Tag: ಅಮೃತ ದೇಸಾಯಿ ನೇತ್ರ ದಾನ

  • ಪುನೀತ್‌ ಪ್ರೇರಣೆ- ನೇತ್ರ ದಾನಕ್ಕೆ ಧಾರವಾಡ ಶಾಸಕ ದಂಪತಿ ಒಪ್ಪಿಗೆ

    ಪುನೀತ್‌ ಪ್ರೇರಣೆ- ನೇತ್ರ ದಾನಕ್ಕೆ ಧಾರವಾಡ ಶಾಸಕ ದಂಪತಿ ಒಪ್ಪಿಗೆ

    ಧಾರವಾಡ: ಪುನೀತ್ ರಾಜಕುಮಾರ್‌ ಅವರು ಕಣ್ಣು ದಾನ ಮಾಡಿದ್ದನ್ನು ಪ್ರೇರಣೆಯಾಗಿ ತೆಗೆದುಕೊಂಡು ರಾಜ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ನೇತ್ರ ದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಧಾರವಾಡದ ಶಾಸಕ ದಂಪತಿ ಕೂಡ ಕಣ್ಣು ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

    ಹೌದು, ಶಾಸಕ ಅಮೃತ ದೇಸಾಯಿ ಅವರು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದ ಸಂದರ್ಭದಲ್ಲಿ ಪತ್ನಿ ಪ್ರಿಯಾ ಅವರೊಂದಿಗೆ ನೇತ್ರದಾನಕ್ಕೆ ಒಪ್ಪಿ ಸಹಿ ಮಾಡಿದ್ದಾರೆ. ಇದನ್ನೂ ಓದಿ: ಕಲ್ಲಂಗಡಿ ಹಣ್ಣಿನ ಮೇಲೆ ಅರಳಿದ ಪುನೀತ್ ಭಾವಚಿತ್ರ

    ಶಾಸಕ ಅಮೃತ ದೇಸಾಯಿ ಅವರ ಹುಟ್ಟುಹಬ್ಬದ ಅಂಗವಾಗಿ ಶಾಸಕರ ಬೆಂಬಲಿಗರು ರಕ್ತ ದಾನ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಶಾಸಕ ಅಮೃತ ದೇಸಾಯಿ ಅವರು, ನಾನು ಹಾಗೂ ನನ್ನ ಪತ್ನಿ ಪ್ರಿಯಾ ಕಣ್ಣು ದಾನ ಮಾಡುತ್ತೇವೆ. ಪುನೀತ್ ರಾಜಕುಮಾರ್ ಅವರ ನಿಧನದ ನಂತರವೂ ಆ ಕಣ್ಣು ದಾನ ಪಡೆದವರ ಮನದಲ್ಲಿ ಇರುತ್ತಾರೆ. ಅದೇ ರೀತಿ ನಾವು ಕೂಡ ಜನರ ಮನದಲ್ಲಿ ಇರಬೇಕಾದರೆ, ನಮ್ಮ ಕಣ್ಣು ದಾನ ಮಾಡಬೇಕು ಎಂದು ಶಾಸಕರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನಟಿ ಭಾವನಾ ಕಾಂಗ್ರೆಸ್‌ಗೆ ಸೇರ್ಪಡೆ

    ಶಾಸಕರು ನೇತ್ರ ದಾನ ಮಾಡುತ್ತಿದ್ದಾರೆ ಎಂದು ತಿಳಿದ ಅವರ ಬೆಂಬಲಿಗರೂ ಕೂಡಾ ಕಣ್ಣು ದಾನ ಮಾಡಿದ್ದಾರೆ. ಸದ್ಯ 200 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ನೇತ್ರ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.