Tag: ಅಭಿನವ ಹಾಲಶ್ರೀ

  • ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ

    ಹಾಲಶ್ರೀ ಮಠಕ್ಕೆ 54 ಲಕ್ಷ ಹಣ ತಂದಿಟ್ಟ ಮೈಸೂರಿನ ವಕೀಲ

    ಬೆಂಗಳೂರು: ಉದ್ಯಮಿಗೆ ವಂಚನೆ ಪ್ರಕರಣದಲ್ಲಿ (Fraud Case) ಅಭಿನವ ಹಾಲಶ್ರೀ (Abhinava Halashree) ಸ್ವಾಮೀಜಿ ಅರೆಸ್ಟ್ ಬೆನ್ನಲ್ಲೇ, ಮೈಸೂರಿನ (Mysuru) ವಕೀಲರೊಬ್ಬರು (Lawyer) ಹಿರೇಹಡಗಲಿಯ ಮಠಕ್ಕೆ (Mutt) 56 ಲಕ್ಷ ರೂ. ಹಣ ತಂದಿಟ್ಟಿದ್ದಾರೆ. ಈ ಹಣದ ಮೂಲ ಯಾವುದು? ಎಲ್ಲಿಂದ ಬಂತು ಎನ್ನುವ ಬಗ್ಗೆ ವಕೀಲ ಪ್ರಣವ್ ಪ್ರಸಾದ್ ಡಿಸಿಪಿಯವರಿಗೆ (DCP) ಪತ್ರ ಬರೆದಿದ್ದಾರೆ.

    ಇಷ್ಟು ಮಾತ್ರವಲ್ಲದೇ ಹಣದ ಕುರಿತು ಪ್ರಣವ್ ಪ್ರಸಾದ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಡಿಸಿಪಿಯವರಿಗೆ ಪ್ರಣವ್ ಪ್ರಸಾದ್ ಬರೆದ ಪತ್ರದಲ್ಲಿ (Letter) ಮಠಕ್ಕೆ ಹಣ ಬಂದ ಬಗ್ಗೆ ಉಲ್ಲೇಖವಾಗಿದ್ದು, ಪತ್ರದಲ್ಲಿನ ಸಂಪೂರ್ಣ ಸಾರಾಂಶ ಇಲ್ಲಿದೆ. ಇದನ್ನೂ ಓದಿ: ಕಾಂತರಾಜು ವರದಿ ಸರ್ಕಾರ ಸ್ವೀಕಾರ ಮಾಡುತ್ತದೆ: ಶಿವರಾಜ್ ತಂಗಡಗಿ

    ಪತ್ರದಲ್ಲಿ ಏನಿದೆ?
    ಪ್ರಣವ್ ಪುಸಾದ್ 53 ವರ್ಷ, ಆದ ನಾನು ಮೈಸೂರಿನನಲ್ಲಿ ನೆಲೆಸಿದ್ದು ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ. ಚೈತ್ರ ಕುಂದಾಪುರ ಪಕರಣದಲ್ಲಿ ಸುದ್ದಿಯಲ್ಲಿರುವ ಅಭಿನವ ಹಾಲಶ್ರೀ ಸ್ವಾಮಿಜಿಗಳು ನನಗೂ ಮತ್ತು ನನ್ನ ಕುಟುಂಬಸ್ಥರಿಗೂ ಪರಿಚಯವಿದ್ದು, ಕಳೆದ ಎಂಟು ತಿಂಗಳಿನಿಂದ ನಮ್ಮ ಒಡನಾಟದಲ್ಲಿ ಇದ್ದರು. ಇದನ್ನೂ ಓದಿ: ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ಇವರು ನಮ್ಮ ಮನೆಗೆ ಬರುವುದು, ಆಶೀರ್ವಚನ ನೀಡುವುದು, ಪ್ರಸಾದ ಸ್ವೀಕರಿಸುವುದು ಮಾಡುತ್ತಾ ಬಂದಿದ್ದರು. ಹೀಗಾಗಿ ಇವರ ಬಗ್ಗೆ ನನಗೆ ವಿಶ್ವಾಸ ಹಾಗೂ ಗೌರವ ಇತ್ತು. ಇವರು ನಿಜವಾದ ಧರ್ಮಭೀರು ಸ್ವಾಮೀಜಿ ಎಂದು ನಾವು ಇದುವರೆಗೆ ನಂಬಿದ್ದೆವು. ಆದರೆ, ಮಾಧ್ಯಮಗಳಲ್ಲಿ ವರದಿಯಾದ ವಿಚಾರ ನೋಡಿ ನಮಗೆ ಆಘಾತವಾಯಿತು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಸದಾ ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದೆವು. ಇದನ್ನೂ ಓದಿ: ಶಿವಕುಮಾರ್ ಒಬ್ಬ ನೀರಿನ ಕಳ್ಳ, ಆಯೋಗ್ಯ: ಈಶ್ವರಪ್ಪ ಕಿಡಿ

    ಅದಾದ ನಂತರ ಕರೆ ಮಾಡಿದ ಚಾಲಕ ರಾಜು, ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು. ಜೊತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು. ಕೂಡಲೇ ಅವನನ್ನು ಗದರಿಸಿ ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಸೂಚನೆ ಕೊಟ್ಟೆ. ಅದಾದ ನಂತರ ಆ ಬ್ಯಾಗ್‌ನಿಂದ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉಳಿದ ಹಣವನ್ನು ದಯಮಾಡಿ ನಮ್ಮ ಮಠದ ಪೂಜಾರಿ ಹಾಲಸ್ವಾಮಿಯವರಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದು ಹೇಳಿದ. ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವರಿಗೆ ಹಲವು ಬಾರಿ ಹೇಳಿದ. ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡೆ ತಲೆಹಾಕಲಿಲ್ಲ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಒಗ್ಗಟ್ಟು, ಸರ್ವಪಕ್ಷ ಸಂಸದರ ಬೆಂಬಲ: ಡಿಕೆಶಿ

    ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಮಬವರಿಗೆ ಈ ಹಣವನ್ನು ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ. ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ತಮ್ಮ ಗಮನಕ್ಕೆ ಈ ವಿಚಾರಗಳನ್ನು ತರುತ್ತಿದ್ದು, ಈ ವಿಚಾರಗಳು ಮುಂದಿನ ತನಿಖೆಗೆ ಅನುಕೂಲವಾಗುವುದು ಎಂಬ ಉದ್ದೇಶದಿಂದ ಹಂಚಿಕೊಳ್ಳುತ್ತಿದ್ದೇನೆ. ನನಗೆ ಜೀವ ಭಯವಿದ್ದು ರಕ್ಷಣೆ ನೀಡಬೇಕೆಂದು ಡಿಸಿಪಿಯವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ CWMA ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

    ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

    ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಉದ್ಯಮಿ ಗೋವಿಂದ್ ಬಾಬು ಪೂಜಾರಿ (Govind Babu Pujari) ಅವರ ಬಯೋಪಿಕ್ (Biopic) ಮುಹೂರ್ತ ಕಾಣಬೇಕಿತ್ತು. ತೆರೆಯ ಮರೆಯಲ್ಲಿ ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಅಚ್ಚರಿಯ ಸಂಗತಿ ಅಂದರೆ, ಈ ಸಿನಿಮಾವನ್ನು ಘೋಷಣೆ ಮಾಡಿದ್ದು ಆರೋಪಿ ಸ್ಥಾನದಲ್ಲಿರುವ ಹಾಲಶ್ರೀ (Abhinav Halashree) ಎನ್ನುವುದು ವಿಶೇಷ.

    ಟಿಕೆಟ್ ಗಾಗಿ ಹಣ ಕಳೆದುಕೊಂಡಿರುವ ಉದ್ಯಮಿ ಗೋವಿಂದಬಾಬು ಪೂಜಾರಿ ಜೀವನಾಧಾರಿತ ಸಿನಿಮಾ ಮಾಡುವುದಕ್ಕಾಗಿ ಮಂಜು ಕೋಟ್ಯಾನ್ ಎನ್ನುವವರು ಸಜ್ಜಾಗಿದ್ದರು. ಇವರ ನಿರ್ದೇಶನದಲ್ಲೇ ಸಿನಿಮಾ ಬರಬೇಕಿತ್ತು. ಕಳೆದ ಡಿಸೆಂಬರ್ ನಲ್ಲಿ ಪೂಜಾರಿ ಅವರ ಚೆಫ್ ಟಾಕ್  ಸಂಸ್ಥೆಯ 15ನೇ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿದ್ದ ಅಭಿನವ ಹಾಲಶ್ರೀ, ಪೂಜಾರಿ ಕುರಿತಾದ ಸಿನಿಮಾ ಮಾಡ್ತಿರೋ ಬಗ್ಗೆ ಅನೌನ್ಸ್ ಮಾಡಿದ್ದರು. ಅಭಿನವ ಹಾಲಶ್ರೀ ಕೈಯ್ಯಲ್ಲೇ ಸಿನಿಮಾದ ಮೊದಲ ಸೀನ್ ನ ಕ್ಲ್ಯಾಪ್ ಮಾಡಿಸಲು ಸಿದ್ದತೆ ಕೂಡ ಮಾಡಲಾಗಿತ್ತು.

    ಈ ಸಿನಿಮಾದಲ್ಲಿ ಕೇವಲ ಪೂಜಾರಿಯ ಜೀವನ ಕಥನ ಮಾತ್ರವಲ್ಲ, ಆರ್.ಎಸ್.ಎಸ್ ಸಂಘಪರಿವಾರ ಬಗ್ಗೆಯೂ ಹಲವು ಅಂಶಗಳು ಇದ್ದವು. ಆರ್.ಎಸ್.ಎಸ್ ಸಂಘ ಪರಿವಾರದಿಂದ ಬಂದವರು ಹೇಗೆ ನಾಯಕರುಗಳಾಗಿ ಬೆಳಿತಾರೇ ಅನ್ನೊ ಕಥಾಹಂದರ ಈ ಸಿನಿಮಾ ಹೊಂದಿತ್ತು. ದೈವಸುತಂ ಅಥವಾ ಮನಸಾವಾಚ ಕರ್ಮಣ ಅನ್ನೊ ಹೆಸರನ್ನ ಚಿತ್ರಕ್ಕಾಗಿ ಫೈನಲ್ ಮಾಡಲಾಗಿತ್ತು.

    ಈ ಕುರಿತು ಸಿನಿಮಾದ ನಿರ್ದೇಶಕ ಮಂಜು ಕೋಟ್ಯಾನ್ (Manju Kotyan) ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, ‘ಈ ಸಿನಿಮಾದಲ್ಲಿ ಸಾಮಾನ್ಯ ವ್ಯಕ್ತಿ ದೊಡ್ಡ ವ್ಯಕ್ತಿಯಾಗಿ ಬೆಳೆದ ಕಥೆಯಿದೆ. ಎಷ್ಟೋ ಜನ ಬಡವರಿಗೆ ಗೋವಿಂದ ಪೂಜಾರಿ ಸಹಾಯ ಮಾಡಿದ್ದಾರೆ. ಚಿತ್ರದಲ್ಲಿ ಸಂಘ ಪರಿವಾರ, ಆರ್ ಎಸ್ ಎಸ್ ನ ತತ್ವಗಳನ್ನು ಸಹ ಸೇರಿಸಲಾಗಿದೆ. ಗೋವಿಂದಬಾಬು ಪೂಜಾರಿಗೆ ಮೋಸದ ವಿಷಯ ಕೇಳಿದಾಗ ತುಂಬಾ ಬೇಸರವಾಯಿತು. ಈ ಮೋಸದ ವಿಷಯ ಕೆಲ ನಾಯಕರುಗಳಿಗೂ ಗೊತ್ತಿತ್ತು. ಸದ್ಯ ಸಿನಿಮಾಕ್ಕೆ ನಾಯಕನನ್ನು ಸೆಲೆಕ್ಟ್ ಮಾಡ್ತಾ ಇದ್ದೇವೆ. ಉಳಿದ ಸಿನಿಮಾದ ಅಪ್ ಡೇಟ್ ಗಳು ಗೋವಿಂದ ಪೂಜಾರಿ ಕೊಡ್ತಾರೆ’ ಎನ್ನುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿನವ ಹಾಲಶ್ರೀಗಿಲ್ಲ ಜಾಮೀನು – 10 ದಿನ ಪೊಲೀಸ್‌ ಕಸ್ಟಡಿಗೆ

    ಅಭಿನವ ಹಾಲಶ್ರೀಗಿಲ್ಲ ಜಾಮೀನು – 10 ದಿನ ಪೊಲೀಸ್‌ ಕಸ್ಟಡಿಗೆ

    ಬೆಂಗಳೂರು: ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ಉದ್ಯಮಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಅಭಿನವ ಹಾಲಶ್ರೀಯನ್ನು (Abhinava Halashree) 10 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

    ವಂಚನೆ ಪ್ರಕರಣದಲ್ಲಿ ಆರೋಪಿ ಹಾಲಶ್ರೀಗೆ ಜಾಮೀನು ನೀಡಲು ಕೋರ್ಟ್‌ ನಿರಾಕರಿಸಿದೆ. ಸೆ.29 ರ ತನಕ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ನೀಡಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೆ.29 ರಂದು ನಡೆಸಲಿದೆ. ಇದನ್ನೂ ಓದಿ: ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

    ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶ್ರೀ ನಾಪತ್ತೆಯಾಗಿದ್ದರು. ಒಡಿಶಾದಲ್ಲಿ ಮಾರುವೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀಯನ್ನು ರೈಲ್ವೆ ಪೊಲೀಸರ ನೆರವಿನಿಂದ ಬಂಧಿಸಿ ಬೆಂಗಳೂರಿಗೆ ವಾಪಸ್‌ ಕರೆತರಲಾಗಿತ್ತು. ಸಿಸಿಬಿ ಪೊಲೀಸರು ಇಂದು 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದರು.

    ಆರೋಪಿಯನ್ನು 14 ದಿನ ಪೊಲೀಸ್‌ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ವೇಳೆ ಹಾಲಶ್ರೀ ಪರ ವಕೀಲ ಅರುಣ್‌ ಶ್ಯಾಂ ಕೂಡ ಹಾಜರಿದ್ದರು. ಪೊಲೀಸ್‌ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ

    ಆರೋಪಿಗೆ ಜಾಮೀನು ನೀಡದಂತೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಕೀಲರು ಆಕ್ಷೇಪಿಸಿದರು. ತನಿಖೆ ನಡೆಯುವ ಮಧ್ಯೆ ಜಾಮೀನು ನೀಡಬಾರದು. ಸಾಕ್ಷಿ ನಾಶವಾಗುತ್ತದೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು 10 ದಿನ ಪೊಲೀಸ್‌ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯರಾತ್ರಿವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ಹಾಲಶ್ರೀ ವಿಚಾರಣೆ- ಇಂದು ಕೋರ್ಟ್ ಮುಂದೆ ಹಾಜರು

    ಮಧ್ಯರಾತ್ರಿವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ಹಾಲಶ್ರೀ ವಿಚಾರಣೆ- ಇಂದು ಕೋರ್ಟ್ ಮುಂದೆ ಹಾಜರು

    ಬೆಂಗಳೂರು: ವಂಚಕಿ ಚೈತ್ರಾ ಕುಂದಾಪುರ ಡೀಲ್ ಪ್ರಕರಣದ 3ನೇ ಆರೋಪಿ ಅಭಿನವ ಹಾಲಶ್ರೀಯನ್ನು (Abhinava Halashree) ಕೊನೆಗೂ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಕಟಕ್ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿ ಹಾಲಶ್ರೀಯನ್ನ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಅಭಿನವ ಹಾಲಶ್ರೀಗೆ 36 ವರ್ಷವಾಗಿರೋದ್ರಿಂದ ಬಿಪಿ, ಶುಗರ್, ಅಸ್ತಮಾ ಸಮಸ್ಯೆಯಿಲ್ಲ. ಎಲ್ಲವೂ ನಾರ್ಮಲ್ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಂತರ ಮಧ್ಯರಾತ್ರಿಯವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಹಾಲಶ್ರೀ ಸ್ಪಂದಿಸಿದ್ದು, ಚೈತ್ರಾ, ಗಗನ್ ಇಬ್ಬರ ಬಗ್ಗೆಯೂ ಉತ್ತರಿಸಿದ್ದಾರೆ. ಒಟ್ಟಿನಲ್ಲಿ ಹಣಕಾಸಿನ ವ್ಯವಹಾರದ ಬಗ್ಗೆ ಹಾಲಶ್ರೀ ಸಿಸಿಬಿ ಅಧಿಕಾರಿಗಳ (CCB Officers) ಮುಂದೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

    ಇಂದು ಬೆಂಗಳೂರಿನ ಎಸಿಎಂಎಂ ಕೋರ್ಟ್‍ಗೆ ಹಾಲಶ್ರೀಯನ್ನು ಸಿಸಿಬಿ ಹಾಜರುಪಡಿಸಲಿದ್ದು, ಕೋರ್ಟಿಗೆ ಹಾಜರುಪಡಿಸಿದ ನಂತರ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ. ಹೀಗಾಗಿ ಅದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಸ್ಟಡಿಗೆ ಪಡೆದ ಬಳಿಕ ಸಿಸಿಬಿ ಮಹಜರು ಪ್ರಕ್ರಿಯೆ ನಡೆಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

    ಹಾಲಶ್ರೀ ಬಂಧಿಸಲು ಅರ್ಚಕರ ವೇಷದಲ್ಲಿ ಫೀಲ್ಡ್‌ಗಿಳಿದಿದ್ದ ಅಧಿಕಾರಿಗಳು!

    ಬೆಂಗಳೂರು: ಕೋಟಿ ಕೋಟಿ ವಂಚನೆ ಪ್ರಕರಣದ ಚೈತ್ರಾ ವಂಚನೆಯ ಕೂಟದಲ್ಲಿದ್ದ ಎ3 ಆರೋಪಿ ಹಾಲಶ್ರೀ (Halashree) ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಹಾಲಶ್ರೀ ಬಂಧನಕ್ಕೆ ಮಡಿತೊಟ್ಟು ಅಖಾಡಕ್ಕೆ ಇಳಿದಿದ್ದ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಲು ರೋಚಕವಾಗಿದೆ.

    ಎಂಟು ದಿನಗಳಿಂದ ಮೊಬೈಲ್ ಸ್ವಿಚ್ಡ್ ಆಫ್ ಮಾಡ್ಕೊಂಡು ತಲೆಮರೆಸಿಕೊಂಡಿದ್ದ ಹಾಲಶ್ರೀ ಹೈದರಾಬಾದ್ (Hyderabad) ಕಡೆಯಿಂದ ಉತ್ತರ ಭಾರತದ ಕಡೆ ಹೋಗಿರೋ ಮಾಹಿತಿ ಸಿಕ್ಕಿತ್ತು. ಹಾಲಶ್ರೀ ಮಠಗಳು, ದೇವಸ್ಥಾನಗಳಲ್ಲಿ ಇರಬಹುದೆಂಬ ಮಾಹಿತಿ ಆಧಾರದಲ್ಲಿ ಸಿಸಿಬಿಯ ಶಿವಕುಮಾರ್, ರಾಘವೇಂದ್ರ, ಸುರೇಶ್, ಅಣ್ಣಪ್ಪ ಅರ್ಚಕರ ವೇಷ ಹಾಕಿದ್ರು. ಶೃಂಗೇರಿ ದೇವಸ್ಥಾನದ ಅರ್ಚಕರ ರೀತಿ ಮಡಿಬಟ್ಟೆ ಧರಿಸಿ ಫೀಲ್ಡ್ ಗೆ ಇಳಿದಿದ್ರು.

    ನಾಲ್ವರು ಅರ್ಚಕರ ವೇಷದಲ್ಲಿ ಪ್ರತಿಯೊಂದು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸೋ ನಾಟಕವಾಡಿದ್ರು. ಒಂದೊಂದೇ ಮಠ, ದೇವಸ್ಥಾನ ಮುಗಿಸಿ ಒಡಿಶಾದ ಪೂರಿ ಜಗನ್ನಾಥ್ ದೇವಸ್ಥಾನಕ್ಕೆ ಪೊಲೀಸರು ಹೋಗಿದ್ದರು. ಈ ವೇಳೆ ಪೂರಿ ಜಗನ್ನಾಥ್ ದೇವಸ್ಥಾನದಲ್ಲಿ ಹಾಲಶ್ರೀ ಇರೋದು ಪತ್ತೆಯಾಗಿತ್ತು. ನಾವು ಶೃಂಗೇರಿಯಿಂದ ಬಂದಿದ್ದೀವಿ, ಗಣೇಶ ಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಬೇಕು ಅಂತ ಹೇಳಿದ್ರು. ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ದೆಹಲಿಯಲ್ಲಿ ರಾಜ್ಯದ ಎಲ್ಲಾ ಸಂಸದರೊಂದಿಗೆ ಸಭೆ: ಡಿಕೆಶಿ

    ಈ ಮಾತನ್ನು ಕೇಳಿಸಿಕೊಂಡ ಹಾಲಶ್ರೀ ತಕ್ಷಣ ದೇವಸ್ಥಾನ ತೊರೆದು ಒಡಿಸ್ಸಾದ (Odisha) ಭುವನೇಶ್ವರದಿಂದ ಬಿಹಾರದ (Bihar) ಭೋದ್ಗಯ್‍ಗೆ ರೈಲು ಟಿಕೆಟ್ ಬುಕ್ ಮಾಡಿದ್ರು. ಭುವನೇಶ್ವರ ರೈಲ್ವೆ ನಿಲ್ದಾಣಕ್ಕೆ ಪೊಲೀಸರು ಬರಬಹುದು ಅಂತಾ ಶಂಕಿಸಿ ಅಲ್ಲಿಂದ 25 ಕಿ.ಮೀ. ಇರುವ ಕಟಕ್ ರೈಲ್ವೆ ನಿಲ್ದಾಣಕ್ಕೆ (Katak Railway Station) ಬಸ್‍ನಲ್ಲಿ ಪಯಾಣಿಸಿದ್ರು. ಅಷ್ಟೊತ್ತಿಗೆ ಕಟಕ್ ರೈಲ್ವೆ ನಿಲ್ದಾಣದ ಪೊಲೀಸರಿಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ರು. ಕಟಕ್ ರೈಲ್ವೆ ನಿಲ್ದಾಣಕ್ಕೆ ಹಾಲಶ್ರೀ ಬರ್ತಿದ್ದಂತೆ ಒಡಿಸ್ಸಾ ಪೊಲೀಸರು ಬಂಧಿಸಿದ್ರು.

    ಉದ್ಯಮಿಗೆ ಕೋಟಿ ಕೋಟಿ ವಂಚನೆ ಕೇಸ್‍ನಲ್ಲಿ ಎ-3 ಹಾಲಶ್ರೀಯ ಬಂಧನವಾಗಿದೆ. ಈಗ ಇರೋದು ಒಂದೇ ಕುತೂಹಲ. ಅಂದು ಚೈತ್ರಾ (Chaitra Kundapur) ಸ್ವಾಮೀಜಿ ಅರೆಸ್ಟ್ ಬಳಿಕ ದೊಡ್ಡವರ ಹೆಸರು ಹೊರಗೆ ಬರುತ್ತೆ ಅಂತ ಹೇಳಿದ್ದಳು. ಇದೀಗ ಸಿಸಿಬಿ ಪೊಲೀಸ್ರು ಅಭಿನವ ಹಾಲಶ್ರೀ ಸ್ವಾಮೀಜಿ ಅರೆಸ್ಟ್ ಮಾಡಿದ್ದಾರೆ. ಇಂದು ಸ್ವಾಮೀಜಿಯನ್ನ ಕಸ್ಟಡಿಗೆ ಪಡೆದು ಅಧಿಕೃತವಾಗಿ ವಿಚಾರಣೆ ಆರಂಭಿಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಟಿ ಕೋಟಿ ವಂಚನೆ ಪ್ರಕರಣ – ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಾಧ್ಯತೆ

    ಕೋಟಿ ಕೋಟಿ ವಂಚನೆ ಪ್ರಕರಣ – ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಾಧ್ಯತೆ

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿ ಬಂಧನಕ್ಕೊಳಗಾಗಿರುವ ಚೈತ್ರಾ (Chaitra Kundapura) ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀ (Abhinava Halashri) ನಿರೀಕ್ಷಣಾ ಜಾಮೀನು ಅರ್ಜಿ ವಿಚಾರವಾಗಿ ಇಂದು (ಮಂಗಳವಾರ) ಸಿಸಿಬಿ (CCB) ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ.

    ಸದ್ಯ ತಲೆಮರೆಸಿಕೊಂಡಿರುವ ಹಾಲಶ್ರೀ, ಪ್ರಕರಣ ದಾಖಲಾಗಿ ಹತ್ತು ದಿನ ಕಳೆದರೂ ಪತ್ತೆಯಾಗಿಲ್ಲ. ಆರೋಪಿ ಬಂಧನಕ್ಕೆ ಸಿಸಿಬಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಂಧನಕ್ಕೆ ಅಧಿಕಾರಿಗಳ ತಂಡ ಹೈದರಾಬಾದ್‍ಗೆ ತೆರಳಿದೆ. ಅಲ್ಲದೇ ಸ್ವಾಮೀಜಿ ಆಪ್ತರನ್ನು ವಿಚಾರಣೆ ನಡೆಸಿ ಅಡಗಿರುವ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಕೇಸ್- RSS ಕದ ತಟ್ಟಿದ್ದ ಗೋವಿಂದ ಪೂಜಾರಿ!

    ಆರೋಪಿ ಹಾಲಶ್ರೀ ಫೋನ್ ಬಳಸದೆ ಪದೇ ಪದೇ ಇರುವ ಸ್ಥಳ ಬದಲಾಯಿಸುತ್ತಿರುವ ಮಾಹಿತಿ ಸಿಸಿಬಿಗೆ ದೊರೆತಿದೆ. ಇದೇ ಕಾರಣಕ್ಕೆ ಆರೋಪಿಯ ಆತ್ಮೀಯರು ಹಾಗೂ ಕೊನೆ ಕ್ಷಣದ ಕರೆ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಚೈತ್ರಾ ಹೊರತು ಪಡಿಸಿ ಉಳಿದೆಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳು ಚೈತ್ರಾ ಹಾಗೂ ಗಗನ್ ವಿರುದ್ಧ ಬೆರಳು ಮಾಡಿದ್ದಾರೆ.

    ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಎ1 ಆರೋಪಿ ಚೈತ್ರಾ ಮೌನಕ್ಕೆ ಜಾರಿದ್ದು, ಸಿಸಿಬಿ ಅಧಿಕಾರಿಗಳ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡುತ್ತಿಲ್ಲ. ಇದೇ ಕಾರಣಕ್ಕೆ 30 ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ಆರೋಪಿಗಳ ಮೊಬೈಲ್‍ಗಳಲ್ಲಿನ ಎಲ್ಲಾ ಸಂದೇಶಗಳು, ಕರೆಗಳು, ಫೋಟೋಗಳು ಹಾಗೂ ಕರೆಯ ಡೀಟೆಲ್ಸ್ ಡಿಲೀಟ್ ಆಗಿದ್ದು, ರಿಟ್ರೀವ್‍ಗೆ ಕೊಡಲಾಗಿತ್ತು. ಇಂದು ಕೆಲವು ಆರೋಪಿಗಳ ಮೊಬೈಲ್‍ನ ರಿಟ್ರೀವ್ ರಿಪೋರ್ಟ್ ಬರುವ ಸಾಧ್ಯತೆ ಇದ್ದು ತನಿಖೆಯಲ್ಲಿ ಮಹತ್ತರ ಸುಳಿವು ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: CCB ಅಧಿಕಾರಿಗಳ ಮುಂದೆ ಮೌನಾಚರಣೆ – ಚೈತ್ರಾಳ ಮುಂದಿರುವ ಆ 30 ಪ್ರಶ್ನೆಗಳೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಡೀಲ್ ಪ್ರಕರಣಕ್ಕೂ ಹಿರೇಹಡಗಲಿ ಶ್ರೀಮಠಕ್ಕೂ ಸಂಬಂಧವಿಲ್ಲ: ಕಿರಿಯ ಹಾಲಶ್ರೀ ಸ್ಪಷ್ಟನೆ

    ಚೈತ್ರಾ ಡೀಲ್ ಪ್ರಕರಣಕ್ಕೂ ಹಿರೇಹಡಗಲಿ ಶ್ರೀಮಠಕ್ಕೂ ಸಂಬಂಧವಿಲ್ಲ: ಕಿರಿಯ ಹಾಲಶ್ರೀ ಸ್ಪಷ್ಟನೆ

    ಬಳ್ಳಾರಿ: ಚೈತ್ರಾ ಕುಂದಾಪುರ (Chaithra Kundapura) ಡೀಲ್ ಪ್ರಕರಣದ 3ನೇ ಆರೋಪಿಯಾಗಿರುವ, ಅಭಿನವ ಹಾಲಶ್ರೀ ಈವರೆಗೂ ಪತ್ತೆಯಾಗಿಲ್ಲ. ಇತ್ತ ಮಠದ ಭಕ್ತರಲ್ಲೂ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಾಲಸ್ವಾಮಿ ಮಠದ (Halashri Mutt) ಕಿರಿಯ ಹಾಲಶ್ರೀಗಳು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

    ಹಿರೇಹಡಗಲಿ ಮಠಕ್ಕೆ ನೂರಾರು ವರ್ಷಗಳ ಪರಂಪರೆ ಇದೆ. ಜನಸಾಮಾನ್ಯರಿಗೆ ಇರುವ ಮಠ ಇದಾಗಿದೆ, ಜಾತಿ ವರ್ಗದ ಕಳೆ ಕಿತ್ತು ಸಾಮರಸ್ಯ ಬಿತ್ತಿದೆ. ನೂರಾರು ಧಾರ್ಮಿಕ ಕಾರ್ಯಗಳನ್ನ ಮಾಡಿಕೊಂಡು ಬಂದಿದೆ. ಸದ್ಯ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆಘಾತ ಆಗಿದೆ. ಆ ಪ್ರಕರಣಕ್ಕೂ ಶ್ರೀಮಠಕ್ಕೂ ಸಂಬಂಧ ಇಲ್ಲ. ಪಾರದರ್ಶಕ ತನಿಖೆ ಮಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಮನವಿ ಮಾಡಿದ್ದಾರೆ.

    ಅಭಿನವ ಹಾಲಶ್ರೀಗಳ (Abhinava Halashri) ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿ, ಪ್ರಕರಣ ಇನ್ನೂ ತನಿಕೆ ಹಂತದಲ್ಲಿದೆ, ಭಕ್ತರು ವಿಚಲಿತರಾಗೋದು ಬೇಡ. ಸಹನೆಯಿಂದ ಎಲ್ಲ ಎದುರಿಸೋಣ. ಇದು ಪುತ್ರ ವರ್ಗ ಮಠ, ನಾಲ್ಕು ಪೂಜ್ಯರಿದ್ದಾರೆ. ಪ್ರತಿ ವರ್ಷ ಒಬ್ಬೊಬ್ಬರು ಮಠದ ಜವಾಬ್ದಾರಿ ಹೊರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಯಮಿಗೆ ವಂಚನೆ ಪ್ರಕರಣ – ಹಾಲಶ್ರೀ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ

    ಕೆಲವರು ನಮ್ಮ ಅಭಿಪ್ರಾಯ ಪಡೆಯದೇ ಮಠದ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನಾವು ಕೂಡ ಕಾನೂನಿನ ಮೇಲೆ ನಂಬಿಕೆ ಇಟ್ಟವರು. ಅವರು ಎಲ್ಲಿ ಹೋಗುತ್ತಿದ್ದರು, ಏನು ಮಾಡುತ್ತಿದ್ದರು? ಎಂಬುದೇ ನಮಗೆ ಗೊತಿಲ್ಲ. ಆದ್ರೆ ಅವರು ಸಾಮಾಜಿಕ ಕೆಲಸ ಮಾಡುತ್ತಿದ್ದರು ಎಂಬುದು ನಮ್ಮ ನಂಬಿಕೆ ಎಂದು ಹೇಳಿದ್ದಾರೆ. 

    ವಂಚನೆ ಪ್ರಕರಣ ಬೇರೆ-ಬೇರೆ ತಿರುವು ಪಡೆಯುತ್ತಿದೆ. ಕಾನೂನಿನಡಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಸ್ವಾಮೀಜಿಯನ್ನ ಕರೆದುಕೊಂಡು ಉಪಯೋಗ ಮಾಡಿಕೊಂಡಿದ್ದಾರೆ. ಉಪಯೋಗಿಸಿಕೊಂಡವರು ಯಾರೂ ಇಲ್ಲ, ಎಲ್ಲಿದ್ದಾರೆ ಇವರ ಜೊತೆ ಓಡಾಡಿದವರು, ಒಬ್ಬರೇ ಓಡಾಟ ಮಾಡುತ್ತಿದ್ರು, ಏನ್ ಮಾಡುತ್ತಿದ್ರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್‌ ಮಾಡಿ ಹಿರಿಯ ಪೊಲೀಸ್‌ ಆಡಿದ ಕೊನೆ ಮಾತು

    ಈ ಹಿಂದೆಯೂ ಹಲವು ಬಾರಿ ಹಾಲಶ್ರೀಗಳಿಗೆ ಕೆಲ ಕಾರ್ಯಕ್ರಮಗಳಿಗೆ ಹೋಗೋದು ಬೇಡ ಅಂತಾ ಹೇಳಿದ್ವಿ. ಸ್ವಾಮೀಜಿಗಳು ರಾಜಕೀಯವಾಗಿ ಹೋಗಬಾರದಿತ್ತು. ತಪ್ಪು ಮಾಡಿಲ್ಲ ಅಂದ್ರೆ ಹೆದರುವ ಅವಶ್ಯಕತೆಯಿಲ್ಲ. ಅವರು ನಿರ್ದೋಷಿಯಾಗಿ ಬರಬೇಕು ಎಂಬುದೊಂದೇ ಮಠದ ಭಕ್ತರ ಆಶಯ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]