Tag: ಅಭಿಮನ್ಯು ಕಾಶಿನಾಥ್‌

  • ಅರ್ಜುನ್ ಗುರೂಜಿ ಆಶೀರ್ವಾದ ಪಡೆದ ಅಭಿಮನ್ಯು!

    ಅರ್ಜುನ್ ಗುರೂಜಿ ಆಶೀರ್ವಾದ ಪಡೆದ ಅಭಿಮನ್ಯು!

    ಭಿಮನ್ಯು ಕಾಶಿನಾಥ್ (Abhimanyu Kashinath) ಅಭಿನಯದ ‘ಎಲ್ಲಿಗೆ ಪಯಣ ಯಾವುದೋ ದಾರಿ’ (Ellige Payana Yaavudo Dari) ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖುಷಿ ಚಿತ್ರತಂಡದಲ್ಲಿದೆ. ಇದೇ ಹೊತ್ತಿನಲ್ಲಿ ಅಭಿಮನ್ಯು ಕಾಶಿನಾಥ್ ಚಿತ್ರತಂಡದೊಂದಿಗೆ ಮೈಸೂರಿನ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿಯಾಗಿದ್ದಾರೆ. ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಅರ್ಜುನ್ ಗುರೂಜಿ ಅಭಿಮನ್ಯು ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳಿತಾಗಲಿ, ಈ ಸಿನಿಮಾ ಇನ್ನಷ್ಟು ಯಶಸ್ಸು ಕಾಣಲೆಂದು ಆಶೀರ್ವಾದ ಮಾಡಿದ್ದಾರೆ.

    ಅವಧೂತ ಅರ್ಜುನ್ ಗುರೂಜಿ ಅವರ ನಿವಾಸಕ್ಕೆ ಚಿತ್ರತಂಡದೊಂದಿಗೆ ತೆರಳಿದ್ದ ಅಭಿಮನ್ಯು ಅವರು ತಮ್ಮ ತಂದೆ ಕಾಶಿನಾಥ್ ಅವರ ಹೆಸರು ಅಜರಾಮರವಾಗಲೆಂದು ಬೇಡಿಕೊಂಡಿದ್ದಾರೆ. ನಂತರ ಆಶೀರ್ವಾದ ನೀಡಿದ ಅವಧೂತ ಅರ್ಜುನ್ ಗುರೂಜಿ ಈ ಸಿನಿಮಾ ಸಂಪೂರ್ಣವಾಗಿ ಯಶಸ್ಸು ಗಳಿಸಲೆಂದು ಹಾರೈಸುತ್ತಲೇ, ಯುವ ನಟ ಅಭಿಮನ್ಯು ಕಾಶಿನಾಥ್ ತಮ್ಮ ಸಿನಿಮಾಗಳ ಮೂಲಕ ಯುವ ಜನತೆಗೆ ಉತ್ತಮ ಸಂದೇಶಗಳನ್ನು ದಾಟಿಸವಂತೆ ಆಗಲಿ ಎಂದು ಹರಸಿದ್ದಾರೆ. ಈ ಸಂದರ್ಭದಲ್ಲಿ ನಾಯಕ ನಟ ಅಭಿಮನ್ಯು  ಅವರೊಂದಿಗೆ ನಾಯಕಿ ಸ್ಫೂರ್ತಿ ಉಡಿಮನೆ, ನಿರ್ದೇಶಕ ಕಿರಣ್ ಎಸ್ ಸೂರ್ಯ ಮತ್ತು ಚಿತ್ರತಂಡ ಭಾಗಿಯಾಗಿತ್ತು.


    ಸೂಕ್ಷ್ಮ ಕಥೆ ಒಳಗೊಂಡಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದೆ. ನಾಯಕ ಅಭಿಮನ್ಯು ಕಾಶಿನಾಥ್ ಈ ಸಿನಿಮಾವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡದೊಂದಿಗೆ ಸಕ್ರಿಯರಾಗಿದ್ದಾರೆ. ಇದರ ನಡುವಲ್ಲಿಯೇ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿಯಾಗುವ ಮೂಲಕ ಆಧ್ಯಾತ್ಮಿಕ ಅನುಭೂತಿಯೊಂದಿಗೆ ಮತ್ತಷ್ಟು ಹುರುಪು ತುಂಬಿಕೊಂಡಿದ್ದಾರೆ. ಇದನ್ನೂ ಓದಿ:ವರ್ಷ ಮೂರು, ಮರೆಯದ ನೆನಪು ನೂರು: ಅಪ್ಪು ನೆನೆದ ರಾಘಣ್ಣ

    ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್. ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.

  • ಎಲ್ಲಿಗೆ ಪಯಣ ಯಾವುದೋ ದಾರಿ: ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದರು ಡಾ.ಮಂಜುನಾಥ್!

    ಎಲ್ಲಿಗೆ ಪಯಣ ಯಾವುದೋ ದಾರಿ: ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿದರು ಡಾ.ಮಂಜುನಾಥ್!

    ಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ (Ellige Payana Yaavudo Daari) ಚಿತ್ರ ಇದೇ ಅಕ್ಟೋಬರ್ 25ರಂದು ಬಿಡುಗಡೆಗೊಳ್ಳಲಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತ್ತು. ಇದೀಗ ಸಂಸದ, ಖ್ಯಾತ ವೈದ್ಯ ಡಾ.ಮಂಜುನಾಥ್ ಈ ಚಿತ್ರದ ‘ನೀನಿರು ಸಾಕು’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್ ಅವರನ್ನು ನೆನೆಸಿಕೊಳ್ಳುತ್ತಲೇ, ಅವರ ಪುತ್ರ ಅಭಿಮನ್ಯು ಕಾಶೀನಾಥ್‌ಗೆ (Abhimanyu Kashinath) ಶುಭಕೋರಿದ್ದಾರೆ. ಇದನ್ನೂ ಓದಿ:ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ

    ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಡಾಕ್ಟರ್ ಮಂಜುನಾಥ್ ರಿಲೀಸ್‌ ಮಾಡಿದ್ದಾರೆ. ಕಾಶೀನಾಥ್ ಅವರು ನಟನಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳಿಗೆಲ್ಲ ಚಿರಪರಿಚಿತರು. ವಿಶಿಷ್ಟ ಪ್ರತಿಭೆಯಿಂದಲೇ ಪ್ರಸಿದ್ಧಿ ಪಡೆದವರು. ಅವರ ಪುತ್ರ ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಬೆಂಬಲಿಸಬೇಕಿದೆ. ಕಾಶೀನಾಥ್ ಎಂಬ ಹೆಸರೇ ಒಂದು ಬ್ರ್ಯಾಂಡ್ ಇದ್ದಂತೆ. ಅವರ ಮಗ ಅಭಿಮನ್ಯು ಕೂಡ ಅದೇ ಎತ್ತರಕ್ಕೇರಲಿ ಎಂದು ಹಾರೈಸುತ್ತಾ, ಡಾ.ಮಂಜುನಾಥ್ ಅವರು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಅರೆ ಏನಿದು ಕರೆದಂತಿದೆ ಮರೆಯಿಂದ ನೀ ನನ್ನನೇ ಅಂತ ಶುರುವಾಗುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ. ವಾಸುಕಿ ವೈಭವ್ ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಮೆಲೋಡಿಯಸ್ ಸಾಂಗಿಗೆ ಪ್ರಣವ್ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ, ಕಿಚ್ಚ ಸುದೀಪ್ ಈ ಸಿನಿಮಾಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಕಿರಣ್ ಎಸ್ ಸೂರ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸೂಕ್ಷ್ಮ ಕಥಾನಕವನ್ನೊಳಗೊಂಡಿದೆ. ಈಗಾಗಲೇ ಲಾಂಚ್ ಆಗಿರುವ ಟೀಸರ್ ಮತ್ತು ಟ್ರೈಲರ್ ಮೂಲಕ ಒಟ್ಟಾರೆ ಚಿತ್ರದ ಝಲಕ್ಕುಗಳು ಪ್ರೇಕ್ಷಕರ ಮುಂದೆ ಅನಾವರಣಗೊಂಡಿವೆ.

    ಸುದರ್ಶನ್ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ ಜೋಡಿಯಾಗಿ ನಟಿಸಿದ್ದಾರೆ. ವಿಜಯಶ್ರೀ ಕಲ್ಬುರ್ಗಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲರಾಜ್ವಾಡಿ, ಶೋಭನ್, ಪ್ರದೀಪ್, ರಮೇಶ್ ನಾಯಕ್, ರಿನಿ ಮುಂತಾದವರ ತಾರಾಗಣವಿದೆ. ಸತ್ಯ ರಾಮ್ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ, ಪ್ರಮೋದ್ ಮರವಂತೆ, ಕಿರಣ್ ಎಸ್ ಸೂರ್ಯ ಸಾಹಿತ್ಯ, ಜೀವನ್ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಪ್ರಣವ್ ರಾವ್ ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ.