ಬೆಂಗಳೂರು: ರಾಜ್ಯದ 5 ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ (Parishad Election) ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಒಟ್ಟು 5 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿರಿಯೂರಿನ ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮ ತಮ್ಮ ಪತಿ ಶ್ರೀನಿವಾಸ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೂರ್ಣಿಮ ವಾರದ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಪೂರ್ಣಿಮ ಕಾಂಗ್ರೆಸ್ ಸೇರ್ಪಡೆ ಆದ ಒಂದೇ ವಾರದಲ್ಲಿ ಪೂರ್ಣಿಮ ಪತಿ ಶ್ರೀನಿವಾಸ್‌ಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ. ಇದನ್ನೂ ಓದಿ: ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ
ಬೆಂಗಳೂರು ಪದವೀಧರರ ಕ್ಷೇತ್ರ – ರಾಮೋಜಿ ಗೌಡ
ಬೆಂಗಳೂರು ಶಿಕ್ಷಕರ ಕ್ಷೇತ್ರ – ಪುಟ್ಟಣ್ಣ
ನೈಋತ್ಯ ಶಿಕ್ಷಕರ ಕ್ಷೇತ್ರ – ಕೆಕೆ ಮಂಜುನಾಥ್
ಆಗ್ನೇಯ ಶಿಕ್ಷಕರ ಕ್ಷೇತ್ರ – ಡಿಟಿ ಶ್ರೀನಿವಾಸ್
ಈಶಾನ್ಯ ಪದವೀಧರರು ಕ್ಷೇತ್ರ – ಡಾ. ಚಂದ್ರಶೇಖರ ಬಿ. ಪಾಟೀಲ್ ಹೆಸರನ್ನು ಘೋಷಿಸಲಾಗಿದೆ. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ
– 16ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟ – ಪಕ್ಷಕ್ಕೆ ಹಲವು ಟಿಕೆಟ್ ವಂಚಿತರು ಗುಡ್‍ಬೈ
ಬೆಂಗಳೂರು: ಯಾವುದೇ ರಾಜಕೀಯ ಪಕ್ಷದಲ್ಲಿ ಟಿಕೆಟ್ ಹಂಚಿಕೆ ನಂತರ ಒಂದಿಷ್ಟು ಅಸಮಾಧಾನ, ಬಂಡಾಯ ಸಹಜ. ಕಾಂಗ್ರೆಸ್ ವಿಚಾರದಲ್ಲೂ ಹಾಗೆಯೇ ಆಗಿದೆ. ಆದರೆ ಕಾಂಗ್ರೆಸ್ ನಿರೀಕ್ಷಿಸಿದ ಪ್ರಮಾಣಕ್ಕಿಂತ ಬಂಡಾಯ ಬೆಂಕಿ ಜಾಸ್ತಿಯಾಗಿದೆ.
ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು (Candidate) ಪ್ರಕಟಿಸಿದ ನಂತರ ಕಾಂಗ್ರೆಸ್ (Congress) ಪಕ್ಷ ಈಗ ಕಾದ ಬಾಣಲೆಯಂತಾಗಿದೆ. 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಟಿಕೆಟ್ ವಂಚಿತರು ಸಿಡಿದಿದ್ದಾರೆ. ಪ್ರತಿಭಟನೆಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಪಿಸಿಸಿ (KPCC) ನಾಯಕರ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕುತ್ತಿದ್ದಾರೆ.
ಟಿಕೆಟ್ ವಂಚಿತರನ್ನು ಓಲೈಸಲು ಪಕ್ಷದ ನಾಯಕರು ನೋಡಿದರೂ ಪ್ರಯೋಜನವಾಗುತ್ತಿಲ್ಲ. ತಮ್ಮ ರಾಜಕೀಯ ಭವಿಷ್ಯದ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ಆತಂಕಕ್ಕೆ ಒಳಗಾಗಿದೆ. ತುರ್ತಾಗಿ ಬಂಡಾಯ ಶಮನ ಮಾಡಿ. ಹೆಚ್ಚು ಬೆಳೆಯದಂತೆ ನೋಡಿಕೊಳ್ಳಿ ಎಂದು ಕೈ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುತ್ತೇವೆ – ಕೈ ನಾಯಕ
ಎಲ್ಲಿ ಯಾರು ಬಂಡಾಯ? ಹಾನಗಲ್ – ಜೆಡಿಎಸ್ ಸೇರಿದ ಮನೋಹರ್ ತಹಶೀಲ್ದಾರ್
ನಿರೀಕ್ಷೆಯಂತೆಯೇ ಮಾಜಿ ಮಂತ್ರಿ ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿದ್ದಾರೆ. ಪಕ್ಷ ನನಗೆ ಮೋಸ ಮಾಡಿದೆ ಎನ್ನುತ್ತಾ ಕಣ್ಣೀರಿಟ್ಟಿದ್ದಾರೆ. ಪಕ್ಷಕ್ಕೆ ಬುದ್ದಿ ಕಲಿಸಬೇಕು ಎಂದು ಕರೆ ನೀಡಿದ್ದಾರೆ.
ಕಡೂರು – ವೈಎಸ್‍ವಿ ದತ್ತಾ
ಟಿಕೆಟ್ ವಿಚಾರದಲ್ಲಿ ಸಿದ್ದರಾಮಯ್ಯ ನಂಬಿಕೊಂಡಿದ್ದ ವೈಎಸ್‍ವಿ ದತ್ತಾಗೆ ನಿರಾಸೆಯಾಗಿದೆ. ಕ್ಷೇತ್ರದ ಕಾರ್ಯಕರ್ತರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ನೋವು ಹೊರಹಾಕಿದ್ದಾರೆ. ಇದೇ ಭಾನುವಾರ ಬೆಂಬಲಿಗರ ಸಭೆ ಕರೆದು ಮುಂದಿನ ನಡೆ ನಿರ್ಧರಿಸಲಿದ್ದಾರೆ. ಇದನ್ನೂ ಓದಿ: ಇಂದು ಪ್ರಜಾಪ್ರಭುತ್ವ ಅಪಾಯದಲ್ಲಿಲ್ಲ, ವಂಶಾಡಳಿತದ ರಾಜಕೀಯ ಅಪಾಯದಲ್ಲಿದೆ: ಅಮಿತ್ ಶಾ
ಚಿತ್ರದುರ್ಗ – ರಘು ಆಚಾರ್
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ರಘು ಆಚಾರ್ ರೆಬಲ್ ಆಗಿದ್ದಾರೆ. ಇದೇ 14ರಂದು ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್ 17ಕ್ಕೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಚಿತ್ರದುರ್ಗ – ಎಸ್‍ಕೆ ಬಸವರಾಜನ್
ಟಿಕೆಟ್ ಸಿಗದ ಕಾರಣ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ. ರಘು ಆಚಾರ್ ಜೆಡಿಎಸ್ ಸೇರುತ್ತಿರುವುದರಿಂದ ಬಸವರಾಜನ್ ನಡೆ ಕುತೂಹಲ ಕೆರಳಿಸಿದೆ.
ಕಿತ್ತೂರು – ಕಾಂಗ್ರೆಸ್‍ಗೆ ಡಿಬಿ ಇನಾಂದಾರ್ ಕುಟುಂಬಸ್ಥರ ರಾಜೀನಾಮೆ
ಬಾಬಾ ಸಾಹೇಬ್ ಪಾಟೀಲ್‍ಗೆ ಕಾಂಗ್ರೆಸ್ ಟಿಕೆಟ್ ನೀಡಿದ ಪರಿಣಾಮ ಡಿಬಿ ಇನಾಂದಾರ್ ಕುಟುಂಬ, ಪಕ್ಷಕ್ಕೆ ರಾಜೀನಾಮೆ ನೀಡಿದೆ. ಡಿಬಿ ಇನಾಂದಾರ್ ಆಸ್ಪತ್ರೆಯಲ್ಲಿರುವ ಕಾರಣ ಅವರ ಸೊಸೆ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. ಸದ್ಯದಲ್ಲೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ತುಮಕೂರು ನಗರ – ಕಾಂಗ್ರೆಸ್‍ಗೆ ಶಫಿ ಅಹ್ಮದ್ ರಾಜೀನಾಮೆ
ತುಮಕೂರು ನಗರದಲ್ಲಿ ಶಫಿ ಅಹ್ಮದ್ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದೆ. ಇಕ್ಬಾಲ್ ಅಹ್ಮದ್‍ಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿರುವ ಮಾಜಿ ಶಾಸಕ ಶಫಿ ಅಹ್ಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕುಣಿಗಲ್ – ರಾಮಸ್ವಾಮಿ ಗೌಡ
ಕುಣಿಗಲ್‍ನಲ್ಲಿ ಮತ್ತೆ ಟಿಕೆಟ್ ಕೈತಪ್ಪಿರುವುದಕ್ಕೆ ಮಾಜಿ ಶಾಸಕ ರಾಮಸ್ವಾಮಿಗೌಡ ರೆಬೆಲ್ ಆಗಿದ್ದಾರೆ. ನನಗೆ ಡಿಕೆ ಸಹೋದರರಿಂದ ಟಿಕೆಟ್ ವಂಚನೆಯಾಗಿದೆ. ಅದೇನ್ ಮಾಡುತ್ತಾರೋ ಮಾಡಲಿ. ಹೊಡೆದು ಹಾಕಿಬಿಡ್ತಾರಾ ಹೊಡೆದು ಹಾಕಲಿ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.
ಬೀಳಗಿ – ಬಸವಪ್ರಭು ಸರನಾಡಗೌಡ
ಕಾಂಗ್ರೆಸ್ ಮತ್ತೆ ಜೆ.ಟಿ. ಪಾಟೀಲ್‍ಗೆ ಟಿಕೆಟ್ ಕೊಟ್ಟಿರುವುದಕ್ಕೆ ಮತ್ತೋರ್ವ ಆಕಾಂಕ್ಷಿ ಬಸವಪ್ರಭು ಸರನಾಡಗೌಡ ರೆಬೆಲ್ ಆಗುವ ಸುಳಿವು ನೀಡಿದ್ದಾರೆ.
ಮುಧೋಳ – ಸತೀಶ್ ಬಂಡಿವಡ್ಡರ
ಮಾಜಿ ಮಂತ್ರಿ ಆರ್.ಬಿ ತಿಮ್ಮಾಪುರ್‌ಗೆ ಮತ್ತೆ ಮಣೆ ಹಾಕಿರುವುದನ್ನು ಮತ್ತೋರ್ವ ಆಕಾಂಕ್ಷಿ ಸತೀಶ್ ಬಂಡಿವಡ್ಡರ್‌ಗೆ ಸಹಿಸಿಕೊಳ್ಳಲು ಆಗಿಲ್ಲ. ಪಕ್ಷೇತರರಾಗಿ ಸ್ಫರ್ಧೆ ಮಾಡುವ ಸುಳಿವು ಕೊಟ್ಟಿದ್ದಾರೆ.
ಬಾಗಲಕೋಟೆ – ದೇವರಾಜ ಪಾಟೀಲ್
ಮತ್ತೆ ಹೆಚ್.ವೈ ಮೇಟಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದರಿಂದ ದೇವರಾಜ್ ಪಾಟೀಲ್ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಗಂಗಾವತಿ – ಹೆಚ್‍ಆರ್ ಶ್ರೀನಾಥ್
ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಲಾಗಿದೆ. ಹೆಚ್.ಆರ್ ಶ್ರೀನಾಥ್‍ಗೆ ಟಿಕೆಟ್ ಮಿಸ್ ಆಗಿರುವುದರಿಂದ ಕಾಂಗ್ರೆಸ್ ವಿರುದ್ಧ ಈಡಿಗ ಸಮುದಾಯ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ತನ್ನ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಎಚ್ಚರಿಕೆ ಕೊಟ್ಟಿದೆ.
ಚನ್ನಗಿರಿ – ವಡ್ನಾಳ್ ರಾಜಣ್ಣ
ಚನ್ನಗಿರಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವಡ್ನಾಳ್ ರಾಜಣ್ಣ ಸಹೋದರನ ಪುತ್ರ ವಡ್ನಾಳ್ ಆಶೋಕ್‍ಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ವಡ್ನಾಳ್ ಕುಟುಂಬಸ್ಥರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಭೇಟಿಯಾಗಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮಂಡ್ಯ – ಕೀಲಾರ ರಾಧಾಕೃಷ್ಣ
ರವಿಕುಮಾರ್‌ಗೆ ಮಂಡ್ಯ ಟಿಕೆಟ್ ನೀಡಿರುವುದನ್ನು ವಿರೋಧಿಸಿ ರಾಧಕೃಷ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕರ್ತರನ್ನು ಸಮಾಧಾನಪಡಿಸಿರುವ ಅವರು, ಶೀಘ್ರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆತ್ಮಾನಂದ ನೇತೃತ್ವದಲ್ಲಿ ಮೂಲ ಕಾಂಗ್ರೆಸ್ಸಿಗರು ಸಭೆ ನಡೆಸಿದ್ದಾರೆ.
ಯಾದಗಿರಿ – ಅಬ್ದುಲ್ ಜಲೀಲ್, ಕಾಮರೆಡ್ಡಿ ಅಸಮಾಧಾನ
ಯಾದಗಿರಿಯಲ್ಲಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್‌ಗೆ ಟಿಕೆಟ್ ನೀಡಲಾಗಿದೆ. ಈ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳಾದ ಅಬ್ದುಲ್ ಜಲೀಲ್, ಎಸ್‍ಬಿ ಕಾಮರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ
ಉಡುಪಿ – ಕೃಷ್ಣಮೂರ್ತಿ ಆಚಾರ್ಯ
ಮೊಗವೀರ ಮುಖಂಡ ಪ್ರಸಾದ್ ಕಾಂಚನ್‍ಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಕೃಷ್ಣಮೂರ್ತಿ ಆಚಾರ್ಯ ಕಿಡಿಕಾರಿದ್ದಾರೆ. ಉಡುಪಿ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರನಾಗಿ ಕಣಕ್ಕಿಳಿಯಲು ಕೃಷ್ಣಮೂರ್ತಿ ಆಚಾರ್ಯ ಚಿಂತನೆ ನಡೆಸಿದ್ದಾರೆ.
ರೇವಾದ ಹನುಮಾನ ಪ್ರದೇಶದ ಪುರಸಭೆಯ ವಾರ್ಡ್ ನಂ.9 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹರಿನಾರಾಯಣ್ ಗುಪ್ತಾ ಸ್ಪರ್ಧಿಸಿದ್ದರು. ಆದರೆ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಖಿಲೇಶ್ ಗುಪ್ತಾ ಅವರು ಹರಿನಾರಾಯಣ್ ಅವರನ್ನು 14 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ
ಭಾನುವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ತಮ್ಮ ಸೋಲಿನ ಸುದ್ದಿ ಕೇಳುತ್ತಲೇ ಹರಿನಾರಾಯಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹರಿನಾರಾಯಣ್ ಹನುಮಾನ ಕಾಂಗ್ರೆಸ್ ಘಟಕದ ಮಂಡಲ ಅಧ್ಯಕ್ಷರೂ ಆಗಿದ್ದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ರಾಷ್ಟ್ರಪತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಬಹಿರಂಗಪಡಿಸುತ್ತಿವೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಆಯ್ಕೆ ಯಶವಂತ್ ಸಿನ್ಹಾ ಆಗಿದ್ದು, ಈ ಪೈಕಿ ದೇಶಾದ್ಯಂತ ಪಕ್ಷಗಳು ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಘೋಷಿಸುತ್ತಿವೆ.
ಇದೀಗ ಅರವಿಂದ್ ಕೇಜ್ರಿವಾಲ್ ಅವರ ಆಮ್‌ಆದ್ಮಿ ಪಕ್ಷ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ತಿಳಿಸಿದೆ. ನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ನಮ್ಮ ಬೆಂಬಲ ಯಶವಂತ್ ಸಿನ್ಹಾ ಅವರ ಪರವಾಗಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ಬುಡಕಟ್ಟು ನಾಯಕಿ, ಗವರ್ನರ್ ಆಗಿರುವ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಪಕ್ಷ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳಿಸಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ಚರ್ಯ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದ್ದರು. ಬಡತನ ಹಾಗೂ ಕಷ್ಟಗಳನ್ನು ಎದುರಿಸಿರುವ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆಗೆ ಸಮರ್ಥರಾದವರು. ಅವರು ದೇಶದ ಮಹಾನ್ ರಾಷ್ಟ್ರಪತಿಯಾಗುತ್ತಾರೆ ಎಂದು ಮೋದಿ ತಿಳಿಸಿದ್ದರು. ಇದನ್ನೂ ಓದಿ: ಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ
ವಿರೋಧಪಕ್ಷದ ಅಭ್ಯರ್ಥಿಯಾಗಿ ಟಿಎಂಸಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರ ನಾಮನಿರ್ದೇಶನ ಮಾಡಲಾಗಿದೆ. ವಿರೋಧಪಕ್ಷದ ಅಭ್ಯರ್ಥಿಯಾಗಲು ಶರದ್ ಪವಾರ್, ಗೋಪಾಲಕೃಷ್ಣ ಗಾಂಧಿ ಹಾಗೂ ಫಾರೂಕ್ ಅಬ್ದುಲ್ಲಾ ನಿರಾಕರಿಸಿದ ಬಳಿಕ ಯಶವಂತ್ ಸಿನ್ಹಾ ಕೊನೆಯದಾಗಿ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾದರು.
ಈ ನಡುವೆ ದ್ರೌಪದಿ ಮುರ್ಮು ಅವರಿಗೆ ಶಿವಸೇನೆಯೂ ಬೆಂಬಲ ವ್ಯಕ್ತಪಡಿಸಿದ್ದು, ಸಿನ್ಹಾ ಅವರು ಶನಿವಾರ ಮಾಹಾರಾಷ್ಟ್ರದ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಸಿನ್ಹಾ ಅವರು ಎಂವಿಎ ಶಾಸಕರನ್ನು ಭೇಟಿಯಾಗಲು ಇಂದು ಮಹಾರಾಷ್ಟ್ರಕ್ಕೆ ತೆರಳಬೇಕಿತ್ತು. ಆದರೆ ಈ ಭೇಟಿ ಇದೀಗ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ.ಬಂಗಾಳದ 11 ಜಿಲ್ಲೆಗಳಲ್ಲಿ ಕಾಡುತ್ತಿದೆ ಕಪ್ಪು ಜ್ವರ ಅಥವಾ ‘ಕಾಲಾ-ಅಜರ್’ – ಲಕ್ಷಣವೇನು?
Live Tv
[brid partner=56869869 player=32851 video=960834 autoplay=true]
ನವದೆಹಲಿ: ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಬಿಜೆಪಿ ನಾಯಕ ಮಾಜಿ ಐಎಎಸ್ ಅಧಿಕಾರಿ ಯಶವಂತ್ ಸಿನ್ಹಾ ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಸಿನ್ಹಾ ಮಂಗಳವಾರ ಮಾಡಿರುವ ಟ್ವೀಟ್ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಸುಳಿವು ನೀಡಿದೆ. ಇದನ್ನೂ ಓದಿ: MVA ಸರ್ಕಾರವನ್ನು ಅಲುಗಾಡಿಸುತ್ತಿರುವ ಏಕನಾಥ್ ಶಿಂಧೆ ಯಾರು?
I am grateful to Mamataji for the honour and prestige she bestowed on me in the TMC. Now a time has come when for a larger national cause I must step aside from the party to work for greater opposition unity. I am sure she approves of the step.
ಟ್ವೀಟ್‌ನಲ್ಲೇನಿದೆ?
ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ಅವರು ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಆಭಾರಿಯಾಗಿದ್ದೇನೆ. ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ, ವಿರೋಧದ ಏಕತೆಗಾಗಿ ಕೆಲಸ ಮಾಡಲು ನಾನು ಪಕ್ಷದಿಂದ ದೂರ ಸರಿಯಬೇಕಾದ ಸಮಯ ಬಂದಿದೆ. ನನ್ನ ಈ ಹೆಜ್ಜೆಗೆ ಅವರು ಅನುಮೋದನೆ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಸಿನ್ಹಾ ಬರೆದಿದ್ದಾರೆ.
ಪ್ರತಿಪಕ್ಷಗಳು ಈ ಹಿಂದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹಾಗೂ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿತ್ತು. ಆದರೆ ಅವರೆಲ್ಲರೂ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ನಿರಾಕರಿಸಿದ್ದರಿಂದ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಅಂತಿಮಗೊಳಿಸಲು ಹೆಣಗಾಡುತ್ತಿವೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ
ಜಂಟಿ ಅಭ್ಯರ್ಥಿಯನ್ನು ಅಂತಿಮಗೊಳಿಸಲು ವಿರೋಧ ಪಕ್ಷಗಳ ನಾಯಕರು ಮಂಗಳವಾರ ದೆಹಲಿಯಲ್ಲಿ ಸಭೆ ಸೇರಿದ್ದರು. ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಇರುವುದರಿಂದ ಆ ಸಭೆ ಅನಿಶ್ಚಿತವಾಗಿದ್ದರೂ ಸಿನ್ಹಾ ಅವರು ಇದೀಗ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರ: ರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಸ್ಪರ್ಧಿಸುವ ಪ್ರಸ್ತಾಪವನ್ನು ನ್ಯಾಷನಲ್ ಕಾನ್ಪರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಶನಿವಾರ ತಿರಸ್ಕರಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಫಾರೂಕ್ ಅಬ್ದುಲ್ಲಾ ಅವರ ಹೆಸರನ್ನು ಸೂಚಿಸಿದ್ದರು. ಆದರೆ ಫಾರೂಕ್ ಅಬ್ದುಲ್ಲಾ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಹಾಗೂ ಜಮ್ಮು-ಕಾಶ್ಮೀರಕ್ಕೆ ಕೊಡುಗೆ ನೀಡಲು ಬಯಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ
ಜಮ್ಮು ಮತ್ತು ಕಾಶ್ಮೀರದ ಈಗಿನ ಪರಿಸ್ಥಿತಿಯಲ್ಲಿ ನನ್ನ ಸಹಕಾರದ ಅಗತ್ಯವಿದೆ. ಮುಂದೆ ನನಗೆ ರಾಜಕೀಯದಲ್ಲಿ ಹಾಗೂ ಸೇವೆಯಲ್ಲಿ ಹೇರಳ ಅವಕಾಶವಿದೆ. ಹೀಗಾಗಿ ನಾನು ರಾಷ್ಟ್ರಪತಿ ಚುನಾವಣೆಗೆ ನನ್ನ ಹೆಸರನ್ನು ಹಿಂಪಡೆಯಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಭಾವ – ಮುಂದಿನ ವಾರದಿಂದಲೇ ಶಾಲೆಗಳು ಬಂದ್
ಕೆಲವು ದಿನಗಳ ಹಿಂದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವ ಪ್ರಸ್ತಾಪದಿಂದ ಹಿಂದೇಟು ಹಾಕಿದ್ದರು. ಇದೀಗ ಫಾರೂಕ್ ಅಬ್ದುಲ್ಲಾ ಸ್ಪರ್ಧೆಗೆ ಹಿಂದೆ ಸರಿದಿದ್ದಾರೆ.
ಧಾರವಾಡ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಜೆಡಿಎಸ್ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಸಂಧಾನ ಮಾಡಿಕೊಳ್ಳುವಂತೆ ಹೆಚ್‍ಡಿಕೆ ಆಹ್ವಾನ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡುವುದೇ ಈಗ ಸಂಧಾನ. ಅವರು ನಮಗೆ ಮತ ಹಾಕಬೇಕು ಅದೇ ಸಂಧಾನ. ಈ ಹಿಂದೆ ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ, ಅವರು ಈಗ ಯಾಕೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ಗುರಿಯಾದ್ರೆ ಜೆಡಿಎಸ್‍ನವರು ನಮಗೆ ಬೆಂಬಲಕೊಡಲಿ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ, ಅವರ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ
ನಮ್ಮ ಹೈಕಮಾಂಡ್ ಇರೋದು ದೆಹಲಿಯಲ್ಲಿ, ಅವರ ಹೈಕಮಾಂಡ್ ಇರೋದು ಪದ್ಮನಾಭನಗರದಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ, ಏನೇ ಆಗೋದಿದ್ರೂ ಮತದಾನದ ದಿನವೇ ತೀರ್ಮಾನ ಆಗುತ್ತದೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಹಿತಿಗಳು ಅವರ ಫಲಾನುಭವಿಗಳಾಗಿದ್ದರು ಎಂಬ ಅಡ್ಡಂಡ ಸಿ. ಕಾರ್ಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಂಡಿತಾರಾಧ್ಯ ಶ್ರೀ ನಮ್ಮ ಫಲಾನುಭವಿನಾ ಎಂದು ಪ್ರಶ್ನಿಸಿದರು. ಪಠ್ಯಕ್ರಮದಲ್ಲಿ ಬಸವಣ್ಣನ ವಿಚಾರವನ್ನು ತಿರುಚಲಾಗಿದೆ. ಅಂಬೇಡ್ಕರ್ ಸೇರಿದಂತೆ ಭಗತ್ ಸಿಂಗ್ ಹಾಗೂ ಕುವೆಂಪು ಅವರ ವಿಚಾರವನ್ನು ತಿರುಚಲಾಗಿದೆ. ಚರಿತ್ರೆಯಲ್ಲಿ ಏನಿದೆಯೋ ಅದನ್ನು ಮುಚ್ಚಿಟ್ಟು ತಿರುಚಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ
ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು, ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನೇ ತೆಗೆದುಹಾಕಲಾಗಿದೆ. ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದ್ದರು. ಅದನ್ನೂ ತಿರುಚಲಾಗಿದೆ. 10 ದಿನದಲ್ಲಿ ಪಠ್ಯ ಪರಿಷ್ಕರಣೆ ಆಗಬೇಕು ಎಂಬುದಕ್ಕೆ ನನ್ನ ಬೆಂಬಲವೂ ಇದೆ. ರೋಹಿತ್ ಚಕ್ರತೀರ್ಥ ಮಾಡಿರೋದನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಿಗಧಿಯಾಗಿದ್ದ ಚುನಾವಣೆಗೆ ಸ್ಪರ್ಧಿಸಿದ್ದ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಶುಕ್ರವಾರ ಘೋಷಿಸಿದರು.
ಮೇ 24 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಮೇ 25 ರಂದು ಪರಿಶೀಲನೆ ಹಾಗೂ ಮೇ 27 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. 7 ಸ್ಥಾನಗಳಿಗೆ 7 ಅಭ್ಯರ್ಥಿಗಳು ಮಾತ್ರ ಅಂತಿಮ ಕಣದಲ್ಲಿ ಉಳಿದಿದ್ದ ಕಾರಣಕ್ಕೆ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಯುದ್ಧ ನೌಕೆಗಳು ತಯಾರಾಗೋ ಮೂಲಕ ಮೋದಿ ಆತ್ಮನಿರ್ಭರ್ ಅಭಿಯಾನಕ್ಕೆ ಬಲ ಬಂದಿದೆ: ರಾಜನಾಥ್ ಸಿಂಗ್
ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸವದಿ ಲಕ್ಷ್ಮಣ, ಟಿ ನಾರಾಯಣ ಸ್ವಾಮಿ, ಹೇಮಾಲತಾ ನಾಯಕ್ ಹಾಗೂ ಕೇಶವ್ ಪ್ರಸಾದ್ ಎಸ್, ಭಾರತೀಯ ಕಾಂಗ್ರೆಸ್ ಪಕ್ಷದಿಂದ ಕೆ ಅಬ್ದುಲ್ ಜಬ್ಬಾರ್ ಹಾಗೂ ಎಂ ನಾಗರಾಜು, ಜೆಡಿಎಸ್ ಪಕ್ಷದಿಂದ ಶರವಣನ್ ಟಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ
ಇಂದು ನಾಮಪತ್ರ ಹಿಂಪಡೆಯುವ ಸಮಯ ಮೀರಿದ ನಂತರ ನಾಮಪತ್ರ ಸಲ್ಲಿಸಿದ್ದ 7 ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಅವಿರೋಧ ಆಯ್ಕೆಯ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಬೆಂಗಳೂರು: ನಾನು ಪಿಎಸ್‍ಐಗೆ ಆಯ್ಕೆಯಾಗಲು 75 ಲಕ್ಷ ಕೊಟ್ಟಿದ್ದೀನಿ ಅಂತ ಅಭ್ಯರ್ಥಿಯೊಬ್ಬ ಡಿಜಿ ಕಚೇರಿಗೆ ಪತ್ರ ಬರೆದಿದ್ದಾನೆ. ಅಲ್ಲದೆ ಲಂಚ ನೀಡಿದ ಅಭ್ಯರ್ಥಿಯೇ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾನೆ.
ಹೌದು. ದಿನಾ ಬೆಳಗಾದ್ರೆ ಪಿಎಸ್‍ಐ ಅಕ್ರಮ ಕೇಸ್‍ನಲ್ಲಿ ಒಂದಿಲ್ಲೊಂದು ಬೆಳವಣಿಗೆ ನಡೀತಾನೇ ಇದೆ. ದಿನಕ್ಕೊಬ್ಬ ಅಧಿಕಾರಿ ಅರೆಸ್ಟ್ ಆಗ್ತಾನೇ ಇದ್ದಾರೆ. ಆದರೆ ಇಲ್ಲೊಂದು ಅಚ್ಚರಿ ಬೆಳವಣಿಗೆ ನಡೆದಿದೆ. ಪಿಎಸ್‍ಐ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬ ಡಿಜಿ & ಐಜಿಪಿ ಪ್ರವೀಣ್ ಸೂಧ್‍ಗೆ ಒಂದು ಪತ್ರ ಬರೆದಿದ್ದಾರೆ. ನಾನೂ ಅಕ್ರಮದಲ್ಲಿ ಭಾಗಿಯಾಗಿದ್ದೀನಿ. ತನಿಖೆಗೆ ಸಿದ್ಧ ಅಂತ ತಿಳಿಸಿದ್ದಾರೆ.
ಪತ್ರದಲ್ಲಿ ಅಕ್ರಮದ ಬಗ್ಗೆ ಸಾಕ್ಷಿ ಸಮೇತ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ. ನಾನು ವಿಜಯನಗರದ ಪ್ರಿನ್ಸಿಪಾಲ್ ಒಬ್ಬರಿಗೆ 75 ಲಕ್ಷ ಹಣ ನೀಡಿದ್ದೀನಿ. ಬ್ಲೂಟೂತ್ ಬಳಸಿ ಎಕ್ಸಾಂನಲ್ಲಿ ಪಾಸ್ ಆಗಿದ್ದೇನೆ. ಈಗ ನನಗೆ ಮಾಡಿದ್ದು ತಪ್ಪು ಅನಿಸಿದೆ. ಹಾಗಾಗಿ ನಾನು ತನಿಖೆಗೆ ಒಳಗಾಗುತ್ತೇನೆ. ಅಲ್ಲದೇ ಪ್ರಿನ್ಸಿಪಾಲ್ ಒಬ್ಬರ ಜೊತೆ ವಾಟ್ಸಾಪ್ ಚಾಟ್ ಮಾಡಿದ್ದು ಕೂಡ ನಿಮಗೆ ಕಳುಹಿಸಿ ಕೊಟ್ಟಿದ್ದೀನಿ. ಅಕ್ರಮ ಮಾಡಿದ ಆರೋಪಿ ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.
ವಾಟ್ಸಾಪ್ ಚಾಟ್‍ನಲ್ಲಿ ಪಿಎಸ್‍ಐ ಡೀಲ್ ಖುಲ್ಲಂ ಖುಲ್ಲಾ: ಡಿಜಿಪಿಗೆ ಪತ್ರ ಬರೆದಿರುವ ಅನಾಮಧೇಯ ತನ್ನ ವಾಟ್ಸಾಪ್ ಚಾಟಿಂಗ್ ಸ್ಕ್ರೀನ್ ಶಾಟ್‍ಗಳನ್ನು ಟ್ಯಾಗ್ ಮಾಡಿದ್ದಾರೆ. ಯಾವಾಗ ಯಾರನ್ನ ಭೇಟಿ ಮಾಡಿದ್ದೆ..? ಎಲ್ಲಿ ಹಣ ನೀಡಬೇಕು..? ಯಾರು ಹಣ ತೆಗೆದುಕೊಂಡು ಹೋಗ್ತಾರೆ…? ಬ್ಲೂಟೂತ್ ಹೇಗೆ ಬಳಸಬೇಕು…? ಎಂಬುದನ್ನೆಲ್ಲಾ ಚಾಟ್ ಮಾಡಿದ್ದಾನೆ. ಚಾಟಿಂಗ್‍ನಲ್ಲಿ ಒಂದಿಷ್ಟು ಸತ್ಯಾಂಶಗಳು ಕೂಡ ಇದ್ದು ಪತ್ರದ ಬಗ್ಗೆ ಕುತೂಹಲ ಮೂಡಿದೆ.
ಪತ್ರ ಬರೆದವರ ಬೆನ್ನು ಬಿದ್ದ ಸಿಐಡಿ: ಈಗಾಗಲೇ ಸಿಐಡಿ ಅಧಿಕಾರಿಗಳು ಪತ್ರದ ತನಿಖೆ ಆರಂಭಿಸಿದ್ದಾರೆ. ಆದರೆ ಯುವಕ ತನ್ನ ಫೋನ್ ನಂಬರ್, ವಿಳಾಸ ಸುಳ್ಳು ಹೇಳಿರೋದು ತನಿಖೆಯಲ್ಲಿ ಗೊತ್ತಾಗಿದೆ. ಆದರೂ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಒಂದು ದಿಕ್ಕಿನಲ್ಲಿ ಸಾಗುತ್ತಾ ಇದ್ದ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದ್ದು ಅಭ್ಯರ್ಥಿ ಒಬ್ಬ ಬರೆದ ಪತ್ರಕ್ಕೆ ಸಿಐಡಿ ಬಳಿ ಸಾಕ್ಷ್ಯ ಸಿಗುತ್ತಾ..? ಹಾಗೆಯೇ ಪ್ರಿನ್ಸಿಪಾಲ್ ವಿಚಾರಣೆ ನಡೆಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಚೆನ್ನೈ: 2000 ರೂ. ಹಣ ಪಡೆದು ನೀವು ಮತ ಹಾಕಲು ಹೋಗುತ್ತೀರಾ? ಹಾಗಿದ್ದರೆ ನೀವು ಹಣದ ಆಸೆಗೆ ಮತ ಹಾಕಿ 5 ವರ್ಷಗಳ ಕಾಲ ಮೌಸ್ ಟ್ರ್ಯಾಪ್‌ಲ್ಲಿ ಸಿಲುಕಿದಂತೆ ಎಂದು ವಿಶೇಷವಾಗಿ ಕರೆ ನೀಡಿ ಅಭ್ಯರ್ಥಿಯೊಬ್ಬರು ಜನ ಜಾಗೃತಿ ಮೂಡಿಸಿದ್ದಾರೆ.
ಮಧುರೈನ ಅಭ್ಯರ್ಥಿ ಜಾಫರ್ ಶೆರೀಫ್ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದಾಗ ಕೈಯಲ್ಲಿ ಮೌಸ್ ಟ್ರ್ಯಾಪ್ ಹಾಗೂ ಅದರ ಮೇಲೆ 2000 ರೂ. ನೋಟು ಹಿಡಿದುಕೊಂಡು ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಹಾಕಿ ಎಂದು ವಿಶೇಷ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು
ಮಧುರೈನ ವಾರ್ಡ್ ನಂ.3 ರಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಜಾಫರ್ ತಮಿಳುನಾಡಿನಲ್ಲಿ ಹಣ ಪಡೆದು ಮತ ಹಾಕುವ ವಿಚಾರದಲ್ಲಿ ಜಾಗೃತಿ ಮೂಡಿಸಲು ಮೌಸ್ ಟ್ರ್ಯಾಪ್ ತಂದಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮತಕ್ಕಾಗಿ ಹಣದ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಹಣ ಪಡೆದು ಮತ ನೀಡುವುದು 5 ವರ್ಷಗಳ ಕಾಲ ಬಲೆಯಲ್ಲಿ ಸಿಲುಕಿಕೊಂಡಂತೆ ಎಂದು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.
ನಾನು ನನ್ನು ವಾರ್ಡ್ ಅನ್ನು ಸ್ವಚ್ಛತೆಯ ಮಾದರಿಯಾಗಿ ಪರಿವರ್ತಿಸಲು ಬಯಸುತ್ತೇನೆ. ಹಣದ ಆಸೆಗೆ ಜನರು ಮತ ಹಾಕಿ ಹೇಗೆ ಸಿಕ್ಕಿಕೊಳ್ಳುತ್ತಾರೆ ಎಂದು ತಿಳಿಸಲು ನಾನು ಮೌಸ್ ಟ್ರ್ಯಾಪ್ ಬಳಸುತ್ತಿದ್ದೇನೆ. ನಾನು ಉತ್ತಮ ಉದ್ಯೋಗ ಹೊಂದಿದ್ದೇನೆ ಹಾಗೂ ಒಳ್ಳೆಯ ಗಳಿಕೆಯೂ ಇದೆ. ಆದರೆ ಇದೀಗ ನಾನು ಒಬ್ಬ ವಿದ್ಯಾವಂತ ನಾಗರಿಕನಾಗಿ ದೇಶಕ್ಕೆ ಹಿಂದಿರುಗಿಸುವ ಸಮಯ ಬಂದಿದೆ. ಅದಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಜಾಫರ್ ಹೇಳಿದ್ದಾರೆ. ಇದನ್ನೂ ಓದಿ: ಕಾರಿನ ಹೆಡ್‍ಲೈಟ್ ಬೆಳಕಿನಲ್ಲಿ ಪರೀಕ್ಷೆ ಬರೆದ 400 ವಿದ್ಯಾರ್ಥಿಗಳು
ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆಬ್ರವರಿ 4ರ ವರೆಗೆ ಸಮಯವಿದೆ. ಫೆಬ್ರವರಿ 19ರಂದು ಚುನಾವಣೆ ನಡೆಯಲಿದ್ದು, 22ರಂದು ಮತ ಎಣಿಕೆ ನಡೆಯಲಿದೆ.