Tag: ಅಮರ್ತ್ಯ

  • ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಮದುವೆ ದಿನಾಂಕ ನಿಗದಿ

    ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಮದುವೆ ದಿನಾಂಕ ನಿಗದಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿ.ಸಿದ್ಧಾರ್ಥ್ ಹೆಗಡೆ ಪುತ್ರ ಅಮರ್ತ್ಯ  ಹೆಗಡೆ ಇಬ್ಬರ ಮದುವೆಯನ್ನ ಫೆಬ್ರವರಿ 24, 2021ರಂದು ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ ಎಂದು ತಿಳಿದು ಬಂದಿದೆ. ಆದ್ರೆ ಐಶ್ವರ್ಯಾ ಮತ್ತು ಅಮತ್ರ್ಯ ಫೆಬ್ರವರಿ 14 ಪ್ರೇಮಿಗಳ ದಿನದಂದು ಮದುವೆಯಾಗುವ ಬಗ್ಗೆ ಇಚ್ಛಿಸಿದ್ದಾರೆ ಎನ್ನಲಾಗಿದೆ. ಫೆಬ್ರವರಿ 14 ಅಥವಾ 24 ಎರಡರಲ್ಲಿ ಒಂದು ದಿನ ಅಂತಿಮವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಏಪ್ರಿಲ್ 15ರಂದು ಶಿವಕುಮಾರ್ ಅವರ ಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಐಶ್ವರ್ಯಾ ಮತ್ತು ಅಮರ್ತ್ಯ ಉಂಗುರ ಬದಲಾಯಿಸಿಕೊಂಡಿದ್ದರು. ನವೆಂಬರ್ ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ನಿಶ್ಚಿತಾರ್ಥ ಮತ್ತು ಮದುವೆಯನ್ನ ಅರಮನೆ ಮೈದಾನದಲ್ಲಿ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳ ನಿಗದಿ ಅಂತಿಮವಾಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಏಪ್ರಿಲ್ 15ರಂದು ನಡೆದ ಸಮಾರಂಭದಲ್ಲಿ ಎರಡೂ ಕುಟುಂಬಗಳು ತಾಂಬೂಲ ಬದಲಿಸಿಕೊಂಡಿದ್ದವು. ನವೆಂಬರ್ ನಲ್ಲಿ ನಿಶ್ಚಿತಾರ್ಥ ಮತ್ತು ಫೆಬ್ರವರಿಯಲ್ಲಿ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು, ದಿನಾಂಕ ಅಂತಿಮಾಗಬೇಕಿದೆ.