Tag: ಅಮೃತಪಾಲ್‌ ಸಿಂಗ್‌

  • ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

    ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು

    ಲಂಡನ್‌: ಖಲಿಸ್ತಾನಿ ಉಗ್ರ ಅಮೃತಪಾಲ್ ಸಿಂಗ್ (Amritpal Singh) ಆಪ್ತ, ಬ್ರಿಟನ್ ಮೂಲದ ಖಲಿಸ್ತಾನ್ ಲಿಬರೇಷನ್ ಫೋರ್ಸ್ (ಕೆಎಲ್‌ಎಫ್) ಮುಖ್ಯಸ್ಥ ಅವತಾರ್ ಸಿಂಗ್ ಖಂಡಾ (Avtar Singh Khanda) ನಿಗೂಢವಾಗಿ ಸಾವನ್ನಪ್ಪಿದ್ದಾನೆ.

    ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷ ಉಣಿಸಿ ಸಾಯಿಸಲಾಗಿದೆ ಎಂದು ಶಂಕೆ ವ್ಯಕ್ತವಾದರೂ ವೈದ್ಯಕೀಯ ದಾಖಲೆಗಳು ರಕ್ತ ಕ್ಯಾನ್ಸರ್ ಎಂದು ಹೇಳಿವೆ.  ಅವತಾರ್ ಸಿಂಗ್ ಖಂಡಾನ ಆರೋಗ್ಯದಲ್ಲಿ ಸೋಮವಾರ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಯಾರು ಅವತಾರ್ ಸಿಂಗ್?
    2007ರಲ್ಲಿ ಶಿಕ್ಷಣ ವೀಸಾದಡಿ ಬ್ರಿಟನ್‌ಗೆ ತೆರಳಿದ್ದ ಅವತಾರ್ ಸಿಂಗ್ 2012ರಿಂದ ಅಲ್ಲಿಯೇ ನೆಲೆಸಿದ್ದ. ಬಾಂಬ್ ತಜ್ಞನಾಗಿದ್ದ ಖಂಡಾ, ಲಂಡನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ಮೇಲೆ ಆಕ್ರಮಣ ಮಾಡಿಸಿದವರ ಪೈಕಿ ಈತ ಪ್ರಮುಖ ಆರೋಪಿಯಾಗಿದ್ದ. ದೂತವಾಸ ಕಚೇರಿ ಮೇಲಿದ್ದ ತ್ರಿವರ್ಣ ಧ್ವಜ ತೆಗೆದು ಖಲಿಸ್ತಾನ್‌ ಧ್ವಜ ಹಾರಿಸಿದ್ದ. ಇದನ್ನೂ ಓದಿ: ದೆಹಲಿಯ ಬ್ರಿಟಿಷ್‌ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ

    ಪಂಜಾಬ್ ಪೊಲೀಸರು ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಖಲಿಸ್ತಾನಿ ಮುಖಂಡ ಅಮೃತಪಾಲ್ ಸಿಂಗ್‌ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆತ ತಲೆಮರೆಸಿಕೊಳ್ಳಲು ಅವತಾರ್ ಖಾಂಡಾ ನೆರವಾಗಿದ್ದ. ಅಮೃತಪಾಲ್‌ನನ್ನು ಪೊಲೀಸರು ಬೆನ್ನತ್ತುವಾಗ ಆತ ಲಂಡನ್‌ನಲ್ಲಿದ್ದ ಅವತಾರ್ ಜತೆ ಸಂಪರ್ಕದಲ್ಲಿದ್ದ ವಿಚಾರ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿತ್ತು.

    ಬ್ರಿಟನ್‌ನಲ್ಲಿ ರಾಂಜೋಥ್ ಸಿಂಗ್ ಎಂಬ ಸಂಕೇತಾಕ್ಷರದ ಹೆಸರಿನಲ್ಲಿ ವಾಸಿಸುತ್ತಿದ್ದ ಈತ ದೀಪ್ ಸಿಧು ಮರಣದ ನಂತರವ ವಾರಿಸ್ ಪಂಜಾಬ್ ದೆ ಸಂಘಟನೆಯ ಅಧಿಕಾರ ಅಮೃತಪಾಲ್ ಸಿಂಗ್‌ಗೆ ಸಿಗುವಂತೆ ಮಾಡುವಲ್ಲಿ ಖಾಂಡಾ ಪ್ರಮುಖ ಪಾತ್ರವಹಿಸಿದ್ದ.

    ಪಂಜಾಬ್‌ನ ರಾಜಕೀಯ ಪಕ್ಷ ಶಿರೋಮಣಿ ಅಕಾಲಿ ದಳದ ಜತೆಗೂ ಗುರುತಿಸಿಕೊಂಡಿದ್ದ ಅವತಾರ್ ಖಾಂಡಾನ ತಂದೆ ಕುಲ್ವಂತ್ ಸಿಂಗ್ ಕೂಡ ಕೆಎಲ್‌ಎಫ್ ಉಗ್ರನಾಗಿದ್ದು, ಆತನನ್ನು ಹತ್ಯೆ ಮಾಡಲಾಗಿತ್ತು.

  • ಲಂಡನ್‍ಗೆ ತೆರಳುತ್ತಿದ್ದ ಅಮೃತ್‌ಪಾಲ್ ಪತ್ನಿ ಪೊಲೀಸರ ವಶಕ್ಕೆ

    ಲಂಡನ್‍ಗೆ ತೆರಳುತ್ತಿದ್ದ ಅಮೃತ್‌ಪಾಲ್ ಪತ್ನಿ ಪೊಲೀಸರ ವಶಕ್ಕೆ

    ಚಂಡೀಗಢ: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್ ಸಿಂಗ್ (Amritpal Singh) ಪತ್ನಿ ಕಿರಣ್‍ದೀಪ್ ಕೌರ್ (Kirandeep Kaur) ಲಂಡನ್‍ಗೆ ತೆರಳಲು ಪ್ರಯತ್ನಿಸುತ್ತಿದ್ದಾಗ ಅಮೃತಸರ  ವಿಮಾನ ನಿಲ್ದಾಣದಲ್ಲಿ (Amritsar Airport) ವಶಕ್ಕೆ ಪಡೆಯಲಾಗಿದೆ.

    ಕಿರಣ್‍ದೀಪ್‍ಳನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪಂಜಾಬ್ ಪೊಲೀಸ್ ಮೂಲಗಳ ಪ್ರಕಾರ, ಕಿರಣ್ ದೀಪ್ ಇಂಗ್ಲೆಂಡ್‍ನ ಪ್ರಜೆಯಾಗಿದ್ದಾಳೆ. ಅಷ್ಟೇ ಅಲ್ಲದೇ ಪಂಜಾಬ್ ಹಾಗೂ ದೇಶದ ಯಾವುದೇ ಭಾಗದಲ್ಲಿ ಯಾವುದೇ ಪ್ರಕರಣವು ದಾಖಲಾಗಿಲ್ಲ.

    ಆದರೆ ತಲೆಮರೆಸಿಕೊಂಡಿರುವ ಆರೋಪಿಗಳ ಕುಟುಂಬ ಮತ್ತು ಪರಿಚಯಸ್ಥರನ್ನು ವಿಚಾರಣೆಗೆ ಒಳಪಡಿಸಿದ ಕಾನೂನು ಪ್ರಕ್ರಿಯೆಯ ಅಡಿಯಲ್ಲಿ ಕಿರಣ್‍ದೀಪ್ ಕೌರ್‌ನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಅಮೃತ್‍ಪಾಲ್ ಸಿಂಗ್ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ದಿಢೀರ್‌ ಬೆಳವಣಿಗೆ – ಕನಕಪುರದಿಂದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಕೆ

    ಈ ಹಿಂದೆ, ಮಾರ್ಚ್‍ನಲ್ಲಿ ಅಮೃತ್‌ಪಾಲ್ ಸಿಂಗ್‍ನ ದೇಶದ್ರೋಹಿ ಚಟುವಟಿಕೆಗಳಿಗೆ ವಿದೇಶಿ ಧನಸಹಾಯ ನಡೆದಿರುವ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಇದಕ್ಕೆ ಸಂಬಂಧಿಸಿದಂತೆ ಪಂಜಾಬ್‍ನ ಜಲ್ಲುಪುರ್ ಖೇಡಾ ಗ್ರಾಮದಲ್ಲಿ ಆಕೆಯನ್ನು ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೆ ಹಣ ಹಂಚಿಕೆ ಆರೋಪ – 1.54 ಕೋಟಿ ರೂ. ಜಪ್ತಿ

  • ಸೇನಾ ನೆಲೆಯಲ್ಲಿ ಸೈನಿಕರಿಗೆ ಗುಂಡಿಕ್ಕಿ ಹತ್ಯೆ – ಓರ್ವ ಯೋಧನ ಬಂಧನ

    ಸೇನಾ ನೆಲೆಯಲ್ಲಿ ಸೈನಿಕರಿಗೆ ಗುಂಡಿಕ್ಕಿ ಹತ್ಯೆ – ಓರ್ವ ಯೋಧನ ಬಂಧನ

    ನವದೆಹಲಿ: ಬಟಿಂಡಾದಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ವರು ಸೈನಿಕರ ಹತ್ಯೆಯ ಪ್ರಕರಣದಲ್ಲಿ ಓರ್ವ ಯೋಧನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು (Punjab Police) ತಿಳಿಸಿದ್ದಾರೆ

    ಬಟಿಂಡಾ ಸೇನಾ ನೆಲೆಯಲ್ಲಿ (Bathinda Military Station) ಯೋಧ ಮೋಹನ್ ದೇಸಾಯಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ವೈಯಕ್ತಿಕ ವಿಚಾರಕ್ಕಾಗಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಿದ್ದಾನೆ. ಇದನ್ನೂ ಓದಿ: ಲಿಂಗಾಯತ ನಾಯಕ ಶೆಟ್ಟರ್‌ಗೆ ಬಿಜೆಪಿಯಿಂದಾದ ಅವಮಾನ ಯಾವ ನಾಯಕನಿಗೂ ಆಗದಿರಲಿ: ಸಿದ್ದು

    ಗುಂಡಿನ ದಾಳಿಗೆ ಸಂಬಂಧಿಸಿದಂತೆ ಘಟನೆಯ ಸಾಕ್ಷಿ ಮೇಜರ್ ಅಶುತೋಷ್ ಶುಕ್ಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ಸಂಬಂಧ ನಾಲ್ವರು ಯೋಧರನ್ನು ಭಾನುವಾರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏ.12ರ ಮುಂಜಾನೆ ನಡೆದಿದ್ದ ಗುಂಡಿನ ದಾಳಿಯಲ್ಲಿ ನಿದ್ರೆಯಲ್ಲಿದ್ದ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು. ಸೇನೆಯ ಫಿರಂಗಿ ಘಟಕಕ್ಕೆ ಸೇರಿದ ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಹತ್ಯೆಯಾದ ಯೋಧರು ಎಂದು ತಿಳಿದು ಬಂದಿತ್ತು. ಯೋಧರ ಹತ್ಯೆಯು ರಾಜ್ಯದ ಭದ್ರತಾ ವ್ಯವಸ್ಥೆಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ (Separatist Amritpal Singh) ಮತ್ತು ಆತನ ಸಂಘಟನೆ ವಿರುದ್ಧದ ಕಾರ್ಯಾಚರಣೆಗೆ ಪ್ರತಿಕಾರದ ಊಹಾಪೋಹಗಳು ಕೇಳಿ ಬಂದಿತ್ತು.

    ಗುಂಡಿನ ದಾಳಿ ನಡೆದ ದಿನ, ಕುರ್ತಾ-ಪೈಜಾಮಾದಲ್ಲಿದ್ದ ಕೆಲವು ಅಪರಿಚಿತ ಮುಸುಕುಧಾರಿಗಳು ಕಾಣಿಸಿಕೊಂಡಿದ್ದರು. ಒಬ್ಬ ವ್ಯಕ್ತಿ ಐಎನ್‍ಎಸ್‍ಎಎಸ್ ಅಸಾಲ್ಟ್ ರೈಫಲ್ (INSAS assault rifle) ಹೊಂದಿದ್ದು, ಮತ್ತೊಬ್ಬ ಕೊಡಲಿಯನ್ನು ಹಿಡಿದುಕೊಂಡಿದ್ದ. ಅವರು ಸೇನಾ ಠಾಣೆಯ ಸಮೀಪವಿರುವ ಕಾಡಿನ ಕಡೆಗೆ ಓಡಿಹೋದರು ಎಂಬ ಮಾಹಿತಿ ಎಫ್‍ಐಆರ್(FIR) ನಲ್ಲಿ ದಾಖಲಿಸಲಾಗಿತ್ತು.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಅವರು ಸೇನಾ ಮುಖ್ಯಸ್ಥ ಜನರಲ್ (Army Chief General) ಮನೋಜ್ ಪಾಂಡೆ ಅವರಿಂದ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಪೊಲಿಟಿಕಲ್ ಸೂಸೈಡ್ ಎಂದ ಸುಧಾಕರ್

  • ಖಲಿಸ್ತಾನಿ ಪರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ಗೆ ಐಎಸ್‌ಐ ಬೆಂಬಲ

    ಖಲಿಸ್ತಾನಿ ಪರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ಗೆ ಐಎಸ್‌ಐ ಬೆಂಬಲ

    ಚಂಡೀಗಢ: ಖಲಿಸ್ತಾನಿ (Khalistan) ಪರ ಹೋರಾಟಗಾರ, ವಾರೀಸ್ ಪಂಜಾಬ್ ದೇ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥ ಅಮೃತ್‍ಪಾಲ್ ಸಿಂಗ್ (Amritpal Singh) ದೇಶಕ್ಕೆ ಕಂಟಕವಾಗುವ ರೀತಿ ಕಾಣುತ್ತಿದ್ದು ಆತನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ (ISI) ಬೆಂಬಲವಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

    ಅಮೃತಪಾಲ್‌ ಸಿಂಗ್‌ ಜಾರ್ಜಿಯಾಕ್ಕೆ ಭೇಟಿದ್ದ. ಅಲ್ಲಿ ಆತನಿಗೆ ಬೋಧನೆ ಮಾಡಲಾಗಿದೆ. ಖಾಲಿಸ್ತಾನ ಹೋರಾಟವನ್ನು ಜೀವಂತವಾಗಿಡಲು ಭಾರತದಲ್ಲಿ ಐಎಸ್‌ಐಗೆ ವ್ಯಕ್ತಿ ಬೇಕಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

    ನಾನು ಭಾರತೀಯನೇ ಅಲ್ಲ, ಪಾಸ್‍ಪೋರ್ಟ್ ಇದ್ದ ಮಾತ್ರಕ್ಕೆ ನಾನು ಭಾರತೀಯ ವ್ಯಕ್ತಿಯಾಗುವುದಿಲ್ಲ. ಅದು ಕೇವಲ ಟ್ರಾವೆಲ್ ಡಾಕ್ಯುಮೆಂಟ್ ಎಂದು ಹೇಳಿಕೊಂಡಿದ್ದಾನೆ. ಸಿದ್ದಾಂತಕ್ಕೆ ಸಾವಿಲ್ಲ. ನಮ್ಮ ಸಿದ್ದಾಂತವೂ ಅಷ್ಟೇ. ಖಲಿಸ್ತಾನ್ ತಡೆಯಲು ನೋಡಿದರೆ ಇಂದಿರಾ ಗಾಂಧಿಗೆ ಆದ ಗತಿಯೇ ಅಮಿತ್ ಶಾಗೂ ಎದುರಾಗಲಿದೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾನೆ.  ಇದನ್ನೂ ಓದಿ: ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅಂಬಾನಿ, ಕುಟುಂಬಕ್ಕೆ z+ ಭದ್ರತೆ ನೀಡಿ: ಸುಪ್ರೀಂ

    ಖಲಿಸ್ತಾನಿ ಪರ ಸಹಾನುಭೂತಿ ಇರುವವರು ಅಮೃತ್‍ಪಾಲ್ ಸಿಂಗ್‍ನನ್ನು ಎರಡನೇ ಬಿಂದ್ರನ್‍ವಾಲೆ ಎಂದು ಗುಣಗಾನ ಮಾಡುತ್ತಿದ್ದಾರೆ. ಅಮೃತ್‍ಪಾಲ್ ಸಿಂಗ್ ವೇಷಭೂಷಣವೂ ಬಿಂದ್ರನ್‍ವಾಲೆ ಸ್ಟೈಲ್‍ನಲ್ಲಿಯೇ ಇದೆ. ಅಮೃತ್‍ಪಾಲ್ ಸಿಂಗ್‌ಗೆ ಆಪ್‌ ಬೆಂಬಲ ನೀಡುತ್ತಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ.

    ಅಮಿತ್ ಶಾ (Amit Shah) ಅವರನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೂ, ಈವರೆಗೂ ಅಮೃತ್‍ಪಾಲ್ ಸಿಂಗ್ ಮತ್ತು ಅವರ ಅನುಯಾಯಿಗಳ ವಿರುದ್ಧ ಈವರೆಗೂ ಒಂದೇ ಒಂದು ಕೇಸ್ ದಾಖಲಾಗದಿರುವುದು ಈ ಅನುಮಾನಕ್ಕೆ ಪುಷ್ಠಿ ಕೊಡುತ್ತಿದೆ. ಪಂಜಾಬ್‍ನಲ್ಲಿ ಕಳೆದ ಚುನಾವಣೆಯಲ್ಲಿ ಆಪ್ ವಿಜಯದ ಹಿಂದೆ ಖಲಿಸ್ತಾನಿ ಶಕ್ತಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದೆ.