Tag: ಅಭಿಷೇಕ್

  • ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಇಂದು ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು. ವಿರೋಧಿ ಪಕ್ಷಗಳಿಂದ ತಮಗಾದ ನೋವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕುಟುಂಬ ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು, ತಮ್ಮ ಮಗ ಅಭಿಷೇಕ್ ಅಂಬರೀಶ್ (Abhishek) ಯಾವುದೇ ಕಾರಣಕ್ಕೂ ತಾವು ರಾಜಕಾರಣದಲ್ಲಿ ಇರುವತನಕ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿಕೆ ಕೊಟ್ಟರು. ಅಲ್ಲದೇ ಅಭಿಷೇಕ್ ಮದುವೆ ವಿಚಾರವನ್ನೂ ಬಹಿರಂಗ ಪಡಿಸಿದರು.

    ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ‘ಚುನಾವಣೆಗೆ ನಿಲ್ಲುವಂತೆ ಎರಡು ಪಕ್ಷಗಳಿಂದ ಅಭಿಷೇಕ್‍ ಗೆ ಆಹ್ವಾನ ಬಂದಿದ್ದು ನಿಜ. ಅಭಿಷೇಕ್ ಸದ್ಯದಲ್ಲೇ ಮದುವೆ (Marriage) ಆಗಲಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಾನು ರಾಜಕಾರಣದಲ್ಲಿ ಇರುವಾಗ, ಅವನು ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ ಮತ್ತು ಚುನಾವಣೆಯನ್ನು ಎದುರಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದ್ದರು. ಈ ಮಾತಿನ ಮೂಲಕ ಅಭಿಷೇಕ್ ಸದ್ಯದಲ್ಲೇ ಹೊಸ ಜೀವನಕ್ಕೆ ಕಾಲಿಡುವ ಕುರಿತು ಸುಳಿವು ನೀಡಿದರು. ಇದನ್ನೂ ಓದಿ: ರೆಟ್ರೋ ಲುಕ್‌ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ

    ಕಳೆದ ತಿಂಗಳಷ್ಟೇ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಮನೆಯಲ್ಲಿ ಮದುವೆ ತಯಾರಿ ಕೂಡ ನಡೆಯುತ್ತಿದೆ. ಏಪ್ರಿಲ್ ನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ (Aviva Biddappa) ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡೂ ಮನೆಯಲ್ಲಿ ಮದುವೆ ಸಿದ್ಧತೆ ಭರದಿಂದ ನಡೆಯುತ್ತಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲೇ ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ಅಂಬಿ ಪುತ್ರನ ಎಂಗೇಜ್‌ಮೆಂಟ್‌ಗೆ ಆಗಮಿಸಿ ಶುಭಕೋರಿದ ಯಶ್ ದಂಪತಿ

    ಅಂಬಿ ಪುತ್ರನ ಎಂಗೇಜ್‌ಮೆಂಟ್‌ಗೆ ಆಗಮಿಸಿ ಶುಭಕೋರಿದ ಯಶ್ ದಂಪತಿ

    ಸುಮಲತಾ ಅಂಬರೀಶ್ (Sumalatha Ambreesh) ಮನೆಯಲ್ಲಿ ಸಂತಸ ಮನೆ ಮಾಡಿದೆ. ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅವರೊಂದಿಗೆ (Abhishek) ಮತ್ತು ಫ್ಯಾಷನ್‌ ಡಿಸೈನರ್‌ ಪ್ರಸಾದ್ ಪುತ್ರಿ ಅವಿವಾ ಬಿದ್ದಪ್ಪ(Aviva Biddappa) ಅವರ ಎಂಗೇಜ್‌ಮೆಂಟ್ ಇಂದು ನೆರವೇರಿದೆ. ಹೊಸ ಜೋಡಿಗೆ ಶುಭ ಹಾರೈಸಲು ಯಶ್ (Yash) ಮತ್ತು ರಾಧಿಕಾ(Radhika Pandit)  ದಂಪತಿ ಸೇರಿದಂತೆ ಹಲವು ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

    ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ 5 ವರ್ಷಗಳು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಮಾಡೆಲ್ ಕಮ್ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಮತ್ತು ಅಭಿಷೇಕ್ ಪ್ರೀತಿಗೆ ಗುರುಹಿರಿಯರು ಸಮ್ಮತಿ ಸೂಚಿಸಿದ್ದಾರೆ.

    ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಮತ್ತು ಅಭಿಷೇಕ್ ನಿಶ್ಚಿತಾರ್ಥಕ್ಕೆ ಇಡೀ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ರಂಗವೇ ಸಾಕ್ಷಿಯಾಗಿದೆ. ಈ ಮುದ್ದಾದ ಜೋಡಿಗೆ ಇದೀಗ ಯಶ್ ದಂಪತಿ ಮತ್ತು ಆರ್. ಅಶೋಕ್, ಗುರುಕಿರಣ್ ದಂಪತಿ, ನಿರ್ದೇಶಕ ಮಹೇಶ್ ಕುಮಾರ್ ಕೂಡ ಭಾಗಿಯಾಗಿ, ಶುಭಹಾರೈಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಸಿಎಂ ಭೇಟಿಯಾದ `ಕಾಂತಾರ’ ಹೀರೋ ರಿಷಬ್

    ಸಮಲತಾ ಮತ್ತು ಅವಿವಾ ಕುಟುಂಬದ ಜೊತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಹಾಜರಿದ್ದು, ಜೋಡಿಗೆ ಶುಭಹಾರೈಸಿದ್ದಾರೆ. ಇನ್ನೂ ಅಭಿಷೇಕ್ ಮತ್ತು ಅವಿವಾ ಜೋಡಿಯೂ ಮುಂದಿನ ವರ್ಷ ಹಸೆಮಣೆ ಏರಲಿದೆ.

    Live Tv
    [brid partner=56869869 player=32851 video=960834 autoplay=true]

  • ರೆಬಲ್ ಮದುವೆಗೆ 31 ವರ್ಷ: ಅಂಬಿ ಜೊತೆಗಿನ ದಾಂಪತ್ಯ ನೆನೆದ ಸುಮಲತಾ ಅಂಬರೀಶ್

    ರೆಬಲ್ ಮದುವೆಗೆ 31 ವರ್ಷ: ಅಂಬಿ ಜೊತೆಗಿನ ದಾಂಪತ್ಯ ನೆನೆದ ಸುಮಲತಾ ಅಂಬರೀಶ್

    ಸ್ಯಾಂಡಲ್ ವುಡ್ ರೆಬಲ್ ಸ್ಟಾರ್ ಅಂಬರೀಶ್ ಮತ್ತು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮದುವೆಯಾಗಿ ಇಂದಿಗೆ ಮೂವತ್ತೊಂದು ವರ್ಷ. ನಟಿಯಾಗಿ ಪರಿಚಯವಾದ ಸುಮಲತಾ ಅವರನ್ನು ಪ್ರೀತಿಸಿ, ಅಂಬರೀಶ್ ಡಿಸೆಂಬರ್ 8ರಂದು ಮದುವೆಯಾದರು. ಈ ಸ್ಟಾರ್ ಜೋಡಿಯ ಮದುವೆಗೆ ಅನೇಕರು ಸಾಕ್ಷಿಯಾಗಿದ್ದರು. ಮೂವತ್ತು ವರ್ಷಗಳ ದಾಂಪತ್ಯ ಜೀವನದ ಬಗ್ಗೆ ಸುಮಲತಾ ಅಂಬರೀಶ್ ಭಾವುಕರಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಅಂಬರೀಶ್ ಜೊತೆಗಿನ ಕ್ಯೂಟ್ ಆಗಿರುವ ಫೋಟೋವನ್ನ ಹಂಚಿಕೊಂಡಿರುವ ಸುಮಲತಾ, ‘ನಿಮ್ಮೊಂದಿಗೆ ಹೆಜ್ಜೆ ಹಾಕಿದ ಆ ದಿನ, ಆ ಕ್ಷಣ ನಿತ್ಯವೂ ಹೊಸ ಪುಳಕ. ತುಳಿದ ಸಪ್ತಪದಿಯಲ್ಲೂ ನಿಮ್ಮದೇ ಗುಣಗಾನ. ನನ್ನ ಬದುಕಿಗೆ ಬಾಳ ಸಂಗಾತಿಯಾಗಿ ನೀವು ಬಂದ ದಿನದಿಂದಲೂ ನನ್ನೊಳಗೆ ಹೊಸ ಸಂಭ್ರಮ. ಮದುವೆ ದಿನದ ಎಲ್ಲ ನೆನಪುಗಳ ಜೊತೆ ನೀವು ಇದ್ದೀರಿ, ಮತ್ತೆ ಮತ್ತೆ ಆ ದಿನವನ್ನು ನೆನಪಿಸುತ್ತೀರಿ. 31 ವರ್ಷಗಳಲ್ಲಿ ಜೀವಮಾನದ ನೆನಪುಗಳನ್ನು ಬಿತ್ತಿದ್ದೀರಿ. ನೀವು ನೀಡಿದ ಪ್ರೀತಿ ಮತ್ತು ಬಾಂಧವ್ಯದ ಕುರುಹುಗಳು ನನ್ನ ಜೀವಿತಾವಧಿಯ ಕೊಡುಗೆಗಳು. ಮತ್ತೆ ಮತ್ತೆ ಹೇಳುತ್ತೇನೆ. ಮದುವೆಯ ಈ ಬಂಧ,  ಅನುರಾಗದ ಅನುಬಂಧ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿದೇಶಿ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’

    ಅಂಬರೀಶ್ ಮತ್ತು ಸುಮಲತಾ ಮದುವೆಯ ಈ ದಿನದಂದು ಅವರ ಪುತ್ರ ಅಭಿಷೇಕ್ ಅವರ ನಿಶ್ಚಿತಾರ್ಥದ ವಿಷಯವನ್ನು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಈವರೆಗೂ ಅಂತಹ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ, ಡಿ.11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ. ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯ ಜೊತೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

    ಅಭಿಷೇಕ್ ನಿಶ್ಚಿತಾರ್ಥದ ವಿಷಯವನ್ನು ಈವರೆಗೂ ಅವರ ಕುಟುಂಬ ಗುಟ್ಟಾಗಿಯೇ ಇಟ್ಟಿದೆ. ಆಪ್ತರ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ ವೊಂದರಲ್ಲಿ ಎಂಗೇಜ್ ಮೆಂಟ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಗಣ್ಯರಿಗೆ ಆಹ್ವಾನ ಕೂಡ ನೀಡಲಾಗಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ಅಂಬರೀಶ್ ನೆಚ್ಚಿನ ಶ್ವಾನ ‘ಬುಲ್ ಬುಲ್’ ಕೂಡ ನಿಧನ: ‘ಕನ್ವರ್’ ಹುಡುಕಿಕೊಂಡು ಹೊರಟ ಬುಲ್ ಬುಲ್

    ಅಂಬರೀಶ್ ನೆಚ್ಚಿನ ಶ್ವಾನ ‘ಬುಲ್ ಬುಲ್’ ಕೂಡ ನಿಧನ: ‘ಕನ್ವರ್’ ಹುಡುಕಿಕೊಂಡು ಹೊರಟ ಬುಲ್ ಬುಲ್

    ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರಿಗೆ ಶ್ವಾನಗಳನ್ನು ಕಂಡರೆ ಬಲು ಪ್ರೀತಿ. ಹಾಗಾಗಿ ದೇಶ ವಿದೇಶಗಳಿಂದ ನಾಯಿಗಳನ್ನು (Dog) ತಂದು ಸಾಕುತ್ತಿದ್ದಾರೆ. ಅದರಲ್ಲೂ ಅವರಿಗೆ ಕನ್ವರ್ (Kanwar) ಮತ್ತು ಬುಲ್ ಬುಲ್ ಅಂದರೆ ಹೆಚ್ಚು ಪ್ರಾಣ. ತಾವು ಸಾಕಿದ ಎರಡು ನಾಯಿಗಳಿಗೆ ಅವರು ಕನ್ವರ್ ಮತ್ತು ಬುಲ್ ಬುಲ್ ಎಂದು ಹೆಸರಿಟ್ಟಿದ್ದರು. ಯಾವಾಗಲೂ ಈ ಎರಡೂ ಶ್ವಾನಗಳು ಅಂಬಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್

    ಅಂಬರೀಶ್ ನಿಧನರಾದಾಗ ಕನ್ವರ್ ಹೆಸರಿನ ಶ್ವಾನ ಊಟವನ್ನೇ ಬಿಟ್ಟಿತ್ತು. ತನ್ನ ಸಾಕಿದಾತ ಇನ್ನಿಲ್ಲ ಎನ್ನುವುದನ್ನು ಅದರಿಂದ ಅರಗಿಸಿಕೊಳ್ಳಲು ಆಗಲಿಲ್ಲ. ಅಂಬರೀಶ್ ನಿಧನದ ದಿನ ಕನ್ವರ್ ಕೂಡ ಕಣ್ಣೀರಿಟ್ಟಿತ್ತು. ಊಟ ಬಿಟ್ಟು ಮಂಕಾಗಿತ್ತು. ಹಾಗಾಗಿ ಅದು ತುಂಬಾ ದಿನ ಬದುಕುಳಿಯಲಿಲ್ಲ. ಊಟ ಬಿಟ್ಟು, ಸರಿಯಾಗಿ ನಿದ್ದೆ ಕೂಡ ಮಾಡದೇ ಬಳಲಿ 24 ಮೇ 2021ರಲ್ಲಿ ಅಂಬಿ ಹುಡುಕಿಕೊಂಡು ಹೊರಟೇ ಬಿಟ್ಟಿತ್ತು. ಹಾಗಾಗಿ ಅಂಬಿ ಮನೆಯಲ್ಲಿ ಬುಲ್ ಬುಲ್ (Bull Bull) ಒಂಟಿಯಾಗಿತ್ತು.

    ಇದೀಗ ಬುಲ್ ಬುಲ್ ಕೂಡ ನಿಧನ ಹೊಂದಿದೆ. ಹೀಗಾಗಿ ಅಂಬರೀಶ್ ಅವರ ನೆಚ್ಚಿನ ಎರಡೂ ಶ್ವಾನಗಳು ತನ್ನ ಮಾಲೀಕನನ್ನು ಹುಡುಕಿಕೊಂಡು ಹೋಗಿದಂತಾಗಿದೆ. ನಿನ್ನೆ ಬುಲ್ ಬುಲ್ ನಿಧನ (Death) ಹೊಂದಿದ್ದು, ತಮ್ಮ ತೋಟದಲ್ಲಿ ಅವುಗಳ ಅಂತ್ಯ ಸಂಸ್ಕಾರ ಮಾಡಲು ಸುಮಲತಾ ಅಂಬರೀಶ್ (Sumalta Ambarish) ಮತ್ತು ಅಭಿಷೇಕ್ ಅಂಬರೀಶ್ (Abhishek) ನಿರ್ಧರಿಸಿದ್ದಾರೆ. ಅಲ್ಲದೇ, ಎರಡೂ ಶ್ವಾನಗಳನ್ನು ಕಳೆದುಕೊಂಡಿರುವ ಅಂಬಿ ಮನೆಯಲ್ಲಿ ನೀರವ ಮೌನ ಆವರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

    ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

    ಭಿಷೇಕ್ ಅಂಬರೀಶ್ ಅವರಿಗೆ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿರುವ ಅಯೋಗ್ಯ ಚಿತ್ರ ಖ್ಯಾತಿಯ ಮಹೇಶ್ ಕುಮಾರ್ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.  ನಾನು ಅಂಬರೀಶ್ ಅಣ್ಣನ ದೊಡ್ಡ ಅಭಿಮಾನಿ. ಅವರ ಮಗ ಅಭಿಷೇಕ್ ಅವರಿಗೆ ಸಿನಿಮಾ ಮಾಡುತ್ತಿರುವುದು ಖುಷಿಯಾಗಿದೆ. ನಿರ್ದೇಶನಕ್ಕೆ ಅವಕಾಶ ನೀಡಿರುವ ರಾಕ್ ಲೈನ್ ವೆಂಕಟೇಶ್ ಸರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಹಾರೈಸಿದ ಸುಮಲತಾ ಅಂಬರೀಶ್ ಅವರಿಗೆ  ಧನ್ಯವಾದ. ರವಿ ಬಸ್ರೂರು, ಟಿ.ಕೆ.ದಯಾನಂದ್ ಸೇರಿದಂತೆ ನನ್ನ ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿ ಬರಲಿದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

    ಅಂಬರೀಶ್ ಅವರ ಸ್ಮಾರಕದ ಬಳಿ ಈ ಸಮಾರಂಭ ನಡೆಯುತ್ತಿದೆ. ಚಿತ್ರಕ್ಕೆ ಅಂಬರೀಶ್ ಅವರ  ಆಶೀರ್ವಾದ ಸಂಪೂರ್ಣ ಇದೆ. ಇದಕ್ಕೆ ಸಾಕ್ಷಿಯಾಗಿ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ಅಂಬರೀಶ್ ಅವರ ಭಾವಚಿತ್ರದ ಬಲಗಡೆಯಿಂದ ಹೂವು ಬಿತ್ತು. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಸುಮಲತಾ ಅಂಬರೀಶ್ ಹಾರೈಸಿದರು. ಅಭಿಷೇಕ್ ಅವರಿಗೆ ಸಿನಿಮಾ ಮಾಡಬೇಕೆಂಬುದು ನನಗೆ ಬಹಳ ದಿನಗಳ ಆಸೆ. ಆದರೆ ಚಿತ್ರದ ಕಥೆ ಚೆನ್ನಾಗಿರಬೇಕು ಅಂತ ಕಾಯುತ್ತಿದೆ. ಅಭಿ ಅವರೆ ಈ ಕಥೆಯ ಬಗ್ಗೆ ನನಗೆ ಹೇಳಿದರು. ಇಷ್ಟವಾಯಿತು. ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗಲಿದೆ.  ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ದಿನ, ಅಂಬರೀಶ್ ಅವರ ಆಶೀರ್ವಾದದೊಂದಿಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದೀವಿ. ಮುಂದೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    ಅಪ್ಪನ ಹುಟ್ಟುಹಬ್ಬ ಹಾಗೂ ನನ್ನ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷತೆ ಇರುತ್ತಿತ್ತು. ಆದರೆ ನಮ್ಮ ಅಮ್ಮನ ಹುಟ್ಟುಹಬ್ಬದ ದಿನ ಈ ಮೋಷನ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ನನ್ನ ಆಸೆಯಿತ್ತು. ಹಾಗಾಗಿ ಇಂದು ಬಿಡುಗಡೆ ಮಾಡಿದ್ದೀವಿ‌. ಇದೇ ಅಮ್ಮನಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಉಡುಗೊರೆ. ಮಹೇಶ್ ಕುಮಾರ್ ಮೋಷನ್ ಪೋಸ್ಟರ್ ಬಹಳ ಚೆನ್ನಾಗಿ ಮಾಡಿದ್ದಾರೆ. ಚಿತ್ರವನ್ನು  ಅಷ್ಟೇ ಚೆನ್ನಾಗಿ ಮಾಡುತ್ತಾರೆ ಎಂಬ ಭರವಸೆಯಿದೆ ಎಂದರು ನಾಯಕ‌ ಅಭಿಷೇಕ್ ಅಂಬರೀಶ್.

    Live Tv
    [brid partner=56869869 player=32851 video=960834 autoplay=true]

  • ಸುಮಲತಾ ಹುಟ್ಟು ಹಬ್ಬಕ್ಕೆ ಅಭಿಷೇಕ್ ಅಂಬರೀಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್

    ಸುಮಲತಾ ಹುಟ್ಟು ಹಬ್ಬಕ್ಕೆ ಅಭಿಷೇಕ್ ಅಂಬರೀಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್

    ಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ಹುಟ್ಟು ಹಬ್ಬಕ್ಕಾಗಿ ನಿರ್ದೇಶಕ ಮಹೇಶ್ ಕುಮಾರ್ ತಮ್ಮ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದು, ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ನಾಯಕರಾಗಿ ನಟಿಸುತ್ತಿದ್ದಾರೆ. ಪೋಸ್ಟರ್ ನಲ್ಲಿ ಖಡಕ್ ಲುಕ್ ನಲ್ಲಿ ಅಭಿಷೇಕ್ ಕಂಡಿದ್ದಾರೆ.

    ಅಂಬರೀಶ್ ಅವರ ಹುಟ್ಟು ಹಬ್ಬದಂದು ಘೋಷಣೆಯಾಗಿದ್ದ ಅಭಿಷೇಕ್ ಅಂಬರೀಶ್ ಅವರ ಈ ಸಿನಿಮಾದ ಮುಹೂರ್ತ ಇಂದು ಅಂಬರೀಶ್ ಅವರ ಸಮಾಧಿ ಹತ್ತಿರ ನೆರವೇರಿತು. ಇವತ್ತು ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬವಾಗಿದ್ದರಿಂದ ಈ ಸಂದರ್ಭವನ್ನು ಸಿನಿಮಾ ತಂಡ ಬಳಸಿಕೊಂಡು, ಮೋಷನ್ ಪೋಸ್ಟರ್ ರಿಲೀಸ್ ಮತ್ತು ನಿರ್ಮಾಪಕರ ಹೆಸರು ಘೋಷಣೆ ಮಾಡಲಾಯಿತು. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಈ ಹೊಸ ಸಿನಿಮಾವನ್ನು ಅಯೋಗ್ಯ ಚಿತ್ರಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಭಾರತೀಯ ಸಿನಿಮಾ ರಂಗದ ಹೆಮ್ಮೆಯ ಸಂಸ್ಥೆಯು ರಾಕ್ ಲೈನ್ ಪ್ರೊಡಕ್ಷನ್ ಈ ಚಿತ್ರವನ್ನು ತಯಾರು ಮಾಡಲಿದೆ. ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರು. ಈ ವರ್ಷ ಈಗಾಗಲೇ ಎರಡು ಸಿನಿಮಾಗಳನ್ನು ಘೋಷಣೆ ಮಾಡಿರುವ ರಾಕ್ ಲೈನ್ ಸಂಸ್ಥೆ, ಸುಮಲತಾ ಅವರ ಹುಟ್ಟು ಹಬ್ಬಕ್ಕಾಗಿ ಅವರ ಪುತ್ರ ಅಭಿಷೇಕ್ ಅವರ ಹೊಸ ಸಿನಿಮಾವನ್ನೂ ತಯಾರು ಮಾಡುತ್ತಿರುವುದಾಗಿ ತಿಳಿಸಿದೆ.

    ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ನಂತರ ಅಭಿಷೇಕ್ ಈ ಚಿತ್ರಕ್ಕೆ ಸೈನ್ ಮಾಡಿದ್ದು, ಪಿರಿಯಡ್ ಡ್ರಾಮಾ ಕಥೆಯಲ್ಲಿ ಯಂಗ್ ರೆಬೆಲ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಸದ್ಯಕ್ಕೆ  ‘AA04’ ಎಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಚಿತ್ರದಲ್ಲಿ ಅಭಿಷೇಕ್ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕ: ಇಂದು ಮಹೂರ್ತ

    ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕ: ಇಂದು ಮಹೂರ್ತ

    ಅಂಬರೀಶ್ ಅವರ ಹುಟ್ಟು ಹಬ್ಬದಂದು ಘೋಷಣೆಯಾಗಿದ್ದ ಅಭಿಷೇಕ್ ಅಂಬರೀಶ್ ಅವರ ಹೊಸ ಸಿನಿಮಾದ ಮುಹೂರ್ತ ಇಂದು ಅಂಬರೀಶ್ ಅವರ ಸಮಾಧಿ ಹತ್ತಿರ ನೆರವೇರಿತು. ಇವತ್ತು ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬವಾಗಿದ್ದರಿಂದ ಈ ಸಂದರ್ಭವನ್ನು ಸಿನಿಮಾ ತಂಡ ಬಳಸಿಕೊಂಡು, ಮೋಷನ್ ಪೋಸ್ಟರ್ ರಿಲೀಸ್ ಮತ್ತು ನಿರ್ಮಾಪಕರ ಹೆಸರು ಘೋಷಣೆ ಮಾಡಲಾಯಿತು.

    ಈ ಹೊಸ ಸಿನಿಮಾವನ್ನು ಅಯೋಗ್ಯ ಚಿತ್ರಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಭಾರತೀಯ ಸಿನಿಮಾ ರಂಗದ ಹೆಮ್ಮೆಯ ಸಂಸ್ಥೆಯು ರಾಕ್ ಲೈನ್ ಪ್ರೊಡಕ್ಷನ್ ಈ ಚಿತ್ರವನ್ನು ತಯಾರು ಮಾಡಲಿದೆ. ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರು. ಈ ವರ್ಷ ಈಗಾಗಲೇ ಎರಡು ಸಿನಿಮಾಗಳನ್ನು ಘೋಷಣೆ ಮಾಡಿರುವ ರಾಕ್ ಲೈನ್ ಸಂಸ್ಥೆ, ಸುಮಲತಾ ಅವರ ಹುಟ್ಟು ಹಬ್ಬಕ್ಕಾಗಿ ಅವರ ಪುತ್ರ ಅಭಿಷೇಕ್ ಅವರ ಹೊಸ ಸಿನಿಮಾವನ್ನೂ ತಯಾರು ಮಾಡುತ್ತಿರುವುದಾಗಿ ತಿಳಿಸಿದೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ನಂತರ ಅಭಿಷೇಕ್ ಈ ಚಿತ್ರಕ್ಕೆ ಸೈನ್ ಮಾಡಿದ್ದು, ಪಿರಿಯಡ್ ಡ್ರಾಮಾ ಕಥೆಯಲ್ಲಿ ಯಂಗ್ ರೆಬೆಲ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಸದ್ಯಕ್ಕೆ  ‘AA04’ ಎಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಚಿತ್ರದಲ್ಲಿ ಅಭಿಷೇಕ್ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ: ತಾಯಿಯ ಬರ್ತ್‌ಡೇಗೆ ಅಭಿಷೇಕ್ ಕೊಡ್ತಿರೋ ಗಿಫ್ಟ್ ಏನು?

    ನಾಳೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ: ತಾಯಿಯ ಬರ್ತ್‌ಡೇಗೆ ಅಭಿಷೇಕ್ ಕೊಡ್ತಿರೋ ಗಿಫ್ಟ್ ಏನು?

    ಸ್ಯಾಂಡಲ್ ವುಡ್ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ನಾಳೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಹುಟ್ಟು ಹಬ್ಬಕ್ಕಾಗಿ ಅಭಿಷೇಕ್ ಅಂಬರೀಶ್ ಅವರ ಹೊಸ ಸಿನಿಮಾದ ಹಲವು ಘೋಷಣೆಗಳು ಆಗುತ್ತಿದ್ದು, ಆ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕರ ಹೆಸರು ಹುಟ್ಟುಹಬ್ಬದ ಉಡುಗೊರೆ ಆಗಲಿವೆ.

    ನಾಳೆ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸ್ಮಾರಕದ ಮುಂದೆ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕರ ಹೆಸರನ್ನು ಘೋಷಿಸಲಾಗುತ್ತಿದ್ದು, ಈ ಸಿನಿಮಾವನ್ನು ಮದಗಜ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅಂಬರೀಶ್ ಅವರ ಹುಟ್ಟು ಹಬ್ಬದಂದು ಸಿನಿಮಾ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ:ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಅಭಿಷೇಕ್ ಅವರ ನಾಲ್ಕನೇ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ದೇಶಕ ಮಹೇಶ್ ಕುಮಾರ್, ‘ಕಳೆದ ಬಾರಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವು. ಈ ಬಾರಿ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕ ಹೆಸರು ಘೋಷಣೆ ಮಾಡುತ್ತಿದ್ದೇವೆ. ಭಾರತೀಯ ಸಿನಿಮಾ ರಂಗದಲ್ಲಿ ನಾನಾ ಭಾಷೆಯ ಸಿನಿಮಾಗಳನ್ನು ಮಾಡಿರುವ ಹೆಸರಾಂತ ನಿರ್ಮಾಣ ಸಂಸ್ಥೆಯು ಈ ಚಿತ್ರವನ್ನು ತಯಾರು ಮಾಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

    ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

    ಇಂದು ರಾಜ್ಯಾದ್ಯಂತ ಅಂಬಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸುವುದರ ಮೂಲಕ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ನಮನ ಸಲ್ಲಿಸಿದರು. ನಂತರ ಅಂಬರೀಶ್ ಅವರ ಹುಟ್ಟೂರಿಗೂ ಸುಮಲತಾ ಅಂಬರೀಶ್ ತೆರಳಿದರು. ಇದನ್ನೂ ಓದಿ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಸಾರಥಿ ಭಾ.ಮಾ. ಹರೀಶ್

    ಅಂಬರೀಶ್ ಅವರ ಹುಟ್ಟು ಹಬ್ಬಕ್ಕಾಗಿಯೇ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಾಗಿ ವಿಶೇಷ  ಡಿಪಿ ಬಿಡುಗಡೆ ಮಾಡುತ್ತಿದ್ದರು. ಅದನ್ನು ಸುಮಲತಾ ಸೇರಿದಂತೆ ಅನೇಕರು ಹಂಚಿಕೊಂಡಿದ್ದಾರೆ. ಅಲ್ಲದೇ, ಅಂಬರೀಶ್ ಗಾಗಿ ವಿಶೇಷ ಕವಿತೆಯನ್ನು ಸಮಲತಾ ಬರೆದುಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಅಂಬರೀಶ್ ಅವರನ್ನು ಆಕಾಶಕ್ಕೆ ಹೋಲಿಸಿರುವ ಸುಮಲತಾ ಅಂಬರೀಶ್, ಆಕಾಶಕ್ಕೆ ಅಳತೆಯ ಮಿತಿ ಹೇಗಿಲ್ಲವೋ, ಹಾಗೆಯೇ ಅಂಬರೀಶ್ ಅವರ ಪ್ರೀತಿಗೆ ಯಾವುದೇ ಮಿತಿ  ಇರಲಿಲ್ಲ. ಹಾಗಾಗಿ ಅವರು ಆಕಾಶದ ಒಡೆಯ ಅನಿಸಿಕೊಂಡಿದ್ದರು. ನೀವು ನನ್ನಲ್ಲಿ ಅಸಂಖ್ಯಾತ ನೆನಪುಗಳನ್ನು ಬಿಟ್ಟು ಹೋಗಿದ್ದೀರಿ. ಈ ಜೀವನಕ್ಕೆ ಸಾಕಾಗಷ್ಟು ಪ್ರೀತಿ ಕೊಟ್ಟಿದ್ದೀರಿ. 70 ವಯಸ್ಸು ಅನ್ನುವುದು ಅಂಬಿ ಎಂಬ ಮೇರು ವ್ಯಕ್ತಿತ್ವದ ಮುಂದೆ ಸಣ್ಣ ಸಂಖ್ಯೆ. ನೀವು ನಮ್ಮಲ್ಲಿ ಶಾಶ್ವತವಾಗಿ ಇರುವುದರಿಂದ ವಯಸ್ಸು ಅನ್ನುವುದ ಕೇವಲ ಸಂಖ್ಯೆ. ಅಂಬಿ ಅಮರ’  ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಹೆಸರು ಮಾಡಿರುವ ಅಂಬರೀಶ್ ಅವರಿಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. ಅಲ್ಲದೇ ಸಿನಿಮಾ ರಂಗದ ಅನೇಕ ಕಲಾವಿದರು ಅಂಬರೀಶ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.

  • ನಾಳೆ ರೆಬಲ್ ಸ್ಟಾರ್ ಅಂಬರೀಶ್ ಅವರ 70ನೇ ವರ್ಷದ ಹುಟ್ಟು ಹಬ್ಬ : ಮಂಡ್ಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮ

    ನಾಳೆ ರೆಬಲ್ ಸ್ಟಾರ್ ಅಂಬರೀಶ್ ಅವರ 70ನೇ ವರ್ಷದ ಹುಟ್ಟು ಹಬ್ಬ : ಮಂಡ್ಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮ

    ರೆಬಲ್ ಸ್ಟಾರ್ ಅಂಬರೀಶ್ ಅವರು ಹುಟ್ಟಿ ನಾಳೆಗೆ 70 ವರ್ಷ. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಹೆಸರಿನಲ್ಲಿ ಸಾಕಷ್ಟು ಕೆಲಸಗಳನ್ನು ಅಂಬಿ ಕುಟುಂಬ ಮತ್ತು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಂಬರೀಶ್ ಅಭಿಮಾನಿಗಳು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

    ಕಳೆದ ಹುಟ್ಟು ಹಬ್ಬಕ್ಕೆ ಕೋವಿಡ್ ಕಾರಣದಿಂದಾಗಿ ಅದ್ಧೂರಿಯಾಗಿ ಆಚರಿಸಲು ಆಗಿಲ್ಲ. ಕೇವಲ ಅಂಬ್ಯುಲೆನ್ಸ್ ಮತ್ತಿತರ ವಸ್ತುಗಳನ್ನು ಕೊಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದರು. ಈ ಬಾರಿ ಮಂಡ್ಯ ಮತ್ತು ಇತರ ಕಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬಕ್ಕೆ ಚಾಲನೆ ಸಿಗಲಿದೆ. ಅಲ್ಲಿಯೇ ಅನ್ನ ಸಂತರ್ಪಣೆಯನ್ನು ಕೂಡ ಅಭಿಮಾನಿಗಳು ಮಾಡುತ್ತಿದ್ದಾರೆ. ಅಂಬರೀಶ್ ಕುಟುಂಬ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಅಲ್ಲದೇ, ಅಂಬರೀಶ್ ಅವರ ನೆನಪಿನಲ್ಲಿ ಮಂಡ್ಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 2.30ಕ್ಕೆ ಡಾ. ಅಂಬರೀಶ್ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿಕರೆ ಗ್ರಾಮದಲ್ಲೂ ನಾನಾ ರೀತಿಯ ಕಾರ್ಯಕ್ರಮಗಳ ನಡೆಯಲಿದೆ. ಮಧ್ಯಾಹ್ನ 3.15ಕ್ಕೆ ಮದ್ದೂರು ತಾಲೂಕು ಅಂಬರೀಶ್ ಅಭಿಮಾನಿಗಳ ಒಕ್ಕೂಟದ ಪ್ರಧಾನ ಕಛೇರಿ ಉದ್ಘಾಟನೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಮಂಡ್ಯದಲ್ಲಿ ಅಭಿಮಾನಿಗಳ ಸಂಘ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಶ್ರವಣದೋಷವುಳ್ಳವರಿಗೆ ಉಚಿತ ಆರೋಗ್ಯ ತಪಾಸಣೆ ಇದೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಅಲ್ಲದೇ, ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಂಬರೀಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸನ್ಮಾನ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗಿದೆ. ಇಷ್ಟೂ ಕಾರ್ಯಕ್ರಮದಲ್ಲೂ ಅಂಬರೀಶ್ ಅವರ ಪತ್ನಿ, ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಸಿನಿಮಾ ರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.