Tag: ಅಭಿನಂದನ್

  • ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ಶತ್ರು ಸೇನೆಗಳಿಂದ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಫೈಟರ್‌ ಜೆಟ್‌ಗಳಿಗೆ ಶೀಘ್ರವೇ ಬರಲಿದೆ ಡಿಜಿಟಲ್‌ ನಕ್ಷೆ

    ಬೆಂಗಳೂರು: ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಪೈಲಟ್‌ಗಳಿಗೆ ದಿಕ್ಕು ತಪ್ಪಿಸುವುದನ್ನು ತಡೆಯಲು ಫೈಟರ್‌ಜೆಟ್‌ಗಳಿಗೆ ಶೀಘ್ರದಲ್ಲೇ ಡಿಜಿಟಲ್‌ ನಕ್ಷೆ (India Made Digital Maps) ಗಳನ್ನು ಅಳವಡಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಸಜ್ಜಾಗಿರುವುದಾಗಿ ಹೆಚ್‌ಎಎಲ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ.

    ಡಿಜಿಟಲ್‌ ನಕ್ಷೆ (Digital Maps) ಹೊಂದುವುದರಿಂದ ಪೈಲಟ್‌ಗಳು ಅಚಾನಕ್ಕಾಗಿ ಗಡಿ ದಾಟುವುದಿಲ್ಲ. ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ಅವರ ರೀತಿ ಮತ್ತೊಂದು ಘಟನೆ ಸಂಭವಿಸಬಾರದು. ಅದಕ್ಕಾಗಿ ಈ ಡಿಜಿಟಲ್‌ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇನ್ಮುಂದೆ ಅವರು ತಮ್ಮ ಕೈಯಲ್ಲಿ ಮ್ಯಾಪ್‌ ಹಿಡಿದಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಹೆಚ್‌ಎಎಲ್‌ನ ಎಂಜಿನಿಯರಿಂಗ್‌ ಮತ್ತು ಆರ್‌&ಡಿ ವಿಭಾಗದ ನಿರ್ದೇಶಕ ಡಿ.ಕೆ ಸುನೀಲ್‌ ಹೇಳಿದ್ದಾರೆ.

    ಡಿಜಿಟಲ್‌ ನಕ್ಷೆಯಿಂದ ಏನು ಅನುಕೂಲ?
    ಡಿಜಿಟಲ್‌ ನಕ್ಷೆಯಿಂದ ವಿಮಾನ ಹಾರಾಟ ಸಂದರ್ಭದಲ್ಲಿ ಪೈಲಟ್‌ಗಳು ಕಾಕ್‌ಪಿಟ್ ಡಿಸ್‌ಪ್ಲೇನಲ್ಲಿ (Cockpit Display) ನಕ್ಷೆಯನ್ನು ಪರಿಶೀಲಿಸಬಹುದು. 2ಡಿ ಮತ್ತು 3ಡಿ ರೂಪದಲ್ಲಿ ನಕ್ಷೆ ಲಭ್ಯವಿರಲಿದ್ದು, ಪೈಲಟ್‌ಗಳು ಗುಡ್ಡಗಾಡು ಪ್ರದೇಶದಲ್ಲಿದ್ದರೆ ಮೊದಲೇ ಎಚ್ಚರಿಸುತ್ತದೆ. ಹಾಗಾಗಿ ಎತ್ತರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಉಂಟಾಗುವ ಅಪಘಾತಗಳನ್ನು ತಡೆಯಲು ನೆರವಾಗುತ್ತದೆ. ಶತ್ರು ಸೇನಾ ನೆಲೆಗಳ ಬಗ್ಗೆಯೂ ಈ ನಕ್ಷೆ ಮಾಹಿತಿ ನೀಡುತ್ತದೆ ಎಂದು ಡಿ.ಕೆ ಸುನೀಲ್‌ ತಿಳಿಸಿದ್ದಾರೆ.

    ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಹೆಚ್ಚಿಸಲು ಡಿಜಿಟಲ್ ನಕ್ಷೆಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಿ ಉತ್ಪಾದಿಸಲಾಗುತ್ತದೆ. ಎಲ್ಲಾ ಫೈಟರ್‌ ಜೆಟ್‌ಗಳಲ್ಲೂ ಡಿಜಿಟಲ್‌ ನಕ್ಷೆಯನ್ನು ಅಳವಡಿಸಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳನ್ನೂ ದೇಶದಲ್ಲೇ ತಯಾರಿಸಲಾಗಿದೆ. ಈ ಮೊದಲು, ಈ ನಕ್ಷೆಗಳನ್ನು ವಿದೇಶದಲ್ಲಿ ಮಾತ್ರ ತಯಾರಿಸಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಶತ್ರು ಸೇನೆ ವಿರುದ್ಧ ಪರಾಕ್ರಮ ಮೆರೆದಿದ್ದ ಅಭಿನಂದನ್‌:
    2019ರ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರವಾಗಿ ಏರ್‌ಸ್ಟ್ರೈಕ್ ನಡೆಸಿ ಭಾರತ ಪ್ರತಿಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಪ್ರದೇಶದ ಬಾಲಾಕೋಟ್‌ನಲ್ಲಿ ಜೈಷೆ ಮೊಹಮದ್ ಸಂಘಟನೆಗಳ ಉಗ್ರರ ಶಿಬಿರಗಳ ಮೇಲೆ 2019 ರ ಫೆಬ್ರವರಿ 26 ರಂದು ಭಾರತ ವೈಮಾನಿಕ ದಾಳಿ ನಡೆಸಿತ್ತು. ಇದನ್ನೂ ಓದಿ: ದೇಶ-ವಿದೇಶಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ವೈರಸ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?

    ಫೆ.26ರ ನಸುಕಿನ ಜಾವ 3.30 ರಿಂದ 3.55ರ ನಡುವೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್ ಉಗ್ರರ ಶಿಬಿರಗಳ ಮೇಲೆ 12 ಮಿರಾಜ್-2000 ಯುದ್ಧ ವಿಮಾನಗಳು ದಾಳಿ ನಡೆಸಿದ್ದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿಮೀ ಒಳನುಗ್ಗಿ ಭಾರತೀಯ ವಾಯುಪಡೆ ಈ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಭಾರತ ತನ್ನ ನೆಲದಲ್ಲಿ ದೊಡ್ಡ ದಾಳಿ ನಡೆಸಿದೆ ಎಂದು ಗೊತ್ತಾದ ತಕ್ಷಣ ಪಾಕ್ ಕೂಡ ಪ್ರತಿ ದಾಳಿ ಮಾಡಿತ್ತು. ಪಾಕ್‌ನ ಪ್ರತಿದಾಳಿಯ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ತಮ್ಮ ಮಿಗ್-21 ರಿಂದ ಪಾಕಿಸ್ತಾನದ ಎಫ್-16 ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದರು. ಅದಾದ ಬಳಿಕ ಅಭಿನಂದನ್‌ ಜೆಟ್‌ಗೆ ಹಾನಿಯಾಗಿತ್ತು. ಮಿಗ್-21 ಹಾನಿಗೀಡಾದ ಕಾರಣ ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಜಿಗಿದು, ಸಿಕ್ಕಿಬಿದ್ದಿದ್ದರು. ಮೂರ್ನಾಲ್ಕು ದಿನಗಳ ಬಳಿಕ ಅವರನ್ನು ಭಾರತಕ್ಕೆ ಕರೆತರಲಾಯಿತು.

    ಇಂತಹ ಯುದ್ಧದ ಸಂದರ್ಭದಲ್ಲಿ ಡಿಜಿಟಲ್‌ ನಕ್ಷೆಗಳು ಪೈಲಟ್‌ಗಳಿಗೆ ಅನುಕೂಲವಾಗುತ್ತವೆ, ಪೈಲಟ್‌ಗಳು ದಿಕ್ಕು ತಪ್ಪಿಹೋಗದಂತೆ ನೋಡಿಕೊಳ್ಳುತ್ತವೆ. ಗಡಿಯೊಳಗೆ ತನ್ನ ನಿಯಂತ್ರಣ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಯುದ್ಧ ವಿಮಾನಗಳಿಗೆ ಡಿಜಿಟಲ್‌ ನಕ್ಷೆಯನ್ನು ಅಳವಡಿಸಲು ಹೆಚ್‌ಎಎಲ್‌ ಮುಂದಾಗಿದೆ. ಈಗಾಗಲೇ ಈ ಕಾರ್ಯ ಆರಂಭಗೊಂಡಿದೆ. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

  • ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ಜೈಪುರ: ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯು ಸೇನೆಯ ಮಿಗ್-21 ವಿಮಾನ ಇಂದು ಸಂಜೆ ಪತನಗೊಂಡಿದೆ.

    ಮಿಗ್-21 ವಿಮಾನ ಪತನದ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಜೈಸಲ್ಮೇರ್‍ನ ಎಸ್‍ಪಿ ಅಜಯ್ ಸಿಂಗ್, ನಮಗೆ ಇಂದು ಸಂಜೆ ಭಾರತೀಯ ಸೇನೆಯ ಮಿಗ್-21 ವಿಮಾನ ಮರುಭೂಮಿ ರಾಷ್ಟ್ರೀಯ ಉದ್ಯಾನವನ (DNP) ಬಳಿ ಪತನ ಆಗಿರುವ ಬಗ್ಗೆ ಮಾಹಿತಿ ಬಂದಿದೆ. ನಾವು ವಿಮಾನ ಪತನಗೊಂಡ ಸ್ಥಳಕ್ಕೆ ತೆರಳುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 44 ವರ್ಷ ಹಳೆಯ ಕಾರನ್ನು ಯಾರೂ ಬಳಸಲಾರರು – ಮಿಗ್ ಬಳಕೆ ಕುರಿತು ಧನೋವಾ ಮಾತು

    ವಿಮಾನ ಪತನಗೊಂಡಿರುವುದನ್ನು ಮೊದಲು ಅರಣ್ಯ ಅಧಿಕಾರಿಗಳು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಾಯು ಸೇನೆ ಪೈಲಟ್ ಹುತಾತ್ಮರಾಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿದೆ.

    ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟು 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಇದನ್ನೂ ಓದಿ: ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

    ಸದ್ಯ ಭಾರತದಲ್ಲಿ ಈಗ 100ಕ್ಕೂ ಅಧಿಕ ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯಗೊಂಡು ಪತನದ ಸೂಚನೆ ಸಿಕ್ಕಿದ ಕೂಡಲೇ ಹಲವು ಪೈಲಟ್ ಗಳು ಎಜೆಕ್ಟ್ ಆಗದೇ ವಿಮಾನವನ್ನು ಜನವಸತಿ ಇಲ್ಲದ ಕಡೆಗೆ ತಿರುಗಿಸಿ ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

    “ಹಾರುವ ಶವಪೆಟ್ಟಿಗೆ” ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿದ್ದರು. 2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು.

  • ಅಭಿನಂದನ್‍ಗೆ ಮಾರ್ಗದರ್ಶನ ನೀಡಿದ್ದ ಐಎಎಫ್ ಮಹಿಳಾ ನಿಯಂತ್ರಕಿಗೆ ಯುಧ್ ಸೇವಾ ಪದಕ

    ಅಭಿನಂದನ್‍ಗೆ ಮಾರ್ಗದರ್ಶನ ನೀಡಿದ್ದ ಐಎಎಫ್ ಮಹಿಳಾ ನಿಯಂತ್ರಕಿಗೆ ಯುಧ್ ಸೇವಾ ಪದಕ

    ನವದೆಹಲಿ: ಫೆಬ್ರವರಿ 27ರಂದು ಪಾಕಿಸ್ತಾನದ ಮತ್ತು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳ ನಡುವೆ ನಡೆದ ಡಾಗ್‍ಫೈಟ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆ ವೇಳೆ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್‍ರಿಗೆ ಮಾರ್ಗದರ್ಶನ ನೀಡಿದ ಐಎಎಫ್ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್‍ಗೆ ‘ಯುದ್ಧ ಸೇವಾ ಪದಕ’ ನೀಡಿ ಗೌರವಿಸಲಾಗಿದೆ.

    ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರು ಫೆಬ್ರವರಿ 27ರಂದು ನಡೆದ ಡಾಗ್‍ಫೈಟ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಅಭಿನಂದನ್ ಅವರಿಗೆ ಮಿಂಟಿ ಅಗರ್ವಾಲ್ ಅವರು ಮಾರ್ಗದರ್ಶನ ನೀಡಿ ಸಹಕರಿಸಿದ್ದರು. ಆದ್ದರಿಂದ ಮಿಂಟಿ ಅಗರ್ವಾಲ್ ಅವರಿಗೆ ಭಾರತ ಸರ್ಕಾರ ಯುಧ್ ಸೇವಾ ಪದಕ ನೀಡಿ ಗೌರವಿಸಿದೆ.

    ಫೆ.27ರಂದು ಕರ್ತವ್ಯದಲ್ಲಿದ್ದ 7 ಮಂದಿ ಫೈಟರ್ ವಿಮಾನ ನಿಯಂತ್ರಕರಲ್ಲಿ ಮಿಂಟಿ ಅರ್ಗವಾಲ್ ಅವರು ಕೂಡ ಒಬ್ಬರಾಗಿದ್ದರು. ಆಗ ಪಾಕಿಸ್ತಾನ ಜೆಟ್‍ಗಳನ್ನು ತಡೆಯಲು ಭಾರತೀಯ ವಾಯು ಸೇನೆ ಆರಂಭಿಸಿದ್ದ ಪ್ರತಿಬಂಧ ಪ್ಯಾಕೆಜ್‍ಗಳನ್ನು ಮಿಂಟಿ ಅವರು ನಿಯಂತ್ರಿಸುತ್ತಿದ್ದರು.

    ಈ ಬಗ್ಗೆ ಮಾತನಾಡಿದ ಮಿಂಟಿ ಅಗರ್ವಾಲ್ ಅವರು, ಫೆ.26 ಮತ್ತು 27ರಂದು ನಡೆದಿದ್ದ ಎರಡು ಕಾರ್ಯಾಚರಣೆಯಲ್ಲೂ ನಾನು ಭಾಗಿಯಾಗಿದ್ದೆನು. ಅಭಿನಂದನ್ ಅವರು ವಿಮಾನ ಹಾರಾಟ ನಡೆಸುತ್ತಿದ್ದಾಗ ಎರಡು ಕಡೆಯಿಂದಲೂ ಅವರು ನನ್ನ ಜೊತೆ ಸಂಪರ್ಕದಲ್ಲಿದ್ದರು. ಅಭಿನಂದನ್ ಅವರಿಗೆ ನಾನು ಪಾಕ್ ಗಡಿ ದಾಟುವ ಮುನ್ನ ವಾಪಸ್ ಬರಲು ಹೇಳಿದ್ದೆ. ಆದರೆ ಪಾಕಿಸ್ತಾನ ವಾಯು ಸೇನೆ ನಮ್ಮ ಕಮ್ಯೂನಿಕೇಶನ್ ಸಿಸ್ಟಮ್ ಅನ್ನು ಜ್ಯಾಮ್ ಮಾಡಿತ್ತು. ಆದ್ದರಿಂದ ನಾನು ನೀಡಿದ್ದ ಮಾರ್ಗದರ್ಶನ ಅವರಿಗೆ ಸಂವಹನ ಆಗಿರಲಿಲ್ಲ ಎಂದು ತಿಳಿಸಿದರು.

    ಅಭಿನಂದನ್ ಅವರು ಕಾರ್ಯಾಚರಣೆಯಲ್ಲಿ ಇದ್ದಾಗ ನಾನು ಅವರಿಗೆ ವೈರಿ ಜೆಟ್‍ಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೆ. ವೈರಿಗಳ ವಿಮಾನ ಚಟುವಟಿಕೆಗಳ ಬಗ್ಗೆ ನಾನು ನಮ್ಮ ಪೈಲಟ್ ಗಳಿಗೆ ಹೇಳುತ್ತಿದ್ದೆ. ಅಲ್ಲದೆ ಎಫ್-16 ವಿಮಾನವನ್ನು ಹೊಡೆದುರುಳಿಸಿದಾಗ ಆದ ಖುಷಿ ವ್ಯಕ್ತಪಡಿಸಲು ಆಗಲ್ಲ. ಹಾಗೆಯೇ ಏರ್‌ಸ್ಟ್ರೈಕ್ ನಲ್ಲಿ ನಮ್ಮವರನ್ನು ಕಳೆದುಕೊಳ್ಳದೆ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿದ್ದು ಹೆಮ್ಮೆಯ ವಿಷಯವಾಗಿದೆ. ಒಟ್ಟಿಗೆ ಎಲ್ಲಾ ವಿಮಾನಗಳನ್ನು ನಿಯಂತ್ರಣ ಮಾಡುವುದು ಕಷ್ಟದ ವಿಚಾರ, ಆದರೆ ನಮ್ಮ ತಂಡ ಅದನ್ನು ಮಾಡಿ ತೋರಿಸಿದೆ ಎಂದು ಅನುಭವವನ್ನು ಹಂಚಿಕೊಂಡರು.

    ವಾಯು ಪಡೆಗೆ ಸೇರಬೇಕು ಎಂದು ಚಿಕ್ಕ ವಯಸ್ಸಿನಿಂದಲೂ ನಾನು ಕನಸು ಕಂಡಿದ್ದೆನು ಅದು ನಿಜವಾಯಿತು. ವಾಸ್ತವ್ಯವಾಗಿ ನಡೆಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಬೇಕು ಎಂದು ಐಎಎಫ್ ಯೋಧರು ಆಸೆ ಪಡುತ್ತಾರೆ. ವಾಯು ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದು ತೃಪ್ತಿ ನೀಡಿದೆ. ಇದು ಕೇವಲ ಒಬ್ಬರ ಪರಿಶ್ರಮವಲ್ಲ. ಇದು ನಮ್ಮ ತಂಡದ ಪರಿಶ್ರಮ. ತಂಡದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ಇರುತ್ತದೆ. ಅದನ್ನು ನಾವು ಶ್ರದ್ಧೆಯಿಂದ ನಿರ್ವಹಿಸಿದೆವು ಎಂದು ಹೇಳಿದರು.

  • ಅಭಿನಂದನ್‍ ಮೀಸೆಯನ್ನು ರಾಷ್ಟ್ರೀಯ ಮೀಸೆಯನ್ನಾಗಿ ಮಾಡಿ: ಎ.ಆರ್ ಚೌಧರಿ ಮನವಿ

    ಅಭಿನಂದನ್‍ ಮೀಸೆಯನ್ನು ರಾಷ್ಟ್ರೀಯ ಮೀಸೆಯನ್ನಾಗಿ ಮಾಡಿ: ಎ.ಆರ್ ಚೌಧರಿ ಮನವಿ

    ನವದೆಹಲಿ: ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆಯೆಂದು ಘೋಷಿಸಿ, ಗೌರವ ನೀಡಿ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮನವಿ ಮಾಡಿದ್ದಾರೆ.

    ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ವಿಂಗ್ ಕಮಾಂಡರ್ ಅಭಿನಂದನ್ ಅವರು ನಮ್ಮ ಹೆಮ್ಮೆಯ ಯೋಧ. ಸರ್ಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು ಹಾಗೂ ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆಯೆಂದು ಘೋಷಿಸಬೇಕು ಎಂದು ಹೇಳಿದರು.

    ಬಾಲಕೋಟ್ ನಲ್ಲಿರುವ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಫೆ.27 ರಂದು ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್ ವಿಮಾನದ ಜೊತೆಗಿನ ಡಾಗ್ ಫೈಟ್ ಕಾಳಗದಲ್ಲಿ ಎಫ್-16 ವಿಮಾನವನ್ನು ಅಭಿನಂದನ್ ಹೊಡೆದು ಉರುಳಿಸಿದ್ದರು. ಈ ವೇಳೆ ಪಾಕ್ ಅಭಿನಂದನ್ ಅವರಿದ್ದ ಮಿಗ್ -21 ವಿಮಾನದ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಪರಿಣಾಮ ಅಭಿನಂದನ್ ವಿಮಾನ ಪತನಗೊಂಡು ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಬಿದ್ದಿತ್ತು. ನಂತರ ಪಾಕ್ ಸೇನೆ ಅಭಿನಂದನ್ ಅವರನ್ನು ವಶಕ್ಕೆ ಪಡೆದು ಮಾರ್ಚ್ 1 ರಂದು ರಾತ್ರಿ ಬಿಡುಗಡೆ ಮಾಡಿತ್ತು.

    ವೀರಯೋಧ ಅಭಿನಂದನ್ ಭಾರತಕ್ಕೆ ಹಿಂದಿರುಗಿದ ಬಳಿಕ ಇಡೀ ದೇಶವೇ ಸಂಭ್ರಮಾಚರಣೆ ಮಾಡಿತ್ತು. ಅಲ್ಲದೆ ಹೆಮ್ಮೆಯಿಂದ ಹಲವು ಪೋಷಕರು ಅಭಿನಂದನ್ ಅವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದರು. ಅಲ್ಲದೆ ಅವರ ಹೇರ್ ಸ್ಟೈಲ್, ಮಿಸೆ ಎಲ್ಲೆಡೆ ಸಖತ್ ಫೇಮಸ್ ಆಗಿತ್ತು.

  • ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟ ಪಾರುಲ್ ಯಾದವ್!

    ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟ ಪಾರುಲ್ ಯಾದವ್!

    ಭಾರತ ಪದೇ ಪದೇ ಕೆಣಕಿಸಿಕೊಂಡೂ ಶಾಂತಿ ಪಥದಲ್ಲಿ ಮುಂದುವರೆಯುತ್ತಿದ್ದರೂ ಈ ಪಾಕಿಸ್ತಾನ ಪದೇ ಪದೇ ಕೆಣಕ್ಕುತ್ತಲೇ ಇರುತ್ತದೆ. ಅದಕ್ಕೆ ಸೌಹಾರ್ದದ ಸಂಕೇತವಾಗಬಲ್ಲ ಕ್ರಿಕೆಟ್ ಆಟವನ್ನೂ ಕೂಡಾ ಅಲ್ಲಿನ ಕೆಲ ವಿಕೃತ ಮನಸುಗಳು ಬಳಸಿಕೊಳ್ಳುತ್ತಿವೆ. ಕೆಲ ದಿನಗಳ ಹಿಂದೆ ಅಭಿನಂದನ್ ವರ್ತಮಾನ್ ಅವರನ್ನೇ ಹೋಲುವ ವ್ಯಕ್ತಿಯನ್ನಿಟ್ಟುಕೊಂಡು ಪಾಕಿ ಮಾಧ್ಯಮವೊಂದು ಭಾರತವನ್ನು ಕೆಣಕಿತ್ತು. ಇದಕ್ಕೆ ಭಾರತದ ಕಡೆಯಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಭಾರತ ತಂಡ ಪಾಕಿಸ್ತಾನಿ ಕ್ರಿಕೆಟ್ ತಂಡವನ್ನು ಮಣಿಸುತ್ತಲೇ ನಟಿ ಪಾರುಲ್ ಯಾದವ್ ಕೂಡಾ ಪಾಕಿಸ್ತಾನಕ್ಕೆ ಸರಿಯಾಗೊಂದು ಟಾಂಗ್ ಕೊಟ್ಟಿದ್ದಾರೆ.

    ವೀರ ಯೋಧ ಅಭಿನಂದನ್ ವರ್ತಮಾನ್‍ಗೆ ಅವಮಾನಿಸಿದ ಪಾಕ್ ವಿರುದ್ಧ ಪಾರುಲ್ ಯಾದವ್ ಅವರದ್ದೇ ಸ್ಟೈಲಿನಲ್ಲಿ ಟಾಂಗ್ ಕೊಟ್ಟಿದ್ದಾರೆ. ಪಾಕ್ ಮಾಧ್ಯಮವೊಂದು ಭಾರತವನ್ನು ಅಣಕಿಸುವಂಥಾ ಜಾಹೀರಾತು ಮಾಡಿತ್ತಲ್ಲಾ? ಅಂಥಾದ್ದನ್ನೇ ತಾವೂ ಮಾಡಿರೋ ಪಾರುಲ್ ಅಭಿನಂದನ್ ಶೈಲಿಯ ಮೀಸೆ ಬಿಡಿಸಿಕೊಂಡು ಪಾಕ್‍ಗೆ ತಕ್ಕ ಉತ್ತರ ನೀಡಿದ್ದಾರೆ!

    ಅಭಿನಂದನ್ ಗೆಟಪ್ಪಿನಲ್ಲಿ ಪಾರುಲ್ ‘ಕಾಫಿ ಕಪ್ ನೀವೇ ಇಟ್ಟುಕೊಳ್ಳಿ ನಾವು ವಿಶ್ವಕಪ್ ಗೆಲ್ಲುತ್ತೇವೆ’ ಅಂತ ಖಡಕ್ ಉತ್ತರ ರವಾನಿಸಿದ್ದಾರೆ. ಪಾರುಲ್ ಯಾದವ್ ಇಂಡೋ ಪಾಕ್ ಟ್ರಿಕೆಟ್ ಟೂರ್ನಿಯನ್ನು ಸ್ನೇಹಿತರೊಂದಿಗೆ ನೋಡಿ ಎಂಜಾಯ್ ಮಾಡಿದ್ದರು. ಭಾರತ ಕ್ರಿಕೆಟ್ ತಂಡ ಪಾಕ್ ತಂಡವನ್ನು ಮಣಿಸಿದ್ದನ್ನೂ ಕೂಡಾ ಕಣ್ತುಂಬಿಕೊಂಡು ಖುಷಿ ಪಟ್ಟಿದ್ದರು. ಅದೇ ಖುಷಿಯಲ್ಲಿ ಈ ಮ್ಯಾಚ್ ಆರಂಭಕ್ಕೂ ಮುನ್ನ ಪಾಕ್ ಮಾಡಿದ್ದ ಕುಚೇಷ್ಟೆಗೆ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.

    ಪಾಕ್ ಮಾಡಿದ್ದ ಸಣ್ಣತನದ ಕೆಲಸದ ವಿರುದ್ಧ ಈಗಾಗಲೇ ಬಾಲಿವುಡ್ ಸೇರಿದಂತೆ ನಾನಾ ಚಿತ್ರತಂಡಗಳ ತಾರೆಯರು ತಮ್ಮದೇ ಆದ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಪೂನಂ ಪಾಂಡೆ ಕೂಡಾ ಈ ನಿಟ್ಟಿನಲ್ಲಿ ಗಮನ ಸೆಳೆದಿದ್ದರು. ಇದೀಗ ಭಾರತ ತಂಡ ಪಾಕ್ ತಂಡದ ವಿರುದ್ಧ ಗೆದ್ದಿರೋದರಿಂದ ಪಾಕ್ ಕುಚೇಷ್ಟೆಗಳಿಗೆ ನಿರ್ಣಾಯಕ ಉತ್ತರ ರವಾನಿಸಿದಂತಾಗಿದೆ.

  • ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ನವದೆಹಲಿ: ವಿಶ್ವಕಪ್ ಪಂದ್ಯದ ಮೊದಲು ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮುಂದಿಟ್ಟು ಭಾರತದ ಕಾಲೆಳೆದಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರೊಚ್ಚಿಗೆದ್ದಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ ಜಾಹೀರಾತನ್ನು ನೋಡಿದ ಸಾನಿಯಾ ಮಿರ್ಜಾ ತಮ್ಮ ಟ್ವಿಟ್ಟರಿನಲ್ಲಿ ರೊಚ್ಚಿ ಗೆದ್ದಿದ್ದಾರೆ. ಸಾನಿಯಾ ತಮ್ಮ ಟ್ವಿಟ್ಟರಿನಲ್ಲಿ, “ಎರಡು ಕಡೆ ಅವಮಾನಕರ ವಿಷಯದೊಂದಿಗೆ ಜಾಹೀರಾತು ತಯಾರಾಗಿದೆ. ಸ್ವಲ್ಪ ಗಂಭೀರವಾಗಿ ನಡೆದುಕೊಳ್ಳಿ. ಈ ಪಂದ್ಯಕ್ಕೆ ಪ್ರಚಾರ ನೀಡುವ ಯಾವುದೇ ಅವಶ್ಯಕತೆ ಇಲ್ಲ. ಈಗಾಗಲೇ ಈ ಪಂದ್ಯಕ್ಕೆ ಪ್ರಚಾರ ಸಿಕ್ಕಿದೆ. ಇದು ಕೇವಲ ಕ್ರಿಕೆಟ್ ಪಂದ್ಯ” ಎಂದು ಟ್ವೀಟ್ ಮಾಡಿದ್ದಾರೆ.

    ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನು ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿತ್ತು.

    ಸ್ಟಾರ್ ಸ್ಪೋಟ್ಸ್ ವಾಹಿನಿ ಕೂಡ ಜಾಹೀರಾತನ್ನು ಮಾಡಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಈ ವಿಡಿಯೋದಲ್ಲಿ ಭಾರತದ ಅಭಿಮಾನಿ ತಮ್ಮನ್ನು ತಾವೇ ಪಾಕಿಸ್ತಾನದ ತಂದೆ ಎಂದು ಪಾಕ್ ಅಭಿಮಾನಿಗೆ ಹೇಳುತ್ತಾರೆ. ಈ ವಿಡಿಯೋವನ್ನು ಸ್ಟಾರ್ ಸ್ಪೋಟ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, ಈ ತಂದೆಯ ದಿನಾಚರಣೆಯಂದು ವಿಶ್ವಕಪ್ ಪಂದ್ಯ ವೀಕ್ಷಿಸಿ ಬಾಪ್ ರೇ ಬಾಪ್ ಎಂದು ಹೇಳುತ್ತೀರಾ ಎಂದು ಟ್ವೀಟ್ ಮಾಡಿದೆ.

    ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಅಭಿನಂದನೆ ಸಲ್ಲಿಸಿದ ಮೋದಿ – ವಿಂಗ್ ಕಮಾಂಡರ್ ಎಂದು ತಿಳಿದು ಪಾಕ್ ಮೀಡಿಯಾ ಟ್ರೋಲ್

    ಅಭಿನಂದನೆ ಸಲ್ಲಿಸಿದ ಮೋದಿ – ವಿಂಗ್ ಕಮಾಂಡರ್ ಎಂದು ತಿಳಿದು ಪಾಕ್ ಮೀಡಿಯಾ ಟ್ರೋಲ್

    ಇಸ್ಲಾಮಾಬಾದ್: ಶನಿವಾರ ನರೇಂದ್ರ ಮೋದಿ ತಮ್ಮ ನೂತನ ಸಂಸದರನ್ನು ಉದ್ದೇಶಿಸಿ ಸಭೆ ಮಾಡಿದ್ದರು. ಈ ವೇಳೆ ಅವರು ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ ಪಾಕಿಸ್ತಾನದ ಮೀಡಿಯಾ ಮಿಂಗ್ ಕಮಾಂಡರ್ ಅಭಿನಂದನ್ ಎಂದು ತಿಳಿದು ಟ್ರೋಲ್‍ಗೆ ಒಳಗಾಗಿದ್ದಾರೆ.

    ಭಾರತದ ಚುನಾವಣೆಯ ಮೇಲೆ ವಿಶ್ವದ ಅನೇಕ ದೇಶಗಳು ಗಮನ ಕೇಂದ್ರಿಕರಿಸಿದ್ದವು. ಚುನಾವಣೆ ಯಶಸ್ವಿಯಾಗಿ ನಡೆಸಲು ಚುನಾವಣಾ ಅಧಿಕಾರಿಗಳು, ಸೈನಿಕರು, ಸಿಬ್ಬಂದಿ ಶ್ರಮಿಸಿದ್ದರು. ಇದಕ್ಕೆ ಸಾಕ್ಷಿಯಾದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದರು.

    ಮೋದಿ ತಮ್ಮ ಭಾಷಣದಲ್ಲಿ ಅಭಿನಂದನೆ ಪದವನ್ನು ಬಳಸಿದ್ದರು. ಇದನ್ನು ನೋಡಿದ ಪಾಕಿಸ್ತಾನದ ನಿರೂಪಕರೊಬ್ಬರು ಮೋದಿ ಅವರು ಚುನಾವಣೆ ಮುಗಿದ ನಂತರವೂ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂದಿದ್ದಾರೆ.

    ಪಾಕಿಸ್ತಾನ ನಿರೂಪಕನ ವಿಡಿಯೋವನ್ನು ಆಶೀಶ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡು ಅದಕ್ಕೆ, “ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದರೆ, ಪಾಕಿಸ್ತಾನದ ಮಾಧ್ಯಮದವರು ವಿಂಗ್ ಕಮಾಂಡರ್ ಅಭಿನಂದನ್ ಎಂದುಕೊಂಡಿದ್ದಾರೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಕೆಲವರು ಪಾಕಿಸ್ತಾನದವರು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರನ್ನು ಇನ್ನು ಮರೆತಿಲ್ಲ ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು ಜೋಕರ್ಸ್ ಎಂದು ಪಾಕಿಸ್ತಾನದ ಮೀಡಿಯಾವನ್ನು ಟ್ರೋಲ್ ಮಾಡುತ್ತಿದ್ದಾರೆ.

    https://twitter.com/ashishtikooo/status/1131807252317442048?ref_src=twsrc%5Etfw%7Ctwcamp%5Etweetembed%7Ctwterm%5E1131807252317442048&ref_url=https%3A%2F%2Fwww.indiatoday.in%2Ftrending-news%2Fstory%2Fpak-anchor-says-abhinandan-in-pm-modi-s-speech-is-iaf-hero-who-are-asha-and-akansha-trolls-internet-1534911-2019-05-26

  • ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ನಿಮ್ಮ ಕುಟುಂಬಕ್ಕಾಗಿ ಸೆಲ್ಫಿ – ಅಭಿನಂದನ್ ಜೊತೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದ ಸಹೋದ್ಯೋಗಿಗಳು

    ಶ್ರೀನಗರ: ಪಾಕಿಸ್ತಾನದಿಂದ ಬಿಡುಗಡೆಯಾದ ಬಳಿಕ ಟೈಗರ್ ಅಭಿನಂದನ್ ಹೇಗಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಯಾಕೆಂದರೆ ಇದುವರೆಗೆ ಅವರ ಒಂದೇ ಒಂದು ವೀಡಿಯೋ ರಿಲೀಸ್ ಆಗಿರಲಿಲ್ಲ. ಈಗ ಅಭಿನಂದನ್ ಅವರ ಮೊದಲ ವೀಡಿಯೋ ರಿಲೀಸ್ ಆಗಿದೆ.

    ಎಫ್ 16 ವಿಮಾನವನ್ನು ಹೊಡೆದು ಹಾಕಿ ಪಾಕ್ ಕಸ್ಟಡಿಯಲ್ಲಿದ್ದ ಅಭಿನಂದನ್ ಶ್ರೀನಗರದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ವಾಯು ಸೇನೆಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಸಹೋದ್ಯೋಗಿಗಳು ಅಭಿನಂದನ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

    ಈ ವೇಳೆ ಅಭಿನಂದನ್, ನನ್ನ ಬಿಡುಗಡೆಗಾಗಿ ಪ್ರಾರ್ಥನೆ ಮಾಡಿದ ನಿಮಗೆ ಮತ್ತು ನಿಮ್ಮ ಕುಟುಂಬಸ್ಥರಿಗೆ ನನ್ನ ಧನ್ಯವಾದ, ನಾನು ನಿಮ್ಮ ಕುಟುಂಬಕ್ಕಾಗಿ ಪೋಸ್ ಕೊಡುತ್ತಿದ್ದೇನೆ ಎಂದು ಪ್ರೀತಿಯಿಂದ ಹೇಳಿದ್ದಾರೆ. ಏಪ್ರಿಲ್ ಕೊನೆಯ ವಾರದಲ್ಲಿ ಅಭಿನಂದನ್ ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಈಗ ವಿಡಿಯೋ ವೈರಲ್ ಆಗಿದೆ.

    ಅಭಿನಂದನ್ ವರ್ಧಮಾನ್ ಅವರು ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಅವರಿಗೆ ಜೈಶ್ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀನಗರದಿಂದ ಈಗ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.

    ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು. ಡಿ ಬ್ರೀಫಿಂಗ್ ಆದ ಬಳಿಕ ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದರು. ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

    ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

  • ಅಭಿನಂದನ್ ಬಿಡುಗಡೆಗಾಗಿ ಪಾಕಿಗೆ ಎಚ್ಚರಿಕೆ ನೀಡಿದ್ವಿ: ಮೋದಿ

    ಅಭಿನಂದನ್ ಬಿಡುಗಡೆಗಾಗಿ ಪಾಕಿಗೆ ಎಚ್ಚರಿಕೆ ನೀಡಿದ್ವಿ: ಮೋದಿ

    ಗಾಂಧಿನಗರ: ವಾಯುಸೇನೆಯ ಪೈಲಟ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು. ಒಂದು ವೇಳೆ ಸುರಕ್ಷಿತವಾಗಿ ಒಪ್ಪಿಸದೇ ಇದ್ದಲ್ಲಿ ನಂತರ ನಡೆಯುವ ಪರಿಣಾಮಗಳನ್ನು ಎದುರಿಸಲು ನೀವು ಸಿದ್ಧರಾಗಿರಬೇಕು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ವಿಚಾರವನ್ನು ಪ್ರಧಾನಿ ಮೋದಿ ಬಹಿರಂಗ ಪಡಿಸಿದ್ದಾರೆ.

    ಗುಜರಾತಿನ ಪಠಣ್‍ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಪೈಲಟ್ ಪಾಕ್ ವಶದಲ್ಲಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತ್ತು. ಈ ವೇಳೆ ಸರ್ಕಾರ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿತ್ತು ಎಂದು ಮೋದಿ ತಿಳಿಸಿದರು.

    “ಒಂದು ವೇಳೆ ನಮ್ಮ ಪೈಲಟ್‍ಗೆ ಏನಾದರೂ ತೊಂದರೆಯಾದಲ್ಲಿ ಆ ನಂತರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಇಡೀ ವಿಶ್ವಕ್ಕೆ ಈ ಪರಿಸ್ಥಿತಿಗೆ ಮೋದಿಯೇ ಕಾರಣ ಎಂದು ಹೇಳಬೇಕಾಗುತ್ತದೆ” ಎನ್ನುವ ಕಠಿಣ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದ್ದೇವು ಎಂದು ಹೇಳಿದರು.

    “ಈಗ ಪರಿಸ್ಥಿತಿ ಏನಾದರೂ ವಿಕೋಪಕ್ಕೆ ಹೋದರೆ 12 ಕ್ಷಿಪಣಿಗಳ ಮೂಲಕ ಮೋದಿ ದಾಳಿ ನಡೆಸಲು ಸಿದ್ಧವಾಗಿದ್ದಾರೆ. ಒಂದು ವೇಳೆ ಎರಡನೇ ದಿನ ಪಾಕಿಸ್ತಾನ ಭಾರತದ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದೇ ಇದ್ದರೆ ಆ ರಾತ್ರಿ ಪಾಕಿಸ್ತಾನದ ಪಾಲಿಗೆ ಕರಾಳ ರಾತ್ರಿ ಆಗಲಿದೆ” ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯ ವಿಚಾರವನ್ನು ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದರು.

    ಈ ಹೇಳಿಕೆಯನ್ನು ಅಮೆರಿಕ ಹೇಳಿದ್ದು ಹೊರತು ನಾನು ಹೇಳಿಲ್ಲ. ಈ ಸಮಯದಲ್ಲಿ ನಾನು ಏನು ಹೇಳುವುದಿಲ್ಲ. ಸೂಕ್ತ ಸಮಯ ಬಂದಾಗ ನಾನೇ ಈ ವಿಚಾರವನ್ನು ಬಹಿರಂಗ ಪಡಿಸುತ್ತೇನೆ ಎಂದು ಮೋದಿ ತಿಳಿಸಿದರು.

    ಭಾಷಣದಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಪ್ರಧಾನಿ ಸೀಟ್ ಇರುತ್ತದೋ ಇಲ್ಲವೋ ಗೊತ್ತಿಲ್ಲ. ನಾನು ಇರುವವರೆಗೂ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಒಂದೋ ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು ಜೀವಂತವಾಗಿರಬೇಕು. ಈ ನಿರ್ಧಾರವನ್ನು ನಾನು ಈಗಾಗಲೇ ಕೈಗೊಂಡಾಗಿದೆ ಎಂದು ತಿಳಿಸಿದರು.

    ಗುರುವಾರ ರಾಜ್ಯದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ, ಈ ರಾಜ್ಯದ ಮಣ್ಣಿನ ಮಗನಾದ ನನ್ನನ್ನು ರಕ್ಷಿಸುವ ಕರ್ತವ್ಯ ನಿಮ್ಮ ಮೇಲಿದೆ. ಹೀಗಾಗಿ ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಆದರೆ ಗುಜರಾತಿನಲ್ಲಿ 26 ಸ್ಥಾನ ಗೆಲ್ಲದೇ ಇದ್ದಲ್ಲಿ ಮೇ 23ರ ಟಿವಿ ವಾಹಿನಿಗಳಲ್ಲಿ ಈ ವಿಚಾರದ ಬಗ್ಗೆ ಮುಖ್ಯ ಚರ್ಚೆಯಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.

    ಬಾಲಕೋಟ್ ನಲ್ಲಿರುವ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಫೆ.27 ರಂದು ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್ ವಿಮಾನದ ಜೊತೆಗಿನ ಡಾಗ್ ಫೈಟ್ ಕಾಳಗದಲ್ಲಿ ಎಫ್-16 ವಿಮಾನವನ್ನು ಅಭಿನಂದನ್ ಹೊಡೆದು ಉರುಳಿಸಿದ್ದರು. ಈ ವೇಳೆ ಪಾಕ್ ಅಭಿನಂದನ್ ಅವರಿದ್ದ ಮಿಗ್ -21 ವಿಮಾನದ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಪರಿಣಾಮ ಅಭಿನಂದನ್ ವಿಮಾನ ಪತನಗೊಂಡು ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಬಿದ್ದಿತ್ತು. ನಂತರ ಪಾಕ್ ಸೇನೆ ಅಭಿನಂದನ್ ಅವರನ್ನು ವಶಕ್ಕೆ ಪಡೆದು ಮಾರ್ಚ್ 1 ರಂದು ರಾತ್ರಿ ಬಿಡುಗಡೆ ಮಾಡಿತ್ತು.

  • ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ

    ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ

    ನವದೆಹಲಿ: ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ನಂಬಿ ಭಾರತ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದ ಮಂದಿಗೆ ಭಾರತೀಯ ವಾಯುಸೇನೆ ಸಾಕ್ಷ್ಯವನ್ನು ಬಿಡುಗಡೆ ಮಾಡುವ ಮೂಲಕ ಕಪಾಳ ಮೋಕ್ಷ ಮಾಡಿದೆ.

    ಏರ್ ವೈಸ್ ಮಾರ್ಷಲ್ ಆರ್‍ಜಿಕೆ ಕಪೂರ್ ಅವರು ಸುದ್ದಿಗೋಷ್ಠಿ ನಡೆಸಿ, ಫಾಲ್ಕಾನ್ ಏರ್‌ಬಾರ್ನ್ ವಾರ್ನಿಂಗ್ ಆಂಡ್ ಕಂಟ್ರೋಲ್ ಸಿಸ್ಟಂ(ಅವಾಕ್ಸ್) ಸೆರೆ ಹಿಡಿದ ರಾಡಾರ್ ಚಿತ್ರಣವನ್ನು ಬಿಡುಗಡೆ ಮಾಡಿದ್ದಾರೆ.

    ಈ ವೇಳೆ ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಜೆ – 17 ಮತ್ತು ಎಫ್-16 ವಿಮಾನವನ್ನು ಬಳಸಿದೆ. ಈ ವೇಳೆ ಅಭಿನಂದನ್ ಮಿಗ್ 21 ಮೂಲಕ ಡಾಗ್ ಫೈಟ್ ಮಾಡಿ ಎಫ್ 16 ವಿಮಾನವನ್ನು ಹೊಡೆದು ಉರುಳಿಸಿದ್ದಾರೆ. ಈ ಡಾಗ್ ಫೈಟ್ ನಲ್ಲಿ ಮಿಗ್-21 ಮತ್ತು ಎಫ್-16 ವಿಮಾನ ಪತನಗೊಂಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ನಮ್ಮ ಜೊತೆ ಮತ್ತಷ್ಟು ಗೌಪ್ಯ ಮಾಹಿತಿಗಳು ಇದ್ದು, ಈ ಮಾಹಿತಿಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಏನಿದು ವಿವಾದ?
    ಫೆ.27 ರಂದು ಸಂಜೆ ಭಾರತದ ವಾಯುಸೇನೆಯ ಅಧಿಕಾರಿಗಳು ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದು ಹಾಕಿದೆ. ಈ ಸಂಬಂಧ ಎಎಮ್-ಆರ್ ಎಎಎಮ್ ಕ್ಷಿಪಣಿ ಭಾಗವನ್ನು ಸಾಕ್ಷ್ಯವಾಗಿ ತಿಳಿಸಿದ್ದರು.

    ಭಾರತ ಸಾಕ್ಷ್ಯವನ್ನು ನೀಡಿದ್ದರೂ ಪಾಕಿಸ್ತಾನ ಯಾವುದೇ ಎಫ್ 16 ವಿಮಾನವನ್ನು ಹೊಡೆದು ಹಾಕಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಅಮೆರಿಕದ ಫಾರಿನ್ ಪಾಲಿಸಿ ಅಮೆರಿಕ ನೀಡಿದ ಎಲ್ಲ ಎಫ್ 16 ವಿಮಾನಗಳು ಈಗಲೂ ಪಾಕಿಸ್ತಾನದಲ್ಲಿದೆ. ಭಾರತ ಯಾವುದೇ ಎಫ್ 16 ವಿಮಾನವನ್ನು ಹೊಡೆದು ಹಾಕಿಲ್ಲ ಎಂದು ಅಮೆರಿಕ ರಕ್ಷಣಾ ಅಧಿಕಾರಿಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.

    ಈ ವರದಿ ಪ್ರಕಟವಾದ ಬೆನ್ನಲ್ಲೇ ಕೆಲ ವ್ಯಕ್ತಿಗಳು ಭಾರತ ಸರ್ಕಾರ ಸುಳ್ಳು ಹೇಳುತ್ತಿದೆ. ಪ್ರಚಾರಕ್ಕಾಗಿ ಮಿಗ್ 21 ವಿಮಾನ ಎಫ್ 16 ವಿಮಾನವನ್ನು ಹೊಡೆದು ಹಾಕಿದೆ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದರು.

    ಫಾರಿನ್ ಪಾಲಿಸಿ ವರದಿಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿ, ಸತ್ಯಕ್ಕೆ ಯಾವಾಗಲೂ ಜಯವಿದೆ. ಭಾರತಕ್ಕೆ ಇದೀಗ ಸತ್ಯ ಹೇಳುವ ಸಮಯ ಬಂದಿದೆ. ಪಾಕಿಸ್ತಾನ ಹೊಡೆದುರುಳಿಸಿದ ಯುದ್ಧ ವಿಮಾನ ಸೇರಿದಂತೆ ತಮ್ಮ ಕಡೆಯಲ್ಲಿ ಆದ ಸಾವು ನೋವು, ನಷ್ಟಗಳ ಬಗ್ಗೆ ಭಾರತ ನಿಜ ಹೇಳಬೇಕಿದೆ. ಆಕ್ರಮಿತ ಕಾಶ್ಮೀರ ಭಾಗದಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಭಾರತ ಆತ್ಮಾವಲೋಕನ ಮಾಡಿಕೊಳ್ಳಬೇಕು ಆ ಭಾಗದಲ್ಲಿ ಶಾಂತಿ, ಪ್ರಗತಿ ನೆಲೆಸಬೇಕಿದೆ ಎಂದು ಹೇಳಿದ್ದರು.