾನ್ ಕಾಡು (Amazon Forest) ಪ್ರದೇಶದಲ್ಲಿ ನಡೆದ ವಿಮಾನ ಅಪಘಾತದಲ್ಲಿ (Plane Crash) ಬದುಕುಳಿದ ನಾಲ್ವರು ಕೊಲಂಬಿಯಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಶುಕ್ರವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

    ಅಮೆಜಾನ್ ಕಾಡು ಪ್ರದೇಶದಲ್ಲಿ ನಡೆದ ವಿಮಾನ ದುರಂತದಲ್ಲಿ ಲೆಸ್ಲಿ (13), ಸೋಲಿನಿ (9), ಟಿಯೆನ್ ನೊರಿಯಲ್ (5) ಮತ್ತು ಬೇಬಿ ಕ್ರಿಸ್ಟಿನ್ (1) ಎಂಬ ಮಕ್ಕಳು ಬದುಕುಳಿದಿದ್ದು, ಅವರ ತಾಯಿ ಮತ್ತು ಇನ್ನಿಬ್ಬರು ಮೃತಪಟ್ಟಿದ್ದರು. ಕಾಡಿನಲ್ಲಿ ಸತತ 40 ದಿನಗಳು ಕಳೆದ ಈ ಮಕ್ಕಳನ್ನು ಪತ್ತೆಹಚ್ಚಿ ಬೊಗೊಟಾ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಇದೀಗ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶುಕ್ರವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Twitter Monetisation: ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಹಣ – ಹೇಗೆ ಅಂತೀರಾ..?

    ನೊರಿಯಲ್ ಮತ್ತು ಬೇಬಿ ಕ್ರಿಸ್ಟಿನ್ ತಂದೆಯಾದ ಮ್ಯಾನುಯೆಲ್ ರಾನೋಕ್ ಮಕ್ಕಳ ಚೇತರಿಕೆ ಕಂಡು ಸಂತಸ ವ್ಯಕ್ತಪಡಿಸಿದ್ದು, ಕೃತಜ್ಞತೆಯನ್ನು ಸಲ್ಲಿಸಿದರು. ನನ್ನ ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಅವರು ನನ್ನೊಂದಿಗೆ ಇರುವುದಿಲ್ಲ. ಬದಲಾಗಿ ಕುಟುಂಬ ಕಲ್ಯಾಣ ಸಂಸ್ಥೆಯು ಅವರನ್ನು ನೋಡಿಕೊಳ್ಳುತ್ತದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆರೋಗ್ಯವಾಗಿರುವುದು ನನಗೆ ತುಂಬಾ ಸಂತಸವನ್ನು ಉಂಟುಮಾಡಿದೆ ಎಂದು ಮ್ಯಾನುಯೆಲ್ ರಾನೋಕ್ ತಿಳಿಸಿದ್ದಾರೆ. ಇದನ್ನೂ ಓದಿ: Miracle: ಅಪಘಾತಕ್ಕೀಡಾಗಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು!

    ಮಕ್ಕಳನ್ನು 6 ತಿಂಗಳ ಕಾಲ ತಾತ್ಕಾಲಿಕವಾಗಿ ನೋಡಿಕೊಳ್ಳುವ ಕೊಲಂಬಿಯಾದ ಕುಟುಂಬ ಕಲ್ಯಾಣ ಸಂಸ್ಥೆಯು ನಾಲ್ವರು ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿದೆ. ಇನ್ಸ್ಟಿಟ್ಯೂಟ್‌ ನಿರ್ದೇಶಕರಾಗಿರುವ ಆಸ್ಟ್ರಿಡ್‌ ಈ ಕುರಿತು ಮಾಹಿತಿ ನೀಡಿದ್ದು, ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅಲ್ಲದೇ ಅಮೆಜಾನ್‌ನಲ್ಲಿ 40 ದಿನ ಅಲೆದಾಡಿದ್ದ ಇವರಲ್ಲಿ ತೀವ್ರತರ ದೈಹಿಕ ಸಮಸ್ಯೆ ಈಗ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೆಸ್ಟಿಂಗ್‌ ವೇಳೆ ರಾಕೆಟ್‌ ಎಂಜಿನ್‌ ಸ್ಫೋಟ – ಜಪಾನ್‌ ಬಾಹ್ಯಾಕಾಶ ಸಂಸ್ಥೆಗೆ ಮತ್ತೆ ನಿರಾಸೆ

    ವಿಮಾನ ಪತನದ ಬಳಿಕ ಈ ಮಕ್ಕಳು ಅಮೆಜಾನ್ ಕಾಡಿನಲ್ಲಿ ನಾಪತ್ತೆಯಾಗಿದ್ದರು. ಇವರನ್ನು ಹುಡುಕುವ ಸಲುವಾಗಿ ಸುಮಾರು 200 ಮಿಲಿಟರಿ ಮತ್ತು ಸ್ಥಳೀಯ ರಕ್ಷಕರನ್ನು ಒಳಗೊಂಡಿದ್ದ ರಕ್ಷಣಾ ಕಾರ್ಯಾಚರಣಾ ತಂಡವು ಅಮೆಜಾನ್ ಕಾಡಿನಲ್ಲಿ ಶೋಧಕಾರ್ಯವನ್ನು ನಡೆಸಿತ್ತು. ಇದನ್ನೂ ಓದಿ: ಇನ್ನು ಮುಂದೆ ಫ್ರಾನ್ಸ್‌ನಲ್ಲೂ ರೂಪಾಯಿಯಲ್ಲೇ ವ್ಯವಹಾರ ಮಾಡಬಹುದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮ ಸಾಯುವ ಮುನ್ನ ನಮಗೆ ಈ ಮಾತು ಹೇಳಿದ್ದಳು..; ಅಮೆಜಾನ್‌ ಕಾಡಲ್ಲಿ ಸಿಲುಕಿದ್ದ ಮಕ್ಕಳ ಕರುಣಾಜನಕ ಕಥೆ ತೆರೆದಿಟ್ಟ ರಕ್ಷಣಾ ತಂಡ

    ಅಮ್ಮ ಸಾಯುವ ಮುನ್ನ ನಮಗೆ ಈ ಮಾತು ಹೇಳಿದ್ದಳು..; ಅಮೆಜಾನ್‌ ಕಾಡಲ್ಲಿ ಸಿಲುಕಿದ್ದ ಮಕ್ಕಳ ಕರುಣಾಜನಕ ಕಥೆ ತೆರೆದಿಟ್ಟ ರಕ್ಷಣಾ ತಂಡ

    – ರಕ್ಷಣಾ ತಂಡದವರನ್ನ ಕಂಡೊಡನೆ ಓಡಿ ಬಂದು “ಹಸಿವಾಗ್ತಿದೆ” ಎಂದಿದ್ದ ಮಕ್ಕಳು

    ಬೊಗೋಟಾ: ಅಮೆಜಾನ್‌ ದಟ್ಟ (Amazon Jungle) ಅರಣ್ಯದಲ್ಲಿ ವಿಮಾನ ಪತನವಾಗಿ 40 ದಿನಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ವರು ಮಕ್ಕಳನ್ನು ರಕ್ಷಿಸಿದ ರಕ್ಷಣಾ ತಂಡದ ಸದಸ್ಯರು ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ವಿಮಾನ ಅಪಘಾತದಿಂದಾಗಿ 13, 9, 5 ಮತ್ತು 1 ವರ್ಷದ ನಾಲ್ವರು ಮಕ್ಕಳು ಅಮೆಜಾನ್‌ ಕಾಡಿನಲ್ಲಿ ಸಿಲುಕಿಕೊಂಡಿದ್ದರು. ಒಂದು ತಿಂಗಳಿಗೂ ಹೆಚ್ಚ ದಿನಗಳ ಕಾಲ ಕಾಡಿನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲಾಯಿತು. ಆಗ ಮಕ್ಕಳ ಆರೋಗ್ಯ ಸ್ಥಿತಿಗತಿ ಹೇಗಿತ್ತು? ಅವರು ಏನು ಹೇಳಿದರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮಾತುಗಳು ನಿಜಕ್ಕೂ ಮನಕಲಕುವಂತಿದೆ. ಇದನ್ನೂ ಓದಿ: ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

    ಮಕ್ಕಳ ಕರುಣಾಜನಕ ಸ್ಥಿತಿ ತೆರೆದಿಟ್ಟ ರಕ್ಷಣಾ ತಂಡ
    ಪುಟ್ಟ ಮಗುವನ್ನು ಎತ್ತಿಕೊಂಡಿದ್ದ ಲೆಸ್ಲಿ ನನ್ನನ್ನು ಕಂಡಾಕ್ಷಣ ಓಡಿ ಬಂದಳು. ಬಂದವಳೇ, “ನನಗೆ ಹಸಿವಾಗಿದೆ” ಎಂದಳು. ಇಬ್ಬರು ಹುಡುಗರಲ್ಲಿ ಒಬ್ಬ ಮಲಗಿದ್ದ. ಅವರು ಕೂಡ ಎದ್ದು ಬಂದು “ನಮ್ಮ ತಾಯಿ ಸತ್ತಿದ್ದಾರೆ” ಎಂದರು ಅಂತ ರಕ್ಷಣಾ ತಂಡದ ಸದಸ್ಯರಲ್ಲೊಬ್ಬರಾದ ನಿಕೋಲಸ್ ಒರ್ಡೊನೆಜ್ ಗೋಮ್ಸ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡರು.

    ಲೆಸ್ಲಿ ತಾಯಿ 4 ದಿನಗಳ ವರೆಗೆ ಜೀವಂತವಾಗಿದ್ದರು ಎನಿಸುತ್ತದೆ. ಆಕೆ ಸಾಯುವ ಮುನ್ನ, “ಮಕ್ಕಳೇ ನೀವು ಇಲ್ಲಿಂದ ಹೊರಡಿ. ನಿಮ್ಮ ತಂದೆ ಬಳಿಗೆ ಹೋಗಿ. ನಾನು ತೋರಿದ ಪ್ರೀತಿಯನ್ನೇ ಅವರೂ ನಿಮಗೆ ತೋರಿಸುತ್ತಾರೆ” ಎಂದು ಹೇಳಿದ್ದರಂತೆ ಅಂತ ಮತ್ತೊಬ್ಬ ಸದಸ್ಯ ಮ್ಯಾನುಯೆಲ್ ಮಿಲ್ಲರ್ ರಾನೋಕ್ ತಿಳಿಸಿದರು. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ಮಕ್ಕಳು ತುಂಬಾ ನಿಶ್ಯಕ್ತರಾಗಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಟ್ಟಿ ಪದಾರ್ಥ ಸೇವಿಸಲು ಇನ್ನೂ ಅವರಿಂದ ಸಾಧ್ಯವಾಗುತ್ತಿಲ್ಲ. ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ ಎಂದು ಸದಸ್ಯರು ಮಾಹಿತಿ ನೀಡಿದ್ದಾರೆ.

    ಮಕ್ಕಳು ಪತ್ತೆಯಾಗಿದ್ದು ಹೇಗೆ?
    ಮೇ 1 ರಂದು ವಿಮಾನ ಅಪಘಾತ ಸಂಭವಿಸಿತ್ತು. ಅದಾದ ಎರಡು ವಾರಗಳ ನಂತರ ಶೋಧ ತಂಡವು ಅಮೆಜಾನ್‌ ದಟ್ಟ ಕಾಡಿನಲ್ಲಿ ವಿಮಾನ ಪತ್ತೆ ಹಚ್ಚಿ ಪೈಲಟ್‌ ಸೇರಿದಂತೆ ಮೂವರ ಮೃತದೇಹಗಳನ್ನು ವಶಪಡಿಸಿಕೊಂಡಿತ್ತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

    ಮಕ್ಕಳ ಹುಡುಕಾಟದ ವೇಳೆ, ಅವರ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿ ಹಲವು ಕುರುಹುಗಳು ಪತ್ತೆಯಾಗಿತ್ತು. ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿಯೇ ಹುಟುಕಾಟ ತೀವ್ರಗೊಳಿಸಲಾಗಿತ್ತು. ಮಕ್ಕಳು ಹಸಿವಿನಿಂದ ಸಾಯಬಾರದು ಎಂಬ ಕಾರಣಕ್ಕೆ ಆಹಾರ ಪದಾರ್ಥಗಳು ಮತ್ತು ನೀರಿನ ಬಾಟಲಿಗಳನ್ನು ಕೂಡ ಹೆಲಿಕಾಪ್ಟರ್‌ ಮೂಲಕ ಅನೇಕ ಕಡೆ ಹಾಕಲಾಗಿತ್ತು.

    ಕೊನೆಗೆ ಅಪಘಾತ ನಡೆದ ಸ್ಥಳದ ಪಶ್ಚಿಮ ದಿಕ್ಕಿನಿಂದ ಸುಮಾರು 5 ಕಿಮೀ ದೂರದಲ್ಲಿ ಮಕ್ಕಳು ಸಿಕ್ಕರು.

  • ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

    ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

    ಬೊಗೋಟಾ: ವಿಮಾನ ಪತನವಾಗಿ (Plane Crash) 40 ದಿನಗಳ ಬಳಿಕ ಅಮೆಜಾನ್ ದಟ್ಟ ಅರಣ್ಯದಿಂದ (Amazon Jungle) ಮಗು ಸೇರಿದಂತೆ 4 ಮಕ್ಕಳನ್ನು (Children) ಜೀವಂತವಾಗಿ ರಕ್ಷಿಸಲಾಗಿದೆ ಎಂದು ಕೊಲಂಬಿಯಾದ (Colombia) ಸೇನಾಪಡೆ ತಿಳಿಸಿದೆ.

    ಏನಿದು ಘಟನೆ?: ಮೇ 1 ರಂದು 7 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದ ಸೆಸ್ನಾ ಸಿಂಗಲ್ ಎಂಜಿನ್‌ನ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಪತನವಾಗಿತ್ತು. ಘಟನೆಯ ಬಳಿಕ ಬದುಕುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಅಪಘಾತವಾಗಿ 2 ವಾರಗಳ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನವನ್ನು ಕಂಡುಹಿಡಿಯಲಾಗಿದ್ದು, ಮೂವರು ವಯಸ್ಕರ ಮೃತದೇಹಗಳನ್ನೂ ವಶಪಡಿಸಿಕೊಳ್ಳಲಾಯಿತು. ಆದರೆ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 4 ಮಕ್ಕಳ ಪತ್ತೆ ಮಾತ್ರ ಎಲ್ಲಿಯೂ ಸಿಕ್ಕಿರಲಿಲ್ಲ.

    ನಾಪತ್ತೆಯಾಗಿದ್ದವರಲ್ಲಿ 13, 9, 4 ವರ್ಷ ಹಾಗೂ 11 ತಿಂಗಳ ಮಕ್ಕಳು ಸೇರಿದ್ದರು. ಎಲ್ಲ ಮಕ್ಕಳೂ ಒಡಹುಟ್ಟಿದವರಾಗಿದ್ದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಚ್ಚೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿತ್ತು. ಹೀಗಾಗಿ ಮಕ್ಕಳು ಬದುಕಿರುವ ನಿರೀಕ್ಷೆಯಲ್ಲಿ ಹುಡುಕಾಟವನ್ನು ತೀವ್ರಗೊಳಿಸಲಾಯಿತು.

    ಮಕ್ಕಳನ್ನು ಪತ್ತೆಹಚ್ಚಲು ಕಾಡಿನಲ್ಲಿ ನಾಯಿಗಳು, 150 ಸೈನಿಕರು ಹುಡುಕಾಟ ನಡೆಸಿದರು. ಸ್ಥಳೀಯ ಬುಡಕಟ್ಟಿನ ಹತ್ತಾರು ಸ್ವಯಂಸೇವಕರೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು. ಬದುಕುಳಿದಿರೋ ಮಕ್ಕಳು ಮುಂದೆ ಸಾಗದಂತೆ ತಡೆಯಲು ಕಾಡಿನಾದ್ಯಂತ ಧ್ವನಿ ಸುರುಳಿಗಳನ್ನು ಪ್ರಸಾರ ಮಾಡಲಾಗಿತ್ತು. ಹಸಿವಿನಿಂದ ಅವರು ಸಾಯಬಾರದು ಎಂಬ ಕಾರಣಕ್ಕೆ ಆಹಾರ, ನೀರಿನ ಬಾಟಲಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲಿನಿಂದ ಕಾಡಿನೊಳಗಡೆ ಎಸೆಯಲಾಗಿತ್ತು. ಇದನ್ನೂ ಓದಿ: ಕರಾವಳಿಯಿಂದ 640 ಕಿ.ಮೀ ದೂರದಲ್ಲಿರೋ ಬಿಪರ್ಜೋಯ್ ಚಂಡಮಾರುತ – ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್

    40 ದಿನಗಳ ಬಳಿಕ ಕೊನೆಗೂ ನಾಪತ್ತೆಯಾಗಿದ್ದ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೋ ಪೆಟ್ರೋ, ಇದೊಂದು ವಿಸ್ಮಯಕಾರಿ ಘಟನೆಯಾಗಿದೆ. ಹುಡುಕಾಟದ 40 ದಿನಗಳ ಬಳಿಕ ಸೇನಾಪಡೆ ಹಾಗೂ ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿಯೂ ಮಕ್ಕಳು ದೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಕಂಡುಹಿಡಿದಿರುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದಿದ್ದಾರೆ.

    ಕೆಲ ದಿನಗಳ ಹಿಂದೆ ಪೆಟ್ರೋ ಟ್ವೀಟ್ ಮಾಡಿ ಮಕ್ಕಳು ಪತ್ತೆಯಾಗಿರುವುದಾಗಿ ಹೇಳಿದ್ದರು. ಮರುದಿನ ತಾವು ತಪ್ಪು ಮಾಹಿತಿ ನೀಡಿರುವುದಾಗಿ ತಿಳಿಸಿ, ಮಕ್ಕಳ ಕುರುಹುಗಳು ಕಾಡಿನಲ್ಲಿ ಪತ್ತೆಯಾಗಿರುವುದಾಗಿ ಸರಿಪಡಿಸಿಕೊಂಡಿದ್ದರು. ಇದನ್ನೂ ಓದಿ: ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

  • ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಅಮೆಜಾನ್ ಕಾಡಿನಲ್ಲಿ 26 ವರ್ಷ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ವ್ಯಕ್ತಿ ಸಾವು

    ಬ್ರೆಸಿಲಿಯಾ: ಬ್ರೆಜಿಲ್‌ನ ದಟ್ಟ ಅಮೆಜಾನ್ ಕಾಡಿನಲ್ಲಿ 26 ವರ್ಷಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದ ಬುಡಕಟ್ಟು ಜನಾಂಗವೊಂದರ ಕಟ್ಟ ಕಡೆಯ ವ್ಯಕ್ತಿ ಸಾವನ್ನಪ್ಪಿದ್ದಾನೆ.

    ವಿಶ್ವದ ಏಕಾಂಗಿ ಮನುಷ್ಯ ಎಂದು ಕರೆಯಲಾಗುತ್ತಿದ್ದ ವ್ಯಕ್ತಿ, ಕಾಡಿನಲ್ಲಿ ಪ್ರಾಣಿಗಳನ್ನು ಹಿಡಿಯಲು ದೊಡ್ಡ ದೊಡ್ಡ ಗುಂಡಿಗಳನ್ನು ತೋಡುತ್ತಿದ್ದ. ಇದಕ್ಕಾಗಿ ಆತನನ್ನು ಮ್ಯಾನ್ ಆಫ್ ದಿ ಹೋಲ್ ಎಂದೂ ಕರೆಯಲಾಗುತ್ತಿತ್ತು. ಈತ ತನ್ನ ಗುಡಿಸಲಿನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ. ತನ್ನ 60ರ ವಯಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.

    ಈ ಬುಡಕಟ್ಟು ವ್ಯಕ್ತಿಯ ಹೆಸರು, ಭಾಷೆ ಎಲ್ಲವೂ ಭಿನ್ನವಾಗಿದ್ದು, ಆತನ ಬಳಿ ಮನುಷ್ಯರು ಸುಳಿದಾಡಿದರೆ ಆತ ಅಲ್ಲಿಂದ ಓಡಿ ಹೋಗುತ್ತಿದ್ದ. ಆತನನ್ನು ಹಲವು ಬಾರಿ ಕಾಡಿನಿಂದ ಬಿಡಿಸಿ ನಗರಕ್ಕೆ ಕರೆದುಕೊಂಡು ಬರಲು ಪ್ರಯತ್ನಿಸಲಾಗಿದ್ದು, ವಿಫಲವಾಗಿತ್ತು. ಬಳಿಕ ಆತನನ್ನು ಸ್ವತಂತ್ರನಾಗಿ ಇರಲು ಬಿಡಲಾಗಿತ್ತು. ಇದನ್ನೂ ಓದಿ: ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

    ವರದಿಗಳ ಪ್ರಕಾರ ಈ ವ್ಯಕ್ತಿಯ ಜನಾಂಗದ ಬಹುಪಾಲು ಜನರು 1970 ರಿಂದ 1980ರ ವೇಳೆ ಸಾವನ್ನಪ್ಪಿದ್ದರು. ಬಳಿಕ ಉಳಿದುಕೊಂಡಿದ್ದ 6 ಸದಸ್ಯರ ಕುಟುಂಬ 1995ರಲ್ಲಿ ಅಕ್ರಮ ಗಣಿಗಾರರ ದಾಳಿಗೆ ಬಲಿಯಾಗಿದ್ದರು. ಆ ದಾಳಿಯಲ್ಲಿ ಉಳಿದುಕೊಡ ಏಕೈಕ ವ್ಯಕ್ತಿ ಈತನಾಗಿದ್ದ. ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್

    ಈ ಬುಡಕಟ್ಟು ವ್ಯಕ್ತಿಯ ನಿಧನಕ್ಕೆ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವ ಸರ್ವೈವಲ್ ಇಂಟರ್‌ನ್ಯಾಷನಲ್ ಸಂಸ್ಥೆ ಕಂಬನಿ ಮಿಡಿದಿದೆ.

    Live Tv
    [brid partner=56869869 player=32851 video=960834 autoplay=true]

  • ಅಮೆಜಾನ್ ಕಾಡ್ಗಿಚ್ಚು ತಣಿಸಲು ಜಿ7 ದೇಶಗಳ ನೆರವನ್ನು ತಿರಸ್ಕರಿದ ಬ್ರೆಜಿಲ್

    ಅಮೆಜಾನ್ ಕಾಡ್ಗಿಚ್ಚು ತಣಿಸಲು ಜಿ7 ದೇಶಗಳ ನೆರವನ್ನು ತಿರಸ್ಕರಿದ ಬ್ರೆಜಿಲ್

    ಬ್ರೆಜಿಲಿಯಾ: ಕಾಡ್ಗಿಚ್ಚಿಗೆ ಹೊತ್ತಿ ಉರಿಯುತ್ತಿರುವ ಅಮೆಜಾನ್ ಮಳೆ ಕಾಡನ್ನು ತಣಿಸಲು ಜಿ7 ದೇಶಗಳು 22 ದಶಲಕ್ಷ ಡಾಲರ್ ದೇಣಿಗೆಯನ್ನು ನೀಡಲು ಮುಂದಾಗಿತ್ತು. ಆದರೆ ಈ ನೆರವನ್ನು ಬ್ರೆಜಿಲ್ ಸರ್ಕಾರ ತಿರಸ್ಕರಿಸಿದೆ.

    ಅಮೆರಿಕ, ಜಪಾನ್, ಜರ್ಮನಿ, ಫ್ರಾನ್ಸ್, ಇಟಲಿ, ಬ್ರಿಟನ್ ಮತ್ತು ಕೆನಡಾ ಈ 7 ದೇಶದ ಗುಂಪನ್ನೇ ಜಿ7 ಎಂದು ಕರೆಯಲಾಗುತ್ತದೆ. ಸೋಮವಾರ ಜಿ7 ಶೃಂಗಸಭೆಯಲ್ಲಿ ಮಾತನಾಡಿದ ಫ್ರೆಂಚ್ ಅಧ್ಯಕ್ಷ ಎಮ್ಮಾನ್ಯುಯಲ್ ಮ್ಯಾಕ್ರಾನ್ ಅವರು, ಅಮೆಜಾನ್ ಕಾಡಿನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ತಣಿಸಲು ಜಿ 7 ಗುಂಪಿನ ದೇಶಗಳು 22 ಮಿಲಿಯನ್ ಡಾಲರ್(ಅಂದಾಜು 157 ಕೋಟಿ ರೂ.) ನೆರವು ನೀಡಲು ನಿರ್ಧರಿಸಿದೆ. ಅದರಲ್ಲೂ ಬ್ರಿಟನ್ 12 ಮಿಲಿಯನ್ ಹಾಗೂ ಕೆನಡಾ 11 ಮಿಲಿಯನ್ ಡಾಲರ್ ಹಣವನ್ನು ಪ್ರತ್ಯೇಕವಾಗಿ ನೀಡಲು ನಿರ್ಧರಿಸಿದೆ ಎಂದು ತಿಳಿಸಿದ್ದರು.

    ಈ ಹಣವನ್ನು ತಕ್ಷಣವೇ ಬ್ರೆಜಿಲ್‍ಗೆ ನೀಡಲಾಗುತ್ತದೆ ಮತ್ತು ಫ್ರೆಂಚ್‍ನಿಂದ ಸೇನೆಯ ಸಹಕಾರವನ್ನು ಒದಗಿಸಲಾಗುತ್ತದೆ ಎಂದು ಮ್ಯಾಕ್ರಾನ್ ಘೋಷಿಸಿದ್ದರು. ಆದರೆ ಈ ನೆರವನ್ನು ಬ್ರೆಜಿಲ್ ತಿರಸ್ಕರಿಸಿದೆ. ಯಾವ ಕಾರಣಕ್ಕೆ ಸಹಾಯಧನ ತಿರಸ್ಕರಿಸಲಾಗಿದೆ ಎನ್ನುವ ಬಗ್ಗೆ ಬ್ರೆಜಿಲ್ ಈವರೆಗೂ ಸ್ಪಷ್ಟನೆ ನೀಡಿಲ್ಲ.

    ಈ ಬಗ್ಗೆ ಮಾತನಾಡಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಸ್ಲಾನರೊ ಅವರು, ನೀವು ನೆರವು ನೀಡಲು ಮುಂದಾಗಿರುವುದಕ್ಕೆ ಧನ್ಯವಾದ. ಆದರೆ ನಾವು ನಿಮ್ಮ ನೆರವನ್ನು ಸ್ವೀಕರಿಸಲ್ಲ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಬ್ರೆಜೆಲ್ ಅನ್ನು ಒಂದು ವಸಾಹತು ದೇಶವನ್ನಾಗಿ ನೋಡುತ್ತಿದ್ದಾರೆ. ಆದರೆ ನಮ್ಮದು ಸ್ವಾತಂತ್ರ್ಯ ದೇಶ ಎಂದು ಕಿಡಿಕಾರಿದ್ದಾರೆ.

    ಈ ಮಧ್ಯೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಅಮೆಜಾನ್ ಕುರಿತಂತೆ ಮಾಡಿದ ಟ್ವೀಟ್ ಬ್ರೆಜಿಲ್ ಹಾಗೂ ಫ್ರಾನ್ಸ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮ್ಯಾಕ್ರಾನ್ ಅವರು ಟ್ವೀಟಿನಲ್ಲಿ, ಅಮೆಜಾನ್ ಅರಣ್ಯದಲ್ಲಿ ಕಾಡ್ಗಿಚ್ಚು ಹಚ್ಚಿರುವುದು ಅಂತರಾಷ್ಟ್ರೀಯ ಬಿಕ್ಕಟ್ಟು ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಈ ಬಗ್ಗೆ ಜಿ7 ಶೃಂಗಸಭೆಯಲ್ಲಿ ಉನ್ನತ ಮಟ್ಟದ ಸಭೆ ಮಾಡಿ ಚರ್ಚಿಸಬೇಕಿದೆ ಎಂದು ಬರೆದುಕೊಂಡಿದ್ದರು. ಈ ಟ್ವೀಟ್‍ಗೆ ಬೋಸ್ಲಾನರೊ ಅವರು ರೀ-ಟ್ವೀಟ್ ಮಾಡಿ ಮ್ಯಾಕ್ರಾನ್ ಅವರು ವಸಾಹತುಶಾಹಿ ಮನಸ್ಥಿತಿ ಹೊಂದಿದ್ದಾರೆ ಎಂದು ಗುಡುಗಿದ್ದರು.

    ಕಳೆದ ಕೆಲವು ದಿನಗಳಿಂದ ಅಮೆಜಾನ್ ಕಾಡಿನಲ್ಲಿ ಬೃಹತ್ ಪ್ರಮಾಣದ ಕಾಡ್ಗಿಚ್ಚು ಹಬ್ಬಿದ್ದು, ಸರಿಸುಮಾರು 950 ಸಾವಿರ ಹೆಕ್ಟರ್(2.3 ಮಿಲಿಯನ್ ಎಕ್ರೆ) ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಅಮೆಜಾನ್ ಮಳೆಕಾಡಿನ ಕಾಡ್ಗಿಚ್ಚು ಜಾಗತಿಕವಾಗಿ ಆತಂಕವನ್ನು ಸೃಷ್ಟಿಮಾಡಿದೆ.

    ಅಮೆಜಾನ್ ಅರಣ್ಯವನ್ನು ಭೂಮಿಯ ಶ್ವಾಸಕೋಶ ಎಂದು ಕರೆಯಲಾಗುತ್ತದೆ. ಯಾಕೆಂದರೆ ಭೂಮಿಗೆ ಬೇಕಾಗುವ ಸುಮಾರು 20% ಆಮ್ಲಾಜನಕವನ್ನು ಅಮೆಜಾನ್ ಅರಣ್ಯ ಒದಗಿಸುತ್ತದೆ. ಅಲ್ಲದೆ ಅಮೆಜಾನ್ ಕಾಡು ವಿಶ್ವದ ಅತೀದೊಡ್ಡ ಅರಣ್ಯವಾಗಿದ್ದು, ಇಲ್ಲಿ ಸರಿಸುಮಾರು 10 ಮಿಲಿಯನ್(1 ಕೋಟಿ) ವಿವಿಧ ಪ್ರಭೇದಗಳ ಗಿಡ, ಮರಗಳು, ಹುಳುಗಳು ಹಾಗೂ ಅಪರೂಪದ ಪ್ರಾಣಿಗಳು ವಾಸವಾಗಿದೆ. ಈಗ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಸುಡುತ್ತಿರುವುದರಿಂದ ಬಹುತೇಕ ಪ್ರಾಣಿಗಳು, ಗಿಡ, ಮರಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.