Tag: ಅಭಿಷೇಕ್ ಬಚ್ಚನ್

  • ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ ಕಪೂರ್

    ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ ಕಪೂರ್

    ಬಾಲಿವುಡ್ ಸ್ಟೈಲ್‌ ಐಕಾನ್ ಕರೀನಾ ಕಪೂರ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರ್ಣಗೊಳಿಸಿದ್ದಾರೆ. ಈಗಲೂ ಸಿನಿಮಾದಲ್ಲಿ ಸಕ್ರಿಯವಾಗಿರುವ ಕರೀನಾ ಕಪೂರ್ (Kareena Kapoor) ಸಿನಿಮಾ ಹಿನ್ನೆಲೆಯ ಕುಟುಂಬದಿಂದಲೇ ಬಂದಿದ್ದರೂ ಸೌಂದರ್ಯ ಹಾಗೂ ಪರ್ಫಾಮೆನ್ಸ್ ಮೂಲಕ ಇಷ್ಟೂ ವರ್ಷ ಚಿತ್ರರಂಗದಲ್ಲಿದ್ದವರು. ಸಿನಿಮಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಿಲ್ವರ್ ಜುಬ್ಲಿಗೆ ಪಾದಾರ್ಪಣೆ ಮಾಡಿದ್ದಕ್ಕೆ ಕರೀನಾ ಖುಷಿಯಿಂದ ಮೊದಲ ಚಿತ್ರದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

    ಅಂದಹಾಗೆ ಕರೀನಾ ಅಭಿನಯದ ಮೊದಲ ಚಿತ್ರ ರಿಲೀಸ್ ಆಗಿದ್ದು 2000ನೇ ಇಸವಿ ಜೂ.30ರಂದು. ಆ ಚಿತ್ರವೇ ರೆಫ್ಯೂಜಿ, ಅಂದಿನ ಫೇಮಸ್ ನಟ ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಜೋಡಿಯಾಗಿ ಅಭಿನಯಿಸಿದ್ದರು ಕರೀನಾ ಕಪೂರ್. ಅಭಿನಯಕ್ಕೆ ಪ್ರಾಶಸ್ರ್ಯವಿರುವ ಸರಳ ಲುಕ್‌ನಲ್ಲಿ ಈ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ಕರೀನಾ ಬಳಿಕ ಅನೇಕ ಪಾತ್ರಗಳಿಗೆ ಜೀವತುಂಬುತ್ತಾ ಬಂದು ಸ್ಟಾರ್ ನಟರೊಂದಿಗೆ ಅಭಿನಯಿಸಿದ ದಶಕದ ಕಾಲ ಬಣ್ಣದ ಜಗತ್ತನ್ನ ಆಳುತ್ತಾರೆ.

    ಸಿನಿಮಾರಂಗಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಖುಷಿಯಲ್ಲಿ ಕರೀನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. 25 ವರ್ಷಗಳು.. ಮುಗಿಯದ ಪ್ರಯಾಣ.. ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ. ಜೊತೆಗೆ ರೆಫ್ಯೂಜಿ ಸಮಯದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕರೀನಾಗೆ ಶುಭಾಶಯಗಳ ಸುರಿಮಳೆ ಬರುತ್ತಿದೆ.

  • ರಾಜಾ ಶಿವಾಜಿಗೆ ವಿದ್ಯಾ ಬಾಲನ್ ಎಂಟ್ರಿ: ದೊಡ್ಡದಾಯ್ತು ಪಟ್ಟಿ!

    ರಾಜಾ ಶಿವಾಜಿಗೆ ವಿದ್ಯಾ ಬಾಲನ್ ಎಂಟ್ರಿ: ದೊಡ್ಡದಾಯ್ತು ಪಟ್ಟಿ!

    ರಿತೇಶ್ ದೇಶ್ಮುಖ್ (Riteish Deshmukh) ದ್ವಿಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ `ರಾಜಾ ಶಿವಾಜಿ’ (Raja Shivaji). ಈ ಸಿನಿಮಾದಲ್ಲಿ ಸಂಜಯ್ ದತ್, ಅಭಿಷೇಕ್ ಬಚ್ಚನ್, ಮಹೇಶ್ ಮಂಜ್ರೇಕರ್, ಸಚಿನ್ ಖೇಡೇಕರ್, ಭಾಗ್ಯಶ್ರೀ, ಫರ್ದೀನ್ ಖಾನ್, ಜಿತೇಂದ್ರ ಜೋಶಿ, ಅಮೋಲ್ ಗುಪ್ತೆ ಮತ್ತು ಜೆನೆಲಿಯಾ ದೇಶ್ಮುಖ್ ಸೇರಿದಂತೆ ಅತಿದೊಡ್ಡ ತಾರಾಗಣವಿದೆ. ಈ ತಂಡಕ್ಕೆ ಈಗ ಹೊಸದಾಗಿ ನಟಿ ವಿದ್ಯಾ ಬಾಲನ್ ಸೇರಿಕೊಂಡಿದ್ದಾರೆ.

    ಅಂದಹಾಗೆ ವಿದ್ಯಾ ಬಾಲನ್ (Vidya Balan) ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ವಿದ್ಯಾ ಬಾಲನ್ ಕೂಡಾ ತುಂಬಾ ಕೌತುಕದಿಂದ ಕಾಯುತ್ತಿದ್ದಾರಂತೆ. ಭಾರತೀಯ ಇತಿಹಾಸದಲ್ಲಿ ವೀರಗಾಥೆಯ ಸಿನಿಮಾ ಇದಾಗಲಿದ್ದು, ಈ ಸಿನಿಮಾದ ಪಾತ್ರವರ್ಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ಇನ್ನು ಈ ಸಿನಿಮಾದ ಪಾತ್ರಕ್ಕೆ ವಿದ್ಯಾ ಬಾಲನ್ ಲುಕ್‌ಟೆಸ್ಟ್ ಮಾಡಿಸಿದ್ದಾರಂತೆ.

    ಛತ್ರಪತಿ ಶಿವಾಜಿಯವರ ಕುರಿತಾಗಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಈ ಸಿನಿಮಾ ಕೆಲವೊಂದಿಷ್ಟು ವಿಶೇಷ ಎಲಿಮೆಂಟ್ಸ್‌ನಿಂದ ವಿಭಿನ್ನ ಹಾಗೂ ವಿಶಿಷ್ಟವಾಗಿರಲಿದೆಯಂತೆ. ಮರಾಠಿಯಲ್ಲಿ ಶೂಟಿಂಗ್ ಮಾಡಿ ತದನಂತರ ಪ್ಯಾನ್ ಇಂಡಿಯನ್ ಕಾನ್ಸೆಪ್ಟ್‌ನಲ್ಲಿ ಸಿನಿಮಾವನ್ನ ಭಾರತೀಯ ಎಲ್ಲ ಭಾಷೆಯಲ್ಲೂ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

    ರಾಜಾ ಶಿವಾಜಿ ಸಿನಿಮಾ 2026ರ ಮೇ 1ರಂದು ತೆರೆಗೆ ಬರಲಿದ್ದು, ಸಕಲ ಸಿದ್ಧತೆಯಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ಈ ಸಿನಿಮಾ ಮುಖ್ಯಪಾತ್ರದಲ್ಲಿ ಬಣ್ಣಹಚ್ಚಲು ವಿದ್ಯಾ ಬಾಲನ್ ಕೂಡಾ ತಯಾರಾಗಿದ್ದಾರೆ.

  • ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಕುಂಟುತ್ತಲೇ 100 ಕೋಟಿ ಕ್ಲಬ್‌ ಸೇರಿದ ಹೌಸ್‌ಫುಲ್-5; 8ನೇ ದಿನ ಕೇವಲ 6 ಕೋಟಿ ಕಲೆಕ್ಷನ್‌

    ಅಕ್ಷಯ್ ಕುಮಾರ್ (Akshay Kumar), ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಬಾಲಿವುಡ್‌ ಹಲವು ತಾರೆಯರನ್ನೊಳಗೊಂಡ ʻಹೌಸ್‌ಫುಲ್‌-5ʼ (Housefull 5) ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಜೂನ್‌ 6ರಂದು ತೆರೆ ಕಂಡ ಈ ಚಿತ್ರ 8 ದಿನಗಳಲ್ಲೇ ನೂರು ಕೋಟಿಯ ಕ್ಲಬ್‌ ಸೇರಿದೆ.

    ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ (Riteish Deshmukh) ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಜೂನ್‌ 6ರಂದು ತೆರೆ ಕಂಡಿತ್ತು. ಮೊದಲ ದಿನವೇ 24 ಕೋಟಿ ಗಳಿಕೆಯೊಂದಿಗೆ ಕುಂಟುತ್ತಾ ಸಾಗಿರುವ ʻಹೌಸ್‌ಫುಲ್‌ 5ʼ ಚಿತ್ರ ಕೊನೆಗೂ ನೂರು ಕೋಟಿ ಕ್ಲಬ್‌ ಸೇರಿದೆ. 8ನೇ ದಿನ 6 ಕೋಟಿ ಗಳಿಕೆಯೊಂದಿಗೆ ವಿಶ್ವಾದ್ಯಂತ ಒಟ್ಟು 200 ಕೋಟಿ ರೂ. ಗಳಿಸಿದೆ.

    8ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ
    ಈ ಹಿಂದೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದ್ರೆ.. ಹಣೆಬರಹಕ್ಕೆ ಹೊಣೆ ಯಾರು? ಅನ್ನುವಂತೆ ಕೆಲ ವರ್ಷಗಳಿಂದ ಅದೃಷ್ಟ ಕೈ ಕೊಟ್ಟಿದೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದ್ರೂ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.

    ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್‌ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಆದ್ರೆ ಭಾರೀ ನಿರೀಕ್ಷೆ ಮೂಡಿಸಿದ್ದ ಹೌಸ್‌ಫುಲ್ ಚಿತ್ರದ ಕಲೆಕ್ಷನ್‌ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮೊದಲ ವಾರದಲ್ಲಿ 127.25 ಕೋಟಿ ಗಳಿಸಿದ್ದ ʻಹೌಸ್‌ಫುಲ್‌ 5ʼ 2ನೇ ವಾರದ ಮೊದಲ ಕೇವಲ 6.07 ಕೋಟಿ ರೂ. ಗಳಿಸಿ ಭಾರೀ ನಿರಾಸೆ ಮೂಡಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಗೆ 133.32 ಕೋಟಿಗೆ ತಲುಪಿದೆ.

    ʻಹೌಸ್‌ಫುಲ್‌ 5ʼ ಯಾವ ದಿನ ಎಷ್ಟು ಕಲೆಕ್ಷನ್‌?
    – ಮೊದಲ ದಿನ – 24 ಕೋಟಿ ರೂ.
    – ಎರಡನೇ ದಿನ – 31 ಕೋಟಿ ರೂ.
    – ಮೂರನೇ ದಿನ – 32.5 ಕೋಟಿ ರೂ.
    – ನಾಲ್ಕನೇ ದಿನ – 13 ಕೋಟಿ ರೂ.
    – ಐದನೇ ದಿನ – 11.25 ಕೋಟಿ ರೂ.
    – ಆರನೇ ದಿನ – 8.5 ಕೋಟಿ ರೂ.
    – ಏಳನೇ ದಿನ – 7 ಕೋಟಿ ರೂ.
    – ಎಂಟನೇ ದಿನ – 6 ಕೋಟಿ ರೂ.
    ಒಟ್ಟು – 133.25 ಕೋಟಿ

    ಈ ಹಿಂದಿನ ಹೌಸ್‌ಫುಲ್ 4 ಸಿರೀಸ್‌ಗಳನ್ನು ನೋಡಿ ಪ್ರೇಕ್ಷಕರು ಭೇಷ್ ಎಂದಿದ್ದರು. ಆದರೀಗ ಕುಂಟುತ್ತಾ ಸಾಗಿರುವ 5ನೇ ಸರಣಿ 2ನೇ ವಾರದಲ್ಲಾದರೂ ಹಿಟ್‌ ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

  • 18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

    18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

    ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಮದುವೆಯಾಗಿ ನಿನ್ನೆ (ಏ.20) 18 ವರ್ಷಗಳು ಕಳೆದಿವೆ. ಈ ಹಿನ್ನೆಲೆ ಪತಿ ಹಾಗೂ ಮಗಳೊಂದಿನ ಕ್ಯೂಟ್ ಆಗಿ ಸೆಲ್ಫಿಯೊಂದನ್ನು ಐಶ್ವರ್ಯಾ ರೈ ಹಂಚಿಕೊಂಡಿದ್ದಾರೆ. ಈ ಮೂಲಕ ದಾಂಪತ್ಯದಲ್ಲಿ ಬಿರುಕು ಎಂದು ಅಪಪ್ರಚಾರ ಮಾಡುವವರಿಗೆ ನಟಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗಾಯಕಿ ಪೃಥ್ವಿ ಭಟ್ ಪ್ರೇಮವಿವಾಹ: ‘ಸರಿಗಮಪ’ ಜ್ಯೂರಿ ಮೇಲೆ ಆರೋಪ

    18ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸ ಫೋಟೋವನ್ನು ಐಶ್ವರ್ಯಾ ಹಂಚಿಕೊಂಡಿದ್ದಾರೆ. ಪತಿ ಮತ್ತು ಮಗಳು ಆರಾಧ್ಯ ಜೊತೆ ಖುಷಿಯಿಂದ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಐಶ್ವರ್ಯಾ ಮತ್ತು ಅಭಿಷೇಕ್ ಬಾಂಧವ್ಯ ಚೆನ್ನಾಗಿದೆ ಎಂಬುದಕ್ಕೆ ಈ ಪೋಸ್ಟ್‌ನಿಂದ ಟೀಕಿಸುವವರಿಗೆ ಉತ್ತರ ಕೊಟ್ಟಿದ್ದಾರೆ. ಸದ್ಯ ನಟಿಯ ಫ್ಯಾಮಿಲಿ ಫೋಟೋ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

    ಇತ್ತೀಚೆಗೆ ಕುಟುಂಬದ ಮದುವೆ ಸಮಾರಂಭವೊಂದರಲ್ಲಿ ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ದಂಪತಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಇದನ್ನೂ ಓದಿ:ಮಧ್ಯಪ್ರದೇಶ ಸಿಎಂ ಭೇಟಿಯಾದ ರಾಕಿಂಗ್ ಸ್ಟಾರ್ ಯಶ್

    ಗುರು, ಕುಚ್ ನಾ ಕಹೋ, ಧೂಮ್ 2, ರಾವಣ್, ಸರ್ಕಾರ್ ರಾಜ್, ಹೀಗೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ನಟಿಸಿದ್ದಾರೆ. ಚಿತ್ರೀಕರಣದಲ್ಲಿ ಆದ ಪರಿಚಯ ಪ್ರೀತಿಗೆ ತಿರುಗಿ ಮದುವೆಯ ಮುದ್ರೆ ಒತ್ತಿದ್ದರು. 2007ರಲ್ಲಿ ಹೊಸ ಬಾಳಿಗೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಆರಾಧ್ಯ ಬಚ್ಚನ್ ಸಾಕ್ಷಿಯಾಗಿದ್ದಾಳೆ.

  • ಐಶ್ವರ್ಯಾ ರೈ ಜೊತೆ ಎರಡನೇ ಮಗು ಮಾಡ್ಕೋತೀರಾ ಅಂದಿದ್ದಕ್ಕೆ ಅಭಿಷೇಕ್ ಬಚ್ಚನ್ ಹೇಳಿದ್ದೇನು..?

    ಐಶ್ವರ್ಯಾ ರೈ ಜೊತೆ ಎರಡನೇ ಮಗು ಮಾಡ್ಕೋತೀರಾ ಅಂದಿದ್ದಕ್ಕೆ ಅಭಿಷೇಕ್ ಬಚ್ಚನ್ ಹೇಳಿದ್ದೇನು..?

    ಬಾಲಿವುಡ್‌ ಸ್ಟಾರ್‌ ನಟರಾದ ಅಭಿಷೇಕ್‌ ಬಚ್ಚನ್‌ (Abhishek Bachchan) ಮತ್ತು ಐಶ್ವರ್ಯಾ ರೈ (Aishwarya Rai) ಕಾರಣಾಂತರಗಳಿಂದ ದೂರ ದೂರ ಇದ್ದಾರೆ. ಈ ನಡುವೆ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಜೊತೆ ಎರಡನೇ ಮಗು ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಅಭಿಷೇಕ್‌ ನಾಚಿನೀರಾದ ಪ್ರಸಂಗ ನಡೆದಿದೆ. ವರ್ಷಗಳ ಹಿಂದಿನ ಕಾರ್ಯಕ್ರಮದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಈಗ ವೈರಲ್‌ ಆಗಿದೆ.

    ಒಮ್ಮೆ ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್ ಅವರ ‘ಕೇಸ್ ತೋ ಬಂತಾ ಹೈ’ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಆ ವೇಳೆ, ಐಶ್ವರ್ಯಾ ರೈ ಜೊತೆ ಎರಡನೇ ಮಗು ಮಾಡಿಕೊಳ್ತೀರಾ ಎಂದು ತಮಾಷೆಯಾಗಿ ಪ್ರಶ್ನೆ ಕೇಳಲಾಯಿತು. ಆಗ ಅಭಿಷೇಕ್‌ ನಾಚಿಕೆ ಪಟ್ಟುಕೊಂಡರು.

    ರಿತೇಶ್‌ ಮಾತನಾಡುತ್ತಾ, ‘ಅಮಿತಾಬ್‌ ಜೀ.. ಐಶ್ವರ್ಯ, ಆರಾಧ್ಯ ಮತ್ತು ನೀವು ಅಭಿಷೇಕ್. ಹೆಸರುಗಳು ಎ ಅಕ್ಷರದಿಂದ ಪ್ರಾರಂಭವಾಗುತ್ತವೆ. ಹಾಗಾದರೆ, ಜಯಾ ಬಚ್ಚನ್‌, ಶ್ವೇತಾ ಅವರು ಏನು ಮಾಡಿದರು’ ಎಂದು ಕೇಳುತ್ತಾರೆ. ಅದಕ್ಕೆ ಅಭಿಷೇಕ್‌ ಪ್ರತಿಕ್ರಿಯಿಸಿ, ‘ಇದನ್ನು ಅವರ ಬಳಿಯೇ ಕೇಳಬೇಕು’ ಎನ್ನುತ್ತಾರೆ.

    ಮುಂದುವರಿದು ರಿತೀಶ್‌, ‘ಆರಾಧ್ಯ ನಂತರ?’ ಎಂದು ತಮಾಷೆಯಾಗಿ ಕೇಳುತ್ತಾರೆ. ಅಭಿಷೇಕ್‌ ನಸುನಗುತ್ತಾ, ‘ಇಲ್ಲ, ಮುಂದಿನ ಮಗು ವಿಚಾರ ಬಂದಾಗ ನೋಡೋಣ’ ಎಂದು ನಾಚಿಕೆಯಿಂದ ಉತ್ತರಿಸಿದ್ದಾರೆ.

  • ಡಿವೋರ್ಸ್ ವದಂತಿಯ ನಡುವೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ದಂಪತಿ

    ಡಿವೋರ್ಸ್ ವದಂತಿಯ ನಡುವೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ದಂಪತಿ

    ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ದಂಪತಿಯ ಡಿವೋರ್ಸ್ ವಿಚಾರ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಹೀಗರುವಾಗ ಡಿವೋರ್ಸ್ ಸುದ್ದಿ ಬಂದೇ ಇಲ್ಲ ಎಂಬಷ್ಟು ಹ್ಯಾಪಿಯಾಗಿ ಪತಿ ಅಭಿಷೇಕ್‌ ಜೊತೆ ಐಶ್ವರ್ಯಾ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿದ ನಿವೇದಿತಾಗೆ ಕಾಲೆಳೆದ ನೆಟ್ಟಿಗರು

    ಇತ್ತೀಚೆಗೆ ಪತ್ನಿ ಐಶ್ವರ್ಯಾ ಮತ್ತು ಪುತ್ರಿ ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಅವರು ಸಂಬಂಧಿಕರ ಮದುವೆಗೆ ಹಾಜರಿ ಹಾಕಿದ್ದರು. ಈ ವೇಳೆ, ಐಶ್ವರ್ಯಾ ಜೋಡಿ ಕಜರಾರೇ ಹಿಂದಿ ಹಾಡಿಗೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಕಜರಾರೆ ಹಾಡಿನ ಹುಕ್ ಸ್ಟೆಪ್ಸ್ ಹಾಕ್ತಾ ಎಂಜಾಯ್ ಮಾಡಿದ್ದಾರೆ. ಇವರೊಂದಿಗೆ ಪುತ್ರಿ ಆರಾಧ್ಯ ಕೂಡ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ಸುದ್ದಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಐಶ್ವರ್ಯ ರೈ ಕಾರಿಗೆ ಬಸ್‌ ಡಿಕ್ಕಿ – ನಟಿ ಸೇಫ್‌

     

    View this post on Instagram

     

    A post shared by Aishwarya❤️ (@aishhxedits)

    ಅಂದಹಾಗೆ, ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರು 2007ರಲ್ಲಿ ಮದುವೆಯಾದರು. ಮುದ್ದಾದ ಮಗಳು ಆರಾಧ್ಯ ಜೊತೆ ಈ ಜೋಡಿ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.

    ಹೊಸ ಪಾತ್ರಗಳ ಮೂಲಕ ಅಭಿಷೇಕ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಐಶ್ವರ್ಯಾ ರೈ ಅವರು ಮದುವೆ ಬಳಿಕ ಕಮ್ಮಿ ಸಿನಿಮಾ ಮಾಡಿದ್ರೂ ಕೂಡ ವಿಭಿನ್ನ ಎಂದೆನಿಸುವ ಪಾತ್ರಗಳ ಮೂಲಕ ಬರುತ್ತಿದ್ದಾರೆ. ಅದಕ್ಕೆ ‘ಪೊನ್ನಿಯನ್ ಸೆಲ್ವನ್ 1’ ಮತ್ತು ‘ಪೊನ್ನಿಯನ್‌ ಸೆಲ್ವನ್ 2’ ಸಿನಿಮಾಗಳೇ ಸಾಕ್ಷಿ.‌

  • ಡೈರೆಕ್ಟರ್ ಅಶುತೋಷ್ ಗೋವಾರಿಕರ್ ಪುತ್ರನ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ್ರು ಐಶ್ವರ್ಯಾ ರೈ ದಂಪತಿ

    ಡೈರೆಕ್ಟರ್ ಅಶುತೋಷ್ ಗೋವಾರಿಕರ್ ಪುತ್ರನ ಮದುವೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ್ರು ಐಶ್ವರ್ಯಾ ರೈ ದಂಪತಿ

    ಬಾಲಿವುಡ್ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ (Ashutosh Gowariker) ಪುತ್ರ ಕೋನಾರ್ಕ್ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿದೆ. ನವಜೋಡಿಗೆ ಶುಭಕೋರಲು ಐಶ್ವರ್ಯಾ ರೈ (Aishwarya Rai)ಮತ್ತು ಅಭಿಷೇಕ್ ಬಚ್ಚನ್ ದಂಪತಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ

    ನಿರ್ದೇಶಕ ಅಶುತೋಷ್ ಗೋವಾರಿಕರ್ ಪುತ್ರನ ಮದುವೆ ಸಂಭ್ರಮಕ್ಕೆ ಬಾಲಿವುಡ್ ಸಾಕ್ಷಿಯಾಗಿದೆ. ಈ ಮದುವೆಗೆ ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಐಶ್ವರ್ಯಾ ರೈ ಹಾಜರಿ ಹಾಕಿದ್ದಾರೆ. ಈ ಮೂಲಕ ಅವರ ಮದುವೆ ದಾಂಪತ್ಯ ಸರಿಯಿಲ್ಲ ಎಂದು ಟೀಕಿಸುವವರಿಗೆ ಉತ್ತರ ನೀಡಿದ್ದಾರೆ. ಐಶ್ವರ್ಯಾ ದಂಪತಿ ಜೊತೆಯಾಗಿ ಮಗದೊಮ್ಮೆ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

    ಇನ್ನೂ ಈ ಮದುವೆಗೆ ಶಾರುಖ್ ಖಾನ್, ಆಮೀರ್ ಖಾನ್, ಪೂಜಾ ಹೆಗ್ಡೆ, ಚಂಕಿ ಪಾಂಡೆ, ವಿದ್ಯಾ ಬಾಲನ್, ಸೋನಾಲಿ, ರಿತೇಶ್ ದೇಶ್‌ಮುಖ್ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  • ಆರಾಧ್ಯ ಶಾಲೆಗೆ ಜೊತೆಯಾಗಿ ಬಂದ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ

    ಆರಾಧ್ಯ ಶಾಲೆಗೆ ಜೊತೆಯಾಗಿ ಬಂದ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ

    ಬಾಲಿವುಡ್ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ (Aishwarya Rai) ಕುರಿತು ಆಗಾಗ ಡಿವೋರ್ಸ್ ಬಗ್ಗೆ ವದಂತಿ ಹರಿದಾಡುತ್ತಲೇ ಇದೆ. ಅದಕ್ಕೆಲ್ಲಾ ಜೊತೆಯಾಗಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ. ಮಗಳು ಆರಾಧ್ಯ ಶಾಲೆಗೆ ಜೊತೆಯಾಗಿ ಐಶ್ವರ್ಯಾ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.

     

    View this post on Instagram

     

    A post shared by Viral Bhayani (@viralbhayani)

    ಮಗಳು ಆರಾಧ್ಯಳ ಶಾಲೆಯ ಕಾರ್ಯಕ್ರಮಕ್ಕೆ ಬಿಗ್‌ ಬಿ ಜೊತೆ ಅಭಿಷೇಕ್, ಐಶ್ವರ್ಯಾ ಒಟ್ಟಾಗಿ ತೆರಳಿದ್ದಾರೆ. ಆರಾಧ್ಯ ಧೀರುಭಾಯ್ ಅಂಬಾನಿ ಸ್ಕೂಲ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶಾಲೆಗೆ ಆಗಮಿಸಿದ್ದ ವೇಳೆ, ಇಬ್ಬರು ನಗು ನಗುತ್ತಾ ಬರುತ್ತಿದ್ದು, ಪತ್ನಿಯನ್ನು ಅಭಿಷೇಕ್ ಕೇರ್ ಮಾಡುತ್ತಿದ್ದ ಪರಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಅಂಬಾನಿ ಮಗ ಅನಂತ್ ಮದುವೆಯಲ್ಲಿ ಬಿಗ್‌ಬಿ ಕುಟುಂಬದ ಜೊತೆ ಫೋಟೋಶೂಟ್‌ಗೆ ನಿಲ್ಲದೇ ಮಗಳೊಂದಿಗೆ ಪ್ರತ್ಯೇಕವಾಗಿ ನಿಂತಿದ್ದರು. ಇಲ್ಲಿಂದ ಇಬ್ಬರ ಕುರಿತು ಡಿವೋರ್ಸ್ ಸುದ್ದಿ ಚರ್ಚೆಗೆ ಗ್ರಾಸವಾಯ್ತು. ಇದನ್ನೂ ಓದಿ:ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ರಿಷಬ್ ಶೆಟ್ಟಿ

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಧೂಮ್ 2, ರಾವಣ್, ಗುರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಜೊತೆಯಾಗಿ ನಟಿಸಿದ್ದಾರೆ. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. 2007ರಲ್ಲಿ ಇಬ್ಬರೂ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ

    ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ

    ಬಾಲಿವುಡ್ ಬೆಡಗಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ದಂಪತಿಯ ವೈಯಕ್ತಿಕ ಜೀವನ ಸರಿಯಿಲ್ಲ ಎಂದು ಆಗಾಗ ಡಿವೋರ್ಸ್ ಕುರಿತು ಸುದ್ದಿ ಹರಿದಾಡುತ್ತಲೇ ಇತ್ತು. ಈಗ ಆ ಡಿವೋರ್ಸ್ (Divorce) ವದಂತಿಗೆ ಐಶ್ವರ್ಯಾ ರೈ ದಂಪತಿ ಬ್ರೇಕ್ ಹಾಕಿದ್ದಾರೆ. ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ. ಇದನ್ನೂ ಓದಿ:ರಿಲೇಷನ್‌ಶಿಪ್ ವದಂತಿ ನಡುವೆ ವಿಜಯ್ ದೇವರಕೊಂಡ ಫ್ಯಾಮಿಲಿಗೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

    ಕುಟುಂಬದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಪತ್ನಿ ಐಶ್ವರ್ಯಾ ಮತ್ತು ಅತ್ತೆ ಜೊತೆ ನಿಂತು ಅಭಿಷೇಕ್ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಇಬ್ಬರೂ ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಹರಿದಾಡುತ್ತಿರುವ ಫೋಟೋ ನೋಡಿ ಗಾಸಿಪ್ ಮಂದಿ ಸೈಲೆಂಟ್ ಆಗಿದ್ದಾರೆ.

     

    View this post on Instagram

     

    A post shared by Anu Ranjan (@anuranjan1010)

    ಇನ್ನೂ ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಫ್ಯಾಮಿಲಿ ಜೊತೆ ನಿಲ್ಲದೇ ಮಗಳೊಂದಿಗೆ ಪ್ರತ್ಯೇಕವಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದರು. ಅಲ್ಲಿಂದ ಒಂದಲ್ಲಾ ಒಂದು ವಿಚಾರವಾಗಿ ಇಬ್ಬರ ಡಿವೋರ್ಸ್ ಕುರಿತು ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಜೊತೆಯಾಗಿ ಈ ಜೋಡಿ ಕಾಣಿಸಿಕೊಂಡು ಎಲ್ಲರ ಪ್ರಶ್ನೆಗಳಿಗೂ ಉತ್ತರ ಸಿಗುವಂತೆ ಮಾಡಿದ್ದಾರೆ.

  • ಪುತ್ರಿ ಆರಾಧ್ಯ ಹುಟ್ಟುಹಬ್ಬದಲ್ಲಿ ಅಭಿಷೇಕ್ ಬಚ್ಚನ್ ಗೈರು

    ಪುತ್ರಿ ಆರಾಧ್ಯ ಹುಟ್ಟುಹಬ್ಬದಲ್ಲಿ ಅಭಿಷೇಕ್ ಬಚ್ಚನ್ ಗೈರು

    ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಪುತ್ರಿ ಆರಾಧ್ಯ (Aradhya) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗಳ ಬರ್ತ್‌ಡೇಯನ್ನು ವಿಶೇಷವಾಗಿ ನಟಿ ಆಚರಿಸಿದ್ದಾರೆ. ಮಗಳು ಆರಾಧ್ಯ ಬರ್ತ್‌ಡೇ ಸಂಭ್ರಮದಲ್ಲಿ ಅಭಿಷೇಕ್ ಭಾಗಿಯಾಗದೇ ಇರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ ಮತ್ತು ಐಶ್ವರ್ಯಾಗೆ ಡಿವೋರ್ಸ್ ಆಗಿದ್ಯಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

    ನಟಿ ಐಶ್ವರ್ಯಾ ಹಂಚಿಕೊಂಡ ಪೋಸ್ಟ್‌ನಲ್ಲಿ, ಅಜ್ಜ ದಿವಂಗತ ಕೃಷ್ಣರಾಜ್ ರೈ ಫೋಟೋಗೆ ಮುಂದೆ ಗೌರವದಿಂದ ಆರಾಧ್ಯ ನಮಸ್ಕರಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬೃಂದ್ಯಾ ರೈ ಜೊತೆ ನಟಿ, ಆರಾಧ್ಯ ಪೋಸ್ ಕೊಟ್ಟಿದ್ದಾರೆ. ಆರಾಧ್ಯರ ಬಾಲ್ಯದ ಫೋಟೋ, ಬರ್ತ್‌ಡೇ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

    ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಬ್ಬರೂ ನನ್ನ ಜೀವನದ ಶಾಶ್ವತ ಪ್ರೀತಿ, ಅಪ್ಪ- ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ. ನನ್ನ ಹೃದಯ ನೀನು ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅಭಿಷೇಕ್ ಮತ್ತು ಬಚ್ಚನ್ ಪರಿವಾರದವರು ಇಲ್ಲದೇ ಇರೋದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಇಲ್ಲಿ ಏನೋ ಸರಿಯಿಲ್ಲ. ಐಶ್ವರ್ಯಾ ಮತ್ತು ಅಭಿಷೇಕ್ (Abhishek Bachchan) ಜೊತೆಯಾಗಿಲ್ಲ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.