‘ಟಗರು ಪಲ್ಯ’ (Tagaru Palya) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಪುತ್ರಿ ಅಮೃತಾಗೆ ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ನಟಿ ಈಗ ಧೀರೆನ್ ರಾಜ್‌ಕುಮಾರ್‌ಗೆ (Dheeren Rajkumar) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ
ಚಿತ್ರರಂಗದಲ್ಲಿ ಅಮೃತಾಗೆ ಬೇಡಿಕೆ ಹೆಚ್ಚಾಗಿದೆ. ‘ಟಗರು ಪಲ್ಯ’ ಚಿತ್ರದ ಬಳಿಕ ‘ಅರಸು’ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ನಿರ್ದೇಶನದ ‘ಅಮ್ಮು’ ಚಿತ್ರಕ್ಕೆ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆ ಕುಡಿ ಧೀರೆನ್‌ಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಕ್ಕಿದೆ. ಧೀರೆನ್ ನಟನೆಯ ‘ಪಬ್ಬಾರ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಮೇ 7ರಂದು ಅದ್ಧೂರಿಯಾಗಿ ಸಿನಿಮಾಗೆ ಚಾಲನೆ ನೀಡಲಾಗಿದೆ. ಇದನ್ನೂ ಓದಿ: 12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ
ಸಂದೀಪ್ ಸುಂಕದ್ ನಿರ್ದೇಶನದ, ಧೀರೆನ್ ಮತ್ತು ಅಮೃತಾ ನಟನೆಯ ಚಿತ್ರಕ್ಕೆ ‘ಪಬ್ಬಾರ್’ ಎಂಬ ವಿಭಿನ್ನ ಟೈಟಲ್ ಇಡಲಾಗಿದೆ. ಇದೊಂದು ಕ್ರೈಮ್ ಹಾಗೂ ಥ್ರಿಲ್ಲರ್ ಒಳಗೊಂಡಿರುವ ಚಿತ್ರವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕಥೆಗೂ ಈ ಜಾಗಕ್ಕೂ ಲಿಂಕ್ ಇದೆ. ಆ ಜಾಗವೇ ಚಿತ್ರದ ಕಥೆಯ ಕೇಂದ್ರಬಿಂದು. ಮೊದಲಿಗೆ ಮಡಿಕೇರಿಯಲ್ಲಿ ಚಿತ್ರೀಕರಣ ಆರಂಭಿಸಿ ಬಳಿಕ ಪಬ್ಬರ್ ಕಣಿವೆಗೆ ಹೋಗಿ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ತೀರ್ಮಾನಿಸಿದೆ. ಮೇ 15ರಿಂದ ಶೂಟಿಂಗ್ ಶುರುವಾಗಲಿದೆ.
ಸ್ಟೈಲ್ ಗುರು ರಕ್ಷಿತ್ ಜೊತೆ ಅಮ್ಮು ಚಿತ್ರ, ಧೀರೆನ್ ಜೊತೆ ‘ಪಬ್ಬರ್’ ಈ ಎರಡು ಸಿನಿಮಾಗಳ ಮೂಲಕ ಅಮೃತಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ 2 ಚಿತ್ರಗಳು ಅವರ ಕೈ ಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.
ಪುನೀತ್ ರಾಜ್ ಕುಮಾರ್ ಜೊತೆ ‘ಆಕಾಶ್’, ‘ಅರಸು’, ಪ್ರಜ್ವಲ್ ದೇವರಾಜ್ ನಟನೆಯ ‘ಮೆರವಣಿಗೆ’ಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು (Mahesh Babu) ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ ಚಿತ್ರತಂಡ ಶೀರ್ಷಿಕೆಯನ್ನು ಅನಾವರಣ ಮಾಡಿದೆ. ಪುದುಚೇರಿಯ 82 ಸಮುದ್ರದ ಆಳದಲ್ಲಿ ಸ್ಕೂಬಾ ಡೈಯಿಂಗ್ ಮೂಲಕ ಚಿತ್ರತಂಡ ಟೈಟಲ್ ರಿವೀಲ್ ಮಾಡಿದೆ. ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಭೀಮ ದುನಿಯಾ ವಿಜಯ್ ಕುಮಾರ್ ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು.
ಮಹೇಶ್ ಬಾಬು ಅವರು ಪ್ರತಿ ಸಿನಿಮಾದಲ್ಲಿಯೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ. ಈಗ ಅವರು ಈ ಸಿನಿಮಾ ಮೂಲಕ ‘ಕನ್ನಡತಿ’, ‘ಅವನು ಮತ್ತೆ ಶ್ರಾವಣಿ 2’ ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ‘ಸ್ಮೈಲ್ ಗುರು’ ರಕ್ಷಿತ್ (Smile Guru Rakshit) ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಇದು ನಾಯಕನಾಗಿ ರಕ್ಷಿತ್ ಗೂ ಮೊದಲ ಹೆಜ್ಜೆ.ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಪಯಣಕ್ಕೆ ಅಮ್ಮು ಎಂಬ ಕ್ಲಾಸ್ ಶೀರ್ಷಿಕೆ ಇಡಲಾಗಿದೆ.
ದುನಿಯಾ ವಿಜಯ್ ಕುಮಾರ್ ಮಾತನಾಡಿ, ನಾನು, ಪ್ರೇಮ್ ಸಿನಿಮಾ ಆಳಕ್ಕೆ ಇಳಿದಿದ್ದೇವೆ. ನಮ್ಮ ಮಕ್ಕಳಿಗೆ ಒಳ್ಳೆದಾಗಲಿ ಎಂದು. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ , ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ಇವರು ಮುಂದೆ ಇಂಡಸ್ಟ್ರಿಯನ್ನು ಬೇರೆ ರೂಪಕ್ಕೆ ತೆಗೆದುಕೊಂಡು ಮುಂದೆ ಬರುತ್ತಿರುವುದು ನಿಮ್ಮ ಆಶೀರ್ವಾದ ಪಡೆಯಲು. ತಪ್ಪು ಮಾಡಿದರೆ ತಿದ್ದಿ. ನಾವು ಸಿನಿಮಾಗಾಗಿ ತುಂಬಾ ತ್ಯಾಗ ಮಾಡಿದ್ದೇವೆ. ಕಥೆ ಹೇಳದೆ ಮಹೇಶ್ ಅಣ್ಣನಿಗೆ ನಾವು ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ತುಂಬಾ ಹಳೆ ನಿರ್ದೇಶಕರು. ಅದ್ಭುತ ವ್ಯಕ್ತಿತ್ವ. ಬದಲಾಗದೆ, ಏನೂ ಅಹಂ ಇಲ್ಲದೇ ಇರುವುವವರು. ಇಡೀ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಿರ್ದೇಶಕರಾದ ಮಹೇಶ್ ಬಾಬು ಮಾತನಾಡಿ, ವಜ್ರೇಶ್ವರಿ ಕಂಬೈನ್ಸ್ ಮೂಲಕ ನನ್ನ ನಿರ್ದೇಶಕರಾಗಿ ಪರಿಚಯಿಸಿದವರು ಪಾರ್ವತಮ್ಮ, ರಾಜ್ ಕುಮಾರ್ ಸರ್ ಹಾಗೂ ಅವರ ಕುಟುಂಬ. ಶಿವಣ್ಣ, ರಾಘಣ್ಣ, ಎಲ್ಲದಕ್ಕಿಂತ ಹೆಚ್ಚಿನದಾಗಿ ಅಪ್ಪು ಸರ್. ಅನುರಾಗ್, ಮಿಥುನ್ ಹಾಗೂ ಬಚ್ಚನ್ ಚೇತು. ಈ ಮೂರು ಜನ ಸಿನಿಮಾ ಮಾಡಬೇಕು ಎಂದರು. ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ಸ್ಟ್ರೈಕ್ ಆಯ್ತು. ರಕ್ಷಿತ್ ಗೆ ಒಂದು ಬಿಗ್ ಚಪ್ಪಾಳೆ ಬೇಕು. ಈ ಚಿತ್ರಕ್ಕೆ ಫ್ಯಾಷನೇಟ್ ನಿರ್ಮಾಪಕರು ಸಿಕ್ಕಿದ್ದಾರೆ. ವರ್ಕ್ ಶಾಪ್ ಮಾಡಿದೆ. ಜೆರುಷಾ, ಅಮೃತಾ ಇಬ್ಬರು ಚೆನ್ನಾಗಿ ಆಕ್ಟ್ ಮಾಡುತ್ತಾರೆ. ರಕ್ಷಿತ್ ಒಳ್ಳೆ ನಟ. ಒಂದೊಳ್ಳೆ ತಂಡ ನನಗೆ ಸಿಕ್ಕಿದೆ ಎಂದರು.
ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ಈ ಸಮಯದಲ್ಲಿ ನಾನು ಇಬ್ಬರನ್ನೂ ನೆನಪು ಮಾಡಿಕೊಳ್ಳುತ್ತೇನೆ. ಸಂಕಲನಕಾರ ಮಹೇಶ್ ಅವರು. ಮೀಡಿಯಾದವರು. ನಾನು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ನನ್ನ ಕರಿಯರ್ ಶುರು ಮಾಡಿದ್ದು. ಮನೆಗೆ ಬಂದು ಶಾರ್ಟ್ ಹುಡುಕುತ್ತಿದೆ. ನಾನು ಕಾಣಿಸುತ್ತಿರಲಿಲ್ಲ. ಆಗ ರಿಯಾಲಿಟಿ ಶೋ ಟ್ರೈ ಮಾಡಿದೆ. ಆಗಲೂ ಆಗಲಿಲ್ಲ. ಆ ಹಠದಲ್ಲಿ ಶುರು ಮಾಡಿದ್ದು ಸ್ಮೈಲ್ ಗುರು ಶಾರ್ಟ್ ಸಿನಿಮಾ. ಮಹೇಶ್ ಅವರು ಆಗ ಸಾಥ್ ಕೊಟ್ಟರು. ಪದ್ಮಾವತಿ ಕಲರ್ಸ್ ಕನ್ನಡದಿಂದ ನನ್ನ ಕರಿಯರ್ ಶುರುವಾಯ್ತು. ನಾನು ಸಿನಿಮಾ ಮಾಡುತ್ತೇನೆ ಎಂದು ಅಂದೇ ಅಂದುಕೊಂಡಿದ್ದೆ. ಈಗ ಅದು ಆಗಿದೆ. ಈಗ ಟೈಟಲ್ ರಿವೀಲ್ ಆಗಿದೆ. ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ್ದೇವೆ ಎಂದರು.
ಅಮ್ಮು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಟಗರು ಪಲ್ಯ ಖ್ಯಾತಿಯ ಅಮೃತಾ ಪ್ರೇಮ್ (Amrita Prem) ಹಾಗೂ ವೀರಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ.
ಟಗರು ಪಲ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದ ಲವ್ಲಿ ಸ್ಟಾರ್ ಪ್ರೇಮ್ ಮುದ್ದಿನ ಗೊಂಬೆ ಅಮೃತಾ ಪ್ರೇಮ್. ಚೊಚ್ಚಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಈ ಸೂರ್ಯಕಾಂತಿ ಮುಂದಿನ ಸಿನಿಮಾ ಯಾವುದು ಎಂದು ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅಮೃತಾ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಳೆದು ತೂಗಿ ಕಥೆ ಆಯ್ಕೆ ಮಾಡಿಕೊಂಡು ನಿರ್ದೇಶಕ ಮಹೇಶ್ ಬಾಬು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಸಮ್ಮತಿ ಸೂಚಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸುಸಂದರ್ಭದಲ್ಲಿ ಚಿತ್ರತಂಡ ಅಮೃತಾ ಪ್ರೇಮ್ ಅವರನ್ನು ಸ್ವಾಗತಿಸಿದೆ. ಸ್ಮೈಲ್ ಗುರು ರಕ್ಷಿತ್ ಗೆ ಜೋಡಿಯಾಗಿ ಅಮೃತಾ ಸಾಥ್ ಕೊಡುತ್ತಿದ್ದಾರೆ. ನಿರ್ದೇಶಕ ಮಹೇಶ್ ಬಾಬು ಸಾರಥ್ಯದಲ್ಲಿ ನಡೆದ 15 ದಿನಗಳ ವರ್ಕ್ ಶಾಪ್ ನಲ್ಲಿ ನಾಯಕ ರಕ್ಷಿತ್, ನಾಯಕಿ ಅಮೃತಾ ಪ್ರೇಮ್ ಸೇರಿದಂತೆ ಇಡೀ ತಂಡ ಭಾಗಿಯಾಗಿದೆ. ಇನ್ನೂ ಅಮೃತಾ ಪ್ರೇಮ್ ತಮ್ಮ ಪಾತ್ರಕ್ಕೆ ಬೇಕಾದ ಕಸರತ್ತಿನೊಂದಿಗೆ ಶೀಘ್ರದಲ್ಲಿಯೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಅಮೃತಾ ಪ್ರೇಮ್ (Amrita Prem) ನಾಯಕಿಯಾಗಿ ಅಭಿನಯಿಸಿದ್ದ ಟಗರು ಪಲ್ಯ ಸಿನಿಮಾ ವಿಶೇಷವಾಗಿಯೇ ಇತ್ತು. ಹಳ್ಳಿ ಹುಡುಗಿಯಾಗಿಯೆ ಅಮೃತಾ ಪ್ರೇಮ್ ತುಂಬಾನೆ ಹೆಚ್ಚು ಗಮನ ಸೆಳೆದಿದ್ದರು. ಮೊದಲ ಚಿತ್ರದಲ್ಲಿಯೇ ದೊಡ್ಡ ಕಲಾವಿದರ ಮುಂದೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಚಿತ್ರದ ಮೂಲಕವೇ ಸೌತ್ ಫಿಲ್ಮಂ ಫೇರ್ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ದಕ್ಷಿಣದ ವಿವಿಧ ಭಾಷೆಯ ಸಿನಿಮಾಗಳಿಗೆ ವಿವಿಧ ವಿಭಾಗದಲ್ಲಿಯೇ ಪ್ರಶಸ್ತಿಯನ್ನ ಕೊಡಲಾಗುತ್ತದೆ. ಆ ರೀತಿ ಕನ್ನಡದ ಟಗರು ಪಲ್ಯದ ಚಿತ್ರದಲ್ಲಿ ನಟಿಸಿರೋ ನಟಿ ಅಮೃತಾ ಪ್ರೇಮ್, ಅತ್ಯುತ್ತಮ ಡೆಬ್ಯು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋ ಅಂತಿದ್ದ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ಇಂಡಸ್ಟ್ರಿಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರ ಚೊಚ್ಚಲ ಸಿನಿಮಾಗೆ ‘ಆಕಾಶ್’, ‘ಅರಸು’ ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕು ಎಂಬ ಉದ್ದೇಶದಿಂದ ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
‘ಟಗರು ಪಲ್ಯ’ (Tagaru Palya) ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಅಮೃತಾ ಪ್ರೇಮ್ (Amrutha Prem) ಸೈಲೆಂಟ್ ಆಗಿದ್ದಾರೆ. ಮೊದಲ ಚಿತ್ರದಲ್ಲೇ ಅಮೃತಾ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚೊಚ್ಚಲ ಚಿತ್ರ ಸಕ್ಸಸ್ ಕಂಡ ಮೇಲೆ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ.
ಡಾಲಿ ಧನಂಜಯ್ (Daali Dhananjay) ನಿರ್ಮಾಣದ ಸಿನಿಮಾದಲ್ಲಿ ನಾಗಭೂಷಣ್‌ಗೆ ನಾಯಕಿಯಾಗಿ ಅಮೃತಾ ಸೈ ಎನಿಸಿಕೊಂಡಿದ್ದರು. ಟಗರು ಪಲ್ಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಕಂಡಿತ್ತು. ಸಿನಿಮಾಗೆ ಹಾಕಿದ ಬಂಡವಾಳ ನಿರ್ಮಾಪಕರಿಗೆ ದಕ್ಕಿತ್ತು. ಈ ಚಿತ್ರದ ಮೂಲಕ ಭರವಸೆಯ ನಟಿಯಾಗಿ ಅಮೃತಾ ಹೊರಹೊಮ್ಮಿದ್ದರು. ಇದನ್ನೂ ಓದಿ:ಕನ್ನಡಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ನಟಿ ಐಶ್ವರ್ಯ ರಾಜೇಶ್
ಪುತ್ರಿಯ ಮೊದಲ ಸಿನಿಮಾಗೆ ಪ್ರೇಮ್ (Lovely Star Prem) ಬೆನ್ನಿಗೆ ನಿಂತು ಪ್ರೋತ್ಸಾಹ ನೀಡಿದ್ದರು. ಟಗರು ಪಲ್ಯ ಸಿನಿಮಾ ಹಿಟ್ ಆದ್ಮೇಲೆ ಅಮೃತಾ ಸುಮ್ಮನೆ ಕೂತಿಲ್ಲ. ಹೊಸ ಬಗೆಯ ಕಥೆಗಳನ್ನು ಕೇಳುತ್ತಿದ್ದಾರೆ. ಒಂದಿಷ್ಟು ಕಥೆಗಳನ್ನು ಫೈನಲ್ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.
ಸಿನಿಮಾಗಳಲ್ಲಿ ಮತ್ತಷ್ಟು ಫಿಟ್ ಆಗಿ ಕಾಣಬೇಕು ಅಂತ ಅಮೃತಾ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಸಿನಿಮಾಗಾಗಿ ತಯಾರಿ ಅಂತ ನಟಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ ಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಕೊಡುತ್ತಿರುವ ಡಾಲಿ (Dolly Dhananjay) ಪಿಕ್ಚರ್ಸ್ ನ ಮೂರನೇ ಕೊಡುಗೆ ಟಗರು ಪಲ್ಯ ಕಿರುತೆರೆಯಲ್ಲಿಯೂ ದೊಡ್ಡ ಮಟ್ಟದ ಹಿಟ್ ಕಂಡಿದೆ. ಬೆಳ್ಳಿಪರದೆ ಹಾಗೂ ಅಮೇಜಾನ್ ಪ್ರೈಮ್ ನಲ್ಲಿಯೂ ಫ್ಯಾಮಿಲಿ ಆಡಿಯನ್ಸ್ ಮನಸೂರೆಗೊಳಿಸಿರುವ ಈ ಚಿತ್ರ ನಾಟಿ ಹಿಟ್ ಎನಿಸಿಕೊಂಡಿದೆ. ಥಿಯೇಟರ್ ಹಾಗೂ ಒಟಿಟಿ ಎರಡು ವೇದಿಕೆಯಲ್ಲಿಯೂ ಗೆದ್ದಿರುವ ಟಗರು ಪಲ್ಯ (Tagaru Palya) ಕಿರುತೆರೆ ಪ್ರೇಕ್ಷಕ ವರ್ಗಕ್ಕೂ ರುಚಿಸಿದೆ.
ಎರಡು ವಾರದ ಹಿಂದಷ್ಟೇ ಅಂದರೆ ಜ.7ರಂದು ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ತೆರೆಕಂಡಿತ್ತು. ಕಿರುತೆರೆಗೆ ಅಪ್ಪಳಿಸಿದ್ದ ಈ ಚಿತ್ರ ಟಿಆರ್ ಪಿಯಲ್ಲಿ ಧೂಳ್ ಎಬ್ಬಿ ಸಿದೆ. 7.2 ಟಿಆರ್ ಪಿ ಟಗರು ಪಲ್ಯ ಸಿನಿಮಾಗೆ ದಕ್ಕಿದೆ. ಹೊಸಬರ ಸಿನಿಮಾಗೆ ಇಷ್ಟು ಟಿಆರ್ ಪಿ ಬಂದಿರೋದು ನಿಜಕ್ಕೂ ದಾಖಲೆಯೇ ಸರಿ..ಈ ಹಿಂದೆ ಡಾಲಿ ಪಿಕ್ಚರ್ಸ್ ನಿರ್ಮಾಣ ಮಾಡಿದ್ದ ಚೊಚ್ಚಲ ಸಿನಿಮಾ ಬಡವ ರಾಸ್ಕಲ್ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊಡ್ಡ ಮಟ್ಟದ ಹಿಟ್ ಕಂಡಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಎರಡು ಅದ್ಭುತ ಚಿತ್ರಗಳನ್ನು ನೀಡಿದೆ ಡಾಲಿ ಪಿಕ್ಚರ್ಸ್…
ಧನಂಜಯ್ ನಿರ್ಮಾಣದ ಟಗರು ಪಲ್ಯಕ್ಕೆ ಉಮೇಶ್ ಕೆ. ಕೃಪಾ ಆಕ್ಷನ್ ಕಟ್ ಹೇಳಿದ್ದರು. ಇದು ಇವರ ಮೊದಲ ಪ್ರಯತ್ನ. ಕನ್ನಡ ಸಿನಿಮಾರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ನಟ ನಾಗಭೂಷಣ ಮತ್ತು ಅಮೃತಾ ಪ್ರೇಮ್ ‘ಟಗರು ಪಲ್ಯ’ ದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ವಾಸುಕಿ ವೈಭವ್, ಚಿತ್ರಾ ಶೆಣೈ ಮತ್ತು ವೈಜನಾಥ್ ಬಿರಾದಾರ್ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು. ವಾಸುಕಿ ವೈಭವ್ ಸಂಗೀತ ಸಂಯೋಜಿಸುವ ಜೊತೆಗೆ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ವರ್ಷದ ಅಕ್ಟೋಬರ್ 27 ರಂದು ಈ ಸಿನಿಮಾ ತೆರೆ ಕಂಡಿತ್ತು.
ಕನ್ನಡ ಚಿತ್ರರಂಗದ ಯಂಗ್ ಹೀರೋ ನೆನಪಿರಲಿ ಪ್ರೇಮ್ (Nenapirali Prem) ಪುತ್ರಿ ಅಮೃತಾ (Amrutha Prem) ಅವರು ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮೇಲೆ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಹೈಲೆಟ್ ಆಗುತ್ತಲೇ ಇರುತ್ತಾರೆ. ಈಗ ಚೆಂದದೊಂದು ಫೋಟೋಶೂಟ್ ಮಾಡಿಸುವ ಮೂಲಕ ಇಂಟರ್‌ನೆಟ್‌ನಲ್ಲಿ ನಟಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ:ಯಶ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್ ಮಾಡಿದ ಶ್ರೀನಿಧಿ ಶೆಟ್ಟಿ
ನವರಾತ್ರಿ ಹಬ್ಬದ (Navaratri Festival) ಅಂಗವಾಗಿ ಮುದ್ದಾದ ಫೋಟೋಶೂಟ್‌ವೊಂದನ್ನ ಅಮೃತಾ ಪ್ರೇಮ್ ಮಾಡಿಸಿದ್ದಾರೆ. ಲೈಟ್ ಬಣ್ಣ ಸೀರೆಯುಟ್ಟು ಯುವರಾಣಿಯಂತೆ ಅಮೃತಾ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾದ ನಗೆ ಬೀರುತ್ತ ಮಸ್ತ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಅಮೃತಾ ಅವರ ನಯಾ ಲುಕ್ ನೋಡಿ ಸೀರೆಯಲ್ಲಿ ಹುಡುಗಿರ ನೋಡಲೇಬಾರದು, ನಿಲ್ಲೋಲ್ಲ ಟೆಂಪ್ರೆಚರೂ ಎಂದು ಹಾಡಲು ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಲವ್ಲಿ ಸ್ಟಾರ್ ಪ್ರೇಮ್ ಅವರು ‘ನೆನಪಿರಲಿ’ (Nenapirali) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಬಣ್ಣದ ಲೋಕಕ್ಕೆ ಬಂದು 26 ವರ್ಷಗಳು ಕಳೆದರೂ ಪ್ರೇಮ್ ಅವರು ಚಾರ್ಮ್ ಕಳೆದುಕೊಂಡಿಲ್ಲ. ಇಂದಿಗೂ ಅವರ ಸಿನಿಮಾ ನೋಡಲು ಫ್ಯಾನ್ಸ್ ಎದುರು ನೋಡ್ತಾರೆ. ಈಗ ಅವರ ಪುತ್ರಿ ಅಮೃತಾ ಕೂಡ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
‘ಟಗರು ಪಲ್ಯ’ ಚಿತ್ರದ ಮೂಲಕ ನಾಗಭೂಷಣ್‌ಗೆ ಅಮೃತಾ ಹೀರೋಯಿನ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ. ಮೊದಲ ಚಿತ್ರದಲ್ಲೇ ಗಮನ ಸೆಳೆಯೋದ್ರಲ್ಲಿ ಯಶಸ್ವಿಯಾಗುತ್ತಾರಾ? ಕಾದುನೋಡಬೇಕಿದೆ.
ನಟರಾಕ್ಷಸ ಡಾಲಿ ಧನಂಜಯ್ (Dhananjay) ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂರನೇ ಪ್ರಯತ್ನವೇ ‘ಟಗರು ಪಲ್ಯ’ (Tagaru Palya). ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಟಗರು ಪಲ್ಯ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.
ಈಗಾಗಲೇ ರಿಲೀಸ್ ಆಗಿರುವ ಟೈಟಲ್ ಟ್ರ್ಯಾಕ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಚಿತ್ರತಂಡ ಸೂರ್ಯಕಾಂತಿ ನಾನು ಎಂಬ ಮೆಲೋಡಿ ಹಾಡನ್ನು ಅನಾವರಣ ಮಾಡಿದೆ. ಸ್ವತಃ ಧನಂಜಯ್ ಅವರೇ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಕಂಠ ಕುಣಿಸಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ (Amrita Prem) ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: Exclusive: ಸ್ಪಂದನಾ ಇಲ್ಲ ಅನ್ನೋ ರಾಘು ನೋವು ಮಾಯ ಆಗಲ್ಲ- ನವೀನ್ ಕೃಷ್ಣ ಭಾವುಕ
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಅನೇಕ ಹೊಸಬರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು, ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ನಾಗಭೂಷಣ್ ಟಗರು ಪಲ್ಯದ ನಾಯಕ.
‘ಟಗರು ಪಲ್ಯ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಕೂತೂಹಲ ದುಪ್ಪಟ್ಟಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಹಾಗೇ ವಾಸುಕಿ ವೈಭವ್ ಸಂಗೀತವಿದೆ ಇನ್ನು ಎಸ್.ಕೆ.ರಾವ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಪ್ರಚಾರ ಕಾರ್ಯ ಆರಂಭಿಸಿರುವ ಟಗರು ಪಲ್ಯ ತಂಡ ಇದೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.
ಇಕ್ಕಟ್, ಬಡವ ರಾಸ್ಕಲ್ (Badava Rascal) ಸಿನಿಮಾಗಳ ಖ್ಯಾತಿಯ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್ (Nagabhushan) ಅವರಿಗಿಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ‘ಟಗರು ಪಲ್ಯ’ (Tagaru Palya) ಸಿನಿಮಾ ಬಳಗದಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಡಾಲಿ ಧನಂಜಯ್ (Daali Dhananjay) ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರ ಟಗರು ಪಲ್ಯ ಟೈಟಲ್ ಟ್ರ‍್ಯಾಕ್ ಅನ್ನು ನಾಯಕ ನಾಗಭೂಷಣ್ ಬರ್ತ್‌ಡೇ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಕಂಠ ಕುಣಿಸಿದ್ದಾರೆ.
ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಟಗರು ಪಲ್ಯ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ (Amrutha Prem) ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ನಿರ್ದೇಶಕ ಉಮೇಶ್ ಕೆ. ಕೃಪಾ ಕಟ್ಟಿಕೊಟ್ಟಿದ್ದಾರೆ. ಇದನ್ನೂ ಓದಿ:ನಿರ್ದೇಶಕನಾದ ‘ಗೊಂಬೆಗಳ ಲವ್’ ಹೀರೋ ಅರುಣ್
ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ ಟಗರು ಪಲ್ಯ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಟೈಟಲ್ ಟ್ರ‍್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.
ಮೊದಲ ಬಾರಿಗೆ ಅಮೃತಾ ಪ್ರೇಮ್- ನಾಗಭೂಷಣ್ (Nagabhushan) ಜೋಡಿಯಾಗಿ ಅಭಿನಯಿಸಿರುವ ‘ಟಗರು ಪಲ್ಯ’ (Tagaru Palya) ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಯಿದೆ. ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ನಟರಾಕ್ಷಸ ಡಾಲಿ ಧನಂಜಯ್ (Dolly Dhananjay) ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಸಿನಿಮಾ ಟಗರು ಪಲ್ಯ (Tagaru Palya). ಯೋಗರಾಜ್ ಭಟ್ಟರ ಗರಡಿಯಲ್ಲಿ ಮತ್ತು ಹಲವು ಖ್ಯಾತ ನಿರ್ದೇಶಕರ ಜೊತೆ ನಿರ್ದೇಶನದ ವಿಭಾಗದಲ್ಲಿ ದುಡಿದಿರುವ ಉಮೇಶ್ ಕೆ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ನವೆಂಬರ್ ನಲ್ಲಿ ಸೆಟ್ಟೇರಿದ ಟಗರು ಪಲ್ಯ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ.
ಮಂಡ್ಯ, ಮಳವಳ್ಳಿ, ಮುತತ್ತಿ ಹಾಗೂ ಶಿಂಶ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಮೂರನೇ ಕೊಡುಗೆ ಈ ಸಿನಿಮಾ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ (Nagabhushan) ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ (Amrutha Prem) ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಸ್ಯಾಂಡಲ್‌ವುಡ್‌ಗೆ (Sandalwood) ಇದೀಗ ಸ್ಟಾರ್ ಕಿಡ್‌ಗಳ ಹಾವಳಿ ಜೋರಾಗಿದೆ. `ನೆನಪಿರಲಿ’ ಪ್ರೇಮ್ (Nenapirali Prem) ಅವರ ಮುದ್ದು ಮಗಳು ಚಂದನವನಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಯುವ ನಟಿಯ ಸಂಭಾವನೆ ಕೇಳಿದ್ರೆ ನಿಜಕ್ಕೂ ನೀವು ಅಚ್ಚರಿಪಡ್ತೀರಾ.
ಗಾಂಧಿನಗರದಲ್ಲಿ ಇದೀಗ ಮುದ್ದು ಕಲಾವಿದೆಯ ಪಾದಾರ್ಪಣೆಯಾಗುತ್ತಿದೆ. ಡಾಲಿ ನಿರ್ಮಾಣದ `ಟಗರು ಪಲ್ಯ’ (Tagaru Palya) ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಮಗಳು ಅಮೃತಾ (Amrutha Prem) ನಟ ನಾಗಭೂಷಣಗೆ ನಾಯಕಿಯಾಗಿ ಬರುತ್ತಿದ್ದಾರೆ. ಸಾಮಾನ್ಯವಾಗಿ ಮೊದಲ ಚಿತ್ರಕ್ಕೆ ಅವಕಾಶ ಕೊಡುವುದೇ ದೊಡ್ಡ ವಿಚಾರ. ನಟಿಯ ಮೊದಲ ಚಿತ್ರದ ಸಂಭಾವನೆ ಕೇಳಿದ್ರೆ ಬೆಚ್ಚಿ ಬೀಳುವಂತಿದೆ. ಚೊಚ್ಚಲ ಚಿತ್ರಕ್ಕೆ ಅಮೃತಾ ಪ್ರೇಮ್‌ಗೆ 10 ಲಕ್ಷ ರೂ. ಸಂಭಾವನೆ ಕೊಟ್ಟಿದ್ದಾರಂತೆ ಡಾಲಿ. ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ಮರಾಠಿ ಚಿತ್ರದ ಫಸ್ಟ್ ಲುಕ್ ರಿಲೀಸ್
ಡಾಲಿ ನಿರ್ಮಾಣದ ಮೂರನೇ ಸಿನಿಮಾ `ಟಗರುಪಲ್ಯ’ ಚಿತ್ರಕ್ಕೆ ಅಮೃತಾಗೆ 10 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಟನೆಯ ಯಾವುದೇ ಅನುಭವವಿಲ್ಲದ ಹೊಸ ಪ್ರತಿಭೆಗೆ ಇಷ್ಟೊಂದು ಸಂಭಾವನೆನಾ ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿದೆ. ಇನ್ನೂ ತಮ್ಮ ಚೊಚ್ಚಲ ಚಿತ್ರದ ಮೂಲಕ ಮುಂದಿನ ದಿನಗಳಲ್ಲಿ ಗಟ್ಟಿ ನಾಯಕಿಯಾಗಿ ನಿಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]