Tag: ಅಮರೇ ಗೌಡ

  • ಕೊಪ್ಪಳ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಯಸಿದ್ರೆ, ಆ ಕ್ಷೇತ್ರ ಬಿಟ್ಟುಕೊಡ್ತೀವಿ: ಅಮರೇಗೌಡ

    ಕೊಪ್ಪಳ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಯಸಿದ್ರೆ, ಆ ಕ್ಷೇತ್ರ ಬಿಟ್ಟುಕೊಡ್ತೀವಿ: ಅಮರೇಗೌಡ

    ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಿಯೇ ಸ್ಪರ್ಧಿಸಲಿ. ಅವರು ಸ್ಪರ್ಧೆ ಬಯಸಿದರೆ ಕುಷ್ಟಗಿಯಿಂದ ನಾನು, ಕೊಪ್ಪಳದಿಂದ ಕೆ.ರಾಘವೇಂದ್ರ ಹಿಟ್ನಾಳ್ ಬಿಟ್ಟುಕೊಡುತ್ತೀವಿ ಎಂದು ಅಮರೇಗೌಡ ಬಯ್ಯಾಪುರ ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಈ ಶಕ್ತಿ ಇಲ್ಲ. ಕೊಪ್ಪಳ ಕ್ಷೇತ್ರಕ್ಕೆ ಬಂದರೂ ನಾನು ಬಿಟ್ಟು ಕೊಡಲು ರೆಡಿ ಇದ್ದೇನೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಕೆಲಸ ಮಾಡುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲೇ ಬಂದರೂ ಗೆಲ್ಲುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಕೋಮು, ಜಾತಿಗಳು ಮೊದಲಿನಿಂದಲೂ ಇವೆ. ಆದರೆ ಈಗ ಅವುಗಳನ್ನು ಪ್ರಚೋದನೆ ಮಾಡಲಾಗುತ್ತಿದೆ. ಇದು ರಾಜಕೀಯ ಕಾರಣಕ್ಕೆ ಪ್ರಚೋದನೆ ಮಾಡಲಾಗುವುದು ಎಂದು ಅಮರೇಗೌಡ ಹೇಳಿದರು. ಇದನ್ನೂ ಓದಿ: ಇಂದು 90 ಕೇಸ್ – ಬೆಂಗ್ಳೂರಲ್ಲಿ 85, ಐದು ಜಿಲ್ಲೆಗಳಲ್ಲಿ ತಲಾ 5 ಪ್ರಕರಣ

    ರಾಜ್ಯದಲ್ಲಿಯ ಶಾಖೋತ್ಪನ್ನ ಸ್ಥಾವರಗಳನ್ನು ಖಾಸಗಿ ನೀಡುವ ವದಂತಿ ಇದೆ. ಆರ್ ಟಿಪಿಎಸ್, ಬಿಟಿಪಿಎಸ್ ಹಾಗೂ ವೈಟಿಪಿಎಸ್ ಖಾಸಗಿಯವರಿಗೆ ನೀಡುತ್ತಾರೆ ಎಂಬ ವದಂತಿ ಇದೆ. ಇದು ಆತಂಕಕಾರಿ. ಏ.24 ರಂದು ಕುಷ್ಟಗಿಯಲ್ಲಿ ಸಂವಿಧಾನ ಉಳಿಸಿ, ಸಂವಿಧಾನ ರಕ್ಷಣೆ ಕಾರ್ಯಕ್ರಮ ವಿವಿಧ ಸಂಘಟನೆಗಳಿಂದ ಆಯೋಜನೆ, ಈ ಕಾರ್ಯಕ್ರಮವು ಪಕ್ಷಾತೀತವಾಗಿ ಆಯೋಜನೆ ಮಾಡಲಾಗಿದೆ. ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಸೇರಿ ಭಾಗಿಯಾಗುತ್ತಿದ್ದಾರೆ ಎಂದರು.

    ಸಂವಿಧಾನವನ್ನು ಉಳಿಸಿಕೊಳ್ಳುವುದರ ಜೊತೆಗೆ ಇನ್ಜಷ್ಟು ಬಡವರಿಗೆ ಯೋಜನೆ ನೀಡುವ ಕುರಿತು ಚರ್ಚೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ಸಂವಿದಾನದ ಬದಲಾವಣೆ ಯಾದರೆ, ಸಮಾಜದಲ್ಲಿ ಆತಂಕವಿದೆ, ಸಂವಿದಾನ ಬದಲಾವಣೆ ಬೇಡ ಸಂವಿಧಾನ ಗಟ್ಟಿಗೊಳಿಸಬೇಕು, ಸಂವಿಧಾನ ತಿದ್ದಪಡಿ ಸಹಜ. ಆದರೆ ಮೀಸಲಾತಿ ವ್ಯವಸ್ಥೆ ಬದಲಾಗಿಲ್ಲ. ಸಂವಿಧಾನ ತಿದ್ದುಪಡಿಯಾಗಲಿ, ಸಂವಿಧಾನ ಬದಲಾವಣೆ ಬೇಡ ಎಂದರು.

  • ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಈಗ ಹೇಳೋದು ತಪ್ಪು: ಅಮರೇಗೌಡ

    ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ ಈಗ ಹೇಳೋದು ತಪ್ಪು: ಅಮರೇಗೌಡ

    ಕೊಪ್ಪಳ: ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಈಗ ಹೇಳೋದು ತಪ್ಪು ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಹೇಳಿದ್ದಾರೆ.

    ಕೊಪ್ಪಳದ ಬಸಾಪುರದಲ್ಲಿ ಮಾತನಾಡಿದ ಶಾಸಕ, ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಮಾಡೋದು ಈಗ ಸೂಕ್ತವಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾವು ಹೇಳಿದಂತೆ ಮುಖ್ಯಮಂತ್ರಿ ಮಾಡುವುದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ. ಹೀಗಾಗಿ ಯಾರೂ ಅದರ ಬಗ್ಗೆ ಪ್ರಸ್ತಾಪ ಮಾಡಬಾರದು. ಈ ಬಗ್ಗೆ ಜಮೀರ್ ಅಹಮ್ಮದ್ ಗೆ ಈಗಾಗಲೇ ಪಕ್ಷ ನಿರ್ದೇಶನ ಕೊಟ್ಟಿದೆ. ಅವರು ಪದೇ ಪದೇ ಹೇಳೋದು ಸರಿಯಲ್ಲ. ಹೀಗೆ ಹೇಳುವುದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದರು.

    ಈ ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಿದ್ರೆ ಸಿದ್ದರಾಮಯ್ಯರನ್ನೇ ಮುಖ್ಯಮಂತ್ರಿ ಮಾಡ್ತಾರೆ. ಅದರಲ್ಲಿ ಏನಿದೆ? ಆದರೆ ಇದನ್ನ ತೀರ್ಮಾನ ಮಾಡೋದು ಹೈಕಮಾಂಡ್. ಮುಂದಿನ ಸಿಎಂ ಬಗ್ಗೆ ಈ ಸಮಯದಲ್ಲಿ ಹೇಳುವ ಅವಶ್ಯಕತೆ ಇಲ್ಲ. ಸೂಕ್ತ ಸಮಯದಲ್ಲಿ ಇದನ್ನು ಹೇಳಬೇಕು. ಇನ್ನೂ ಎರಡು ವರ್ಷದ ಬಳಿಕ ಚುನಾವಣೆ ಇದೆ. ಹೈಕಮಾಂಡ್ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ್ರೆ ನಾವು ಅದನ್ನೇ ಹೇಳ್ತೀವಿ ಅಂದ್ರು. ಇದನ್ನೂ ಓದಿ: ಜಮೀರ್ ಮೊದಲು ಬಿಎಸ್‍ವೈ ಮನೆ ವಾಚ್‍ಮೆನ್ ಆಗಿ: ರೇಣುಕಾಚಾರ್ಯ

    ಬಿಜೆಪಿಯವರ ಬಗ್ಗೆ ನಾವು ಮಾತಾಡೋದು ಸರಿಯಲ್ಲ. ಆದರೆ ಅಮರೇಗೌಡ ರಾಜಕಾರಣ ಮಾಡ್ತಾರೆ ಅಂತ ಕುಷ್ಟಗಿಯ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳುತ್ತಾರೆ. ಹಾಗಾದ್ರೆ ನಾವು ರಾಜಕಾರಣ ಮಾಡೋಕೆ ಬಂದೀವಾ? ದನಕಾಯೋಕೆ ಬಂದೀವಾ ಎಂದರು. ಇದನ್ನೂ ಓದಿ: ಎಚ್‍ಡಿಕೆ ಸರ್ಕಾರ ಬೀಳಿಸಲು ಯಾರು ಷಡ್ಯಂತ್ರ ಮಾಡ್ತಿಲ್ಲ ಜಮೀರ್ ಅಹಮ್ಮದ್

  • ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ: ಅಮರೇಗೌಡ

    ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ: ಅಮರೇಗೌಡ

    ಕೊಪ್ಪಳ: ಪ್ರತಿಯೊಬ್ಬ ಮನುಷ್ಯನಿಗೂ ಡ್ರಗ್ಸ್ ಅವಶ್ಯಕತೆ ಇದೆ. ಡ್ರಗ್ಸ್ ಏನು ಮನುಷ್ಯನನ್ನ ಬಿಟ್ಟು ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಹಿಂದೆ ರಾಜಮಹಾರಾಜರ ಕಾಲದಿಂದಲೂ ನಶೆ ಮಾಡುವ ಪದ್ಧತಿ ಬಂದಿದೆ. ಡ್ರಗ್ಸ್ ಕೂಡ ಒಂದು ನಶೆ ಮಾಡುವ ವಸ್ತು, ಈಗ ಬೇರೆ ಬೇರೆ ವೆರೈಟಿ ನಶೆ ಮಾಡುವ ವಸ್ತುಗಳು ಕಂಡು ಹಿಡಿದಿದ್ದಾರೆ. ಡ್ರಗ್ಸ್ ವಸ್ತುವನ್ನ ಸಿನಿಮಾ ನಟ-ನಟಿಯರು ಹೆಚ್ಚು ಉಪಯೋಗ ಮಾಡುತ್ತಿರುವುದು ತಪ್ಪು ಎಂದರು.

    ಸಮಾಜದಲ್ಲಿ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಮಾಡಿ ಈಗ ಅದೇ ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದು ತಪ್ಪು. ಯಾವುದೇ ಮಾಧ್ಯಮದವರು ಇದನ್ನು ಪ್ರಸಾರ ಮಾಡಬಾರದು. ಅವರಿಗೆ ಅಂಜಿಕೆ ಆಗಬೇಕು. ಗೌಪ್ಯವಾಗಿ ಶಿಕ್ಷೆ ನೀಡಬೇಕು ಎಂದು ಹೇಳಿದರು.

    ರಾಜಕಾರಣಿಗಳು ವೈಯಕ್ತಿಕವಾಗಿ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದೇ ಇರುತ್ತಾರೆ. ಎಲ್ಲೋ ಒಬ್ಬ ಮಹಾತ್ಮಗಾಂಧಿ ತರಹ ಇರುತ್ತಾರೆ. ಅದಕ್ಕೆ ನಾವೇನು ಮಾಡಕ್ಕಾಗಲ್ಲ. ಡ್ರಗ್ಸ್ ವಿಚಾರದಲ್ಲಿ ಈಗ ಜಾಗೃತಿ ಬಂದಿದೆ. ಇದನ್ನ ಇಲ್ಲೆ ಬಿಟ್ಟು ಬೇರೆ ವಿಷಯವನ್ನ ಸೃಷ್ಟಿ ಮಾಡಬೇಕೆಂದರು.

    ಮನುಷ್ಯರಂದ್ರೆ ನಶೆಗೆ ದಾಸನಾಗೋದು ಸಹಜ. ತಿಳುವಳಿಕೆ ಇದ್ದೋರು ಕಡಿಮೆ ಮಾಡ್ತಾರೆ, ತಿಳುವಳಿಕೆ ಇಲ್ಲದೋರು ಹೆಚ್ಚು ಮಾಡುತ್ತಾರೆ. ನಾನಂತು ಅಫೀಮು, ಸಿಗರೇಟು ಸೇದುವವನಲ್ಲ. ಯಾವ ಕ್ಲಬ್ ಗೂ ಹೋಗುವವನಲ್ಲ, ನನ್ನದೇನಾದರೂ ಇದ್ದರೆ ಹೊರಹಾಕಿ ಎಂದು ಸವಾಲೆಸೆದರು.