Tag: ಅಭಿಷೇಕ್ ಬಚ್ಚನ್

  • ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್

    ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್

    ಮುಂಬೈ: ಚಿತ್ರೀಕರಣದ ವೇಳೆ ಕೈ ಮುರಿದುಕೊಂಡಿದ್ದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್‍ರವರು ಶಸ್ತ್ರ ಚಿಕಿತ್ಸೆ ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ಅಭಿಷೇಕ್ ತಮ್ಮ ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದು, ಒಂದು ಕೈಗೆ ಬ್ಯಾಡೇಜ್ ಸುತ್ತಿಕೊಂಡು ಚೇರ್ ಮೇಲೆ ಕುಳಿತು ಪೋಸ್ ನೀಡಿದ್ದಾರೆ. ಜೊತೆಗೆ ಕಳೆದ ಬುಧವಾರ ಚೆನ್ನೈನಲ್ಲಿ ನನ್ನ ಹೊಸ ಸಿನಿಮಾದ ಶೂಟಿಂಗ್ ಸೆಟ್‍ನಲ್ಲಿ ಅವಘಡ ಸಂಭವಿಸಿದ್ದು, ನನ್ನ ಬಲ ಗೈ ಮುರಿದಿದೆ. ಅದನ್ನು ಸರಿಪಡಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸುವ ಅಗತ್ಯವಿತ್ತು. ಹಾಗಾಗಿ ಮನೆಯಿಂದ ಮುಂಬೈಗೆ ಪ್ರಯಾಣ ಮಾಡುತ್ತಿದ್ದೆ. ಇದೀಗ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಎಲ್ಲಾ ಪ್ಯಾಚ್-ಅಪ್ ಮತ್ತು ಕ್ಯಾಸ್ಟ್ ಮಾಡಲಾಗಿದೆ ಮತ್ತು ಕೆಲಸ ಪುನಾರಂಭಿಸಲು ಚೆನ್ನೈಗೆ ಹಿಂದಿರುಗುತ್ತಿದ್ದೇನೆ. ಪುರುಷರಿಗೆ ನೋವಾಗುವುದಿಲ್ಲ ಎಂದು ನನ್ನ ತಂದೆ ಹೇಳಿದ್ದಾರೆ. ಆದರೂ ಸ್ವಲ್ಪ ನೋವಿದೆ. ನನ್ನ ಚೇತರಿಕೆಗಾಗಿ ಶುಭಾ ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಕೈ ನೋವಿನಿಂದ ಬಳಲುತ್ತಿರುವ ಅಭಿಷೇಕ್ ಬಚ್ಚನ್ – ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ಭೇಟಿ

     

    View this post on Instagram

     

    A post shared by Abhishek Bachchan (@bachchan)

    ಸದ್ಯ ಈ ಫೋಟೋ ವೀಕ್ಷಿಸಿದ ಸಂಜಯ್ ಗುಪ್ತಾರವರು ಒಂದು ಕೈ ಸಂಪೂರ್ಣವಾಗಿ ಕಾರ್ಯನಿರತವಾಗಿದೆ. ಆದರೆ ನನ್ನ ಪ್ರೀತಿಯ ಸ್ನೇಹಿತ ಅಭಿಷೇಕ್ ಬಚ್ಚನ್ ಇನ್ನೂ ಕಷ್ಟಕರವಾದ ಕೆಡ್ಸ್ ಶೂ ಧರಿಸಿದ್ದಾರೆ ಎಂದು ಟ್ವೀಟ​ರ್‌​ನಲ್ಲಿ ರೀ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ:ಬನಿಯನ್‍ನಲ್ಲಿ ರಣ್‍ವೀರ್ ಡ್ಯಾನ್ಸ್ – ನಾಚಿ ನೀರಾದ ದೀಪಿಕಾ

  • ಕೈ ನೋವಿನಿಂದ ಬಳಲುತ್ತಿರುವ ಅಭಿಷೇಕ್ ಬಚ್ಚನ್ – ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ಭೇಟಿ

    ಕೈ ನೋವಿನಿಂದ ಬಳಲುತ್ತಿರುವ ಅಭಿಷೇಕ್ ಬಚ್ಚನ್ – ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ಭೇಟಿ

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್‍ಗೆ ಚಿತ್ರೀಕರಣದ ವೇಳೆ ಕೈಗೆ ಪೆಟ್ಟಾಗಿದ್ದು, ಭಾನುವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

    ಈ ವೇಳೆ ಬಿಗ್-ಬಿ ಅಮಿತಾಬ್ ಬಚ್ಚನ್ ಮತ್ತು ಸಹೋದರಿ ಶ್ವೇತಾ ಬಚ್ಚನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಅಮಿತಾಬ್ ಕುರ್ತಾ ಮತ್ತು ಪೈಜಾಮ ಧರಿಸಿದ್ದು, ಶ್ವೇತಾ ಬಚ್ಚನ್ ನಂದ ಬಿಳಿ ಬಣ್ಣದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವುದನ್ನು ಕಾಣಬಹುದಾಗಿದೆ.  ಇದನ್ನೂ ಓದಿ:ಅಮಿತಾಬ್ ಬಚ್ಚನ್, ಜಯಗೆ 48ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಸದ್ಯ ಈ ಕುರಿತಂತೆ ಲೀಲಾವತಿ ಆಸ್ಪತ್ರೆಯ ಸಿಇಒ ಅವರು, ಅಭಿಷೇಕ್‍ರವರ ಕೈಗೆ ಸಣ್ಣ ಪೆಟ್ಟಾಗಿದ್ದು, ಕೈ ಸಂಬಂಧಿಸಿದ ನೋವಿನಿಂದ ಅವರು ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಈಗಾಗಲೇ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಕಳೆದ ವಾರ ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಐಶ್ವರ್ಯ ರೈ ನಿರ್ದೇಶಕ ನಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣಕ್ಕಾಗಿ ಮಧ್ಯಪ್ರದೇಶಕ್ಕೆ ಹೊರಟ್ಟಿದ್ದರು.  ಇದನ್ನೂ ಓದಿ:ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆ – ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಬಿಗ್ ಬಿ

     

    View this post on Instagram

     

    A post shared by Manav Manglani (@manav.manglani)

  • 45.75 ಕೋಟಿಗೆ ಐಷಾರಾಮಿ ಬಂಗಲೆ ಮಾರಿದ ನಟ ಅಭಿಷೇಕ್ ಬಚ್ಚನ್

    45.75 ಕೋಟಿಗೆ ಐಷಾರಾಮಿ ಬಂಗಲೆ ಮಾರಿದ ನಟ ಅಭಿಷೇಕ್ ಬಚ್ಚನ್

    ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಬಂಗಲೆಯೊಂದನ್ನು ಮಾರಾಟ ಮಾಡಿದ್ದಾರೆ.

    ತಂದೆ ಬಿಗ್ ಬಿ ಅಮಿತಾಬ್ ಬಚ್ಚನ್, ಪತ್ನಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಬಾಲಿವುಡ್‍ನಲ್ಲಿ ದೊಡ್ಡ ಸ್ಟಾರ್‍ಗಳಾಗಿ ಮಿಂಚುತ್ತಿದ್ದು, ಒಂದು ಸಿನಿಮಾಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ. ಆದರೆ ಅಭಿಷೇಕ್ ಬಚ್ಚನ್ ಸತತ ಸೋಲುಗಳನ್ನು ಕಾಣುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಅಭಿನಯಿಸಿದ್ದ ಬಿಗ್ ಬುಲ್ ಸಿನಿಮಾ ಕೂಡ ಅಷ್ಟಾಗಿ ಯಶಸ್ಸು ಕಂಡಿಲ್ಲ.

    ಹೀಗಾಗಿ ಇದೀಗ ಅಭಿಷೇಕ್ ಬಚ್ಚನ್ ಮುಂಬೈನ ವೊರ್ಲಿಯಲ್ಲಿರುವ 37ನೇ ಅಂತಸ್ತಿನ ಅಪಾರ್ಟ್‍ಮೆಂಟ್‍ನನ್ನು 45.75 ಕೋಟಿಗೆ ಮಾರಾಟ ಮಾಡಿದ್ದಾರೆ. ಇನ್ನೂ ಈ ಹಣ ಅಭಿಷೇಕ್ ಬಚ್ಚನ್ ಖಾತೆಗೆ ಬಂದು ಬಿದ್ದಿದೆ. ಕೈನಲ್ಲಿ ಸಾಕಷ್ಟು ಸಿನಿಮಾಗಳಿಲ್ಲದ ಕಾರಣ ಅಭಿಷೇಕ್ ಬಚ್ಚನ್ ನಿವಾಸವನ್ನು ಮಾರಾಟ ಮಾಡಿದ್ದು, ಅದರಿಂದ ಬಂದ ಹಣವನ್ನು ಬೇರೆ ಕಡೆ ಹೂಡುವ ಪ್ಲಾನ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

    2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಹಾಗೂ ಐಶ್ವರ್ಯ ಬಚ್ಚನ್ ಮದುವೆಯಾದ ಮೂರು ವರ್ಷಗಳ ನಂತರ 41 ಕೋಟಿಗೆ ಖರೀದಿಸಿದ್ದರು. ಅಲ್ಲದೇ ಈ ಅಪಾರ್ಟ್ ಮೆಂಟ್‍ನಲ್ಲಿ ನಟ ಅಕ್ಷಯ್ ಕುಮಾರ್ ಹಾಗೂ ಶಾಹಿದ್ ಕಪೂರ್ ವಾಸವಾಗಿದ್ದಾರೆ. ಇದನ್ನೂ ಓದಿ:ಕಿರುತೆರೆ ನಟಿ ಅಮೃತಾ ರಾಮಮೂರ್ತಿಗೆ ಸೀಮಂತದ ಸಂಭ್ರಮ

  • ‘ದೊಡ್ಡ’ನ ಹುಟ್ಟುಹಬ್ಬ ಆಚರಿಸಿ ಶುಭಾಶಯ ತಿಳಿಸಿದ ಕರಾವಳಿ ಕುವರಿ ಐಶ್ವರ್ಯಾ ಪುತ್ರಿ

    ‘ದೊಡ್ಡ’ನ ಹುಟ್ಟುಹಬ್ಬ ಆಚರಿಸಿ ಶುಭಾಶಯ ತಿಳಿಸಿದ ಕರಾವಳಿ ಕುವರಿ ಐಶ್ವರ್ಯಾ ಪುತ್ರಿ

    ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಕರಾವಳಿಯ ಕುವರಿ ಐಶ್ವರ್ಯ ರೈ ತನ್ನ ತಾಯಿ ವೃಂದಾ ರೈ ಅವರ 70 ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬದಲ್ಲಿ ಐಶ್ವರ್ಯ ರೈ ಮಗಳು ಆರಾಧ್ಯ ಅಜ್ಜಿಯೊಂದಿಗೆ ಸುಂದರವಾದ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾಳೆ.

    ವೃಂದಾ ರೈ ಅವರ 70ನೇ ಹುಟ್ಟುಹಬ್ಬವನ್ನು ಐಶ್ವರ್ಯ ರೈ, ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಜೊತೆ ಸೇರಿ ಆಚರಿಸಿದ್ದಾರೆ. ಬಳಿಕ ಈ ಸಂಭ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವ ಮೂಲಕ ಹಂಚಿಕೊಂಡಿರುವ ಐಶ್ವರ್ಯ ರೈ ಪರಿಪೂರ್ಣ ಕುಟುಂಬ ಎಂದು ಬರೆದುಕೊಂಡಿದ್ದಾರೆ.

    ಬಳಿಕ ಇನ್ನೊಂದು ಫೋಟೋದಲ್ಲಿ ಆರಾಧ್ಯ ತನ್ನ ಅಜ್ಜಿಯೊಂದಿಗೆ ಮುದ್ದಾದ ಫೋಟೋಗೆ ಪೋಸ್ ನೀಡಿ ಹುಟ್ಟುಹಬ್ಬದ ಶುಭಾಶಯಗಳು ‘ಮಮ್ಮಿ-ದೊಡ್ಡ’ ಎಂದು ಬರೆದುಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂಲತಃ ಕರಾವಳಿಯವರಾಗಿರುವ ಐಶ್ವರ್ಯ ರೈ ತಾಯಿಯನ್ನು ದೊಡ್ಡ ಎಂದು ಕರೆಯುವ ಮೂಲಕ ಕರಾವಳಿಯ ಮಾತನ್ನು ನೆನಪಿಸಿಕೊಂಡಿದ್ದಾರೆ.

    ಈ ಹಿಂದೆ ಐಶ್ವರ್ಯ ರೈ ಅವರು ತನ್ನ ತಂದೆ ಜೊತೆಗಿದ್ದ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು. ಐಶ್ವರ್ಯ ರೈ ಅವರ ತಂದೆ ಕೃಷ್ಣರಾಜ್ ರೈ 2017ರಲ್ಲಿ ಮರಣಹೊಂದಿದ್ದರು. ಕಳೆದ ಡಿಸೆಂಬರ್‍ ನಲ್ಲಿ ತನ್ನ ತಂದೆ, ತಾಯಿಯ ಮದುವೆ ದಿನದಂದು ಕೂಡ ಇದೇ ರೀತಿ ಫೋಟೋ ಒಂದನ್ನು ಹಾಕಿಕೊಂಡು ಐಶ್ವರ್ಯ ರೈ ಶುಭಾಶಯ ಕೊರಿದ್ದರು.

  • ನಿಮ್ಮ ಪ್ರೀತಿಗೆ ಧನ್ಯವಾದ, ಅವರಿಗೆ ನಾನು ಸಮಾನನಲ್ಲ: ಅಭಿಷೇಕ್ ಬಚ್ಬನ್

    ನಿಮ್ಮ ಪ್ರೀತಿಗೆ ಧನ್ಯವಾದ, ಅವರಿಗೆ ನಾನು ಸಮಾನನಲ್ಲ: ಅಭಿಷೇಕ್ ಬಚ್ಬನ್

    ಮುಂಬೈ: ತಮ್ಮ ನಟನೆಯನ್ನ ಮೆಚ್ಚಿ ಕಮೆಂಟ್ ಮಾಡಿದ ಅಭಿಮಾನಿಗೆ ನಟ ಅಭಿಷೇಕ್ ಬಚ್ಚನ್ ಧನ್ಯವಾದ ಸಲ್ಲಿಸಿದ್ದು, ತಂದೆ ಅಮಿತಾಬ್ ಬಚ್ಚನ್ ಅವರಿಗೆ ಯಾರು ಸರಿಸಾಟಿ ಇಲ್ಲ ಅಂತ ಹೇಳಿದ್ದಾರೆ.

    ಅಭಿಷೇಕ್ ಬಚ್ಚನ್ ನಟನೆ ‘ದಿ ಬಿಗ್ ಬುಲ್’ ಚಿತ್ರ ಓಟಿಟಿ ಪ್ಲಾಟ್‍ಫಾರಂನಲ್ಲಿ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಜೊತೆಗೆ ವೀಕ್ಷಕರಿಗೆ ಅಭಿಷೇಕ್ ಬಚ್ಚನ್ ನಟನೆ ಇಷ್ಟವಾಗಿದ್ದು, ಟ್ವೀಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲಿ ಓರ್ವ ಅಭಿಮಾನಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಬಚ್ಚನ್, ತಂದೆಗೆ ನಾನು ಸಮನಲ್ಲ ಎಂದು ತಿಳಿಸಿದ್ದಾರೆ.

    ನಾನು ಬಿಗ್ ಬುಲ್ ನೋಡಿದೆ. ನನ್ನ ಪ್ರಕಾರ ನಿಮ್ಮ ನಟನೆ ಬಿಗ್ ಬಿ ಅವರಿಗಿಂತ ಉತ್ತಮವಾಗಿತ್ತು. ಒಳ್ಳೆಯದಾಗಲಿ ಗುರು ಸೋದರ ಎಂದು ನಿತಿನ್ ಎಂಬವರು ಸಿನಿಮಾದ ಬಗ್ಗೆ ಮತನಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬಚ್ಚನ್, ನಿಮ್ಮ ಹೊಗಳಿಗೆ ತುಂಬಾ ಧನ್ಯವಾದಗಳು. ಆದ್ರೆ ತಂದೆಯವರಿಗಿಂತ ಉತ್ತರರಾಗಿರಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.

    ಈ ಹಿಂದೆಯೂ ಅಭಿಷೇನ್ ಬಚ್ಚನ್ ಹಲವು ಸಂದರ್ಶನಗಳಲ್ಲಿ ತಂದೆಯ ದೈತ್ಯ ಅಭಿನಯವನ್ನ ಹಾಡಿ ಹೊಗಳಿದ್ದರು. ಎಷ್ಟೇ ಸಿನಿಮಾ ಮಾಡಿದರೂ ನಾನು ಅವರಿಗೆ ಸಮನಾಗಲ್ಲ ಅಂತ ಹೇಳಿಕೊಂಡಿದ್ದಾರೆ. ಇದೀಗ ಅಭಿಮಾನಿಯ ವಿಶೇಷ ಮೆಚ್ಚುಗೆಗೆ ತಮ್ಮ ಹೇಳಿಕೆಯನ್ನ ಪುನರುಚ್ಛಿಸಿದ್ದಾರೆ.

  • ಅಪ್ಪನ ಹಾಡಿಗೆ ಹೆಜ್ಜೆ ಹಾಕಿದ ಆರಾಧ್ಯ – ಪುತ್ರಿಯನ್ನು ತಬ್ಬಿ ಮುದ್ದಾಡಿದ ಐಶ್ವರ್ಯ ರೈ

    ಅಪ್ಪನ ಹಾಡಿಗೆ ಹೆಜ್ಜೆ ಹಾಕಿದ ಆರಾಧ್ಯ – ಪುತ್ರಿಯನ್ನು ತಬ್ಬಿ ಮುದ್ದಾಡಿದ ಐಶ್ವರ್ಯ ರೈ

    ಬೆಂಗಳೂರು: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಕುಟುಂಬ ಸಮೇತ ಇತ್ತೀಚೆಗಷ್ಟೇ ತಮ್ಮ ಸೋದರ ಸಂಬಂಧಿ ಶ್ಲೋಕ್ ಶೆಟ್ಟಿ ವಿವಾಹ ಸಮಾರಂಭಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಐಶ್ವರ್ಯ ರೈ ಹಾಗೂ ಅಭಿಷೇಕ್‍ರೊಂದಿಗೆ ಮುದ್ದಿನ ಮಗಳು ಆರಾಧ್ಯ, ಅಪ್ಪ ಅಭಿನಯಿಸಿದ್ದ ದೋಸ್ತಾನಾ ಸಿನಿಮಾದ ದೇಸಿ ಗರ್ಲ್ ಸಾಂಗ್‍ಗೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಹೌದು, ಹಲವು ದಿನಗಳ ಬಳಿಕ ಇತ್ತೀಚೆಗಷ್ಟೇ ನಟಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮದುವೆ ಸಮಾರಂಭವೊಂದಕ್ಕೆ ಹಾಜರಾಗಿದ್ದರು. ಈ ವೇಳೆ ಬಚ್ಚನ್ ಕುಟುಂಬ ಡೇಸಿ ಗರ್ಲ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವಿಶೇಷವೆಂದರೆ ಒಂದೇ ವೇದಿಕೆಯಲ್ಲಿ ಅಭಿಷೇಕ್, ಐಶ್ವರ್ಯ ಜೊತೆ ಮಗಳು ಆರಾಧ್ಯ ಕೂಡ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋದಲ್ಲಿ 9 ವರ್ಷದ ಆರಾಧ್ಯ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡುತ್ತಿದ್ದರೆ ತಾಯಿಯಿಂದ ಈಗಲೇ ಮಗಳು ತರಬೇತಿ ಪಡೆದಿರುವಂತೆ ಕಾಣಿಸುತ್ತಿದೆ. ಅಲ್ಲದೆ ಮಗಳ ಡ್ಯಾನ್ಸ್ ನೋಡಿ ಐಶ್ವರ್ಯ ಆರಾಧ್ಯಳ ತಬ್ಬಿ ಮುದ್ದಾಡಿದ್ದಾರೆ.

    ವೀಡಿಯೋದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಸಂಪ್ರದಾಯಿಕ ಉಡುಪು ಧರಿಸಿದ್ದಾರೆ. ಇದೀಗ ಬಚ್ಚನ ಕುಟುಂಬದ ಡ್ಯಾನ್ಸ್ ವೀಡಿಯೋ ಬಿ-ಟೌನ್‍ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವೀಡಿಯೋಗೆ ಅಭಿಮಾನಿಗಳಿಂದ ಕಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಆರಾಧ್ಯ ಪಿಂಕ್ ಕಲರ್ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಆರಾಧ್ಯ ಡ್ಯಾನ್ಸ್ ಮಾಡಿದ ಹಾಡು 2008ರಲ್ಲಿ ತೆರೆಕಂಡ ದೋಸ್ತಾನಾ ಸಿನಿಮಾದ ಡೇಸಿ ಗರ್ಲ್ ಹಾಡಗಿದ್ದು, ಈ ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್, ಪ್ರಿಯಾಂಕ ಚೋಪ್ರಾ, ಜಾನ್ ಅಬ್ರಹಾಂ ಅಭಿನಯಿಸಿದ್ದರು.

  • ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ – ನೆಪೊಟಿಸಂ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

    ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ – ನೆಪೊಟಿಸಂ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

    – ಕಾಲ್ ಮಾಡಿ ಮಗನಿಗೆ ಅವಕಾಶ ಕೊಡಿಯೆಂದು ಯಾರನ್ನೂ ಕೇಳಿಲ್ಲ

    ಮುಂಬೈ: ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಬಿಗ್‍ಬಿ ಅಮಿತಾಭ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ಬಾಲಿವುಡ್‍ನಲ್ಲಿ ನೆಪೊಟಿಸಂ (ಸ್ವಜನಪಕ್ಷಪಾತ) ಬಹಳ ಸದ್ದು ಮಾಡುತ್ತಿದೆ. ಅದರಲ್ಲೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಬಾಲಿವುಡ್‍ನ ಹಲವಾರು ಮಂದಿ ಮೂವಿ ಮಾಫಿಯಾ ಮತ್ತು ಬಾಲಿವುಡ್ ನೆಪೊಟಿಸಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಪೊಟಿಸಂ ಹೆಸರು ಬಾಲಿವುಡ್‍ನಲ್ಲಿ ಕೇಳಿ ಬಂದಾಗ ಹಲವಾರು ಮಂದಿ ನಟ ಅಭಿಷೇಕ್ ಬಚ್ಚನ್ ಕಡೆ ಬೊಟ್ಟು ಮಾಡುತ್ತಾರೆ.

    ಈಗ ನೆಪೋಟಿಸಂ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಭಿಷೇಕ್ ಬಚ್ಚನ್ ಅವರು, ಕೆಲವರು ನೆಪೋಟಿಸಂ ಪದ ಕೇಳಿದ ತಕ್ಷಣ ನನ್ನ ಕಡೆ ಬೊಟ್ಟು ಮಾಡುತ್ತಾರೆ. ಆದರೆ ಇದುವರೆಗೂ ನನ್ನ ಅಪ್ಪ ಯಾವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಫೋನ್ ಮಾಡಿ ನನ್ನ ಮಗನಿಗೆ ಚಾನ್ಸ್ ಕೊಡಿ ಎಂದು ಕೇಳಿಲ್ಲ. ಜೊತೆಗೆ ಅವರೆಂದು ನನಗಾಗಿ ಒಂದು ಸಿನಿಮಾವನ್ನು ಮಾಡಿಲ್ಲ. ಹೀಗಿದ್ದರೂ ಜನ ನನ್ನ ಕಡೆ ಯಾಕೆ ಬೊಟ್ಟು ಮಾಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಜೊತೆಗೆ ನಮ್ಮದೇ ಸಿನಿಮಾ ನಿರ್ಮಾಣದ ಸಂಸ್ಥೆ ಇದ್ದರೂ ಅದರಲ್ಲಿ ನನ್ನ ಸಿನಿಮಾಗಳನ್ನು ನನ್ನ ತಂದೆ ನಿರ್ಮಾಣ ಮಾಡಿಲ್ಲ. ಆದರೆ ನಾನು ನನ್ನ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಮ್ಮ ತಂದೆಯ ಹೆಸರಿನಿಂದ ಬಾಲಿವುಡ್‍ಗೆ ಬರಲು ಸುಲಭ ಆಯ್ತು. ನಿಜ ಆದರೆ ಇಲ್ಲಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಸಿನಿಮಾಗಾಗಿ ಕಷ್ಟಪಟ್ಟಿದ್ದೇನೆ. ಹೀಗಿರುವಾಗ ಇಲ್ಲಿ ನೆಪೊಟಿಸಂ ಹೇಗೆ ಬರುತ್ತದೆ ಎಂದು ಅಭಿಷೇಪ್ ಪ್ರಶ್ನೆ ಮಾಡಿದ್ದಾರೆ.

    ಬಾಲಿವುಡ್‍ನಲ್ಲಿ ಸದ್ಯ ಹಳೆ ಹೀರೋ, ವಿಲನ್, ನಿರ್ಮಾಪಕ ಮತ್ತು ನಿರ್ದೇಶಕರ ಮಕ್ಕಳೇ ಹೆಚ್ಚು ನಟ-ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ನೆಪೋಟಿಸಂ ಜಾಸ್ತಿ ಹೊರಗಿನಿಂದ ಬರುವ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ ಎಂದು ಕೆಲವರು ದೂರುತ್ತಾರೆ.

  • ಕೊರೊನಾ ನೆಗೆಟಿವ್- ಮನೆಗೆ ಹೋಗ್ತಿದ್ದೀನಿ ಎಂದ ಅಭಿಷೇಕ್ ಬಚ್ಚನ್

    ಕೊರೊನಾ ನೆಗೆಟಿವ್- ಮನೆಗೆ ಹೋಗ್ತಿದ್ದೀನಿ ಎಂದ ಅಭಿಷೇಕ್ ಬಚ್ಚನ್

    ಮುಂಬೈ: ಕೊರೊನಾ ವರದಿ ನೆಗೆಟಿವ್ ಬಂದಿದ್ದು, ನಾನು ಮನೆಗೆ ಹೋಗುವ ಖುಷಿಯಲ್ಲಿದ್ದೇನೆ ಎಂದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ

    ಇಂದು ಮಧ್ಯಾಹ್ನ ಬಂದ ನನ್ನ ಕೊರೊನಾ ವರದಿ ನೆಗೆಟಿವ್ ಬಂದಿದೆ. ನನ್ನ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಕುಟುಂಬ ಮತ್ತು ಎಲ್ಲ ಅಭಿಮಾನಿಗಳಿಗೆ ಧನ್ಯವಾದ. ಕೊನೆಗೂ ಕೊರೊನಾ ಜೊತೆಗಿನ ಹೋರಾಟದಲ್ಲಿ ಗೆದ್ದಿದ್ದೇನೆ. ನಾನಾವತಿ ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ಅಭಿಷೇಕ್ ಬಚ್ಚನ್ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಯಲ್ಲಿ ತಮ್ಮ ಕೇರಿಂಗ್ ಬೋರ್ಡ್ ಫೋಟೋ ಸಹ ಹಂಚಿಕೊಂಡಿದ್ದಾರೆ.

    ಕೊರೊನಾ ತಗುಲಿರೋದು ದೃಢವಾಗ್ತಿದ್ದಂತೆ ಜುಲೈ 11ರಂದು ತಂದೆ ಅಮಿತಾಬ್ ಬಚ್ಚನ್ ಜೊತೆ ಅಭಿಷೇಕ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನನ ಜುಲೈ 12ರಂದು ಪತ್ನಿ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಗೂ ಸೋಂಕು ತಗುಲಿರೋದು ಖಚಿತವಾಗಿತ್ತು. ಜುಲೈ 27ರಂದು ಐಶ್ವರ್ಯಾ ಮತ್ತು ಆರಾಧ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆಗಸ್ಟ್ 2ರಂದು ಅಮಿತಾಬ್ ಬಚ್ಚನ್ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದರು.

    https://www.instagram.com/p/CDn1fvEJZXo/

  • ಬಿಗ್ ಬಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬಿಗ್ ಬಿಗೆ ಕೊರೊನಾ ನೆಗೆಟಿವ್- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ಗೆ ಕೊರೊನೊ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಕುರಿತು ಅಮಿತಾಬ್ ಬಚ್ಚನ ಮಗ, ನಟ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದು, ಇತ್ತೀಚಿನ ಕೊರೊನಾ ಪರೀಕ್ಷೆಯ ವರದಿಯಲ್ಲಿ ನಮ್ಮ ತಂದೆಗೆ ಕೊರೊನಾ ನೆಗೆಟಿವ್ ಬಂದಿದೆ. ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಅವರು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ನಿಮ್ಮೆಲ್ಲ ಪ್ರಾರ್ಥನೆ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಬಿಗ್ ಬಿಗೆ ಜುಲೈ 11ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ.

  • ಸೊಸೆ, ಮೊಮ್ಮಗಳು ಡಿಸ್ಚಾರ್ಜ್ ಖುಷಿಯಿಂದ ಕಣ್ಣೀರಿಟ್ಟ ಬಿಗ್ ಬಿ

    ಸೊಸೆ, ಮೊಮ್ಮಗಳು ಡಿಸ್ಚಾರ್ಜ್ ಖುಷಿಯಿಂದ ಕಣ್ಣೀರಿಟ್ಟ ಬಿಗ್ ಬಿ

    ಮುಂಬೈ: ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂತಸದ ವಿಷಯ ಕೇಳಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಣ್ಣೀರಿಟ್ಟಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ಮೊಮ್ಮಗಳು ಮತ್ತು ಸೊಸೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸುದ್ದಿ ಕೇಳಿದ ಕೂಡಲೇ ಕಣ್ಣಂಚಲಿ ನೀರು ಬಂತು. ಓ ದೇವರೆ ನಿನ್ನ ಕೃಪೆ ಹೀಗೆ ಇರಲಿ ಎಂದು ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಸೋಮವಾರ ಸಂಜೆ ಪುತ್ರಿ ಮತ್ತು ಪತ್ನಿ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ವಿಷಯವನ್ನು ಅಭಿಷೇಕ್ ಬಚ್ಚನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. “ನಿಮ್ಮ ನಿರಂತರ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಕೋವಿಡ್ ನೆಗೆಟಿವ್ ಬಂದಿದೆ. ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದ್ದು, ಈಗ ಮನೆಯಲ್ಲಿದ್ದಾರೆ. ನಾನು ಮತ್ತು ನನ್ನ ತಂದೆ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದೇನೆ” ಎಂದು ಟ್ವೀಟ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಿಳಿಸಿದ್ರು.

    ಜುಲೈ 11ರಂದು ಅಭಿಷೇಕ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರಿಗೂ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಮರುದಿನ ಅಂದ್ರೆ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ಖಚಿತವಾಗಿತ್ತು. ಹಾಗಾಗಿ ಎಲ್ಲರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು.