Tag: ಅಭ್ಯರ್ಥಿ

  • ಮತಹಾಕದ್ದಕ್ಕೆ ತಾನು ಉಗುಳಿದ್ದನ್ನು ಯುವಕನಿಗೆ ತಿನ್ನಿಸಿದ ಜನನಾಯಕ

    ಮತಹಾಕದ್ದಕ್ಕೆ ತಾನು ಉಗುಳಿದ್ದನ್ನು ಯುವಕನಿಗೆ ತಿನ್ನಿಸಿದ ಜನನಾಯಕ

    ಪಾಟ್ನಾ: ಜನನಾಯನೊಬ್ಬ ತನಗೆ ಮತಹಾಕಲಿಲ್ಲ ಎಂಬ ಕಾರಣಕ್ಕೆ ತಾನು ಉಗುಳಿದ್ದನ್ನು ತಿನ್ನುವಂತೆ ಯುವಕನೊಬ್ಬನಿಗೆ ಒತ್ತಾಯಿಸಿರುವ ಅಮಾನವೀಯ ಘಟನೆ ಬಿಹಾರದ ಔರಂಗಾಬಾದ್‍ನಲ್ಲಿ ನಡೆದಿದೆ.

    ಅಭ್ಯರ್ಥಿ ಬಲವಂತ್ ಕುಮಾರ್ ಸೋಲಿನ ಬಳಿಕ ಇಬ್ಬರು ಯುವಕರಾದ ಅನಿಲ್ ಕುಮಾರ್ ಮತ್ತು ಮಂಜೀತ್‍ಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಒಳಿಕ ನೆಲದ ಮೇಲೆ ಉಗುಳಿದನ್ನು ಒತ್ತಾಯಿಸಿ ತಿನ್ನಿದ್ದಾನೆ. ಇದನ್ನೂ ಓದಿ: ಕನ್ನಡ ಕಾರ್ಯಕರ್ತರಿಂದ MES ಮುಖಂಡನ ಮುಖಕ್ಕೆ ಮಸಿ

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಅವರು ಅಂಬಾ ಪೊಲೀಸರಿಗೆ ನೀಡಿದ ಸೂಚನೆ ಮೇರೆಗೆ ಆರೋಪಿ ಬಲ್ವಂತ್ ಸಿಂಗ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವಕರ ವಿಚಾರಣೆ ನಡೆಸಲಾಗಿದೆ.

    ಆರೋಪಿ ಮುಖಂಡ ಗ್ರಾಮಾಂತರ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದನು. ಇದೀಗ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗುವುದಾಗಿ ಎಂದು ಎಸ್ಪಿ ಕಾಂತೇಶ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದು: ಓವೈಸಿ

  • ಸಿಂದಗಿ, ಹಾನಗಲ್ ಉಪ ಚುಣಾವಣೆ- ಇಂದು ಹೈಕಮಾಂಡ್ ಕೈ ಸೇರಲಿದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

    ಸಿಂದಗಿ, ಹಾನಗಲ್ ಉಪ ಚುಣಾವಣೆ- ಇಂದು ಹೈಕಮಾಂಡ್ ಕೈ ಸೇರಲಿದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

    ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಇಂದು ಹೈಕಮಾಂಡ್‍ಗೆ ಕಳುಹಿಸಲಿದೆ. ಇಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಹ ನಡೆಯಲಿದೆ.

    ಹಾನಗಲ್‍ನಲ್ಲಿ ಸಂಸದ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಉದಾಸಿ ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉದಾಸಿ ತಂದೆ ಸಿ.ಎಂ.ಉದಾಸಿ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಜೊತೆಗೆ ಮಾಜಿ ಎಂಎಲ್‍ಸಿಗಳಾದ ಶಿವರಾಜ್ ಸಜ್ಜನರ್, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಇಳಿಗೇರ್, ಸಿ.ಆರ್.ಬಳ್ಳಾರಿ ಸಹ ಬಿಜೆಪಿ ಟಿಕೆಟ್‍ಗಾಗಿ ಸ್ಪರ್ಧೆಯಲ್ಲಿದ್ದಾರೆ. ಇದನ್ನೂ ಓದಿ: ಅಡುಗೆ ಎಣ್ಣೆ ಇನ್ನಷ್ಟು ದುಬಾರಿ

    ಪತ್ನಿಗೆ ಟಿಕೆಟ್ ಕೊಡಿಸುವ ಸಲುವಾಗಿ ಮೂರು ದಿನಗಳಿಂದ ಶಿವಕುಮಾರ್ ಉದಾಸಿ ಬೆಂಗಳೂರಲ್ಲೇ ಬೀಡು ಬಿಟ್ಟಿದ್ದು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಅನುಕಂಪದ ಲೆಕ್ಕಾಚಾರ ಹಾಕಿದರೆ ಆಗ ಸಿ.ಎಂ.ಉದಾಸಿ ಸೊಸೆ ರೇವತಿ ಉದಾಸಿಯೇ ಅಭ್ಯರ್ಥಿ ಆಗಬಹುದು. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಇನ್ನು ಸಿಂದಗಿ ಚುನಾವಣಾ ಉಸ್ತುವಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಗಲಿಗೆ ಹಾಕುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಆಗಿದ್ದು, ಬೆಂಗಳೂರಲ್ಲೇ ಇದ್ದು ಲಾಬಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

  • ಸಿಂಧಗಿ ಉಪ ಚುನಾವಣೆ – ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ

    ಸಿಂಧಗಿ ಉಪ ಚುನಾವಣೆ – ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ

    ಬೆಂಗಳೂರು/ವಿಜಯಪುರ: 2023ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸೀಟುಗಳನ್ನು ನೀಡುವುದಾಗಿ ಪ್ರಕಟಿಸಿದ್ದ ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅದಕ್ಕೆ ಮುನ್ನುಡಿ ಎಂಬಂತೆ ಸಿಂಧಗಿ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯನ್ನಾಗಿ ನಾಜಿಯಾ ಶಕೀಲಾ ಅಂಗಡಿ ಅವರನ್ನು ಆಯ್ಕೆ ಮಾಡಿದ್ದಾರೆ.

    ನಾಜಿಯಾ ಶಕೀಲಾ ಅಂಗಡಿ ಅವರು MA, B.ed ಪದವೀಧರರಾಗಿದ್ದು, ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಸಮಾಜಮುಖಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಾಜಿಯಾ ಶಕೀಲಾ ಅಂಗಡಿ ಅವರು ಅತ್ಯುತ್ತಮ ಅಭ್ಯರ್ಥಿ ಆಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಲ್ಲುವ ಮಹಿಳೆಯಾಗಿದ್ದಾರೆ. ಪಕ್ಷನಿಷ್ಠೆಯ ಜತೆಗೆ ಪ್ರಾಮಾಣಿಕ ಹಾಗೂ ಸೇವಾ ಮನೋಭಾವ ಹೊಂದಿರುವ ನಾಜಿಯಾ ಶಕೀಲಾ ಅಂಗಡಿ ಅವರನ್ನು ಸಮಸ್ತ ಸಿಂಧಗಿ ಮತದಾರರು ಆಶೀರ್ವದಿಸಿ ಆಯ್ಕೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ

    ಈಗಾಗಲೇ ಹಾನಗಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ Be, M tech ಪದವೀಧರರಾಗಿರುವ ನಿಯಾಜ್ ಶೇಕ್ ಅವರನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಆಯ್ಕೆ ಮಾಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದ್ಯಾವಂತರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಜನರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ

  • ಮತದಾರರಿಗೆ ಸಿಹಿ ಹಂಚಿದ ಸೋತ ಅಭ್ಯರ್ಥಿ..!

    ಮತದಾರರಿಗೆ ಸಿಹಿ ಹಂಚಿದ ಸೋತ ಅಭ್ಯರ್ಥಿ..!

    ಚಿಕ್ಕಬಳ್ಳಾಪುರ: ಗೆದ್ದ ಬಳಿಕ ಖುಷಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಸೋತ ಬಳಿಕವೂ ಮತದಾರರಿಗೆ ಸಿಹಿ ಹಂಚುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಗೌರಿಬಿದನೂರು ತಾಲೂಕಿನ ಗಂಗಸಂದ್ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಿಂದ ಸಿಹಿ ಹಂಚಿಕೆ ಮಾಡಲಾಗಿದೆ. ವಿಶೇಷ ಅಂದ್ರೆ ಪರಾಜಿತ ಅಭ್ಯರ್ಥಿ ಸುನಿಲ್ ಕುಮಾರ್ ಅವರು ಮನೆ ಮನೆಗೆ ತೆರಳಿ ಮತದಾರರಿಗೆ ಸಿಹಿ ಪಾಕೆಟ್ ಹಂಚಿದ್ದಾರೆ.

    ಸುನೀಲ್ ಕುಮಾರ್ ಅವರು ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇವಲ 2 ಮತಗಳ ಅಂತರದಿಂದ ಸೋಲನುಭವಿಸಿದ್ದರು.

  • ಜೈಲಿನಿಂದ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗೆ ಗೆಲುವು..!

    ಜೈಲಿನಿಂದ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗೆ ಗೆಲುವು..!

    ಮಡಿಕೇರಿ: ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಮ್ಮೆಗುಂಡಿ ಕ್ಷೇತ್ರದ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ. ಸತತ ನಾಲ್ಕನೇ ಬಾರಿಗೆ ಜಯಭೇರಿ ಸಾಧಿಸಿರುವ ಬೋಪಣ್ಣ, ಕೊನೆ ಕ್ಷಣದಲ್ಲಿ ಪಾಲಿಬೆಟ್ಟ ಪಂಚಾಯ್ತಿ ಎಮ್ಮೆಗುಂಡಿ ವಾರ್ಡ್‍ನಿಂದ ಸ್ಪರ್ಧಿಸಿ ಜೈಲಿನಿಂದ ಬಿಡುಗಡೆಯಾಗಿ ಪ್ರಚಾರ ನಡೆಸಿದ್ದರು.

    ಬೋಪಣ್ಣ ಅವರು ಎರಡು ಅವಧಿಗೆ 10 ವರ್ಷ ಪಾಲಿಬೆಟ್ಟ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಬೋಪಣ್ಣ ಸೇವೆ ಸಲ್ಲಿಸಿದ್ದರು. ಈ ಬಾರಿ ಚುನಾವಣೆಗೆ ನಿಲುವ ಎಲ್ಲಾ ತಯಾರಿಸುತ್ತಿರುವ ಹಿನ್ನೆಲೆಯಲ್ಲಿ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಅದರೂ ಪಂಚಾಯ್ತಿ ಚುನಾವಣೆಗೆ ನಿಲ್ಲಬೇಕು ನಾಮಪತ್ರ ಸಲ್ಲಿಕೆ ಮಾಡಲು ಅಸಾಧ್ಯವಾಗಿತ್ತು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಅವರ ಮೂಲಕ ಜಾಮೀನು ಪಡೆಯಲು ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿದರು. ಜಾಮೀನು ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಒಪ್ಪಿಗೆ ಪಡೆದು ಜೈಲಿನಿಂದಲೇ ಬೋಪಣ್ಣ ಸೂಚಕರ ಸಹಾಯದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು.

     

    ಅಕ್ಕನ ವಿರುದ್ಧ ತಂಗಿ ಭರ್ಜರಿ ಗೆಲುವು:
    ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯ್ತಿಯಲ್ಲಿ ಅಕ್ಕನ ವಿರುದ್ಧ ತಂಗಿಯ ಭರ್ಜರಿ ಗೆಲುವು ಸಾಧಿಸಿದ್ದಾರೆ.ಬಿಳಿಗೇರಿ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಾವತಿ ಕೇವಲ 80 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ.

  • ಗ್ರಾ.ಪಂ. ಚುನಾವಣೆ ದಿನವೇ ಅಭ್ಯರ್ಥಿ ನೇಣಿಗೆ ಶರಣು

    ಗ್ರಾ.ಪಂ. ಚುನಾವಣೆ ದಿನವೇ ಅಭ್ಯರ್ಥಿ ನೇಣಿಗೆ ಶರಣು

    ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ದಿನವೇ ಅಭ್ಯರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.

    ದಾಮೋದರ್ ಯಲಿಗಾರ್ ಆತ್ಮಹತ್ಯೆಗೆ ಶರಣಾದ ಗರಗ ಗ್ರಾಮದ 2ನೇ ವಾರ್ಡಿನ ಅಭ್ಯರ್ಥಿ. ಚುನಾವಣೆಯಲ್ಲಿ ಸೋಲಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ದಾಮೋದರ್ ಅ ವರ್ಗದಡಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಘಟನೆಯ ಸುದ್ಧಿ ತಿಳಿಯುತ್ತಿದಂತೆ ಗ್ರಾಮಸ್ಥರು ಮನೆ ಮುಂದೆ ಜಮಾವಣೆಯಾಗಿದ್ದು, ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

    ದಾಮೋದರ ಯಲಿಗಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿದ್ದರು. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಾಗಿದ್ದ ದಾಮೋದರ್, ವಿಶಾಲ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು.

     

  • ಯೋಧನ ಪ್ರಾಣ ರಕ್ಷಿಸಿ, ತನ್ನ ಕೈಕಳೆದುಕೊಂಡ ದಿಟ್ಟೆ ಕೇರಳ ಬಿಜೆಪಿ ಅಭ್ಯರ್ಥಿ!

    ಯೋಧನ ಪ್ರಾಣ ರಕ್ಷಿಸಿ, ತನ್ನ ಕೈಕಳೆದುಕೊಂಡ ದಿಟ್ಟೆ ಕೇರಳ ಬಿಜೆಪಿ ಅಭ್ಯರ್ಥಿ!

    – ಯೋಧನ ರಕ್ಷಿಸಿದ್ದು ಹೇಗೆ..?
    – ವಿಕಾಸ್‍, ಜ್ಯೋತಿಯ ಪ್ರೇಮ್ ಕಹಾನಿ ಇಲ್ಲಿದೆ

    ತಿರುವನಂತಪುರಂ: ತನ್ನ ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ ನಂತರ ಆತನನ್ನೇ ಮದುವೆಯಾದ ದಿಟ್ಟ ಮಹಿಳೆ ಇದೀಗ ಮತ್ತೊಂದು ಸಹಾಸಕ್ಕೆ ಕೈ ಹಾಕಿದ್ದು, ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಹೌದು. ಛತ್ತೀಸ್ ಗಢ ಮೂಲದ ಜ್ಯೋತಿ(30) ಪಾಲಕ್ಕಾಡ್ ಜಿಲ್ಲೆಯ ಕೊಲಂಗೋಡ್ ಬ್ಲಾಕ್ ಪಂಚಾಯತ್‍ನ ಪಾಲತ್ತಲ್ಲ್ ಡಿವಿಷನ್ ಬಿಜೆಪಿ ಅಭ್ಯರ್ಥಿ. ಇವರು ಕೇರಳ ಮೂಲದ ಸಿಐಎಸ್‍ಎಫ್ ಯೋಧರೊಬ್ಬರ ಜೀವ ಉಳಿಸಿದಲ್ಲದೇ ಅವರನ್ನೇ ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದು, ಈಗಾಗಲೇ ಜನಮೆಚ್ಚುಗೆ ಪಡೆದಿದ್ದಾರೆ.

    ಯೋಧನ ಜೀವ ಉಳಿಸಿದ ದಿಟ್ಟೆ:
    2010 ಜನವರಿ 3ರಂದು ಜ್ಯೋತಿ ತನ್ನ ಕಾಲೇಜು ಹಾಸ್ಟೆಲಿನಿಂದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದೇ ಬಸ್ಸಿನ ಮುಂದಿನ ಸೀಟಿನಲ್ಲಿ ಯೋಧ ವಿಕಾಸ್ ಕುಳಿತಿದ್ದು, ನಿದ್ದೆಗೆ ಜಾರಿದ್ದರು. ಅಲ್ಲದೆ ತಮ್ಮ ತಲೆಯನ್ನು ಕಿಟಿಕಿಯಿಂದ ಹೊರಗಡೆ ಹಾಕಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಟ್ರಕ್ ಒಂದು ಎದುರಿನಿಂದ ಅಡಾದಿಡ್ಡಿಯಾಗಿ ಬರುತ್ತಿತ್ತು. ಇದನ್ನು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಜ್ಯೋತಿ ಗಮನಿಸಿದ್ದಾರೆ.

    ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿದ್ದ ಜ್ಯೋತಿ ಮುಂದೆ ಬಂದು ತನ್ನ ಬಲಗೈಯಿಂದ ವಿಕಾಸ್‍ರ ತಲೆಯನ್ನು ಕಿಟಿಕಿ ಒಳಕ್ಕೆ ತಳ್ಳಿ ಸ್ವತಃ ಕೈಯನ್ನು ಕಳೆದುಕೊಂದು ಸೈನಿಕನ ಜೀವ ರಕ್ಷಿಸಿದ್ದಾರೆ. ಇತ್ತ ನಿದ್ದೆಯಿಂದ ಎಚ್ಚರವಾಗಿ ವಿಕಾಸ್ ತನ್ನ ಜೀವ ರಕ್ಷಿಸಿದ ಜ್ಯೋತಿಯನ್ನು ತಕ್ಷಣ ಆಸ್ಪತ್ರೆಗೆ ಒಯ್ದರೂ ಕೈಯನ್ನು ಜೋಡಿಸಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

    ದುರಂತ ಘಟನೆಯಲ್ಲಿ ಆರಂಭವಾದ ಯೋಧನ ಪ್ರೇಮ್ ಕಹಾನಿ 2011ರಲ್ಲಿ ಮದುವೆಯವರೆಗೆ ತಲುಪಿ, ಇಂದು ಪಾಲಕ್ಕಾಡ್ ನಲ್ಲಿ 2 ಮಕ್ಕಳ ಜೊತೆ ಸುಖವಾದ ಜೀವನ ಸಾಗಿಸುತ್ತಿದ್ದಾರೆ. ಘಟನೆ ಸಂದರ್ಭದಲ್ಲಿ ಜ್ಯೋತಿ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದರು. ಆದರೆ ತನ್ನ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ್ದಾರೆ. ಸದ್ಯ ಕೇರಳದಲ್ಲಿರುವ ಜ್ಯೋತಿ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೊಡೆ ಬ್ಲಾಕ್ ಪಂಚಾಯ್ತಿಯ ಪಾಲತ್ತಲ್ಲ್ ಡಿವಿಷನ್ ನ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಈ ಸಂಬಂಧ ಮಾತನಾಡಿರುವ ಜ್ಯೋತಿ, ನಾನು ಪ್ರಧಾನಿ ಮೋದಿಯವರ ರಾಜಕಾರಣದಿಂದ ಆಕರ್ಷಿತಳಾಗಿದ್ದೇನೆ. ಅಭ್ಯರ್ಥಿಯಾಗುವಂತೆ ಪಕ್ಷವೇ ನನ್ನನ್ನು ಕೆಳಿದಾಗ ಇಲ್ಲ ಎನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಮನೆಯವರಿಂದಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಆದರೆ ಜನ ನನಗೆ ಮತ ಹಾಕ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

  • ಕೆಪಿಟಿಸಿಎಲ್‌ ವಿಳಂಬ ಧೋರಣೆಗೆ ಸಿಡಿದ ಅಭ್ಯರ್ಥಿಗಳು

    ಕೆಪಿಟಿಸಿಎಲ್‌ ವಿಳಂಬ ಧೋರಣೆಗೆ ಸಿಡಿದ ಅಭ್ಯರ್ಥಿಗಳು

    ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌) ಸೇರಿದಂತೆ 6 ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಂತೆ ಅಭ್ಯರ್ಥಿಗಳು ಒತ್ತಾಯ ಮಾಡಿದ್ದಾರೆ.

    ಹುದ್ದೆ ಭರ್ತಿ ಮಾಡುವಂತೆ ಅಧಿಸೂಚನೆ ಹೊರಡಿಸಿದರೂ ಇನ್ನೂ ನೇಮಕಾತಿಯಾಗಿಲ್ಲ. ಹೀಗಾಗಿ ಕೂಡಲೇ ಹುದ್ದೆಯನ್ನು ಭರ್ತಿ ಮಾಡುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

    2019ರ ಫೆಬ್ರವರಿ 20 ರಂದು ನೇಮಕಾತಿ ಪ್ರಕ್ರಿಯೆಗೆ ಆದೇಶ ಹೊರಡಿಸಲಾಗಿತ್ತು. 2,646 ವಿವಿಧ ಹುದ್ದೆಗಳಿಗೆ 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಹುದ್ದೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ 1 ವರ್ಷ 8 ತಿಂಗಳು ಕಳೆದರೂ ಪರೀಕ್ಷೆ ನಡೆಸಿಲ್ಲ.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕನ್ನಡ ಪರೀಕ್ಷೆಯನ್ನ ಮಾತ್ರ ನಡೆಸಿದೆ. ಕೇವಲ ಕನ್ನಡ ಕಡ್ಡಾಯ ಪರೀಕ್ಷೆಯನ್ನ ಮಾತ್ರ ಮಾಡಿದ್ದು, ತಾಂತ್ರಿಕ ಪರೀಕ್ಷೆಯನ್ನ ಇನ್ನೂ ನಡೆಸಿಲ್ಲ. ಹೀಗಾಗಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಿದೆ.

    ನೇಮಕಾತಿ ಯಾಕಿಲ್ಲ?
    ಕೋವಿಡ್‌ 19 ನಿಂದಾಗಿ ಸರ್ಕಾರ ನೇಮಕಾತಿಗೆ ಕೊಕ್ಕೆ ಹಾಕಿದೆ. ಸದ್ಯ ರಾಜ್ಯದ ನೌಕರರಿಗೆ ಸಂಬಳ ನೀಡಲು ಸರ್ಕಾರ ಪರದಾಡುತ್ತಿದೆ. ಈಗ ಹೊಸದಾಗಿ ನೇಮಕ ಮಾಡಲು ಮುಂದಾದರೆ ಅವರ ಸಂಬಳಕ್ಕೆ ತಿಂಗಳಿಗೆ ಅಂದಾಜು 13 ಕೋಟಿ ರೂ. ಬೇಕಾಗಬಹುದು. ಇಷ್ಟೊಂದು ಮೊತ್ತವನ್ನು ಭರಿಸಲು ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ನೀಡದ ಕಾರಣ ಯಾವುದೇ ನೇಮಕಾತಿ ಮಾಡದೇ ಇರಲು ಸರ್ಕಾರ ಮುಂದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಚುನಾವಣಾ ಪ್ರಚಾರದ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭ್ಯರ್ಥಿ!

    ಚುನಾವಣಾ ಪ್ರಚಾರದ ನಡುವೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭ್ಯರ್ಥಿ!

    – ವಿಶ್ ಮಾಡಲು ಬಂದವರಲ್ಲಿ ವೋಟ್ ಕೇಳಿದ್ರು!

    ತಿರುವನಂತಪುರಂ: ಪಂಚಾಯತ್ ಚುನಾವಣೆಯ ಬಿರುಸಿನ ಪ್ರಚಾರದ ನಡುವೆಯೇ ಮಹಿಳಾ ಅಭ್ಯರ್ಥಿಯೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಕೊಟ್ಟಾಯಂನ ವೈಕೋಮ್ ಎಂಬಲ್ಲಿ ನಡೆದಿದೆ.

    ಲಾವಣ್ಯ ಹಸೆಮಣೆ ಏರಿದ ಅಭ್ಯರ್ಥಿ. ಈಕೆ 15ನೇ ವಾರ್ಡಿನಿಂದ ಎಲ್‍ಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೀಗ ಈಕೆ ಚೆಮ್ಮನಕರಿ ಅಯ್ಯಂಕಲಿ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಸಪ್ತಪದಿ ತುಳಿದಿದ್ದಾರೆ.

    ಲಾವಣ್ಯ ತನ್ನ ಮತದಾರರ ಸಮ್ಮುಖದಲ್ಲಿ ಶರತ್ ಜೊತೆ ವಿವಾಹವಾದರು. ಮದುವೆ ಸಮಾರಂಭದಲ್ಲಿ ತಮಗೆ ಶುಭಾಶಯ ಕೋರಲು ಬಂದ ಸಾರ್ವಜನಿಕರಲ್ಲಿ ತಮಗೆ ವೋಟ್ ಹಾಕುವಂತೆ ಹೇಳುವುದನ್ನು ಲಾವಣ್ಯ ಮರೆತಿರಲಿಲ್ಲ. ಹೀಗಾಗಿ ಬಂದವರ ಬಳಿ ತಮಗೆ ಮತ ನೀಡುವಂತೆ ಕೋರಿದರು. ಲಾವನ್ಯಾ ವಿರುದ್ಧ ನಿಂತಿರುವ ಅಭ್ಯರ್ಥಿಗಳಾದ ಯುಡಿಎಫ್ ಅಭ್ಯರ್ಥಿ ಮಜಿತಾ ಲಾಲ್ಜಿ ಮತ್ತು ಎನ್‍ಡಿಎ ಅಭ್ಯರ್ಥಿ ಪಿ.ಕೆ ಬಿನು ಕೂಡ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಿನು ಅವರು ಲಾವಣ್ಯ ಸಂಬಂಧಿಯಾಗಿದ್ದಾರೆ.

    ಫೆಬ್ರವರಿ 2 ರಂದು ಲಾವಣ್ಯ ನಿಶ್ಚಿತಾರ್ಥ ನೆರವೇರಿತ್ತು. ಮದುವೆಯನ್ನು ಮೇ 10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮ ಮದುವೆ ದಿನಾಂಕವನ್ನು ಮುಂದೂಡಲಾಯಿತು. ಈ ಮಧ್ಯೆ ಲಾವಣ್ಯ ಅವರನ್ನು ವಾರ್ಡ್‍ನಲ್ಲಿ ಎಲ್‍ಡಿಎಫ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ವಧು-ವರರಿಬ್ಬರ ಕುಟುಂಬಗಳು ಮದುವೆಯನ್ನು ಮತ್ತಷ್ಟು ಮುಂದೂಡದಿರಲು ನಿರ್ಧರಿಸಿದರು.

    ಲಾವಣ್ಯ ಕುಲಶೇಖರಮಂಗಲಂ ಮೂಲದ ಕಮಲಾಸನನ್ ಮತ್ತು ಕಾಂಚನ ದಂಪತಿಯ ಪುತ್ರಿ. ಶರತ್ ಅವರು ಚೆಮ್ಮನಕರಿ ಮೂಲದ ಚಂದ್ರನ್ ಮತ್ತು ಸಂತ ಅವರ ಪುತ್ರ.

  • ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜೆಪಿ ಪಕ್ಷದ ಗುಣ: ಡಾ.ಕೆ.ನಾರಾಯಣ್

    ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜೆಪಿ ಪಕ್ಷದ ಗುಣ: ಡಾ.ಕೆ.ನಾರಾಯಣ್

    ಬೆಂಗಳೂರು: ನನ್ನಂಥವನನ್ನು ಹುಡುಕಿ ಸೀಟ್ ಕೊಟ್ಟಿದ್ದು ಬಿಜಿಪಿ ಪಕ್ಷದ ದೊಡ್ಡ ಗುಣ ಎಂದು ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಡಾ.ಕೆ.ನಾರಾಯಣ್ ಹೇಳಿದ್ದಾರೆ.

    ಬಿಜೆಪಿ ಹೈಕಮಾಂಡ್ ರಾಜ್ಯದ ಕಮಲ ನಾಯಕರಿಗೆ ಮತ್ತೆ ಶಾಕ್ ನೀಡಿದ್ದು, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಪಕ್ಷಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸುತ್ತಿದ್ದ ಕೆ ನಾರಾಯಣ್ ಅವರನ್ನು ಆಯ್ಕೆ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಅವರು, ದೆಹಲಿಯವರು ಯಾವುದೋ ಮೂಲೇಲಿರೋರನ್ನೂ ಗುರುತಿಸಿದ್ದು ಖುಷಿ ವಿಚಾರ ಎಂದಿದ್ದಾರೆ.

    ನನಗೆ ಟಿಕೆಟ್ ಕೊಡುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನಷ್ಟಕ್ಕೆ ನಾನು ಸಮಾಜ ಸೇವೆ ಮಾಡಿಕೊಂಡಿದ್ದೆ. ಜನರೇ ನಮ್ಮಂಥವರ ಬಗ್ಗೆ ವರಿಷ್ಠರಿಗೆ ತಿಳಿಸುತ್ತಾರೆ ಎಂದು ಈಗ ಗೊತ್ತಾಯ್ತು. ನಾನು ಪಕ್ಷದಲ್ಲಿ ಯಾವುದೇ ಸೇವೆ ಮಾಡಿಲ್ಲ. ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಇವತ್ತಿನ ಪೈಪೋಟಿಯ ಜಗತ್ತಿನಲ್ಲಿ ಈ ರೀತಿಯ ಅವಕಾಶ ಸಿಗುವುದು ಅಪರೂಪ. ನನ್ನಂಥವನಿಗೂ ಅವಕಾಶ ಕೊಡುತ್ತಾರೆ ಅಂದರೆ ಅದು ಹೆಮ್ಮೆಯ ವಿಚಾರ. ನಾನು ಯಾವ ಸ್ಥಾನವನ್ನೂ ಕೇಳಿಲ್ಲ ಎಂದು ಹೇಳಿದ್ದಾರೆ.

    ದೇವಾಂಗ ಸಮಯದಾಯದವರಾದ ಡಾ.ಕೆ.ನಾರಾಯಣ್ ಮಂಗಳೂರು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ನಾರಾಯಣ್ ದೇವಾಂಗ ಸಂಘದ ಖಜಾಂಚಿ ಸಹ ಆಗಿದ್ದಾರೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿರುವ ನಾರಾಯಣ್, ಪಕ್ಷಕ್ಕೆ ಸಂಬಂಧಿಸಿದ ಕರಪತ್ರ, ಪ್ರಚಾರ ಸಂಬಂಧ ಮುದ್ರಣಗಳನ್ನು ಮುದ್ರಿಸುತ್ತಿದ್ದರು. 58 ವರ್ಷದಿಂದ ಆರೆಸ್‍ಎಸ್ ಕಾರ್ಯಕರ್ತರಾಗಿರುವ ನಾರಾಯಣ್, ಸದ್ಯ ನೇಕಾರ ಪ್ರಕೋಷ್ಟದ ಸಹ ಸಂಚಾಲಕರಾಗಿದ್ದಾರೆ.