Tag: ಅಮೃತ ಅಯ್ಯಂಗಾರ್

  • ದುಬೈನಲ್ಲಿ ರಮ್ಯಾ ಭೇಟಿ ಮಾಡಿದ ಮತ್ತೋರ್ವ ನಟಿ : ಸಂಜೆಗೆ ಧನ್ಯವಾದ ಎಂದ ಅಮೃತಾ

    ದುಬೈನಲ್ಲಿ ರಮ್ಯಾ ಭೇಟಿ ಮಾಡಿದ ಮತ್ತೋರ್ವ ನಟಿ : ಸಂಜೆಗೆ ಧನ್ಯವಾದ ಎಂದ ಅಮೃತಾ

    ಚಂದವನದ ಯುವನಟಿ ಅಮೃತಾ ಅಯ್ಯಂಗಾರ್ ಸಿನಿಲೋಕಕ್ಕೆ ಬಂದು ಸೂಪರ್‌ ಹಿಟ್‌ ಸಿನಿಮಾಗಳನ್ನು ಕೊಡುತ್ತಿದ್ದಾರೆ. ಚಂದನವನದ ನವತಾರೆಯಾಗಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಈ ನಟಿ ತಮ್ಮ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಪೋಸ್ಟ್‌ಗೆ ಮೋಹಕ ತಾರೆ ರಮ್ಯಾ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದರು. ಆ ಕಾಮೆಂಟ್‌ಗಳನ್ನು ನೋಡಿ ಅಮೃತಾ ಫುಲ್ ಉತ್ಸುಕರಾಗಿ ರಮ್ಯಾ ಅವರಿಗೆ ಧನ್ಯವಾದ ಹೇಳುತ್ತಿದ್ದರು. ಆದರೆ ಈಗ ರಮ್ಯಾ ಅವರು ಅಮೃತ ಅಯ್ಯಂಗಾರ್ ಕುಟುಂಬವನ್ನು ಭೇಟಿ ಮಾಡಿದ್ದು, ಅದ್ಭುತ ಸಮಯ ಕಳೆದಿದ್ದಾರೆ. ಈ ಕುರಿತು ಅಮೃತ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

    ಇನ್ಸ್ಟಾಗ್ರಾಮ್ನಲ್ಲಿ ರಮ್ಯಾ ಮತ್ತು ಅವರ ತಾಯಿಯ ಜೊತೆಗಿನ ಫೋಟೋವನ್ನು ಶೇರ್ ಮಾಡಿರುವ ಅಮೃತಾ, ‘ಆಹಾ, ಇದು ಸಂಭವಿಸಿತು. ಒಂದೇ ಫ್ರೇಮ್ನಲ್ಲಿ ನನಗೆ ಸ್ಫೂರ್ತಿ ತುಂಬಿದ ಇಬ್ಬರು ಇದ್ದಾರೆ. divyaspandana ಲವ್ ಯು ದಿ ಮೋಸ್ಟ್. ಈ ಅದ್ಭುತ ಸಂಜೆಗೆ ಧನ್ಯವಾದಗಳು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಮೃತಾ ಅವರ ತಾಯಿ ತನ್ನ ಒಂದು ಭುಜದಲ್ಲಿ ರಮ್ಯಾ ಅವರನ್ನು, ಇನ್ನೊಂದು ಭುಜದಲ್ಲಿ ಮಗಳು ಅಮೃತಾಳನ್ನು ಮಲಗಿಸಿಕೊಂಡಿದ್ದು, ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ವೈರಲ್‌ ಆಯ್ತು ಹರ್ಷಿಕಾ ನಟನೆಯ `ತಾಯ್ತ’ ಚಿತ್ರದ ಲುಕ್

     

    View this post on Instagram

     

    A post shared by Amy❤️ (@amrutha_iyengar)

    ಈ ಫೋಟೋಗೆ ಕಾಮೆಂಟ್ ಮಾಡಿದ ಮೋಹಕ ತಾರೆ, ಆಮಿ ನಿಮ್ಮೊಂದಿಗೆ ಮತ್ತು ಕುಟುಂಬದೊಂದಿಗೆ ಕಳೆದ ಸಮಯ ನಿಮ್ಮಷ್ಟೆ ನನಗೂ ಖುಷಿ ತಂದಿದೆ. ನಿಮ್ಮ ಉಳಿದ ರಜೆಯನ್ನು ಆನಂದಿಸಿ. ನಿಮ್ಮ ಸ್ವೀಟ್ ಅಮ್ಮ, ಪ್ರಿಯಾಂಕಾ, ನಿಶಾಂತ್ ಮತ್ತು ಚಿಕ್ಕಮ್ಮನಿಗೆ ನನ್ನ ತುಂಬು ಪ್ರೀತಿಯಿದೆ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

    ಈ ಫೋಟೋ ನೋಡಿದ ಸೆಲೆಬ್ರಿಟಿಗಳು ಸಖತ್ ಖುಷ್ ಆಗಿದ್ದಾರೆ. ಅದರಲ್ಲಿಯೂ ನಟಿ ನಿಶ್ವಿಕಾ, ನನಗೆ ಈ ಫೋಟೋ ನೋಡಿ ಅಸೂಯೆಯಾಗುತ್ತಿದೆ. ಆದರೂ ಈ ಫೋಟೋ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಗಾಯಕ ವಾಸುಕಿ ವೈಭವ್, ಓ ಮೈ ಗಾಡ್, ನಾನು ದುಬೈಗೆ ಬರುತ್ತಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ಈ ಫೋಟೋ ನೋಡಿ ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಪ್ರಸ್ತುತ ಅಮೃತ ಅಯ್ಯಂಗಾರ್ ತಮ್ಮ ಕುಟುಂಬದ ಜೊತೆ ಹಾಲಿಡೇ ಎಂಜಯ್ ಮಾಡಲು ದುಬೈಗೆ ಹಾರಿದ್ದಾರೆ. ಈ ವೇಳೆ ರಮ್ಯಾ ಅವರು ಸಿಕ್ಕಿದ್ದು, ಅದ್ಭುತ ಸಮಯ ಕಳೆದಿರುವುದಾಗಿ ಪೋಸ್ಟ್ ಬರೆದುಕೊಂಡಿದ್ದಾರೆ

  • ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ನಟಿಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್!

    ಬೆಂಗಳೂರು: ಬಡವ ರಾಸ್ಕಲ್ ಗೆಲುವಿನ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಇದೀಗ ರೋಸ್ ಹಿಡಿದು ನಟಿಗೆ ಪ್ರಪೋಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಲವ್ ಬಗ್ಗೆ ತಲೆ ಕೆಡಸಿಕೊಳ್ಳದೇ, ಮದುವೆ ಬಗ್ಗೆ ಎಲ್ಲೂ ಬಾಯಿ ಬಿಡದ ಡಾಲಿ ಇದೀಗ ನಟಿ ಅಮೃತ ಅಯ್ಯಂಗಾರ್‌ಗೆ ಪ್ರಪೋಸ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಡಾಲಿ ಧನಂಜಯ್ ಅವರು ಅಮೃತಾ ಎದುರು ರೋಸ್ ಹಿಡಿದು ಕುಳಿತಿದ್ದಾರೆ. ಮಂಡಿಯೂರಿ ಬೇಡುವೆನು, ಹೃದಯ ಕಾಲಡಿ ಇಡುವೇನು ತೆಗೆದು ಬಚ್ಚಿಟ್ಟುಕೋ ಇಲ್ಲ ತುಳಿದು ಕಾಲ್ ತೋಳೆದುಕೋ. ಬೇಡ ಈ ಮೌನ, ನೀ ಮಾಡು ತೀರ್ಮಾನ ಎಂದು ಡಾಲಿ ಅಮೃತಾ ಎದುರು ಲವ್ ಪ್ರಪೋಸ್ ಇಟ್ಟಿದ್ದಾರೆ. ನಟಿ ಮಾತ್ರ ಮುಗುಳು ನಕ್ಕು ಸುಮ್ಮನಾಗಿದ್ದಾರೆ. ಇದನ್ನೂ ಓದಿ:  ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

    ಖಾಸಗಿ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಈ ಜೋಡಿಗೆ ಟಾಸ್ಕ್ ನೀಡಲಾಗಿತ್ತು. ಅಮೃತಾ ಅವರಿಗೆ ಡಾಲಿ ಧನಂಜಯ್ ರೋಸ್ ಕೊಟ್ಟು ಡೈಲಾಗ್ ಹೇಳಿ ಪ್ರಪೋಸ್ ಮಾಡಬೇಕಿತ್ತು. ಜೊತೆಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

  • ‘ಬಡವ ರಾಸ್ಕಲ್’ ಚಿತ್ರಕ್ಕೆ ಮುಹೂರ್ತ

    ‘ಬಡವ ರಾಸ್ಕಲ್’ ಚಿತ್ರಕ್ಕೆ ಮುಹೂರ್ತ

    ಬೆಂಗಳೂರು: ಗುಜ್ಜಲ್ ಟಾಕೀಸ್ ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಗುಜ್ಜಲ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ ಅವರು ನಿರ್ಮಿಸುತ್ತಿರುವ ‘ಬಡವ ರಾಸ್ಕಲ್` ಚಿತ್ರದ ಮುಹೂರ್ತ ಇತ್ತೀಚೆಗೆ ಗವಿಪುರದ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ರೇಣುಕಮ್ಮ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ದುನಿಯಾ ವಿಜಯ್ ಚೊಚ್ಚಲ ದೃಶ್ಯವನ್ನು ನಿರ್ದೇಶನ ಮಾಡಿದರು.

    ಶಂಕರ್ ಗುರು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‍ನಲ್ಲಿ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಧನಂಜಯ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೃತ ಅಯ್ಯಂಗಾರ್. ರಂಗಾಯಣ ರಘು, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್, ಚಂದ್ರು, ಅಲ್ಲು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ‘ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯ

    ‘ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯ

    ಬೆಂಗಳೂರು: ಶ್ರೀ ನಂಜುಂಡೇಶ್ವರ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಎಸ್.ಕೆ.ಗಂಗಾಧರ್ ಅವರು ನಿರ್ಮಿಸುತ್ತಿರುವ `ಅನುಷ್ಕ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರವೀಂದ್ರ ಮುದ್ದಿ ಬರೆದಿರುವ `ಇವಳೇ ನೋಡು ನಮ್ಮ ತಾಯಿ` ಎಂಬ ಹಾಡಿನ ಚಿತ್ರೀಕರಣ ಆದಿಚುಂಚನಗಿರಿ ಮಠದಲ್ಲಿ ನಡೆದಿದೆ. ಅಮೃತ ಅಯ್ಯಂಗಾರ್ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದರು.

    ಈ ಹಾಡಿನ ಚಿತ್ರೀಕರಣದೊಂದಿಗೆ ‘ಅನುಷ್ಕ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಅರಸೀಕೆರೆ ಹಾಗೂ ಬ್ಯಾಂಕಾಕ್‍ನಲ್ಲಿ ಚಿತ್ರಕ್ಕೆ 72 ದಿನಗಳ ಚಿತ್ರೀಕರಣ ನಡೆದಿದೆ.

    ದೇವರಾಜ್‍ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ವಿಕ್ರಂ ಸೆಲ್ವ ಸಂಗೀತ ನಿರ್ದೇಶನ, ಶ್ರೀಧರ್ ಸಂಕಲನ, ಅಶೋಕ್, ಸಿದ್ದಾರಾಜು, ನರಸಿಂಹ, ಚಂದ್ರು ಸಾಹಸ ನಿರ್ದೇಶನ, ಅವಿನ್ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಾಧುಕೋಕಿಲ, ರೂಪೇಶ್ ಶೆಟ್ಟಿ, ಅಮೃತ ಅಯ್ಯಂಗಾರ್, ರೂಪ ಶರ್ಮ, ಬಾಲರಾಜ್, ಆದಿಲೋಕೇಶ್ ಮುಂತಾದವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv