Tag: ಅಭಿಷೇಕ್

  • ಅಮ್ಮನನ್ನು ನಗಿಸಲು ಹಳೆಯ ನೆನಪು ಹಂಚಿಕೊಂಡ ಅಭಿ

    ಅಮ್ಮನನ್ನು ನಗಿಸಲು ಹಳೆಯ ನೆನಪು ಹಂಚಿಕೊಂಡ ಅಭಿ

    ಬೆಂಗಳೂರು: ಅಂಬಿಯನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದ ಸುಮಲತಾ ಅವರನ್ನು ನಗಿಸಲು ಪುತ್ರ ಅಭಿಷೇಕ್ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ತಂದೆಯ ಜೊತೆಗಿನ ನೆನಪನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

    ಅಭಿಷೇಕ್ ಹೇಳಿದ್ದು ಹೀಗೆ:
    ನನಗೆ ಮೂರು ವರ್ಷವಿದ್ದಾಗ ಅಪ್ಪ-ಅಮ್ಮ ಜೊತೆ ಸಿಂಗಾಪುರಕ್ಕೆ ಹೋಗಿದ್ದೆ. ಅಪ್ಪ ಸಿಂಗಾಪುರಕ್ಕೆ ಹೋದರೂ ಅವರಿಗೆ ಭಾರತ ತರಹ ಇರಬೇಕು. ಹೊಟೇಲ್ ರೂಮಿನಲ್ಲಿ ಭಾರತದ ಆಹಾರ ಇಡ್ಲಿ, ಉಪ್ಪಿಟ್ಟು, ದೊಸೆ ತಿನ್ನುತ್ತಿದ್ದರು. ಆದರೆ ಅಮ್ಮನಿಗೆ ಹೊರಗೆ ಶಾಪಿಂಗ್ ಹೋಗುವುದಕ್ಕೆ ಇಷ್ಟವಿತ್ತು.

    ಅಮ್ಮ ಕೊನೆಯ ದಿನವರೆಗೂ ನಮಗೆ ಕಾಯುತ್ತಿದ್ದು, ನಾನು ಅಪ್ಪ ನಿದ್ದೆಯಿಂದ ಏಳುವ ಮೊದಲು ಟಿವಿ ಮೇಲೆ ‘ಗೋನ್ ಶಾಪಿಂಗ್’ ಎಂದು ಬರೆದು ಹೋಗಿದ್ದರು. ನಾನು ನಿನ್ನೆ, ಮೊನ್ನೆ ಇದನ್ನು ನೆನಪಿಸಿಕೊಳ್ಳುತ್ತಿದ್ದೆ. ನಾನು ಆಗ ಚಿಕ್ಕವನಿದ್ದೆ. ಬೆಳಗ್ಗೆ ಎದ್ದಾಗ ಅಮ್ಮನನ್ನು ಹುಡುಕುತಿದ್ದೆ. ಅಪ್ಪ ಪಕ್ಕದಲ್ಲಿ ಸುಮ್ಮನೆ ಕುಳಿತ್ತಿದ್ದರು. ನನಗೆ ಅಪ್ಪ ಎಂದರೆ ಭಯವಾಗುತ್ತಿತ್ತು. ಅವರಿಗೂ ಈ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂದು ಒಳಗೊಳಗೆ ಹೆದರಿಕೊಳ್ಳುತ್ತಿದ್ದರು.

    ನಾನು ಜೋರಾಗಿ ಅಳುವುದಕ್ಕೆ ಶುರು ಮಾಡಿದೆ. ಅಪ್ಪ ಆಗ ಏನಾಯಿತು ಅಂತಾ ಕೇಳಿದರು. ನಾನು ಆಗ ಬಾತ್‍ರೂಮಿಗೆ ಹೋಗಬೇಕು ಎಂದು ಹೇಳಿದೆ. ಆಗ ಬಾತ್‍ರೂಮಿಗೆ ಕರೆದುಕೊಂಡು ಹೋಗಿ ಸರಿ ಮಾಡ್ಕೋ ಹೋಗು ಅಂದರು. ಸ್ವಲ್ಪ ಸಮಯದ ಬಳಿಕ ಮತ್ತೆ ಅಳುವುದಕ್ಕೆ ಶುರು ಮಾಡಿದೆ. ಆಗ ಏನು ಎಂದು ಕೇಳಿದರು? ಅದಕ್ಕೆ ನಾನು ಹಲ್ಲು ಉಜ್ಜು ಎಂದು ಹೇಳಿದೆ. ಆಗ ಹಲ್ಲು ಉಜ್ಜಿ ಅಷ್ಟೇ ನಾ ಎಂದು ಕೇಳಿದ್ದರು.

    ನನಗೆ ಹಲ್ಲು ಉಜ್ಜಿಸಿದ ಬಳಿಕ ಅವರು ಶೇವಿಂಗ್ ಮಾಡಿಕೊಳ್ಳುತ್ತಿದ್ದರು. ಆಗ ನಾನು ಮತ್ತೆ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವರು ಮತ್ತೆ ಏನಾಯಿತು ಮಗನೇ ಎಂದು ಕೇಳಿದರು. ನಾನು ಮತ್ತೆ ಬಾತ್ ರೂಮಿಗೆ ಹೋಗಬೇಕೆಂದು ಹೇಳಿದೆ. ಆಗ ಅವರು ನನ್ನನ್ನು ಒಂದು ಕೈಯಲ್ಲಿ ಎತ್ತಿ ಬೇಸನ್‍ನಲ್ಲಿ ಹಾಕಿ ಮಾಡ್ಕೋ ಎಂದು ಹೇಳಿದ್ದರು.

    2-3 ಗಂಟೆಯ ನಂತರ ಅಮ್ಮ ಶಾಪಿಂಗ್ ನಿಂದ ವಾಪಾಸ್ ಬಂದರು. ಅಮ್ಮ ನನ್ನನ್ನು ಬಿಟ್ಟು ಹೋಗಿದ್ದಾರೆಂದು ನನಗೆ ಕೋಪ ಬಂದಿತ್ತು. ಅಮ್ಮ ನನ್ನ ಬಿಟ್ಟು ಎಲ್ಲಿ ಹೋದೆ ಎಂದು ಕೇಳುವ ಮೊದಲು ಅಪ್ಪ, ‘ಲೇ ಅಮ್ಮವೋ ಇವ್ನ ನನ್ನ ಜೊತೆ ಹತ್ತಿರ ಯಾಕೆ ಬಿಟ್ಟು ಹೋದೆ’ ಎಂದು ಹೇಳಿದ್ದರು. ಆಗಿಂದ ನಾವು ಟ್ರಿಪ್‍ಗೆ ಹೋಗಿದ್ದಾಗ ಬೆಳಗ್ಗೆ ಎದ್ದ ತಕ್ಷಣ ಅಪ್ಪ ಅಮ್ಮನ ಕೈಹಿಡಿದು ಎಲ್ಲಿ ಹೋಗಬೇಡ ಎಂದು ಹೇಳುತ್ತಿದ್ದರು. ಅಮ್ಮ ಅಳುತ್ತಿದ್ದಾರೆ. ಹಾಗಾಗಿ ನಾನು ಈ ಸಂದರ್ಭವನ್ನು ನೆನಪಿಸಿಕೊಂಡಿದ್ದೇನೆ ಎಂದು ಅಭಿಷೇಕ್ ಹೇಳಿದರು.

    ತಮ್ಮ ಹಳೆಯ ನೆನಪನ್ನು ಅಭಿಷೇಕ್ ಹಂಚಿಕೊಂಡು ರಾಕ್‍ಲೈನ್ ವೆಂಕಟೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 3 ದಿನಗಳ ಕಾಲ ನಿದ್ದೆಯಿಲ್ಲದೇ ನಮಗೆ ಸಹಾಯ ಮಾಡಿದ್ದಕ್ಕೆ ರಾಕ್‍ಲೈನ್ ಅಂಕಲ್ ತುಂಬಾ ಧನ್ಯವಾದಗಳು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾವೇರಮ್ಮನ ಮಡಿಲಿಗೆ ಅಂಬಿ – ಶ್ರೀರಂಗಪಟ್ಟಣದ ಸಂಗಮದಲ್ಲಿ ಅಭಿಯಿಂದ ಅಸ್ಥಿ ವಿಸರ್ಜನೆ

    ಕಾವೇರಮ್ಮನ ಮಡಿಲಿಗೆ ಅಂಬಿ – ಶ್ರೀರಂಗಪಟ್ಟಣದ ಸಂಗಮದಲ್ಲಿ ಅಭಿಯಿಂದ ಅಸ್ಥಿ ವಿಸರ್ಜನೆ

    – ದರ್ಶನ್, ರಾಕ್‍ಲೈನ್, ದೊಡ್ಡಣ್ಣ ಸೇರಿ ಹಲವರು ಭಾಗಿ

    ಮಂಡ್ಯ: ಮಂಡ್ಯದ ಗಂಡು ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಮೂರು ಮಡಿಕೆಗಳಲ್ಲಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಪುತ್ರ ಅಭಿಷೇಕ್ ವಿಸರ್ಜನೆ ಮಾಡಿದರು.

    ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನ ಸಂಚಯನ ಮಾಡಲಾಗಿದೆ. ಇದರಲ್ಲಿ ಮೂರು ಮಡಿಕೆಗಳಲ್ಲಿರುವ ಅಸ್ಥಿಯನ್ನ ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಇನ್ನೊಂದು ಮಡಿಕೆಯಲ್ಲಿರುವ ಅಸ್ಥಿಯನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಇಡಲಾಗುತ್ತದೆ. ಮತ್ತೊಂದು ಮಡಿಕೆಯಲ್ಲಿರುವ ಅಸ್ಥಿಯನ್ನು ನಿರ್ಮಾಪಕರ ಸಂಘದ ಕಚೇರಿಯಲ್ಲಿ ಇಡಲಾಗುತ್ತದೆ. ಮಗದೊಂದು ಮಡಿಕೆಯಲ್ಲಿರುವ ಅಸ್ಥಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ.

    ಇದಕ್ಕೂ ಮೊದಲು ಶನಿವಾರ ಕರುನಾಡನ್ನೇ ಅಗಲಿದ ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಶ್ ಸಮಾಧಿಯಲ್ಲಿ ಅಸ್ಥಿ ಸಂಚಯನ ನಡೆಯಿತು. ಪುತ್ರ ಅಭಿಷೇಕ್, ಪತ್ನಿ ಸುಮಲತಾ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅಂಬಿ ಆಪ್ತರಾದ ಶ್ರೀನಿವಾಸ್, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ದೊಡ್ಡಣ್ಣ, ಶಾಸಕ ಮುನಿರತ್ನ, ಸಾರಾ ಗೋವಿಂದು ಸೇರಿದಂತೆ ಹಲವಾರು ಭಾಗಿಯಾಗಿದ್ದರು.

    ರೆಬೆಲ್ ಸ್ಟಾರ್ ಗೆ ತಾವು ಬದುಕಲ್ಲ ಅನ್ನೋ ಸುಳಿವು ಮೊದಲೇ ಸಿಕ್ಕಿತ್ತಾ..? ಎಂಬ ಪ್ರಶ್ನೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ನಾಲ್ಕು ತಿಂಗಳ ಹಿಂದೆಯಷ್ಟೇ ಅಂಬರೀಶ್ ಮಗನ ಹೆಸರಿಗೆ ತಮ್ಮ ಆಸ್ತಿಯನ್ನು ವರ್ಗಾಯಿಸಿದ್ದರು. ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿದ್ದ 7 ಎಕರೆಯಷ್ಟು ಪ್ರಿತಾರ್ಜಿತ ಆಸ್ತಿಯನ್ನು ಮಗನ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಮದ್ದೂರು ಪಟ್ಟಣದಲ್ಲಿರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಪುತ್ರ ಅಭಿಷೇಕ್ ಜೊತೆಗೆ ಆಗಮಿಸಿ ಆಸ್ತಿ ವರ್ಗಾವಣೆ ಮಾಡಿದ್ದರು.

    https://www.youtube.com/watch?v=IkWFM7AVeI4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 4 ತಿಂಗ್ಳ ಹಿಂದೆಯಷ್ಟೇ ಮಗನಿಗೆ ಆಸ್ತಿ ವರ್ಗಾಯಿಸಿದ್ದರು ರೆಬೆಲ್ ಸ್ಟಾರ್..!

    4 ತಿಂಗ್ಳ ಹಿಂದೆಯಷ್ಟೇ ಮಗನಿಗೆ ಆಸ್ತಿ ವರ್ಗಾಯಿಸಿದ್ದರು ರೆಬೆಲ್ ಸ್ಟಾರ್..!

    ಮಂಡ್ಯ: ಮಗನ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿದ್ದು ಈ ಮೂಲಕ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ತಾನು ಹೆಚ್ಚು ದಿನ ಬದುಕಲ್ಲ ಅನ್ನೋ ಸುಳಿವು ಮೊದಲೇ ಸಿಕ್ಕಿತ್ತಾ ಅನ್ನೋ ಪ್ರಶ್ನೆಯೊಂದು ಇದೀಗ ಕಾಡುತ್ತಿದೆ.

    ಅಂಬಿ ನಾಲ್ಕು ತಿಂಗಳ ಹಿಂದೆಯಷ್ಟೇ ತಮ್ಮ ಆಸ್ತಿಯನ್ನು ಮಗನ ಹೆಸರಿಗೆ ಬದಲಾಯಿಸಿದ್ದರು. ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ 7 ಎಕರೆಯಷ್ಟು ಪಿತ್ರಾರ್ಜಿತ ಆಸ್ತಿ ಇತ್ತು. ಮದ್ದೂರು ಪಟ್ಟಣದಲ್ಲಿರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಪುತ್ರ ಅಭಿಷೇಕ್ ಜೊತೆಗೆ ಬಂದಿದ್ದ ಅಂಬಿರೀಶ್ ಅವರು ಈ ಆಸ್ತಿಯನ್ನು ಮಗನ ಹೆಸರಿಗೆ ಬದಲಾಯಿಸಿದ್ದರು.

    ಜುಲೈ 26ರಂದು ಅಂಬಿ ಮದ್ದೂರಿನ ಸಬ್ ರಿಜಿಸ್ಟಾರ್ ಆಫೀಸಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಮಾಧ್ಯಮದವರನ್ನು ಒಳಗಡೆ ಬಿಡಬೇಡಿ ಅಂತ ಹೇಳಿ, ತಮ್ಮ ಮಗನ ಜೊತೆ ಕಚೇರಿಯಲ್ಲಿ ತನ್ನ ಆಸ್ತಿಯನ್ನು ಮಗನ ಹೆಸರಿಗೆ ಬರೆದುಕೊಟ್ಟಿದ್ದರು. ಕಚೇರಿಯಿಂದ ಹೊರಗಡೆ ಬಂದ ಬಳಿಕ ಅಂಬರೀಶ್ ಅವರು ಮಾಧ್ಯಮಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ವಿಡಿಯೋ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಇವೆಲ್ಲವನ್ನೂ ಗಮನಿಸಿದ್ರೆ ಅಂಬರೀಶ್ ಅವರಿಗೆ ತನ್ನ ಆರೋಗ್ಯ ಕ್ಷೀಣಿಸುತ್ತಿದೆ ಅಂತ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮಗನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿದ್ರಾ ಅಂತ ಮಂಡ್ಯದಲ್ಲಿ ಅವರ ಅಭಿಮಾನಿಗಳು ಚರ್ಚೆ ಮಾಡುವ ಮೂಲಕ ಭಾವುಕರಾಗುತ್ತಿದ್ದಾರೆ.

    ನವೆಂಬರ್ 24ರ ಶನಿವಾರದಂದು ಮಂಡ್ಯದಲ್ಲಿ ಭೀಕರ ಬಸ್ ಅಪಘಾತ ನಡೆದಿತ್ತು. ಈ ಕುರಿತಾಗಿ ಅಂಬರೀಶ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ತನಗೆ ಹುಷಾರಿಲ್ಲದಿರುವುದಾಗಿ ತಿಳಿಸಿದ್ದರು. ಆದ್ರೆ ರಾತ್ರಿ ಹೃದಯಘಾತವಾಗಿತ್ತು. ಕೂಡಲೇ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ನಂತ ಅವರ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

    ಭಾನುವಾರ ಸಂಜೆ ಅವರ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸೋಮವಾರ ಮತ್ತೆ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತಂದು ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂದು ಅಂಬಿ-ಇಂದು ಅಭಿ

    ಅಂದು ಅಂಬಿ-ಇಂದು ಅಭಿ

    -ಮುದ್ದು ನಾಯಿ ಮರಿಗಳಿಗೆ ಊಟ ಮಾಡಿಸಿದ ಅಂಬಿ ಪುತ್ರ

    ಬೆಂಗಳೂರು: ತನ್ನ ಒಡೆಯ ಅಂಬಿಯನ್ನು ನಾಲ್ಕು ದಿನಗಳಿಂದ ನೋಡದೇ ಅನ್ನ, ನೀರು ತ್ಯಜಿಸಿ ಸೊರಗಿದ್ದ ಕನ್ವರ್ ಲಾಲ್ ಮತ್ತು ಬುಲ್‍ಬುಲ್ ನಾಯಿಗಳನ್ನು ಸಮಾಧಾನ ಮಾಡಿ ಆಹಾರ ತಿನ್ನಿಸೋ ಕೆಲಸವನ್ನು ಇಂದು ಅಂಬಿಯ ಮುದ್ದಿನ ಮಗ ಅಭಿಷೇಕ್ ಮಾಡಿದ್ದಾರೆ.

    ಮನೆ ಮುಂದೆ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಮೈದಡವಿಸಿ, ಅವುಗಳನ್ನು ಸಮಾಧಾನ ಮಾಡೋ ಕೆಲಸ ಮಾಡಿದ್ದಾರೆ. ಕನ್ವರ್ ಮತ್ತು ಬುಲ್ ಬುಲ್ ಇಂದು ಅಭಿಯನ್ನು ನೋಡಿದೊಡನೆ ಮೈ ಮೇಲೆ ಎಗರಿ, ಖುಷಿ ಹಂಚಿಕೊಂಡವು. ‘ಕುತ್ತೇ…ಕನ್ವರ್ ನಹೀ…ಕನ್ವರ್ ಲಾಲ್ ಬೋಲೋ’, ”ಏ ಬುಲ್ ಬುಲ್…ಮಾತಾಡಕ್ಕಿಲ್ವಾ..’ ರೆಬೆಲ್ ಸ್ಟಾರ್ ಅಂಬರೀಶ್ ಅವರ ಫೇಮಸ್ ಡೈಲಾಗ್‍ಗಳು. ಅಂಬರೀಶ್ ಕೆರಿಯರ್ ಗೆ ಹೊಸ ತಿರುವು ನೀಡಿದ ‘ಕನ್ವರ್ ಲಾಲ್’ ಮತ್ತು ‘ಬುಲ್ ಬುಲ್’ ಡೈಲಾಗ್ ಗಳನ್ನ ತಮ್ಮ ಮುದ್ದಿನ ನಾಯಿಗಳ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ‘ಕನ್ವರ್’, ‘ಬುಲ್ ಬುಲ್’ ಶ್ವಾನಗಳ ಹೆಸರಿನ ಇತಿಹಾಸ

    ಅಂಬರೀಶ್ ಮನೆಯಲ್ಲಿರುವ ನಾಯಿಯ ಹೆಸರು ‘ಕನ್ವರ್ ಲಾಲ್’. ಪುಟ್ಟ ಮರಿಯಿಂದಲೂ ಅಂಬಿ ಮನೆಯಲ್ಲೇ ಸ್ಥಾನ ಪಡೆದಿರುವ ‘ಕನ್ವರ್ ಲಾಲ್’ ಅಂಬರೀಶ್ ಗೆ ಅತ್ಯಂತ ಪ್ರೀತಿ ಪಾತ್ರದ ನಾಯಿಯಾಗಿತ್ತು. ಇದಕ್ಕೊಂದು ಜೋಡಿ ಬೇಕು ಅಂತ ಮೂರು ವರ್ಷದ ಹಿಂದೆ ತಮ್ಮ ಮನೆಗೆ ಅಂಬರೀಶ್ ಹೊಸ ನಾಯಿ ತಂದರು. ಅದಕ್ಕೆ ಅಂಬಿ ನಾಮಕರಣ ಮಾಡಿದ್ದು ‘ಬುಲ್ ಬುಲ್’ ಅಂತ. ಪ್ರತಿನಿತ್ಯ ‘ಕನ್ವರ್ ಲಾಲ್’ ಮತ್ತು ‘ಬುಲ್ ಬುಲ್’ ಖುಷಿ ಖುಷಿಯಿಂದ ಮನೆ ತುಂಬ ಓಡಾಡುವುದನ್ನ, ಮೈಮೇಲೆ ಬೀಳೋದನ್ನು ನೋಡಿ ಅಂಬರೀಶ್ ಖುಷಿ ಆಗುತ್ತಿದ್ದರು. ಇದೀಗ ಅಂಬಿ ಸ್ಥಾನವನ್ನು ಪುತ್ರ ಅಭಿ ತುಂಬಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ಅಭಿಮಾನಿಗಳಿಗೆ ಕೈ ಮುಗಿದ ಅಂಬಿ ಪುತ್ರ ಅಭಿಷೇಕ್!

    ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ಅಭಿಮಾನಿಗಳಿಗೆ ಕೈ ಮುಗಿದ ಅಂಬಿ ಪುತ್ರ ಅಭಿಷೇಕ್!

    ಮಂಡ್ಯ: ತಮ್ಮ ತಂದೆಗೆ ತೋರಿದ ಪ್ರೀತಿ ಹಾಗೂ ಗೌರವಕ್ಕೆ ಅಂಬರೀಶ್ ಪುತ್ರ ಅಭಿಷೇಕ್ ಅಭಿಮಾನಿಗಳಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

    ಸ್ಯಾಂಡಲ್ ವುಡ್ ದಿಗ್ಗಜ ಅಂಬರೀಶ್ ಪ್ರಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆದೊಯ್ಯಲು ಸೇನಾ ಹೆಲಿಕಾಪ್ಟರ್ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಬಂದಿಳಿಯುತ್ತಿದ್ದಂತೆಯೇ ಪುತ್ರ ಅಭಿಷೇಕ್ ಅವರು ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.

    ಅಂಬರೀಶ್ ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಮಂಡ್ಯ ಜಿಲ್ಲೆಯೇ ಕಣ್ಣೀರು ಹಾಕಿದ್ದು, ಅಂಬಿಯ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಹೀಗಾಗಿ ಯಾವುದೇ ಅನಾಹುತಗಳು ನಡೆಯದಂತೆ ಅತ್ಯಂತ ಗೌರವಪೂರ್ವಕವಾಗಿ ತಮ್ಮ ತಂದೆಯ ಅಂತಿಮ ದರ್ಶನ ಪಡೆದ ಎಲ್ಲಾ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

    ಕ್ರೀಡಾಂಗಣದಲ್ಲಿ ಕೈ ಮುಗಿದುಕೊಂಡು ಒಂದು ಸುತ್ತು ಬಂದು ಧನ್ಯವಾದ ಹೇಳುವ ಮೂಲಕ ಅಭಿಷೇಕ್ ಅತ್ಯಂತ ಗೌರವಪೂರ್ವಕವಾಗಿ ನಡೆದುಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಜೋರಾಗಿ ಕಿರುಚಿದ್ದಾರೆ. ಈ ಮೂಲಕ ಅಭಿಷೇಕ್ ಗೌರವಕ್ಕೆ ತಲೆಬಾಗಿದ್ದಾರೆ. ಅಭಿಷೇಕ್ ಜೊತೆ ಸುಮಲತಾ ಅವರು ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    ಕೊನೆಯ ಭಾಗವಾಗಿ ಪತ್ನಿ ಸುಮಲತಾ ಮಣ್ಣನ್ನು ಅಂಬಿ ಬಾಯಿಗೆ ಒರೆಸಿದರು. ಇದೇ ಸಂದರ್ಭದಲ್ಲಿ ಮಂಡ್ಯದ ಗಂಡಿಗೆ ಮಂಡ್ಯದ ಮಣ್ಣಿನ ತಿಲಕವನ್ನು ಪುತ್ರ ಅಭಿಷೇಕ್ ಇಟ್ಟಿದ್ದಾರೆ.

    9 ಗಂಟೆಗೆ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಹೆಲಿಕಾಪ್ಟರ್ ಮೂಲಕ ಎಚ್‍ಎಎಲ್‍ಗೆ ಪಾರ್ಥಿವ ಶರೀರ ಹೊರಡಬೇಕಿತ್ತು. ಆದರೆ 1.50 ಗಂಟೆ ತಡವಾಗಿ ಅಂದರೆ 10.53ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪಾರ್ಥಿವ ಶರೀರ ಹೊರಟಿತ್ತು.

    https://www.youtube.com/watch?v=91ZMEP06vk0

    https://www.youtube.com/watch?v=rBjVY_nGZDQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಗೂ ಅಂಬಿಯ ಆ ಕನಸು ಈಡೇರಲಿಲ್ಲ!

    ಕೊನೆಗೂ ಅಂಬಿಯ ಆ ಕನಸು ಈಡೇರಲಿಲ್ಲ!

    ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ವಿಧವಶರಾದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪುತ್ರ ಅಭಿಷೇಕ್ ಸಿನಿಮಾವನ್ನು ವೀಕ್ಷಿಸಬೇಕೆಂದು ಆಸೆಪಟ್ಟಿದ್ದರು. ಆದರೆ ಅವರ ಆಸೆ ಪೂರ್ಣವಾಗಿ ಈಡೇರದೇ ಇದ್ದರೂ ತಮ್ಮ ಮಗ ಅಭಿಷೇಕ್ ನ ಸಿನಿಮಾದ ಫಸ್ಟ್ ಹಾಫ್ ನೋಡಿ ಅಗಲಿದ್ದಾರೆ.

    ನಟ ಅಂಬರೀಶ್ ಅವರಿಗೆ ತಮ್ಮ ಮಗನ ಮೇಲೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ತಮ್ಮಂತೆ ಮಗ ಅಭಿಷೇಕ್ ರಾಜಕೀಯಕ್ಕೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಬಾರಿ ‘ರಾಜಕೀಯ ನಮಗೇ ಸಾಕು, ಅವನಿಗೆ ಬೇಡ’ ಎಂದು ಹೇಳುತ್ತಿದ್ದರು. ಇತ್ತ ಮಗ ಅಭಿಷೇಕ್ ಅವರಿಗೂ ಕೂಡ ಅಪ್ಪನಂತೆ ಸಿನಿಮಾ ಕಡೆ ಆಸಕ್ತಿ ಇತ್ತು. ಆದ್ದರಿಂದ ಮಗ ಮುಂದೆ ದೊಡ್ಡ ನಟನಾಗಬೇಕು ಎಂದು ಅಂಬಿ ಕನಸು ಕಂಡಿದ್ದರು.

    ತಮ್ಮ ಕನಸಿನಂತೆ ಅಭಿಷೇಕ್ ನಟನಾಗಿ ಮಿಂಚಲು ವೇದಿಕೆ ಸಿದ್ಧವಾಗಿತ್ತು. ಈ ವೇಳೆ ಸ್ವತಃ ಅಂಬರೀಶ್ ಅವರು ಮಗನಿಗಾಗಿ ಕಥೆ ಕೇಳಿ ಓಕೆ ಮಾಡಿದ್ದರು. ಇನ್ನು ಮುಂದೆಯೂ ನಾನೇ ಅಭಿಷೇಕ್ ಕಥೆಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದರು. ಅಂಬರೀಶ್ ಅವರಿಗೆ ತಮ್ಮ ಮಗನ ಚೊಚ್ಚಲ ಸಿನಿಮಾವನ್ನು ನೋಡಿ ಕಣ್ತುಂಬಿಕೊಳ್ಳುವ ಆಸೆ ಇತ್ತು. ಆದರೆ ಆ ಸಿನಿಮಾವನ್ನು ನೋಡುವ ಮುನ್ನವೇ ಅಂಬಿ ಇಹಲೋಕ ತ್ಯಜಿಸಿದ್ದಾರೆ. ಇದು ಮನಸ್ಸಿಗೆ ಬೇಸರದ ಸಂಗತಿಯಾಗಿದೆ.

    ಮಗನ `ಅಮರ್’ ಸಿನಿಮಾವನ್ನು ಸಂಪೂರ್ಣವಾಗಿ ನೋಡದಿದ್ದರೂ, ಫಸ್ಟ್ ಹಾಫ್ ಅನ್ನು ನೋಡಿ ಖುಷಿಪಟ್ಟಿದ್ದಾರೆ. ಈ ಬಗ್ಗೆ ಅವರ ಗೆಳೆಯ, ‘ಅಮರ್’ ಸಿನಿಮಾದ ನಿರ್ಮಾಪಕ ಸಂದೇಶ್ ನಾಗರಾಜ್  ಹೇಳಿದ್ದಾರೆ.

    “ಅಂಬಿಗೆ ತಮ್ಮ ಮಗ ಸಿನಿಮಾರಂಗದಲ್ಲಿ ದೊಡ್ಡ ಹೀರೋ ಆಗಬೇಕು. ಜೊತೆಗೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಕನಸು ಕಂಡಿದ್ದ. ಅವರಂತೆಯೇ ಅಂಬಿ ಮಗನ ಚೊಚ್ಚಲ ಸಿನಿಮಾವನ್ನು ನಿರ್ಮಿಸುವ ಅವಕಾಶ ನನಗೆ ಸಿಕ್ಕಿತ್ತು. ಈಗಾಗಲೇ ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದೆ. ಈ ವೇಳೆ ಅಂಬಿಗೆ ಮಗ ಏನು ಮಾಡಿದ್ದಾನೆ ಎಂದು ನೋಡುವ ಆಸೆಯಾಗಿತ್ತು” ಎಂದು ಹೇಳಿದ್ದಾರೆ.

    ಒಂದು ದಿನ ‘ಅಮರ್’ ಶೂಟಿಂಗ್ ಏನಾಗಿದೆ ಅದನ್ನು ನಾನು ನೋಡಬೇಕು ಎಂದರು. ಅದಕ್ಕೆ ನಾನು, “ಈಗಲೇ ಬೇಡ, ಇನ್ನು ಕೆಲವು ದಿನಗಳು ಶೂಟಿಂಗ್ ಇದೆ ಬಳಿಕ ಸಿನಿಮಾ ನೋಡಬಹುದು” ಎಂದು ಹೇಳಿದ್ದೆ. ಆದರೆ ಅಂಬಿ ನಾನು ನೋಡಲೇಬೇಕು ಎಂದು ಹಠ ಮಾಡಿದ್ದರು. ಕೊನೆಗೆ ಡಬ್ಬಿಂಗ್ ಮಾಡಿಸಿ ‘ಅಮರ್’ ಸಿನಿಮಾ ಫಸ್ಟ್ ಹಾಫ್ ನೋಡಿಸಿದ್ದೆವು. ಮಗನ ಸಿನಿಮಾ ನೋಡಿ ಅಂಬಿ ಸಂತಸ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಈ ವೇಳೆ ಮಗನನ್ನು ಕರೆದು, “ತುಂಬಾ ಚೆನ್ನಾಗಿ ಅಭಿನಯಿಸಿದ್ದೀಯಾ, ಏನು ಹೆದರಬೇಡ” ಎಂದು ಬೆನ್ನುತಟ್ಟಿದ್ದರು ಅಂತ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

    https://www.youtube.com/watch?v=fJfbkc_yU8M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದೇಶಕ್ಕೆ ಹಾರಲು ರೆಡಿಯಾಯ್ತು ಅಮರ್ ಟೀಮ್!

    ವಿದೇಶಕ್ಕೆ ಹಾರಲು ರೆಡಿಯಾಯ್ತು ಅಮರ್ ಟೀಮ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕನಾಗಿ ಲಾಂಚ್ ಆಗುತ್ತಿರೋ ಚಿತ್ರ ಅಮರ್. ಈ ಕಾರಣದಿಂದಲೇ ಈ ಚಿತ್ರದ ಸಕಲ ಆಗುಹೋಗುಗಳ ಬಗ್ಗೆಯೂ ಜನರಿಗೊಂದು ಕುತೂಹಲವಿದೆ. ಅದಕ್ಕೆ ಸರಿಯಾಗಿಯೇ ನಿರ್ದೇಶಕ ನಾಗಶೇಖರ್ ಅವರು ಭಲೇ ಸ್ಪೀಡಿನಿಂದ ಕೆಲಸ ಮಾಡಲಾರಂಭಿಸಿದ್ದಾರೆ.

    ಕೊಯಮತ್ತೂರಿನಿಂದ ಚಿತ್ರೀಕರಣ ಶುರು ಮಾಡಿದ್ದ ನಾಗಶೇಖರ್ ಯಶಸ್ವಿಯಾಗಿ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ಹಂತದ ಚಿತ್ರೀಕರಣಕ್ಕೆ ಸರಿಕಟ್ಟಾದ ಪ್ಲಾನು ಮಾಡಿಕೊಂಡು ವಿದೇಶದತ್ತ ಹೊರಡಲು ರೆಡಿಯಾಗಿದ್ದಾರೆ.

    ಅಂಬರೀಶ್ ಅವರ ಪುತ್ರ ಅಭಿಷೇಕ್ ಗೆ ಇದು ಮೊದಲ ಚಿತ್ರ. ಆದರೆ ಚಿತ್ರೀಕರಣ ಶುರುವಾದ ಬಳಿಕ ನಿರಂತರವಾಗಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಅವರ ಎನರ್ಜಿ ಕಂಡರೆ ಅಭಿ ಕನ್ನಡ ಚಿತ್ರರಂಗದಲ್ಲಿ ಮುಖ್ಯ ನಾಯಕನಾಗಿ ನೆಲೆ ನಿಲ್ಲುವ ಭರವಸೆ ಮೂಡುತ್ತದೆ ಎಂಬಂಥಾ ಮೆಚ್ಚುಗೆಯನ್ನೂ ನಿರ್ದೇಶಕ ನಾಗಶೇಖರ್ ಹೊಂದಿದ್ದಾರೆ.

    ಇದೀಗ ಕೊಯಮತ್ತೂರು, ಬೆಳಗಾವಿ, ಮಡಿಕೇರಿ, ಮಣಿಪಾಲ್, ಮಂಗಳೂರು ಸುತ್ತಮುತ್ತ ನಡೆದ ನಿರಂತರ ಚಿತ್ರೀಕರಣದಿಂದ ಚಿತ್ರ ತಂಡ ವಿರಾಮ ಪಡೆದಿದೆ. ಇದೀಗ ನಾಗಶೇಖರ್ ಅಣತಿಯಂತೆಯೇ ಹೊಸಾ ಹುರುಪು ತುಂಬಿಕೊಂಡು ವಿದೇಶಕ್ಕೆ ಹೊರಡಲು ಸಜ್ಜಾಗಿ ನಿಂತಿದೆ.

    ಬೈಕ್ ರೇಸಿನ ಪ್ರಧಾನ ಅಂಶವನ್ನು ಹೊಂದಿರೋ ಈ ಚಿತ್ರ ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿ ಬಂದಿದೆಯಂತೆ. ಇದುವರೆಗೂ ಚಿತ್ರೀಕರಣಕ್ಕೆ ಡಿಫರೆಂಟಾದ ಲೊಕೇಶನ್ನುಗಳನ್ನೇ ಹುಡುಕುತ್ತಾ ಬಂದಿರೋ ನಾಗಶೇಖರ್ ವಿದೇಶದಲ್ಲಿಯೂ ಅಂಥಾದ್ದೇ ವಿರಳ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಸೀತಾರಾಮ ಕಲ್ಯಾಣ’ ಸೆಟ್ ನಲ್ಲಿ ಜೂನಿಯರ್ ರೆಬೆಲ್ ಸ್ಟಾರ್

    `ಸೀತಾರಾಮ ಕಲ್ಯಾಣ’ ಸೆಟ್ ನಲ್ಲಿ ಜೂನಿಯರ್ ರೆಬೆಲ್ ಸ್ಟಾರ್

    ಬೆಂಗಳೂರು: ನಟ ನಿಖಿಲ್ ಕುಮಾರ್ ಸ್ವಾಮಿ ಅಭಿನಯದ `ಸೀತಾರಾಮ ಕಲ್ಯಾಣ’ ಸಿನಿಮಾ ಶೂಟಿಂಗ್ ಸೆಟ್ ಗೆ ಹಿರಿಯ ನಟ ರೆಬೆಲ್‍ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಭೇಟಿ ಕೊಟ್ಟಿದ್ದಾರೆ.

    ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ `ಸೀತಾರಾಮ ಕಲ್ಯಾಣ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸಂಜೆ ಸುಮಾರು 5:30ಕ್ಕೆ ಸಿನಿಮಾ ಸೆಟ್ ಗೆ ಅಭಿಷೇಕ್ ಭೇಟಿಕೊಟ್ಟು, ನಿಖಿಲ್ ಅವರ ಸಾಹಸ ದೃಶ್ಯಗಳ ಚಿತ್ರೀಕರಣವನ್ನು ವೀಕ್ಷಿಸಿದ್ದಾರೆ. ಇದನ್ನೂ ಓದಿ: ಅಪ್ಪ ಅಧಿಕಾರದಲ್ಲಿರುವಾಗ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಿ- ತೆಲಂಗಾಣ ಸಿಎಂ ಪುತ್ರನಿಂದ ನಿಖಿಲ್ ಗೆ ಬುದ್ಧಿಮಾತು

    ಈ ಹಿಂದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ತಮ್ಮ ಬ್ಯುಸಿ ಕೆಲಸದಲ್ಲೂ ಮಗನ ಶೂಟಿಂಗ್ ನೋಡಲು ಹೋಗಿದ್ದರು. ಅಭಿಷೇಕ್ ಭೇಟಿಕೊಟ್ಟ ಬಗ್ಗೆ ನಿಖಿಲ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    `ಸೀತಾರಾಮ ಕಲ್ಯಾಣ’ ಸಿನಿಮಾ ಹರ್ಷ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್ ಮೊದಲ ಬಾರಿಗೆ ನಿಖಲ್ ಅವರಿಗೆ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಸಾಹಸನಿರ್ದೇಶಕ ರಾಮ್ ಲಕ್ಷ್ಮನ್ ನಿರ್ದೇಶನದಲ್ಲಿ ಫೈಟ್ ಸೀನ್ ಶೂಟ್ ಮಾಡಲಾಗುತ್ತಿತ್ತು.

  • ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ಬೆಂಗಳೂರು: ಅದೊಂದು ಕಾಲವಿತ್ತು. ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್.

    ಹೌದು. ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶಿಟ್ ಗಾಗಿ ಕಾದು ಕುಳಿತ್ತಿದ್ದಾರೆ.


    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ ಪ್ರೀತಿಯ ಪುತ್ರನಾದ ಅಭಿ, ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಮ್ಮಿ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಪೋಸ್ ಕೊಟ್ಟಿದ್ದು ಬಿಟ್ಟರೆ ಗಾಂಧಿನಗರದಿಂದ ಈ ಹುಡುಗ ಬಲು ದೂರ ದೂರ. ಅಂಬಿ ಮಗನೂ ಹೀರೋ ಆಗುತ್ತಾನಾ ಎನ್ನುವ ಪ್ರಶ್ನೆ ಅಗಾಗ ಕೇಳುತ್ತಿದ್ದವು. ಈಗ ಆ ಪ್ರೆಶ್ನೆಗೆ ಸರಿಯಾದ ಉತ್ತರ ಸಿಗುವ ಕಾಲ ಸನಿಹವಾಗಿದೆ.

    ಕಥೆ-ಚಿತ್ರಕಥೆ ರೆಡಿ ಮಾಡಿಕೊಳ್ಳದೆಯೇ, ನಿರ್ದೇಶಕ ಯಾರೆಂಬುದನ್ನು ಕನ್ಫರ್ಮ್ ಮಾಡಿಕೊಳ್ಳದೆಯೇ ಪ್ರೋಡ್ಯೂಸರ್ ಗಳು ಅಂಬಿ ಪುತ್ರ ಅಭಿಷೇಕ್ ಗಾಗಿ ಬಲೆ ಬೀಸಿದ್ದಾರೆ. ಸರ್ ನಿಮ್ಮ ಮಗನ್ನ ನಮ್ಮ ಬ್ಯಾನರ್‍ನಲ್ಲಿ ಇಂಟ್ರೊಡ್ಯೂಸ್ ಮಾಡಿ. ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರಂತೆ. ಗಾಂಧಿನಗರ ಆಫ್ ದಿ ರೆರ್ಕಾಡ್ ಸಮಾಚಾರವೇನಂದ್ರೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಾರೆ ಅನ್ನೊ ಸುದ್ದಿ.

    ಪ್ರಿನ್ಸ್, ಐರಾವತ ಸೇರಿದಂತೆ ಅನೇಕ ಅದ್ಧೂರಿ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸಂದೇಶ್ ನಾಗರಾಜ್, ಅಭಿಷೇಕ್‍ಗಾಗಿ ಸಿನಿಮಾ ಮಾಡಲಿದ್ದಾರಂತೆ. ಅಂಬರೀಶ್ ಜೊತೆ ಒಂದು ಸುತ್ತಿನ ಮಾತುತೆಯನ್ನೂ ಕೂಡ ಸಂದೇಶ್ ನಾಗರಾಜ್ ಮಾಡಿದ್ದಾರಂತೆ. ಇಂತದೊಂದು ಸಮಾಚಾರ ಸದ್ಯ ಗಾಂಧಿನಗರದ ತುಂಬಾ ಸದ್ದು ಮಾಡುತ್ತಿದೆ. ಅಭಿಷೇಕ್ ಅವರ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ಬರುವ ಜನವರಿ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

    ಇಂತಹ ಸುದ್ದಿ ಹಬ್ಬಿರುವಾಗಲೇ ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ನೋಡಿದ ಮಂದಿ ಓಹೋ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಾರೆಯಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಅಂಬಿ ಸ್ನೇಹದ ಕಡಲಲ್ಲಿ ತೇಲಾಡುತ್ತಿರುವ ಸ್ನೇಹಿತರಿಗೆ ಅಭಿಷೇಕ್ ಸಿನಿಮಾ ರಂಗಕ್ಕೆ ಬರುತ್ತಿರುವ ಸಮಾಚಾರ ಮಂಡ್ಯದ ಸಿಹಿ ಬೆಲ್ಲ ಸವಿದಂತಾಗುತ್ತಿದೆ. ಆದಷ್ಟು ಬೇಗ ಅಭಿಷೇಕ್ ಚಿತ್ರರಂಗಕ್ಕೆ ಬರಲಿ, ಅಂಬಿಯಂತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅನ್ನೊದೆ ಕೋಟಿ ಕೋಟಿ ಅಭಿಮಾನಿಗಳ ಆಶಯ.

  • ತಿಥಿ ಚಿತ್ರದ ಅಭಿಷೇಕ್ ಗೆ ಮದುವೆ ಸಂಭ್ರಮ

    ತಿಥಿ ಚಿತ್ರದ ಅಭಿಷೇಕ್ ಗೆ ಮದುವೆ ಸಂಭ್ರಮ

    ಮಂಡ್ಯ: ತಿಥಿ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಯುವ ನಟ ಅಭಿಷೇಕ್ ನವೆಂಬರ್ 14ರಂದು ಗೃಹಸ್ಥಾಶ್ರಮಕ್ಕೆ ಕಾಲಿರಿಸಲಿದ್ದಾರೆ.

    ನವೆಂಬರ್ 14 ಮತ್ತು 15ರಂದು ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಮೂಲತಃ ಮಂಡ್ಯ ಮೂಲದ ಹುಲಿಕೆರೆ ಕೊಪ್ಪಲು ಗ್ರಾಮದ ಅಭಿಷೇಕ್, ತಮ್ಮ ಅಕ್ಕನ ಮಗಳು ಹೊಂಬಾಳೆ ಎಂಬಾಕೆಯನ್ನು ವರಿಸಲಿದ್ದಾರೆ. ಮಂಡ್ಯದ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣಮಂಟಪದಲ್ಲಿ ಅಭಿಷೇಕ್ ಮದುವೆ ನಡೆಯಲಿದೆ.

    ಸುಂದರ ಸಾಮಾಜಿಕ ಹಾಗೂ ಕಲಾತ್ಮಕ ಸಿನಿಮಾ `ತಿಥಿ’ ಮೂಲಕ ಅಭಿಷೇಕ್ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುವುದರ ಜೊತೆಗೆ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು. ಅಭಿಷೇಕ್ ತಿಥಿ ಸಿನಿಮಾದ ನಂತರ ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಂ ಮತ್ತು ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿ ನಟಿಸಿದ್ದಾರೆ.