Tag: ಅಭಿಯಾನ

  • ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ವಿಚಾರ- ಸಾಮಾಜಿಕ ಜಾಲತಾಣದಲ್ಲಿ ಸಿಎಂ, ಕೈ ವಿರುದ್ಧ ಕ್ಯಾಂಪೇನ್

    ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ವಿಚಾರ- ಸಾಮಾಜಿಕ ಜಾಲತಾಣದಲ್ಲಿ ಸಿಎಂ, ಕೈ ವಿರುದ್ಧ ಕ್ಯಾಂಪೇನ್

    ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಭಿಯಾನ ಶುರುವಾಗಿದೆ.

    ಸಿದ್ದರಾಮಯ್ಯ ಜೇನುಗೂಡಿಗೆ ಕೈ ಹಾಕಿದ್ದಾರೆ. ನಿಮಗೆ ಇದು ಬೇಕಿತ್ತಾ ಸಿದ್ದರಾಮಯ್ಯ? ರಂಭಾಪುರಿ ಶ್ರೀಗಳಿಂದ ಹೋರಾಟದ ಎಚ್ಚರಿಕೆ. ಧರ್ಮ ಒಡೆಯುವ ಕರ್ಮದ ಕೆಲಸ ನಿಮಗೆ ಬೇಕಿತ್ತೆ? ಈ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಶುರುವಾಗಿದೆ. ಇದನ್ನೂ ಓದಿ:ಲಿಂಗಾಯತ, ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ್ರೆ ಯಾವ ಸೌಲಭ್ಯ ಸಿಗುತ್ತೆ?

    ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವಿಟ್ಟರ್ ಕ್ಯಾಂಪೇನ್ ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್‍ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    https://twitter.com/ShobhaBJP/status/975781232641376256

  • ಲವ್ ಜಿಹಾದ್ ವಿರುದ್ಧ ಅಭಿಯಾನ- ಹಿಂದೂ ಸಂಘಟನೆ ಮುಖಂಡರ ಮೇಲೆ ಕೇಸ್

    ಲವ್ ಜಿಹಾದ್ ವಿರುದ್ಧ ಅಭಿಯಾನ- ಹಿಂದೂ ಸಂಘಟನೆ ಮುಖಂಡರ ಮೇಲೆ ಕೇಸ್

    ಉಡುಪಿ: ಹಿಂದೂಪರ ಸಂಘಟನೆಗಳ ಲವ್ ಜಿಹಾದ್ ವಿರುದ್ಧದ ಅಭಿಯಾನಕ್ಕೆ ರಾಜ್ಯ ಸರ್ಕಾರ ಆರಂಭವೇ ಆಘಾತ ನೀಡಿದ್ದು, ಅಭಿಯಾನ ಮತ್ತು ಸಹಿ ಸಂಗ್ರಹ ಮಾಡಿದ್ದ ಹಿಂದೂಪರ ಮುಖಂಡರ ವಿರುದ್ಧ ಪ್ರಕರಣ ದಾಖಲು ಮಾಡಿದೆ.

    ಲವ್ ಜಿಹಾದ್ ವಿರುದ್ಧ ಅಭಿಯಾನ ಮಾಡಿದ್ದ ಹಿಂದೂ ಪರ ಸಂಘಟನೆಯ ಮೇಲೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ವಿಶ್ವಹಿಂದೂ ಪರಿಷದ್, ಭಜರಂಗದಳ ಮತ್ತು ದುರ್ಗಾವಾಹಿನಿ ಸದಸ್ಯರು ಉಡುಪಿಯಲ್ಲಿ ಲವ್ ಜಿಹಾದ್ ವಿರುದ್ಧದ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಪೊಲೀಸರ ಅನುಮತಿ ಪಡೆದುಕೊಂಡಿರಲಿಲ್ಲ. ಇದರಿಂದ ಐಪಿಎಸ್ ಸೆಕ್ಷನ್ 143, 149, 290 ನಿಯಮದಡಿ ಉಡುಪಿ ನಗರ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

    ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ, ರಾಜ್ಯ ಸರ್ಕಾರ ಹಿಂದೂ ಧಮನ ನೀತಿಯನ್ನು ಅನುಸರಿಸಿದೆ. ಸರ್ಕಾರ ಪೊಲೀಸರ ಕೈಯಲ್ಲಿ ಕೇಸು ಹಾಕಿಸಿದೆ. ಇದು ಪೊಲಿಟಿಕಲ್ ಪೊಲೀಸ್ ಗಿರಿ. ಇನ್ನು ಎರಡು ದಿನಗಳ ಒಳಗೆ ಪ್ರಕರಣವನ್ನು ವಾಪಾಸ್ ಪಡೆಯದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

    ಉಡುಪಿ ಎಂಜಿಎಂ ಕಾಲೇಜು ಬಳಿ ಲವ್ ಜಿಹಾದ್ ವಿರುದ್ಧ ಜನವರಿ 22 ರಂದು ವಿಶ್ವಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ ಸಂಘಟನೆ ಮುಖಂಡರು ಕಾಲೇಜು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಬಳಿ ಸಹಿ ಸಂಗ್ರಹಿಸಿ ಲವ್ ಜಿಹಾದ್ ವಿರುದ್ಧ ಪಾಠ ಮಾಡಿದ್ದರು. ಕರ ಪೊಲೀಸರಿಗೆ ಮಾಹಿತಿ ನೀಡದೆ ಗುಂಪು ಸೇರಿದ್ದು, ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಮಾಡಿದ್ದರಿಂದ ಕೇಸು ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಭಿಯಾನ ಮುಂದುವರೆಸಲಿದ್ದು, ದೇವಸ್ಥಾನ, ಶಾಲಾ ಕಾಲೇಜು, ಹಾಸ್ಟೆಲ್ ಮತ್ತಿತರ ಕಡೆ ತೆರಳಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ವಿಶ್ವಹಿಂದೂ ಪರಿಷದ್ ಹೇಳಿದೆ. ಇದನ್ನು ಓದಿ: ಲವ್ ಜಿಹಾದ್ ವಿರುದ್ಧ ಹಿಂದೂ ಸಂಘಟನೆಗಳಿಂದ ಕಾಲೇಜುಗಳ ಮುಂದೆ ಅಭಿಯಾನ

  • ಕಲ್ಲಡ್ಕ ಶಾಲೆಗೆ ಭರಪೂರ ದೇಣಿಗೆ ನೀಡಿದ ಮಾಜಿ ಸಚಿವ

    ಕಲ್ಲಡ್ಕ ಶಾಲೆಗೆ ಭರಪೂರ ದೇಣಿಗೆ ನೀಡಿದ ಮಾಜಿ ಸಚಿವ

    ಮಂಗಳೂರು: ಕಲ್ಲಡ್ಕ ಶಾಲೆಗೆ ಅನ್ನದಾನದ ಅನುದಾನ ಕಡಿತದ ಹಿನ್ನೆಲೆಯಲ್ಲಿ ಶಾಲೆಯ ಹಿತೈಷಿಗಳ ಭಿಕ್ಷಾಂದೇಹಿ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಾಥ್ ನೀಡಿದ್ದಾರೆ.

    ಹೌದು. ಕಲ್ಲಡ್ಕದ ಶಾಲೆಗೆ ಭೇಟಿ ನೀಡಿದ ಜನಾರ್ದನ ರೆಡ್ಡಿ 25 ಲಕ್ಷ ರೂಪಾಯಿ ಚೆಕ್ ಅನ್ನು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಹಸ್ತಾಂತರಿಸಿದ್ದಾರೆ.

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗಾಗಿ ಭಿಕ್ಷಾಂದೇಹಿ ಆಂದೋಲನ- 2 ದಿನದಲ್ಲಿ ಹರಿದುಬಂದ ಹಣವೆಷ್ಟು ಗೊತ್ತಾ?

    ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಈ ಆನ್ ಲೈನ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕಲ್ಲಡ್ಕದ ಎರಡು ಶಾಲೆಗಳಿಗೆ ಬರುತ್ತಿದ್ದ ಅನ್ನದಾನದ ಅನುದಾನ ಕಡಿತಗೊಳಿಸಿ ಸರಕಾರ ಆದೇಶಿಸುತ್ತಿದ್ದಂತೆ ಶಾಲೆಯ ಸಂಚಾಲಕ, ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಿಕ್ಷೆ ಎತ್ತಿಯಾದರೂ ಶಾಲೆಯನ್ನು ನಡಿಸ್ತೀನಿ ಅನ್ನೋ ಮಾತು ಹೇಳಿದ್ದರು.

    ಈ ಹಿನ್ನೆಲೆಯಲ್ಲಿ ಮಹೇಶ್ ಮತ್ತು ಅವರ ತಂಡ ಸಾಮಾಜಿಕ ಜಾಲತಾಣದ ಮೂಲಕ `ಭಿಕ್ಷಾಂದೇಹಿ’ ಆನ್ ಲೈನ್ ಅಭಿಯಾನ ಆರಂಭಿಸಿತ್ತು. ಇದೀಗ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ದೇಣಿಗೆ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಕಲ್ಲಡ್ಕ ಶಾಲೆಗೆ ಆಗಮಿಸಿದ ಜನಾರ್ದನ ರೆಡ್ಡಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೂಲಕ 25 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಈಗಾಗಲೇ ಹಲವು ರಾಜಕೀಯ, ಸಾಮಾಜಿಕ ಮುಖಂಡರು ದೇಣಿಗೆ ನೀಡಿ ಶಾಲೆಗೆ ನೈತಿಕ ಬೆಂಬಲ ನೀಡಿದ್ದಾರೆ.

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಅನುದಾನ ಕಟ್- ತಟ್ಟೆ ಹಿಡಿದು ಸರ್ಕಾರದ ವಿರುದ್ಧ ಮಕ್ಕಳ ಧಿಕ್ಕಾರ

    ಇದನ್ನೂ ಓದಿ: ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!

    ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ

  • ಕಾಂಡೋಮ್ ಟ್ಯಾಕ್ಸ್ ಫ್ರೀ, ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್: ಮೋದಿ ವಿರುದ್ಧ ತಿರುಗಿ ಬಿದ್ದ ಮಹಿಳೆಯರು

    ಕಾಂಡೋಮ್ ಟ್ಯಾಕ್ಸ್ ಫ್ರೀ, ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್: ಮೋದಿ ವಿರುದ್ಧ ತಿರುಗಿ ಬಿದ್ದ ಮಹಿಳೆಯರು

    ಬೆಂಗಳೂರು: ಸ್ಯಾನಿಟರಿ ನ್ಯಾಪ್‍ಕಿನ್ ಮೇಲೆ 12% ಜಿಎಸ್‍ಟಿ ತೆರಿಗೆ ಹೇರಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮಹಿಳೆಯರು ತಿರುಗಿಬಿದ್ದಿದ್ದಾರೆ.

    ಜಿಎಸ್‍ಟಿ ವಿಚಾರದಲ್ಲಿ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಜಿಎಸ್‍ಟಿ ಅಡಿ ಕುಂಕುಮ ಹಾಗೂ ಬಳೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಚಿನ್ನಕ್ಕೆ ಶೇ. 3ರಷ್ಟು ತೆರಿಗೆ ಇದೆ. ಆದ್ರೆ ಸ್ಯಾನಿಟರಿ ನ್ಯಾಪ್‍ಕಿನ್ಸ್‍ಗೆ 12% ತೆರಿಗೆ ಇದೆ. ಹೀಗಾಗಿ ‘ಡೋಂಟ್ ಟ್ಯಾಕ್ಸ್ ಆನ್ ಮೈ ಪೀರಿಯಡ್’ ಹೆಸರಿನಲ್ಲಿ ಅಭಿಯಾನ ಶುರುವಾಗಿದೆ.

    ಲೈಂಗಿಕ ಕ್ರಿಯೆ ಆಯ್ಕೆ. ಆದ್ರೆ ಋತುಸ್ರಾವ ಆಯ್ಕೆಯಲ್ಲ. ಕಾಂಡೋಮ್ ಟ್ಯಾಕ್ಸ್ ಫ್ರೀ ಆದ್ರೆ ನ್ಯಾಪ್‍ಕಿನ್‍ಗೆ ಯಾಕೆ ಟ್ಯಾಕ್ಸ್? ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಯಾನಿಟರಿ ನ್ಯಾಪ್‍ಕಿನ್ಸ್ ಮೇಲೆ 12% ಜಿಎಸ್‍ಟಿಗೆ ಪ್ರಸೂತಿ ತಜ್ಞೆ ಪದ್ಮಿನಿ ಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಲೂ ನಮ್ಮ ಹಳ್ಳಿಗಳಲ್ಲಿ ಸಾಕಷ್ಟು ಹೆಣ್ಣುಮಕ್ಕಳು ನ್ಯಾಪ್‍ಕಿನ್ ಕೊಳ್ಳದ ಪರಿಸ್ಥಿತಿಯಲ್ಲಿ ಇದ್ದಾರೆ. ಈಗಲೂ ಬಟ್ಟೆಗಳನ್ನು ಬಳಸುತ್ತಾರೆ. ಇದ್ರಿಂದ ಗುಪ್ತಾಂಗ ರೋಗಗಳು ಕಾಣಿಸಿಕೊಳ್ಳುತ್ತೆ. ಹೆಣ್ಣುಮಕ್ಕಳು ಇದರ ಬಗ್ಗೆ ಮಾತಾಡೋದೆ ಕಡಿಮೆ. ಹೀಗಿರುವಾಗ 12% ಜಿಎಸ್‍ಟಿ ಹಾಕಿರೋದು ಸರಿಯಲ್ಲ. ಟ್ಯಾಕ್ಸ್ ಫ್ರೀ ನ್ಯಾಪ್‍ಕಿನ್ ಮಾಡಬೇಕು ಅಂತ ನಡೆಯುತ್ತಿರುವ ಹೋರಾಟವನ್ನು ನಾನು ಬೆಂಬಲಿಸ್ತೀನಿ ಎಂದಿದ್ದಾರೆ.

     

    https://twitter.com/mojorojo/status/854298421376757760?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fcelebrities-tweet-arun-jaitley-want-sanitary-napkins-to-be-tax-free-1683733