ಬೆಂಗಳೂರು: ದಿವಂಗತ ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅವರು ಸರಳವಾಗಿ ಶುಕ್ರವಾರ ನೆರವೇರಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಕ್ಕೆ ಗೃಹ ಪ್ರವೇಶ ಮಾಡಿ ಸುಮಲತಾ ಮತ್ತು ಅಭಿಷೇಕ್ ಹೋಗಿದ್ದಾರೆ. ಅಂಬರೀಶ್ ಅವರು ಬದುಕಿದ್ದಾಗ ಈ ಮನೆಯನ್ನ ಕೆಡವಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಸುಮಾರು ಮೂರ್ನಾಲ್ಕು ವರ್ಷದಿಂದ ಇಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು.
ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಹೀಗಿರುವಾಗಲೇ ಶುಕ್ರವಾರ ಒಳ್ಳೆಯ ದಿನ ಅನ್ನೋ ಕಾರಣಕ್ಕೆ ಪೂಜೆ ಸಲ್ಲಿಸಿ ಹೊಸ ಮನೆಗೆ ಹೋಗಿದ್ದಾರೆ. ಗೃಹ ಪ್ರವೇಶವನ್ನು ಸರಳವಾಗಿ ಮಾಡಿದ್ದು, ಆಪ್ತರು, ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.
ಮಂಡ್ಯ: ಯಾವ ಸರ್ವೆ ಮಾಡಿಸಿದರು, ಎಷ್ಟು ದೇವಾಲಯಗಳನ್ನು ಸುತ್ತಿದರೂ ಫಲಿತಾಂಶ ಬದಲಾವಣೆಯಾಗುವುದಿಲ್ಲ. ಫಲಿತಾಂಶ ಏನಿದ್ದರೂ ಮತಯಂತ್ರದಲ್ಲಿ ಅಡಗಿದೆ ಅದು ಮೇ 23ಕ್ಕೆ ಹೊರಬೀಳಲಿದೆ ಎಂದು ಪರೋಕ್ಷವಾಗಿ ಸಿಎಂ ಎಚ್ಡಿಕೆ ಕುಟುಂಬಕ್ಕೆ ಅಭಿಷೇಕ್ ಅಂಬರೀಶ್ ಟಾಂಗ್ ನೀಡಿದ್ದಾರೆ.
ಅಭಿಮಾನಿಯೊಬ್ಬರ ಕೋರಿಕೆ ಮೇರೆಗೆ ಮಂಡ್ಯದಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಮೇ ತಿಂಗಳು ನಮ್ಮ ಕುಟುಂಬಕ್ಕೆ ತುಂಬ ವಿಶೇಷವಾದದ್ದು ಎಂದು ಹೇಳಿದ್ದಾರೆ.
ಮೇ 23 ರಂದು ಅಮ್ಮ ಸುಮಲತಾ ಅವರು ಸ್ಪರ್ಧೆ ಮಾಡಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಇದೇ ಮೇ 29ಕ್ಕೆ ಅಪ್ಪನ ಹುಟ್ಟು ಹಬ್ಬ ಇದೆ. ಈ ತಿಂಗಳು ನನ್ನ ಅಮರ್ ಸಿನಿಮಾ ಬಿಡುಗಡೆಯಾಗಲಿದೆ ಇದ್ದರಿಂದ ಈ ತಿಂಗಳು ನಮ್ಮ ಕುಟುಂಬಕ್ಕೆ ಬಹಳ ವಿಶೇಷವಾದದ್ದು. ನಮ್ಮ ಪ್ರೀತಿ ಮಾಡುವ ಜನರು ಪ್ರೀತಿಯಿಂದ ಟೀ, ಕಾಫಿಗೆ ಕರೆಯುತ್ತಾರೆ ಅದಕ್ಕೆ ಮಂಡ್ಯಕ್ಕೆ ಬರುತ್ತಿರುತ್ತೇನೆ. ಕಳೆದ ಕೆಲವು ದಿನಗಳಿಂದ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಬಂದಿರಲಿಲ್ಲ ಎಂದು ಹೇಳಿದರು.
ಇದೇ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ ಅಭಿಷೇಕ್, ಅವರು ಹೊಸ ಸಿನಿಮಾ ಮಾಡುತ್ತಾರೆ ಅಂತಾ ಕೇಳಲ್ಪಟ್ಟೆ. ಅವರಿಗೆ ಗುಡ್ ಲಕ್ ಎಂದು ಹೇಳಿದರು.
ನನ್ನ ಅಮರ್ ಸಿನಿಮಾಗಿಂತ ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆಯೇ ನನಗೆ ಜಾಸ್ತಿ ಕುತೂಹಲ ಇದೆ. ನಾವು ಯಾವ ಸರ್ವೆಗಳನ್ನು ಮಾಡಿಸಿಲ್ಲ ನಮಗೆ ಮತದಾನ ನಡೆದ ದಿನವೇ ಫಲಿತಾಂಶ ಗೊತ್ತಾಗಿದೆ. ಅದು ಮೇ 23 ರಂದು ಪ್ರಕಟವಾಗಬೇಕಿದೆ. ಅಪ್ಪನ ಕನಸಾದ ಜೆಪಿ ನಗರದ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಬಳಿಕ ಮಂಡ್ಯದಲ್ಲಿ ಮನೆ ಕಟ್ಟುವ ಪ್ರಕ್ರಿಯೆ ಶುರುಮಾಡಲಿದ್ದೇವೆ.
ಫಲಿತಾಂಶದ ಬಗ್ಗೆ ಟೆನ್ಷನ್ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ನೋ ವೇ ಚಾನ್ಸೇ ಇಲ್ಲ ಎಂದು ಅಂಬರೀಷ್ ಅವರ ಡೈಲಾಗ್ ಹೊಡೆದರು.
– ಡಿ ಬಾಸ್ ಅಭಿಮಾನಿಗಳಿಂದ ಪೋಸ್ಟ್
– ತಾಯಿಯ ಬಳಿಕ ಅಭಿಷೇಕ್ ಮದ್ದೂರಿನಲ್ಲಿ ಸ್ಪರ್ಧೆ?
ಮಂಡ್ಯ: ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು, ಮುಂದೆ ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್ ಇರುತ್ತಾರೆ ಎಂದು ನಟ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿ ಸವಾಲು ಎಸೆದಿದ್ದಾರೆ.
ಇದೀಗ ದರ್ಶನ್ ಅಭಿಮಾನಿಗಳ ಪೋಸ್ಟ್ ನಿಂದ ಅಮ್ಮನ ರಾಜಕೀಯ ಎಂಟ್ರಿ ಬಳಿಕ ಅಭಿಷೇಕ್ ಅಂಬರೀಶ್ ರಾಜಕೀಯ ರಂಗ ಪ್ರವೇಶ ಮಾಡಲು ಸಜ್ಜಾಗಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಪೋಸ್ಟ್ ನಲ್ಲಿ ಏನಿದೆ?
“ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು. ಮುಂದೆ ನಿನ್ನ ಎದುರಾಳಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರ, ತಾಕತ್ ಇದ್ದರೆ ಫೇಸ್ ಮಾಡು” ಎಂದು ಫೇಸ್‍ಬುಕ್‍ನಲ್ಲಿ ಬರೆದು ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ.
ಮದ್ದೂರು ವಿಧಾನಸಭಾ ಕ್ಷೇತ್ರದ ದೊಡ್ಡರಸಿನಕೆರೆ ಗ್ರಾಮ ಅಂಬರೀಶ್ ಅವರ ಹುಟ್ಟೂರಾಗಿದೆ. ಹೀಗಾಗಿ ಮದ್ದೂರು ಕ್ಷೇತ್ರದಲ್ಲಿ ಅಂಬಿ ಕುಟುಂಬಕ್ಕೆ ಸಾವಿರಾರು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮದ್ದೂರು ಕ್ಷೇತ್ರದಲ್ಲಿ ಹೆಚ್ಚು ಲೀಡ್ ಪಡೆಯಲಿದ್ದಾರೆ ಎಂಬ ಲೆಕ್ಕಾಚಾರವು ಇದೆ.
ಮಂಡ್ಯ: ನಟ ಅಭಿಷೇಕ್ ಅವರು ಚುನಾವಣೆ ಮುಗಿದ ಮೇಲೆ ಮಂಡ್ಯಕ್ಕೆ ಬಂದು ಟೀ ಕುಡಿಯುತ್ತೇನೆ ಎಂದು ಹೇಳಿದ್ದರು. ಇದೀಗ ಅವರು ಕೊಟ್ಟ ಮಾತಿನಂತೆ ಮಂಡ್ಯಕ್ಕೆ ಬಂದು ಟೀ ಕುಡಿದಿದ್ದಾರೆ.
ಚುನಾವಣೆ ಮುಗಿದ ಬಳಿಕ ನಟ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ ಏ. 19(ಇಂದು) ಸಿಂಗಾಪುರಕ್ಕೆ ಹೋಗುತ್ತಾರೆ. ಸಿಂಗಾಪುರಕ್ಕೆ ತೆರಳಲು ಈಗಾಗಲೇ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ ಎನ್ನಲಾದ ನಕಲಿ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಉತ್ತರಿಸಿದ್ದ ಅಭಿಷೇಕ್, ಚುನಾವಣೆ ಮುಗಿದ ಮಾರನೇ ದಿನ ಮಂಡ್ಯದ ಮಹಾವೀರ್ ಸರ್ಕಲ್‍ಗೆ ಬಂದು ಟೀ ಕುಡಿಯುತ್ತೇನೆ. ಯಾವ ಸಿಂಗಾಪುರಕ್ಕೂ ಹೋಗಲ್ಲ. ಇದೆಲ್ಲವೂ ಸುಳ್ಳು ಎಂದಿದ್ದರು. ಅದರಂತೆಯೇ ಇದೀಗ ಮಂಡ್ಯದ ಮಹಾವೀರ ಸರ್ಕಲ್‍ನ ಟೀ ಶಾಪ್‍ಗೆ ಬಂದು ಟೀ ಕುಡಿದಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿಗೆ ನಟ ಅಭಿಷೇಕ್ ಅಂಬರೀಶ್ ಬೇಸರ
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿಷೇಕ್, ಎರಡು ವಾರದ ಹಿಂದೆ ಇಲ್ಲಿಗೆ ಬಂದಿದ್ದೆ. ಆಗ ಬೆಲ್ಲ ಖಾಲಿಯಾಗಿದೆ ಎಂದು ಸಕ್ಕರೆ ಟೀ ಕೊಟ್ಟಿದ್ದರು. ಆಗ ಚುನಾವಣೆ ಮುಗಿದ ಬಳಿಕ ನಾನು ಬರುತ್ತೇನೆ ಆಗ ಬೆಲ್ಲದ ಟೀ ಕೊಡಿ ಎಂದು ಕೇಳಿದ್ದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಂಗಾಪುರಕ್ಕೆ ಹೋಗುತ್ತಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ನಾನು ಯಾವ ಸಿಂಗಾಪುರಕ್ಕೂ ಹೋಗಲ್ಲ ಎಂದು ಮೊದಲೇ ಹೇಳಿದ್ದೆ. ಜೊತೆಗೆ ಮಂಡ್ಯದ ಮಹಾವೀರ ಸರ್ಕಲ್‍ನಲ್ಲೇ ಟೀ ಕುಡಿಯುವ ಪ್ಲಾನ್ ಇತ್ತು. ಇವತ್ತು ಆರಾಮಾಗಿ ಟೀ ಕುಡಿಯಲು ಬಂದಿದ್ದೇನೆ ಎಂದಿದ್ದಾರೆ.
ಜನರು ನಮ್ಮ ಕೈಯನ್ನು ಹಿಡಿಯುತ್ತಾರೆ ಎಂಬ ನಂಬಿಕೆ ಇದೆ. ಈಗಾಗಿ ಎಲ್ಲವೂ ಒಳ್ಳೆದಾಗುತ್ತದೆ ಎಂಬ ವಿಶ್ವಾದ ಇದೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ.
ಮಂಡ್ಯ: ಪಕ್ಷೇತರ ಅಭ್ಯರ್ಥಿಯೊಬ್ಬರ ಮಗ, ನನ್ನ ತಮ್ಮ ನಿನ್ನೆ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ತಂದೆ, ತಾಯಿ ಸಂಸ್ಕೃತಿಯಿಂದ ಅವರನ್ನ ಬೆಳೆಸಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ವಿರುದ್ಧ ಕಿಡಿಕಾರಿದ್ದಾರೆ.
ಮದ್ದೂರು ಎಳನೀರು ಮಾರುಕಟ್ಟೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಕುಮಾರಣ್ಣ ಟವೆಲ್ ಹಿಡ್ಕೊಂಡು ಅಳುತ್ತಾರೆ ಅಂತ ವ್ಯಂಗ್ಯವಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.
ಮಾಜಿ ಸಚಿವ ಅಂಬರೀಶ್ ಅವರ ಬಗ್ಗೆ ಅತ್ಯಂತ ಗೌರವ ಹೊಂದಿದ್ದೇನೆ. ಸಿಎಂ ಕುಮಾರಸ್ವಾಮಿ ಅವರು ಕೂಡ ಚುನಾವಣೆ ಪ್ರಚಾರದ ವೇಳೆ ಅಂಬರೀಶ್ ಅವರ ಹೆಸರನ್ನು ಪದೇ ಪದೇ ಬಳಸಬೇಡಿ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಂಬರೀಶ್ ಅವರ ಹೆಸರನ್ನು ಬಳಿಸಿಕೊಂಡು ಮತ ಕೇಳುವ ಪರಿಸ್ಥಿತಿ ಇನ್ನೂ ನಮಗೆ ಬಂದಿಲ್ಲ ಎಂದು ಹೇಳಿದರು.
ಅಭಿಷೇಕ್ ಹೇಳಿದ್ದೇನು?:
ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಶುಕ್ರವಾರ ಪ್ರಚಾರದ ವೇಳೆ ಮಾತನಾಡಿದ್ದ ಅಭಿಷೇಕ್ ಅವರು, ಮೈಕ್ ಮುಂದೆ ಟವಲ್ ಹಿಡಿದುಕೊಂಡು ಅಳಬೇಕೆ? ನಾವು ಹಂಗೆಲ್ಲ ಅಳಲ್ಲ. ನೀವು ಇರುವಾಗ ನಾವು ಯಾಕೆ ಅಳಬೇಕು. ನೇರವಾಗಿ ಗೆಲ್ಲಲು ಸಾಧ್ಯವಿಲ್ಲವೆಂದು ಮೈತ್ರಿ ನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಸುಮಲತಾ ಹೆಸರಿನ ಮೂರು ಜನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದರು.
ಮಂಡ್ಯ: ಮೈಕ್ ಮುಂದೆ ಟವಲ್ ಹಿಡಿದುಕೊಂಡು ಅಳಬೇಕೆ? ನಾವು ಹಂಗೆಲ್ಲ ಅಳಲ್ಲ. ನೀವು ಇರುವಾಗ ನಾವು ಯಾಕೆ ಅಳಬೇಕು ಎಂದು ಅಭಿಷೇಕ್ ಅಂಬರೀಶ್, ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಪರ ಪ್ರಚಾರದ ವೇಳೆ ಮಾತನಾಡಿದ ಅಭಿಷೇಕ್ ಅವರು, ನೇರವಾಗಿ ಗೆಲ್ಲಲು ಸಾಧ್ಯವಿಲ್ಲವೆಂದು ಮೈತ್ರಿ ನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಸುಮಲತಾ ಹೆಸರಿನ ಮೂರು ಜನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿ ನಕ್ಕರು.
ಸುಮಲತಾ ಅವರನ್ನು ಸೋಲಿಸಲು ಮೈತ್ರಿ ನಾಯಕರು ಏನೇನೋ ಗಿಮಿಕ್ ಮಾಡುತ್ತಿದ್ದಾರೆ. ನಾವು ದಡ್ಡರಲ್ಲ ಅಂತ ಏಪ್ರಿಲ್ 18ರಂದು ತೋರಿಸೋಣ. ಮತದಾರರಿಗೆ ಹಣ ಹಂಚುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಆದರೆ ನಾವು ಹಂಚುತ್ತಿರುವುದು ಹಣವಲ್ಲ, ಪ್ರೀತಿಯನ್ನ ಎಂದು ತಿರುಗೇಟು ಕೊಟ್ಟರು.
ಮೈತ್ರಿ ನಾಯಕರು ಬೇರೆ ಬೇರೆ ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ವೋಟ್ ಹಾಕುವಾಗ ಹೆಸರು ಹಾಗೂ ಚಿಹ್ನೆಯನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮೂಲಕ ಸ್ತ್ರೀ ಶಕ್ತಿ ಏನು ಅಂತ ಅವರಿಗೆ ನೀವು ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮತದಾರರಿಗೆ ಅಭಿಷೇಕ್ ಮನವಿ ಮಾಡಿಕೊಂಡರು.
ನಾನು ಮಂಡ್ಯ ಕ್ಷೇತ್ರಕ್ಕೆ ನಿನ್ನೆ ಮೊನ್ನೆ ಬಂದಿಲ್ಲ. ಇಲ್ಲಿನ ಹುಡುಗಿಯನ್ನು ಮದುವೆಯಾಗಿ ಮಂಡ್ಯದವನೆಂದು ಕರೆಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ನಾನು ಮಂಡ್ಯದ ಅಳಿಯನಲ್ಲ. ನಾನು ಮಂಡ್ಯದ ಮಗ ಎಂದು ಸ್ನೇಹಿತ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದರೆ ಮಾಜಿ ಸಚಿವ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಯಾವ ಲೆಕ್ಕಾಚಾರವೆಂದು ನನಗೆ ಅರ್ಥವಾಗುತ್ತಿಲ್ಲ. ಅವರು ಹೇಳಿದರು ಅಂತ ನೀವು ನಂಬುತ್ತಿರಾ? ಅವರಿಗೆ ಇಷ್ಟ ಬಂದಂತೆ ಮಾತನಾಡಲಿ, ಹೇಳಿಕೆ ನೀಡಲಿ ನೀವು ಅದನ್ನು ನಂಬಬೇಡಿ. ನಮ್ಮ ತಾಯಿಗೆ ಆಶೀರ್ವಾದ ಮಾಡಿ, ನಮಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡರು.
ಮಂಡ್ಯ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜಿಲ್ಲೆಯಲ್ಲಿ ಬಾಡಿಗೆ ಪಡೆದಿರುವ ಮನೆಯಲ್ಲಿ ಗಣಹೋಮ ಪೂಜೆ ನಡೆಯುತ್ತಿದೆ.
ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ 3ನೇ ಕ್ರಾಸ್ ನಿವಾಸದಲ್ಲಿ ಗಣಹೋಮ ನಡೆಯುತ್ತಿದ್ದು, ಅಂಬರೀಶ್ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಇದೇ ಮನೆಯನ್ನು ಬಾಡಿಗೆ ಪಡೆದಿದ್ದರು. ಇದು ಅಂಬಿ ಪಾಲಿಗೆ ಅದೃಷ್ಟದ ಮನೆ ಎಂದೆ ಕರೆಯಲಾಗಿತ್ತು. ಹಾಗಾಗಿ ಇದೀಗ ಅದೇ ಮನೆಯನ್ನು ಸುಮಲತಾ ಬಾಡಿಗೆ ಪಡೆದಿದ್ದಾರೆ.
ಇಂದಿನಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡಲಿದ್ದಾರೆ. ಹೀಗಾಗಿ ಇಂದು ಮನೆಯಲ್ಲಿ ಗಣ ಹೋಮ ಪೂಜೆ ಮಾಡಲಾಗಿದೆ. ಈಗಾಗಲೇ ಪೂಜೆ ಶುರುವಾಗಿದ್ದು, ಪೂಜೆ ಬಳಿಕ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ತಾಲೂಕಿ ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರಚಾರದಲ್ಲಿ ಅಮ್ಮನಿಗೆ ಅಭಿಷೇಕ್ ಸಾಥ್ ನೀಡಲಿದ್ದಾರೆ.
ಮತ್ತೊಂದೆಡೆ ಇಂದು ನಿಖಿಲ್ ಸಹ ಪ್ರಚಾರ ನಡೆಸುತ್ತಿದ್ದು, ಮೈಸೂರು ಜಿಲ್ಲೆಯ ಕೆ.ಆರ್ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ನಿಖಿಲ್‍ಗೆ ಸಚಿವ ಸಾರಾ ಮಹೇಶ್ ಸೇರಿ ಇತರರು ಸಾಥ್ ನೀಡಲಿದ್ದಾರೆ.
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ತಾಯಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ಅಭಿಷೇಕ್, ತಂದೆ ಅಂಬರೀಶ್ ಮತ್ತು ಡಿ.ಬಾಸ್ ದರ್ಶನ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಸುಮಲತಾ ಅವರು ಇಂದು ಪ್ರಚಾರ ನಡೆಸಿದ್ದರು. ಈ ವೇಳೆ ಅಭಿಷೇಕ್ ಅವರು, ಮಂಡ್ಯದವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ಬಿಟ್ಟುಕೊಡುವ ಚಾನ್ಸೇ ಇಲ್ಲ ಎಂದು ರೆಬಲ್ ಸ್ಟಾರ್ ಅಂಬರೀಶ್ ಡೈಲಾಗ್ ಹೊಡೆದರು. ಬಳಿಕ ಡಿ ಬಾಸ್ ಡೈಲಾಗ್ ಬೇಕಾ ಎಂದು ಮತದಾರರನ್ನು ಕೇಳಿ, ಅಮ್ಮ ನಡೆದಿದ್ದೆ ದಾರಿ, ತಾಕತ್ತಿದ್ರೆ ಕಟ್ಟಾಕ್ರೋ ಎಂದು ಡೈಲಾಗ್ ಹೇಳಿದರು.
ಅಭಿಷೇಕ್ ಮಾತನಾಡುವಾಗ ಮೈಕ್ ಕೈ ಕೊಟ್ಟಿತು. ಆಗ ಮಗನ ಕೈಯಿಂದ ಮೈಕ್ ಪಡೆದ ಸುಮಲತಾ ಅವರು, ಮೊನ್ನೆ ಕರೆಂಟ್ ತೆಗೆದರು. ಇವತ್ಯಾರು ಮೈಕ್ ಕಟ್ ಮಾಡಿದ್ದು ಎಂದು ವ್ಯಂಗ್ಯವಾಡಿದರು.
ಮೈಸೂರು: ಕಾಂಗ್ರೆಸ್‍ಗೆ ಎಚ್ಚರಿಕೆ ನೀಡಿದ ಸಚಿವ ಸಾರಾ ಮಹೇಶ್ ಸುಮಲತಾ ಅಂಬರೀಶ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಿಖೀಲ್ ಪರ ಪ್ರಚಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಚಿವರು, ಅಂಬರೀಶ್ ನನ್ನ ತಲೆಗೆ ರಾಜಕೀಯ ಸಾಕು ಎಂದಿದ್ದರು. ನಿಖಿಲ್ ಮತ್ತು ಅಭಿಷೇಕ್ ಆತ್ಮೀಯ ಸ್ನೇಹಿತರು ಎಂದರು.
ನಿಖಿಲ್‍ರನ್ನು ಸುಮಲತಾ ತಮ್ಮ ಮಗ ಎಂದು ಹೇಳಿದ್ರು. ಮಗನಿಗೆ ಸುಮಲತಾ ಅವರು ಆಶೀರ್ವಾದ ಮಾಡಬೇಕಿತ್ತು. ಆದರೆ ಸುಮಲತಾ ಅವರು ನಿಖಿಲ್ ವಿರುದ್ಧ ಪ್ರಹಾರ ಮಾಡಲು ನಿಂತಿದ್ದಾರೆ. ಎಲ್ಲರೂ ಅಭಿಷೇಕ್ ಸಿನಿಮಾ ನೋಡಿ, ಬೇಕಾದ್ರೆ ಹೆಚ್ಚಿನ ಹಣ ಕೊಟ್ಟು ಬ್ಲಾಕ್ ಟಿಕೆಟ್ ಪಡೆದು ಸಿನಿಮಾ ನೋಡಿ. ಆದರೆ ಕುಮಾರಣ್ಣನ ಮಗ ರಾಜ್ಯದ ನೇತಾರನಾಗಬೇಕು ಎಂದಿದ್ದಾರೆ.
ಕಾಂಗ್ರೆಸ್ ಗೆ ಎಚ್ಚರಿಕೆ:
ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಂಡಿರುವ ದೋಸ್ತಿ ಪಕ್ಷಗಳ ನಡುವೆ ಹೊಂದಾಣಿಕೆ ಕಷ್ಟವಾಗುತ್ತಿದ್ಯಾ ಎಂಬ ಅನುಮಾನ ಮೂಡಿದ್ದು, ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದು ಸಾರಾ ಮಹೇಶ್ ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸುಮಲತಾ, ನಿಖಿಲ್ ಪ್ರಚಾರ:
ಮಂಡ್ಯ ಕುರುಕ್ಷೇತ್ರದಲ್ಲಿ ನಾನಾ ನೀನಾ ಅಂತ ಜಿದ್ದಿಗೆ ಬಿದ್ದಿರುವ ಸುಮಲತಾ ಹಾಗೂ ನಿಖಿಲ್‍ರ ಅಬ್ಬರದ ಪ್ರಚಾರ ಇಂದು ಮುಂದುವರಿಯಲಿದೆ. ಸುಮಲತಾ ಅಂಬರೀಷ್ ಮೈಸೂರು ಜಿಲ್ಲೆ ಕೆಆರ್ ನಗರ ಭಾಗದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಬಿಎಸ್‍ವೈ ಭೇಟಿಯನ್ನು ಸುಮಲತಾ ಮುಂದೂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸಂಚರಿಸಿ ಮತಬೇಟೆಯಾಡಲಿದ್ದಾರೆ.
ಮಂಡ್ಯ: ಆದಿಚುಂಚನಗಿರಿಯಲ್ಲಿ ಪ್ರತಿ ಮಾತಿಗೂ ಅಭಿಷೇಕ್ ತನ್ನ ತಂದೆ, ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಭಾವುಕರಾಗಿದ್ದಾರೆ.
ಫೆಬ್ರವರಿ 14 ಒಳ್ಳೆಯ ದಿನ. ಆ ದಿನ ಚಿತ್ರದ ಆಡಿಯೋ ಅಥವಾ ಟೀಸರ್ ಏನಾದರೂ ರಿಲೀಸ್ ಮಾಡಬೇಕು ಎಂದು ಅಪ್ಪನಿಗೆ ಆಸೆ ಇತ್ತು. ಅವರ ನಿಧನದ ನಂತರ 2 ತಿಂಗಳು ಶೂಟಿಂಗ್‍ಗೆ ನಾನು ಹೋಗಲಿಲ್ಲ. ಇಂದು ರಾತ್ರಿಯಿಂದ ಮತ್ತೆ ಒಂದು ವಾರ ಶೂಟಿಂಗ್ ಇದೆ. ನಾನು ಶೂಟಿಂಗ್‍ಗಾಗಿ ಮಲೇಶಿಯಾಗೆ ಹೋಗುತ್ತಿದ್ದೇನೆ. ಟೀಸರ್ ರಿಲೀಸ್ ಆಗುವ ದಿನ ನಾನು ಭಾರತದಲ್ಲಿ ಇರುವುದಿಲ್ಲ. ನನ್ನ ಚಿತ್ರ ಬಿಡುಗಡೆ ಯಾವಾಗ ಎಂದು ಎಲ್ಲರು ಕೇಳುತ್ತಿದ್ದಾರೆ. ಹಾಗಾಗಿ ಟೀಸರ್ ರಿಲೀಸ್ ಮಾಡುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ.
ಅಂಬರೀಶ್ ನನ್ನ ಸಿನಿಮಾದಲ್ಲಿ ಇರುತ್ತಾರೆ. ಇನ್ನು ಮುಂದೆ ನಾನು ಯಾವ ಸಿನಿಮಾ ಮಾಡಿದರೂ ಅದರಲ್ಲಿ ಅಪ್ಪಾಜಿ ಇರುತ್ತಾರೆ. ಈ ಸಿನಿಮಾವನ್ನು ನಾನು ಅಪ್ಪನಿಗಾಗಿ ಮಾಡಿದೆ. ಅವರೇ ಈ ಸಿನಿಮಾವನ್ನು ಸೆಲೆಕ್ಟ್ ಮಾಡಿದ್ದಾರೆ. ಅವರ ಸಿನಿಮಾದಲ್ಲೇ ಅವರು ಇಷ್ಟು ಇನ್ವಾಲ್ ಆಗಿರಲಿಲ್ಲ. ಅಂಬರೀಶ್ ಅಷ್ಟು ನನ್ನ ಸಿನಿಮಾಗೆ ಇನ್ವಾಲ್ ಆಗಿದ್ದಾರೆ. ಇದು ಅವರಿಂದ ನನಗೆ ಗಿಫ್ಟ್ ಎಂದರು.
ಸುಮಲತಾ ಅವರು ರಾಜಕೀಯದಲ್ಲಿ ಸ್ಪರ್ಧೆ ಮಾಡುವ ವಿಚಾರ ಬಗ್ಗೆ ಮಾತನಾಡಿದ ಅಭಿಷೇಕ್, “ನನ್ನ ತಾಯಿ ಎಲ್ಲೇ ಹೋದರೂ ಸಪೋರ್ಟ್ ಮಾಡ್ತೀನಿ. ಅಭಿಮಾನಿಗಳು ಹೇಳುವ ಮಾತಿಗೆ ನಾವು ಸ್ಪಂದಿಸುತ್ತೇವೆ. ಆದರೆ ಅಂತಿಮವಾಗಿ ಅಮ್ಮ ತೀರ್ಮಾನಿಸುತ್ತಾರೆ” ಎಂದರು. ಇದೇ ವೇಳೆ ಸುಮಲತಾ ಅವರು ಕೂಡ ಮಾತನಾಡಿ ಅಭಿಮಾನಿಗಳು ಪ್ರೀತಿಯಿಂದ ಆಸೆ ಪಡುತ್ತಿದ್ದಾರೆ. ಅಭಿಮಾನಿಗಳ ಆಸೆ ಸೋಲಬಾರದು. ಅವರ ಆಸೆ ಗೆಲ್ಲಬೇಕು ಎಂದು ಹೇಳಿದ್ದಾರೆ.