Tag: ಅಭಿಷೇಕ್ ಮನುಸಿಂಘ್ವಿ

  • ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ

    ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ

    – ನಾನು ಕುಳಿತಿದ್ದ ಸ್ಥಳದಲ್ಲಿ ಹಣ ಸಿಕ್ಕಿದೆ ಎಂದಾಗ ಆಶ್ಚರ್ಯವಾಯಿತು ಎಂದ ಸಂಸದ

    ನವದೆಹಲಿ: ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ (Abhishek Singhvi) ಸೀಟ್ ನಂಬರ್ 222 ರಲ್ಲಿ 500 ರೂ. ಹಣದ ನೋಟುಗಳು ಸಿಕ್ಕಿವೆ. ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿದ್ದು, ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸದನದಲ್ಲಿ ಕೋಲಾಹಲ ಎದ್ದಿತು. ಘಟನೆ ಕುರಿತು ಮನುಸಿಂಘ್ವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ವೀಡಿಯೋವೊಂದರಲ್ಲಿ ಮಾತನಾಡಿರುವ ಅವರು, ಈ ಬಗ್ಗೆ ಕೇಳಿ ನನಗೆ ಆಶ್ಚರ್ಯವಾಗಿದೆ. ನಿನ್ನೆ ಮಧ್ಯಾಹ್ನ 12.57ಕ್ಕೆ ಸದನದ ಒಳಗೆ ತಲುಪಿದ್ದೆ. ಮಧ್ಯಾಹ್ನ 1 ಗಂಟೆಗೆ ಸದನ ಏರಿತು. ಮಧ್ಯಾಹ್ನ 1 ರಿಂದ 1.30ರ ವರೆಗೆ ನಾನು ಅಯೋಧ್ಯೆ ಸಂಸದ ಅವದೇಶ್ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ನಲ್ಲಿ ಕುಳಿತು ಊಟ ಮಾಡಿದೆ. ನಾನು ಮಧ್ಯಾಹ್ನ 1.30ಕ್ಕೆ ಸಂಸತ್ತನ್ನು ಬಿಟ್ಟೆ. ಹೀಗಾಗಿ ನಿನ್ನೆ ಸದನದಲ್ಲಿ ಒಟ್ಟು 3 ನಿಮಿಷ, ಕ್ಯಾಂಟೀನ್‌ನಲ್ಲಿ 30 ನಿಮಿಷ ಇದ್ದೆ. ಇಂತಹ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿರುವುದು ನನಗೆ ವಿಚಿತ್ರವೆನಿಸುತ್ತದೆ. ಸಹಜವಾಗಿ ಜನರು ಎಲ್ಲಿಯಾದರೂ ಮತ್ತು ಯಾವುದೇ ಆಸನದಲ್ಲಿ ಏನನ್ನು ಇರಿಸಬಹುದು ಎಂಬುದರ ಕುರಿತು ತನಿಖೆ ನಡೆಯಬೇಕು ಎಂದಿದ್ದಾರೆ. ಇದನ್ನೂ ಓದಿ: MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    ಇದರರ್ಥ ನಮಗೆ ಇರುವ ಆಸನವನ್ನು ಲಾಕ್ ಮಾಡಬಹುದು, ಲಾಕ್‌ ಮಾಡಿ ಸಂಸದರೇ ತಮ್ಮೊಂದಿಗೆ ಕೀಲಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ಎಲ್ಲರೂ ಅಸನದ ಮೇಲೆ ಕುಳಿತು ಏನು ಬೇಕಾದರೂ ಮಾಡಬಹುದು, ಇದರಿಂದ ಆರೋಪಗಳನ್ನು ಮಾಡಬಹುದು. ಆದ್ರೆ ಮಾಡುವಂತರ ಆರೋಪಗಳು ಗಂಭೀರವಾಗಿಲ್ಲದಿದ್ದಾಗ ನಗೆಪಾಟಲಿಗೀಡಾಗುತ್ತದೆ. ಘಟನೆ ಕುರಿತು ನಾನು ಭದ್ರತಾ ಏಜೆನ್ಸಿಗಳಿಗೆ ಮನವಿ ಮಾಡುತ್ತೇನೆ. ಏನಾದ್ರೂ ಲೋಪವಿದ್ದರೆ ಅದನ್ನು ಸಹ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

    ಏನಿದು ಘಟನೆ?
    ಕಾಂಗ್ರೆಸ್ ಸಂಸದ ಅಭಿಷೇಕ್ ಮನುಸಿಂಘ್ವಿ ಸೀಟಿನಲ್ಲಿ ಹಣದ ನೋಟುಗಳು ಪತ್ತೆಯಾಗಿತ್ತು. ರಾಜ್ಯಸಭೆಯ ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿತ್ತು. ಗುರುವಾರ (ಡಿ.5) ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ ಹಣ ಕಂಡುಬಂದಿತ್ತು. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದ್ದರು. ಇದನ್ನೂ ಓದಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

    ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದ್ದರು. ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

  • ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

    ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆ – ಕಾಂಗ್ರೆಸ್‌ ಸಂಸದ ಮನುಸಿಂಘ್ವಿ ಸೀಟ್‌ನಲ್ಲಿತ್ತು 50 ಸಾವಿರ ಹಣ

    ನವದೆಹಲಿ: ರಾಜ್ಯಸಭೆಯ ಸದಸ್ಯರ ಸೀಟಿನಲ್ಲಿ ಹಣ ಪತ್ತೆಯಾಗಿದೆ. ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನುಸಿಂಘ್ವಿ  (Abhishek Manu Singhvi) ಸೀಟಿನಲ್ಲಿ ಹಣದ ನೋಟುಗಳು ಸಿಕ್ಕಿವೆ.

    ರಾಜ್ಯಸಭೆಯ (Rajya Sabha) ಸೀಟ್ ನಂಬರ್ 222 ರಲ್ಲಿ ನೋಟುಗಳು ಪತ್ತೆಯಾಗಿವೆ. ನಿನ್ನೆ ಸದನ ಮುಕ್ತಾಯದ ಬಳಿಕ ರೊಟೀನ್ ಚೆಕಪ್ ವೇಳೆ‌ ಹಣ ಕಂಡುಬಂದಿದೆ. ಹಣ ಪತ್ತೆಯಾಗಿರುವ ಬಗ್ಗೆ ರಾಜ್ಯಸಭೆ ಸಭಾಧ್ಯಕ್ಷರು ಇಂದು ಸದನದಲ್ಲಿ ಮಾಹಿತಿ ನೀಡಿದರು. ಇದನ್ನೂ ಓದಿ: ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ?

    ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿ ಜಗದೀಪ್ ಧನ್ಕರ್ (Jagdeep Dhankar) ಮಾತನಾಡಿದರು. ಅಭಿಷೇಕ್ ಮನುಸಿಂಘ್ವಿ ಹೆಸರು ಉಲ್ಲೇಖಿಸಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಗೂ ಮೊದಲೇ ಸದಸ್ಯರ ಹೆಸರು ಉಲ್ಲೇಖಿಸಿದ್ದನ್ನು ಖಂಡಿಸಿದರು.

    ಆದರೆ, ಈ ಆರೋಪಗಳನ್ನು ಮನುಸಿಂಘ್ವಿ ಅವರು ಅಲ್ಲಗಳೆದಿದ್ದಾರೆ. ನಾನು ರಾಜ್ಯಸಭೆಗೆ ಹೋಗುವಾಗ 500 ರೂ. ನೋಟು ಮಾತ್ರ ನನ್ನ ಬಳಿ ಇತ್ತು. ಕಲಾಪದ ಬಳಿಕ 1:30ಕ್ಕೆ‌ ಕಲಾಪಕ್ಕೆ ಬಂದಿದ್ದೇನೆ. ಬಳಿಕ ಸಂಸತ್‌ನಿಂದ ನಿರ್ಗಮಿಸಿದ್ದೇನೆ. ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಮೂವರು ಸಾವು, 20ಕ್ಕೂ ಅಧಿಕ ಜನ ಅಸ್ವಸ್ಥ

  • ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

    ಅತೃಪ್ತರಿಗೆ ಬಿಗ್ ರಿಲೀಫ್ – ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

    ನವದೆಹಲಿ: ವಿಶ್ವಾಸ ಮತಯಾಚನೆಗೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸುವ ಮೂಲಕ ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಈ ವೇಳೆ ರಾಜೀನಾಮೆ ಅಂಗೀಕಾರಕ್ಕೆ ದಿನ ನಿಗದಿ ಪಡಿಸದ ಕೋರ್ಟ್ ನಿರ್ದಿಷ್ಟ ಸಮಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ಮಾಡಿ ಎಂದು ಸ್ಪೀಕರ್ ಅವರಿಗೆ ಆದೇಶ ನೀಡಿದೆ.

    ನಾಳೆ ವಿಶ್ವಾಸಮತಯಾಚನೆ ಮಾಡಬಹುದು. ಆದ್ರೆ ರಾಜೀನಾಮೆ ನೀಡಿರುವ 15 ಶಾಸಕರು ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅತೃಪ್ತ ಶಾಸಕರನ್ನು ಒತ್ತಾಯಪೂರ್ವಕವಾಗಿ ಕರೆತರುವ ಹಾಗಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

    ರಾಜೀನಾಮೆ ಅಂಗೀಕರಿಸಿಲ್ಲ ಅಂತ ಸ್ಪೀಕರ್ ವಿರುದ್ಧ 15 ಅತೃಪ್ತ ಶಾಸಕರು ಸಲ್ಲಿಸಿರೋ ಅರ್ಜಿಯ ಬಗ್ಗೆ ಮಂಗಳವಾರ ಸುಮಾರು 212 ನಿಮಿಷ ವಿಚಾರಣೆ ನಡೆದರೂ, ತೀರ್ಪು ಪ್ರಕಟವಾಗಿರಲಿಲ್ಲ. ಅರ್ಜಿದಾರರು, ಸಿಎಂ, ಸ್ಪೀಕರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಕೀಲರು ಸುದೀರ್ಘವಾಗಿ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ್ದರು.

    ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ದೀಪಕ್ ಗುಪ್ತಾ ಹಾಗೂ ಜಸ್ಟೀಸ್ ಅನಿರುದ್ಧ್ ಬೋಸ್ ಅವರಿದ್ದ ತ್ರಿಸದಸ್ಯ ಪೀಠದ ಎದುರು ಮುಕುಲ್ ರೋಹಟಗಿ – ಅಭಿಷೇಕ್ ಸಿಂಘ್ವಿ – ರಾಜೀವ್ ಧವನ್ ನಡುವೆ ಅಕ್ಷರಶಃ ವಾಗ್ಯುದ್ಧವೇ ನಡೆದಿತ್ತು. ಸುಮಾರು 3 ಗಂಟೆ 45 ನಿಮಿಷಗಳ ವಾದ ವಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ತೀರ್ಪನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿತ್ತು.

    ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ಏನಾಗಿತ್ತು:
    ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ:
    10 ಶಾಸಕರು ಜುಲೈ 10ರಂದೇ ರಾಜೀನಾಮೆ ನೀಡಿದ್ದಾರೆ. ಆರ್ಟಿಕಲ್ 190 ಮತ್ತು ಶೆಡ್ಯೂಲ್ 10ರ ನಡುವೆ ವ್ಯತ್ಯಾಸ ಇದ್ದು ಸ್ಪೀಕರ್ ನಿರ್ಧಾರವನ್ನು ಕೋರ್ಟ್ ಪ್ರಶ್ನಿಸಬಹುದು. ಅನರ್ಹತೆ ಬಾಕಿ ಇರೋದು ರಾಜೀನಾಮೆ ಸ್ವೀಕಾರಕ್ಕೆ ಅಡ್ಡಿಯಾಗಬಾರದು. ಉಮೇಶ್ ಜಾಧವ್ ಮೇಲೆ ಅನರ್ಹತೆ ದೂರು ಇದ್ದರೂ ರಾಜೀನಾಮೆ ಅಂಗೀಕರಿಸಲಾಗಿತ್ತು. ಅದೇ ರೀತಿ ಎಲ್ಲ ಶಾಸಕರು ರಾಜೀನಾಮೆಯನ್ನು ಅಂಗೀಕರಿಸಬೇಕು. ಈ ವಿಚಾರದಲ್ಲಿ ಸ್ಪೀಕರ್ ದ್ವಂದ್ವ ನೀತಿಯನ್ನು ಹೊಂದಿದ್ದಾರೆ. ಶಾಸಕರು ಅನರ್ಹ ಮಾಡುವಂತಹ ತಪ್ಪು ಏನು ಮಾಡಿದ್ದಾರೆ? ಅನರ್ಹತೆಗೊಳಿಸಲು ಯಾವುದೇ ಕಾರಣ ಇಲ್ಲ. ನಮ್ಮ ಕಕ್ಷಿದಾರರ ಮೇಲೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ ಸದನದ ಹೊರಗಿನ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ವಿಧಾನಸಭಾ ಕಲಾಪಕ್ಕೆ ಹಾಜರಾಗುವಂತೆ ಒತ್ತಡ ಹಾಕುವುದು ಸರಿಯೇ?

    ನನ್ನ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ಭಾಗಿಯಾಗಿಲ್ಲ. ರಾಜೀನಾಮೆ ನೀಡಿದ ಬಳಿಕ ವಿಪ್ ಜಾರಿಯಾದ್ರೆ ಅನರ್ಹಗೊಳಿಸಲು ಹೇಗೆ ಸಾಧ್ಯ? ಪಕ್ಷಾಂತರ ನಮ್ಮ ಉದ್ದೇಶ ಅಲ್ಲ, ಸರ್ಕಾರದಿಂದ ಹೊರಬರುವುದು ನಮ್ಮ ಉದ್ದೇಶವಾಗಿದೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಡವಿಟ್ ಮೂಲಕವೇ ಹೇಳಿದ್ದಾರೆ. ಹೀಗಿರುವಾಗ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವುದು ಸರಿಯೇ?

    ನಾನು ಅನರ್ಹತೆ ಪ್ರಕರಣ ಕೈ ಬಿಡುವಂತೆ ಹೇಳಿಲ್ಲ. ಇಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಅನಹರ್ತತೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆರ್ಟಿಕಲ್ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ. ಶಾಸಕರು ಇಷ್ಟಪಟ್ಟಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಎಲ್ಲ ಶಾಸಕರು ನಿಯಮಬದ್ಧವಾಗಿಯೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕೂಡಲೇ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.

    ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ:
    ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕೂಡ ಕರೆದಿದ್ದಾರೆ. ಆದರೆ ಅವರು ವಿಚಾರಣೆಗೆ ಬಂದಿಲ್ಲ. ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರಕ್ಕೆ ಸಂಬಂಧ ಇಲ್ಲ ಎನ್ನುವುದು ತಪ್ಪು. ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧವಿದೆ. ರಾಜೀನಾಮೆಗಿಂತ ಮುಂಚೆಯೇ ಅನರ್ಹತೆಯ ದೂರು ಸಲ್ಲಿಕೆಯಾಗಿದೆ. ವಿಪ್ ಉಲ್ಲಂಘಿಸಿದರೆ ಅದು ಅನರ್ಹತೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ರಾಜೀನಾಮೆ ಅನರ್ಹತೆ ಬಗ್ಗೆ ನಿರ್ಧಾರಕೈಗೊಳ್ಳುವ ಅಧಿಕಾರ ಸ್ವೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ.

    ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.

    ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದರು.

    ಸಿಎಂ ಪರ ವಕೀಲ ರಾಜೀವ್ ಧವನ್ ಅವರ ವಾದ:
    ಸ್ಪೀಕರ್ ಕಣ್ಣುಮುಚ್ಚಿಕೊಂಡು ಕುಳಿತಿಲ್ಲ. ಶಾಸಕರು ಆಸೆ, ಆಮಿಷಗಳಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಪೀಕರ್ ಅವರಿಗೆ ನೀಡಲಾಗಿದೆ. 11 ಮಂದಿ ಶಾಸಕರು ಮುಂಬೈಗೆ ತೆರಳುವ ಬದಲು ಸ್ಪೀಕರ್ ಬಳಿ ಹೋಗಬೇಕಿತ್ತು. ಇದೊಂದು 11 ಜನರ ಬೇಟೆಯ ತಂಡವಾಗಿದೆ. ಗುಂಪು ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ರಾಜೀನಾಮೆ ಬಳಿಕ 10 ಶಾಸಕರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೀಘ್ರ ರಾಜೀನಾಮೆ ಅಂಗೀಕಾರವಾದರೆ ಸಂವಿಧಾನ ವಿರೋಧಿ ಆಗುತ್ತದೆ. ಹಾಗಾಗಿ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸ್ಪೀಕರ್ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇರಲಿಲ್ಲ. ಈಗಲೂ ಇಲ್ಲ.

    ಸ್ಪೀಕರ್ ಅಧಿಕಾರವನ್ನು 10ನೇ ಶೆಡ್ಯೂಲ್ ಜೊತೆಗೆ ಓದಬೇಕು. ಸಂವಿಧಾನದ 190ನೇ ವಿಧಿಯನ್ನು 10ನೇ ಶೆಡ್ಯೂಲ್ ಪ್ರಕಾರ ಅರ್ಥೈಸಿಕೊಳ್ಳಬೇಕಿದೆ. ಸ್ಪೀಕರ್ ಅವರಿಗೆ ವಿಚಾರಣೆ ನಡೆಸಲು ಸಮಯಾವಕಾಶದ ಅಗತ್ಯವಿದೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದ್ದು, ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ. ಹೀಗಾಗಿ ವಿಧಿ 190 ಮತ್ತು ಶೆಡ್ಯೂಲ್ 10ನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕಕ್ಕೆ ಮಾರಕ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವದ ಬುಡ ಅಲುಗಾಡುತ್ತಿದೆ.

    ಶಾಸಕರ ರಾಜೀನಾಮೆಗಳಿಗೆ ಕಾರಣಗಳೇ ಇಲ್ಲ. ಶಾಸಕರು ನೀಡುವ ಕಾರಣಗಳು ಸ್ಪೀಕರ್ ಅವರಿಗೆ ತೃಪ್ತಿಯಾದ್ರೆ ಮಾತ್ರ ರಾಜೀನಾಮೆ ಸಾಂವಿಧಾನಿಕವಾಗಲಿದೆ. 10 ರಿಂದ 13 ಶಾಸಕರು ರಾಜೀನಾಮೆ ನೀಡಲು ಸರ್ಕಾರ ಕೆಡವಲು ಬೇಟೆಗೆ ಹೊರಟಿದ್ದಾರೆ. ರಾಜಕೀಯ ಆಟದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಶಾಸಕರು ಬಯಸಿದ್ದಾರೆ ಎಂದು ತಮ್ಮ ವಾದದಲ್ಲಿ ಮಂಡಿಸಿದ್ದರು.

    ರಾಜೀನಾಮೆ ಇದೊಂದು ರಾಜಕೀಯ ಕುತಂತ್ರವಾಗಿದ್ದು, ಅಧಿವೇಶನಕ್ಕೂ ಮುನ್ನ ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದಂತೆ ಮಾಡುವ ಪ್ಲಾನ್ ಇದಾಗಿದೆ. ಇಂತಹ ಬೆಳವಣಿಗೆಗಳನ್ನು ಪರಿಗಣಿಸಬಾರದು. ಬಜೆಟ್ ಅಂಗೀಕಾರಕ್ಕೂ ಮೊದಲೇ ಸರ್ಕಾರ ಬೀಳಿಸುವುದು ಇವರೆಲ್ಲರ ಉದ್ದೇಶವಾಗಿದೆ. ಗುರುವಾರಕ್ಕೆ ಪೂರ್ಣ ಪ್ರಮಾಣದ ಚರ್ಚೆ ಆಗಲಿ. ಅಂದು ಎಲ್ಲ ಶಾಸಕರು ಹಾಜರಾಗಲಿ ಎಂದು ವಾದಿಸಿದ್ದರು.

  • ಬುಧವಾರ ಅತೃಪ್ತರ ಭವಿಷ್ಯ ನಿರ್ಧಾರ – ಸುಪ್ರೀಂನಲ್ಲಿ ಮ್ಯಾರಥಾನ್ ವಿಚಾರಣೆ ಹೀಗಿತ್ತು

    ಬುಧವಾರ ಅತೃಪ್ತರ ಭವಿಷ್ಯ ನಿರ್ಧಾರ – ಸುಪ್ರೀಂನಲ್ಲಿ ಮ್ಯಾರಥಾನ್ ವಿಚಾರಣೆ ಹೀಗಿತ್ತು

    ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

    ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಬಂದಾಗ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅರಿಯಲೆಂದು ತ್ರಿಸದಸ್ಯ ಪೀಠದಲ್ಲಿ ಮಂಗಳವಾರ 10:40ಕ್ಕೆ ಆರಂಭಗೊಂಡ ವಿಚಾರಣೆ ಮಧ್ಯಾಹ್ನ 3:24ರವರೆಗೆ ನಡೆಯಿತು.

    ಬೆಳಗ್ಗೆಯಿಂದ ಮಧ್ಯಾಹ್ನ ಭೋಜನ ಅವಧಿಯವರೆಗೆ ರಾಜೀನಾಮೆ ಸಲ್ಲಿಸಿದ ಶಾಸಕರ ಪರವಾಗಿ ಮುಕುಲ್ ರೋಹಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಮಧ್ಯಾಹ್ನದ ನಂತರ ಸಿಎಂ ಪರವಾಗಿ ರಾಜೀವ್ ಧವನ್ ವಾದ ಮಂಡಿಸಿದರು. ಇದನ್ನೂ ಓದಿ: ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

    ಇಡೀ ದಿನ ಮೂರು ಕಡೆಯ ವಾದ, ಪ್ರತಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠ ಬುಧವಾರ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು. ಆದೇಶ ಪ್ರಕಟವಾಗೋವರೆಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿಹಿಂದೆ ವಿಶ್ವಾಸಮತಯಾಚನೆಗೆ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ಆದೇಶ ಪ್ರಕಟಿಸಿ: ರೋಹಟಗಿ

    ರಾಜೀವ್ ಧವನ್ ವಾದ ಹೀಗಿತ್ತು:
    ಸ್ಪೀಕರ್ ಕಣ್ಣುಮುಚ್ಚಿಕೊಂಡು ಕುಳಿತಿಲ್ಲ. ಶಾಸಕರು ಆಸೆ, ಆಮಿಷಗಳಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಪೀಕರ್ ಅವರಿಗೆ ನೀಡಲಾಗಿದೆ. 11 ಮಂದಿ ಶಾಸಕರು ಮುಂಬೈಗೆ ತೆರಳುವ ಬದಲು ಸ್ಪೀಕರ್ ಬಳಿ ಹೋಗಬೇಕಿತ್ತು. ಇದೊಂದು 11 ಜನರ ಬೇಟೆಯ ತಂಡವಾಗಿದೆ. ಗುಂಪು ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ರಾಜೀನಾಮೆ ಬಳಿಕ 10 ಶಾಸಕರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೀಘ್ರ ರಾಜೀನಾಮೆ ಅಂಗೀಕಾರವಾದರೆ ಸಂವಿಧಾನ ವಿರೋಧಿ ಆಗುತ್ತದೆ. ಹಾಗಾಗಿ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅತೃಪ್ತ ಶಾಸಕರ ವಿಚಾರ ಮಾತ್ರ ಅಲ್ಲ ಇದು. ಸರ್ಕಾರವನ್ನು ಕೆಡವಲು ಹೊರಟಿದ್ದಾರೆ. ಸಿಎಂ ಮತ್ತು ಸಿಎಂ ಆಗಲು ಸಾಧ್ಯವಿಲ್ಲದವರ ನಡುವಿನ ಪ್ರಕರಣ ಇದಾಗಿದೆ.

    ಈ ವಿಚಾರದಲ್ಲಿ ಸ್ಪೀಕರ್ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇರಲಿಲ್ಲ. ಈಗಲೂ ಇಲ್ಲ. ಈ ತರಹದ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಪರಿಗಣಿಸಬಾರದು. ಇಲ್ಲಿ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆ ಹೊರತುಪಡಿಸಿ, ಸುಪ್ರೀಂಗೆ ಮಧ್ಯಪ್ರವೇಶದ ಅಧಿಕಾರವೇ ಇಲ್ಲ. ಶಾಸಕರು ಆಮಿಷಗಳನ್ನು ಬೆನ್ನತ್ತಿ ಹೋಗಿದ್ದು, ವೈಯಕ್ತಿಕ ಹಿತಾಸಕ್ತಿಗಳಿಗಾಗಿ ರಾಜೀನಾಮೆ ನೀಡಿದ್ದಾರೆ. ಶಾಸಕರು ರಾಜೀನಾಮೆಗೆ ಭ್ರಷ್ಟಾಚಾರ, ದುರಾಡಳಿತದ ಆರೋಪ ಮಾಡುತ್ತಿದ್ದಾರೆ. ಅಲ್ಪಮತದ ಸರ್ಕಾರ ಉಳಿಸಲು ಸ್ಪೀಕರ್ ಯತ್ನಿಸುತ್ತಿಲ್ಲ. ಸರ್ಕಾರಕ್ಕೂ ಮತ್ತು ಸ್ಪೀಕರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಸ್ಪೀಕರ್ ಮೇಲೆ ಅತೃಪ್ತ ಶಾಸಕರು ಮಾಡಿರುವ ಆರೋಪ ಸರಿಯಲ್ಲ.

    ಎರಡೂ ತರಹದ ಅನರ್ಹತೆ ಪ್ರಕ್ರಿಯೆಗಳಿದ್ದು, ಭಿನ್ನವಾಗಿವೆ. ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಬೇಕು. ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ ನಡುವಿನ ವಾದ ಅಲ್ಲ. ಸ್ಪೀಕರ್ ಅಧಿಕಾರವನ್ನು 10ನೇ ಶೆಡ್ಯೂಲ್ ಜೊತೆಗೆ ಓದಬೇಕು. ಸಂವಿಧಾನದ 190ನೇ ವಿಧಿಯನ್ನು 10ನೇ ಶೆಡ್ಯೂಲ್ ಪ್ರಕಾರ ಅರ್ಥೈಸಿಕೊಳ್ಳಬೇಕಿದೆ. ಸ್ಪೀಕರ್ ಅವರಿಗೆ ವಿಚಾರಣೆ ನಡೆಸಲು ಸಮಯಾವಕಾಶದ ಅಗತ್ಯವಿದೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದ್ದು, ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ. ಹೀಗಾಗಿ ವಿಧಿ 190 ಮತ್ತು ಶೆಡ್ಯೂಲ್ 10ನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕಕ್ಕೆ ಮಾರಕ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವದ ಬುಡ ಅಲುಗಾಡುತ್ತಿದೆ.

    ಶಾಸಕರ ರಾಜೀನಾಮೆಗಳಿಗೆ ಕಾರಣಗಳೇ ಇಲ್ಲ. ಶಾಸಕರು ನೀಡುವ ಕಾರಣಗಳು ಸ್ಪೀಕರ್ ಅವರಿಗೆ ತೃಪ್ತಿಯಾದ್ರೆ ಮಾತ್ರ ರಾಜೀನಾಮೆ ಸಾಂವಿಧಾನಿಕವಾಗಲಿದೆ. 10 ರಿಂದ 13 ಶಾಸಕರು ರಾಜೀನಾಮೆ ನೀಡಲು ಸರ್ಕಾರ ಕೆಡವಲು ಬೇಟೆಗೆ ಹೊರಟಿದ್ದಾರೆ. ರಾಜಕೀಯ ಆಟದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಶಾಸಕರು ಬಯಸಿದ್ದಾರೆ.

    ಸರ್ಕಾರ ಬೀಳಿಸಲು ಅತೃಪ್ತರು ಕೋರ್ಟಿಗೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಅವಕಾಶ ಮಾಡಿಕೊಡಬೇಡಿ. ಸುಪ್ರೀಂಕೋರ್ಟ್‍ನ ನ್ಯಾಯಾಂಗ ವಿಮರ್ಶೆ ಆಧಿಕಾರದ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ಸ್ಪೀಕರ್ ಹುದ್ದೆ ಸಾಂವಿಧಾನಿಕವಾದ್ದು, ಸುಪ್ರೀಂಕೋರ್ಟ್ ಸ್ಪೀಕರ್ ಮೇಲೆ ನಂಬಿಕೆ ಇಡಬೇಕು. ಸ್ಪೀಕರ್ ತಪ್ಪು ನಿರ್ಧಾರ ತೆಗೆದುಕೊಂಡರೆ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಲಿ. ಜುಲೈ 6 ಮತ್ತು 11ರ ನಡುವೆ ಸ್ಪೀಕರ್ ರಾಜೀನಾಮೆ ಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದರು. ಅದ್ರೆ ಅತೃಪ್ತರು ಬಿರುಗಾಳಿ ವೇಗದಲ್ಲಿ ಕೆಲಸ ಮಾಡಲಿ ಎಂದು ಹೇಳುತ್ತಿದ್ದಾರೆ. ಅರ್ಜಿಯ ವಿಚಾರಣೆಗೆ ಸ್ಪೀಕರ್ ಅವರಿಗೆ ಕಾಲಾವಕಾಶ ಬೇಕಿದೆ. ಸ್ಪೀಕರ್ ಈಗಾಗಲೇ ವಿಚಾರಣೆ ಆರಂಭಿಸಿದ್ದು, ಈ ಹಂತದಲ್ಲಿ ಸುಪ್ರೀಂಕೋಟ್ ಮಧ್ಯಪ್ರವೇಶಿಸುವಂತಿಲ್ಲ. ಸ್ಪೀಕರ್ ಅಧಿಕಾರದ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆ ಆಗಬೇಕು. ಈ ಬಗ್ಗೆ ತರಾತುರಿ ಆದೇಶ ನೀಡುವುದು ಬೇಡ.

    ರಾಜೀನಾಮೆ ಇದೊಂದು ರಾಜಕೀಯ ಕುತಂತ್ರವಾಗಿದ್ದು, ಅಧಿವೇಶನಕ್ಕೂ ಮುನ್ನ ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದಂತೆ ಮಾಡುವ ಪ್ಲಾನ್ ಇದಾಗಿದೆ. ಇಂತಹ ಬೆಳವಣಿಗೆಗಳನ್ನು ಪರಿಗಣಿಸಬಾರದು. ಬಜೆಟ್ ಅಂಗೀಕಾರಕ್ಕೂ ಮೊದಲೇ ಸರ್ಕಾರ ಬೀಳಿಸುವುದು ಇವರೆಲ್ಲರ ಉದ್ದೇಶವಾಗಿದೆ. ಗುರುವಾರಕ್ಕೆ ಪೂರ್ಣ ಪ್ರಮಾಣದ ಚರ್ಚೆ ಆಗಲಿ. ಅಂದು ಎಲ್ಲ ಶಾಸಕರು ಹಾಜರಾಗಲಿ.

  • ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

    ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

    – ಸುಪ್ರೀಂಗೆ ಮಾಹಿತಿ ಕೊಟ್ಟ ಸಿಂಘ್ವಿ

    ನವದೆಹಲಿ: ವಿಶ್ವಾಸ ಮತ ಯಾಚನೆಯ ಮುನ್ನದಿನವಾದ ಬುಧವಾರ ಶಾಸಕರ ರಾಜೀನಾಮೆ ಮತ್ತು ಅನಹರ್ತತೆ ವಿಚಾರವನ್ನು ಸ್ಪೀಕರ್ ರಮೇಶ್ ಕುಮಾರ್ ಇತ್ಯರ್ಥ ಮಾಡಲಿದ್ದಾರೆ.

    ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಸ್ಪೀಕರ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ ಬುಧವಾರ ಅನಹರ್ತತೆ ಮತ್ತು ರಾಜೀನಾಮೆಯನ್ನು ಇತ್ಯರ್ಥ ಮಾಡಲಿದ್ದಾರೆ ಎಂದು ತಿಳಿಸಿದರು.

    ಅಭಿಷೇಕ್ ಮನು ಸಿಂಘ್ವಿ ವಾದ ಹೀಗಿತ್ತು:
    ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೂ ಕೂಡ ಕರೆದಿದ್ದಾರೆ. ಆದರೆ ಅವರು ವಿಚಾರಣೆಗೆ ಬಂದಿಲ್ಲ. ಅನರ್ಹತೆ ಮತ್ತು ರಾಜೀನಾಮೆ ಅಂಗೀಕಾರಕ್ಕೆ ಸಂಬಂಧ ಇಲ್ಲ ಎನ್ನುವುದು ತಪ್ಪು. ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧವಿದೆ.

    ರಾಜೀನಾಮೆಗಿಂತ ಮುಂಚೆಯೇ ಅನರ್ಹತೆಯ ದೂರು ಸಲ್ಲಿಕೆಯಾಗಿದೆ. ವಿಪ್ ಉಲ್ಲಂಘಿಸಿದರೆ ಅದು ಅನರ್ಹತೆ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ರಾಜೀನಾಮೆ ಅನರ್ಹತೆ ಬಗ್ಗೆ ನಿರ್ಧಾರಕೈಗೊಳ್ಳುವ ಅಧಿಕಾರ ಸ್ವೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರವನ್ನು ಸ್ಪೀಕರ್ ಹೊಂದಿದ್ದಾರೆ. ಪಕ್ಷ ವಿರೋಧ ಚಟುವಟಿಕೆ ಆಧಾರದ ಮೇಲೆ ಅನರ್ಹತೆ ಮಾಡಬೇಕು. ಪಕ್ಷ ವಿರೋಧಿ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದೇ ರಾತ್ರಿಯಲ್ಲಿ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಮುಕುಲ್ ರೋಹಟಗಿ ಅವರ ವಾದದಲ್ಲಿ ಹುರುಳಿಲ್ಲ. ತ್ವರಿತವಾಗಿ ರಾಜೀನಾಮೆ ಅಂಗೀಕರಿಸುವುದು ಸೂಕ್ತ ತೀರ್ಮಾನವಲ್ಲ.

    ಅನರ್ಹತೆ ಪ್ರಶ್ನೆಯೂ ಅನರ್ಹತೆಗೆ ದೂರು ನೀಡಲು ಕಾರಣವಾದ ಘಟನೆ ಮತ್ತು ಸಮಯವನ್ನು ಆಧರಿಸಿರುತ್ತದೆ. ನಿಯಮದ ಪ್ರಕಾರ ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಬೇಕು. ಖುದ್ದು ಹಾಜರಾಗದೇ ರಾಜೀನಾಮೆ ನೀಡಿದರೆ ಆರ್ಟಿಕಲ್ 190ರ ಅನ್ವಯ ಆಗಲ್ಲ. ವಿಚಾರಣೆಗೂ ಕೂಡ ಶಾಸಕರು ಖುದ್ದು ಹಾಜರಾಗಬೇಕು. ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಬೇಕಾಗಿರುವ ಕಾರಣ ಒಂದೇ ರಾತ್ರಿಯಲ್ಲಿ ವಿಚಾರಣೆ ಮುಗಿಸಲು ಸಾಧ್ಯವಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜುಲೈ 11ರಂದು 15 ಶಾಸಕರಲ್ಲಿ 11 ಮಂದಿ ಖುದ್ದು ಹಾಜರಾಗಿ ರಾಜೀನಾಮೆ ನೀಡಿದ್ದಾರೆ. ಉಳಿದ ನಾಲ್ವರು ಇದೂವರೆಗೂ ಬಂದಿಲ್ಲ.

    ಆರಂಭದಲ್ಲಿ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ. ತದನಂತರ ಸಲ್ಲಿಸಿದ ರಾಜೀನಾಮೆ ಕ್ರಮಬದ್ಧವಾಗಿದೆ. ಫೆಬ್ರವರಿಯಲ್ಲಿ ಇಬ್ಬರು ಶಾಸಕರ ಅನರ್ಹತೆ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಜುಲೈ 6ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಶಾಸಕರು ಮೊದಲು ಸ್ಪೀಕರ್ ಬಳಿ ಸಮಯ ಕೇಳಿರಲಿಲ್ಲ. ಅನರ್ಹತೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಿಶೀಲಿಸಿ ತೀರ್ಪು ನೀಡಬೇಕಿದೆ. ಹಾಗಾಗಿ ತಡವಾಗ್ತಿದೆ. ನಾನು ಬಹಳ ಗಟ್ಟಿಯಾಗಿ ಶಾಸಕರು ಅನರ್ಹರಾಗುತ್ತಾರೆಂದು ಹೇಳುತ್ತೇನೆ. ಇವತ್ತಲ್ಲ ನಾಳೆ ಅನರ್ಹತೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣವನ್ನು ಸ್ಪೀಕರ್ ಇತ್ಯರ್ಥ ಮಾಡುತ್ತಾರೆ. ಶುಕ್ರವಾರ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡರು.

    ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಗಡುವು ನೀಡುವಂತಿಲ್ಲ. ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವಂತಿಲ್ಲ. 2018 ಮೇ ತಿಂಗಳಲ್ಲಿ ಸರ್ಕಾರ ರಚನೆಯಾದಾಗ ಸ್ಪೀಕರ್ ಗೆ ಸುಪ್ರೀಂ ಯಾವುದೇ ನಿರ್ದೇಶನ ನೀಡಿರಲಿಲ್ಲ. ರಾಜೀನಾಮೆ ವಿಚಾರದಲ್ಲಿ ಬಿಜೆಪಿ ನಾಯಕರ ಪಾತ್ರ ಇದೆ. ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಹೆಸರನ್ನು ಪ್ರಸ್ತಾಪಿಸಿ, ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ ಎಂದು ಸಿಂಘ್ವಿ ವಾದಿಸಿದರು.

    ಸಿಜೆಐ ಪ್ರಶ್ನೆ:
    ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ತಡವಾಗಲು ಕಾರಣವೇನು? ರಾಜೀನಾಮೆಯನ್ನು ಸರ್ಕಾರ ತಡೆಯುತ್ತಿದ್ಯಾ? ಮೊದಲು ರಾಜೀನಾಮೆ ಇತ್ಯರ್ಥಪಡಿಸಿ ನಂತರ ಅನರ್ಹತೆಯನ್ನು ತೆಗೆದುಕೊಳ್ಳಿ ಎಂದು ನಮ್ಮ ಕಾರ್ಯವ್ಯಾಪ್ತಿಯನ್ನು ಪ್ರಶ್ನೆ ಮಾಡಬೇಡಿ ಎಂದು ಸಿಜೆಐ ಪ್ರಶ್ನೆ ಮಾಡಿದರು. ಈ ಹಿಂದೆ 24 ಗಂಟೆಯ ಒಳಗಡೆ ವಿಶ್ವಾಸ ಮತಯಾಚನೆ ನಡೆಸಲು ಸೂಚನೆ ನೀಡಿ ಎಂದು ನಾವು ರಾಜ್ಯಪಾಲರಿಗೆ ನೀಡಿದ ಆದೇಶವನ್ನು ನೀವು ಒಪ್ಪಿಕೊಂಡಿದ್ದರೆ ಈಗ ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಪ್ರಶ್ನೆ ಮಾಡಿದರು.

    ಬೆಳಗ್ಗೆ 10.52ಕ್ಕೆ ವಿಚಾರಣೆ ಆರಂಭಗೊಂಡಿದ್ದು, ಮೊದಲು ರಾಜೀನಾಮೆ ಸಲ್ಲಿಸಿದ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರು. ಇದಾದ ಬಳಿಕ ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ದೀರ್ಘ ವಿಚಾರಣೆ ನಡೆಸಿದ ಪೀಠ ಭೋಜನ ವಿರಾಮದ ನಂತರವೂ ವಾದವನ್ನು ಆಲಿಸಲಿದೆ.