ಕಮಲಿ, ಬಿಗ್ ಬಾಸ್ ಶೋ (Bigg Boss Kannada 9) ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ (Amulya Gowda) ಅವರು ಇದೀಗ ಶ್ರೀಗೌರಿಯಾಗಿ (Shreegowri) ಮಿಂಚಲು ರೆಡಿಯಾಗಿದ್ದಾರೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ.

ಕಳೆದ ಬಿಗ್ ಬಾಸ್ ಸೀಸನ್ 9ರಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡ ಮೇಲೆ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರು. ಈಗ ‘ಶ್ರೀಗೌರಿ’ ಎಂಬ ಹೊಸ ಧಾರಾವಾಹಿಯನ್ನ ನಟಿ ಒಪ್ಪಿಕೊಂಡಿದ್ದಾರೆ. ಪ್ರೋಮೋದಲ್ಲಿ ನಟಿಯ ಲುಕ್ ರಿವೀಲ್ ಆಗಿದೆ. ಅಮೂಲ್ಯ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ವಿನಯ್ ಫೇಕ್, ಆದರೆ ವರ್ತೂರ್ ಸಂತೋಷ್ ಗೆಲ್ಲಬೇಕು- ಅವಿನಾಶ್ ಶೆಟ್ಟಿ

ಪ್ರೊಮೋದಲ್ಲಿ ಪ್ರತಿ ಇರುವೆಗೂ ಕೂಡ ನೋವು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುವ ಹುಡುಗಿ, ಯಾವ ರೀತಿ ಲೆಕ್ಕ ಹಾಕಿದರೂ ಇವಳೇ ಸರಿ, ಯಾವಾಗಲೂ ಹೀಗೆ ಪ್ರೀತಿಯಲ್ಲಿ ನನ್ನ ಕಟ್ಟಿ ಹಾಕಿ ಬಿಡುತ್ತಾಳೆ, ನನ್ನ ಮಗಳು, ನನ್ನ ಉಸಿರು, ನನ್ನ ಗೌರಿ, ಆದರೆ ರಾತ್ರಿ ಹೊತ್ತಿಗೆ ನನ್ನ ಉಸಿರೇ ನಿಂತು ಹೋಗುತ್ತೆ, ಮುದ್ದಿನ ಮಗಳಿಗೆ ಪ್ರತಿ ರಾತ್ರಿ ಗ್ರಹಣ ಎಂದು ಪ್ರೋಮೋದಲ್ಲಿದೆ.
View this post on Instagram
ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಕಥೆಯಾಗಿದ್ದು, ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಅಭಿನಯಿಸಿದ್ದಾರೆ. ಮಗಳು ಗೌರಿಯಾಗಿ ಅಮೂಲ್ಯ ಗೌಡ ಬಣ್ಣ ಹಚ್ಚಿದ್ದಾರೆ. ನಾಯಕಿ ಅಮೂಲ್ಯ ಎಂಬುದು ರಿವೀಲ್ ಆಗಿದೆ. ಆದರೆ ನಾಯಕ ನಟ ಯಾರು ಎಂಬುದು ವಾಹಿನಿ ಬಿಟ್ಟು ಕೊಟ್ಟಿಲ್ಲ.
ಒಟ್ನಲ್ಲಿ ಅಮೂಲ್ಯ ಎಂಟ್ರಿ ಮತ್ತು ಮುಗ್ಧತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಗೌರಿ ಸೀರಿಯಲ್ ಪ್ರೋಮೋ ಸದ್ದು ಮಾಡುತ್ತಿದೆ. ಆದರೆ ಸೀರಿಯಲ್ ಪ್ರಸಾರದ ದಿನಾಂಕ ಇನ್ನೂ ಅಂತಿಮವಾಗಿಲ್ಲ.


















ಅಮೂಲ್ಯ ಗೌಡ (Amulya Gowda) ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದವರು. ರಾಕೇಶ್ ಜೊತೆಗಿನ ಒಡನಾಟದ ವಿಷ್ಯವಾಗಿ ಹೈಲೈಟ್ ಆಗಿದ್ದರು. ರಾಕೇಶ್ ಅಡಿಗ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋದಾಗ ಅಮೂಲ್ಯಗೆ ತಮ್ಮ ಆಸೆಯೊಂದನ್ನ ಹೇಳಿಕೊಂಡಿದ್ದರು. ಬೆಳದಿಂಗಳ ಕಗ್ಗತ್ತಲು, ರಾತ್ರಿಯೆಲ್ಲಾ ಹೊರಗೆ ಮಾತನಾಡುವ ಖುಷಿಯೇ ಬೇರೇ, ಇಷ್ಟು ದಿನ ಹೇಗೋ ಆಯ್ತು. ಆದರೆ ಬಿಗ್ ಬಾಸ್‌ನ ಕೊನೆಯ ಕ್ಷಣಗಳನ್ನ ಫೀಲ್ ಮಾಡಬೇಕೆಂದು ರಾಕಿ ಆಸೆಪಟ್ಟಿದ್ದರು. ಈ ಬಗ್ಗೆ ಅಮ್ಮು ಬಳಿ ಮಾತನಾಡಿದ್ದರು. ಇದನ್ನೂ ಓದಿ: 