Tag: ಅಮಾವಾಸ್ಯೆ

  • ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

    ಅಯೋಧ್ಯೆಗೆ ವೀಕೆಂಡ್‌ನಲ್ಲಿ ಭಕ್ತಸಾಗರ- VIP ಗೇಟ್ ತೆರೆದ ಆಡಳಿತ ಮಂಡಳಿ

    – 18 ದಿನದಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ

    ಅಯೋಧ್ಯೆ: ರಾಮಮಂದಿರದಲ್ಲಿ ಬಾಲಕರಾಮನ ಪ್ರಾಣಪ್ರತಿಷ್ಠಾಪನೆ ಆದಾಗಿಂದ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಂತೆಯೇ ಇಂದು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ಬಾಲಕರಾಮನ ದರ್ಶನ ಪಡೆಯುತ್ತಿದ್ದಾರೆ.

    ಹೌದು. ವೀಕೆಂಡ್‌ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಗೆ (Ayodhya Ram Mandir) ಭಕ್ತ ಸಾಗರವೇ ಹರಿದುಬಂದಿದೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ. ಭಕ್ತರು ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನ ಮಾಡಿ ರಾಮ ಮಂದಿರದತ್ತ ದೌಡಾಯಿಸುತ್ತಿರುವ ವೀಡಿಯೋ ಇದೀಗ ವೈರಲ್‌ ಆಗುತ್ತಿದೆ.

    ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ವಿಐಪಿ ಗೇಟ್ ಕೂಡ ತೆರೆದಿದೆ. ಒಂದೆಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಭಕ್ತರಿಗೆ ಲಾಕರ್ ವ್ಯವಸ್ಥೆ ಸಿಗದಿದ್ದರಿಂದ ಮೊಬೈಲ್ ಫೋನ್, ಲಗೇಜ್ ಜೊತೆಯೇ ಮಂದಿರದೊಳಗೆ ನುಗ್ಗುತ್ತಿದ್ದಾರೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರಧಾನಿ ಮೋದಿಗೆ HDD ಧನ್ಯವಾದ

    ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಬಾಲಕರಾಮನ ಪ್ರಾಣಪ್ರತಿಷ್ಠೆ ನಡೆದಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಸಿನಿಮಾ ತಾರೆಗಳು ಹೀಗೆ ಸಾಕಷ್ಟು ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಿದ್ದರು. ಇದಾದ ಬಳಿಕ ಮುಸ್ಲಿಮರು ಸೇರಿದಂತೆ ಸಾವಿರಾರು ಮಂದಿ ರಾಮಮಂದಿರಕ್ಕೆ ಆಗಮಿಸಿದ್ದಾರೆ.

    ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ಗುಂಪು ಜನವರಿ 25 ರಂದು ಲಕ್ನೋದಿಂದ ಕಾಲ್ನಡಿಗೆಯ ಮೂಲಕ ರಾಮಮಂದಿರಕ್ಕೆ ಆಗಮಿಸಿತ್ತು. 350 ಮಂದಿ ಮುಸ್ಲಿಂ ಭಕ್ತರ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆಯೇ ಸುಮಾರು 150 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆಗೆ ತಲುಪಿತ್ತು. 6 ದಿನಗಳಲ್ಲಿ ಪ್ರತಿ 25 ಕಿ.ಮೀ ಬಳಿಕ ರಾತ್ರಿ ವೇಳೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು ಎಂದು MRM ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಹೇಳಿದ್ದರು.

  • ಹಲ್ಲೆಗೆರೆ ಶಂಕರ್ ಮನೆಯಲ್ಲಿ ‘ದೆವ್ವ’ ನಾಟಕ- ಅಮಾವಾಸ್ಯೆ ಮಧ್ಯರಾತ್ರಿ ಬೆಳಕಿನ ಸಂಚಾರ..!

    ಹಲ್ಲೆಗೆರೆ ಶಂಕರ್ ಮನೆಯಲ್ಲಿ ‘ದೆವ್ವ’ ನಾಟಕ- ಅಮಾವಾಸ್ಯೆ ಮಧ್ಯರಾತ್ರಿ ಬೆಳಕಿನ ಸಂಚಾರ..!

    ಬೆಂಗಳೂರು: ಅದು ಒಂದೇ ಕುಟುಂಬದ ಐವರು ನೇಣಿಗೆ ಶರಣಾಗಿದ್ದ ಪ್ರಕರಣ ಸಂಬಂಧ ಆ ಘಟನೆಯ ನಂತರ ಆ ಮನೆಯಲ್ಲಿ ದೆವ್ವಗಳ ಕಾಟ ಶುರುವಾಗಿದೆ. ಅಮಾವಾಸ್ಯೆ ದಿನಗಳಲ್ಲಿ ಯಾರ್ಯಾರೋ ಓಡಾಡ್ತಾರೆ, ವಿಚಿತ್ರ ಶಬ್ದಗಳು ಕೇಳ್ತಾವೆ ಅನ್ನೋ ಗುಸುಗುಸು ಶುರುವಾಗಿತ್ತು. ಇದೇ ಟೈಂನಲ್ಲಿ ಅದೊಂದು ರೋಚಕ ಘಟನೆ ವರದಿಯಾಗಿದೆ.

    ಹೌದು, ಕಳೆದ ಆರು ತಿಂಗಳ ಹಿಂದೆ ಬೆಂಗಳೂರಿನ ಮಾಗಡಿ ರೋಡ್‍ನ ಬ್ಯಾಡರಹಳ್ಳಿ ಬಳಿಯ ತಿಗಳಪಾಳ್ಯದಲ್ಲಿ ಅದೊಂದು ಭೀಕರ ಘಟನೆ ನಡೆದಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಮನೆಯ ಐವರು ಆತ್ಮಹತ್ಯೆಗೆ ಶರಣಾಗಿದ್ರು. ಆತ್ಮಹತ್ಯೆ ಮಾಡ್ಕೊಂಡು ಐದು ದಿನಗಳ ನಂತರ ವಿಚಾರ ಬೆಳಕಿಗೆ ಬಂದಿತ್ತು. ಇದಾದ ನಂತರ ಆ ಬಂಗಲೆಯಲ್ಲಿ ಯಾರು ಕೂಡ ವಾಸವಾಗಿಲ್ಲ. ಅವತ್ತಿನಿಂದ ಕರೆಂಟ್ ಕೂಡ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಿರೋವಾಗಲೇ ಅಲ್ಲೊಂದು ರೋಚಕ ಘಟನೆ ನಡೆದೋಗಿದೆ.

    ಮನೆಯಲ್ಲಿ ಕರೆಂಟ್ ಕಟ್ ಮಾಡಿದರು ಕೂಡ ಒಂದು ಊಹಾಪೋಹ ಹಬ್ಬಿತ್ತು. ಆ ಮನೆಯಲ್ಲಿ ಅಮಾವಾಸ್ಯೆ ದಿನಗಳಲ್ಲಿ ಲೈಟ್ ಆನ್ ಇರುತ್ತೆ, ವಿಚಿತ್ರ ರೀತಿಯ ಶಬ್ದಗಳು ಕೇಳ್ತಾವೆ, ಮನೆ ತುಂಬಾ ಯಾರ್ಯಾರೋ ಓಡಾಟ ನಡೆಸ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಅದರಂತೆ ಆ ಬಂಗಲೆಯ ಅಕ್ಕಪಕ್ಕದ ನಿವಾಸಿಗಳು ರಾತ್ರಿಯಾದ್ರೆ ಸಾಕು, ಆ ಮನೆ ಕಡೆಗೆ ತಿರುಗಿ ಕೂಡ ನೋಡ್ತಾ ಇರಲಿಲ್ಲ. ಆ ಬಂಗಲೆ ಬಗ್ಗೆ ಇಷ್ಟೇಲ್ಲಾ ಊಹಾಪೋಹಾಗಳು, ಮಾತುಗಳು ಕೇಳಿ ಬರ್ತಿರೋ ಬೆನ್ನಲ್ಲೆ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಶೀಘ್ರವೇ ಬೆಂಗಳೂರು-ನೆಲಮಂಗಲ ಫ್ಲೈಓವರ್ ಓಪನ್..!

    ಮನೆಯಲ್ಲಿ ಯಾರೂ ಇಲ್ಲ ಅಂತಾ ಗೊತ್ತಿದ್ರು ಸ್ಥಳೀಯರಿಗೆ ಕಳೆದ ಅಮಾವಾಸ್ಯೆ ದಿನ ರಾತ್ರಿ ಮನೆಯಲ್ಲಿ ಆಗಾಗ ಲೈಟ್ ಆನ್ ಆಗೋದು ಆಪ್ ಆಗೋದು ದೃಶ್ಯ ಕಾಣಿಸಿತ್ತು. ಇದನ್ನು ನೋಡಿದ ಸ್ಥಳೀಯರು ಮಾಲೀಕರ ಸಂಬಂಧಿಕರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ರು. ಇದೇ ವೇಳೆ ಸ್ಥಳಕ್ಕೆ ಬಂದ ಸಂಬಂಧಿಕರು ಆ ದೃಶ್ಯ ನೋಡಿ ಒಂದು ಕ್ಷಣ ಶಾಕ್ ಆದರು. ಆದರು ಕೂಡ ಧೈರ್ಯ ಮಾಡಿ ಮನೆಯೊಳಗೆ ಹೋಗುವ ತೀರ್ಮಾನ ಮಾಡಿದ್ರು. ಅದರಂತೆ ಬಾಗಿಲು ತೆಗೆದು ಭಯದಲ್ಲೇ ಒಳಗೆ ಹೋಗಿದ್ರು. ಆ ಅಮಾವಾಸ್ಯೆ ಕತ್ತಲಲ್ಲಿ ಮೆತ್ತಗೆ ಒಂದೊಂದೆ ಹೆಜ್ಜೆ ಹಾಕುತ್ತಿದ್ದಾಗಲೇ ವ್ಯಕ್ತಿಯೊಬ್ಬ ದೆವ್ವ ದೆವ್ವ ಅಂತಾ ಎದ್ನೋ ಬಿದ್ನೋ ಅಂತಾ ಹೊರಗೆ ಓಡಿದ್ದ. ಆ ಮಾತು ಕೇಳಿದ ಇತರರು ಕೂಡ ಅದೇ ವ್ಯಕ್ತಿಯ ಜೊತೆಗೆ ಹೊರಗೆ ಓಡಿದ್ರು.

    ಶಾಕಿಂಗ್ ಅಂದ್ರೆ ಹಾಗೇ ಮನೆಯಿಂದ ಕೂಗಿಕೊಂಡು ಹೊರಗೆ ಬಂದ ವ್ಯಕ್ತಿ ಕಳ್ಳನಾಗಿದ್ದ. ಭರತ್ ಅನ್ನೋ ಕಳ್ಳ ಅಮಾವಾಸ್ಯೆ ದಿನ ಆ ಮನೆಗೆ ಯಾರು ಬರೋಲ್ಲ ಅಂತಾ ತಿಳಿದು ಅವತ್ತು ಕಳ್ಳತನಕ್ಕೆ ಹೋಗಿದ್ದ. ಮನೆಯೊಳಗೆ ಟಾರ್ಚ್ ಹಾಕಿಕೊಂಡು ಕಳ್ಳತನ ಮಾಡ್ತಿದ್ದಾಗಲೇ, ಜನರು ಮನೆಯ ಒಳಗೆ ಎಂಟ್ರಿಯಾಗಿದ್ರು. ಈ ವೇಳೆ ಬೆದರಿದ ಕಳ್ಳ ದೇವರ ಮನೆಗೆ ಹೋಗಿ ಸೇರಿಕೊಂಡು ಇನ್ನೇನು ಸಿಕ್ಕಿಬೀಳುವ ವೇಳೆ ದೆವ್ವ ದೆವ್ವ ಅಂತಾ ಕೂಗಿಕೊಂಡು ಹೊರಗೆ ಬಂದಿದ್ದಾನೆ. ಅಷ್ಟರಲ್ಲಿ ಹೊರಗೆ ನಿಂತಿದ್ದ ಮತ್ತಷ್ಟು ಜನ ಆತನನ್ನು ಗುರುತಿಸಿ ಹಿಗ್ಗಾಮುಗ್ಗ ಥಳಿಸಿ ಬ್ಯಾಡರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ಕಳ್ಳನನ್ನು ಬಂಧಿಸಿದ ಪೊಲೀಸರು ಜೈಲಿಗೆ ಬಿಟ್ಟು ಬಂದಿದ್ದಾರೆ. ಆದರೆ ದೆವ್ವದ ಮನೆ ಅಂತಾ ಭಾವಿಸಿ ಒಳಗೆ ಹೋದ ಜನರಿಗೆ ಕಳ್ಳನನ್ನು ನೋಡಿ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: 8 ವರ್ಷದ ಹಿಂದೆ ಪ್ರೀತಿಸಿ ಮದ್ವೆಯಾದ- ಇದೀಗ ಕಾಣೆಯಾಗಿದ್ದಾಳೆಂದು ದೂರು ಕೊಟ್ಟು ಸಿಕ್ಕಿಬಿದ್ದ!

  • ರಾಯಚೂರಿನಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ – ಜೋಡಿ ಎತ್ತುಗಳಿಗೆ ಫುಲ್ ಡಿಮ್ಯಾಂಡ್

    ರಾಯಚೂರಿನಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ – ಜೋಡಿ ಎತ್ತುಗಳಿಗೆ ಫುಲ್ ಡಿಮ್ಯಾಂಡ್

    ರಾಯಚೂರು: ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಜೋರಾಗಿದೆ. ಕಳೆದೆರಡು ವರ್ಷಕ್ಕಿಂತಲೂ ಹೆಚ್ಚು ಸಂಭ್ರಮದಿಂದ ಜೋಡಿ ಮಣ್ಣೆತ್ತುಗಳನ್ನು ಖರೀದಿಸಿ ಜನರು ಪೂಜಿಸುತ್ತಿದ್ದಾರೆ.

    ಭಾರತೀಯ ಸಂಸ್ಕೃತಿಯಲ್ಲಿ ಮಣ್ಣೆತ್ತಿನ ಹಬ್ಬ ಬಹಳ ವಿಶೇಷವಾಗಿದ್ದು, ಮುಂಗಾರು ಮಳೆ ಉತ್ತಮವಾಗಿ ಬರಲಿ ಅಂತ ರೈತರು ಮಾತ್ರವಲ್ಲದೆ ಎಲ್ಲರೂ ಪ್ರಾರ್ಥಿಸುತ್ತಾರೆ. ಲಾಕ್ ಡೌನ್ ಬಳಿಕ ಬಂದಿರುವ ಹಬ್ಬದ ಸಂಭ್ರಮ ಜೋರಾಗಿರುವುದರಿಂದ ಮಣ್ಣೆತ್ತಿಗೆ ಈ ವರ್ಷ ಬೇಡಿಕೆ ಜಾಸ್ತಿಯಾಗಿದೆ. ಆದರೆ ಮಣ್ಣೆತ್ತು ಮಾಡುವವರ ಕೊರತೆ ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ. ಅಲ್ಲದೆ ಜನ ಮಣ್ಣೆತ್ತು ಖರೀದಿಗೆ ಬರುತ್ತಾರೋ ಇಲ್ಲವೋ ಅಂತ ಕುಂಬಾರರು ಕಡಿಮೆ ಎತ್ತುಗಳನ್ನ ಮಾಡಿದ್ದಾರೆ. ತಂಡೋಪತಂಡವಾಗಿ ಬಂದು ಜನ ಮಣ್ಣೆತ್ತು ಖರೀದಿಸುತ್ತಿದ್ದಾರೆ. ಮನೆಯಲ್ಲೇ ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ.

    ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಆಚರಿಸುವ ಮಣ್ಣೆತ್ತಿನ ಹಬ್ಬವನ್ನು ನಗರದ ಜನರು ಸಹ ಸಂಭ್ರಮಿಸುತ್ತಿದ್ದಾರೆ. 80 ರಿಂದ 100 ರೂಪಾಯಿಗೆ ಒಂದು ಜೋಡಿ ಎತ್ತುಗಳ ಮಾರಾಟ ನಡೆದಿದೆ. ಕಳೆದ ವರ್ಷ 40 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅಲ್ಲದೆ ಬೇಡಿಕೆಗೆ ಅನುಗುಣವಾಗಿ ಈ ವರ್ಷ ಎತ್ತುಗಳನ್ನ ಗ್ರಾಹಕರ ಮುಂದೆಯೇ ಮಾಡಿಕೊಡಲಾಗುತ್ತಿದೆ.  ಇದನ್ನೂ ಓದಿ: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?

  • ಅಮಾವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ

    ಅಮಾವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ

    ರಾಯಚೂರು: ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಆರಂಭ ಹಿನ್ನೆಲೆ ರಾಯಚೂರಿನಲ್ಲಿ ಕೊರೊನಾ ಹರಡುವಿಕೆ ಭೀತಿ ಮರೆತು ಭಕ್ತರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.

    ನಗರದ ಉರುಕುಂದಿ ಈರಣ್ಣ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಾಕ್‍ಡೌನ್ ಮಧ್ಯೆ ಅಮಾವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಇದರಿಂದ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲವನ್ನೂ ಮರೆತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

    ಮುನ್ನೆಚ್ಚರಿಕೆಯಾಗಿ ಕೆಲ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ನಗರದ ಚಂದ್ರಮೌಳೇಶ್ವರ ದೇವಾಲಯ ಸೇರಿ ಕೆಲವಡೆ ಭಕ್ತರಿಗೆ ನಿರ್ಭಂದ ಹೇರಿದ್ದರೂ ಭಕ್ತರು ದೇವಾಲಯಕ್ಕೆ ಬಂದು ಹೋಗುತ್ತಿದ್ದಾರೆ. ಅಮಾವಾಸ್ಯೆ ನಿಮಿತ್ಯ ತೆಂಗಿನ ಕಾಯಿ, ಹೂ, ಹಣ್ಣು ಖರೀದಿಗೆ ಮಾರ್ಕೆಟ್‍ನಲ್ಲಿ ಜನ ಮುಗಿಬಿದ್ದಿದ್ದರು. ರಾಯಚೂರು, ಸಿಂಧನೂರು ನಗರಗಳಲ್ಲಿ ಜುಲೈ 22ರವರೆಗೆ ಲಾಕ್‍ಡೌನ್ ಇದ್ದರೂ ಜನರಿಗೆ ಯಾವುದೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

    ನಗರದ ತೀನ್ ಕಂದಿಲ್‍ನಿಂದ ಸರಫ್ ಬಜಾರ್ ವರೆಗೆ ವ್ಯಾಪರ ಜೋರಾಗಿ ನಡೆದಿತ್ತು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ಪೊಲೀಸರು ಬಂದು ಜನರನ್ನು ಚದುರಿಸಿದ್ದಾರೆ. ಪೊಲೀಸರಿಗೆ ಹೆದರಿ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ಹಾಗೇ ಬಿಟ್ಟು ಓಡಿಹೋಗಿದ್ದಾರೆ. ಉಳಿದವರು ವ್ಯಾಪಾರ ನಿಲ್ಲಿಸಿ ಅಂಗಡಿಗಳನ್ನು ಮುಚ್ಚಿದ್ದಾರೆ.

  • ಭೂತಾಯಿಗೆ ಪೂಜೆ ಸಲ್ಲಿಸಿದ ರೈತರು

    ಭೂತಾಯಿಗೆ ಪೂಜೆ ಸಲ್ಲಿಸಿದ ರೈತರು

    ಕೊಪ್ಪಳ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ರೈತಾಪಿ ವರ್ಗದವರು ಎಳ್ಳು ಅಮಾವಾಸ್ಯೆಯ ದಿನದಂದು ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಜಮೀನಿನಲ್ಲಿ ಬೆಳೆದಿರುವ ಫಸಲಿಗೆ ಪೂಜೆ ಸಲ್ಲಿಸಿದ್ದಾರೆ.

    ಎಳ್ಳು ಅಮವಾಸ್ಯೆ ದಿನದಂದು ಗ್ರಹಣ ಹಿನ್ನೆಲೆಯಲ್ಲಿ ಇಂದು ರೈತರು ಎತ್ತು ಬಂಡಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿದ್ದರು. ಜೊತೆಗೆ ನೆರೆಹೊರೆಯವರು, ಸ್ನೇಹಿತರನ್ನು ಕರೆದುಕೊಂಡು ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಭೂಮಿಗೆ ಬಿತ್ತಿದ ಫಸಲು ಚೆನ್ನಾಗಿ ಬರಲಿ ಎಂದು ಬೆಳೆದು ನಿಂತಿರುವ ಬೆಳೆಗಳಿಗೆ ಹೊಲದಲ್ಲಿರುವ ಐದು ಕಲ್ಲುಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಹುಡಿ ತುಂಬಿದರು.

    ನೈವೇದ್ಯ ಮಾಡಿ ಆ ನೈವೇದ್ಯವನ್ನು ಇಡೀ ಹೊಲದ ತುಂಬೆಲ್ಲಾ ಚೆಲ್ಲಿ ತಮ್ಮನ್ನು ಕಾಪಾಡುವ ಭೂತಾಯಿಗೆ ಉಣಬಡಿಸುವರು. ಎಳ್ಳು ಹೊಳಿಗೆ, ಸೇಗಾ ಹೊಳಿಗೆ, ಸಜ್ಜಿ ರೋಟಿ, ಬಿಳಿಜೊಳದ ರೋಟಿ, ಸೇಗಾ ಚಟ್ನಿ, ಗುರೇಳ್ಳು ಚಟ್ನಿ, ಅನೇಕ ತಿಂಡಿ ತಿನಿಸುಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಹೊಲಕ್ಕೆ ಹೋಗಿ ಪೂಜೆ ಮಾಡಿ ಚರಗ ಚಲ್ಲಿದ್ದು ವಿಶೇಷವಾಗಿತ್ತು.

    ಊಟದ ಸವಿ:
    ಎಣ್ಣೆ ಬುಟ್ಟಿಯಲ್ಲಿ ತಂದ ಅಡುಗೆಯನ್ನು ಬಿಚ್ಚಿ ಕುಟುಂಬದವರು, ಬೀಗರು, ನೆರೆಹೊರೆಯವರು ಮತ್ತು ಸ್ನೇಹಿತರು ಸಾಮೂಹಿಕವಾಗಿ ಗಂಟೆಗಟ್ಟಲೇ ಊಟ ಸವಿದಿದ್ದಾರೆ. ಹೊಲದ ಫಸಲಿನ ಇಳುವರಿ ಕುರಿತು ‘ಕಾಕಾ ಈ ಸಲ ಗೋದಿ ಇಪ್ಪತ್ತು ಚೀಲ ಆದೀತನ, ಜ್ವಾಳಾ ಒಂದು ಮೂವತ್ತ ಚೀಲ ಆದೀತನ’ ಎಂದು ಲೆಕ್ಕಾಚಾರ ಹಾಕುತ್ತಾ ಊಟ ಸವಿದರು. ಮತ್ತೆ ಹೊಲದಲ್ಲಿನ ಕಡಲೆ ಗಿಡ ಕಿತ್ತುಕೊಂಡು ಸವಿಯುತ್ತಾ ಸಂಜೆಯಾಗುತ್ತಿದ್ದಂತೆ  ಮನೆಗೆ ಹೋಗಿದ್ದಾರೆ.

    ಹೊಲದಲ್ಲಿ ಉತ್ತಮ ಫಸಲು:
    ಹಿಂಗಾರಿ ಜೋಳ, ಕಡಲೆ, ಗೋಧಿ ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಗಳು ಚೆನ್ನಾಗಿ ಬಂದಿವೆ. ಎಳ್ಳು ಅಮಾವಾಸ್ಯೆ ರೈತ ಸಮುದಾಯದಲ್ಲಿ ಸಂಭ್ರಮ ಮನೆ ಮಾಡಿದೆ. ಎಂದಿನಂತೆಯೇ ಸಂಬಂಧಿಕರು, ಸ್ನೇಹಿತರಿಗೆ, ಆತ್ಮೀಯ ಒಡನಾಡಿಗಳಿಗೆ ಹೊಲಕ್ಕೆ ಊಟಕ್ಕೆ ಬರಲು ಆಹ್ವಾನ ನೀಡಿದ್ದರು. ಹೊಲದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಪೂಜೆ ಸಲ್ಲಿಸಿ, ಎಳ್ಳು ಅಮಾವಾಸ್ಯೆ ಆಚರಿಸಿದ್ದಾರೆ.

  • ಸಂಭ್ರಮದ ಎಳ್ಳು ಅಮಾವಾಸ್ಯೆ- ಭೂ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

    ಸಂಭ್ರಮದ ಎಳ್ಳು ಅಮಾವಾಸ್ಯೆ- ಭೂ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

    ಬಾಗಲಕೋಟೆ: ಜಿಲ್ಲೆಯಾದ್ಯಂತ ಎಳ್ಳು ಅಮಾವಾಸ್ಯೆಯನ್ನು ರೈತಾಪಿ ವರ್ಗದ ಜನ ಸಂಭ್ರಮದಿಂದ ಆಚರಿಸಿದ್ದು, ಅಮಾವಾಸ್ಯೆ ಅಂಗವಾಗಿ ಜಿಲ್ಲಾದ್ಯಂತ ರೈತರು ವಿಶೇಷ ತಿಂಡಿ, ತಿನಿಸುಗಳನ್ನ ಮಾಡಿಕೊಂಡು, ಬುತ್ತಿ ಕಟ್ಟಿಕೊಂಡು ತಮ್ಮ ತಮ್ಮ ಹೊಲಗಳಿಗೆ ಹೋಗಿ ಚರಗ ಚೆಲ್ಲಿ ಸಂಭ್ರಮಿಸಿದರು.

    ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲ ಕಡೆಗಳಲ್ಲೂ ಚರಗದ ಸಂಭ್ರಮ ಕಾಣಿಸಿತ್ತು. ತಾವೇ ತಯಾರಿಸಿದ ಅಡುಗೆಯನ್ನ ಭೂ ತಾಯಿಗೆ ನೈವೇದ್ಯೆ ನೀಡುವ ಮೂಲಕ, ಚರಗ ಚೆಲ್ಲಿ ಖುಷಿ ಪಟ್ಟರು. ರೈತರು ತಮ್ಮ ತಮ್ಮ ಕುಟುಂಬ ಸಮೇತ ಟ್ರ್ಯಾಕ್ಟರ್, ಚಕ್ಕಡಿ ಕಟ್ಟಿಕೊಂಡು ಹೊಲಗಳಿಗೆ ತೆರಳುವ ದೃಶ್ಯ ಸಾಮಾನ್ಯವಾಗಿತ್ತು.

    ಊರಿಗೆ ಸಮೀಪದಲ್ಲಿರುವ ರೈತರು ಹೊಲದ ಬದುಗಳಲ್ಲೇ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಹಬ್ಬಕ್ಕೆ ಕಳೆ ಕಟ್ಟುವಂತಿತ್ತು. ಚರಗಕ್ಕೆ ಎಂದು ಹೋಗುವುದೇ ದೊಡ್ಡ ಸಂಭ್ರಮವಾಗಿದ್ದು, ಬೆಳಗಿನ ಜಾವವೇ ಎದ್ದು ಎಳ್ಳು ಹೊಳಿಗೆ ಸೇರಿದಂತೆ ವಿವಿಧ ಆಹಾರ ಸಿದ್ಧ ಮಾಡಿಕೊಂಡು, ಅದನ್ನೆಲ್ಲವನ್ನು ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಹೊಲದ ತುಂಬೆಲ್ಲ ಹಾಕಿ ಶ್ರದ್ಧಾ ಭಕ್ತಿಯಿಂದ ನೈವೇದ್ಯ ಮಾಡಲಾಗುತ್ತದೆ. ಆ ಬಳಿಕವೇ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಸಂಭ್ರಮದಿಂದ ಊಟ ಮಾಡುವುದು ಹಬ್ಬದ ವಿಶೇಷ.

    ಜಿಲ್ಲೆಯ ಹುನಗುಂದ ಪಟ್ಟಣದ ಮಹಾಂತೇಶ್, ಕುಟುಂಬಸ್ಥರ ಜೊತೆ ಚಕ್ಕಡಿಯಲ್ಲಿ ತೆರಳಿ ಭೂತಾಯಿಗೆ ತಿಂಡಿ, ತಿನಿಸುಗಳ ನೈವೇದ್ಯ ಮಾಡಿ, ಕುಟುಂಬ ಸದ್ಯರೊಂದಿಗೆ ಊಟ ಸವಿದು ಸಖತ್ ಎಂಜಾಯ್ ಮಾಡಿದ್ದಾರೆ. ಚಕ್ಕಡಿಯಲ್ಲಿ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ಚರಗಕ್ಕೆ ಹೊರಟಿರುವ ದೃಶ್ಯಗಳು ಮನಮೋಹಕವಾಗಿದ್ದು, ನಾಳೆ ಬೆಳಗಿನ ಜಾವ ಸೂರ್ಯ ಗ್ರಹನ ಹಿನ್ನೆಯಲ್ಲಿ ಹಳ್ಳಿ ಭಾಗದ ಜನರು ಎಳ್ಳು ಅಮಾವಸ್ಯೆಯನ್ನು ಇಂದೇ ಆಚರಿಸಿದ್ದಾರೆ.

  • ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

    ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

    ವಿಜಯಪುರ: ಅಮಾವಾಸ್ಯೆ ಕಳೆದ ಮೇಲೆ ಅಧಿಕಾರ ತೆಗೆದುಕೊಳ್ತೇನೆ. ಅಮಾವಾಸ್ಯೆ ಕಾರಣ ಆರೋಗ್ಯ ಸಚಿವ ಸ್ಥಾನದ ಚಾರ್ಜ್ ತೆಗೆದುಕೊಂಡಿಲ್ಲ ಎಂದು ನೂತನ ಆರೋಗ್ಯ ಸಚಿವ ಶ್ರೀರಾಮುಲು ವಿಜಯಪುರದಲ್ಲಿ ಹೇಳಿದರು.

    ಈ ಹೇಳಿಕೆಯಿಂದ ಸಚಿವ ಶ್ರೀರಾಮುಲುಗೆ ಅಮವಾಸ್ಯೆ ಭಯ ಕಾಡುತ್ತಿದಿಯಾ ಎಂಬ ಮಾತುಗಳು ಎಲ್ಲಡೆ ಈಗ ದಟ್ಟವಾಗಿದ್ದು, ಮೂಢ ನಂಬಿಕೆಗೆ ಶ್ರೀರಾಮುಲು ಮೊರೆ ಹೋದರಾ ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.

    ಇದೇ ವೇಳೆ ರಾಮುಲು 4 ಸಾವಿರ ಬೆಲೆಯ ರೋಟೋ ಔಷಧಿ ಇನ್ನು ಮುಂದೆ ಉಚಿತ ಎಂದು ಘೋಷಣೆ ಮಾಡಿದರು. ಹೆರಿಗೆ ನಂತ್ರ ಮಗುವಿಗೆ ನೀಡುವ ಓರಲ್ ಔಷಧಿ ರೋಟೊ ಆಗಿದ್ದು, ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಟೋ ಉಚಿತವಾಗಿ ಹಾಕಲಾಗುತ್ತದೆ. ಸಾವಿರಾರು ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ರೋಟೋ ಔಷಧಿ ಹಾಕಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

  • ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

    ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

    – ತಿರುಪತಿಯಲ್ಲಿ ಬಿಎಸ್‍ವೈ ಪೂಜೆ

    ಚಿಕ್ಕಮಗಳೂರು: ಇಂದು ವರ್ಷದ ಮೊದಲ ಅಮಾವಾಸ್ಯೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಬಳಿಕದ ಪ್ರಪ್ರಥಮ ಅಮಾವಾಸ್ಯೆ. ಒಂದೆಡೆ ಪ್ರಚಂಡ ಮಾರುತವಾದ್ರೆ, ಮತ್ತೊಂದೆಡೆ ಕರ್ನಾಟಕ ರಾಜಕೀಯದಲ್ಲಿ ಮತ್ತೆ ಅಸ್ಥಿರತೆಯ ಭೀತಿ ಎದುರಾಗಿದೆ. ಯಾಕಂದ್ರೆ ಲೋಕಸಭಾ ಫಲಿತಾಂಶಕ್ಕೆ ಕೇವಲ 19 ದಿನವಷ್ಟೇ ಉಳಿದಿದೆ.

    ಇಂತಹ ಹೊತ್ತಲ್ಲಿ ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಹಾಗೂ ಇಬ್ಬರಿಗೂ ಅವರ ಮಕ್ಕಳದ್ದೇ ಚಿಂತೆಯಾಗಿದೆ. ತಮ್ಮ ಮಕ್ಕಳು ಗೆಲ್ಲುತ್ತಾರಾ ಇಲ್ವಾ ಅನ್ನೋ ಟೆನ್ಷನ್ ಆರಂಭವಾಗಿದೆ ಎನ್ನಲಾಗಿದೆ.

    ತಮ್ಮ ರಾಜಕೀಯ ವಾರಸುದಾರ ನಿಖಿಲ್ ಗೆಲ್ಲುತ್ತಾರಾ ಇಲ್ವಾ ಅನ್ನೋ ಚಿಂತೆ ಎಚ್‍ಡಿಕೆಗೆ ಕ್ಷಣಕ್ಷಣವೂ ಕಾಡುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಜೊತೆ ಸೇರಿಕೊಂಡು ಹುಟ್ಟುಹಾಕಿದ್ದ ಸಮ್ಮಿಶ್ರ ಸರ್ಕಾರ ಮೇ 23ರ ಬಳಿಕವೂ ಜೀವಂತವಾಗಿ ಉಸಿರಾಡುತ್ತಾ..? ಪದೇ ಪದೇ ಅಲುಗಾಡುತ್ತಿರುವ ಸಿಎಂ ಕುರ್ಚಿ ಪರ್ಮೆನೆಂಟ್ ಆಗಿ ಉರುಳುತ್ತಾ ಅನ್ನೋ ಆತಂಕದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಶಿವಮೊಗ್ಗದಲ್ಲಿ ಬಿಎಸ್‍ವೈಗೆ ಸುಪುತ್ರ ರಾಘವೇಂದ್ರ ಗೆಲ್ತಾನಾ ಅನ್ನೋ ಆತಂಕವಾದ್ರೆ, ಮತ್ತೊಂದೆಡೆ 54 ಗಂಟೆಯಷ್ಟೇ ಕೈಗೆ ದಕ್ಕಿದ್ದ ಸಿಎಂ ಕುರ್ಚಿ ಲೋಕಸಭಾ ಫಲಿತಾಂಶ ಬಳಿಕ ಮತ್ತೆ ಸಿಗುತ್ತಾ ಅನ್ನೋದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಕಾಡುತ್ತಿದೆ. ಪುತ್ರರ ರಾಜಕೀಯ ಭವಿಷ್ಯ ಮತ್ತು ಸಿಎಂ ಪಟ್ಟದ ಚಿಂತೆಯಲ್ಲಿರುವ ಸಿಎಂ ಮತ್ತು ಮಾಜಿ ಸಿಎಂ ಶನಿವಾರದ ಅಮಾವಾಸ್ಯೆಯಂದು ದೇವರ ಮೊರೆ ಹೋಗಿದ್ದಾರೆ.

    ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಐದು ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ಕುಮಾರಸ್ವಾಮಿ ಮತ್ತು ದೇವೇಗೌಡರು ಯಜ್ಞ ಯಾಗಾದಿಗಳಲ್ಲಿ ಬ್ಯುಸಿ ಆಗಿದ್ದಾರೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡ್ನಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಸತತ 5 ಗಂಟೆ ಪೂಜೆಯಲ್ಲಿ ಕೈಗೊಂಡಿದ್ದಾರೆ. ಸಂಜೆ ಐದೂವರೆಯಿಂದ ಶುರುವಾಗಿದ್ದ ಪೂಜೆ ರಾತ್ರಿ ಹತ್ತೂವರೆಗೆ ಮುಗೀತು.

    ಬಳಿಕ ತಲವಾನೆಯ ಗುಡ್ಡೇತೋಟ ರೆಸಾರ್ಟ್ ನಲ್ಲಿ ಸಿಎಂ ಉಳಿದುಕೊಂಡರು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಗಣಪತಿ ಹೋಮ, ರುದ್ರಯಾಗ ಆರಂಭವಾಗಿದೆ. ಸಿಎಂ, ಮಾಜಿ ಪ್ರಧಾನಿ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ 200 ಮೀಟರ್ ದೂರದವರೆಗೂ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇನ್ನು ಯಡಿಯೂರಪ್ಪ ಅವರು ಬೆಳಗ್ಗೆ 6.30ಕ್ಕೆ ತಿರುಪತಿಯಲ್ಲಿ ಪೂಜೆ ನೆರವೇರಿಸಿದ್ದಾರೆ.

  • ಜನಾರ್ದನ ರೆಡ್ಡಿಗೆ ದೀಪಾವಳಿ ಅಮಾವಾಸ್ಯೆ ಕಂಟಕ!

    ಜನಾರ್ದನ ರೆಡ್ಡಿಗೆ ದೀಪಾವಳಿ ಅಮಾವಾಸ್ಯೆ ಕಂಟಕ!

    ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಡೀಲ್ ಪ್ರಕರಣದಲ್ಲಿ ಸಿಲುಕಿದ ಬೆನ್ನಲ್ಲೇ ಅವರಿಗೆ ದೀಪಾವಳಿ ಅಮಾವಾಸ್ಯೆ ಕಂಟಕನಾ? ಎಂಬ ಅಂಶ ಚರ್ಚೆಗೆ ಕಾರಣವಾಗಿದೆ.

    ಈ ಹಿಂದೆಯೂ ಕೂಡ ಜನಾರ್ದನ ರೆಡ್ಡಿ ಅವರಿಗೆ ದೀಪಾವಳಿ ಅಮಾವಸ್ಯೆ ವೇಳೆಯೇ ಸಂಕಷ್ಟ ಎದುರಾಗಿತ್ತು. 2011ರಲ್ಲಿ ಜನಾರ್ದನ ರೆಡ್ಡಿ ಅವರನ್ನ ಮೊದಲ ಬಾರಿಗೆ ಬಂಧನ ಮಾಡುವ ವೇಳೆ ದೀಪಾವಳಿ ಅಮಾವಾಸ್ಯೆಗೆ ಕೇವಲ 15 ದಿನ ಮಾತ್ರ ಬಾಕಿ ಉಳಿದಿತ್ತು. 2012ರಲ್ಲಿಯೂ ಕೂಡ ದೀಪಾವಳಿ ಹಬ್ಬದ ಹೊತ್ತಲ್ಲೇ ಜಾಮೀನುಗಾಗಿ ಸಲ್ಲಿಕೆ ಮಾಡಿದ್ದ ವೇಳೆ ಬೇಲ್ ಡೀಲ್ ಆರೋಪದಲ್ಲಿ ಜನಾರ್ದನ ರೆಡ್ಡಿ ಸಿಲುಕಿದ್ದರು.

    ಮೈನಿಂಗ್ ಹಗರಣಕ್ಕೆ ಸಂಬಂದಿಸಿದಂತೆ ನವೆಂಬರ್ 20, 2015ರಂದು ಎಸ್‍ಐಟಿ ಅಧಿಕಾರಿಗಳು ರೆಡ್ಡಿ ಅವರನ್ನು ಬಂಧಿಸಿ ವಶಕ್ಕೆ ಪಡೆದಿದ್ದರು. ಸದ್ಯ ಆಂಬಿಡೆಂಟ್ ಡೀಲ್ ಪ್ರಕರಣದಲ್ಲೂ ದೀಪಾವಳಿಯ ಅಮಾವಸ್ಯೆ ವೇಳೆಯೇ ಬಂಧನ ಭೀತಿ ಎದುರಿಸುತ್ತಿದ್ದಾರೆ. ಸಿಸಿಬಿ ಪೊಲೀಸರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವಿಚಾರಣೆಗೆ ಸಿಸಿಬಿ ಕಚೇರಿಗೆ ಆಗಮಿಸಿದ ವೇಳೆಯೇ ಬಂಧಿಸುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು ಆದರೆ ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

    ಮಹಾಲಯ ಅಮವಾಸ್ಯೆ ಎಫೆಕ್ಟ್ – ದಸರಾ ಗಜಪಡೆ ತಾಲೀಮು ರದ್ದು

    ಮೈಸೂರು: ದಸರಾ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿತ್ತು. ಆದರೆ ಇಂದು ಮಹಾಲಯ ಅಮವಾಸ್ಯೆಯ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ರದ್ದಾಗಿದೆ.

    ಅರಮನೆ ಆವರಣದ ಒಳಗೆಯೇ ಆನೆಗಳು ವಿಶ್ರಾಂತಿ ಪಡೆಯುತ್ತಿವೆ. ಅರಮನೆ ಆವರಣದ ಒಳಗೆ ಒಂದೆರಡು ಸುತ್ತು ವಾಕಿಂಗ್ ಮಾಡಿದ ಗಜಪಡೆ ನಂತರ ವಿಶ್ರಾಂತಿಗೆ ಜಾರಿವೆ. ಅಮವಾಸ್ಯೆ ಆಗಿರುವ ಕಾರಣ ಅರಮನೆ ಆವರಣದಿಂದ ಆನೆಗಳನ್ನು ಹೊರಕ್ಕೆ ಕರೆದೊಯ್ದರೆ ಏನಾದರೂ ಅನಾಹುತ ಆಗಬಹುದೆಂಬ ಭಯ ಆನೆಯ ಮಾವುತರು ಮತ್ತು ಕಾವಾಡಿಗಳದ್ದು. ಈ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲೇ ಗಜಪಡೆಗೆ ತಾಲೀಮು ನೀಡಲಾಯಿತು. ಕಳೆದ ಅಮಾವಾಸ್ಯೆಯಂದು ಕೂಡ ದಸರಾ ಗಜಪಡೆಯ ತಾಲೀಮನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು.

    ಪ್ರತಿದಿನ ಅರಮನೆಯಿಂದ ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್‍ನಗರ ಬಂಬೂಬಜಾರ್, ಹೈವೇ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿದ್ದವು. ಬಳಿಕ ಅದೇ ಮಾರ್ಗವಾಗಿ ಆನೆಗಳು ಮೈಸೂರು ಅರಮನೆಗೆ ವಾಪಸ್ಸಾಗುತ್ತಿದ್ದವು. ಆದರೆ ಇಂದು ಅಮಾವಾಸ್ಯೆಯಾಗಿದ್ದರಿಂದ ತಾಲೀಮು ನಡೆಯುತ್ತಿಲ್ಲ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿ ಆನೆಗಳಿಗೆ ತಾಲೀಮು ನಡೆಸುವುದಿಲ್ಲ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv