Tag: ಅಮೃತಾ ಐಯ್ಯಂಗಾರ್

  • ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

    ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

    ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಸಿನಿಮಾ ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು.

    ರೋಮ್ಯಾಂಟಿಕ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ‘ವಿಂಡೋಸೀಟ್’ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿರುವ ಈ ಚಿತ್ರ ಇದೀಗ ಚಿತ್ರದ ಹಾಡೊಂದನ್ನ ವಿಶೇಷ ಶೈಲಿಯಲ್ಲಿ ಚಿತ್ರೀಕರಿಸಿ ಎಲ್ಲರ ಚಿತ್ತ ಸೆಳೆದಿದೆ.

    ಚಿತ್ರದ ‘ಸರೆಂಡರ್’ ಹಾಡನ್ನು ಚಿತ್ರತಂಡ ವಿಭಿನ್ನವಾಗಿ, ವಿಶೇಷವಾಗಿ ಚಿತ್ರೀಕರಿಸಿ ಸುದ್ದಿಯಲ್ಲಿದೆ. ಜಾಝ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಹಾಡು ಕನ್ನಡದ ಮಟ್ಟಿಗಂತೂ ಇದೇ ಮೊದಲ ಪ್ರಯೋಗ. ಸರೆಂಡರ್ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು, ಈ ಹಾಡು ಎಲ್ಲರ ಗಮನವನ್ನು ತನ್ನತ್ತ ಆಕರ್ಷಿಸಿದೆ. ಈ ಪ್ರಯೋಗಾತ್ಮಕ ಹಾಡಿಗೆ ಮಹೇಶ್ ರಘುನಂದನ್ ಸಾಹಿತ್ಯ, ಸೌಂದರ್ಯ ಜಯಚಂದ್ರನ್ ಗಾಯನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಮೋಡಿ ಇದೆ. ಇದನ್ನೂ ಓದಿ:  ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

    ಈಗಾಗಲೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಅದಕ್ಕೆಲ್ಲ ಬ್ರೇಕ್ ಹಾಕಿತ್ತು. ಆದ್ರೀಗ ಎಲ್ಲವೂ ಸುಧಾರಣೆಯ ಹಂತಕ್ಕೆ ಬಂದು ತಲುಪಿದ್ದು, ‘ವಿಂಡೋಸೀಟ್’ ಚಿತ್ರತಂಡ ಕೂಡ ಸಿನಿರಸಿಕರಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ.

    ಮೇಕಿಂಗ್, ಟೀಸರ್, ಹಾಡುಗಳು ಸೃಷ್ಟಿಸಿರೋ ಬಝ್, ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ಅನ್ನೋ ಕ್ಯೂರಿಯಾಸಿಟಿ, ಆದಿ ಲಕ್ಷ್ಮೀ ಪುರಾಣ ನಂತರ ನಿರೂಪ್ ಭಂಡಾರಿ ಯಾವುದೇ ಸಿನಿಮಾಗಳು ತೆರೆ ಕಾಣದಿರುವುದು, ಈ ಎಲ್ಲವೂ ಪ್ರೇಕ್ಷಕ ಪ್ರಭುಗಳ ಮನಸ್ಸಲ್ಲಿ ‘ವೀಂಡೋಸೀಟ್’ ಚಿತ್ರದ ಮೇಲೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿವೆ.

    ಕೆ ಎಸ್ ಕೆ ಶೋರೀಲ್ ಬ್ಯಾನರ್ ನಡಿ ನಿರ್ಮಾಣವಾದ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಾರಥ್ಯ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್, ರಿತ್ವಿಕ್ ಸಂಕಲನವಿದೆ. ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಒಳಗೊಂಡಂತೆ ಹಲವು ಕಲಾವಿದರು ‘ವಿಂಡೋಸೀಟ್’ ತಾರಾ ಬಳಗದಲ್ಲಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

  • ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ನಿರೂಪ್ ಭಂಡಾರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಂಡೋಸೀಟ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ‘ವಿಂಡೋಸೀಟ್’ ಚಿತ್ರತಂಡ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಲು ಸಜ್ಜಾಗಿದೆ.

    ಈಗಾಗಲೇ ಯೋಗರಾಜ್ ಭಟ್ ಸಾಹಿತ್ಯ ಕೃಷಿಯಲ್ಲಿ ಅರಳಿರೋ ‘ಅತಿ ಚೆಂದದ ಹೂಗೊಂಚಲು’ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿ ಹಿಟ್ ಆಗಿದೆ. ಇದೀಗ ಅದೇ ಖುಷಿಯಲ್ಲಿ ಚಿತ್ರತಂಡ ‘ಖಾಲಿ ಆಕಾಶ’ ಎಂಬ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡುತ್ತಿದ್ದು, ಡಿಸೆಂಬರ್ 18ಕ್ಕೆ ಆನಂದ್ ಆಡಿಯೋನಲ್ಲಿ ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗುತ್ತಿದೆ. ಮೊದಲ ಲಿರಿಕಲ್ ವೀಡಿಯೋಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಲ್ಲಿರುವ ‘ವಿಂಡೋಸೀಟ್’ ಚಿತ್ರತಂಡ ‘ಖಾಲಿ ಆಕಾಶ’ ಹಾಡಿಗೆ ಯಾವ ರೀತಿ ಪ್ರೇಕ್ಷಕ ಪ್ರಭುವಿನ ಪ್ರತಿಕ್ರಿಯೆ ಸಿಗುತ್ತೆ ಅನ್ನೋದನ್ನ ಎದುರು ನೋಡುತ್ತಿದೆ.

    ‘ವಿಂಡೋಸೀಟ್’ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು ನಟಿ ಶೀತಲ್ ಶೆಟ್ಟಿ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಜಾಕ್ ಮಂಜುನಿರ್ಮಾಣದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಚಿತ್ರದಲ್ಲಿ ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ನಿರೂಪ್ ಭಂಡಾರಿ ಜೊತೆ ನಾಯಕಿಯರಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮೂಡಿ ಬಂದಿವೆ.