Tag: ಅಭಿಯಾನ

  • ‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ಉಡುಪಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದ್ದು ಮಾಡುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ಕೊಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೀತಾ ಇದೆ. ಬಿಜೆಪಿ ಕಾರ್ಯಕರ್ತನ ಮೇಲೆಯೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ತರೀಕೆರೆಯಲ್ಲಿ ಸಂಸದೆ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

    ಉಡುಪಿ ಚಿಕ್ಕಮಗಳೂರು ಕ್ಷೇತ್ರ ಮೊದಲಿನಿಂದಲೂ ವಲಸಿಗರ ಕ್ಷೇತ್ರ ಎಂದೇ ಪ್ರಸಿದ್ಧಿ. ಕಾಂಗ್ರೆಸ್ ಅಧಿನಾಯಕಿ ದಿವಂಗತ ಇಂದಿರಾ ಗಾಂಧಿಯಿಂದ ಈಗಿನ ಶೋಭಾ ಕರಂದ್ಲಾಜೆ ತನಕ ಇಲ್ಲಿ ಹೊರಗಿನವರೇ ಸಂಸದರಾಗಿದ್ದಾರೆ. ಪುತ್ತೂರಿನ ವಿನಯಕುಮಾರ್ ಸೊರಕೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೂ ಇದು ಮರು ಜನ್ಮನೀಡಿದ ಕ್ಷೇತ್ರ. ಇಂಥ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಮೋದಿ ಅಲೆಯಲ್ಲಿ ತೇಲಿ ಬಂದು ಗೆದ್ದವರು ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ರಾಜಕಾರಣದಲ್ಲೇ ಬ್ಯುಸಿಯಿದ್ದ ಶೋಭಾ ಕರಂದ್ಲಾಜೆ ಈ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಶೋಭಾ ಗೋ ಬ್ಯಾಕ್ ಅಭಿಯಾನ ಉಡುಪಿ- ಚಿಕ್ಕಮಗಳೂರಿನಲ್ಲಿ ಶುರುವಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬರೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಯಕ್ಷಿಮಠ ಎಂಬವರ ವಿರುದ್ಧ ರಾಜ್ಯ ಬಿಜೆಪಿ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಆಪ್ತ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ದೂರು ದಾಖಲಿಸಿದ್ದಾರೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

    ಸಂಸದರಾದ ಬಳಿಕ ಕ್ಷೇತ್ರವನ್ನೇ ಮರೆತಿದ್ದೀರಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದೀರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ತರೀಕೆರೆಗೆ ರೈಲ್ವೆ ಫ್ಲಾಟ್ ಫಾರಂ ಮೇಲ್ದರ್ಜೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ, ವಕೀಲರು ಹಾಗೂ ತರೀಕೆರೆ ಸಾರ್ವಜನಿಕರು ಹೆದ್ದಾರಿ ಅಗಲೀಕರಣ ಹಾಗೂ ದುರಸ್ತಿ ಮಾಡುವಂತೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗಾಂಧಿ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಸಂಸದರ ವಿರುದ್ಧ ಕಿಡಿಕಾರಿದ್ರು. ಒಂದು ಗಂಟೆಗೂ ಹೆಚ್ಚು ಹೊತ್ತು ರಾಷ್ಟ್ರೀಯ ಹೆದ್ದಾರಿ 206ರನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.

    ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಸ್ ಬಿಟ್ಟು ಕಾಂಗ್ರೆಸ್ ಬಂದು ಗೆದ್ದು ನಂತರ ಸೋತು ಬಿಜೆಪಿಗೆ ವಲಸೆ ಬಂದಿರುವ ಜಯಪ್ರಕಾಶ್ ಹೆಗ್ಡೆ ಎಂಪಿ ಸೀಟಿಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅದು ಬಿಟ್ಟು ಐದಾರು ಹೆಸರು ಚಾಲ್ತಿಯಲ್ಲಿದೆ. ಉಡುಪಿ-ಚಿಕ್ಕಮಗಳೂರು ಜಿಲ್ಲೆಯ 8 ಎಂಎಲ್‍ಎಗಳ ಪೈಕಿ 7 ಮಂದಿ ಬಿಜೆಪಿಯಿಂದ ಆಯ್ಕೆಯಾದವರು. ಹೀಗಾಗಿ ಅಭ್ಯರ್ಥಿಯನ್ನು ಗೆಲ್ಲಿಸುವ ಸವಾಲಿಗಿಂತ ಅಭ್ಯರ್ಥಿ ಆಯ್ಕೆಯೇ ತಲೆನೋವಾಗಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಸ್ಥಳೀಯ ಚುನಾವಣೆ ಸಂದರ್ಭದಲ್ಲೂ ಪ್ರಚಾರದಲ್ಲಿ ಪಾಲ್ಗೊಳ್ಳದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗಿ ಪುನರಾಯ್ಕೆಯಾಗುವ ಸಂಭವವಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಪಕ್ಷದ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಭಾರತೀಯ ಜನತಾ ಪಕ್ಷ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

    ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ಶೋಭಾ ಕರಂದ್ಲಾಜೆ ಸ್ವ-ಕ್ಷೇತ್ರದಲ್ಲಿ ಮುಜುಗರ ಅನುಭವಿಸುವಂತಾಗಿದೆ. ಶೋಭಾ ಕರಂದ್ಲಾಜೆ ಸಂಸದೆಯಾದ ಬಳಿಕ ಉಡುಪಿ ಜಿಲ್ಲಾ ಬಿಜೆಪಿ ಮೂರು ಬಣಗಳು ಸೃಷ್ಟಿಯಾಗಿದೆ ಎಂಬೂದು ಸುಳ್ಳಲ್ಲ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದ್ದು, ಎರಡೂ ಜಿಲ್ಲೆಗಳ ಪರಿಚಿತ ಮತ್ತು ಸಮರ್ಥ ನಾಯಕನನ್ನು ಆಯ್ಕೆ ಮಾಡಿದ್ರೆ ಭಧ್ರಕೋಟೆಯೊಳಗೆ ಬಿಜೆಪಿಗೆ ಗೆಲುವು ಸುಲಭವಲ್ಲ ಅನ್ನೋದು ಸತ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿರಣ್ಯಕೇಶಿ ನದಿ, ಹೂಳೆಮ್ಮ ದೇವಾಲಯದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ!

    ಹಿರಣ್ಯಕೇಶಿ ನದಿ, ಹೂಳೆಮ್ಮ ದೇವಾಲಯದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ!

    ಬೆಳಗಾವಿ(ಚಿಕ್ಕೋಡಿ): ಹುಕ್ಕೇರಿ ಹಿರೇಮಠದಿಂದ ಆಯೋಜಿಸಿರುವ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಡಿಯಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಹಾಗೂ ಸುಕ್ಷೇತ್ರ ಹೊಳೆಮ್ಮ ದೇವಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

    ಬೆಳಗಾವಿ ಜಿಲ್ಲಾ ಪಂಚಾಯತಿ ಸಿಇಓ ರಾಮಚಂದ್ರ ರಾವ್ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವತಃ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ ನದಿ ಸ್ವಚ್ಛತೆಯನ್ನು ಮಾಡಿದರು. ಸ್ವಚ್ಛತೆ ಸಂದರ್ಭದಲ್ಲಿ ಹುಕ್ಕೇರಿ ಸ್ವಾಮೀಜಿ ಅವರ ಬೆರಳಿಗೆ ಗಾಜು ಚುಚ್ಚಿ ರಕ್ತ ಬಂದ ಘಟನೆ ನಡೆಯಿತು.

    ನದಿ ತಟದಲ್ಲಿರುವ ಸುಕ್ಷೇತ್ರ ಹೊಳೆಮ್ಮ ದೇವಸ್ಥಾನವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ 25 ಸಾವಿರ ಬಟ್ಟೆಯ ಬ್ಯಾಗ್ ಗಳನ್ನು ಹುಕ್ಕೇರಿ ಹಿರೇಮಠದ ವತಿಯಿಂದ ಅಂಗಡಿ ಮಾಲೀಕರಿಗೆ ನೀಡಲಾಯಿತು. ಪ್ಲಾಸ್ಟಿಕ್ ಎಲ್ಲರಿಗೂ ಮಾರಕವಾಗಿದ್ದು ಪ್ಲಾಸ್ಟಿಕ್ ಬಳಸುವುದನ್ನು ಜನ ನಿಲ್ಲಿಸಬೇಕು ಎಂದು ಸ್ವಾಮೀಜಿ ವಿನಂತಿಸಿಕೊಂಡರು.

    ಕೇವಲ ದಂಡ ಹಾಕಿದರೆ ಪ್ಲಾಸ್ಟಿಕ್ ನಿಷೇಧ ಆಗುವುದಿಲ್ಲ. ಪ್ರೀತಿಯಿಂದ ಜನ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯ 9 ನದಿಗಳ ಸ್ವಚ್ಛತೆ ಕಡೆ ಗಮನ ಹರಿಸುವುದರ ಜೊತೆಗೆ ಜಾಗೃತಿ ಮೂಡಿಸಲಾಗುವುದು ಎಂದು ಸಿಇಒ ರಾಮಚಂದ್ರ ರಾವ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಟಾಕಿಯಿಂದ ಪ್ರಾಣಿಗಳ ರಕ್ಷಣೆಗೆ ವಿಭಿನ್ನ ಅಭಿಯಾನ ಶುರು ಮಾಡಿದ ಬೆಂಗ್ಳೂರಿನ ಯುವತಿ

    ಪಟಾಕಿಯಿಂದ ಪ್ರಾಣಿಗಳ ರಕ್ಷಣೆಗೆ ವಿಭಿನ್ನ ಅಭಿಯಾನ ಶುರು ಮಾಡಿದ ಬೆಂಗ್ಳೂರಿನ ಯುವತಿ

    ಬೆಂಗಳೂರು: ಬೆಳಕಿನ ಚಿತ್ತಾರ ದೀಪಾವಳಿಗೆ ಅದೆಷ್ಟೇ ಜಾಗೃತಿ ಮೂಡಿಸಿದ್ರೂ ಪಟಾಕಿಗಳ ಅಬ್ಬರ ಹೆಚ್ಚಾಗಿರುತ್ತದೆ. ಪಟಾಕಿ ಹಚ್ಚುವವರಿಗೆ ಸಡಗರ. ಆದರೆ ಸ್ಫೋಟಕ ಶಬ್ಧಕ್ಕೆ ಪ್ರಾಣಿಗಳು ಬೆದರುತ್ತೆ. ನಮಗಿಂತ ಹತ್ತು ಪಟ್ಟು ಹೆಚ್ಚು ಶಬ್ಧ ಅವುಗಳ ಕಿವಿಗೆ ಅಪ್ಪಳಿಸೋದ್ರಿಂದ ಪಟಾಕಿ ಶಬ್ಧ ಅವುಗಳಿಗೆ ಹಾನಿಯಾಗುತ್ತೆ. ಇದಕ್ಕಾಗಿ ಬೆಂಗಳೂರು ಯುವತಿಯೊಬ್ಬರು ಪ್ರಾಣಿಗಳ ರಕ್ಷಣೆಗೆ ವಿಭಿನ್ನ ಅಭಿಯಾನ ಶುರು ಮಾಡಿದ್ದಾರೆ.

    ಬೆಂಗಳೂರಿನ ಯುವತಿ ರೇಖಾ ಪ್ರಾಣಿಗಳ ಭಾವನೆಯನ್ನು ಬೋರ್ಡ್ ನಲ್ಲಿ ಬರೆದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಾಣಿ ಪ್ರಿಯೆ ರೇಖಾ ಬೆಂಗಳೂರಿನ ನಗರದ ಅನೇಕ ಕಡೆ ಸಂಚರಿಸಿ ನಾಯಿ, ಹಸು, ಬೆಕ್ಕಿನ ಮುಂದೆ ಪಟಾಕಿ ಬಿಟ್ಹಾಕಿ, ದೀಪ ಹಚ್ಚಿ ಅನ್ನುವ ಸಂದೇಶವನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಅಂಧಕಾರವನ್ನು ತೊಲಗಿಸುವ ದೀಪಾವಳಿ ದಿನ ಮೂಕ ಪ್ರಾಣಿಗಳ ಬಗ್ಗೆ ಕನಿಕರವಿರಲಿ. ಸ್ಫೋಟಕ ಬಳಸದೇ ದೀಪ ಬೆಳಗಿ ಹಬ್ಬ ಆಚರಿಸೋಣ ಅಂತಾ ಮನವಿ ಮಾಡಿಕೊಂಡರು. ದೀಪಾವಳಿ ಪಟಾಕಿ ಶಬ್ಧಕ್ಕೆ ಬೆದರಿ ಅದೆಷ್ಟೋ ಪ್ರಾಣಿಗಳು ಓಡಿ ಹೋಗುತ್ತೆ. ಪರಿಸರಕ್ಕೆ, ಪ್ರಾಣಿಗಳಿಗೆ ಮಾರಕವಾಗಿರುವ ಪಟಾಕಿ ಬಿಟ್ಟು ದೀಪದಿಂದ ದೀಪ ಹಚ್ಚಿ ಬೆಳಕಿನ ಹಬ್ಬ ಆಚರಿಸಿ ಎಂನ ಸಂದೇಶವನ್ನು ಸಾರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುತ್ತು ಕೊಡು.. ನಾನು ಕರೆದಲ್ಲಿಗೆ ಬಾ.. ಬೇಕಾದಷ್ಟು ಹಣ ಕೊಡುವೆ- ಯುವತಿಯಿಂದ ಮೀಟೂ ಆರೋಪ

    ಮುತ್ತು ಕೊಡು.. ನಾನು ಕರೆದಲ್ಲಿಗೆ ಬಾ.. ಬೇಕಾದಷ್ಟು ಹಣ ಕೊಡುವೆ- ಯುವತಿಯಿಂದ ಮೀಟೂ ಆರೋಪ

    ಹಾಸನ: ಸಿನಿಮಾ ನಟಿಯರು ಮೀಟೂ ಅಭಿಯಾನಕ್ಕೆ ಕೈ ಜೋಡಿಸಿದ ನಂತರ ಇದೀಗ ಸಾರ್ವಜನಿಕ ವಲಯದಲ್ಲಿಯೂ ವಂಚನೆಗೊಳಗಾಗಿರುವ ಯುವತಿಯರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

    ಹಾಸನದ ಯುವತಿಯೊಬ್ಬಳು ಮೀಟೂ ಅಭಿಯಾನಕ್ಕೆ ಕೈ ಜೋಡಿಸಿ, ತನಗಾದ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ತನ್ನ ಹೆಸರು ಹೇಳದ ಯುವತಿ, ಹಾಸನದ ಸರ್ಕಾರಿ ನೌಕರ ಕೃಷ್ಣೇಗೌಡ ಎಂಬವರ ಮೇಲೆ ಮೀಟೂ ಆರೋಪ ಮಾಡಿದ್ದಾಳೆ.

    ಕೃಷ್ಣೇಗೌಡ ಕೆಲಸ ಕೊಡಿಸುವ ನೆಪದಲ್ಲಿ ನನ್ನ ಮೊಬೈಲ್ ನಂಬರ್ ಪಡೆದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ಮುತ್ತು ಕೊಡು, ನಾನು ಕರೆದಲ್ಲಿಗೆ ಬಾ ನಿನಗೆ ಬೇಕಾದಷ್ಟು ಹಣ ಕೊಡುವೆ ಎಂದು ಒತ್ತಾಯಿಸುತ್ತಿದ್ದ ಎಂದು ತನ್ನ ನೋವು ಹಂಚಿಕೊಂಡಿದ್ದಾಳೆ.

    ಈ ಪ್ರಕರಣದಿಂದ ನಾನು ಖಿನ್ನತೆಗೊಳಗಾಗಿದ್ದೆ. ಮಾಧ್ಯಮಗಳಲ್ಲಿ ಬರುತ್ತಿದ್ದ ಮೀಟೂ ಸುದ್ದಿಗಳೇ ನನಗೆ ಪ್ರೇರಣೆ ಎಂದಿದ್ದಾಳೆ. ಯುವತಿ ಹಾಸನ ಎಸ್‍ಪಿ ಪ್ರಕಾಶ್ ಗೌಡ ನೆರವಿಗೆ ಬರುವಂತೆ ಮನವಿ ಮಾಡಿ ಇಂತಹ ಕಾಮುಕರಿಗೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾಳೆ.

    ನಿವೃತ್ತಿ ಅಂಚಿನಲ್ಲಿರುವ ಹಿರಿಯ ವಯಸ್ಸಿನ ನೌಕರ, ತಾನು ಹದಿನೈದು ಸಾವಿರ ಹಣಕೊಡುತ್ತೇನೆ ಮುತ್ತು ಕೊಡು ಎಂದು ಕೇಳಿದ್ದಾಗಿ ಒಪ್ಪಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುರುಷರಿಗೆ ಸಿಹಿ ಸುದ್ದಿ- #MeTooಗೆ ಟಾಂಗ್ ನೀಡಲು #MenToo ಅಭಿಯಾನ ಶುರು

    ಪುರುಷರಿಗೆ ಸಿಹಿ ಸುದ್ದಿ- #MeTooಗೆ ಟಾಂಗ್ ನೀಡಲು #MenToo ಅಭಿಯಾನ ಶುರು

    ಬೆಂಗಳೂರು: #MeToo ಅಭಿಯಾನ ಸಖತ್ ಸದ್ದು ಮಾಡುತ್ತಿದೆ. ಈ ಅಭಿಯಾನದಿಂದ ದೊಡ್ಡವರ ಮುಖವಾಡವನ್ನು ಕಳಚಿದೆ. ಆದರೆ ಈಗ ಮೀ ಟೂಗೆ ಟಾಂಗ್ ಕೊಡುವುದಕ್ಕೆ ಕ್ರಿಸ್ಪ್ ಅನ್ನುವ ಸಂಘಟನೆಯಿಂದ ಮೆನ್ ಟೂ ಅಭಿಯಾನ ಶುರುವಾಗಿದೆ.

    ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದವರು, ಮೀಟೂನಲ್ಲಿ ಸುಳ್ಳು ಆರೋಪ ಎದುರಿಸುವವರು, ಹೆಂಡತಿ ಕೈಲಿ ಟಾರ್ಚರ್ ಅನುಭವಿಸಿದವರು, ಗರ್ಲ್‍ಫ್ರೆಂಡ್ ಕೈಲಿ ಚೀಟ್ ಆಗಿ ದೇವದಾಸ್ ಆದವರಿಗೆಲ್ಲ ಮೆನ್ ಟೂ ಅಭಿಯಾನ ವೇದಿಕೆ ಒದಗಿಸಲಿದೆ.

    ಈಗಾಗಲೇ ಮೆನ್ ಟೂ ಅಭಿಯಾನಕ್ಕೆ ನೊಂದ ಪುರುಷರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮಹಿಳೆಯರಿಂದ ಶೋಷಣೆಗೆ ಒಳಗಾದವರಿಗೆ ಫ್ರೀಯಾಗಿ ಕೌನ್ಸಿಲಿಂಗ್ ನೀಡಲಾಗುತ್ತಿದೆ. ಮೆನ್ ಟೂ ಸಕ್ಸಸ್ ಆಗುತ್ತೋ ಇಲ್ಲವೋ ಆದರೆ ನಮ್ ಗೋಳು ಯಾರಿಗೆ ಹೇಳೋಣ ಎನ್ನುತ್ತಿದ್ದ ಗಂಡಸರಿಗೆ ಮೆನ್ ಟೂ ಅಭಿಯಾನ ಫುಲ್ ಖುಷಿ ಕೊಟ್ಟಿದೆ.

    ಈಗಾಗಲೇ ಮೀಟೂ ಅಭಿಯಾನ ವಿಶ್ವಾದ್ಯಂತ ಸದ್ದು ಮಾಡಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಖ್ಯಾತರಾಗಿರುವ ಸಾವಿರಾರು ನೊಂದ ಮಹಿಳೆಯರು ಈ ವೇದಿಕೆ ಮೂಲಕ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಸದ್ಯ ಈ ಮೀಟೂ ಅಭಿಯಾನಕ್ಕೆ ಟಾಂಗ್ ಮೆನ್ ಟೂ ಅಭಿಯಾನ ಶುರುವಾಗಿದ್ದು, ಈಗ ಮಹಿಳೆಯರಿಂದ ಶೋಷಣೆಗೊಳಗಾದ ಪುರಷರು ತಮಗಾದ ಕಹಿ ಘಟನೆಗಳನ್ನು ಹೇಳಿಕೊಳ್ಳಲು ಈ ಅಭಿಯಾನದ ವೇದಿಕೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಧಾನಿ ಮೋದಿ ಕಿತ್ತೊಗೆಯಲು ಪಾಕಿಸ್ತಾನದಲ್ಲಿ ಕಾಂಗ್ರೆಸ್‍ನಿಂದ ಪ್ರಚಾರ: ಬಿಜೆಪಿ ಆರೋಪ

    ಪ್ರಧಾನಿ ಮೋದಿ ಕಿತ್ತೊಗೆಯಲು ಪಾಕಿಸ್ತಾನದಲ್ಲಿ ಕಾಂಗ್ರೆಸ್‍ನಿಂದ ಪ್ರಚಾರ: ಬಿಜೆಪಿ ಆರೋಪ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪಾಕಿಸ್ತಾನದಲ್ಲಿ ಅಭಿಯಾನ ಶುರುಮಾಡಿದೆ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯಾ ಆರೋಪಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು ಕಿತ್ತುಹಾಕಲು, ಕಾಂಗ್ರೆಸ್ಸಿನ ಅಧಿಕೃತ ವೆಬ್‍ಸೈಟ್ ಮೂಲಕ `ದೇಶ್ ಬಚಾವೋ, ಮೋದಿ ಹಟವೋ’ ಫೇಸ್ಬುಕ್ ಜಾಹೀರಾತಿನ ಮೂಲಕ ಅಭಿಯಾನ ಕೈಗೊಂಡಿರುವ ಬಗ್ಗೆ ಟ್ವೀಟ್ ಮಾಡಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕಾಂಗ್ರೆಸ್ಸಿನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಪ್ರಧಾನಿ ಮೋದಿಯವರ ವಿರುದ್ಧ ಪ್ರಚಾರ ಮಾಡಿದ್ದರೋ, ಅದೇ ರೀತಿ ಈಗ ಪಾಕಿಸ್ತಾನದ ಫೇಸ್ಬುಕ್‍ಗಳಲ್ಲಿ ಮೋದಿ ಹಠಾವೋ ಚಳುವಳಿಯನ್ನು ಆರಂಭಿಸಿದೆ. ಇದಲ್ಲದೇ ಕಳೆದ ಸೆಪ್ಟೆಂಬರಿನಲ್ಲಿ ಪಾಕಿಸ್ತಾನ ಸರ್ಕಾರ ಬಹಿರಂಗವಾಗಿ ರಾಹುಲ್ ಗಾಂಧಿ ಭಾರತದ ಮುಂದಿನ ಪ್ರಧಾನಿ ಎಂದು ಪ್ರಚಾರ ಮಾಡಿದೆ ಎಂದು ಆರೋಪಿಸಿದರು.

    ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನಿ ನಾಯಕರೊಂದಿಗೆ ವೈರತ್ವವಿರುವ ಕಾರಣ, ಪಾಕಿಸ್ತಾನ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದೆ. ಅಲ್ಲದೇ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿದ್ದಲ್ಲದೇ, ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಆಲಂಗಿಸುವ ಮೂಲಕ ದೇಶದ ಸೈನಿಕರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆ ತ್ರಿಪುರದಲ್ಲಿ ನಡೆದಿದೆ.

    ಸುಕಾಂತ್ ಚಕ್ರವರ್ತಿ(33) ಕೊಲೆಯಾದ ವ್ಯಕ್ತಿ. ಸುಕಾಂತ್‍ರನ್ನು ಮಕ್ಕಳು ಕಳ್ಳ ಎಂದು ಭಾವಿಸಿದ ಗ್ರಾಮದ ಜನರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮೃತಿ ರಂಜನ್ ದಾಸ್ ತಿಳಿಸಿದ್ದಾರೆ.

    ಸುಕಾಂತ್ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಸದಸ್ಯರಾಗಿದ್ದು, ಮಕ್ಕಳ ಕಳ್ಳರು ವದಂತಿ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುಲು ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಯೇ ಕೊಲೆಯಾಗಿದ್ದಾರೆ.

    ಸುಕಾಂತ್ ಜನಸಂದಣಿ ಪ್ರದೇಶಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮಕ್ಕಳ ಕಳ್ಳರ ಜಾಗೃತಿಯ ಬಗ್ಗೆ ಅಭಿಯಾನ ನಡೆಸುತ್ತಿದ್ದರು. ಆಗ ಗ್ರಾಮಸ್ಥರು ಇವರೇ ಮಕ್ಕಳ ಕಳ್ಳ ಎಂದು ತಿಳಿದು ಅವರನ್ನು ಹೊಡೆದು ಕೊಂದಿದ್ದಾರೆ. ಅಲ್ಲದೇ ಸುಕಾಂತ್ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಹಲ್ಲೆ ನಡೆಸಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿದ್ದಾರೆ. ಜನರಿಗೆ ಒಳ್ಳೆಯದಾಗಲು ಸರ್ಕಾರದವರೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಹೇಳಿದರು ಅವರ ಮಾತನ್ನು ಕೇಳದೇ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಡೆದ ನಂತರ ತ್ರಿಪುರಾ ಮುಖ್ಯಮಂತ್ರಿ ಬಿಪ್‍ಲಾಬ್ ಕುಮಾರ್ ದೇಬ್ ಜನರಲ್ಲಿ ಯಾವುದೇ ವದಂತಿಗೆ ಕಿವಿ ಕೊಡದೇ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗುರುವಾರದಿಂದ 48 ಗಂಟೆ ಎಸ್‍ಎಂಎಸ್ ಹಾಗೂ ಇಂಟರ್ ನೆಟ್ ಸ್ಥಗಿತಗೊಳಿಸಿದ್ದಾರೆ.

  • ಗರ್ಭಿಣಿ ಹಸುವಿಗೆ ಮರಣದಂಡನೆ ಶಿಕ್ಷೆ: ಸರ್ಕಾರದಿಂದ ಆದೇಶ ರದ್ದು

    ಗರ್ಭಿಣಿ ಹಸುವಿಗೆ ಮರಣದಂಡನೆ ಶಿಕ್ಷೆ: ಸರ್ಕಾರದಿಂದ ಆದೇಶ ರದ್ದು

    ಸೋಫಿಯಾ: ಗರ್ಭಿಣಿ ಹಸುವಿಗೆ ವಿಧಿಸಿದ್ದ ಮರಣದಂಡನೆ ಆದೇಶವನ್ನು ಬಲ್ಗೇರಿಯಾ ಸರ್ಕಾರ ಅನೂರ್ಜಿತಗೊಳಿಸಿದ ಘಟನೆ ನಡೆದಿದೆ.

    ಪೆಂಕಾ ಎಂಬ ಹಸು ಕಳೆದ ತಿಂಗಳು ತನ್ನ ಹಿಂಡಿನ ಜೊತೆ ಸಾಗುವಾಗ ಯುರೋಪಿಯನ್ ಯೂನಿಯನ್ ಗಡಿಯನ್ನು ದಾಟಿ ಪಕ್ಕದ ಸರ್ಬಿಯಾಕ್ಕೆ ಹೋಗಿ ವಾಪಸ್ ಬಂದಿತ್ತು.

    ಯುರೋಪಿಯನ್ ಕಮಿಷನ್ ಮಾರ್ಗದರ್ಶನಗಳ ಪ್ರಕಾರ ಹಸುಗಳ ಆರೋಗ್ಯ ಸ್ಥಿತಿಯ ದಾಖಲೆಗಳನ್ನು ಗಡಿಯಲ್ಲಿರುವ ಚೆಕ್ ಪಾಯಿಂಟ್ ಗಳಲ್ಲಿ ತೋರಿಸಬೇಕು. ಗಡಿಯಲ್ಲಿ ತಪಾಸಣೆಗೊಂಡು ಅನುಮತಿ ಪಡೆದ ನಂತರವಷ್ಟೇ ಯುರೋಪ್ ಯೂನಿಯನ್ ಒಳಗೆ ಬರಬಹುದಾಗಿದೆ. ಹಾಗಾಗಿ ಅಧಿಕಾರಿಗಳು ಪೆಂಕಾವನ್ನು ಶಿಕ್ಷೆಗೆ ಗುರಿಪಡಿಸಿ ಎಂದು ವಾದಿಸಿದ್ದರು. ಸರ್ಕಾರ ಪೆಂಕಾಗೆ ಮರಣದಂಡನೆಯನ್ನು ವಿಧಿಸಿತ್ತು.

    ವಿಚಾರ ತಿಳಿಯುತ್ತಿದ್ದಂತೆ ಪ್ರಾಣಿದಯಾ ಚಳುವಳಿಗಾರರಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಪ್ರಕರಣದಲ್ಲಿ ಪೆಂಕಾಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ಕೋರಿ ಆನ್ ಲೈನ್ ಅಭಿಯಾನ ಕೂಡ ಶುರುವಾಗಿತ್ತು. ಇದರ ಬೆನ್ನಲ್ಲೇ ಬಲ್ಗೇರಿಯಾ ಸರ್ಕಾರ ಆದೇಶವನ್ನು ಅನೂರ್ಜಿತಗೊಳಿಸಿದೆ.

    https://www.youtube.com/watch?v=DBzExVlwhQQ

  • ಏಷ್ಯಾ 2ನೇ ಅತೀ ದೊಡ್ಡ ಕೆರೆಯ ಸಂರಕ್ಷಣೆಗೆ ಪಣತೊಟ್ಟ ಟೆಕ್ಕಿಗಳು!

    ಏಷ್ಯಾ 2ನೇ ಅತೀ ದೊಡ್ಡ ಕೆರೆಯ ಸಂರಕ್ಷಣೆಗೆ ಪಣತೊಟ್ಟ ಟೆಕ್ಕಿಗಳು!

    ದಾವಣಗೆರೆ: ಏಷ್ಯಾದಲ್ಲೇ 2ನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ಜಿಲ್ಲೆಯ ಸೂಳೆಕೆರೆ (ಶಾಂತಿಸಾಗರ) ರಕ್ಷಣೆಗೆ ದಾವಣಗೆರೆಯ ಕೆಲ ಸಾಫ್ಟ್‍ವೇರ್ ಉದ್ಯೋಗಿಗಳು ಕೆರೆ ಉಳಿಸಿ ಅಭಿಯಾನ ಆರಂಭಿಸಿದ್ದಾರೆ.

    ದೇಶದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರೂ ಸಹ 2,500 ಎಕೆರೆ ವಿಸ್ತೀರ್ಣವಿರುವ ಕೆರೆಯ ಸುಮಾರು ಒಂದೂವರೆ ಸಾವಿರ ಎಕರೆ ಒತ್ತುವರಿಯಾಗಿದೆ ಎನ್ನುವ ಆರೋಪ ಕೇಳಿಬರುತ್ತಿವೆ. ಅಲ್ಲದೇ ಈ ಕೆರೆ ಹೂಳು ತುಂಬಿದ್ದು, ನೀರು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾಗದ ರೈತರ ಜೀವನಾಡಿಯಾಗಿರುವ ಸೂಳೆಕೆರೆಯನ್ನು ಉಳಿಸಲು ಸಾಫ್ಟ್‍ವೇರ್ ಉದ್ಯೋಗಿಗಳು ಹೋರಾಟ ಆರಂಭಿಸಿದ್ದಾರೆ.

    ಪ್ರಮುಖವಾಗಿ ಸಾವಿರಾರು ಎಕೆರೆ ಬೆಳೆ ಪ್ರದೇಶಕ್ಕೆ ಈ ಕೆರೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಕೆಲ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪ್ರದೇಶ ರೈತರ ಹಾಗೂ ಜನರ ಕುಡಿಯುವ ನೀರಿನ ಮೂಲವಾಗಿರುವ ಕೆರೆಯ ಬಗ್ಗೆ ಜಾಗೃತಿ ಮೂಡಿಸಿ ಈ ಮೂಲಕ ಕೆರೆಯ ರಕ್ಷಣೆಗೆ ಟೆಕ್ಕಿಗಳು ಮುಂದಾಗಿರುವುದು ಉತ್ತಮ ಬೆಳಣಿಗೆಯಾಗಿದೆ. ಅಲ್ಲದೇ ತಮ್ಮ ಈ ಕಾರ್ಯಕ್ಕೆ ಎಲ್ಲರು ಸಹಕಾರ ನೀಡಬೇಕೆಂಬುದು ಹೋರಾಟಗಾರರು ಮನವಿ ಮಾಡಿದ್ದಾರೆ.