Tag: ಅಮೂಲ್ಯ ಗೌಡ

  • ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಬಿಗ್‌ ಬಾಸ್‌ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ(Bigg Boss House) ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ (Aryavardhan Guruji), ನಂಬರ್ ಅಂದ್ರೆ ನಾನು ಎಂದು ಹೇಳುವ ಮೂಲಕ ಸಖತ್ ಹೈಲೆಟ್ ಆಗಿದ್ದರು. ಜ್ಯೋತಿಷ್ಯವನ್ನೇ ನಂಬಿ ಬದುಕುತ್ತಿರುವ ಗುರೂಜಿ ಇದೀಗ ದೊಡ್ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದಾರೆ.

    ದೊಡ್ಮನೆ ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಡು ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಕಾಲಿಗೆ ಒಂದು ಕಾಲ ಎಂಬ ಟಾಸ್ಕ್ ಅನ್ನು ಕೊಡಲಾಗಿದೆ. ದಿವ್ಯಾ ಉರುಡುಗ(Divya Uruduga) ಮತ್ತು ಸಾನ್ಯ (Sanya Iyer) ಒಂದು ಜೋಡಿ ಮತ್ತು ದೀಪಿಕಾ ಮತ್ತು ರೂಪೇಶ್ ಮತ್ತೊಂದು ಜೋಡಿಯಾಗಿ ಎರಡು ತಂಡಗಳ ಜಟಾಪಟಿ ನಡೆದಿದೆ. ಈ ವೇಳೆ ಗುರೂಜಿ ಮತ್ತು ನಟಿ ಅಮೂಲ್ಯ ಸಂಭಾಷಣೆ ಎಲ್ಲರ ನಗುವಿಗೆ ಕಾರಣವಾಗಿದೆ.

    ಟಾಸ್ಕ್ ವೀಕ್ಷಿಸುವ ಸಮಯದಲ್ಲಿ ಗುರೂಜಿ ಅಮೂಲ್ಯ ತುಟಿ ನೋಡಿ ಭವಿಷ್ಯ ನುಡಿದಿದ್ದಾರೆ. ನಿಮ್ಮ ತುಟಿ ಮೇಲೆ ಚೂಪಾಗಿದೆ. ಹೀಗಿದ್ದರೆ ಒಳ್ಳೆಯದು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಅವರ ಮಾತಿಗೆ ಅಮೂಲ್ಯ ನಕ್ಕಿದ್ದಾರೆ. ಇದೇ‌ ವೇಳೆ ರಾಕೇಶ್ ಅಡಿಗ ನನ್ನ ತುಟಿ ಭವಿಷ್ಯ ಹೇಳಿ ಎಂದು ಕೇಳಿದ್ದಾರೆ. ಆಗ ಗುರೂಜಿ, ನಿನ್ನ ಹಿಂದೆ ಯಾರು ಬೀಳಲ್ಲ, ನೀನೇ ಎಲ್ಲರ ಹಿಂದೆ ಹೋಗುತ್ತಿಯಾ ಟಾಂಗ್ ಕೊಟ್ಟಿದ್ದಾರೆ. ಗುರೂಜಿ ಮಾತಿಗೆ ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ. ಇದನ್ನೂ ಓದಿ:ಒಂದು ವಾರಕ್ಕೆ ‘ಕಾಂತಾರ’ದ ಕಲೆಕ್ಷನ್ 50 ಕೋಟಿ: ಸಿನಿ ಪಂಡಿತರ ಅಚ್ಚರಿಯ ಲೆಕ್ಕಾಚಾರ

    ಇದೇ ವೇಳೆ ಅರುಣ್ ಸಾಗರ್ ಕೂಡ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾರೆ. ನೀವು ಮೊದಲು‌ ಮೀಸೆ ಬೊಳಿಸಿಕೊಂಡು ಬನ್ನಿ ಎಂದು ಗುರೂಜಿ ಚಮಕ್ ಕೊಟ್ಟಿದ್ದಾರೆ. ಈ ಮೂಲಕ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಶ್ರೀನಿವಾಸ್‌ ಗೌಡಗೆ ಗುಡ್‌ ಬೈ, ಸಾನ್ಯ ನನ್ನ ಲವರ್‌ ಎಂದ ರಾಕೇಶ್‌ ಅಡಿಗ

    ಸೋನು ಶ್ರೀನಿವಾಸ್‌ ಗೌಡಗೆ ಗುಡ್‌ ಬೈ, ಸಾನ್ಯ ನನ್ನ ಲವರ್‌ ಎಂದ ರಾಕೇಶ್‌ ಅಡಿಗ

    ರಿಯಲ್ ಸ್ಟಾರ್ ಉಪೇಂದ್ರ (Upendra) ‘ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದ್ನೆಕಾಯಿ’ ಎಂದಿದ್ದಾರೆ. ಆದರೆ, ರಾಕೇಶ್ ವಿಷಯದಲ್ಲಿ ಪ್ರೀತಿ ಪ್ರೇಮವೇ ನಿತ್ಯದಾಟ ಎನ್ನುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಯಾರ ಎದುರಿಗೆ ಸಿಕ್ಕರೂ, ಬರೀ ಪ್ರೇಮ ಸಲ್ಲಾಪವೇ ನಡೆಯುತ್ತಿದೆ. ಬಿಗ್ ಬಾಸ್ ಓಟಿಟಿಯಲ್ಲಿ (Rakesh) ರಾಕೇಶ್, ಜಯಶ್ರೀ ಮತ್ತು ಸೋನು ನಡುವೆ ತ್ರಿಕೋನ ಪ್ರೇಮ ನಡೆದಿತ್ತು. ಅವಕಾಶ ಸಿಕ್ಕಾಗೆಲ್ಲ ಇಬ್ಬರಿಗೂ ಒಂದೊಂದು ಕಿಸ್ ಕೊಟ್ಟು ಮೆಂಟೇನ್ ಮಾಡ್ತಿದ್ರು. ಬಿಗ್ ಬಾಸ್ ಸೀಸನ್ 9ರಲ್ಲಿ ಅವರಿಬ್ಬರೂ ಇಲ್ಲ. ಹಾಗಾಗಿ ಹೊಸ ಪ್ರೇಮಿಯ ಹುಡುಕಾಟದಲ್ಲಿದ್ದಾರೆ ರಾಕೇಶ್.

    ಎರಡ್ಮೂರು ದಿನದಿಂದ ಹೊಸ ಹಕ್ಕಿಗಾಗಿ ಕಾಳು ಹಾಕುತ್ತಿದ್ದ ರಾಕೇಶ್, ಇದೀಗ ದಿಢೀರ್ ಅಂತ ಸಾನ್ಯ ಅಯ್ಯರ್ (Sanya Iyer) ನನ್ನ ಲವರ್ ಎಂದು ಘೋಷಿಸಿ ಬಿಟ್ಟಿದ್ದಾರೆ. ಇದೇ ವಿಚಾರವಾಗಿಯೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಕೂಡ ನಡೀತಿದೆ. ಸಾನ್ಯ ಅಯ್ಯರ್ ಕುಡಿದ ಲೋಟದಲ್ಲೇ ರಾಕೇಶ್ ಟಿ ಕುಡಿದಿದ್ದಾರೆ. ಅದನ್ನು ಕಂಡ ಗುರೂಜಿ, ‘ಇದೇನಿದು ಆ ಹುಡುಗಿ ಕುಡಿದಿಟ್ಟ ಕಪ್ ನಲ್ಲಿ ಟಿ ಕುಡೀತಿದ್ದೀಯಾ’ ಎಂದು ಕೇಳುತ್ತಾರೆ. ಒಂದು ಕ್ಷಣವೂ ಯೋಚಿಸದ ರಾಕೇಶ್, ‘ಸಾನ್ಯ ನನ್ನ ಲವರ್’ ಎಂದು ಹೇಳುವ ಮೂಲಕ ಮನೆಯ ಸದಸ್ಯರ ಎದೆಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಪ್ರೀತಿ ಪ್ರೇಮದ ವಿಚಾರವಾಗಿ ರಾಕೇಶ್, ಸಖತ್ ಗೇಮ್ ಆಡ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸೋನು ಗೌಡ (Sonu Gowda), ಜಯಶ್ರೀ (Jayashree) ಹಿಂದೆ ಬಿದ್ದಿದ್ದವರು, ಆನಂತರ ಅಮೂಲ್ಯ ಜೊತೆ ಸುತ್ತಿದರು. ಸಡನ್ನಾಗಿ ಈಗ ಸಾನ್ಯ ಅಯ್ಯರ್ ನನ್ನ ಲವರ್ ಎನ್ನುತ್ತಾರೆ. ಈ ನಡೆ ದೀಪಿಕಾ ದಾಸ್ಗೆ (Deepika Das) ಅಚ್ಚರಿ ಮೂಡಿಸಿದೆ. ಹಾಗಾಗಿ ರಾಕೇಶ್ ಅವರ ಪ್ರೇಮ ಪುರಾಣ ಕೇಳಲು ಮುಂದಾಗ್ತಾರೆ. ತಾನು ಅದೆಷ್ಟೋ ಜನರನ್ನು ಲವ್ ಮಾಡಿದ್ದು ನಿಜ. ಆದರೆ, ಬ್ರೇಕ್ ಅಪ್ ಆಗಿಲ್ಲ ಎಂದು ಹೊಸ ಬಾಂಬ್ ಸಿಡಿಸ್ತಾರೆ ರಾಕೇಶ್. ಲವ್ ಅಂದರೆ ಬ್ರೇಕ್ ಆಗದೇ ಇರುವ ಅನುಭವ ಎಂದು ಹೊಸ ಪಾಠ ಕೂಡ ಮಾಡ್ತಾರೆ ರಾಕೇಶ್.

    ಲವ್ ವಿಚಾರವಾಗಿ ರಾಕೇಶ್ ಮತ್ತು ಗುರೂಜಿ ನಡುವೆಯೂ ಮತ್ತೆ ಚರ್ಚೆ ನಡೆದಿದೆ. ಸಾನ್ಯ ಟಿ ಕುಡಿದ ಕಪ್ ನಲ್ಲಿ ರಾಕೇಶ್ ಕುಡಿದ ಅನ್ನೋ ವಿಚಾರವನ್ನೇ ಮುಂದಿಟ್ಟುಕೊಂಡು ಸಾರಸ್ಯಕರವಾದ ಮಾತುಗಳನ್ನೂ ಆಡಿದ್ದಾರೆ ರ‍್ಯರ‍್ಧನ್ ಮತ್ತು ರಾಕೇಶ್. ‘ನನ್ನ ಬಸ್ ಈಗ ಸಾನ್ಯ ಕಡೆ ತಿರುಗಿದೆ ಎಂದು ಗುರೂಜಿ ಬಳಿ ರಾಕೇಶ್ ಹೇಳ್ತಾರೆ. ಅದಕ್ಕೆ ಗುರೂಜಿ ‘ನೋಡಿಕೊಂಡು ಹಾರ್ನ್ ಹೊಡಿ’ ಎಂದು ಕಿಚ್ಚಾಯಿಸ್ತಾರೆ. ಬಸ್ ನಿಲ್ಲಿಸಿ ಹಾರ್ನ್ ಹೊಡೆಯೋದೇ ಹತ್ತೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ರಾಕೇಶ್ ತಮಾಷೆ ಮಾಡ್ತಾರೆ. ಒಂದ್ ಕಡೆ ಅಮೂಲ್ಯ, ಮತ್ತೊಂದು ಕಡೆ ಸಾನ್ಯ ಅಯ್ಯರ್ , ಯಾರು ಒಲವು ರಾಕೇಶ್ ಕಡೆಗೆ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಸೋನು ಮರೆತು ಅಮೂಲ್ಯ ಹಿಂದೆ ಬಿದ್ದ ರಾಕೇಶ್ ಅಡಿಗ

    ಬಿಗ್ ಬಾಸ್ ಮನೆಯಲ್ಲಿ ಸೋನು ಮರೆತು ಅಮೂಲ್ಯ ಹಿಂದೆ ಬಿದ್ದ ರಾಕೇಶ್ ಅಡಿಗ

    ಬಿಗ್ ಬಾಸ್ ಓಟಿಟಿ ಮುಗಿಯುತ್ತಿದ್ದಂತೆ ಟಿವಿ‌ ಬಿಗ್ ಬಾಸ್ ನ (Bigg Boss Season 9) ಹವಾ ಜೋರಾಗಿದೆ. ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕೂತೂಹಲಕ್ಕೆ ತೆರೆಗೆ ಬಿದ್ದಿದೆ. ಇದೀಗ ಅಸಲಿ ಆಟ ಕೂಡ ಶುರುವಾಗಿದ್ದು, ನಿಧಾನಕ್ಕೆ ಒಬ್ಬರ ಪರಿಚಯದ ಜತೆ ಸ್ನೇಹ ಕೂಡ ಚಿಗುರುತ್ತಿದೆ‌. ರಾಕೇಶ್ ಮತ್ತು ಅಮೂಲ್ಯ ‌(Amulya Gowda) ನಡುವೆ ಸ್ನೇಹದ ಬೆಸುಗೆ ಶುರುವಾಗಿದ್ದು, ಅಮೂಲ್ಯ ಪಾತ್ರೆ ತೊಳೆಯುವುದನ್ನು ನೋಡಿ, ಗಾಡಿ ತೊಳಿತಿದ್ದೀರಾ ಎಂದು ರಾಕೇಶ್ ಕಾಲೆಳೆದಿದ್ದಾರೆ.

    ದೊಡ್ಮನೆಯಲ್ಲಿ ಆಟ ಜೋರಾಗಿದ್ದ, ಭಿನ್ನ ರೀತಿಯ 18 ಸ್ಪರ್ಧಿಗಳನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನೂ ಅಮೂಲ್ಯ ಮತ್ತು ರಾಕೇಶ್ (Rakesh Adiga) ನಡುವಿನ ಮಾತುಕತೆ ನೋಡುಗರಿಗೆ ಮನರಂಜನೆ ಕೊಟ್ಟಿದೆ. ರಾಕೇಶ್ ಪಾತ್ರೆ ತೊಳೆಯುತ್ತಾ ಇದ್ದರು. ನೀವು ಕೆಲಸ ಮಾಡುತ್ತೀರಾ ಎಂದು ಅಮೂಲ್ಯ ಗೆ ಕೇಳಿದ್ದಾರೆ. ಆಗ ಹೌದು.. ಫ್ರಿ ಇದ್ದಾಗ ಕೆಲಸ ಮಾಡುತ್ತೀನಿ ಎಂದಿದ್ದಾರೆ. ಹಬ್ಬದ ಸಮಯದಲ್ಲಿ ಕೆಲಸ ಮಾಡುತ್ತೀರಾ ಎಂದು ಮತ್ತೆ ರಾಕಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಬಳಿಕ ಅಮೂಲ್ಯ ಪಾತ್ರೆ ತೊಳೆಯುವ ವೈಖರಿ ನೋಡಿ ನೀವು ಗಾಡಿ ತೊಳಿಯುತ್ತಿದ್ದೀರಾ ಎಂದು ರಾಕೇಶ್ ತಮಾಷೆ ಮಾಡಿದ್ದಾರೆ. ಅದಕ್ಕೆ ಅಮೂಲ್ಯ, ರಾಕಿಗೆ ಸ್ಮೈಲ್ ಮಾಡಿದ್ದಾರೆ. ಈ ಹಿಂದಿನ ಓಟಿಟಿಯಲ್ಲಿ ಸೋನು (Sonu Srinivas Gowda) ಜತೆಗಿನ ರಾಕೇಶ್ ಸಂಭಾಷಣೆ ನೋಡುಗರಿಗೆ ಮನರಂಜನೆ ನೀಡಿತ್ತು. ಅದೇ ರೀತಿ ಟಿವಿ ಸೀಸನ್ ನಲ್ಲಿ ರಾಕಿ ಮತ್ತು ಅಮೂಲ್ಯ ಜೋಡಿ ಮೋಡಿ ಮಾಡಬಹುದಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಥಮ್ ಮೆಂಟಲಿ ಟಾರ್ಚರ್ ಮಾಡುತ್ತಿದ್ದರು- ಬಿಗ್ ಬಾಸ್ ವಿನ್ನರ್ ಮೇಲೆ ಕಿಡಿಕಾರಿದ ಅಮೂಲ್ಯ

    ಪ್ರಥಮ್ ಮೆಂಟಲಿ ಟಾರ್ಚರ್ ಮಾಡುತ್ತಿದ್ದರು- ಬಿಗ್ ಬಾಸ್ ವಿನ್ನರ್ ಮೇಲೆ ಕಿಡಿಕಾರಿದ ಅಮೂಲ್ಯ

    ಕಿರುತೆರೆ ನಟಿಯಾಗಿ ಅಪಾರ ಅಭಿಮಾನಿಗಳ ಮನ ಗೆದ್ದಿರುವ ನಟಿ ಅಮೂಲ್ಯ ಗೌಡ(Amulya Gowda) ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಮೂಲಕ ಮೋಡಿ ಮಾಡಿದ್ದ ಬೆಡಗಿ ಅಮೂಲ್ಯ ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಒಳ್ಳೆಯ ಹುಡುಗ ಪ್ರಥಮ್ (Olle Huduga Pratham)ಮೇಲೆ ಕಿಡಿಕಾರಿದ್ದಾರೆ.

    ಟಿವಿ ಲೋಕದಲ್ಲಿ ಮೋಡಿ ಮಾಡಿರುವ ಚೆಲುವೆ ಅಮೂಲ್ಯ, ಬಿಗ್ ಬಾಸ್ ಮನೆಗೆ(Bigg Boss House) ಎಂಟನೇ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಬಿಗ್ ಬಾಸ್ ಈ ಹಿಂದಿನ ಸೀಸನ್‌ನ ನೀವು ನೋಡಿದ್ದೀರಾ ಯಾವ ಸ್ಪರ್ಧಿ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ ಎಂದು ಸುದೀಪ್( Kiccha Sudeep) ಕೇಳಿದ್ದಾರೆ. ನಿಜ ಹೇಳಬೇಕೆಂದ್ರೆ ನನಗೆ ಪ್ರಥಮ್ ಅವರ ಮೇಲೆ ಪ್ರತಿದಿನ ಕೋಪ ಬಂದಿದೆ. ಅವರು ನಡೆದುಕೊಳ್ಳುತ್ತಿದ್ದ ರೀತಿ ಇಷ್ಟವಾಗುತ್ತಿರಲಿಲ್ಲ, ಪ್ರಥಮ್ ಮೆಂಟಲಿ ಟಾರ್ಚರ್ ಮಾಡ್ತಿದ್ದರು ಎಂದು ಅಮೂಲ್ಯ ಮಾತನಾಡಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಅಮೂಲ್ಯ ಮಾತಿಗೆ ಸುದೀಪ್ ಕೂಡ ಪ್ರತಿಕ್ರಿಯಿಸಿ, ನಿಮಗೆ ಮನೆಯಲ್ಲಿ ಕೂತು ಅಷ್ಟು ಮೆಂಟಲಿ ಟಾರ್ಚರ್ ಆಗುತ್ತಿತ್ತು. ನಾನು ವೇದಿಕೆಯ ಮೇಲಿದ್ದೆ ಎಂದು ಸುದೀಪ್ ತಮಾಷೆ ಮಾಡಿದ್ದಾರೆ. ಹಾಗಾದ್ರೆ ಯಾವ ಸ್ಪರ್ಧಿನ ನೋಡಿ, ನಿಮಗೆ ತುಂಬಾ ಇಷ್ಟ ಆಗುತ್ತಿತ್ತು ಎಂದು ಕೇಳಿದಾಗ, ನನಗೆ ವೈಷ್ಣವಿ (Vaishnavi) ಮತ್ತು ದೀಪಿಕಾ ದಾಸ್ (Deepika Das) ಅವರು ಇಷ್ಟ ಎಂದು ಹೇಳಿದ್ದಾರೆ. ಅಂದ್ಹಾಗೆ, ದೊಡ್ಮನೆಗೆ ದೀಪಿಕಾ ದಾಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

    ಒಟ್ನಲ್ಲಿ ಮಾಜಿ ಸ್ಪರ್ಧಿ ಪ್ರಥಮ್ ಕ್ಲಾಸ್ ತೆಗೆದುಕೊಂಡು ನಟಿ ಅಮೂಲ್ಯ ದೊಡ್ಮನೆಗೆ ಕಾಲಿಟ್ಟಿದ್ದಾರೆ. 18 ಜನ ಸ್ಪರ್ಧಿಗಳ ಮಧ್ಯೆ ಅಮೂಲ್ಯ ಗೌಡ ಮೋಡಿ ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

    Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

    ಪ್ರತಿ ವರ್ಷವೂ ಬಿಗ್ ಬಾಸ್ (Bigg Boss Season 9) ಮನೆಯಲ್ಲಿರುವ ಸದಸ್ಯರಲ್ಲಿ ಅತೀ ಹೆಚ್ಚು ಕಿರುತೆರೆಯ ಲೋಕದವರೇ ಇರುತ್ತಾರೆ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾದ ನಾನಾ ಧಾರಾವಾಹಿಗಳ ಫೇಮಸ್ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ತಾರೆಯರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಯಾರೆಲ್ಲ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನುವುದು ಇವತ್ತಷ್ಟೇ ಗೊತ್ತಾಗಲಿದೆ. ಅದಕ್ಕೂ ಮುನ್ನ ಕೆಲವು ಹೆಸರುಗಳು ಹರಿದಾಡುತ್ತಿವೆ.

    ನೇಹಾ ಗೌಡ (ಲಕ್ಷ್ಮಿ ಬಾರಮ್ಮ)

    ಆರು ವರ್ಷಗಳ ಅಧಿಕ ಕಾಲ ಪ್ರಸಾರವಾದ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಅಂತಾನೇ ಫೇಮಸ್ ಆಗಿರುವ ನಟಿ ನೇಹಾ ಗೌಡ (Neha Gowda). ಈ ಬಾರಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಹೆಸರಾಂತ ನಟಿ ಸೋನು ಗೌಡ ಅವರ ಸಹೋದರಿ ಕೂಡ ಇವರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಮದುವೆ ಆಗಿರುವ ನೇಹಾ ಗೌಡ, ಇದೀಗ ಧಾರಾವಾಹಿ ಲೋಕದಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲವಾದರೂ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರಿಂದ, ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    ರಮೋಲಾ (ಕನ್ನಡತಿ)

    ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಕನ್ನಡತಿ (Kannadathi)ಧಾರಾವಾಹಿಯ ಸಾನಿಯಾ ಪಾತ್ರದ ಮೂಲಕ ಫೇಮಸ್ ಆದವರು ರಮೋಲಾ. ಈ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ. ಅದೊಂದು ನೆಗೆಟಿವ್ ಪಾತ್ರವಾದರೂ, ರಮೋಲಾ (Ramola) ಒಪ್ಪಿಕೊಂಡು ಪಾತ್ರ ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದರೂ, ಈವರೆಗೂ ಒಂದೂ ಸಿನಿಮಾ ಬಿಡುಗಡೆ ಆಗಿಲ್ಲ. ಮೊನ್ನೆಯಷ್ಟೇ ಕನ್ನಡತಿ ಧಾರಾವಾಹಿಯಿಂದ ಈ ನಟಿ ಹೊರ ನಡೆದಿದ್ದರು. ಇದು ಬಿಗ್ ಬಾಸ್ ಮನೆಗೆ ಹೋಗುವ ಕಾರಣಕ್ಕಾಗಿಯೇ ಆದ ಘಟನೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಸದ್ಯ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಮಾಡುತ್ತಿದ್ದಾರೆ ರಮೋಲಾ.

    ಕಾವ್ಯಶ್ರೀ ಗೌಡ (ಮಂಗಳಗೌರಿ ಮದುವೆ)

    ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳಗೌರಿಯಾಗಿ ನಟಿಸಿದವರು ಕಾವ್ಯಶ್ರೀ ಗೌಡ (Kavyashree Gowda). ಕಥಾನಾಯಕಿಯ ಪಾತ್ರವೇ ಅದಾಗಿದ್ದರಿಂದ ಅತೀ ಬೇಗ ಜನರಿಗೆ ಹತ್ತಿರವಾದರು. ನಿರೂಪಕಿಯಾಗಿಯೂ ಕೆಲಸ ಮಾಡಿರುವ ಕಾವ್ಯಶ್ರೀ, ಮೂಲತಃ ಚನ್ನಪಟ್ಟಣದವರು. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಾವ್ಯಶ್ರೀ, ಇದೀಗ ಬಿಗ್ ಬಾಸ್ ಮನೆಯನ್ನೂ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ ಅದು ಕನಸಾಗಿಯೇ ಉಳಿಯಿತು.

    ಅಮೂಲ್ಯ ಗೌಡ (ಕಮಲಿ)

    ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ಚಿರಪರಿಚಿತ ಹೆಸರು ಅಮೂಲ್ಯ ಗೌಡ (Amulya Gowda) ಅವರದ್ದು. ಕನ್ನಡದ ಪ್ರೇಕ್ಷಕರಿಗೆ ಕಮಲಿ (Kamali) ಆಗಿಯೇ ಪರಿಚಯವಾದವರು. ಅದೊಂದು ಸಾಂಪ್ರದಾಯಿಕ ಹುಡುಗಿಯ ಪಾತ್ರವಾಗಿದ್ದರಿಂದ ನೋಡುಗರಿಗೆ ಬೇಗನೇ ಹತ್ತಿರವಾದ ನಟಿ. ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಟಿಟಿ ಬಿಗ್ ಬಾಸ್(Bigg boss) ಆಟಕ್ಕೆ ಬ್ರೇಕ್ ಬಿದ್ದಿದೆ. ಟಿವಿ ಸೀಸನ್‌ನ ಬಿಗ್ ಬಾಸ್ ಶುರುವಾಗಲು ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬುದರ ಬಗ್ಗೆ ಈಗಾಗಲೇ ಅಭಿಮಾನಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ.

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬರಲು, ಕೇವಲ ಒಂದು ವಾರ ಬಾಕಿ ಉಳಿದಿದೆ. ಈ ಹಿಂದಿನ 8 ಸೀಸನ್‌ಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳು ಇರಲಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ರೂಪೇಶ್, ಸಾನ್ಯ, ಆರ್ಯವರ್ಧನ್, ರಾಕೇಶ್ ಟಿವಿ ಬಿಗ್ ಬಾಸ್‌ನಲ್ಲಿರದ್ದಾರೆ. ಈ ಸೀಸನ್‌ನಲ್ಲಿ ನಟ ಅನಿರುದ್ಧ ಹೆಸರು ಕೇಲಿ ಬಂದ ಬೆನ್ನಲ್ಲೇ `ಕಮಲಿ’ ಖ್ಯಾತಿಯ ನಟಿ ಅಮೂಲ್ಯ ಓಂಕಾರ್ ಗೌಡ (Amulya Omkar Gowda) ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್

    ಕಿರುತೆರೆ `ಕಮಲಿ’ (Kamali Serial) ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಅಮೂಲ್ಯ ಇದೀಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಮುದ್ದು ಮುಖ, ಖಡಕ್ ನಟನೆಯ ಕರ್ನಾಟಕದ ಮನಗೆದ್ದಿರುವ ನಟಿ ಟಿವಿ ಬಿಗ್ ಬಾಸ್‌ಗೆ ಬರೋದು ಪಕ್ಕಾ ಎನ್ನಲಾಗುತ್ತಿದೆ.

    ಅಷ್ಟಕ್ಕೂ ನಟಿ ಅಮೂಲ್ಯ ಬಿಗ್ ಬಾಸ್‌ಗೆ ಬರೋದು ನಿಜಾನಾ ಅಥವಾ ಸುಳ್ಳು ಸುದ್ದಿನ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಇನ್ನೂ ಟಿವಿ ಬಿಗ್ ಬಾಸ್ ಸೆಪ್ಟೆಂಬರ್ 24ರಿಂದ ಖಾಸಗಿ ವಾಹಿನಿಯಲ್ಲಿ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]