Tag: ಅಮಿರ್ ಖಾನ್

  • ಸೀರೆಯುಟ್ಟ ಇರಾ ಖಾನ್‍ಗೆ ಮುತ್ತಿನ ಸುರಿಮಳೆ ಸುರಿಸಿದ ಬಾಯ್‍ಫ್ರೆಂಡ್

    ಸೀರೆಯುಟ್ಟ ಇರಾ ಖಾನ್‍ಗೆ ಮುತ್ತಿನ ಸುರಿಮಳೆ ಸುರಿಸಿದ ಬಾಯ್‍ಫ್ರೆಂಡ್

    ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮಗಳು, ಇರಾ ಖಾನ್ ಅವರು ಸೀರೆಯುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇರಾ ಅವರಿಗೆ ಅವರ ಬಾಯ್‍ಫ್ರೆಂಡ್ ಮುತ್ತು ಕೊಟ್ಟಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿವೆ.

    ಇರಾ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ಫೋಟೋದಲ್ಲಿ ಇರಾ ಅವರ ಬಾಯ್‍ಫ್ರೆಂಡ್ ಮುತ್ತು ಕೊಡುತ್ತಿರುವುದು ಸಖತ್ ಹೈಲೈಟ್ ಆಗಿದೆ. ಈ ಫೋಟೋಗೆ ನಾನಾ ರೀತಿಯ ಕಾಮೆಂಟ್‍ಗಳು ಬರುತ್ತಿವೆ. ಇರಾ ಸಖತ್ ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನೂಪುರ್ ಶಿಖಾರೆ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ನೂಪುರ್ ಜೊತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

     

    View this post on Instagram

     

    A post shared by Ira Khan (@khan.ira)

    1986ರಲ್ಲಿ ನಟಿ ರೀನಾ ದತ್ತ ಜೊತೆ ಅಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಪುತ್ರ ಜುನೈದ್, ಪುತ್ರಿ ಇರಾ ಜನಿಸಿದರು. 2002ರಲ್ಲಿ ಅಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಅಮಿರ್ ಖಾನ್ ಇಂದಿಗೂ ಚೆನ್ನಾಗಿಯೇ ಇದ್ದಾರೆ.

     

    View this post on Instagram

     

    A post shared by Ira Khan (@khan.ira)

    ನಟನ ಮಗಳು ಎನ್ನುವ ಕಾರಣಕ್ಕೆ ಇರಾ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಯ್‍ಫ್ರೆಂಡ್ ನೂಪುರ್ ಶಿಖಾರೆ ವಿಚಾರದಲ್ಲಿ ಇರಾ ಖಾನ್ ಎಂದಿಗೂ ಮುಚ್ಚುಮರೆ ಮಾಡಿದವರಲ್ಲ. ಈ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಮಿತಿ ಮೀರಿತ್ತು. ಈ ಬಗ್ಗೆಯೂ ಇತ್ತೀಚೆಗೆ ಬರೆದುಕೊಂಡಿದ್ದರು. ಈಗ ಅವರು ಬಾಯ್‍ಫ್ರೆಂಡ್ ಮುತ್ತು ಕೊಡುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

  • ವೇಟ್ ಲಾಸ್‍ಗಾಗಿ 15 ದಿನ ಉಪವಾಸ ಮಾಡಿದ ಅಮಿರ್ ಖಾನ್ ಪುತ್ರಿ

    ವೇಟ್ ಲಾಸ್‍ಗಾಗಿ 15 ದಿನ ಉಪವಾಸ ಮಾಡಿದ ಅಮಿರ್ ಖಾನ್ ಪುತ್ರಿ

    ಮುಂಬೈ: ಬಾಲಿವುಡ್ ನಟ ಅಮಿರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ದೇಹ ಸೌಂದರ್ಯವನ್ನು ಕಪಾಡಿಕೊಳ್ಳಲು ತಾವು ಮಾಡುತ್ತಿರುವ ಸಾಹಸದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಸ್ಟಾರ್ ಮಕ್ಕಳ ಎಂದರೆ ಅಭಿಮಾನಿಗಳು ಸಖತ್ ಇಷ್ಟ ಪಡುತ್ತಾರೆ. ಅವರ ದಿನಚರಿ ಕುರಿತಾಗಿ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾರೆ. ಏನು ಮಾಡುತ್ತಾರೆ? ಯಾವ ರೀತಿಯ ಬಟ್ಟೆ ತೊಡುತ್ತಾರೆ, ಹೀಗೆ ಪ್ರತಿ ವಿಚಾರವನ್ನೂ ಗಮನಿಸುವ ಅಭಿಮಾನಿಗಳಿಗಾಗಿ ಇರಾ ಖಾನ್ ತಮ್ಮ ದೇಹ ಸೌಂದರ್ಯದ ಕುರಿತಾಗಿ ತಿಳಿಸಿಕೊಟ್ಟಿದ್ದಾರೆ.

     

    View this post on Instagram

     

    A post shared by Ira Khan (@khan.ira)

    ನನ್ನ ಜೀವನದ ಬಹುಪಾಲು ನಾನು ತುಂಬಾ ಆ್ಯಕ್ಟಿವ್ ಆಗಿದ್ದೇನು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ನನ್ನಲ್ಲಿ ಆಲಸ್ಯ ಹೊಕ್ಕಿದೆ. ನಾನು ಗೊಂದಲದಲ್ಲಿದ್ದೇನೆ. ಈ ಎಲ್ಲಾ ಕಾರಣದಿಂದ ದೇಹದ ತೂಕ 20 ಕೆ.ಜಿ. ಹೆಚ್ಚಿದೆ. ತೂಕ ಇಳಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದೇನೆ. ನನಗೆ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ. ಹೆಚ್ಚು ಶ್ರಮ ಹಾಕುತ್ತಿದ್ದೇನೆ. ನಾನು ಇತ್ತೀಚೆಗೆ 15 ದಿನಗಳ ಕಾಲ ಉಪವಾಸ ಮಾಡಿದ್ದೆ. ತೂಕ ಇಳಿಸಿಕೊಳ್ಳೋಕೆ ಸಾಕಷ್ಟು ಶ್ರಮ ಬೇಕು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ದನ್ನೂ ಓದಿ: ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ

    1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಪುತ್ರ ಜುನೈದ್, ಪುತ್ರಿ ಇರಾ ಜನಿಸಿದರು. 2002ರಲ್ಲಿ ಆಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ಜನವರಿ ಅಂತ್ಯಕ್ಕೆ ನಿತ್ಯ 60 ಸಾವಿರ ಪ್ರಕರಣಗಳು ಪತ್ತೆ ಸಾಧ್ಯತೆ – ದೆಹಲಿಯಲ್ಲಿ ಖಾಸಗಿ ಕಚೇರಿಗಳು ಬಂದ್

  • ಮಾಜಿ ಪತ್ನಿಯೊಂದಿಗೆ ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

    ಮಾಜಿ ಪತ್ನಿಯೊಂದಿಗೆ ಕಾಶ್ಮೀರದ ಗವರ್ನರ್ ಭೇಟಿಯಾದ ಅಮಿರ್ ಖಾನ್

    ಶ್ರೀನಗರ: ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಹಾಗೂ ಮಾಜಿ ಪತ್ನಿ ಕಿರಣ್ ರಾವ್ ನಿನ್ನೆ ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರನ್ನ  ಭೇಟಿಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಕೇಂದ್ರಾಡಳಿತ ಪ್ರದೇಶವನ್ನು ನೆಚ್ಚಿನ ಸಿನಿಮಾ ತಾಣವನ್ನಾಗಿಸುವ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿರುವ ಲೆಫ್ಟಿನೆಂಟ್ ಗವರ್ನರ್ ಗವರ್ನರ್ ಫಿಲ್ಮ್ ಆ್ಯಕ್ಟರ್ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಭೇಟಿಯಾದರು. ಈ ವೇಳೆ ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ನೀಡಲಾದ ಹೊಸ ಪಾಲಿಸಿ ಬಗ್ಗೆ ಮಾತನಾಡಿದರು. ಶೀಘ್ರದಲ್ಲೇ ಹೊಸ ಪಾಲಿಸಿಯನ್ನು ಬಿಡುಗಡೆ ಮಾಡಲಾಗುವುದು. ಬಾಲಿವುಡ್‍ನಲ್ಲಿ ಮತ್ತೆ ಜಮ್ಮು- ಕಾಶ್ಮೀರವನ್ನಾ ಉತ್ತಮ ತಾಣನ್ನಾಗಿಸುವ ಸಂಬಧ ಚರ್ಚೆ ಮಾಡಲಾಯಿತ್ತು ಎಂದಿದ್ದಾರೆ.ಇದನ್ನೂ ಓದಿ: ಫಸ್ಟ್ ನೈಟ್ ದಿನ ವಧು ಟೆರೇಸ್ ಹಾರಿ ಎಸ್ಕೇಪ್

    ಅಮೀರ್ ಖಾನ್ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಇತ್ತೀಚೆಗಷ್ಟೇ ವಿಚ್ಛೇದನವನ್ನು ಪಡೆದುಕೊಂಡು ದೂರವಾಗಿದ್ದಾರೆ. ಕೇವಲ ದಾಂಪತ್ಯ ಜೀವನಕ್ಕೆ ಮಾತ್ರ ವಿಚ್ಛೆದನ ಕೊಟ್ಟಿದ್ದು, ತಾವು ಸ್ನೇಹಿತರಾಗಿಯೇ ಮುಂದುವರಿಯುತ್ತೇವೆ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ. ಅದರಂತೆ ಇಬ್ಬರು ಸಿನಿಮಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  • ಹಿಟ್ಟಿನ ಬ್ಯಾಗ್‍ನಲ್ಲಿ ಹಣ: ಅಮೀರ್ ಖಾನ್ ಸ್ಪಷ್ಟನೆ

    ಹಿಟ್ಟಿನ ಬ್ಯಾಗ್‍ನಲ್ಲಿ ಹಣ: ಅಮೀರ್ ಖಾನ್ ಸ್ಪಷ್ಟನೆ

    ನವದೆಹಲಿ: ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟುಗಳು ಪತ್ತೆಯಾಗಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದವು. ಬಡವರಿಗಾಗಿ ಬಾಲಿವುಡ್ ನಟ ಅಮಿರ್ ಖಾನ್ ಈ ಹಣ ಇಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ದೇಶಾದ್ಯಂತ ಹರಿದಾಡಿತ್ತು. ಅಲ್ಲದೆ ಸಾಕಷ್ಟು ಚರ್ಚೆ ಸಹ ನಡೆದಿತ್ತು. ಇದೀಗ ಸ್ವತಃ ಅಮಿರ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ಎಲ್ಲ ವಿವಾದಕ್ಕೆ ತೆರೆ ಎಳೆದಿದ್ದಾರೆ.

    ಹೌದು ಕೆಲ ದಿನಗಳ ಹಿಂದೆ ಸಾಕಷ್ಟು ಚರ್ಚೆಯಾಗಿದ್ದ ಗೋಧಿ ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟಿನ ಕಂತೆ ಇರುವ 15 ಸಾವಿರ ರೂ. ಪತ್ತೆಯಾಗಿತ್ತು. ಲಾಕ್‍ಡೌನ್‍ನಿಂದ ಬೆಂದು ಬಸವಳಿದ ಜನರಿಗೆ ಆಹಾರ ನೀಡಿದ್ದರೆ ಸಾಕಿತ್ತು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ ಯಾರೋ ಅನಾಮಿಕರು ಒಂದು ಕೆ.ಜಿ.ಗೋಧಿ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂ. ಇಟ್ಟು ವಿತರಿಸಿದ್ದರು. ಪಡೆದವರಿಗೆ ಸಂತಸವಾದರೆ, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಅಮಿರ್ ಖಾನ್ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಕಾರಣ ಅಮಿರ್ ಖಾನ್ ಅವರ ಸಹಾಯ ಮಾಡುವ ಗುಣ ಹಾಗೂ ಸಹಾಯ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳದ ಸ್ವಭಾವ.

    ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಹಲವರು ಇನ್ನೂ ಅಮಿರ್ ಖಾನ್ ಅವರೇ ನೀಡಿದ್ದಾರೆ ಎಂದು ನಂಬಿದ್ದಾರೆ. ಹಣ ನೀಡಿದ್ದಕ್ಕೆ ಹಲವರು ವಿಡಿಯೋ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದರು. ಆದರೆ ಈ ಕುರಿತು ಸ್ವತಃ ಅಮಿರ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿರುವ ಅವರು, ಗೋಧಿ ಹಿಟ್ಟಿನ ಚೀಲಗಳಲ್ಲಿ ಹಣ ಇಟ್ಟ ವ್ಯಕ್ತಿ ನಾನಲ್ಲ. ಇಂದು ಸಂಪೂರ್ಣ ಸುಳ್ಳು ಸುದ್ದಿ, ರಾಬಿನ್ ಹುಡ್ ತನ್ನ ಬಗ್ಗೆ ರಿವೀಲ್ ಮಾಡಲು ಬಯಸುವುದಿಲ್ಲ. ಸ್ಟೇ ಸೇಫ್, ಲವ್ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.

    ದೆಹಲಿಯ ಕೆಲವು ಭಾಗಗಳಲ್ಲಿ ಹಣವಿದ್ದ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ವಿತರಿಸಲಾಗಿತ್ತು. ಹೆಚ್ಚೇನು ಆಹಾರ ಪದಾರ್ಥ ನೀಡದೆ ಕೇವಲ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ನೀಡಿದ್ದಕ್ಕೆ ಹಲವರು ಮೂಗು ಮುರಿದು ಇದನ್ನು ತೆಗೆದುಕೊಂಡು ಏನು ಮಾಡುವುದು ಎಂದು ತಿರಸ್ಕರಿಸಿದ್ದರು. ತುಂಬಾ ಅವಶ್ಯವಿದ್ದವರು ಈ ಬ್ಯಾಗ್‍ಗಳನ್ನು ತೆಗೆದುಕೊಂಡಿದ್ದರು. ತೆಗೆದು ನೋಡಿದಾಗ 500 ರೂ.ನೋಟುಗಳುಳ್ಳ ಒಟ್ಟು 15 ಸಾವರ ರೂ. ಪತ್ತೆಯಾಗಿತ್ತು. ನೇರವಾಗಿ ಅವಶ್ಯಕತೆ ಇರುವವರಿಗೆ, ಬಡವರಿಗೆ ತಲುಪಲು ಈ ರೀತಿ ಮಾಡಿದ್ದಾರೆ. ಇದನ್ನು ಅಮಿರ್ ಖಾನ್ ಅವರೇ ಮಾಡಿರಬೇಕು ಎಂದು ಹೇಳಲಾಗಿತ್ತು.

    ಅಮಿರ್ ಖಾನ್ ಅವರು ಈ ಕೆಲಸ ಮಾಡಿಲ್ಲ ಎನ್ನುವುದಾದರೆ, ಬ್ಯಾಗ್‍ನಲ್ಲಿ ಹಣ ಇಟ್ಟು ಹಂಚಿದವರಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಸದ್ಯ ಅಮಿರ್ ಖಾನ್ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ.

  • ಶನಿವಾರ ರಾತ್ರಿ ಹೀಗಿರುತ್ತೆ – ಅಮಿರ್ ಮಗ್ಳ ಹಾಟ್ ಫೋಟೋ ವೈರಲ್

    ಶನಿವಾರ ರಾತ್ರಿ ಹೀಗಿರುತ್ತೆ – ಅಮಿರ್ ಮಗ್ಳ ಹಾಟ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಅವರ ಮಗಳು ಇರಾ ಖಾನ್ ಅವರ ಹಾಟ್ ಫೋಟೋವೊಂದು ವೈರಲ್ ಆಗುತ್ತಿದೆ.

    ಇರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ತುಂಬಾ ಹಾಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇರಾ ಕೆಂಪು ಬಣ್ಣದ ಉಡುಪು ಧರಿಸಿ ಡಾರ್ಕ್ ಮೇಕಪ್ ಹಾಕಿದ್ದಾರೆ.


    ಈ ಫೋಟೋವನ್ನು ಪೋಸ್ಟ್ ಮಾಡಿದ ಇರಾ ಅದಕ್ಕೆ ‘ಶನಿವಾರ ರಾತ್ರಿ ಹೀಗಿರುತ್ತೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಇರಾ ನಟನೆ ಬದಲು ನಿರ್ದೇಶನದತ್ತ ಒಲವು ತೋರಿದ್ದಾರೆ. ಇರಾ ಈಗ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದಾರೆ. ಇದು ಹೊರತಾಗಿ ಇರಾ ಮಾಡೆಲಿಂಗ್ ಕೂಡ ಮಾಡುತ್ತಿದ್ದಾರೆ.


    ಕಳೆದ ತಿಂಗಳು ಅಂದರೆ ಅಗಸ್ಟ್ ತಿಂಗಳಿನಲ್ಲಿ ಇರಾ ಖಾನ್ ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಇರಾ ಬಿಕಿನಿ ಬ್ಲೌಸ್ ಹಾಕಿ, ಅದಕ್ಕೆ ಡೆನಿಮ್ ಹಾಟ್ ಪ್ಯಾಂಟ್ ಧರಿಸಿದ್ದರು.

    ಇರಾ ಅವರು ಪೋಸ್ಟ್ ಮಾಡಿದ ಫೋಟೋದಲ್ಲಿ ಅವರು ಹೊಕ್ಕಳುಗೆ ಪಿಯರ್ಸ್ ಮಾಡಿಸಿದ್ದರು. ಅಲ್ಲದೆ ಇರಾ ಅವರು ಮೇಕಪ್ ಇಲ್ಲದೇ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ನೀವು ಯಾರು” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು.

    ಇರಾ ಖಾನ್, ಅಮಿರ್ ಖಾನ್‍ನ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ಇರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ಅವರು ತಮ್ಮ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  • ನೀವು ಯಾರು ಎಂದು ಅಮಿರ್ ಮಗಳಿಂದ ಬೋಲ್ಡ್ ಫೋಟೋಶೂಟ್

    ನೀವು ಯಾರು ಎಂದು ಅಮಿರ್ ಮಗಳಿಂದ ಬೋಲ್ಡ್ ಫೋಟೋಶೂಟ್

    ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಅವರ ಮಗಳು ಇರಾ ಖಾನ್ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ.

    ಇತ್ತೀಚೆಗೆ ಇರಾ ಖಾನ್ ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇರಾ ಬಿಕಿನಿ ಬ್ಲೌಸ್ ಹಾಕಿ, ಅದಕ್ಕೆ ಡೆನಿಮ್ ಹಾಟ್ ಪ್ಯಾಂಟ್ ಧರಿಸಿದ್ದಾರೆ.

    ಇರಾ ಅವರು ಪೋಸ್ಟ್ ಮಾಡಿದ ಫೋಟೋದಲ್ಲಿ ಅವರು ಹೊಕ್ಕಳುಗೆ ಪಿಯರ್ಸ್ ಮಾಡಿಸಿದ್ದಾರೆ. ಅಲ್ಲದೆ ಇರಾ ಅವರು ಮೇಕಪ್ ಇಲ್ಲದೇ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ನೀವು ಯಾರು” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    ನೀವು ಯಾರು ಎಂದು ಪೋಸ್ಟ್ ಹಾಕಿ ಇರಾ , “ನೀವು ಯಾರು? ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಜೀವನದಲ್ಲಿ ಬೇರೆ ಬೇರೆ ಸಂದರ್ಭಗಳು ಇದೆ. ನನಗೆ ನಾನು ಯಾರು? ಎಂಬ ಪ್ರಶ್ನೆಯಿಂದ ಖುಷಿಯಾಗಿದ್ದೇನೆ ಹಾಗೂ ಶಾಂತಿಯಿಂದ ಇರುತ್ತೇನೆ. ನನಗೆ ಈ ಪ್ರಶ್ನೆಯ ಉತ್ತರ ಅವಶ್ಯಕತೆ ಇಲ್ಲ” ಎಂದು ಬರೆದುಕೊಂಡಿದ್ದಾರೆ.

    ಇರಾ ಖಾನ್, ಅಮಿರ್ ಖಾನ್‍ನ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ಇರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ಅವರು ತಮ್ಮ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    ಈ ಹಿಂದೆ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಅಮಿರ್ ಖಾನ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಮಗಳು ಇರಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಿದ್ದರು.

  • ಯುವಕನಿಂದ ಮುತ್ತು ಪಡೆಯುತ್ತಿರುವ ಅಮಿರ್ ಮಗಳ ಫೋಟೋ ವೈರಲ್

    ಯುವಕನಿಂದ ಮುತ್ತು ಪಡೆಯುತ್ತಿರುವ ಅಮಿರ್ ಮಗಳ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಮಗಳು ಯುವಕನಿಂದ ಮುತ್ತು ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಮಂಗಳವಾರ ಅಮಿರ್ ಮಗಳು ಇರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತನ್ನ ಸ್ನೇಹಿತ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದನ್ನು ಗೆಳೆಯ ಮಿಶಾಲ್‍ನಿಗೂ ಟ್ಯಾಗ್ ಮಾಡಿದ್ದಾರೆ.

    ಇರಾ ಇನ್‍ಸ್ಟಾಗ್ರಂನಲ್ಲಿ ಮಿಶಾಲ್ ಜೊತೆಯಿರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೂರು ಫೋಟೋಗಳಲ್ಲಿ ಒಂದು ಫೋಟೋದಲ್ಲಿ ಮಿಶಾಲ್, ಇರಾ ಹಣೆಗೆ ಮುತ್ತು ನೀಡುತ್ತಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

    ಮಿಶಾಲ್ ಒಬ್ಬ, ನಟ, ನಿರ್ಮಾಪಕ ಹಾಗೂ ಕಂಪೋಸರ್. ಮಿಶಾಲ್ ಕೂಡ ಇರಾ ಜೊತೆಯಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇರಾ ಜೊತೆ ಇರುವ ಒಂದು ಪೋಸ್ಟ್‍ಗೆ ‘ಚಾರ್ಮರ್’ ಎಂದು ಬರೆದಿದ್ದಾರೆ.

    ಇರಾ ಖಾನ್, ಅಮಿರ್ ಖಾನ್‍ನ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಅಮಿರ್ ಖಾನ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಮಗಳು ಇರಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಿದ್ದರು.

     

    View this post on Instagram

     

    Hope your Spring Break was sunny and smiley as @mishaalkirpalani’s, which of course, I piled onto ❤❤❤ ???? @sahirahoshidar

    A post shared by Ira Khan (@khan.ira) on

     

    View this post on Instagram

     

    Used to not be allowed in the building But now we on the rooftop????

    A post shared by Mishaal kirpalani (@mishaalkirpalani) on

  • ಅಮಿರ್ ಖಾನ್ ಸಿನಿಮಾದಲ್ಲಿ ಪ್ರಭಾಸ್!

    ಅಮಿರ್ ಖಾನ್ ಸಿನಿಮಾದಲ್ಲಿ ಪ್ರಭಾಸ್!

    ಮುಂಬೈ: ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ಬಾಹುಬಲಿ ಚಿತ್ರ ಭಾರತೀಯ ಸಿನಿರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಬಾಹುಬಲಿಯ ಸಕ್ಸಸ್ ಬಳಿ ನಟ ಪ್ರಭಾಸ್ ಗೆ ಬಾಲಿವುಡ್ ನಿಂದ ಹಲವು ಆಫರ್ ಗಳು ಸಹ ಬಂದಿದ್ದವು. ಕಥೆಗೆ ಮೊದಲ ಪ್ರಾಧನ್ಯತೆ ನೀಡುವ ಪ್ರಬಾಸ್ ಇದೂವರೆಗೂ ಬಾಲಿವುಡ್ ಯಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಆದ್ರೆ ಬಾಲಿವುಡ್ ಅಂಗಳದಲ್ಲಿ ತಾಜಾ ಸುದ್ದಿಯೊಂದು ಹರಿದಾಡುತ್ತಿದ್ದು, ಅಮಿರ್ ಖಾನ್ ನಿರ್ಮಾಣದ ‘ಮಹಾಭಾರತ’ ಬಿಗ್ ಬಜೆಟ್ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರಂತೆ.

    ಈ ಬಗ್ಗೆ ಅಮಿರ್ ಖಾನ್ ಅಥವಾ ಪ್ರಭಾಸ್ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ‘ಮಹಾಭಾರತ’ ಒಟ್ಟು ಐದು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಪ್ರಭಾಸ್ ಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲು ಅಮಿರ್ ಖಾನ್ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟು 1000 ಕೋಟಿ ರೂ. ಬಂಡವಾಳದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈಗಾಗಲೇ ಚಿತ್ರತಂಡ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾರಂಭಿಸಿದ್ದು ಮತ್ತು ವಿಶೇಷ ಪಾತ್ರಗಳಿಗಾಗಿ ಆಡಿಷನ್ ಕೂಡ ನಡೆಸಲಾಗುತ್ತಿದೆ.

    ಸದ್ಯ ಅಮಿರ್ ಖಾನ್ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತ ಪ್ರಭಾಸ್ ಸಹ ‘ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿ ಆಗಿದ್ದಾರೆ. ಥಗ್ಸ್ ಆಫ್ ಹಿಂದೋಸ್ತಾನ್ ಚಿತ್ರದ ಬಳಿಕವೇ ಅಮಿರ್ ಖಾನ್ ‘ಮಹಾಭಾರತ’ದತ್ತ ಮುಖ ಮಾಡಲಿದ್ದಾರೆ. ಮಹಾಭಾರತದ ಎಲ್ಲರಿಗೂ ಗೊತ್ತಿರುವ ಕಥೆ. ಹಾಗಾಗಿ ಹೊಸತನ ರೂಪದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಅಮಿರ್ ಪ್ಲಾನ್ ಮಾಡ್ತಿದ್ದಾರೆ.

    2018ರ ಆರಂಭದಲ್ಲಿಯೇ ‘ಮಹಾಭಾರತ’ ಚಿತ್ರದ ಫೋಟೋ ಶೂಟ್ ನಡೆಯಬೇಕಿತ್ತು. ಆ ವೇಳೆ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್’ ಸಾಕಷ್ಟು ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಮೂಲ ಕಥೆಗೆ ಯಾವುದೇ ಧಕ್ಕೆ ತರದಂತೆ ಸಿನಿಮಾ ನಿರ್ಮಿಸಲಾಗ್ತಿದೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮಿರ್ ಖಾನ್ ಮುನಿಸಿಕೊಂಡಿದ್ದಕ್ಕೆ ಎರಡು ಪಟ್ಟು ಹೆಚ್ಚಾಯ್ತು ಕತ್ರಿನಾ ಕೆಲಸ!

    ಅಮಿರ್ ಖಾನ್ ಮುನಿಸಿಕೊಂಡಿದ್ದಕ್ಕೆ ಎರಡು ಪಟ್ಟು ಹೆಚ್ಚಾಯ್ತು ಕತ್ರಿನಾ ಕೆಲಸ!

    ಮುಂಬೈ: ಧೂಮ್-3 ಚಿತ್ರದ ಬಳಿಕ ಬಾಲಿವುಡ್ ಹಾಟ್ ಬೆಡಗಿ ಕತ್ರಿನಾ ಕೈಫ್ ಮತ್ತೊಮ್ಮೆ ಅಮಿರ್ ಖಾನ್ ಜೊತೆ ‘ಥಗ್ಸ್ ಆಫ್ ಹಿಂದೋಸ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಚಿತ್ರೀಕರಣದ ವೇಳೆಯಲ್ಲಿ ಕತ್ರಿನಾ ಮೇಲೆ ಅಮಿರ್ ಕೋಪಗೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ಅಂಗಳದಿಂದ ಹೊರ ಬಂದಿದೆ.

    ಮಿಸ್ಟರ್ ಪರ್ಫೆಕ್ಟ್ ಅನ್ನಿಸಿಕೊಳ್ಳುವ ಅಮಿರ್ ಖಾನ್ ಕೆಲಸದ ವಿಷಯದಲ್ಲಿ ಸಿಕ್ಕಾಪಟ್ಟೆ ಕಟ್ಟು ನಿಟ್ಟು. ಈ ಕಾರಣಕ್ಕೆ ಕತ್ರಿನಾ ನಟನೆಯಿಂದ ತೃಪ್ತರಾಗದ ಅಮಿರಾ ಸೆಟ್ ನಲ್ಲಿ ಅಸಮಧಾನ ಹೊರ ಹಾಕಿದ್ದಾರೆ ಅಂತಾ ಹೇಳಲಾಗುತ್ತಿದೆ. ಮಲ್ಟಿ ಸ್ಟಾರ್ ಹೊಂದಿರುವ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಎಲ್ಲರ ನಟನೆ ಹೊಂದಾಣಿಕೆ ಆಗುವಂತೆ ಕತ್ರಿನಾ ಕೂಡ ಸಿನಿಮಾದಲ್ಲಿ ನಟಿಸಬೇಕಿದೆ.

    ಕತ್ರಿನಾ ನಟನೆಯ ದೃಶ್ಯಗಳನ್ನು ಎರಡೆರೆಡು ಬಾರಿ ಶೂಟ್ ಮಾಡಲಾಗ್ತಿದೆ ಎನ್ನಲಾಗಿದೆ. ಹೀಗಾಗಿ ಥಗ್ಸ್ ಆಫ್ ಹಿಂದೋಸ್ತಾನ್‍ದಲ್ಲಿ ಕತ್ರಿನಾ ಕೆಲಸ ಎರಡು ಪಟ್ಟು ಹೆಚ್ಚಾಗಿದೆ. ತನ್ನ ಸೀನ್‍ಗಳು ತೆರೆಯ ಮೇಲೆ ಚೆನ್ನಾಗಿ ಕಾಣಬೇಕೆಂದು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ‘ಜಬ್ ತಕ್ ಹೈ ಜಾನ್’ ಸಿನಿಮಾದಲ್ಲಿಯೂ ಸಹ ಕತ್ರಿನಾ ನಟನೆಗೆ ಶಾರುಖ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.

    ಥಗ್ಸ್ ಆಫ್ ಹಿಂದೋಸ್ತಾನ್‍ದಲ್ಲಿ ಫತಿಮಾ ಸನಾ ಶೇಖ್, ಶಶಾಂಕ್ ಅರೋರಾ, ಮೊಹಮ್ಮದ್ ಝೀಶಾನ್, ಆಯುಬ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದೇ ವರ್ಷ ನವೆಂಬರ್ 7ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    https://www.instagram.com/p/BfFYCXhFKdt/?hl=en&tagged=thugsofhindustan

    https://www.instagram.com/p/BfAVB6vFTHh/?hl=en&tagged=thugsofhindustan

    https://www.instagram.com/p/Be9kIQWhD6R/?hl=en&tagged=thugsofhindustan

  • ಯಾರಿಗೂ ತಿಳಿಯದಂತೆ ಸಾಮಾನ್ಯರಂತೆ ಹಂಪಿ ವೀಕ್ಷಣೆ ಮಾಡಿದ ಇಮ್ರಾನ್ ಖಾನ್!

    ಯಾರಿಗೂ ತಿಳಿಯದಂತೆ ಸಾಮಾನ್ಯರಂತೆ ಹಂಪಿ ವೀಕ್ಷಣೆ ಮಾಡಿದ ಇಮ್ರಾನ್ ಖಾನ್!

    ಬೆಂಗಳೂರು: ಬಾಲಿವುಡ್ ಕ್ಯೂಟ್ ಆ್ಯಂಡ್ ಯಂಗ್ ಸ್ಟಾರ್ ಇಮ್ರಾನ್ ಖಾನ್ ಪತ್ನಿ ಜೊತೆ ವಿಶ್ವ ವಿಖ್ಯಾತ ಹಂಪಿ ವೀಕ್ಷಣೆ ಮಾಡಿದ್ದಾರೆ. ತಲೆಗೊಂದು ಟೋಪಿ ಧರಿಸಿ ಸಾಮಾನ್ಯರಂತೆ ಹಂಪಿಯ ಎಲ್ಲ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿದ್ದಾರೆ.

    ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಉಗ್ರ ನರಸಿಂಹ, ನೆಲಸ್ಥರ ಶಿವಾಲಯ, ಅರಮನೆ ಆವರಣ, ಕಮಲ್ ಮಹಲ್, ಗಜಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ಕಪ್ಪುಕಲ್ಲಿನ ಪುಷ್ಕರಣಿ, ರಾಣಿಸ್ನಾನ ಗೃಹ, ವಿಜಯವಿಠ್ಠಲ ದೇವಸ್ಥಾನ ಹಾಗೂ ಹೇಮಕೂಟವನ್ನು ಪತ್ನಿ ಅವಂತಿಕ ಮಲ್ಲಿಕ್ ಜೊತೆ ವೀಕ್ಷಣೆ ಮಾಡಿದ್ದಾರೆ.

    ಸಾಮಾನ್ಯರ ಹಾಗೆಯೇ ಹಂಪಿಯ ಪ್ರತಿಯೊಂದು ಸ್ಥಳವನ್ನು ತಿರುಗಾಡಿ ನೋಡಿದ್ದಾರೆ. ಹಂಪಿ ಆಗಮಿಸಿದ್ದ ಇಮ್ರಾನ್ ಸ್ಥಳೀಯ ಕಮಲಾಪುರದ ಖಾಸಗಿ ಹೋಟೆಲ್ ನಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು.

    ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಸೋದರನಾಗಿರುವ ಇಮ್ರಾನ್ ಖಾನ್ 2008ರಲ್ಲಿ `ಜಾನೇ ತು, ಯಾ ಜಾನೇ ನಾ’ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಹೀರೋ ಆಗಿ ಎಂಟ್ರಿ ನೀಡಿದ್ದಾರೆ. ಕಿಡ್ನಾಪ್, ಲಕ್, ಐ ಹೇಟ್ ಲವ್ ಸ್ಟೋರಿ, ಡೆಲ್ಲಿ ಬೆಲ್ಲಿ, ಬ್ರೇಕ್ ಕೆ ಬಾದ್, ಮೇರೆ ಬ್ರದರ್ ಕೀ ದುಲ್ಹನ್, ಏಕ್ ಮೇ ಔರ್ ಏಕ್ ಥು, ಗೋರಿ ತೇರೆ ಪ್ಯಾರ್ ಮೇ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.