Tag: ಅಮಿತ್

  • ಕುಂದಾನಗರಿಯಲ್ಲಿ ಬಿಜೆಪಿ ಚಾಣಕ್ಯ- ಪಕ್ಷದಲ್ಲಿನ ಒಳಜಗಳ ಶಮನ ಮಾಡ್ತಾರಾ ಅಮಿತ್ ಶಾ?

    ಕುಂದಾನಗರಿಯಲ್ಲಿ ಬಿಜೆಪಿ ಚಾಣಕ್ಯ- ಪಕ್ಷದಲ್ಲಿನ ಒಳಜಗಳ ಶಮನ ಮಾಡ್ತಾರಾ ಅಮಿತ್ ಶಾ?

    ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಜನ ಸಂಕಲ್ಪಯಾತ್ರೆಗೆ ಲಕ್ಷಾಂತರ ಜನ ಚುನಾವಣಾ ತಂತ್ರಗಾರಿಕೆಯ ಚಾಣಾಕ್ಯ ಅಮಿತ್ ಶಾ (AmitShah) ಬೆಳಗಾವಿಗೆ ಆಗಮಿಸಿದ್ದಾರೆ.

    ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ರಾಜಕಾರಣದಲ್ಲಿ ಜಾರಕಿಹೊಳಿ ಬಣ ಹಾಗೂ ಸವದಿ ಬಣಗಳಾಗಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಭಿನ್ನತೆಯನ್ನು ಶಮನಗೊಳಿಸಿ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸಬೇಕು ಎಂಬುದು ಬಿಜೆಪಿಯ ಗುರಿ. ಸಿಡಿ ಪ್ರಕರಣದಿಂದ ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದ ರಮೇಶ್ ಜಾರಕಿಹೊಳಿ (Ramesh Jarakiholi) ಅವರನ್ನು ಹೇಗೆ ಸಮಾಧಾನ ಪಡಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ `ನಯಾ ಫೇಸ್’ ಗೇಮ್- BJP ಹೈಕಮಾಂಡ್ ನಡೆ ಏನು?

    ಇಂದು ಬೆಳಗಾವಿಗೆ ಭೇಟಿ ನೀಡಲಿರುವ ಅಮಿತ್ ಶಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಮಿತ್ ಶಾಗೆ ಬಿಎಸ್‍ವೈ, ಸಿಎಂ ಬೊಮ್ಮಾಯಿ ಸಾಥ್ ನೀಡಲಿದ್ದಾರೆ. ಇತ್ತ ಕಿತ್ತೂರು ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಲು ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ (Satish Jarakiholi) ಗೇಮ್ ಪ್ಲಾನ್ ರೂಪಿಸಿದ್ದು, ಪಕ್ಷದ ಕ್ಷೇತ್ರ ಬೆಳಗಾವಿ ಗ್ರಾಮೀಣ, ಖಾನಾಪೂರ ಹಾಗೂ ಬೈಲಹೊಂಗಲದಲ್ಲಿಯೂ ಕಾಂಗ್ರೆಸ್ ಶಾಸಕರಿರುವುದರಿಂದ ಕಿತ್ತೂರು ಮತಕ್ಷೇತ್ರದಲ್ಲಿ ಅಮಿತ್ ಶಾ ಬಹಿರಂಗ ಸಭೆ ಆಯೋಜಿಸಿದ್ದಾರೆ.

    ಚುನಾವಣಾ ರಣತಂತ್ರ ರೂಪಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುವ ಉದ್ದೇಶವಾಗಿದೆ. ಎಂ ಕೆ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು ಬಂದೊಬಸ್ತ್ ಸವಾಲಾಗಿದೆ. ಒಂದೆಡೆ ಪಾರ್ಟಿಯಲ್ಲಿ ಒಳಜಗಳ ಇನ್ನೊಂದೆಡೆ ವಿರೋಧ ಪಕ್ಷಗಳ ತಂತ್ರಕ್ಕೆ ಮರುತಂತ್ರ ರೂಪಿಸುವ ಗುರುತರ ಜವಾಬ್ದಾರಿ ಬಿಜೆಪಿ ಚಾಣಕ್ಯ ಶಾ ಮೇಲಿದೆ. ಅಮಿತ್ ಶಾ ಜೊತೆ ರಾಜ್ಯದ ಘಟಾನುಘಟಿ ನಾಯಕರು ವೇದಿಕೆ ಹಂಚಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಡಿಓ ಶೃತಿಗೌಡ ಪ್ರಕರಣದಲ್ಲಿ ಟ್ವಿಸ್ಟ್- ಪೊಲೀಸರ ಚಾರ್ಜ್‍ಶೀಟ್‍ನಲ್ಲಿ ಬಯಲಾಯ್ತು ಸತ್ಯ

    ಪಿಡಿಓ ಶೃತಿಗೌಡ ಪ್ರಕರಣದಲ್ಲಿ ಟ್ವಿಸ್ಟ್- ಪೊಲೀಸರ ಚಾರ್ಜ್‍ಶೀಟ್‍ನಲ್ಲಿ ಬಯಲಾಯ್ತು ಸತ್ಯ

    ಬೆಂಗಳೂರು: ಪಿಡಿಓ ಶೃತಿಗೌಡ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಶೃತಿಗೌಡಗೆ ಅಮಿತ್ ಜೊತೆಗೆ ನಂಟು ಇತ್ತು ಅನ್ನೋದನ್ನ ಚಾರ್ಜ್‍ಶೀಟ್ ಬಯಲು ಮಾಡಿದೆ. ಜೊತೆಗೆ ಮತ್ತಷ್ಟು ಭಯಾನಕ, ರೋಚಕ ಸತ್ಯಗಳು ಚಾರ್ಜ್‍ಶೀಟ್‍ನಲ್ಲಿ ಬಯಲಾಗಿದೆ.

    2017ರ ಜನವರಿ 13 ರಂದು ಬೆಂಗಳೂರಿನ ಹೆಸರಘಟ್ಟದ ಆಚಾರ್ಯ ಕಾಲೇಜು ಬಳಿ ಪಿಡಿಓ ಶೃತಿಯ ಪತಿ ಹಾಗೂ ಮಾವ, ಅಮಿತ್ ಎಂಬಾತನನ್ನ ಶೂಟೌಟ್ ಮಾಡಿ ಕೊಲೆ ಮಾಡಿದ್ರು. ಅದಾದ ಕೆಲವೇ ನಿಮಿಷಗಳಲ್ಲಿ ಶೃತಿಗೌಡ ಆತ್ಮಹತ್ಯೆಗೆ ಶರಣಾಗಿದ್ರು. ಈ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಫೇಸ್‍ಬುಕ್, ಮೆಸೆಂಜರ್‍ಗಳಲ್ಲಿ ಶೃತಿ-ಅಮಿತ್ ಗೆಳೆತನದ ಬಗ್ಗೆ ಆಗಸ್ಟ್ 2016ರಲ್ಲಿ ಅಮಿತ್ ಪತ್ನಿಗೆ ಗೊತ್ತಾಗಿತ್ತು. ನಿಮ್ಮ ಪತ್ನಿಯ ನಡತೆ ಸರಿ ಇಲ್ಲ ಎಂದು ಶೃತಿಗೌಡ ಪತಿ ರಾಜೇಶ್‍ಗೆ ಅಮಿತ್ ಪತ್ನಿ ಎಚ್ಚರಿಸಿದ್ರು. ನೀವು ಶೃತಿಯವರಿಗೆ ಎಚ್ಚರಿಕೆ ನೀಡಿ, ನಾನು ಅಮಿತ್‍ಗೆ ಎಚ್ಚರಿಕೆ ನೀಡ್ತೀನಿ ಅಂತ ರಂಜಿತಾ ಹೇಳಿದ್ರು. ಇದು ಗೊತ್ತಾಗಿ ರಾಜೇಶ್ ಶೃತಿಗೆ ಹೊಡೆದು ಮನೆಯಲ್ಲೇ ಕೂಡಿ ಹಾಕಿದ್ದ. ಈ ಬಗ್ಗೆ ಶೃತಿ ತನ್ನ ಪೋಷಕರ ಬಳಿ ನೋವು ತೋಡಿಕೊಂಡಿದ್ದು, ಅನುಮಾನ ಬೇಡ ಎಂದು ಶೃತಿ ಪೋಷಕರು ರಾಜೇಶ್‍ಗೆ ಹೇಳಿದ್ರು.

    ಸಂಸಾರದ ಎಲ್ಲಾ ನಿರ್ವಹಣೆ ಹೊಣೆ ಶೃತಿಯೇ ನೋಡಿಕೊಳ್ಳುತ್ತಿದ್ದರು. 2011ರಲ್ಲಿ 2ನೇ ಮಗುವೂ ಹೆಣ್ಣಾಗಿದ್ದಕ್ಕೆ ರಾಜೇಶ್ ಪತ್ನಿಗೆ ಮಾನಸಿಕ ಹಿಂಸೆ ನೀಡ್ತಿದ್ದ. ತವರುಮನೆಗೆ ಹೋಗಿ ಆಸ್ತಿ ಸಮ ಭಾಗ ಮಾಡಿಸು ಎಂದು ರಾಜೇಶ್ ಜಗಳ ಮಾಡ್ತಿದ್ದ. ರಾಜೇಶ್ ಯಾವುದೇ ಕೆಲಸಕ್ಕೆ ಹೋಗದೇ ಶೃತಿ ಸಂಪಾದನೆಯಲ್ಲಿ ಜೀವನ ನಡೆಸ್ತಿದ್ದ ಎನ್ನಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರಿಂದ ಕೋರ್ಟ್‍ಗೆ 300 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಪೊಲೀಸರು 47 ಮಂದಿ ಸಾಕ್ಷಿಗಳ ಹೇಳಿಕೆಯನ್ನ ದಾಖಲಿಸಿದ್ದಾರೆ. ರಾಜೇಶ್ ತನ್ನ ಹೆಂಡತಿ ಶೀಲದ ಮೇಲೆ ಅನುಮಾನ ಪಟ್ಟು ಶೃತಿಗೌಡ ಕಾರ್‍ಗೆ ಜಿಪಿಎಸ್ ಅಳವಡಿಸಿದ್ದ. ಜ.13ರಂದು ಶೃತಿ ಕಾರ್ ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜ್ ಬಳಿ ನಿಂತಿತ್ತು. ಶೃತಿ ಗಂಡ ರಾಜೇಶ್ ಮತ್ತು ಮಾವ ಗೋಪಾಲಕೃಷ್ಣ ಕಾರ್ ಬಳಿ ಬಂದಿದ್ರು. ಗನ್ ತೆಗೆದು ರಾಜೇಶ್ ಶೃತಿ ಜೊತೆ ಮಾತಾಡ್ತಿದ್ದ ಅಮಿತ್ ಎದೆಗೆ ಗುಂಡು ಹಾರಿಸಿದ್ದ ಎಂದು ಚಾರ್ಜ್‍ಶೀಟ್‍ನಲ್ಲಿ ಇಂಚಿಂಚು ಮಾಹಿತಿ ಉಲ್ಲೇಖವಾಗಿದೆ.

    ಇದೇ ವರ್ಷ ಸಂಕ್ರಾಂತಿ ಹಬ್ಬದಂದು ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಪಿಡಿಓ ಶೃತಿಗೌಡ ಕೇಸ್‍ನಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಈಗ ಅಮಿತ್ ಬದುಕಿಲ್ಲ, ರಾಜೇಶ್ ಜೈಲು ಸೇರಿದ್ದಾನೆ.