Tag: ಅಮಿತಾಬ್ ಕಾಂತ್

  • ಹಂಪಿಯಲ್ಲಿ ನಡೆದ ಜಿ20 ಸಭೆ ಯಶಸ್ವಿ: ಅಮಿತಾಬ್ ಕಾಂತ್

    ಹಂಪಿಯಲ್ಲಿ ನಡೆದ ಜಿ20 ಸಭೆ ಯಶಸ್ವಿ: ಅಮಿತಾಬ್ ಕಾಂತ್

    ವಿಜಯನಗರ: ಹಂಪಿಯಲ್ಲಿ ನಡೆದ ಜಿ20  ಶೆರ್ಪಾ ಸಭೆ (G20 Summit) ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಶೆರ್ಪಾಗಳಿಗೆ ಅಭೂತಪೂರ್ವ ಅನುಭವವಾಗಿದೆ ಎಂದು ಭಾರತದ ಶೆರ್ಪಾ ಅಮಿತಾಬ್ ಕಾಂತ್ (Amitabh Kant) ತಿಳಿಸಿದ್ದಾರೆ.

    ಹಂಪಿಯ (Hampi) ಎವಾಲ್ವ್ ಬ್ಯಾಕ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿಯನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡಿದ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅಭಿನಂದನಾರ್ಹರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಮಕ್ಕಳ ಪ್ರದರ್ಶನ ಚೆನ್ನಾಗಿತ್ತು. ಹಂಪಿ ಬೈ ನೈಟ್ ಬಹಳ ಒಳ್ಳೆಯ ಅನುಭವ ನೀಡಿದೆ. ಹಂಪಿ ಭಿನ್ನವಾಗಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ರಾಜೀನಾಮೆ

    ಮೂರನೇ ಜಿ20 ಶೃಂಗಸಭೆಗೆ ಹಂಪಿ ಸಾಕ್ಷಿಯಾಗಿದೆ. ಈ ಸಭೆಯಲ್ಲಿ ಯಾವುದಕ್ಕೆ ಭಾರತದ ಪ್ರಾಮುಖ್ಯತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸಭೆಯಲ್ಲಿ ಜಿ20 ರಾಷ್ಟ್ರಗಳು ಯಶಸ್ವಿಯಾಗಿ ಭಾಗವಹಿಸಿವೆ. ಅಲ್ಲದೇ ಪ್ರಾಪಂಚಿಕ ಅಭಿವೃದ್ಧಿಪರ ವಿಚಾರಗಳು ಚರ್ಚೆಯಾಗಿದ್ದು, ತಾಂತ್ರಿಕತೆಯ ಕೊಂಡುಕೊಳ್ಳುವಿಕೆ ಮತ್ತು ವಿನಿಮಯ ಮಾಡಿಕೊಳ್ಳಲು ಒಪ್ಪಂದವಾಗಿದೆ. ಪ್ರಮುಖವಾಗಿ ಆಫ್ರಿಕನ್ ಒಕ್ಕೂಟಗಳಿಗೆ ಜಿ20 ಸದಸ್ಯತ್ವ ನೀಡಲು ಒತ್ತಾಯಿಸಲಾಗಿದೆ. ಇದಕ್ಕೆ ಉಳಿದ ದೇಶಗಳು ಸಹಮತ ಸೂಚಿಸಿವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಈ ಬಾರಿಯ ಜಿ20 ಶೃಂಗಸಭೆಯು ಜುಲೈ 9ರಿಂದ 16ರವರೆಗೆ ಹಂಪಿಯಲ್ಲಿ ನಡೆದಿದ್ದು, ಭಾರತ ಅಧ್ಯಕ್ಷೀಯ ರಾಷ್ಟ್ರವಾಗಿತ್ತು. ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆಯುಷ್ಮಾನ್, ಆರೋಗ್ಯ ಕರ್ನಾಟಕಕ್ಕೆ ಕೇಂದ್ರ 60% ನೆರವು ನೀಡಲಿ – ದಿನೇಶ್ ಗುಂಡೂರಾವ್ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ವರ್ಷಗಳಲ್ಲಿ ಕರ್ನಾಟಕ ಹೊಂದಲಿದೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ: ಅಮಿತಾಬ್ ಕಾಂತ್

    2 ವರ್ಷಗಳಲ್ಲಿ ಕರ್ನಾಟಕ ಹೊಂದಲಿದೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ: ಅಮಿತಾಬ್ ಕಾಂತ್

    ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಒಂದು ಟ್ರಿಲಿಯನ್ ಆರ್ಥಿಕತೆ ಹೊಂದಲಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ (Amitabh Kant) ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಭಾರತದ ಆರ್ಥಿಕತೆ ಬಗ್ಗೆ ಮಾತನಾಡಿದ ಅವರು, ಭಾರತದ ಆರ್ಥಿಕತೆಗೆ ಭವಿಷ್ಯದಲ್ಲಿ ದಕ್ಷಿಣ ಭಾರತ (South India) ದ ರಾಜ್ಯಗಳು ದೊಡ್ಡ ಕೊಡುಗೆ ಕೊಡಲಿವೆ ಎಂದು ಪ್ರತಿಪಾದಿಸಿದರು.

    ಮುಂದಿನ ಎರಡು ವರ್ಷದಲ್ಲಿ ಕರ್ನಾಟಕವು 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿ) ಆರ್ಥಿಕತೆಯಾಗಲಿದ್ದು, ತೆಲಂಗಾಣ (Telangana) ವೂ ಈ ಸಾಲಿನಲ್ಲಿ ಸೇರಬಹುದು. ಭಾರತ ಸದ್ಯ 5 ಟ್ರಿಲಿಯನ್ ಡಾಲರ್ ಗುರಿ ಹೊಂದಿದೆ. ಇದು 10 ಟ್ರಿಲಿಯನ್ ಡಾಲರ್ ಗೆ ತಲುಪಿದಾಗ ಭಾರತವನ್ನು ದಕ್ಷಿಣ ಭಾರತದ ರಾಜ್ಯಗಳು ಮುನ್ನಡೆಸುತ್ತವೆ ಎಂದು ಅವರು ಹೇಳಿದರು. ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

    ದೇಶದ ಜಿಡಿಪಿ (GDP) ಗೆ 30% ರಷ್ಟು ಕೊಡುಗೆಯನ್ನು ದಕ್ಷಿಣ ಭಾರತ ನೀಡುತ್ತಿದೆ ಮತ್ತು ದಕ್ಷಿಣದ ರಾಜ್ಯಗಳಲ್ಲಿನ ತಲಾ ಆದಾಯವು ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಿನದಾಗಿದೆ. ತಮಿಳುನಾಡು ಉತ್ಪಾದನೆಯಲ್ಲಿ ಉತ್ಕೃಷ್ಟವಾಗಿದೆ, ಇದು ಅತ್ಯಾಧುನಿಕ ವಲಯಗಳ ವಿಷಯದಲ್ಲಿ ಲಭ್ಯವಿರುವ ನುರಿತ ಕಾರ್ಮಿಕರಿದ್ದಾರೆ. ತೆಲಂಗಾಣ ಔಷಧೀಯ ವಲಯದಲ್ಲಿ ಉತ್ತಮವಾಗಿದೆ. ಭಾರತದ ಫಾರ್ಮಾದಲ್ಲಿ ಸುಮಾರು 35-40 ಪ್ರತಿಶತ ಉತ್ಪನ್ನಗಳು ಅಲ್ಲಿಂದ ಬರುತ್ತಿವೆ ಎಂದರು. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೇಂಟ್‌, 2 FIR

    ಕೇರಳ (Kerala) ವು ಸ್ವತಃ ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ ಉತ್ಕೃಷ್ಟವಾಗಿದೆ ಮತ್ತು ಅದು ತನ್ನದೇ ಆದ ವಿಶಿಷ್ಟ ಬ್ರ್ಯಾಂಡ್ ಅನ್ನು ಸೃಷ್ಟಿಸಿದೆ. ಕರ್ನಾಟಕವು ಸುಮಾರು ಎರಡು ದಶಕಗಳಿಂದ ಭಾರತಕ್ಕೆ ಸೇವಾ ಕೇಂದ್ರವಾಗಿದೆ ಮತ್ತು ಭಾರತದ ಸೇವಾ ಆರ್ಥಿಕತೆಗೆ ಚಾಲನೆ ನೀಡಿದೆ. ಉತ್ಪಾದನೆ ಮತ್ತು ಫಾರ್ಮಾ ಕ್ಷೇತ್ರದಲ್ಲಿ ಗಣನೀಯವಾಗಿ ಉತ್ತಮ ಸಾಧನೆ ಮಾಡಿರುವ ಆಂಧ್ರಪ್ರದೇಶ (Andhrapradesh) ವು ಈಗ ನವೀಕರಿಸಬಹುದಾದ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ತ್ವರಿತ ಬೆಳವಣಿಗೆಯನ್ನು ಕಾಣಲು ಸಜ್ಜಾಗಿದೆ ಎಂದು ಅವರು ಉಲ್ಲೇಖಿಸಿದರು.

    ಈ ಎಲ್ಲಾ ರಾಜ್ಯಗಳು ನಿಜವಾಗಿಯೂ ಅತ್ಯುತ್ತಮ ಕೆಲಸ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಪ್ರದರ್ಶಿಸಿವೆ. ಆದ್ದರಿಂದ ಜೀವನದ ಗುಣಮಟ್ಟ ಮತ್ತು ಆರೋಗ್ಯ, ಶಿಕ್ಷಣ ಮತ್ತು ಪೋಷಣೆಯಲ್ಲಿನ ಸಾಮಾಜಿಕ ಸೂಚಕಗಳು ತುಂಬಾ ಹೆಚ್ಚಿವೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ ಈ ರಾಜ್ಯಗಳು ತುಂಬಾ ಮುಂದಿವೆ. ಇದು ನಿಜವಾಗಿಯೂ ಹಲವಾರು ವರ್ಷಗಳಿಂದ ಮಾಡಿದ ಕೆಲಸವನ್ನು ತೋರಿಸುತ್ತದೆ. ಸರ್ಕಾರದಲ್ಲಿ ಬದಲಾವಣೆಗಳ ಹೊರತಾಗಿಯೂ, ಸಾಮಾಜಿಕ ಅಭಿವೃದ್ಧಿಯ ನೀತಿಯ ಸ್ಥಿರತೆಯು ಈ ರಾಜ್ಯಗಳಲ್ಲಿ ನಿಜವಾಗಿಯೂ ಫಲಿತಾಂಶಗಳನ್ನು ನೀಡಿದೆ ಎಂದು ಹೇಳಿದರು.