Tag: ಅಭಿಷೇಕ್‌ ಶರ್ಮಾ

  • ಒಂದು ತೂಫಾನ್‌ ಶತಕ – ಹಲವು ದಾಖಲೆಗಳ ʻಅಭಿಷೇಕʼ

    ಒಂದು ತೂಫಾನ್‌ ಶತಕ – ಹಲವು ದಾಖಲೆಗಳ ʻಅಭಿಷೇಕʼ

    ಹೈದರಾಬಾದ್‌: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂಜಾಬ್‌ ಕಿಂಗ್ಸ್‌ (Punjab Kings) ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡಗಳ ನಡುವಿನ ಹಣಾಹಣಿ ವೀಕೆಂಡ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಅತ್ತ ಹೈದರಾಬಾದ್‌ ಗೆಲುವಿನ ದಾಖಲೆ ಒಂದು ಕಡೆಯಾದ್ರೆ, ಅಭಿಷೇಕ್‌ ಶರ್ಮಾ (Abhishek Sharma) ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

    ಸನ್‌ರೈಸರ್ಸ್‌ ಪರ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ ತಂಡದವನ್ನು ಗೆಲುವಿನತ್ತ ಕೊಂಡೊಯ್ದರಲ್ಲದೇ ಹಲವು ದಾಖಲೆಗಳನ್ನ ನುಚ್ಚುನೂರು ಮಾಡಿದರು. ಹೌದು. ಅಭಿ ಸಿಡಿಸಿದ ಈ ಸ್ಪೋಟಕ ಶತಕದಿಂದ ಪಂಬಾಜ್‌ ಕಿಂಗ್ಸ್‌ ಅತಿಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜೊತೆಗೆ ಅಭಿ ಕೂಡ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ವೈಯಕ್ತಿಕ ರನ್‌ ಗಳಿಸಿದ ಟಾಪ್‌-3ನೇ ಆಟಗಾರನಾಗಿ ಹೊರಹೊಮ್ಮಿದರು, ಜೊತೆಗೆ ಹೈದರಾಬಾದ್‌ (Sunrisers Hyderabad) ತಂಡದ ಪರ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡರು. ಜೊತೆಗೆ ತೂಫಾನ್‌ ಶತಕ ಬಾರಿಸಿದ ಟಾಪ್‌-5 ಆಟಗಾರರ ಪಟ್ಟಿಯಲ್ಲೂ ಅಭಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆ ದಾಖಲೆಗಳ ಪಟ್ಟಿ ಏನು ಅಂತ ನೋಡೋದಾದ್ರೆ… ಇದನ್ನೂ ಓದಿ: IPL 2025: ಆರ್‌ಸಿಬಿಗೆ ಆಗಿಬಾರದ ಗ್ರೀನ್ ಜೆರ್ಸಿ – ಗೆಲುವಿಗಿಂತ ಸೋಲೇ ಹೆಚ್ಚು; ಇಂದಿನ ಲಕ್‌ ಹೇಗಿದೆ?

    Abhishek Sharma

    ಒಂದೇ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಟಾಪ್‌-5 ಪ್ಲೇಯರ್ಸ್‌
    * ಕ್ರಿಸ್‌ ಗೇಲ್‌ – 2013ರಲ್ಲಿ – 175 ರನ್‌ – 66 ಎಸೆತ
    * ಬ್ರೆಂಡನ್‌ ಮೆಕಲಂ – 2008ರಲ್ಲಿ – 158 ರನ್‌ – 73 ಎಸೆತ
    * ಅಭಿಷೇಕ್‌ ಶರ್ಮಾ – 2025 ರಲ್ಲಿ – 141 ರನ್‌ – 55 ಎಸೆತ
    * ಕ್ವಿಂಟನ್‌ ಡಿಕಾಕ್‌ – 2022 ರಲ್ಲಿ – 140 ರನ್‌ – 70 ಎಸೆತ
    * ಎಬಿ ಡಿವಿಲಿಯರ್ಸ್‌ – 2015 ರಲ್ಲಿ – 133 ರನ್‌ – 59 ಎಸೆತ

    AB de Villiers

    ತೂಫಾನ್‌ ಶತಕ ಬಾರಿಸಿದ ಟಾಪ್‌-5 ಆಟಗಾರರು ನೋಡಿ
    * ಕ್ರಿಸ್‌ ಗೇಲ್‌ – 2013ರಲ್ಲಿ – 30 ಎಸೆತಗಳಲ್ಲಿ ಶತಕ
    * ಯೂಸುಫ್‌ ಪಠಾಣ್‌ – 2010 – 37 ಎಸೆತಗಳಲ್ಲಿ ಶತಕ
    * ಡೇವಿಡ್‌ ಮಿಲ್ಲರ್‌ – 2013ರಲ್ಲಿ – 38 ಎಸೆತಗಳಲ್ಲಿ ಶತಕ
    * ಟ್ರಾವಿಸ್‌ ಹೆಡ್‌ – 2024ರಲ್ಲಿ – 39 ಎಸೆತಗಳಲ್ಲಿ ಶತಕ
    * ಅಭಿಷೇಕ್‌ ಶರ್ಮಾ – 2025 – 40 ಎಸೆತಗಳಲ್ಲಿ ಶತಕ

    ಅತಿಹೆಚ್ಚು ರನ್‌ ಚೇಸ್‌ ಮಾಡಿ ಗೆದ್ದ 2ನೇ ತಂಡ
    * ಪಂಜಾಬ್‌ ಕಿಂಗ್ಸ್‌ – 262/2 ಕೆಕೆಆರ್‌ ವಿರುದ್ಧ
    * ಸನ್‌ರೈಸರ್ಸ್‌ – 247/2 ಪಂಜಾಬ್‌ ಕಿಂಗ್ಸ್‌ ವಿರುದ್ಧ
    * ರಾಜಸ್ಥಾನ್‌ ರಾಯಲ್ಸ್‌ – 226/6 ಪಂಜಾಬ್‌ ವಿರುದ್ಧ
    * ರಾಜಸ್ಥಾನ್‌ ರಾಯಲ್ಸ್‌ – 224/8 ಕೆಕೆಆರ್‌ ವಿರುದ್ಧ
    * ಮುಂಬೈ ಇಂಡಿಯನ್ಸ್‌ – 219/6 ಸಿಎಸ್‌ಕೆ ವಿರುದ್ಧ

    ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಅಭಿಷೇಕ್ ಹೇಳಿದ್ದೇನು?
    ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್‌, ಇದು ತುಂಬಾ ವಿಶೇಷವಾದ ದಿನ. ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದ್ದು ಖುಷಿ ನೀಡಿದೆ. ಇನ್ನು ಯುವರಾಜ್‌ ಸಿಂಗ್‌ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಇನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸಿದರು. ಸೂರ್ಯ, ಅಭಿಷೇಕ್‌ ಅವರಿಗೆ ಕೆಲವು ಸಲಹೆ ನೀಡಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಅಭಿಷೇಕ್‌ ಸಿಡಿಲಬ್ಬರದ ಆಟಕ್ಕೆ ಪಂಜಾಬ್‌ ಪಂಚರ್‌; ತವರಲ್ಲಿ ಹೈದರಾಬಾದ್‌ಗೆ ವಿಕೆಟ್‌ಗಳ ಭರ್ಜರಿ ಗೆಲುವು

  • ಭಾರತಕ್ಕೆ ರನ್‌ಗಳ ʻಅಭಿಷೇಕʼ – ಇಂಗ್ಲೆಂಡ್‌ ವಿರುದ್ಧ 4-1 ಅಂತರದಲ್ಲಿ ಸರಣಿ ಜಯ

    ಭಾರತಕ್ಕೆ ರನ್‌ಗಳ ʻಅಭಿಷೇಕʼ – ಇಂಗ್ಲೆಂಡ್‌ ವಿರುದ್ಧ 4-1 ಅಂತರದಲ್ಲಿ ಸರಣಿ ಜಯ

    – ಸರಣಿಯ ಕೊನೇ ಪಂದ್ಯದಲ್ಲಿ 150 ರನ್‌ಗಳ ಭರ್ಜರಿ ಗೆಲುವು

    ಮುಂಬೈ: ಸೂಪರ್‌ ಸಂಡೆ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ (England) ವಿರುದ್ಧ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ (Team India) 150 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿದೆ. ಅಲ್ಲದೇ 2019ರ ಬಳಿಕ ಒಂದೇ ಒಂದು ಟಿ20 ಸರಣಿಯನ್ನೂ ಸೋಲದ ಭಾರತ ಗೆಲುವಿನ ಪರಂಪರೆಯನ್ನು ಮುಂದುವರಿಸಿದೆ.

    ಗೆಲುವಿಗೆ 248 ರನ್‌ಗಳ‌ ಬೃಹತ್‌ ಗುರಿ ಪಡೆದ ಇಂಗ್ಲೆಂಡ್‌ 10.3 ಓವರ್‌ಗಳಲ್ಲೇ 97 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಮೊದಲ ಓವರ್‌ನಿಂದಲೇ ಪ್ರತಿದಾಳಿ ನಡೆಸಲು ಶುರು ಮಾಡಿತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ 2 ಬೌಂಡರಿ, 1 ಸಿಕ್ಸರ್‌ನೊಂದಿಗೆ 17 ರನ್‌ ಚಚ್ಚಿದರು. ಇದರಿಂದ ಇಂಗ್ಲೆಂಡ್‌ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದ್ರೆ 4ನೇ ಓವರ್‌ನಲ್ಲಿ ಮೊದಲ ಎಸೆತದಲ್ಲೇ ಬೆನ್‌ ಡಕೆಟ್‌ ವಿಕೆಟ್‌ ಬೀಳುತ್ತಿದ್ದಂತೆ ಇಂಗ್ಲೆಂಡ್‌ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು.

    ಇಂಗ್ಲೆಂಡ್‌ ಪರ ಏಕಾಂಗಿ ಹೋರಾಟ ನಡೆಸಿದ ಫಿಲ್‌ ಸಾಲ್ಟ್‌ 23 ಎಸೆತಗಳಲ್ಲಿ 53 ರನ್‌ (3 ಸಿಕ್ಸರ್‌, 7 ಬೌಂಡರಿ) ಗಳಿಸಿದ್ರೆ ಉಳಿದೆಲ್ಲ ಆಟಗಾರರು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಇನ್ನೂ ಇಂಗ್ಲೆಂಡ್‌ ವಿರುದ್ಧ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಟೀಂ ಇಂಡಿಯಾ ಪರ ಮೊಹಮ್ಮದ್‌ ಶಮಿ 3 ವಿಕೆಟ್‌ ಕಿತ್ತರೆ, ವರುಣ್‌ ಚಕ್ರವರ್ತಿ, ಶಿವಂ ದುಬೆ, ಅಭಿಷೇಕ್‌ ಶರ್ಮಾ (Abhishek Sharma), ತಲಾ 2 ವಿಕೆಟ್‌ ಹಾಗೂ ರವಿ ಬಿಷ್ಣೋಯಿ ಒಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, ಬೃಹತ್ ಮೊತ್ತವನ್ನೇ ಕಲೆ ಹಾಕಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದೆ. ಒಂದರ ಮೇಲೆ ಒಂದರಂತೆ ಲೀಲಾಜಾಲವಾಗಿ ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು.

    ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತ ತಂಡದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ 2ನೇ ಶತಕ ದಾಖಲಿಸಿದರು. ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಕಂಡು ವಾಖೆಂಡೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಸಂಭ್ರಮಿಸಿದರು. ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಸಂಜು ಸ್ಯಾಮ್ಸನ್‌ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು.

    ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು. ಭಾರತದ ಪರ ಅಭಿಷೇಕ್‌ ಶರ್ಮಾ 135 ರನ್‌ (54 ಎಸೆತ, 13 ಸಿಕ್ಸರ್‌, 7 ಬೌಂಡರಿ), ಶಿವಂ ದುಬೆ 30 ರನ್‌, ತಿಲಕ್‌ ವರ್ಮಾ 24 ರನ್‌, ಸಂಜು ಸ್ಯಾಮ್ಸನ್‌ 16 ರನ್‌, ಅಕ್ಷರ್‌ ಪಟೇಲ್‌ 15 ರನ್‌, ಸೂರ್ಯಕುಮಾರ್‌ ಯಾದವ್‌ 2 ರನ್‌, ಹಾರ್ದಿಕ್‌ ಪಾಂಡ್ಯ ಮತ್ತು ರಿಂಕು ಸಿಂಗ್‌ ತಲಾ 9 ರನ್‌ ಗಳಿಸಿದ್ರು.

    ಇಂಗ್ಲೆಂಡ್ ಪರ ಬ್ರೇಯ್ಸನ್ ಕರ್ಸ್ ಮೂರು ವಿಕೆಟ್ ಹಾಗೂ ಮಾರ್ಕ್ ವುಡ್ ಎರಡು ವಿಕೆಟ್ ಕಿತ್ತರು. ಜೋಪ್ರಾ ಆರ್ಚರ್, ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ಒಂದೊಂದು ವಿಕೆಟ್ ಪಡೆದರು.

  • ಮಾವ ನಾರಾಯಣ ಮೂರ್ತಿಯೊಂದಿಗೆ ಟಿ20 ಪಂದ್ಯ ವೀಕ್ಷಿಸಿದ ಬ್ರಿಟನ್‌ ಮಾಜಿ ಪ್ರಧಾನಿ

    ಮಾವ ನಾರಾಯಣ ಮೂರ್ತಿಯೊಂದಿಗೆ ಟಿ20 ಪಂದ್ಯ ವೀಕ್ಷಿಸಿದ ಬ್ರಿಟನ್‌ ಮಾಜಿ ಪ್ರಧಾನಿ

    – ಬಿಗ್‌ ಬಿ, ರಿಷಿ ಸುನಕ್, ನಾರಾಯಣ ಮೂರ್ತಿ, ಮುಕೇಶ್‌ ಅಂಬಾನಿಗೆ ಸೆಂಚುರಿ ಗಿಫ್ಟ್‌ ಕೊಟ್ಟ ಅಭಿ

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯ ಪಂದ್ಯ ವೀಕ್ಷಣೆಗೆ ಸೂಪರ್‌ ಸಂಡೇ ಗಣ್ಯಾತಿಗಣ್ಯರ ದಂಡೇ ಆಗಮಿಸಿದೆ. ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಅಮಿತಾಭ್‌ ಬಚ್ಚನ್‌, ಪುತ್ರ ಅಭಿಷೇಕ್‌ ಬಚ್ಚನ್‌ ಮತ್ತಿತರರು ಆಗಮಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

    ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ತಮ್ಮ ಮಾವನೂ ಆಗಿರುವ ಎನ್.ಆರ್ ನಾರಾಯಣ ಮೂರ್ತಿ ಅವರೊಂದಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದರು. ಭಾನುವಾರ ವೀಕೆಂಡ್‌ ಸಹ ಆಗಿದ್ದರಿಂದ ವಾಂಖೆಡೆ ಮೈದಾನ ತುಂಬಿ ತುಳುಕುತ್ತಿತ್ತು. ಈ ನಡುವೆ ಅಭಿಮಾನಿಗಳಿಗೆ ನಿರಾಸೆಗೊಳಿಸದ ಟೀಂ ಇಂಡಿಯಾ ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಅಬ್ಬರಿಸಿತು. ಕೊನೆ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್‌

    ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಬೃಹತ್ ಮೊತ್ತವನ್ನೇ ಕಲೆ ಹಾಕಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದೆ. ಒಂದರ ಮೇಲೆ ಒಂದರಂತೆ ಲೀಲಾಜಾಲವಾಗಿ ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಶತಕ ಸಿಡಿಸಿದ ಭಾರತ ತಂಡದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಜತೆಗೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು. ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ಕಂಡು ವಾಖೆಂಡೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಸಂಭ್ರಮಿಸಿದರು. ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಸಂಜು ಸ್ಯಾಮ್ಸನ್‌ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದರು.

    ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಬ್ರೇಯ್ಸನ್ ಕರ್ಸ್ ಮೂರು ವಿಕೆಟ್ ಹಾಗೂ ಮಾರ್ಕ್ ವುಡ್ ಎರಡು ವಿಕೆಟ್ ಕಿತ್ತರು. ಜೋಪ್ರಾ ಆರ್ಚರ್, ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

  • ಅಭಿಷೇಕ್‌ ಶತಕದ ಆರ್ಭಟ – ರೋಹಿತ್‌, ವಿರಾಟ್‌, ಗಿಲ್‌ ದಾಖಲೆ ಪುಡಿ ಪುಡಿ

    ಅಭಿಷೇಕ್‌ ಶತಕದ ಆರ್ಭಟ – ರೋಹಿತ್‌, ವಿರಾಟ್‌, ಗಿಲ್‌ ದಾಖಲೆ ಪುಡಿ ಪುಡಿ

    ಮುಂಬೈ: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸ್ಟಾರ್‌ ಅಭಿಷೇಕ್‌ ಶರ್ಮಾ (Abhishek Sharma) ಹಲವು ದಾಖಲೆಗಳನ್ನ ಪುಡಿ ಪುಡಿ ಮಾಡಿದ್ದಾರೆ.

    ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಡಿಸಿದ್ದಾರೆ. 250 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿ ಒಟ್ಟು 54 ಎಸೆತಗಳಲ್ಲಿ 135 ರನ್‌ (13 ಸಿಕ್ಸರ್‌, 7 ಬೌಂಡರಿ) ಚಚ್ಚಿದ್ದಾರೆ. ಇದರೊಂದಿಗೆ ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿ ಶುಭಮನ್‌ ಗಿಲ್‌ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ.

    ಈ ಮೂಲಕ ವೇಗದ ಶತಕ ಹಾಗೂ ಅರ್ಧಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡಿರುವ ಅಭಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಎಂಬ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಇನ್ನಿಂಗ್ಸ್‌ವೊಂದರಲ್ಲೇ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರನೆಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

    ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತೀಯರು
    * ಅಭಿಷೇಕ್‌ ಶರ್ಮಾ- 135 ರನ್‌ (54 ಎಸೆತ)
    * ಶುಭಮನ್‌ ಗಿಲ್‌ – 126 (63 ಎಸೆತ)
    * ರುತುರಾಜ್‌ ಗಾಯಕ್ವಾಡ್‌ – 123 ರನ್‌ (57 ಎಸೆತ)
    * ವಿರಾಟ್‌ ಕೊಹ್ಲಿ – 122 ರನ್‌ (61 ಎಸೆತ)
    * ರೋಹಿತ್‌ ಶರ್ಮಾ – 121 ರನ್‌ (69 ಎಸೆತ)

    2ನೇ ವೇಗದ ಅರ್ಧಶತಕ:
    ಮೊದಲ ಓವರ್‌ನಲ್ಲಿ 16 ರನ್‌ ಚಚ್ಚಿ ಸಂಜು ಸ್ಯಾಮ್ಸನ್‌ ಔಟಾಗುತ್ತಿದ್ದಂತೆ ಅಭಿಷೇಕ್‌ ಶರ್ಮಾ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಬ್ಯಾಟಿಂಗ್‌ ಸ್ನೇಹಿಯಾದ ವಾಂಖೆಡೆ ಪಿಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಅಭಿ, ಕೇವಲ 17 ಎಸೆತಗಳಲ್ಲೇ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ವೇಗದ ಅರ್ಧಶತಕ ಸಿಡಿಸಿದರು. ಇದು ಟೀಂ ಇಂಡಿಯಾ ಪರ ದಾಖಲಾದ 2ನೇ ವೇಗದ ಅರ್ಧಶತಕವಾಗಿದೆ. 2007ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೇವಲ 12 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದು, ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

    ಸ್ಫೋಟಕ ಶತಕ ಸಿಡಿಸಿದ 2ನೇ ಭಾರತೀಯ:
    ಇನ್ನೂ ಕೇವಲ 37 ಎಸೆತಗಳಲ್ಲೇ 10 ಸಿಕ್ಸರ್‌, 5 ಬೌಂಡರಿಯೊಂದಿಗೆ ವೇಗದ ಶತಕ ದಾಖಲಿಸಿದ ಅಭಿಷೇಕ್‌ ಶರ್ಮಾ ಟೀಂ ಇಂಡಿಯಾ ಪರ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್‌ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಭಾರತದ ಪಾಲಿನ ಈವರೆಗಿನ ದಾಖಲೆಯಾಗಿದೆ. ಇದನ್ನೂ ಓದಿ: U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್‌ 

    248 ರನ್‌ಗಳ ಗುರಿ:
    ಸದ್ಯ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿರುವ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ, ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 248 ರನ್‌ಗಳ ಗುರಿ ನೀಡಿದೆ. ಟೀಂ ಇಂಡಿಯಾ ಪರ ಅಭಿಷೇಕ್‌ ಶರ್ಮಾ ಹೊರತುಪಡಿಸಿ ಶಿವಂ ದುಬೆ, 30 ರನ್‌, ತಿಲಕ್‌ ವರ್ಮಾ 24 ರನ್‌, ಸಂಜು ಸ್ಯಾಮ್ಸನ್‌ 16 ರನ್‌, ಅಕ್ಷರ್‌ ಪಟೇಲ್‌ 15 ರನ್‌, ಸೂರ್ಯಕುಮಾರ್‌ ಯಾದವ್‌ 2 ರನ್‌, ಹಾರ್ದಿಕ್‌ ಪಾಂಡ್ಯ ಮತ್ತು ರಿಂಕು ಸಿಂಗ್‌ ತಲಾ 9 ರನ್‌ ಗಳಿಸಿದ್ರು. ಇದನ್ನೂ ಓದಿ: ರಣಜಿ ಟ್ರೋಫಿ ಪಂದ್ಯದ ವೇಳೆ ಮತ್ತೆ ಭದ್ರತಾ ಲೋಪ – ಕೊಹ್ಲಿಯತ್ತ ಧಾವಿಸಿದ ಮೂವರು ಅಭಿಮಾನಿಗಳು

  • ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

    ಸ್ಫೋಟಕ ಶತಕ – ಅಭಿಷೇಕ್‌ ಶರ್ಮಾ ಬೆಂಕಿ ಬ್ಯಾಟಿಂಗ್‌ಗೆ ಎರಡೆರಡು ದಾಖಲೆ ಉಡೀಸ್‌

    ಮುಂಬೈ: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಎರಡೆರಡು ವಿಶೇಷ ದಾಖಲೆ ಬರೆದಿದ್ದಾರೆ.

    ಟೀಂ ಇಂಡಿಯಾ ಪರ ವೇಗದ ಅರ್ಧಶತಕ ಹಾಗೂ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸದ್ಯ 244.89 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿರುವ ಅಭಿಷೇಕ್‌ ಶರ್ಮಾ 49 ಎಸೆತಗಳಲ್ಲಿ 120 ರನ್‌ (10 ಸಿಕ್ಸರ್‌, 6 ಬೌಂಡರಿ) ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಆರಂಭದಿಂದಲೇ ಆಂಗ್ಲರ ಪಡೆಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು.

    2ನೇ ವೇಗದ ಅರ್ಧಶತಕ:
    ಮೊದಲ ಓವರ್‌ನಲ್ಲಿ 16 ರನ್‌ ಚಚ್ಚಿ ಸಂಜು ಸ್ಯಾಮ್ಸನ್‌ ಔಟಾಗುತ್ತಿದ್ದಂತೆ ಅಭಿಷೇಕ್‌ ಶರ್ಮಾ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಬ್ಯಾಟಿಂಗ್‌ ಸ್ನೇಹಿಯಾದ ವಾಂಖೆಡೆ ಪಿಚ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ಅಭಿ, ಕೇವಲ 17 ಎಸೆತಗಳಲ್ಲೇ 3 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ವೇಗದ ಅರ್ಧಶತಕ ಸಿಡಿಸಿದರು. ಇದು ಟೀಂ ಇಂಡಿಯಾ ಪರ ದಾಖಲಾದ 2ನೇ ವೇಗದ ಅರ್ಧಶತಕವಾಗಿದೆ.

    2007ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೇವಲ 12 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದು, ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

    ಸ್ಫೋಟಕ ಶತಕ ಸಿಡಿಸಿದ 2ನೇ ಭಾರತೀಯ:
    ಇನ್ನೂ ಕೇವಲ 37 ಎಸೆತಗಳಲ್ಲೇ 10 ಸಿಕ್ಸರ್‌, 5 ಬೌಂಡರಿಯೊಂದಿಗೆ ವೇಗದ ಶತಕ ದಾಖಲಿಸಿದ ಅಭಿಷೇಕ್‌ ಶರ್ಮಾ ಟೀಂ ಇಂಡಿಯಾ ಪರ ವೇಗದ ಶತಕ ಸಿಡಿಸಿದ 2ನೇ ಭಾರತೀಯ ಎಂಬ ಖ್ಯಾತಿಗೂ ಪಾತ್ರರಾದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್‌ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಭಾರತದ ಪಾಲಿನ ಈವರೆಗಿನ ದಾಖಲೆಯಾಗಿದೆ.

    ಪವರ್‌ ಪ್ಲೇನಲ್ಲೂ ದಾಖಲೆ:
    ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದ ಭಾರತೀಯ ಆಟಗಾರರು ಮೊದಲ 6 ಓವರ್‌ಗಳಲ್ಲಿ 95 ರನ್‌ ಸಿಡಿಸಿದರು. ಈ ಮೂಲಕ ಪವರ್‌ಪ್ಲೇನಲ್ಲಿ ಟೀಂ ಇಂಡಿಯಾ ಪರ ಅತಿಹೆಚ್ಚು ರನ್‌ ಗಳಿಸಿದ ದಾಖಲೆ ಇದಾಯಿತು.

  • 134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌ – ಭಾರತಕ್ಕೆ ಜಯದ ʻಅಭಿಷೇಕʼ

    134 ರನ್‌ಗಳಿಗೆ ಜಿಂಬಾಬ್ವೆ ಆಲೌಟ್‌ – ಭಾರತಕ್ಕೆ ಜಯದ ʻಅಭಿಷೇಕʼ

    ಹರಾರೆ: ಅಭಿಷೇಕ್‌ ಶರ್ಮಾ (Abhishek Sharma) ಸ್ಫೋಟಕ ಶತಕ, ರುತುರಾಜ್‌ ಗಾಯಕ್ವಾಡ್‌ , ರಿಂಕು ಸಿಂಗ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡವು (Team India) ಜಿಂಬಾಬ್ವೆ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

    ಇಲ್ಲಿನ ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಜಿಂಬಾಬ್ವೆ 18.4 ಓವರ್‌ಗಳಲ್ಲಿ 134 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    ಚೇಸಿಂಗ್‌ ಆರಂಭಿಸಿದ ಜಿಂಬಾಬ್ವೆ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2ನೇ ವಿಕೆಟ್‌ಗೆ 15 ಎಸೆತಗಳಲ್ಲಿ 36 ರನ್‌ಗಳ ಸ್ಫೋಟಕ ಜೊತೆಯಾಟ ನಂತರ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ವಿಫಲರಾದರು. ಅವೇಶ್‌ ಖಾನ್‌, ಮುಕೇಶ್‌ ಕುಮಾರ್‌ (Mukesh Kumar) ಬೌಲಿಂಗ್‌ ಪ್ರಹಾರಕ್ಕೆ ಜಿಂಬಾಬ್ವೆ ಬ್ಯಾಟರ್‌ಗಳು ಮಕಾಡೆ ಮಲಗಿದರು. ಅಂತಿಮವಾಗಿ ಭಾರತ 100 ರನ್‌ಗಳ ಗೆಲುವು ಸಾಧಿಸಿತು.

    ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 43 ರನ್‌, ಬ್ರಿಯಾನ್ ಬೆನೆಟ್ (Brian Bennett) 26 ರನ್‌, ಲ್ಯೂಕ್ ಜೊಂಗ್ವೆ 33 ರನ್‌ ಗಳಿಸಿದರು. ಇನ್ನೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮುಕೇಶ್‌ ಕುಮಾರ್‌ ಮತ್ತು ಅವೇಶ್‌ ಖಾನ್‌ ತಲಾ 3 ವಿಕೆಟ್‌ ಕಿತ್ತರೆ, ರವಿ ಬಿಷ್ಣೋಯಿ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಪ್ಲ್ಯಾನ್‌!

    ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ, 234 ರನ್‌ ಬಾರಿಸಿತ್ತು. ಐಪಿಎಲ್‌ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನಾಡುತ್ತಿರುವ ಪಂಜಾಬ್‌ ಮೂಲದ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಮೊದಲ 33 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್‌, 7 ಬೌಂಡರಿಗಳೂ ಸೇರಿವೆ.

    ಮಿಂಚಿದ ರಿಂಕು, ರುತು:
    ಇತ್ತ ಅಭಿಷೇಕ್‌ ಶರ್ಮಾ ಶತಕ ಸಿಡಿಸಿ ಪೆವಿಲಿಯನ್‌ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌ ಜೋಡಿ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್‌ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್‌ 47 ಎಸೆತಗಳಲ್ಲಿ 77 ರನ್‌ (1 ಸಿಕ್ಸರ್‌, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್‌ ಸ್ಫೋಟಕ 48 ರನ್‌ (22 ಎಸೆತ, 5 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್‌ ಗಿಲ್‌ 2 ರನ್‌ ಗಳಿಸಿದರು.

  • ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    ಹ್ಯಾಟ್ರಿಕ್‌ ಸಿಕ್ಸರ್‌ – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ!

    – ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದ ಭಾರತ

    ಹರಾರೆ: ಟೀಂ ಇಂಡಿಯಾದ ಯುವ ಬ್ಯಾಟರ್‌ ಅಭಿಷೇಕ್‌ ಶರ್ಮಾ (Abhishek Sharma) ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಆಗಿ ಭಾರೀ ಟೀಕೆಗೆ ಗುರಿಯಾಗಿದ್ದ ಅಭಿ, ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ.

    ಇಲ್ಲಿನ ಹರಾರೆ ಸ್ಫೋರ್ಟ್‌ ಕ್ಲಬ್‌ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ (Team India) 10 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ಬಳಿಕ ಅಭಿಷೇಕ್‌ ಶರ್ಮಾ ಅವರ ಸ್ಪೋಟಕ ಶತಕ ಹಾಗೂ ರುತುರಾಜ್‌ ಗಾಯಕ್ವಾಡ್‌ ಅವರ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 234 ರನ್‌ ಸಿಡಿಸಿದೆ.

    ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
    ಐಪಿಎಲ್‌ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯನ್ನಾಡುತ್ತಿರುವ ಪಂಜಾಬ್‌ ಮೂಲದ ಅಭಿಷೇಕ್‌ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ 33 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್‌ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್‌, 7 ಬೌಂಡರಿಗಳೂ ಸೇರಿವೆ.

    ಶತಕ ವೀರರ ಎಲೈಟ್‌ ಪಟ್ಟಿಗೆ ಅಭಿ:
    ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲೇ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ ಕಡಿಮೆ ಎಸೆತಗಳಲ್ಲಿ ಶತಕ ಪೂರೈಸಿದ ದಿಗ್ಗರ ಎಲೈಟ್‌ ಪಟ್ಟಿ ಸೇರಿದ್ದಾರೆ. ಆರನ್‌ ಫಿಂಚ್‌, ಕ್ರಿಸ್‌ಗೇಲ್‌, ಕೊಲಿನ್‌ ಮನ್ರೋ, ರವೀಂದರ್‌ಪಾಲ್‌ ಸಿಂಗ್‌, ಜೋಶ್‌ ಇಂಗ್ಲಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಈವರೆಗೆ 47 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರಾಗಿದ್ದರು. ಇದೀಗ ಈ ದಿಗ್ಗಜರ ಪಟ್ಟಿಗೆ ಅಭಿಷೇಕ್‌ ಶರ್ಮಾ ಸೇರ್ಪಡೆಗೊಂಡಿದ್ದಾರೆ.

    ಜಿಂಬಾಬ್ವೆಗೆ 235 ರನ್‌ ಗುರಿ:
    ಜಿಂಬಾಬ್ವೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 234 ರನ್‌ ಬಾರಿಸಿದ್ದು, ಎದುರಾಳಿ ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದೆ.

    ಮಿಂಚಿದ ರಿಂಕು, ರುತು:
    ಇತ್ತ ಅಭಿಷೇಕ್‌ ಶರ್ಮಾ ಶತಕ ಸಿಡಿಸಿ ಪೆವಿಲಿಯನ್‌ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌ ಜೋಡಿ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್‌ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್‌ 47 ಎಸೆತಗಳಲ್ಲಿ 77 ರನ್‌ (1 ಸಿಕ್ಸರ್‌, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್‌ ಸ್ಫೋಟಕ 48 ರನ್‌ (22 ಎಸೆತ, 5 ಸಿಕ್ಸರ್‌, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್‌ ಗಿಲ್‌ 2 ರನ್‌ ಗಳಿಸಿದರು.

  • ಕಳಪೆ ಬ್ಯಾಟಿಂಗ್‌ಗೆ ಬೆಲೆತೆತ್ತ ʻಯಂಗ್‌ ಇಂಡಿಯಾʼ – ಜಿಂಬಾಬ್ವೆಗೆ 13 ರನ್‌ಗಳ ರೋಚಕ ಗೆಲುವು!

    ಕಳಪೆ ಬ್ಯಾಟಿಂಗ್‌ಗೆ ಬೆಲೆತೆತ್ತ ʻಯಂಗ್‌ ಇಂಡಿಯಾʼ – ಜಿಂಬಾಬ್ವೆಗೆ 13 ರನ್‌ಗಳ ರೋಚಕ ಗೆಲುವು!

    ಹರಾರೆ: ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಭಾರತ (Team India) ಕಳಪೆ ಬ್ಯಾಟಿಂಗ್‌ನಿಂದ ಬೆಲೆತೆತ್ತಿದೆ. ಅತ್ತ ಸಂಘಟಿತ ಪ್ರದರ್ಶನ ನೀಡಿದ ಜಿಂಬಾಬ್ವೆ (Zimbabwe) ತಂಡವು ಭಾರತದ ವಿರುದ್ಧ 13 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಇಲ್ಲಿನ ಹರಾರೆ ಸ್ಫೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಜಿಂಬಾಬ್ವೆ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದರೂ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 115 ರನ್‌ ಕಲೆಹಾಕಿತ್ತು. 116 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 19.5 ಓವರ್‌ಗಳಲ್ಲೇ 102 ರನ್‌ಗೆ ಆಲೌಟ್‌ ಆಗಿ ಹೀನಾಯ ಸೋಲು ಕಂಡಿತು.

    ಚೇಸಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಯಿತು. ಪವರ್‌ ಪ್ಲೇನಲ್ಲಿ 28 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ಒಂದಂತದಲ್ಲಿ ರನ್‌ ಕದಿಯಲು ತಿಣುಕಾಡುತ್ತಿದ್ದ ಟೀಂ ಇಂಡಿಯಾ ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. ಪರಿಣಾಮ 61 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

    8ನೇ ವಿಕೆಟ್‌ಗೆ ಜೊತೆಯಾಗಿದ್ದ ವಾಷಿಂಗ್ಟನ್‌ ಸುಂದರ್‌ ಹಾಗೂ ಅವೇಶ್‌ ಖಾನ್ (Washington Sundar) ‌ಜೋಡಿ ನೀಡಿದ 23 ರನ್‌ಗಳ ಸಣ್ಣ ಜೊತೆಯಾಟ ಮತ್ತೆ ಗೆಲುವಿನ ಕನಸು ಚಿಗುರಿಸಿತ್ತು. ಈ ವೇಳೆ ಲಾಂಗ್‌ಆಫ್‌ನಲ್ಲಿ ಸಿಕ್ಸರ್‌ಗೆ ಯತ್ನಿಸಿ ಅವೇಶ್‌ ಖಾನ್‌ ಕ್ಯಾಚ್‌ ನೀಡಿ ಔಟಾದರು. ಇನ್ನೂ ಕೊನೇ ಓವರ್‌ ವರೆಗೂ ಗೆಲುವಿನ ಭರವಸೆ ಮೂಡಿಸಿದ್ದ ವಾಷಿಂಗ್ಟನ್‌ ಸುಂದರ್‌ ರನ್‌ ಕದಿಯುವಲ್ಲಿ ವಿಫಲರಾದರು. ಪರಿಣಾಮ ಜಿಂಬಾಬ್ವೆ ಎದುರು ಮಂಡಿಯೂರಬೇಕಾಯಿತು. ಟೀಂ ಇಂಡಿಯಾ ಪರ ನಾಯಕ ಶುಭಮನ್‌ ಗಿಲ್‌ (Shubman Gill )34 ರನ್‌ (29 ಎಸೆತ, 5 ಬೌಂಡರಿ), ವಾಷಿಂಗ್ಟನ್‌ ಸುಂದರ್‌ 27 ರನ್‌, ಅವೇಶ್‌ ಖಾನ್‌ 16 ರನ್‌ ರನ್‌ ಗಳಿಸಿದರು.

    ಜಿಂಬಾಬ್ವೆ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಸಿಖಂದರ್‌ ರಝಾ (Sikandar Raza), ಟೆಂಡಿ ಛಟಾರ ತಲಾ ಮೂರು ವಿಕೆಟ್‌ ಕಿತ್ತರೆ, ಬ್ರಿಯಾನ್ ಬೆನೆಟ್ (Brian Bennett), ವೆಲ್ಲಿಂಗ್ಟನ್ ಮಸಕಡ್ಜಾ, ಮುಜರಬಾನಿ, ಲ್ಯೂಕ್ ಜೊಂಗ್ವೆ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಪರ ವೆಸ್ಲಿ ಮಾಧೆವೆರೆ 21 ರನ್‌, ಬ್ರಿಯಾನ್ ಬೆನೆಟ್ 22 ರನ್‌, ಸಿಕಂದರ್ ರಝಾ 17 ರನ್‌, ಡಿಯೋನ್ ಮೈಯರ್ಸ್ 23 ರನ್‌, ಕ್ಲೈವ್ ಮದಂಡೆ 29 ರನ್‌ಗಳ ಕೊಡುಗೆ ನೀಡಿದರು. ಉಳಿದ ಬ್ಯಾಟರ್ಸ್‌ಗಳು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ 20 ಓವರ್‌ಗಳಲ್ಲಿ 115 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಟೀಂ ಇಂಡಿಯಾ ಪರ ರವಿ ಬಿಷ್ಣೋಯಿ (Ravi Bishnoi) 4 ಓವರ್‌ಗಳಲ್ಲಿ ಕೇವಲ 13 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಹಾಗೂ ಮುಕೇಶ್‌ ಕುಮಾರ್‌ 1 ವಿಕೆಟ್‌ ಪಡೆದು ಮಿಂಚಿದರು.

  • ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ನವದೆಹಲಿ: ಸಿಕ್ಸರ್‌, ಬೌಂಡರಿಗಳ ಭರ್ಜರಿ ಬ್ಯಾಟಿಂಗ್‌ನೊಂದಿಗೆ ಕ್ರಿಕೆಟ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಒಂದೇ ಇನ್ನಿಂಗ್ಸ್‌ನಲ್ಲಿ ನಾಲ್ಕು ದಾಖಲೆಗಳನ್ನ ಉಡೀಸ್‌ ಮಾಡಿದೆ.

    ಶನಿವಾರ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಹೈದರಾಬಾದ್‌ ತಂಡ ಹಲವು ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿದೆ.

    ಮೊದಲ 6 ಓವರ್‌ಗಳಲ್ಲೇ 125 ರನ್‌ ಸಿಡಿಸುವ ಮೂಲಕ ಪವರ್‌ ಪ್ಲೇನಲ್ಲಿ ಗರಿಷ್ಠ ರನ್‌ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ತನ್ನದಾಗಿಸಿಕೊಂಡಿತು. ಈ ವೇಳೆ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಗಳನ್ನು ಸಿಡಿಸುವ ಮೂಲಕ ಪವರ್‌ ಪ್ಲೇನಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಹಾಗೂ ಮೊದಲ 10 ಓವರ್‌ಗಳಲ್ಲಿ ಗರಿಷ್ಠ ರನ್‌ ಸಿಡಿಸಿದ ಮೊದಲ ತಂಡ ಎಂಬ ದಾಖಲೆಯನ್ನೂ ಬರೆಯಿತು. ಅಲ್ಲದೇ ತನ್ನದೇ ದಾಖಲೆ ಮುರಿದು ಸತತ ಮೂರು ಬಾರಿ ಐಪಿಎಲ್‌ ಇತಿಹಾಸದಲ್ಲಿ ಅತಿ ವೇಗವಾಗಿ 200 ರನ್‌ ಸಿಡಿಸಿದ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.

    ಐಪಿಎಲ್‌ನಲ್ಲಿ ವೇಗವಾಗಿ 200 ರನ್‌ ಪೂರೈಸಿದ ಬಲಿಷ್ಠ ತಂಡಗಳು:
    ಆರ್‌ಸಿಬಿ – 14.1 ಓವರ್‌ಗಳಲ್ಲಿ – ಕಿಂಗ್ಸ್‌ ಪಂಜಾಬ್‌ ವಿರುದ್ಧ – 2016
    ಹೈದರಾಬಾದ್‌ – 14.4 ಓವರ್‌ಗಳಲ್ಲಿ – ಮುಂಬೈ ಇಂಡಿಯನ್ಸ್‌ ವಿರುದ್ಧ – 2024
    ಹೈದರಾಬಾದ್‌ – 14.5 ಓವರ್‌ಗಳಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ – 2024
    ಹೈದರಾಬಾದ್‌ – 15 ಓವರ್‌ಗಳಲ್ಲಿ – ಆರ್‌ಸಿಬಿ ವಿರುದ್ಧ – 2024

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ
    ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ
    ಕೊಚ್ಚಿ ಟಸ್ಕರ್ಸ್‌ ಕೇರಳ – 87 ರನ್‌ – 2011ರಲ್ಲಿ

    ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್‌ ಟಾಪ್‌
    ಸನ್ ರೈಸರ್ಸ್ ಹೈದರಾಬಾದ್ – 287 ರನ್
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌

  • IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    ನವದೆಹಲಿ: ಪ್ರತಿ ಇನ್ನಿಂಗ್ಸ್‌ನಲ್ಲೂ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad )ತಂಡವು ಐಪಿಎಲ್‌ನಲ್ಲಿ (IPL 2024) ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ.

    ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಹೈದರಾಬಾದ್‌ ತಂಡದ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಡೆಲ್ಲಿ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ದಾರೆ. ಮೊದಲ 6 ಓವರ್‌ಗಳಲ್ಲೇ 125 ರನ್‌ ಬಾರಿಸುವ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಪವರ್‌ ಪ್ಲೇನಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಈ ಹಿಂದೆ 6 ಓವರ್‌ಗಳಲ್ಲಿ 105 ರನ್‌ ಸಿಡಿಸಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಅಗ್ರ ಸ್ಥಾನದಲ್ಲಿತ್ತು.

    ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್‌ ಹೆಡ್‌ (Travis Head) ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಜೋಡಿ ಜೊತೆಯಾಗಿ ಅಬ್ಬರಿಸಲು ಶುರು ಮಾಡಿದರು. ಮೊದಲ ಓವರ್‌ನಲ್ಲೇ 19 ರನ್‌ ಸಿಡಿಸಿದ್ದ ಈ ಜೋಡಿ 2,3,4,5,6ನೇ ಓವರ್‌ಗಳಲ್ಲಿ ಕ್ರಮವಾಗಿ 21, 22, 21, 20, 22 ರನ್‌ ಚಚ್ಚಿ ಹೊಸ ದಾಖಲೆ ಬರೆಯಿತು. ಈ ವೇಳೆ ಟ್ರಾವಿಸ್‌ ಹೆಡ್‌ ಕೇವಲ 26 ಎಸೆತಗಳಲ್ಲಿ ಭರ್ಜರಿ 84 ರನ್‌ ಗಳಿಸಿದ್ದರೆ, ಅಭಿಷೇಕ್‌ ಶರ್ಮಾ 10 ಎಸೆತಗಳಲ್ಲಿ ಸ್ಫೋಟಕ 40 ರನ್‌ ಚಚ್ಚಿದ್ದರು. ಮೊದಲ 6 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಈ ಜೋಡಿ 125 ರನ್‌ ಬಾರಿಸುವ ಮೂಲಕ ಮತ್ತೊಂದು ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿತು. ಇದರಲ್ಲಿ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಳು ಸೇರಿದ್ದವು. ನಂತರ ಅಭಿಷೇಕ್‌ ಶರ್ಮಾ 12 ಎಸೆತಗಳಲ್ಲಿ 46 ರನ್‌ ಸಿಡಿಸಿ ಔಟಾದರು.

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ
    ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ
    ಕೊಚ್ಚಿ ಟಸ್ಕರ್ಸ್‌ ಕೇರಳ – 87 ರನ್‌ – 2011ರಲ್ಲಿ

    ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್‌ ಟಾಪ್‌
    ಸನ್ ರೈಸರ್ಸ್ ಹೈದರಾಬಾದ್ – 287 ರನ್
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌