Tag: ಅಮೃತ ಪ್ರೇಮ್

  • ಅಮೃತ ಪ್ರೇಮ್ ಹುಟ್ಟುಹಬ್ಬಕ್ಕೆ ‘ಟಗರು ಪಲ್ಯ’ ಚಿತ್ರದ ಫಸ್ಟ್ ಲುಕ್

    ಅಮೃತ ಪ್ರೇಮ್ ಹುಟ್ಟುಹಬ್ಬಕ್ಕೆ ‘ಟಗರು ಪಲ್ಯ’ ಚಿತ್ರದ ಫಸ್ಟ್ ಲುಕ್

    ಡಾಲಿ ಪಿಕ್ಚರ್ಸ್ (Dolly Dhananjay) ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ (Amrita Prem) ಎಂಟ್ರಿ ಕೊಟ್ಟಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾ ಮೂಲಕ ಕರುನಾಡ ಜನರ ಮುಂದೆ ನಾಯಕ ನಟಿಯಾಗಿ ಅಮೃತ ಪ್ರೇಮ್ ಪರಿಚಿತಗೊಳ್ಳುತ್ತಿದ್ದಾರೆ. ಈಗಾಗಲೇ ‘ಟಗರು ಪಲ್ಯ’ (Tagaru Palya) ಲುಕ್ ನಲ್ಲಿ ಸಿನಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಪಡೆದುಕೊಂಡಿರುವ ಅಮೃತಾ ಪ್ರೇಮ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಕಲಾವಿದೆಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋದು ಈ ಬಾರಿಯ ವಿಶೇಷ. ಚಿತ್ರತಂಡ ಕೂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ನಾಯಕ ನಟಿಗೆ ಶುಭ ಕೋರಿದೆ.

    ‘ಟಗರು ಪಲ್ಯ’ ಚಿತ್ರದಲ್ಲಿ ಅಮೃತ ಪ್ರೇಮ್ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ.  ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಕೆ ಕೃಪ ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯ ನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತ ನಟಿಸಿದ್ದಾರೆ. ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು ಬಹಳ ಬೇಗ ಎಲ್ಲವನ್ನು ಕಲಿತುಕೊಂಡು ಅಭಿನಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಟಗರು ಪಲ್ಯ’. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ, ಪಾಪಾರಾಜಿಗಳಿಗೆ ಸುನೀಲ್ ಶೆಟ್ಟಿ ಅಭಯ

    ‘ಟಗರು ಪಲ್ಯ’ ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ

    ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ

    ಟ ಡಾಲಿ ಧನಂಜಯ್  ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ಟಗರು ಪಲ್ಯ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇಂದು ‘ಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.

    ಇದು ನನ್ನ ಮೊದಲ ಸಿನಿಮಾ. ಕಂಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ. ಡಾಲಿ ಧನಂಜಯ್ ಮಾತನಾಡಿ ಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತೆ ಎಂದು ನಾನು ಹಿಂದೆಯೇ ಹೇಳಿದ್ದೆ. ಉಮೇಶ್ ಕೆ ಕೃಪ ‘ಟಗರು ಪಲ್ಯ’ ಕಥೆ ಎಳೆ ಹೇಳಿದಾಗ ತುಂಬಾ ಖುಷಿ ಆಯ್ತು. ಅದ್ಭುತವಾದ ರೈಟರ್. ಸೆಟ್ ಹುಡುಗ ಆಗಿ ಕೆಲಸ ಆರಂಭಿಸಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಈಗ ನಿರ್ದೇಶಕನಾಗುತ್ತಿದ್ದಾರೆ. ಬಡ ಕುಟುಂಬದಿಂದ ಬಂದು ನಿರ್ದೇಶಕನಾಗುತ್ತಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ಗಿಫ್ಟ್ ಆಗೋ ಎಲ್ಲಾ ಲಕ್ಷಣಗಳು ಅವರಲ್ಲಿದೆ.  ನಮ್ಮ ಬ್ಯಾನರ್ ನಿಂದ ಒಳ್ಳೆಯ ನಿರ್ದೇಶಕರು ಬರಲಿ ಎಂದು ಈ ಸಿನಿಮಾ ಆರಂಭಿಸಿದ್ವಿ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ತಮಿಳು ಸೀರಿಯಲ್‌ನಿಂದ ಹೊರನಡೆದ `ಪಾರು’ ನಟಿ ಮೋಕ್ಷಿತಾ ಪೈ

    ಇಡೀ ಕಥೆ ಮಂಡ್ಯದ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಎಮೋಶನಲ್ ಎಂಟಟೈನ್ಮೆಂಟ್ ಸಿನಿಮಾವಿದು. ನಾಗಭೂಷಣ್ ಈಗಾಗಲೇ ಇಕ್ಕಟ್, ಹನಿಮೂನ್, ಬಡವ ರಾಸ್ಕಲ್ ಸಿನಿಮಾದಲ್ಲಿ ತಮ್ಮ ಪ್ರತಿಭೆ ಪ್ರೂವ್ ಮಾಡಿದ್ದಾರೆ. ಪ್ರೇಮ್ ಸರ್ ಮಗಳನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡುತ್ತಿದ್ದೇವೆ. ತುಂಬಾ ದೊಡ್ಡ ಜವಾಬ್ದಾರಿ ಇದು. ಕನ್ನಡ ಚಿತ್ರರಂಗದ ಮಹಾಲಕ್ಷ್ಮೀ ಆಗಿ ಅಮೃತ ಬೆಳಗಲಿ ಎಂದು ಧನಂಜಯ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು. ನೆನಪಿರಲಿ ಪ್ರೇಮ್ ಮಾತನಾಡಿ ನನ್ನ ಮಗಳಿಗೆ ಒಳ್ಳೆ ಕಥೆ ಬಂದಿದೆ ಸಿನಿಮಾದಲ್ಲಿ ಆಕ್ಟ್ ಮಾಡ್ತಿಯ ಎಂದು ಕೇಳಿದೆ ಇಷ್ಟು ದಿನ ಮಾಡಲ್ಲ ಅಂತಿದ್ದವಳು ಒಂದೇ ಸರಿ ಒಕೆ ಅಂದ್ಲು. ಕಥೆ ಓದಿದೆ ನನಗೂ ಹಾಗೂ ಮಗಳಿಗೂ ತುಂಬಾ ಇಷ್ಟವಾಯ್ತು ಒಕೆ ಅಂದ್ವಿ. ಡಾಲಿ ಪ್ರೊಡಕ್ಷನ್ ಮಾಡ್ತಿದ್ದಾನೆ ಎಂದು ಗೊತ್ತಾಗಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೆ ನಮ್ಮನ್ನು ಬೆಳೆಸಿದ್ದೀರಾ ನನ್ನ ಮಗಳಿಗೂ ಪ್ರೋತ್ಸಾಹ ನೀಡಿ ಎಂದು ಪ್ರೇಮ್ ಸಂತಸ ಹಂಚಿಕೊಂಡ್ರು.

    ಇದು ನನಗೆ ದೊಡ್ಡ ಜವಾಬ್ದಾರಿ ಖಂಡಿತಾ ನಾನು ಪ್ರೂವ್ ಮಾಡ್ತೇನೆ. ಕಥೆ ಹಾಗೂ ಇದ್ರಲ್ಲಿರೋ ಮೆಸೇಜ್ ತುಂಬಾ ಇಷ್ಟ ಆಯ್ತು ಆದ್ರಿಂದ ಒಪ್ಪಿಕೊಂಡೆ. ಅವಕಾಶ ಕೊಟ್ಟಿದ್ದಕ್ಕೆ  ಧನಂಜಯ್ ಸರ್ ಗೆ ಧನ್ಯವಾದಗಳು. ಆಕ್ಟಿಂಗ್ ಫೀಲ್ಡ್ ಗೆ ಬರ್ತಿನಿ ಅಂತ ಯೋಚನೆ ಮಾಡಿರಲಿಲ್ಲ. ಈ ಸಿನಿಮಾ ಕಥೆ ಬಂದಾಗ ಅಪ್ಪ ನನಗೆ ಒಂದೇ ಮಾತು ಹೇಳಿದ್ದು ಕಲಿಬೇಕು ಅಂತ ಇಂಟ್ರಸ್ಟ್ ಇದ್ರೆ ಯಾವುದು ಬೇಕಾದ್ರು ಸಾಧ್ಯ ಎಂದು ಆದ್ರಿಂದ ಒಪ್ಪಿಕೊಂಡೆ. ಖಂಡಿತಾ ನನ್ನ ಬೆಸ್ಟ್ ಈ ಸಿನಿಮಾಗೆ ನೀಡುತ್ತೇನೆ ಎಂದು ಅಮೃತ ಪ್ರೇಮ್ ಮೊದಲ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

    ನಾಯಕ ನಾಗಭೂಷಣ್ ಮಾತನಾಡಿ ನನ್ನ ಊರ ಹೆಸರು ಟಗರು ಪುರ ಎಂದು ಕಾಕತಾಳೀಯವೇನೋ ಎಂಬಂತೆ ನನ್ನ ಸಿನಿಮಾ ಹೆಸರು ಟಗರು ಪಲ್ಯ ಎಂದು ತುಂಬಾ ಖುಷಿ ಆಯ್ತು. ಈ ಕಾಲಘಟ್ಟಕ್ಕೆ ‘ಟಗರು ಪಲ್ಯ’ ತುಂಬಾ ರಿಲೆವೆಂಟ್ ಆಗಿದೆ. ಹಳ್ಳಿಯಲ್ಲಿ ಇರುವ ನಂಬಿಕೆ, ಆಚರಣೆ ಸುತ್ತ ನಡೆಯೋ ಕಥೆ ಇದು. ಈ ಸಿನಿಮಾ ಭಾಗವಾಗಿರೋದು ತುಂಬಾ ಖುಷಿ ಇದೆ ಎಂದ್ರು.  ಟಗರು ಪಲ್ಯಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನವಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

     

     

    Live Tv
    [brid partner=56869869 player=32851 video=960834 autoplay=true]