Tag: ಅಮೀರ್ ಖಾನ್

  • ಡೀಪ್‌ ಫೇಕ್‌ ವಿಡಿಯೋ – ಕಾಂಗ್ರೆಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಅಮೀರ್‌ ಖಾನ್‌

    ಡೀಪ್‌ ಫೇಕ್‌ ವಿಡಿಯೋ – ಕಾಂಗ್ರೆಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಅಮೀರ್‌ ಖಾನ್‌

    ಮುಂಬೈ: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ನಟ ಅಮೀರ್‌ ಖಾನ್‌ (Aamir Khan) ಅವರ ಡೀಪ್‌ ಫೇಕ್‌ (Deep Fake) ವಿಡಿಯೋವನ್ನು ಬಳಸಿದ್ದಕ್ಕೆ ಕಾಂಗ್ರೆಸ್‌ (Congress) ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ

    ಅಮೀರ್ ಖಾನ್‌ ಅವರ ಅಧಿಕೃತ ವಕ್ತಾರರು ನಿರ್ದಿಷ್ಟ ವಿಡಿಯೋವನ್ನು ನಕಲಿ (Fake) ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮುಂಬೈ ಪೊಲೀಸ್‌ ಠಾಣೆಯಲ್ಲಿ (Mumbai Police Station) ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ.  ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

     

    ವಿಡಿಯೋದಲ್ಲಿ ಏನಿದೆ?
    ಅಮೀರ್‌ ಖಾನ್‌ ಈ ಹಿಂದೆ ದೂರದರ್ಶನದಲ್ಲಿ ಸತ್ಯಮೇವ ಜಯತೆ ಕಾರ್ಯಕ್ರಮ ನಡೆಸುತ್ತಿದ್ದರು. ಈ ದೃಶ್ಯವನ್ನು ಇಟ್ಟುಕೊಂಡು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಡೀಪ್‌ ಫೇಕ್‌ ವಿಡಿಯೋವನ್ನು ಹರಿ ಬಿಡಲಾಗಿತ್ತು.

    ಅಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಅನುಮೋದಿಸಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಈ ಹಿಂದೆ ಅವರು ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲು ತಮ್ಮ ಪ್ರಯತ್ನ ನಡೆಸಿದ್ದಾರೆ. ಅಮೀರ್ ಖಾನ್ ಅವರು ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿರುವ ವಿಡಿಯೋ ನೋಡಿ ನಾವು ಗಾಬರಿಯಾಗಿದ್ದೇವೆ. ಇದು ನಕಲಿ ವಿಡಿಯೋವಾಗಿದ್ದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ಅಮೀರ್‌ ಖಾನ್‌ ಅವರ ವಕ್ತಾರರು ತಿಳಿಸಿದ್ದಾರೆ.

     

  • ಬಾಲಿವುಡ್‌ಗೆ ಅಮೀರ್‌ ಪುತ್ರ ಜುನೈದ್‌ ಖಾನ್‌ ಎಂಟ್ರಿ

    ಬಾಲಿವುಡ್‌ಗೆ ಅಮೀರ್‌ ಪುತ್ರ ಜುನೈದ್‌ ಖಾನ್‌ ಎಂಟ್ರಿ

    ಬಾಲಿವುಡ್ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ (Aamir Khan) `ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದಾರೆ. ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಅಮೀರ್ ಕುಟುಂಬದಿಂದ ಇದೀಗ ಸಿಹಿಸುದ್ದಿ ಸಿಕ್ಕಿದೆ.

    ಚಿತ್ರರಂಗಕ್ಕೆ ಸಾಕಷ್ಟು ಸ್ಟಾರ್ ಕಿಡ್‌ಗಳ ಎಂಟ್ರಿಯಾಗಿದೆ. ಇತ್ತೀಚಿಗೆ ಶಾರುಖ್ ಖಾನ್ ಮಗಳು ಸುಹಾನಾ ಬಿಗ್ ಬಿ ಮೊಮ್ಮಗ ಎಂಟ್ರಿ ಕೊಟ್ಟಿದ್ದರು. ಈ ಬೆನ್ನಲ್ಲೇ ಸಿನಿಮಾಗೆ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಎಂಟ್ರಿಯಾಗುತ್ತಿದೆ. ಮಾಜಿ ದಂಪತಿ ಅಮೀರ್-ರೀನಾ ದತ್ ಪುತ್ರ ಬಿಟೌನ್‌ಗೆ (Films)  ಪಾದಾರ್ಪಣೆ ಮಾಡ್ತಿದ್ದಾರೆ. ಇದನ್ನೂ ಓದಿ: ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ವೀರಪ್ಪನ್ ಮಗಳು ಪಾದಾರ್ಪಣೆ

    ತಮಿಳಿನ ಸೂಪರ್ ಹಿಟ್ ಸಿನಿಮಾ `ಲವ್ ಟುಡೇ’ (Love Today) ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಜುನೈದ್ ಖಾನ್ ಎಂಟ್ರಿ ಕೊಡ್ತಿದ್ದಾರೆ. ಬಾಲಿವುಡ್‌ಗೆ ನಟನಾಗಿ ಎಂಟ್ರಿ ಕೊಡಲು ಸಕಲ ತಯಾರಿ ನಡೆಯುತ್ತಿದೆ. ಶ್ರೀದೇವಿ (Sridevi) ಪುತ್ರಿ ಖುಷಿ ಕಪೂರ್‌ (Kushi Kapoor) ಜೊತೆ ಜುನೈದ್‌ (Junaid Khan) ರೊಮ್ಯಾನ್ಸ್‌ ಮಾಡಲಿದ್ದಾರೆ.

     ಇನ್ನೀತರ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಜುನೈದ್ ಖಾನ್ ಎಂಟ್ರಿ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಲು ಕಾದುನೋಡಬೇಕಿದೆ.

  • ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್: ನಂ1 ಸ್ಥಾನ

    ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್: ನಂ1 ಸ್ಥಾನ

    ಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ (Lal Singh Chadha) ಸಿನಿಮಾಗೆ ಚಿತ್ರಮಂದಿರಗಳಲ್ಲಿ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಅನೇಕ ತೊಂದರೆಗಳಿಂದಾಗಿ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಒಟಿಟಿಯಲ್ಲಿ ಮಾತ್ರ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಒಟಿಟಿಯಲ್ಲಿ (OTT) ನೋಡಿದವರು, ಥಿಯೇಟರ್ ನಲ್ಲಿ ಈ ಸಿನಿಮಾ ಯಾಕೆ ಓಡಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ಲಾಲ್ ಸಿಂಗ್ ಚಡ್ಡಾ ಇದೀಗ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದ್ದು, ಜಗತ್ತಿನ ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ಅದಕ್ಕೆ 2ನೇ ಸ್ಥಾನ ಸಿಕ್ಕಿದೆ. ಅಲ್ಲದೇ, ಭಾರತೀಯ ಪಟ್ಟಿಯಲ್ಲಿ ಇದು ಮೊದಲ ಸ್ಥಾನವನ್ನು (No.1) ತನ್ನದಾಗಿಸಿಕೊಂಡಿದೆ. 6.63 ದಶಲಕ್ಷ ಸ್ಟ್ರೀಮ್ ಆಗುವ ಮೂಲಕ ಹೊಸ ದಾಖಲೆಯನ್ನು ಈ ಸಿನಿಮಾ ಬರೆದಿದೆ. ಹಾಗಾಗಿ ಸಹಜವಾಗಿಯೇ ಅಮೀರ್ ಖಾನ್ (Aamir Khan) ಸಂತಸ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

    ಥಿಯೇಟರ್ (Theatre) ನಲ್ಲಿ ಬಿಡುಗಡೆಯಾದಾಗ ಪ್ರೇಕ್ಷಕ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಕೇವಲ 88 ಕೋಟಿ ಗಳಿಸುವಲ್ಲಿ ಚಿತ್ರ ಸಫಲವಾಯಿತು. ಅಮೀರ್ ಸಿನಿಮಾವನ್ನು ಬಹಿಷ್ಕರಿಸಿ ಎನ್ನುವ ಟ್ರೆಂಡ್ ನಿಂದಾಗಿ ಚಿತ್ರ ಅಂದುಕೊಂಡಷ್ಟು ದುಡ್ಡು ಮಾಡಲಿಲ್ಲ. ಆದರೆ, ಒಟಿಟಿಯಲ್ಲಿ ಮಾತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಜನರು ಈ ಸಿನಿಮಾವನ್ನು ದಾಖಲೆಯ ರೀತಿಯಲ್ಲೇ ನೋಡಿದ್ದಾರೆ.

    ಇದೊಂದು ರೀಮೇಕ್ ಸಿನಿಮಾವಾಗಿದ್ದು, ಹಾಲಿವುಡ್ ನ ಫಾರೆಸ್ಟ್ ಗಂಪ್ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಿದ್ದರು ಅಮೀರ್ ಖಾನ್. ಫಾರೆಸ್ಟ್ ಗಂಪ್ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ. ಈ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಈ ಚಿತ್ರವನ್ನು ಅಮೀರ್ ನಿರ್ಮಾಣ ಮಾಡಿದ್ದರು. ಆಗಸ್ಟ್ 11 ರಂದು ಈ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್

    `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್

    ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ಇದೇ ಆಗಸ್ಟ್ 11ಕ್ಕೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.ಆಮೀರ್ ಮತ್ತು ಕರೀನಾ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಅಮೀರ್ ಆಡಿದ್ದರು ಎನ್ನಲಾದ ಮಾತಿನಿಂದಾಗಿ ಈ ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರು ಮಾಡಿದ್ದರು. ಈಗ ರಿಲೀಸ್ ಬೆನ್ನಲ್ಲೇ ಅಮೀರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ಈ ದೇಶದಲ್ಲಿ ಅಸಹಿಷ್ಣತೆ ಇದೆ. ಹಾಗಾಗಿ ನನ್ನ ಪತ್ನಿ ದೇಶ ತೊರೆಯುವಂತಹ ಮಾತುಗಳನ್ನು ಆಡಿದ್ದಳು ಎಂದು ಅಮೀರ್ ಈ ಹಿಂದೆ ಹೇಳಿದ್ದರು. ಇದೇ ಮಾತನ್ನು ಇಟ್ಟುಕೊಂಡು ಇವತ್ತು ಬಾಯ್ ಕಾಟ್ ಮಾತುಗಳನ್ನು ಆಡಲಾಗುತ್ತಿದೆ. ದೇಶ ದ್ರೋಹದಂತಹ ಹೇಳಿಕೆಯನ್ನು ಕೊಟ್ಟಿರುವ ಅಮೀರ್ ಖಾನ್ ಸಿನಿಮಾವನ್ನು ನೋಡಬೇಡಿ ಎಂದು ಹಲವರು ಪೋಸ್ಟ್ ಮಾಡಿದ್ದರು. ಈಗ ಸಿನಿಮಾ ರಿಲೀಸ್‌ಗೂ ಮುನ್ನವೇ ಅಮೀರ್ ಖಾನ್ ಕ್ಷಮೆ ಕೇಳಿದ್ದಾರೆ.

    ಕೆಲ ವರ್ಷಗಳ ಹಿಂದೆ ಅಮೀರ್ ಹೇಳಿಕೆ ಈಗ ಕಂಗಟ್ಟಾಗಿದೆ. ರಿಲೀಸ್ ಮುನ್ನ ಮಾತನಾಡಿರುವ ಅಮೀರ್, ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ವಿಷಾದಿಸುತ್ತೇನೆ, ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಯಾರಾದರೂ ಚಲನಚಿತ್ರವನ್ನು ವೀಕ್ಷಿಸಲು ಬಯಸದಿದ್ದರೆ, ನಾನು ಅವರ ಭಾವನೆಯನ್ನು ಗೌರವಿಸುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಪತಿ ಮಾಡಿದ ಎಡವಟ್ಟು: ನಯನತಾರಾ ಆಸ್ಪತ್ರೆಗೆ ದಾಖಲು

    ಚಿತ್ರದ ಬಗ್ಗೆ ಬಾಯ್ ಕಾಟ್ ಟ್ರೆಂಡ್ ಆಗುತ್ತಿದ್ದರು ಕೂಡ ಈಗಾಗಲೇ ಚಿತ್ರದ ಬುಕ್ಕಿಂಗ್ ವಿಚಾರದಲ್ಲಿ ಕೋಟಿ ಕೋಟಿ ಕಲೆಕ್ಷನ್ ಆಗಿದೆ. ಬಾಯ್ ಕಾಟ್ ವಿವಾದದ ಮಧ್ಯೆ ಎಷ್ಟರ ಮಟ್ಟಿಗೆ ಈ ಸಿನಿಮಾ ಸೌಂಡ್ ಮಾಡುತ್ತೆ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಲಗಾನ್’ ಚಿತ್ರಕ್ಕೆ 21 ವರ್ಷ: ಮಾಜಿ ಪತ್ನಿಗೆ ಸಿನಿಮಾ ಅರ್ಪಣೆ ಎಂದ ಅಮೀರ್ ಖಾನ್

    `ಲಗಾನ್’ ಚಿತ್ರಕ್ಕೆ 21 ವರ್ಷ: ಮಾಜಿ ಪತ್ನಿಗೆ ಸಿನಿಮಾ ಅರ್ಪಣೆ ಎಂದ ಅಮೀರ್ ಖಾನ್

    ಬಾಲಿವುಡ್ ನಟ ಅಮೀರ್ ಖಾನ್ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದ ಲಗಾನ್ ಸಿನಿಮಾ 21 ವರ್ಷಗಳ ಸಂಭ್ರಮದಲ್ಲಿದ್ದು, ಈ ಸಿನಿಮಾವನ್ನು ತನ್ನ ಮಾಜಿ ಪತ್ನಿ ರೀನಾ ದತ್ತಗೆ ಅರ್ಪಣೆ ಎಂದಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ `ಲಗಾನ್’ ಚಿತ್ರಕ್ಕೆ 21 ವರ್ಷಗಳ ಸಂಭ್ರಮದಲ್ಲಿದೆ. ಇದೇ ಜೂನ್ 15ಕ್ಕೆ 2001ರಂದು ತೆರೆಗೆ ಅಬ್ಬರಿಸಿತ್ತು. ಇದೀಗ ಈ ಚಿತ್ರಕ್ಕೆ 21 ವರ್ಷಗಳು ತುಂಬಿದ್ದು, ಅಮೀರ್ ಮನೆಯಲ್ಲಿ ಚಿತ್ರದ ಸಂಭ್ರಮ ಆಚರಿಸಲು ಚಿತ್ರತಂಡ ಭರ್ಜರಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವಿಕ್ರಮ್ ಸಿನಿಮಾದಿಂದ ಕಮಲ್ ಹಾಸನ್ ಗಳಿಸಿದ್ದು 300 ಕೋಟಿ – ಬಂದ ಹಣದಿಂದ ಸಾಲ ತೀರಿಸ್ತೀನಿ ಅಂದ ನಟ

    ಅಶುತೋಷ್ ಗೋವಾರಿಕಲ್ ನಿರ್ದೇಶನದ ಲಗಾನ್ ಚಿತ್ರದಲ್ಲಿ ಅಮೀರ್ ಜತೆ ಗ್ರೇಸಿ ಸಿಂಗ್ ಮತ್ತು ರಾಚೆಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡು ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿತ್ತು. ಇದೀಗ ಈ ಚಿತ್ರದ ಸಕ್ಸಸ್ ಕುರಿತು ಅಮೀರ್ ಖಾನ್ ಮಾತನಾಡಿದ್ದಾರೆ. ಈ ಚಿತ್ರ ತನ್ನ ಮಾಜಿ ಪತ್ನಿ ರೀನಾ ದತ್ತ್‌ಗೆ ಅರ್ಪಣೆ ಎಂದಿದ್ದಾರೆ.

    ಅಂದು ರೀನಾಗೆ ಸಿನಿಮಾ ಬಗ್ಗೆ ಎನು ಗೊತ್ತಿರಲಿಲ್ಲ. ಚಿತ್ರರಂಗದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೂ ಈ ಚಿತ್ರದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಹಾಗಾಗಿ ಈ ಚಿತ್ರದ ಯಶಸ್ಸಿಗೆ ಮಾಜಿ ಪತ್ನಿ ರೀನಾ ದತ್ತ್ ಕಾರಣ. ಈ ಚಿತ್ರ ಅವರಿಗೆ ಅರ್ಪಣೆ ಎಂದು ಚಿತ್ರದ ಕುರಿತು ಅಮೀರ್ ಮೆಲುಕು ಹಾಕಿದ್ದಾರೆ. ನೆಚ್ಚಿನ ನಟನಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಮುಂದಿನ ಚಿತ್ರ `ಲಾಲ್ ಸಿಂಗ್ ಚಡ್ಡಾ’ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv

  • ಅಮೀರ್ ಖಾನ್ ಕಾಲೆಳೆದು ‘ಹಿಂದೂ ಆಗಿರುವುದಕ್ಕೆ ಹೆಮ್ಮೆ’ ಎಂದ ಕಂಗನಾ ರಣಾವತ್

    ಅಮೀರ್ ಖಾನ್ ಕಾಲೆಳೆದು ‘ಹಿಂದೂ ಆಗಿರುವುದಕ್ಕೆ ಹೆಮ್ಮೆ’ ಎಂದ ಕಂಗನಾ ರಣಾವತ್

    ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾಧಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೇ, ವಿದೇಶಗಳಲ್ಲೂ  ಈ ಕುರಿತು ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಭಾರತದ ಹಲವು ಕಡೆ ಪ್ರತಿಭಟನೆಯು ಹಿಂಸೆಯ ರೂಪ ಪಡೆದುಕೊಂಡಿದೆ. ಈ ನಡುವೆ ಇದೇ ವಿಷಯವನ್ನಿಟ್ಟುಕೊಂಡು ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್, ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು ಈ ವಿಷಯದಲ್ಲಿ ಅಮೀರ್ ಖಾನ್ ಅವರನ್ನು ಎಳೆತಂದಿದ್ದಾರೆ.

    ನೂಪುರ್ ಶರ್ಮಾ ಹೇಳಿಕೆಯ ಬೆನ್ನಿಗೆ ನಿಂತಿರುವ ಕಂಗನಾ ರಣಾವತ್, ಪಿಕೆ ಸಿನಿಮಾದ ದೃಶ್ಯವನ್ನು ಉಲ್ಲೇಖಿಸಿ ‘ನಾನು ಹಿಂದೂ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಶಿವನ ವೇಷಧಾರೆ ಕಲಾವಿದ ವಾಶ್ ರೂಮ್ ನಲ್ಲಿ ಬಚ್ಚಿಟ್ಟುಕೊಳ್ಳುವುದು, ಶಿವನನ್ನು ಅಮೀರ್ ಖಾನ್ ಅಟ್ಟಾಡಿಸಿಕೊಂಡು ಹೋಗುವ ದೃಶ್ಯದ ಜೊತೆಗೆ ನೂಪುರ್ ಶರ್ಮಾ ಅವರ ಪ್ರತಿಕೃತಿ ನೇತಾಡುವ ದೃಶ್ಯವನ್ನೂ ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಸೋನಮ್ ಕಪೂರ್ ಬೇಬಿ ಬಂಪ್

    ನೂಪುರ್ ಶರ್ಮಾ ವಿಚಾರದಲ್ಲಿ ಮೊದಲಿನಿಂದಲೂ ಅವರ ಬೆಂಬಲಕ್ಕೆ ನಿಂತಿರುವ ಕಂಗನಾ, ಈಗಲೂ ಕೂಡ ನೂಪುರ್  ಪರವಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಶರ್ಮಾ ಅವರ ಭಯಾನಕ ಚಿತ್ರವು ಅಪಘಾನಿಸ್ತಾನದಿಂದ ಬಂದಿಲ್ಲ, ನನ್ನದೇ ಶಾಂತಿಪ್ರಿಯ ದೇಶದಿಂದ ಬಂದಿದ್ದು’ ಎಂದು  ಕೂಡ ಅವರು ಬರೆದುಕೊಂಡಿದ್ದಾರೆ.

  • ಕ್ರಿಕೆಟಿಗ ರಶೀದ್ ಖಾನ್ ಅವರನ್ನು ಅಮೀರ್ ಖಾನ್ ಮನೆಗೆ ಕರೆದದ್ದು ಯಾಕೆ? ಅಮೀರ್ ಆಸೆ ಈಡೇರತ್ತಾ?

    ಕ್ರಿಕೆಟಿಗ ರಶೀದ್ ಖಾನ್ ಅವರನ್ನು ಅಮೀರ್ ಖಾನ್ ಮನೆಗೆ ಕರೆದದ್ದು ಯಾಕೆ? ಅಮೀರ್ ಆಸೆ ಈಡೇರತ್ತಾ?

    ಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸಿದ್ದ, ಈ ಬಾರಿ ಐಪಿಎಲ್ ಕಪ್ ಗುಜರಾತ್ ಪಾಲಾಗುವಂತೆ ಮಾಡಿದ  ಸ್ಟಾರ್ ಸ್ಪಿನರ್ ರಶೀದ್ ಖಾನ್ ಅವರನ್ನು ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಮನೆಗೆ ಕರೆಯಿಸಿಕೊಳ್ಳುವುದಕ್ಕೂ ಒಂದು ಇಂಟ್ರಸ್ಟಿಂಗ್ ಸಂಗತಿ ಇದ್ದು, ಒಂದು ವೇಳೆ ಅಮೀರ್ ಮನೆಗೆ ರಶೀದ್ ಖಾನ್ ಹೋದರೆ, ಅಮೀರ್ ಆಸೆ ಈಡೇರಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಐಪಿಎಲ್ ಫಿನಾಲೆ ವೇಳೆ ಅಮೀರಾ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ರಶೀದ್ ಖಾನ್ ಕೂಡ ಈ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾಗಿ ಅಮೀರ್ ಖಾನ್ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಅಲ್ಲದೇ, ಅವರೊಂದು ವಿಚಿತ್ರ ಬೇಡಿಕೆಯನ್ನು ಇಟ್ಟಿದ್ದಾರೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ರಶ್ಮೀದ್ ಖಾನ್ ಕೇವಲ ಕ್ರಿಕೆಟ್ ಆಡುವುದರಲ್ಲಿ ಮಾತ್ರ ಫೇಮಸ್ ಆಗಿಲ್ಲ. ರುಚಿ ರುಚಿಯಾಗಿ ಅಡುಗೆಯನ್ನೂ ಅವರು ಮಾಡುತ್ತಾರಂತೆ. ಅದರಲ್ಲೂ ಹಲವು ಬಗೆಯ ಅಡುಗೆ ಮಾಡುವುದರಲ್ಲಿ ರಶೀದ್ ಫೇಮಸ್. ಹಾಗಾಗಿ ತಮ್ಮ ಮನೆಗೆ ಬಂದು ಅಡುಗೆ ಮಾಡುವಂತೆ ಅಮೀರ್ ಕೇಳಿದ್ದಾರಂತೆ. ಯಾವ ರೀತಿಯ ಅಡುಗೆ ಮಾಡಿ ಬಡಿಸುತ್ತೀರಿ ಎಂದೂ ಕೇಳಿದ್ದಾರಂತೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ಅಮೀರ್ ಖಾನ್ ಆಸೆಗೆ ಇನ್ನೂ ರಶ್ಮೀದ್ ಉತ್ತರಿಸಿಲ್ಲ. ಆದರೆ, ಒಂದಿಲ್ಲೊಂದು ದಿನ ಅಮೀರ್ ಖಾನ್ ಅವರ ಮನೆಗೆ ರಶೀದ್ ಹೋಗುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಯಾಕೆಂದರೆ, ಅಮೀರ್ ಅವರ ನೆಚ್ಚಿನ ಫ್ಯಾನ್ ರಶೀದ್ ಖಾನ್ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

  • ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ದಕ್ಷಿಣದ ಕಲಾವಿದನ ಕಡೆಗಣಿಸಿತಾ?

    ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ದಕ್ಷಿಣದ ಕಲಾವಿದನ ಕಡೆಗಣಿಸಿತಾ?

    ಬಾಲಿವುಡ್ ಅಂಗಳದಲ್ಲಿ ಸದ್ಯ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾದ್ದೇ ಮಾತು. ಕಳೆದ ಎರಡು ವರ್ಷಗಳಿಂದ ಸೋತು ಸುಣ್ಣವಾಗಿದ್ದ ಬಿಟೌನ್ ಅಂಗಳಲ್ಲಿ ಇದು ಕಾಮಧೇನು ಎನ್ನುವಂತೆ ಬಿಂಬಿಸಲಾಗುತ್ತಿದೆ. ದಾಖಲೆಯ ಮಟ್ಟದಲ್ಲಿ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಇಂಥದ್ದೊಂದು ನಿರೀಕ್ಷೆಗೆ ಕಾರಣ ಮೊನ್ನೆ ರಿಲೀಸ್ ಆದ ಸಿನಿಮಾದ ಟ್ರೈಲರ್. ಐಪಿಎಲ್ ಫಿನಾಲೆ ವೇಳೆ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ವಿಶ್ವದಾದ್ಯಂತ ಟ್ರೈಲರ್ ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೂಲ ಸಿನಿಮಾಗಿಂತಲೂ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಟ್ರೈಲರ್ ವಿಮರ್ಶೆ ಮಾಡಲಾಗಿದೆ. ಆದರೆ, ಈ ಟ್ರೈಲರ್ ಬಿಟ್ಟು ಎಡವಟ್ಟು ಮಾಡಿಕೊಂಡಿದೆ ತಂಡ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ಈ ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ನಾಗ ಚೈತನ್ಯ ವಿಶೇಷ ಪಾತ್ರವನ್ನು ಮಾಡಿದ್ದು, ಟ್ರೈಲರ್ ನಲ್ಲಿ ನಾಗ ಚೈತನ್ಯ ಅವರು ಸರಿಯಾದ ರೀತಿಯಲ್ಲಿ ತೋರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ದಕ್ಷಿಣದ ಹೆಸರಾಂತ ಕಲಾವಿದನನ್ನು ಆಯ್ಕೆ ಮಾಡಿಕೊಂಡು, ಅವರನ್ನು ಟ್ರೈಲರ್ ನಲ್ಲಿ ಕಡೆಗಣಿಸಲಾಗಿದೆ ಎಂದು ನಾಗ ಚೈತನ್ಯ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ಒಂದು ಕಡೆ ಅಮೀರ್ ಖಾನ್ ಅವರನ್ನು ಬೈಕಾಟ್ ಮಾಡಿ ಎಂದು ಕ್ಯಾಂಪೇನ್ ಶುರುವಾಗಿದ್ದರೆ, ಮತ್ತೊಂದು ಕಡೆ ನಾಗ ಚೈತನ್ಯ ಅವರನ್ನು ಸರಿಯಾಗಿ ತೋರಿಸಿಲ್ಲ ಎನ್ನುವ ಕೂಗು ಎದ್ದಿದೆ. ಅದೇನೇ ಇದ್ದರೂ, ಸಿನಿಮಾದ ಟ್ರೈಲರ್ ಮಾತ್ರ ಸೂಪರ್ ಆಗಿ ಮೂಡಿ ಬಂದಿದ್ದು, ದಾಖಲೆ ರೀತಿಯಲ್ಲಿ ಇದು ಜನರಿಗೆ ತಲುಪಲಿದೆ ಎನ್ನುವುದು ಬಿಟೌನ್ ಲೆಕ್ಕಾಚಾರವಾಗಿದೆ.

  • ಬೈಕಾಟ್ ಲಾಲ್ ಸಿಂಗ್ ಛಡ್ಡಾ: ಅಮೀರ್ ಖಾನ್ ಚಿತ್ರಕ್ಕೆ ಸಂಕಷ್ಟ

    ಬೈಕಾಟ್ ಲಾಲ್ ಸಿಂಗ್ ಛಡ್ಡಾ: ಅಮೀರ್ ಖಾನ್ ಚಿತ್ರಕ್ಕೆ ಸಂಕಷ್ಟ

    ನಿನ್ನೆಯಷ್ಟೇ ಐಪಿಎಲ್ ಫಿನಾಲೆ ವೇದಿಕೆಯಲ್ಲಿ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ವಿಶ್ವದಾದ್ಯಂತ ಈ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಕೆಲವರು ಅಮೀರ್ ಖಾನ್ ಮತ್ತು ಕರಿನಾ ಕಪೂರ್ ಕಾರಣದಿಂದಾಗಿ ‘ಬೈಕಾಟ್ ಲಾಲ್ ಸಿಂಗ್ ಛಡ್ಡಾ’ ಘೋಷಣೆ ಶುರು ಮಾಡಿಕೊಂಡಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾ ಮೂಲಕ ಟ್ರೆಂಡ್ ಮಾಡುತ್ತಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಈ ಸಿನಿಮಾಗೆ ಬೈಕಾಟ್ ಎಂದು ಹೇಳಲು ಕಾರಣ ಈ ಹಿಂದೆ ಅಮೀರ್ ಖಾನ್ ಮತ್ತು ಕರಿನಾ ಅವರು ಕೊಟ್ಟ  ಭಾರತ ಅಸಹಿಷ್ಣುತೆ ಮಾತುಗಳು ಎನ್ನಲಾಗುತ್ತಿದೆ. ಅಲ್ಲದೇ, ದೇವರಿಗೆ ಹಾಲು ಹಾಕುವ ಬದಲು ಹಸಿದ ಮಕ್ಕಳಿಗೆ ಕೊಡಿ ಎಂದು ಅಮೀರ್ ಹೇಳಿಕೆಯನ್ನಿಟ್ಟುಕೊಂಡು ಈ ರೀತಿ ಮಾಡಲಾಗುತ್ತಿದೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಹಲವು ವಿಶೇಷಗಳೊಂದಿಗೆ ಈ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕಾಗಿ ಅಮೀರ್ ಸವೆಸಿದ ದಿನಗಳು ಬರೋಬ್ಬರಿ 200 ದಿನಗಳಂತೆ. ಇದೇ ಮೊದಲ ಬಾರಿಗೆ ಅವರು ಸುಧೀರ್ಘ ಕಾಲ್ ಶೀಟ್ ಕೊಟ್ಟು, ಸಿನಿಮಾ ಮಾಡಿದ್ದಾರೆ. ಅದರಲ್ಲೂ ಭಾರತದ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸಿನಿಮಾವನ್ನು ಶೂಟ್ ಮಾಡಿದ್ದಾರೆ. ಒಂದ‍ಲ್ಲ, ನಾಲ್ಕೈದು ಶೇಡ್ ನಲ್ಲಿ ಅಮೀರ್ ಈ ಸಿನಿಮಾದಲ್ಲಿ ಕಾಣಸಿಗುತ್ತಾರೆ. ಅಷ್ಟನ್ನೂ ಟ್ರೈಲರ್ ನಲ್ಲಿ ತೋರಿಸಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹುಡುಗನೊಬ್ಬ ಅದನ್ನು ದಾಟಿಕೊಂಡು ಸಾಧನೆ ಮಾಡುವ ಕಥೆ ಈ ಸಿನಿಮಾದಲ್ಲಿದೆ ಎಂದು ಮೇಲ್ನೋಟಕ್ಕೆ ಅನಿಸಿದರೆ, ಅಲ್ಲೊಂದು ಪ್ರೇಮ, ಸೈನಿಕ, ದೇಶಪ್ರೇಮ ಹೀಗೆ ಏನೆಲ್ಲ ಇರಬಹುದು ಎನ್ನುವ ಸಣ್ಣ ಸುಳಿವನ್ನು ಟ್ರೈಲರ್ ನಲ್ಲಿ ನೀಡಿದ್ದಾರೆ ಅಮೀರ್. ಹಾಗಾಗಿ ಈ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ. ಹೆಚ್ಚು ಜನಪ್ರಿಯತೆಯ ಜೊತೆಗೆ ಇಂತಹ ಸಿನಿಮಾಗಳು ಇನ್ನಷ್ಟು ಬರಲಿ ಎಂಬ ಬೇಡಿಕೆ ಕೂಡ ಹೆಚ್ಚಿಸಿದೆ.

  • ಒಂದಾ… ಎರಡಾ.. ಐದಾರು ಲುಕ್ ನಲ್ಲಿ ಅಮೀರ್ ಖಾನ್ : ಲಾಲ್ ಸಿಂಗ್ ಛಡ್ಡಾ ಟ್ರೈಲರ್ ಗೆ ಉಘೇ ಅಂತು ಜಗತ್ತು

    ಒಂದಾ… ಎರಡಾ.. ಐದಾರು ಲುಕ್ ನಲ್ಲಿ ಅಮೀರ್ ಖಾನ್ : ಲಾಲ್ ಸಿಂಗ್ ಛಡ್ಡಾ ಟ್ರೈಲರ್ ಗೆ ಉಘೇ ಅಂತು ಜಗತ್ತು

    ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಇನ್ಸ್ಪೈರ್ ಮಾಡುವಂತಹ ಚಿತ್ರ ಮಾಡಿದ್ದು ಬಾಲಿವುಡ್ ನಟ ಅಮೀರ್ ಖಾನ್. ಒಂದೊಂದು ಸಿನಿಮಾ ಕೂಡ ಒಂದೊಂದು ಮೋಟಿವೇಟ್ ಪುಸ್ತಕದ ಹಾಗೆ ಇರುತ್ತವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಲಾಲ್ ಸಿಂಗ್ ಛಡ್ಡಾ’. ನಿನ್ನೆಯಷ್ಟೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಕಂಡು ಭಾರತಕ್ಕೆ ಭಾರತವೇ ಉಘೇ ಎಂದಿದೆ. ಇಂತಹ ಸಿನಿಮಾಗಳನ್ನು ಮಾಡಲು ನಿಮ್ಮಿಂದ ಮಾತ್ರ ಸಾಧ್ಯ ಎಂದು ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಪಾತ್ರದಲ್ಲಿ ಪರಕಾಯ ಪ್ರವೇಶ, ಪಾತ್ರವೇ ತಾವಾಗುವ ಕಲೆಯು ಅಮೀರ್ ಅವರಿಗೆ ಕರಗತವಾಗಿದೆ. ಹಾಗಾಗಿ ಪಾತ್ರಕ್ಕಾಗಿ ಅವರು ಸರ್ವ ರೀತಿಯಲ್ಲೂ ತಯಾರಾಗುತ್ತಾರೆ. ಈ ವಯಸ್ಸಿನಲ್ಲೂ ಹದಿನೆಂಟರ ಯುವಕನಂತೆ ಕಾಣುವ ತಯಾರಿ ಇದೆಯಲ್ಲ, ಅದಕ್ಕೆ ಅಮೀರ್ ಖಾನ್ ಗೆ ಅಮೀರ್ ಖಾನ್ ಸಾಟಿ. ಅಷ್ಟರ ಮಟ್ಟಿಗೆ ಟ್ರೈಲರ್ ನಲ್ಲಿ ಫರೆಫೆಕ್ಟ್ ಆಗಿ ಕಂಡಿದ್ದಾರೆ ಅಮೀರ್. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಹಲವು ವಿಶೇಷಗಳೊಂದಿಗೆ ಈ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕಾಗಿ ಅಮೀರ್ ಸವೆಸಿದ ದಿನಗಳು ಬರೋಬ್ಬರಿ 200 ದಿನಗಳಂತೆ. ಇದೇ ಮೊದಲ ಬಾರಿಗೆ ಅವರು ಸುಧೀರ್ಘ ಕಾಲ್ ಶೀಟ್ ಕೊಟ್ಟು, ಸಿನಿಮಾ ಮಾಡಿದ್ದಾರೆ. ಅದರಲ್ಲೂ ಭಾರತದ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸಿನಿಮಾವನ್ನು ಶೂಟ್ ಮಾಡಿದ್ದಾರೆ. ಒಂದ‍ಲ್ಲ, ನಾಲ್ಕೈದು ಶೇಡ್ ನಲ್ಲಿ ಅಮೀರ್ ಈ ಸಿನಿಮಾದಲ್ಲಿ ಕಾಣಸಿಗುತ್ತಾರೆ. ಅಷ್ಟನ್ನೂ ಟ್ರೈಲರ್ ನಲ್ಲಿ ತೋರಿಸಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹುಡುಗನೊಬ್ಬ ಅದನ್ನು ದಾಟಿಕೊಂಡು ಸಾಧನೆ ಮಾಡುವ ಕಥೆ ಈ ಸಿನಿಮಾದಲ್ಲಿದೆ ಎಂದು ಮೇಲ್ನೋಟಕ್ಕೆ ಅನಿಸಿದರೆ, ಅಲ್ಲೊಂದು ಪ್ರೇಮ, ಸೈನಿಕ, ದೇಶಪ್ರೇಮ ಹೀಗೆ ಏನೆಲ್ಲ ಇರಬಹುದು ಎನ್ನುವ ಸಣ್ಣ ಸುಳಿವನ್ನು ಟ್ರೈಲರ್ ನಲ್ಲಿ ನೀಡಿದ್ದಾರೆ ಅಮೀರ್. ಹಾಗಾಗಿ ಈ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ. ಹೆಚ್ಚು ಜನಪ್ರಿಯತೆಯ ಜೊತೆಗೆ ಇಂತಹ ಸಿನಿಮಾಗಳು ಇನ್ನಷ್ಟು ಬರಲಿ ಎಂಬ ಬೇಡಿಕೆ ಕೂಡ ಹೆಚ್ಚಿಸಿದೆ.