Tag: ಅಮೃತ

  • Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

    Nagara Panchami : ವಾಸುಕಿಯನ್ನು ಹಿಡಿದು ಎಳೆದಾಡಿದ ದೇವತೆಗಳು, ರಾಕ್ಷಸರು!

    ಪುರಾಣ ಕಥೆಗಳಲ್ಲಿ ದೇವತೆಗಳಿಗೆ ಅಮೃತ ಸಿಕ್ಕಿದ್ದನ್ನು ನೀವು ಓದಿರಬಹುದು. ಈ ಅಮೃತ ಸಿಗುವಲ್ಲಿ ವಾಸುಕಿಯ (Vasuki) ಪಾತ್ರವೂ ದೊಡ್ಡದು. ಶಿವನ ಅಷ್ಟಸರ್ಪಗಳಾದ ಅನಂತ (ಶೇಷ), ವಾಸುಕಿ, ತಕ್ಷಕ, ಕುಲಿಕ, ಕಾರ್ಕೋಟಕ, ಪದ್ಮ, ಮಹಾಪದ್ಮ, ಶಂಖಪಾಲ ಇವುಗಳಲ್ಲಿ ಒಬ್ಬ. ಕಶ್ಯಪನಿಂದ ಕದ್ರುವಿನಲ್ಲಿ ಜನಿಸಿದ ವಾಸುಕಿಯು ಶಿವನ ಕುತ್ತಿಗೆಯ ಸುತ್ತ ಸುತ್ತಿಕೊಂಡಿರುವುದರಿಂದ ಪ್ರಸಿದ್ಧನಾಗಿದ್ದಾನೆ. ಶಿವನು ಇವನನ್ನು ಆಶೀರ್ವದಿಸಿ ಆಭರಣವಾಗಿ ಧರಿಸಿದ್ದಾನೆ. ನಾಗರ ಪಂಚಮಿಯ (Nagara Panchami) ಹಬ್ಬದ ಹಿನ್ನೆಲೆಯಲ್ಲಿ ಸಮುದ್ರ ಮಂಥನದ (Samudra Manthan) ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ದುರ್ವಾಸ ಮುನಿ ಶಿಷ್ಯರೊಂದಿಗೆ ಶಿವನನ್ನು ಭೇಟಿಯಾಗಲು ಕೈಲಾಸದತ್ತ ಪ್ರಯಾಣ ಬೆಳೆಸುತ್ತಿದ್ದಾಗ ದಾರಿ ಮಧ್ಯೆ ದೇವೇಂದ್ರ ಸಿಗುತ್ತಾನೆ. ದೇವೇಂದ್ರ ದುರ್ವಾಸ ಮುನಿಗಳಿಗೆ ನಮಸ್ಕರಿಸಿ ಗೌರವದಿಂದ ಕಾಣುತ್ತಾನೆ. ದೇವೇಂದ್ರನ ಗುರು ಭಕ್ತಿಗೆ ಮೆಚ್ಚಿದ ದುರ್ವಾಸರು ಆತನಿಗೆ ವಿಶೇಷ ಹೂವಿನ ಹಾರವನ್ನು ಕೊಡುತ್ತಾರೆ. ಇಂದ್ರನು ಹೂವಿನ ಹಾರವನ್ನು ತನ್ನ ವಾಹನವಾದ ʼಐರಾವತʼದ ಸೊಂಡಿಲಿನ ಮೇಲಿಡುತ್ತಾನೆ.

    ಹೂವಿನ ಹಾರದ ಸುವಾಸನೆ ಐರಾವತಕ್ಕೆ ಕಿರಿಕಿರಿ ಉಂಟುಮಾಡುತ್ತದೆ. ಕೊನೆಗೆ ಸೊಂಡಿಲಿನಿಂದ ಹಾರವನ್ನು ನೆಲಕ್ಕೆ ಎಸೆಯುತ್ತದೆ. ಇದನ್ನು ನೋಡಿದ ದುರ್ವಾಸರು, ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು ಪ್ರಸಾದವಾಗಿ ನೀನು ನೋಡಬೇಕಿತ್ತು. ಆದರೆ ಅದನ್ನು ಆನೆಯ ಮೇಲೆ ಹಾಕಿದ್ದು ಸರಿಯಲ್ಲ. ಇದು ನೀನು ನನಗೆ ಮಾಡಿದ ಅವಮಾನ ಎಂದು ಹೇಳಿ ದೇವಲೋಕದಲ್ಲಿನ ಎಲ್ಲಾ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ವರಗಳು ನಾಶವಾಗಲಿ ಎಂದು ಶಾಪ ನೀಡುತ್ತಾರೆ. ದುರ್ವಾಸರ ಶಾಪದಿಂದ ಲಕ್ಷ್ಮಿ ಸ್ವರ್ಗ ಲೋಕವನ್ನು ತೊರೆಯುತ್ತಾಳೆ. ಇದನ್ನೂ ಓದಿ: Naga Panchami 2023: ಬಾಯಲ್ಲಿ ನೀರೂರಿಸುವ ಅಳ್ಳಿಟ್ಟು, ಅರಿಶಿನ ಎಲೆ ಕಡುಬು ಮಾಡಿ ನೋಡಿ

    ದುರ್ವಾಸರ ಶಾಪದ ವಿಚಾರವನ್ನು ತಿಳಿದ ರಾಕ್ಷಸರು ದೇವಲೋಕದ ಮೇಲೆ ದಾಳಿ ಮಾಡುತ್ತಾರೆ. ದೇವರನ್ನು ಸೋಲಿಸಿ ಆಡಳಿತ ಮಾಡಲು ಆರಂಭಿಸುತ್ತಾರೆ. ದೇವಲೋಕವನ್ನು ಕಳೆದ ದು:ಖದಲ್ಲಿ ದೇವೇಂದ್ರ ಮತ್ತು ದೇವತೆಗಳು ಬ್ರಹ್ಮನ ಬಳಿ ಹೋಗಿ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾರೆ. ಇದಕ್ಕೆ ಬ್ರಹ್ಮ ಲಕ್ಷ್ಮಿಯನ್ನು ಕಳೆದುಕೊಂಡಿದ್ದರಿಂದ ವಿಷ್ಣುವಿನ ಬಳಿ ಹೋಗಿ ನೀವು ಪ್ರಾರ್ಥಿಸಿ. ಆತ ನಿಮಗೆ ಸಹಾಯ ಮಾಡುತ್ತಾನೆ ಎಂದು ಹೇಳುತ್ತಾನೆ.

    ವೈಕುಂಠಕ್ಕೆ ದೇವತೆಗಳು ಬಂದಾಗ ಎಲ್ಲಾ ವಿಚಾರಗಳನ್ನು ತಿಳಿದಿದ್ದ ವಿಷ್ಣು ಸದ್ಯ ಈಗ ಏನು ಮಾಡಲು ಸಾಧ್ಯವಿಲ್ಲ. ಮುಂದೆ ರಾಕ್ಷಸರ ಅಧಿಕಾರದ ಸಮಯ ಅಂತ್ಯವಾಗಲಿದೆ. ಸಮಯ ಅಂತ್ಯವಾಗುವ ಮೊದಲು ಅವರ ಜೊತೆ ಸ್ನೇಹ ಬೆಳೆಸಬೇಕು. ರಾಕ್ಷಸರಿಂದ ಮುಕ್ತಿ ಪಡೆಯಬೇಕೆಂದರೆ ಸಮುದ್ರ ಮಂಥನವಾಗಬೇಕು. ಸಮುದ್ರ ಮಂಥನ ನಿಮ್ಮ ಒಬ್ಬರಿಂದ ಸಾಧ್ಯವಿಲ್ಲ. ರಾಕ್ಷಸರ ಸಹಾಯವೂ ಬೇಕು. ಸಮುದ್ರ ಮಂಥನವಾದಾಗ ಅಮೃತ ಬರುತ್ತದೆ. ಈ ಅಮೃತವನ್ನು ನೀವು ಸೇವಿಸಿದರೆ ಮುಂದೆ ರಾಕ್ಷಸರಿಗೆ ಏನು ಮಾಡಲು ಸಾಧ್ಯವಿಲ್ಲ. ಈ ಅಮೃತವನ್ನು ಹಂಚುವ ಕೆಲಸ ನಾನು ಮಾಡುತ್ತೇನೆ ಎಂದು ಅಭಯ ನೀಡುತ್ತಾನೆ. ಇದನ್ನೂ ಓದಿ: ‘ನಾಗರಪಂಚಮಿ’ ವಿಶೇಷತೆ ಏನು?

    ದೇವತೆಗಳು ಸಮುದ್ರ ಮಥನದ ಬಗ್ಗೆ ರಾಕ್ಷಸರಲ್ಲಿ ತಿಳಿಸಿದಾಗ ಅವರು ಒಪ್ಪಿಗೆ ನೀಡುತ್ತಾರೆ. ಸಮದ್ರವನ್ನು ಕಡೆಯಲು ಮಂದಾರ ಪರ್ವತವನ್ನು ಕಡೆಗೋಲಾಗಿ ಬಳಸಲಾಯಿತು. ಮಹಾದೇವನ ಸರ್ಪವಾದ ವಾಸುಕಿಯು ಹಗ್ಗವಾಗಿ ನಾನು ಬರುತ್ತೇನೆ ಎಂದು ಹೇಳಿದ. ರಾಕ್ಷಸರು ಮಂದಾರ ಪರ್ವತವನ್ನು ಸುತ್ತಿದ ವಾಸುಕಿಯ ಹೆಡೆಯನ್ನು ಹಿಡಿದರೆ ದೇವತೆಗಳು ಬಾಲವನ್ನು ಹಿಡಿದು ಕಡೆಯಲು ಆರಂಭಿಸಿದರು.

    ದೇವತೆಗಳು, ರಾಕ್ಷಸರು ಕಡೆಯುವ ರಭಸಕ್ಕೆ ಮಂದಾರ ಪರ್ವತ ಕುಸಿಯಲು ಆರಂಭವಾದಾಗ ವಿಷ್ಣು ಕೂರ್ಮಾ (ಆಮೆ) ಅವತಾರವನ್ನು ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತುಕೊಂಡನು.

     

    ಸಮುದ್ರ ಮಂಥನ ಮಾಡುವಾಗ ಕೇವಲ ಅಮೃತ ಮಾತ್ರವಲ್ಲ, ವಿಷವು ಸಮುದ್ರದಿಂದ ಹೊರಬಂತು. ಈ ವಿಷವು ವಿಶ್ವವನ್ನೇ ನಾಶ ಮಾಡುವ ಶಕ್ತಿಯನ್ನು ಹೊಂದಿತ್ತು. ಕ್ಷೀರ ಸಮುದ್ರದಿಂದ ಹಾಲಾಹಲದ ಪರಿಣಾಮ ಗೋಚರಿಸುತ್ತಿದ್ದಂತೆ ದೇವತೆಗಳು ಶಿವನ ಬಳಿ ಹೋಗಿ ಪೃಥ್ವಿಯನ್ನು ರಕ್ಷಿಸು ಎಂದು ಮೊರೆಯಿಟ್ಟರು. ಶಿವನು ವಿಷವನ್ನು ಸೇವಿಸಿ, ತನ್ನ ಗಂಟಲಲ್ಲೇ ಹಿಡಿದಿಟ್ಟುಕೊಳ್ಳುತ್ತಾನೆ. ಜೀವಕೋಟಿಯ ಮೇಲಿನ ಅನುಕಂಪದಿಂದ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ ಪರಿಣಾಮ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಶಿವನನ್ನು ನೀಲಕಂಠನೆಂದು ಕರೆಯುತ್ತಾರೆ. ಕ್ಷೀರಸಾಗರದಿಂದ ಅಮೃತವು ಹೊರಬಂದಾಗ ವಿಷ್ಣು ಮೋಹಿನಿ ಅವತಾರವನ್ನು ಧರಿಸಿ ದೇವರುಗಳು ಅಮೃತವನ್ನು ಸೇವಿಸುವಂತೆ ಮಾಡುತ್ತಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಯಲಲಿತಾ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ-ಮದ್ರಾಸ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸರ್ಕಾರ

    ಜಯಲಲಿತಾ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ-ಮದ್ರಾಸ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸರ್ಕಾರ

    ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ತಮ್ಮ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ ಎಂದು ರಾಜ್ಯ ಸರ್ಕಾರ ಮದ್ರಾಸ್ ಹೈ ಕೋರ್ಟ್ ಗೆ 1980ರ ಅವಧಿಯ ದೃಶ್ಯ ಸಾಕ್ಷ್ಯವನ್ನು ಸಲ್ಲಿಸಿದೆ.

    ಬೆಂಗಳೂರಿನ ಅಮೃತ ತಾವು ಜಯಲಲಿತಾರ ಪುತ್ರಿ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 1980ರ ಅವಧಿಯ ದೃಶ್ಯ ಸಾಕ್ಷ್ಯವನ್ನು ನೀಡಿದೆ ಎಂದು ತಮಿಳುನಾಡು ಪರ ವಕೀಲ ವಿಜಯ್ ನಾರಾಯಣ್ ಹೇಳಿದ್ದಾರೆ.

     

    ಅರ್ಜಿದಾರರಾದ ಅಮೃತಾ ತಾವು ಜಯಲಲಿತಾರ ಪುತ್ರಿ ಎಂದು ಆಸ್ತಿ ಕಬಳಿಸಲು ಮುಂದಾಗಿದ್ದಾರೆ. ತಾವು ಮಾಜಿ ಸಿಎಂ ಪುತ್ರಿ ಎಂದು ಹೇಳಿಕೊಳ್ಳುವ ಅಮೃತ ಇದೂವರೆಗೂ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ತಾಯಿ ಜೊತೆಗಿನ ಒಂದು ಫೋಟೋವನ್ನು ಸಹ ಬಹಿರಂಗಗೊಳಿಸಿಲ್ಲ. ಹಾಗಾಗಿ ಅಮೃತ ಹೇಳುತ್ತಿರೋದು ಸುಳ್ಳು ಎಂದು ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ವಾದ ಮಂಡಿಸಿದ್ದಾರೆ.

    1980 ಆಗಸ್ಟ್ ತಿಂಗಳಲ್ಲಿ ಅಮೃತ ಜನಿಸಿದ್ದಾರೆ. ಹೀಗಾಗಿ 1980ರಲ್ಲಿಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಜಯಲಲಿತಾ ಭಾಗಿಯಾಗಿದ್ದ ದೃಶ್ಯಾವಳಿಗಳ ವಿಡಿಯೋ ಸಲ್ಲಿಸಲಾಗಿದೆ. ಈ ಕಾರ್ಯಕ್ರಮ ಅಮೃತಾ ಹುಟ್ಟುವ ಒಂದು ತಿಂಗಳ ಮೊದಲೇ ನಡೆದಿತ್ತು. ವಿಡಿಯೋದಲ್ಲಿ ಜಯಲಲಿತಾ ಗರ್ಭಿಣಿಯಾದಂತೆ ಕಂಡಿಲ್ಲ. ಜಯಲಲಿತಾರ ಇತರೆ ಸಂಬಂಧಿಗಳ ಡಿಎನ್ ಸ್ಯಾಂಪಲ್ ಪಡೆದುಕೊಂಡು, ಅಮೃತಾರ ಡಿಎನ್‍ಎ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಬೇಕೆಂದು ವಿಜಯ್ ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಧೀಶರು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ್ದಾರೆ.

  • ಜಯಲಲಿತಾ ಕುಮಾರಿ ಆಗಿರಲಿಲ್ಲ-ಕೊನೆಗೂ ಪ್ರತ್ಯಕ್ಷವಾದ ಮಗಳು-ಅಮ್ಮನ ಗುಟ್ಟು ರಟ್ಟು!

    ಜಯಲಲಿತಾ ಕುಮಾರಿ ಆಗಿರಲಿಲ್ಲ-ಕೊನೆಗೂ ಪ್ರತ್ಯಕ್ಷವಾದ ಮಗಳು-ಅಮ್ಮನ ಗುಟ್ಟು ರಟ್ಟು!

    ಬೆಂಗಳೂರು: ತಮಿಳರ ಆರಾಧ್ಯಧೈವ ಅಮ್ಮ, ಮಾಜಿ ಸಿಎಂ ಜೆ.ಜಯಲಲಿತಾ ಅವರು ಕುಮಾರಿ ಎಂಬುವುದರ ಗುಟ್ಟು ರಟ್ಟಾಗಿದೆ. ಜಯಲಲಿತಾ ಕುಮಾರಿಯಾಗಿರಲಿಲ್ಲ ಅವರಿಗೂ ಒಬ್ಬ ಮಗಳಿದ್ದರೂ ಎಂಬ ಸತ್ಯ ಬಹಿರಂಗವಾಗಿದೆ.

    ಇದೂವರೆಗೂ ಸಹೋದರಿಯ ಪುತ್ರಿಯಾಗಿ ಬೆಳೆದಿದ್ದ ಅಮೃತಾ ಇದೀಗ ಜಯಲಲಿತಾರ ಮಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಅಮೃತ ಅಲಿಯಾಸ್ ಮಂಜುಳ ಅಲಿಯಾಸ್ ಅಮ್ಮು ನಾನೇ ಜಯಲಲಿತಾರ ಮಗಳು ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯಿಂದ ಹಿಡಿದು, ಸುಪ್ರೀಂಕೋರ್ಟ್, ಪ್ರಧಾನಿ, ಮಾನವಹಕ್ಕುಗಳ ಆಯೋಗ ಹೀಗೆ ನಾನಾ ಕಡೆ ಅಮೃತ ಮನವಿ ಪತ್ರ ಸಲ್ಲಿಸಿದ್ದಾರೆ.

    ಜನ್ಮ ರಹಸ್ಯ: ಸಂಧ್ಯಾ ಮತ್ತು ಜಯರಾಂ ದಂಪತಿಗೆ ಜಯಲಲಿಯಾ ಸೇರಿ ಒಟ್ಟು ಮೂವರು ಮಕ್ಕಳು. ಅವರೇ ಜಯಕುಮಾರ್, ಜಯಲಲಿತಾ ಅಲಿಯಾಸ್ ಕೋಮಲವಲ್ಲಿ ಹಾಗು ಶೈಲಜಾ. ಇದೇ ಶೈಲಜಾ ಅವರ ಮಗಳಾಗಿ ಅಮೃತಾ ಬೆಳೆದಿದ್ದರು.

    ನನ್ನಪ್ಪ ಶೋಭನ್ ಬಾಬು: ಅಮೃತ ಇದೀಗ ತನ್ನ ತಂದೆ ತೆಲಗು ನಟ ಶೋಭನ್ ಬಾಬು ಎಂಬ ಸತ್ಯವನ್ನು ಹೊರಹಾಕಿದ್ದಾರೆ. ಜಯಲಲಿತಾ ಅವರು ತೀರ ಸಂಕಷ್ಟದಲ್ಲಿದ್ದಾಗ ಶೋಭನ್ ಬಾಬು ಸಾಂತ್ವನ ಹೇಳಲು ಬಂದಿದ್ದರು. ಮುಂದೆ ಸಾಂತ್ವನ, ಗೆಳತನಕ್ಕೆ ತಿರುಗುತ್ತದೆ. ಗೆಳತನ ಪ್ರೀತಿ-ಪ್ರೇಮಕ್ಕೆ ಬದಲಾಗಿದೆ. ಆ ಇಬ್ಬರ ಪ್ರೀತಿಯ ಕುಡಿಯಾಗಿ ಹುಟ್ಟಿದವಳು ನಾನು ಎಂಬುವುದು ಅಮೃತರ ವಾದವಾಗಿದೆ.

    ಶೋಭನ್ ಬಾಬು ಅವರ ಮೊದಲ ಪತ್ನಿಯಿಂದಾಗಿ ಜಯಲಲಿತಾರ ಮದುವೆಗೆ ತೀವ್ರ ಅಡ್ಡಿಯುಂಟಾಗಿತ್ತು. ನಾನ ಕಾರಣಗಳಿಂದ ಕೊನೆ ಕ್ಷಣದಲ್ಲಿ ಇಬ್ಬರ ಮದುವೆ ಮುರಿದು ಬಿದ್ದಿತ್ತು. ಆ ಹೊತ್ತಿಗೆ ಜಯಲಲಿತಾರ ಗರ್ಭದಲ್ಲಿ ಅಮೃತ ಇದ್ದರು. ಕೊನೆಗೆ ಚನ್ನೈನ ಮೈಲಾಪುರದಲ್ಲಿ ಅಮೃತಾರ ಜನನವಾಗಿದೆ.

    ಆ ಇಬ್ಬರೇ ಸಾಕ್ಷಿ: ಜಯಲಲಿತಾರ ಸಂಬಂಧಿ ರಜಿನಿ ರವೀಂದ್ರನಾಥ್ ಮತ್ತು ಎಲ್.ಎಸ್.ಲಲಿತಾರನ್ನು ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಆ ಇಬ್ಬರು ನನ್ನ ಜನನದ ಕಾರ್ಯವನ್ನು ನೋಡಿಕೊಂಡಿದ್ದಾರೆ. ಅವತ್ತು ಎಲ್ಲರೂ ಸೇರಿ ದೇವರ ಮುಂದೆ ಪ್ರಮಾಣ ಮಾಡಿದ್ದ ಕಾರಣಕ್ಕೆ ಗುಟ್ಟು ರಟ್ಟಾಗಿಲ್ಲ. ನಾನು ಹತ್ತಾರು ಬಾರಿ ಜಯಾಲಲಿತಾರ ಪೋಯಸ್ ಗಾರ್ಡನ್ ಭೇಟಿ ಕೊಟ್ಟಿದ್ದೇನೆ.

    ಅಮ್ಮ ನನ್ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಂಡ್ರು. ಬೇಕಿದ್ದಕ್ಕಿಂತ ಹೆಚ್ಚಾಗಿ ನನ್ನ ಜೋಪಾನ ಮಾಡಿದ್ದಾರೆ. ನನ್ನ ಹೆಸರಿನಲ್ಲಿ ಜಯಲಿಲಿತಾ ಚಿನ್ನ ಮತ್ತು ಡೈಮಂಡ್ ಆಭರಣಗಳನ್ನು ಖರೀದಿ ಮಾಡಿದ್ದಾರೆ. ಹಲವು ಕಡೆ ಆಸ್ತಿಗಳನ್ನು ನನಗೆ ಖರೀದಿ ಮಾಡಿರೋ ಬಗ್ಗೆ ಹತ್ತಾರು ಬಾರಿ ಹೇಳಿದ್ದಾರೆ ಎಂದು ಅಮೃತಾ ಹೇಳ್ತಾರೆ.

    https://www.youtube.com/watch?v=n_5kQ-hV6eY

    https://www.youtube.com/watch?v=hg7er083YCg