Tag: ಅಮೀರ್ ಖಾನ್

  • 2.0 ಸಿನಿಮಾದ ರಜಿನಿ ಪಾತ್ರದ ಆಫರ್ ಮೊದ್ಲು ನನಗೆ ಬಂದಿತ್ತು: ಅಮೀರ್ ಖಾನ್

    2.0 ಸಿನಿಮಾದ ರಜಿನಿ ಪಾತ್ರದ ಆಫರ್ ಮೊದ್ಲು ನನಗೆ ಬಂದಿತ್ತು: ಅಮೀರ್ ಖಾನ್

    ಮುಂಬೈ: 2.0 ಸಿನಿಮಾದಲ್ಲಿ ರಜಿನಿಕಾಂತ್ ಅಭಿನಯಿಸುತ್ತಿರುವ ಪಾತ್ರದ ಆಫರ್ ನನಗೆ ಬಂದಿತ್ತು. ಆದರೆ ನಾನು ಆ ಪಾತ್ರಕ್ಕೆ ತಕ್ಕ ನಟನಲ್ಲ ಎಂದು ತಿರಸ್ಕರಿಸಿದೆ ಎಂದು ನಟ ಅಮೀರ್ ಖಾನ್ ಖಾಸಗಿ ಚಾನಲ್‍ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    2.0 ಚಿತ್ರದ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಲು ಆಹ್ವಾನಿಸಿದ್ದರು. ನಾನು ಶಂಕರ್ ಮತ್ತು ರಜಿನಿಕಾಂತ್ ಅವರ ದೊಡ್ಡ ಅಭಿಮಾನಿ. 2.0 ಸಿನಿಮಾದಲ್ಲಿ ರಜಿನಿಕಾಂತ್ ಅವರ ಪಾತ್ರ ಮಾಡುವಂತೆ ಆಫರ್ ಮಾಡಿದ್ರು. ರಜನೀಕಾಂತ್ ಅವರು ಕೂಡ ಆ ಪಾತ್ರ ಮಾಡುವಂತೆ ಹೇಳಿದ್ದರು. ಸಿನಿಮಾದ ಸ್ಕ್ರಿಪ್ಟ್ ಅದ್ಭುತವಾಗಿತ್ತು, ಸ್ಕ್ರಿಫ್ಟ್ ನೋಡಿ ನನ್ನ ಕಣ್ಣು ಮುಚ್ಚಿ ನನ್ನನ್ನು ನಾನು ಆ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನಗೆ ಆ ಪಾತ್ರದಲ್ಲಿ ರಜಿನಿ ಅವರೇ ಕಾಣಿಸತೊಡಗಿದರು. ನಂತರ ಶಂಕರ್‍ಜೀಗೆ ಹೇಳಿದೆ ಈ ಪಾತ್ರವನ್ನು ರಜಿನಿಕಾಂತ್ ಅವರಿಂದ ಮಾತ್ರ ಮಾಡಲು ಸಾಧ್ಯ. ನನ್ನಿಂದ ಆ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಲು ಆಗಲ್ಲ ಎಂದು ತಿರಸ್ಕರಿಸಿದೆ ಅಂತಾ ಆಮಿರ್ ಹೇಳಿದ್ದಾರೆ.

    ರೋಬೋ ಚಿತ್ರದ ಮುಂದುವರಿದ ಭಾಗವಾದ 2.0 ಎಸ್. ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈಗಾಗಲೇ ಸಿನಿಮಾದ ಟೀಸರ್, ಫಸ್ಟ್ ಲುಕ್ ಮತ್ತು ಮೇಕಿಂಗ್ ವಿಡಿಯೋ ಗಳಿಂದ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಸಿನಿಮಾ ತೆಲಗು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. 2.0 ಸಿನಿಮಾ 2018ರ ಜನವರಿಯಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿದೆ.

    2010ರಲ್ಲಿ ರೋಬೋ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣವನ್ನು ಗಳಿಸಿತ್ತು.

  • ವಿಡಿಯೋ: ಅಮೀರ್, ವಿರಾಟ್ ಕೊಹ್ಲಿಯ ಸೂಪರ್ ಡ್ಯಾನ್ಸ್ ಸ್ಟೆಪ್ಸ್

    ವಿಡಿಯೋ: ಅಮೀರ್, ವಿರಾಟ್ ಕೊಹ್ಲಿಯ ಸೂಪರ್ ಡ್ಯಾನ್ಸ್ ಸ್ಟೆಪ್ಸ್

    ಮುಂಬೈ: ಖಾಸಗಿ ವಾಹಿನಿಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀರ್ ಖಾನ್ ಹಾಗೂ ವಿರಾಟ್ ಕೊಹ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಇಬ್ಬರು ಕೆಲವು ಸಂತೋಷದ ಕ್ಷಣಗಳನ್ನು ಕಳೆದರು ಹಾಗೂ ಪಂಜಾಬಿ ಡ್ಯಾನ್ಸ್ ಕೂಡ ಮಾಡಿದ್ದರು.

    ದೀಪಾವಳಿ ಹಬ್ಬದ ಪ್ರಯುಕ್ತ ಖಾಸಗಿ ವಾಹಿನಿಯಲ್ಲಿ ನಡೆದ ‘ಅಮೀರ್ ಔರ್ ವಿರಾಟ್ ಕೇ ಸಾಥ್’ (ಅಮೀರ್ ಹಾಗೂ ವಿರಾಟ್ ಜೊತೆ) ಕಾರ್ಯಕ್ರಮದ ಸಣ್ಣ ವಿಡಿಯೋ ಕ್ಲಿಪ್ ಅನ್ನು ಅಮೀರ್ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿರಾಟ್ ಜೊತೆಯಿರುವ ವಿಡಿಯೋವನ್ನು ಹಾಕಿ ಅದಕ್ಕೆ ‘ವಿರಾಟ್ ಜೊತೆ ಮಾತುಕತೆ ನಡೆದಿದ್ದು ತುಂಬಾ ಸಂತೋಷವಾಗಿದೆ. ವಿರಾಟ್ ಶಾಂತ ಸ್ವಭಾವ ಹಾಗೂ ಸ್ಟ್ರೇಟ್ ಫಾರ್ವಡ್ ಮನುಷ್ಯ. ಅವರು ಅತ್ಯುತ್ತಮ ಡ್ಯಾನ್ಸರ್ ಕೂಡ’ ಎಂದು ಅಮೀರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    https://twitter.com/aamir_khan/status/919161597343518722

    ಆ ಪ್ರೋಮೋದ ವಿಡಿಯೋದಲ್ಲಿ ವಿರಾಟ್, ಅಮೀರ್ ಗೆ ಪಂಜಾಬಿ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಇದು ದೀಪಾವಳಿ ಹಬ್ಬದ ವಿಶೇಷ ಸಂಚಿಕೆಯಾಗಿದ್ದು, ದೇಶದ ಎರಡೂ ಬಾಂಬ್ ಗಳಾದ ಅಮೀರ್ ಮತ್ತು ವಿರಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಜೊತೆ ನಿರೂಪಣೆ ಮಾಡಿದ್ದು ಸಂತೋಷವಾಗಿದೆ ಎಂದು ಶೋನ ನಿರೂಪಕ ಅಪ್ಪರ್ ಶಕ್ತಿ ಖುರಾನಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

    2016ರಲ್ಲಿ ಬಿಡುಗಡೆಯಾದ ದಂಗಲ್ ಚಿತ್ರದಲ್ಲಿ ಅಪ್ಪರ್ ಶಕ್ತಿ ಹಾಗೂ ಅಮೀರ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮ ಇಂದು ಜೀ ಟಿವಿಯಲ್ಲಿ ಪ್ರಸಾರವಾಗಲಿದೆ. ಅಮೀರ್ ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಯ ಮೂರನೇ ಮತ್ತು ಕೊನೆಯ ಪಂದ್ಯವನ್ನು ವೀಕ್ಷಿಸಲು ಹೋಗಿದ್ದರು. ಮಳೆಯ ಕಾರಣದಿಂದಾಗಿ ಪಂದ್ಯವನ್ನು ರದ್ದು ಮಾಡಲಾಗಿತ್ತು.

  • ಅನುಷ್ಕಾರನ್ನ ಈ ಅಡ್ಡ ಹೆಸರಿನಿಂದ ಕರೀತಾರಂತೆ ಕೊಹ್ಲಿ

    ಅನುಷ್ಕಾರನ್ನ ಈ ಅಡ್ಡ ಹೆಸರಿನಿಂದ ಕರೀತಾರಂತೆ ಕೊಹ್ಲಿ

    ನವದೆಹಲಿ: ದೀಪಾಳಿಯ ಪ್ರಯುಕ್ತ ಖಾಸಗಿ ವಾಹಿನಿಯೊಂದು ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಶ್ಕಾ ಶರ್ಮಾ ಅವರ ಅಡ್ಡ ಹೆಸರನ್ನ ರಿವೀಲ್ ಮಾಡಿದ್ದಾರೆ.

    ಕೊಹ್ಲಿ ಅನುಷ್ಕಾ ಅವರನ್ನ `ನುಷ್ಕಿ’ ಎಂದು ಕರೆಯುತ್ತಾರಂತೆ. ವಾಹಿನಿಯು ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಅಮೀರ್ ಖಾನ್ ಜೊತೆ ಭಾಗವಹಿಸಿದ್ದ ಕೊಹ್ಲಿ ಮಾತುಕತೆಯ ವೇಳೆ ನುಷ್ಕಿ ಬಹಳ ಪ್ರಮಾಣಿಕಳು ಎಂದು ಹೇಳಿದ್ದಾರೆ.

    ಅಲ್ಲದೆ ನಾನು ಪ್ರೀತಿಯಲ್ಲಿ ಒಮ್ಮೆ ಮಾತ್ರ ಬಿದ್ದಿದ್ದೇನೆ ಎಂದು ಅಮೀರ್ ಖಾನ್‍ರ ಮಾತಿಗೆ ಉತ್ತರಿಸಿದ್ದಾರೆ. ಕೊಹ್ಲಿ ಹಾಗೂ ಅನುಷ್ಕ 2013ರಿಂದಲೂ ರಿಲೇಷನ್‍ಶಿಪ್‍ನಲ್ಲಿದ್ದಾರೆ ಎಂದು ಸುದ್ದಿಯಾಗುತ್ತಲೇ ಬಂದಿದೆ. ಆದ್ರೆ ಈ ಜೋಡಿ ಮಾತ್ರ ಈ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ. ಕ್ರಿಕೆಟ್ ಮತ್ತು ಬಾಲಿವುಡ್ ನಂಟಿನ ಜನಪ್ರಿಯ ಜೋಡಿ ಎಂದೇ ಕರೆಸಿಕೊಂಡಿದೆ.

    ಈ ಶೋ ನಲ್ಲಿ ಭಾಗವಹಿಸಿದ್ದ ಪತ್ರಕರ್ತ ಸಮೀರ್ ಅಲ್ಲಾ ಎಂಬ ವ್ಯಕ್ತಿ ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಕಾರ್ಯಕ್ರಮದ ವೇಳೆ ಅಮೀರ್ ಅನುಷ್ಕಾರಲ್ಲಿ ಇಷ್ಟವಾದ ಗುಣ ಮತ್ತು ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, `ನುಷ್ಕಿ ಬಹಳ ಪ್ರಮಾಣಿಕಳು’ ಈ ಗುಣ ನನಗೆ ಇಷ್ಟ ಎಂದಿದ್ದಾರೆ. ಹಾಗೂ ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಅನುಷ್ಕಾ ಯಾವಾಗ್ಲೂ 5-7 ನಿಮಿಷ ತಡವಾಗಿ ಆಗಮಿಸುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಅನುಷ್ಕಾ ಕ್ಲೋತಿಂಗ್ ಬ್ರ್ಯಾಂಡ್‍ವೊಂದನ್ನ ಆರಂಭಿಸಿದ್ದು ‘ನುಶ್’ ಎಂದು ಹೆಸರಿಟ್ಟಿದ್ದಾರೆ.

     

     

     

    https://www.instagram.com/p/BZ-ocyPAByx/?hl=en&taken-by=anushkasharma

     

    https://www.instagram.com/p/BWc8u2pAosX/?hl=en&taken-by=virat.kohli

     

    https://www.instagram.com/p/BNpWnmUgNc4/

     

    https://www.instagram.com/p/BO_1QIEAYCF/

  • ಇಬ್ಬರು ಗಗನಯಾತ್ರಿಗಳ ಜೀವನ ಚರಿತ್ರೆಯಲ್ಲಿ ನಟಿಸಲಿದ್ದಾರೆ ಪ್ರಿಯಾಂಕಾ!

    ಇಬ್ಬರು ಗಗನಯಾತ್ರಿಗಳ ಜೀವನ ಚರಿತ್ರೆಯಲ್ಲಿ ನಟಿಸಲಿದ್ದಾರೆ ಪ್ರಿಯಾಂಕಾ!

    ಮುಂಬೈ: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರೋದು ನಿಮಗೆಲ್ಲ ಗೊತ್ತೆಯಿದೆ. ಮೇರಿ ಕೋಮ್ ಅವರ ಆತ್ಮಚರಿತ್ರೆಯಲ್ಲಿ ನಟಿಸಿದ ಮೇಲೆ ಪಿಗ್ಗಿ ಈಗ ಇಬ್ಬರು ಗಗನಯಾತ್ರಿಗಳ ಆತ್ಮಚರಿತ್ರೆಯಲ್ಲಿ ನಟಿಸಲಿದ್ದಾರೆ.

    ಗಗನಯಾತ್ರಿಯಾದ ಕಲ್ಪನಾ ಚಾವ್ಲಾ ಅವರ ಆತ್ಮಚರಿತ್ರೆಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ರಾಕೇಶ್ ಶರ್ಮಾ ಅವರ ಆತ್ಮಚರಿತ್ರೆಯಲ್ಲಿ ಅಮೀರ್ ಖಾನ್ ಜೊತೆ ನಟಿಸುತ್ತಿದ್ದಾರೆ. ಅಮೀರ್ ಜೊತೆ ನಟಿಸುತ್ತಿರುವ ಚಿತ್ರಕ್ಕೆ ಸೆಲ್ಯೂಟ್ ಎಂದು ಹೆಸರಿಡಲಾಗಿದೆ.

    ಈಗಾಗಲೇ ಕಲ್ಪನಾ ಚಾವ್ಲಾ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಇನ್ನೂ ಪ್ರಿಯಾಂಕಾ ಅಥ್ಲೆಟಿಕ್ಸ್ ಪಿ.ಟಿ.ಉಷಾ ಅವರ ಜೀವನಾಧರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

     

  • 15 ವರ್ಷಗಳ ನಂತರ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೀರ್ ಖಾನ್

    15 ವರ್ಷಗಳ ನಂತರ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೀರ್ ಖಾನ್

    ಮುಂಬೈ: ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ 15 ವರ್ಷಗಳ ಬಳಿಕ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಅಮೀರ್ 2002ರಲ್ಲಿ ಲಗಾನ್ ಚಿತ್ರಕ್ಕಾಗಿ ಆಸ್ಕರ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

    ಅಮೀರ್ ಖಾನ್ ಹಾಗೂ ರಣ್‍ವೀರ್ ಸಿಂಗ್ ಮುಂಬೈನಲ್ಲಿ ನಡೆದ ‘ಜಿ.ಕ್ಯೂ ಮೆನ್ ಆಫ್ ದಿ ಇಯರ್’ ಅವಾರ್ಡ್ ಫನ್‍ಕ್ಷನ್‍ನಲ್ಲಿ ಇಬ್ಬರು ನಟರು ಭೇಟಿಯಾಗಿದ್ದಾರೆ. ಇಬ್ಬರು ನಟರು ಜೊತೆಯಲ್ಲಿ ತೆಗೆಸಿಕೊಂಡ ಫೋಟೋವನ್ನು ರಣ್‍ವೀರ್ ತಮ್ಮ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ರಣ್ ವೀರ್ ಆ ಫೋಟೋವನ್ನು ಸಾಮಾಜಿಕಾ ಜಾಲತಾಣದಲ್ಲಿ ಹಾಕಿ ಅದ್ದಕ್ಕೆ `ಥಗ್ಸ್ ಲೈಫ್’ ಅನ್ನೋ ಕ್ಯಾಪ್ಷನ್ ಹಾಕಿದ್ದಾರೆ.

    ಅಮೀರ್ ಖಾನ್ ಈಗ ಥಗ್ಸ್ ಆಫ್ ಹಿಂದೋಸ್ತಾನ್ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ಫಾತಿಮಾ ಶೇಕ್ ನಟಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದಲ್ಲಿ ರಣ್ ವೀರ್ ಸಿಂಗ್ ನಟಿಸುತ್ತಿದ್ದು ದೀಪಿಕಾ ಪಡುಕೋಣೆ ಹಾಗೂ ಶಾಹಿದ್ ಕಪೂರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    https://www.instagram.com/p/BZW5tYmhEWy/?taken-by=ranveersingh

  • ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಅಮೀರ್ ಖಾನ್ ಲುಕ್ ಲೀಕ್? ವೈರಲ್ ಫೋಟೋ ನೋಡಿ

    ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಅಮೀರ್ ಖಾನ್ ಲುಕ್ ಲೀಕ್? ವೈರಲ್ ಫೋಟೋ ನೋಡಿ

    ಮುಂಬೈ: ಯಶ್ ರಾಜ್ ಫಿಲ್ಮ್ ನ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ಅಮೀರ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಮಿರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಮತ್ತು ಫಾತಿಮಾ ಸನಾ ಶೇಕ್ ಸೇರಿದಂತೆ ಘಟಾನುಘಟಿ ತಾರಾಬಳಗವೇ ಇದೆ.

    ಯಾವಾಗ್ಲೂ ಚಿತ್ರದ ಪಾತ್ರಗಳ ಲುಕ್ ಹೇಗಿರುತ್ತದೆ ಎಂಬುದನ್ನ ಗುಟ್ಟಾಗಿಡಲು ಚಿತ್ರತಂಡ ಸಾಕಷ್ಟು ಶ್ರಮ ವಹಿಸುತ್ತದೆ. ಆದ್ರೆ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿನ ಆಮಿರ್ ಖಾನ್ ಅವರ ಲುಕ್ ಎನ್ನಲಾದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಆ ಫೋಟೊದಲ್ಲಿ ಅಮೀರ್‍ನನ್ನು ಗುರುತು ಹಿಡಿಯೋದಕ್ಕೆ ಆಗುವುದಿಲ್ಲ. ಫೋಟೋದಲ್ಲಿ ಅಮೀರ್ ಗುಂಗುರು ಕೂದಲಿನಲ್ಲಿ ಕಾಣಿಸಿಕೊಂಡಿದ್ದು, ಒರಟಾದ ಉಡುಪು ಹಾಕಿದ್ದಾರೆ ಮತ್ತು ಮುಖ ಮತ್ತು ಬಟ್ಟೆ ಮೇಲೆ ಮಣ್ಣು ಮೆತ್ತಿಕೊಂಡಿದೆ. ಸಿನಿಮಾ ಸೆಟ್‍ನಿಂದ ಹೊರಗೆ ಬರುತ್ತಿರುವಾಗ ಈ ಫೋಟೋ ತೆಗೆಯಲಾಗಿದ್ದು, ಆ ಫೋಟೋದಲ್ಲಿ ಅಮೀರ್ ಬಾಡಿಗಾರ್ಡ್ ಕೂಡ ಕಾಣಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಈ ಫೋಟೋವನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಮೊದಲನೆ ಬಾರಿಗೆ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳಲಿದ್ದಾರೆ. ಈ ಚಿತ್ರವನ್ನು ಧೂಮ್-3 ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸುತ್ತಿದ್ದಾರೆ.

  • 30 ಕೋಟಿ ಕೊಟ್ರೆ ಪ್ರಭಾಸ್ ಕಾಲ್‍ಶೀಟ್: ಸಲ್ಮಾನ್, ಅಮೀರ್, ಅಕ್ಷಯ್ ಕುಮಾರ್‍ಗೆ ಎಷ್ಟು?

    30 ಕೋಟಿ ಕೊಟ್ರೆ ಪ್ರಭಾಸ್ ಕಾಲ್‍ಶೀಟ್: ಸಲ್ಮಾನ್, ಅಮೀರ್, ಅಕ್ಷಯ್ ಕುಮಾರ್‍ಗೆ ಎಷ್ಟು?

    ಮುಂಬೈ: ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ತಮ್ಮ ಸಂಭಾವನೆಯನ್ನು 30 ಕೋಟಿ ರೂ.ಗೆ ಏರಿಸಿದ್ದಾರೆ.

    2013ರಲ್ಲಿ ಬಿಡುಗಡೆಯಾದ ಮಿರ್ಚಿ ಸಿನಿಮಾಕ್ಕೆ ಪ್ರಭಾಸ್ 5 ಕೋಟಿ ರೂ. ತೆಗೆದುಕೊಂಡಿದ್ದರೆ, ಬಾಹುಬಲಿ ಚಿತ್ರಕ್ಕಾಗಿ 5 ವರ್ಷ ಮುಡುಪಿಟ್ಟ ಹಿನ್ನೆಲೆಯಲ್ಲಿ 25 ಕೋಟಿ ರೂ. ತೆಗೆದುಕೊಂಡಿದ್ದಾರೆ. ಈಗ ತನ್ನ ಮುಂದಿನ ಸಿನಿಮಾಗಳಿಗೆ 30 ಕೋಟಿ ರೂ. ಹಣವನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ಟಾಲಿವುಡ್ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ ಕಿಂಗ್ ಆಗಿದ್ದು ಒಂದು ಸಿನಿಮಾಗೆ 60 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಕೆಲ ವರ್ಷಗಳಿಂದ ಅವರ ಸಿನಿಮಾವನ್ನು ಅವರೇ ನಿರ್ಮಾಣ ಮಾಡುತ್ತಿರುವುರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.

    ಅಮೀರ್ ಖಾನ್ 55 ರಿಂದ 65 ಕೋಟಿ ರೂ. ಪಡೆದರೆ, ಶಾರೂಖ್ ಖಾನ್ 40-45 ಕೋಟಿ ರೂ. ಹಣವನ್ನು ಪಡೆಯುತ್ತಿದ್ದಾರೆ.

    ಅಕ್ಷಯ್ ಕುಮಾರ್ ಪ್ರತಿವರ್ಷ 100 ಕೋಟಿ ರೂ. ಗಳಿಸುತ್ತಿದ್ದಾರೆ. ಅವರು ಒಂದೇ ಸಿನಿಮಾದಿಂದ ಇಷ್ಟೊಂದು ಸಂಭಾವನೆ ಪಡೆಯುದಿಲ್ಲ. ಪ್ರತಿ ಸಿನಿಮಾಕ್ಕೆ 35-40 ಕೋಟಿ ರೂ. ಪಡೆಯುತ್ತಿದ್ದು, ಪ್ರತಿ ವರ್ಷ 4-5 ಸಿನಿಮಾಗಳನ್ನು ಅಭಿನಯಿಸುವ ಮೂಲಕ 100 ಕೋಟಿಯ ಕ್ಲಬ್‍ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಇದನ್ನೂ ಓದಿ: ಬಾಹುಬಲಿಗೆ ಪ್ರೀತಿಯ ಸುರಿಮಳೆಗೈದ ಪ್ರತಿಯೊಬ್ಬರಿಗೂ ದೊಡ್ಡ ಅಪ್ಪುಗೆ: ಪ್ರಭಾಸ್

    ಇದನ್ನೂ ಓದಿ: ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

  • ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

    ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

    ಹೈದರಾಬಾದ್: ಭಾರತೀಯ ಚಿತ್ರ ರಂಗದದಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಬಾಹುಬಲಿ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಒಟ್ಟು 710 ಕೋಟಿ ರೂ. ಗಳಿಕೆ ಮಾಡಿದೆ.

    ಭಾರತದಲ್ಲಿ 565 ಕೋಟಿ ರೂ. ಗಳಿಕೆ ಮಾಡಿದರೆ, ವಿದೇಶದಲ್ಲಿ ಒಟ್ಟು 145 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಬಹುಬಲಿ ಮೊದಲ ದಿನ 217 ಕೋಟಿ ರೂ ಗಳಿಸಿದ್ದರೆ, ಎರಡನೇ ದಿನ 382.5 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 540 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ನಾಲ್ಕನೇಯ ದಿನ 625 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಬಾಹುಬಲಿ ಹಿಂದಿ ನಾಲ್ಕು ದಿನದಲ್ಲಿ ಒಟ್ಟು 168. 25 ಕೋಟಿ ರೂ. ಗಳಿಸಿದರೆ, ಮಂಗಳವಾರ 30 ಕೋಟಿ ಕಲೆಕ್ಷನ್ ಆಗಿದ್ದು, ಒಟ್ಟು ಐದು ದಿನದಲ್ಲಿ 198.25 ಕೋಟಿ ರೂ. ಗಳಿಕೆಗೆ ಮಾಡಿದೆ ಎಂದು ರಮೇಶ್ ಬಲ ತಿಳಿಸಿದ್ದಾರೆ.

    ದಂಗಲ್ ದಾಖಲೆ ಬ್ರೇಕ್:
    ಭಾರತದಲ್ಲಿ 5 ದಿನದಲ್ಲಿ ಇದೂವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಯ ಅಮೀರ್ ಖಾನ್ ಅಭಿನಯದ ದಂಗಲ್ ಪಾತ್ರವಾಗಿತ್ತು. ದಂಗಲ್ 5 ದಿನದಲ್ಲಿ 387.39 ಕೋಟಿ ಗಳಿಸಿತ್ತು.

    ನಿರ್ಮಾಪಕ ಶೋಭಾ ಯರ್ಲಾಗಡ್ಡ ಅವರು ಬಾಹುಬಲಿ ಭಾಗ 1 ಮತ್ತು ಭಾಗ 2 ನಿರ್ಮಾಣಕ್ಕೆ ಒಟ್ಟು 450 ಕೋಟಿ ರೂ. ಖರ್ಚು ಮಾಡಿದ್ದರು.

    ಇದನ್ನೂ ಓದಿ: ರಾಜಮೌಳಿ ದೇವರು ಕೊಟ್ಟ ಮಗು: ಬಾಹುಬಲಿಗೆ ಗಣ್ಯರ ವಿಮರ್ಶೆ ಹೀಗಿದೆ ನೋಡಿ

    ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

  • ಬಾಕ್ಸ್ ಆಫೀಸ್ ನಲ್ಲಿ ಬಾಹುಬಲಿ ಸುಂಟರಗಾಳಿ: 4 ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಹಿಂದಿಯಲ್ಲಿ ಮತ್ತೊಂದು ದಾಖಲೆ

    ಬಾಕ್ಸ್ ಆಫೀಸ್ ನಲ್ಲಿ ಬಾಹುಬಲಿ ಸುಂಟರಗಾಳಿ: 4 ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಹಿಂದಿಯಲ್ಲಿ ಮತ್ತೊಂದು ದಾಖಲೆ

    ಹೈದರಾಬಾದ್: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ದಾಖಲೆಯನ್ನು ಉಡೀಸ್ ಮಾಡುತ್ತಿರುವ ಬಾಹುಬಲಿ ಬಿಡುಗಡೆಯಾದ ಮೊದಲ 4 ದಿನ ಬರೋಬ್ಬರಿ 625 ಕೋಟಿ ರೂ. ಹಣವನ್ನು ಕಲೆಕ್ಷನ್ ಮಾಡಿದೆ.

    ಭಾರತದಲ್ಲಿ 490 ಕೋಟಿ ರೂ. ಗಳಿಸಿದರೆ ವಿದೇಶದಲ್ಲಿ ಒಟ್ಟು 135 ಕೋಟಿ ರೂ. ಗಳಿಸಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವೀಟ್ ಮಾಡಿದ್ದಾರೆ.

    ನಾಲ್ಕನೇಯ ದಿನಕ್ಕೆ ಭಾರತದಲ್ಲಿ ಹಿಂದಿ 165 ಕೋಟಿ ರೂ., ತೆಲುಗು, ತಮಿಳು, ಮಲೆಯಾಳಂ ಒಟ್ಟು 220 ಕೋಟಿ ರೂ. ಗಳಿಸಿದೆ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಒಂದೇ ದಿನ ಹಿಂದಿ ಬಾಹುಬಲಿ 35ಕೋಟಿ ಗಳಿಸಿದ್ದು, ಸೋಮವಾರ ಒಂದೇ ದಿನ ಹಿಂದಿಯಲ್ಲಿ ಬಿಡುಗಡೆಯಾದ ಚಿತ್ರ ಇಷ್ಟೊಂದು ಕಲೆಕ್ಷನ್ ಮಾಡಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

    ನಿರ್ಮಾಪಕ ಶೋಭಾ ಯರ್ಲಾಗಡ್ಡ ಅವರು ಬಾಹುಬಲಿ ಭಾಗ 1 ಮತ್ತು ಭಾಗ 2 ನಿರ್ಮಾಣಕ್ಕೆ ಒಟ್ಟು 450 ಕೋಟಿ ರೂ. ಖರ್ಚಾಗಿದೆ ಎನ್ನುವುದನ್ನು ತಿಳಿಸಿದ್ದಾರೆ ಎಂದು ರಮೇಶ್ ಬಲ ಟ್ವೀಟ್ ಮಾಡಿದ್ದಾರೆ.

    ಬಹುಬಲಿ ಮೊದಲ ದಿನ 217 ಕೋಟಿ ರೂ ಗಳಿಸಿದ್ದರೆ, ಎರಡನೇ ದಿನ 382.5 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 540 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಭಾರತದಲ್ಲಿ ಇದೂವರೆಗೆ ಅತಿ ಹೆಚ್ಚು ಕಲೆಕ್ಷನ್ ಆದ ಫಿಲ್ಮ್ ಎಂಬ ಹೆಗ್ಗಳಿಕೆಗೆ ಅಮೀರ್ ಖಾನ್ ಅಭಿನಯದ ಪಿಕೆಗೆ ಇತ್ತು. 2014ರ ಡಿಸೆಂಬರ್ ನಲ್ಲಿ ಬಿಡುಗಡೆಯಾದ ಈ ಫಿಲ್ಮ್ ಒಟ್ಟು 792 ಕೋಟಿ ರೂ. ಗಳಿಸಿತ್ತು. ಈಗ ಬಾಹುಬಲಿಯ ಕಲೆಕ್ಷನ್ ವೇಗ ನೋಡಿದರೆ ಒಂದೇ ವಾರದಲ್ಲಿ ಈ ದಾಖಲೆಯನ್ನು ಮುರಿಯಲಿದೆ ಎಂದು ಸಿನಿ ಮಾರುಕಟ್ಟೆ ಪಂಡಿತರು ವಿಶ್ಲೇಷಿಸಿದ್ದಾರೆ.

    ಇದನ್ನೂ ಓದಿ: ಬೆಂಗ್ಳೂರಿನಲ್ಲಿ 1200 ರೂ, ಆಂಧ್ರದಲ್ಲಿ ಬಾಹುಬಲಿ-2 ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ