Tag: ಅಮೃತ ಸ್ನಾನ

  • ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಪವಿತ್ರ ಬಸಂತ ಪಂಚಮಿ  ಹಿನ್ನೆಲೆ ಸೋಮವಾರ ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ.

    ಬಸಂತ ಪಂಚಮಿ (Basant Panchami) ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ ಮೂರನೇ ಅಮೃತ ಸ್ನಾನಕ್ಕೆ ಸಕಲ ಸಿದ್ಧತೆ ನಡೆದಿದೆ. ಮೌನಿ ಅಮಾವಾಸ್ಯೆಯಂದು ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಹಿನ್ನೆಲೆ ಸೋಮವಾರ ನಡೆಯುವ ಅಮೃತ ಸ್ನಾನದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ – ಮರಣೋತ್ತರ ಪರೀಕ್ಷೆ ನಡೆಸದೇ ಯುಪಿ ಸರ್ಕಾರದಿಂದ ಡೆತ್ ಸರ್ಟಿಫಿಕೇಟ್

    ಮಹಾಕುಂಭದ ಎಲ್ಲಾ 25 ಸೆಕ್ಟರ್‌ಗಳು ಹಾಗೂ 30 ಪಾಂಟೂನ್ ಸೇತುವೆಗಳು ಮತ್ತು ಪ್ರಮುಖ ಬ್ಯಾರಿಕೇಡ್ ವಲಯಗಳ ಮೇಲ್ವಿಚಾರಣೆ ನಡೆಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಕುಂಭ ಕಮಾಂಡ್ ತಂಡದಿಂದ ಮೇಲ್ವಿಚಾರಣೆ ನಡೆಸಲಾಗಿದೆ. 3,000ಕ್ಕೂ ಅಧಿಕ ಕ್ಯಾಮೆರಾ ಮೂಲಕ ನಿಗಾ ಇರಿಸಲಾಗಿದೆ. ಸ್ನಾನದ ನಂತರ ಘಾಟ್‌ಗಳಲ್ಲಿ ಕಾಲಹರಣ ಮಾಡದಂತೆ, ಊಟೋಪಚಾರ ಮಾಡದಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ. ಸ್ನಾನದ ಬಳಿಕ ಘಾಟ್‌ನಿಂದ ನಿರ್ಗಮಿಸಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಊಟೊಪಚಾರಕ್ಕೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಭಾರತಕ್ಕೆ ರನ್‌ಗಳ ʻಅಭಿಷೇಕʼ – ಇಂಗ್ಲೆಂಡ್‌ ವಿರುದ್ಧ 4-1 ಅಂತರದಲ್ಲಿ ಸರಣಿ ಜಯ

    ಈಗಾಗಲೇ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸಭೆ ನಡೆಸಿದ್ದಾರೆ. ಈ ಹಿಂದೆ ಯಶಸ್ವಿ ಕುಂಭಮೇಳ ನಿಭಾಯಿಸಿದ್ದ ಇಬ್ಬರು ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ವಹಿಸಲಾಗಿದೆ. ಇದನ್ನೂ ಓದಿ: ಕೇರಳಕ್ಕೆ ಅನುದಾನ ಬೇಕಿದ್ರೆ ʻ ಹಿಂದುಳಿದ ರಾಜ್ಯʼ ಎಂದು ಘೋಷಿಸಲಿ: ಜಾರ್ಜ್‌ ಕುರಿಯನ್‌

  • Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ

    Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Mahakumbhamela) ಬುಧವಾರ (ಜ.29) ಮೌನಿ ಅಮವಾಸ್ಯೆ ಹಿನ್ನೆಲೆ 10 ಕೋಟಿ ಜನರು ಅಮೃತ ಸ್ನಾನದಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು, ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲು ಕಾರ್ಯನಿರ್ವಹಿಸಲಿವೆ.

    ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ದಲ್ಲಿ (Prayagraj) ಜನವರಿ 13 ರಿಂದ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ-ವಿದೇಶದಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ಮಹಾಕುಂಭಮೇಳ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ತ್ರಿವೇಣಿ ಸಂಗಮದಲ್ಲಿ 15 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.ಇದನ್ನೂ ಓದಿ: ಯಶ್ ನನ್ನ ಗೆಳೆಯ – ದುಬೈ ಅಭಿಮಾನಿಗಳ ಮುಂದೆ ಶಾರುಖ್ ಖಾನ್ ಮಾತು

    ಈ ಕುರಿತು ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಬುಧವಾರ ಮೌನಿ ಅಮಾವಾಸ್ಯೆ ಸಂದರ್ಭದಲ್ಲಿ ಮಹಾಕುಂಭಮೇಳಕ್ಕೆ ಸುಮಾರು 10 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳು ಸೇರಿ ಈಗಾಗಲೇ ನಿಗದಿಯಾಗಿರುವ ರೈಲುಗಳ ಪೈಕಿ ಒಟ್ಟು 190 ವಿಶೇಷ ರೈಲುಗಳು ಸಂಚರಿಸಲಿವೆ. ಇನ್ನೂ ಆ ಮಾರ್ಗದಲ್ಲಿ 110 ಸಾಮಾನ್ಯ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಪ್ರಯಾಗ್‌ರಾಜ್‌ನಿಂದ ಪ್ರತಿ 4 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

    ಇನ್ನೂ ರೈಲು ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿ ನಿಮಿಷವೂ ಕೂಡ ಅವರಿಂದ ಅಪಡೇಟ್‌ಗಳನ್ನು ಪಡೆದುಕೊಳ್ಳುತ್ತಿರುತ್ತೇವೆ. ಜ.29 ಕನಿಷ್ಠ 10 ಕೋಟಿ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 8,000 ದಿಂದ 10,000 ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

    ಮೌನಿ ಅಮಾವಾಸ್ಯೆಯ ಶುಭ ಸಂದರ್ಭವನ್ನು ಬುಧವಾರ ಬೆಳಿಗ್ಗೆ 6:45ಕ್ಕೆ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ ಮಾಡಲು ಉತ್ತರ ಪ್ರದೇಶ ಸರ್ಕಾರ ಯೋಜಿಸಿದೆ.ಇದನ್ನೂ ಓದಿ: ‘ಗೌರಿ’ ಹೀರೋ ಸಮರ್ಜಿತ್‌ಗೆ ಸಿಕ್ತು ಉದಯೋನ್ಮುಖ ನಟ ಪ್ರಶಸ್ತಿ

     

  • ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

    ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

    ಪ್ರಯಾಗ್‌ರಾಜ್‌: ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭಮೇಳಕ್ಕೆ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ. 2ನೇ ದಿನವಾದ ಮಂಗಳವಾರ ಬೆಳಗ್ಗೆ ಕುಂಭಮೇಳದಲ್ಲಿ (Maha Kumbh Mela) 1 ಕೋಟಿ ಭಕ್ತರು ಅಮೃತ ಸ್ನಾನ (Amrit Snan) ಮಾಡಿದ್ದಾರೆ.

    ಮಕರ ಸಂಕ್ರಾಂತಿ ಹಿನ್ನೆಲೆ ಮಂಗಳವಾರ ಬೆಳಗ್ಗೆ 8:30 ರ ಹೊತ್ತಿಗೆ ಮಹಾ ಕುಂಭಮೇಳದಲ್ಲಿ ಒಂದು ಕೋಟಿ ಭಕ್ತರು ಅಮೃತ ಸ್ನಾನ ಮಾಡಿದರು. ಮುಂಜಾನೆ ಪಂಚಾಯತ್ ನಿರ್ವಾಣಿ ಅಖಾರದ ನಾಗಾ ಸಾಧುಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಇತರ ಅಖಾಡಗಳ ಋಷಿಗಳು ಪವಿತ್ರ ಸ್ನಾನ ಮಾಡಿದರು. ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ‘ನಂದಿನಿ’ ಕಮಾಲ್ – ಕೆಎಂಎಫ್ ಸಹಭಾಗಿತ್ವದಲ್ಲಿ 10 ಚಾಯ್ ಪಾಯಿಂಟ್

    ಭಾರತ ಮತ್ತು ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಯಾತ್ರಿಕರು ಚಳಿಯನ್ನು ಲೆಕ್ಕಿಸದೇ, ಅಮೃತ ಸ್ನಾನಕ್ಕಾಗಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮಕ್ಕೆ ಆಗಮಿಸಿದರು. ಬ್ರಾಹ್ಮಿ ಮುಹೂರ್ತದಂದು (ಸೂರ್ಯೋದಯಕ್ಕೆ ಸ್ವಲ್ಪ ಮೊದಲು), ಅಸಂಖ್ಯಾತ ಭಕ್ತರು ಪವಿತ್ರ ನೀರಿನಲ್ಲಿ ಮುಳುಗಿದರು.

    ಪಂಚಾಯತ್ ನಿರ್ವಾಣಿ ಅಖಾಡದ ನಾಗಾ ಸಾಧುಗಳು ಈಟಿ, ತ್ರಿಶೂಲ ಮತ್ತು ಕತ್ತಿಗಳಿಂದ ಅಲಂಕರಿಸಲ್ಪಟ್ಟ ರಾಜ ರೂಪದಲ್ಲಿ ಅಮೃತ ಸ್ನಾನ ಮಾಡಿದರು. ಕುದುರೆಗಳು ಮತ್ತು ರಥಗಳ ಮೇಲೆ ಸವಾರಿ ಮಾಡಿ, ಸಾಧುಗಳು ಮತ್ತು ಸಂತರು ಭವ್ಯ ಮೆರವಣಿಗೆ ಮುನ್ನಡೆಸಿದರು. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಪ್ರಯಾಗ್‌ರಾಜ್‌ನ ನಾಗವಾಸುಕಿ ದೇವಸ್ಥಾನ ಮತ್ತು ಸಂಗಮ್ ಪ್ರದೇಶದಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ನೆರೆದಿದ್ದರು. ಸ್ನಾನ ಘಟ್ಟಗಳ 12 ಕಿ.ಮೀ. ವ್ಯಾಪ್ತಿಯಲ್ಲಿ ‘ಹರ ಹರ ಮಹಾದೇವ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳು ಪ್ರತಿಧ್ವನಿಸಿದವು.

    ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ವಾಹನಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು. ಡಿಐಜಿ ವೈಭವ್ ಕೃಷ್ಣ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ನೇತೃತ್ವದ ಭದ್ರತಾ ಪಡೆಗಳು ಕುದುರೆಗಳ ಜೊತೆಗೂಡಿ ಜಾತ್ರೆಯ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿ, ಅಮೃತ ಸ್ನಾನಕ್ಕೆ ತೆರಳುತ್ತಿದ್ದ ಅಖಾಡ ಸಾಧುಗಳಿಗೆ ದಾರಿ ಮಾಡಿಕೊಟ್ಟವು.