Tag: ಅಭಿನವ್

  • ಜಗಳವಾಡಿ ಕ್ಷಮೆ ಕೇಳುವುದರೊಳಗೆ ತಂದೆ ಹೆಣವಾಗಿದ್ದರು: ಅಭಿನವ್

    ಜಗಳವಾಡಿ ಕ್ಷಮೆ ಕೇಳುವುದರೊಳಗೆ ತಂದೆ ಹೆಣವಾಗಿದ್ದರು: ಅಭಿನವ್

    ಬಿಗ್‍ಬಾಸ್ ಮಿನಿ ಸೀಸನ್‍ನ ಸ್ಪರ್ಧಿಯಾಗಿರುವ ಧಾರವಾಹಿ ನಟ ಅಭಿನವ್ ತಮ್ಮ ತಂದೆ ಸಾವನ್ನಪ್ಪಿರುವ ದಿನವನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಬಿಗ್‍ಬಾಸ್ ವೇದಿಕೆ ಮೇಲೆ ನೋವುಗಳನ್ನು ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಎಲ್ಲರೂ ತಮ್ಮ ನೋವುಗಳನ್ನು ಹೇಳಿಕೊಂಡಿದ್ದಾರೆ. ಅದೇ ರೀತಿ ಅಭಿನವ್ ತಾವು ತಂದೆ ಕಳೆದುಕೊಂಡ ವಿಚಾರವನ್ನು ಹೇಳಿಕೊಂಡಿದ್ದಾರೆ. ನಾವು ದೆಹಲಿಗೆ ಹೊರಟಿದ್ದೆವು. ನನ್ನ ತಂದೆ ಹಾಗೂ ನನ್ನ ನಡುವೆ ಜಗಳವಾಗಿತ್ತು. ಮೂರು ದಿನ ಅವರನ್ನು ಭೇಟಿ ಮಾಡಿರಲಿಲ್ಲ. ಅಂದು ಅವರು ಮನೆಗೆ ಬರಬೇಕಿತ್ತು. ಆದರೆ ಬಂದಿದ್ದು ಅವರ ಹೆಣ. ನಾನು ಅವರ ಬಳಿ ಕ್ಷಮೆ ಕೇಳಬೇಕಿತ್ತು. ಅದಕ್ಕೂ ಅವಕಾಶ ನೀಡದೇ ಅವರು ನನ್ನನ್ನು ಬಿಟ್ಟು ಹೋದರು ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:  ಸಾಯೋಕಿಂತ ಮುಂಚೆ ನನ್ನ ಅಪ್ಪನ ನೋಡ್ಬೇಕು: ವೈಷ್ಣವಿ

    ಅಭಿನವ್ ಹುಟ್ಟಿದ್ದು, ಬೆಳೆದಿದ್ದು ದೆಹಲಿಯಲ್ಲಿ. ಅವರ ಕುಟುಂಬ ದೆಹಲಿಯಲ್ಲಿದ್ದ ಕಾರಣ ಅವರು ಅಲ್ಲಿಯೇ ಇರುವ ಅನಿವಾರ್ಯತೆ ಎದುರಾಗಿತ್ತು. ಅಭಿನವ್ ಅವರು ದೆಹಲಿಯಲ್ಲಿದ್ದಾಗ ತಂದೆಯನ್ನು ಕಳೆದುಕೊಂಡೆ. ನಾನು ಕ್ಷಮೆ ಕೇಳುವ ಮೊದಲೇ ತಂದೆ ಮೃತಪಟ್ಟಿದ್ದಾರೆ ಎಂದು ಅಭಿನವ್ ಹೇಳುವಾಗ ಸ್ಪರ್ಧಿಗಳು ಕೂತಲ್ಲಿಯೇ ಕಣ್ಣೀರು ಹಾಕಿದ್ದಾರೆ.

    ಅಭಿನವ್ ಖಾಸಗಿ ವಾಹಿನಿಯಲ್ಲಿ ಪ್ರಸಸಾರವಾಗುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ತೆರೆಮೇಲಿನ ಪಾತ್ರವನ್ನು ನೋಡಿ ಇಷ್ಟಪಟ್ಟಿದ್ದ ವೀಕ್ಷಕರಿಗೆ ಈಗ ಅಭಿನವ್ ಅವರ ಜೀವನ ಕಥೆ ಕೇಳಿ ಸಾಕಷ್ಟು ನೋವಾಗಿದೆ. ಬಿಗ್‍ಬಾಸ್ ಮಿನಿ ಸೀಸನ್ ಮೂಲಕ ಧಾರವಾಹಿಯ ನಟ, ನಟಿಯರ ಈ ಹಿಂದೆ ಪಟ್ಟಿರುವ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.