Tag: ಅಭಿದಾಸ್

  • ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ

    ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ

    ನ್ನಡ ಚಿತ್ರರಂಗದ ಮಟ್ಟಿಗೆ ಹೊಸಾ ಆವೇಗವೊಂದರ ಪರ್ವ ಕಾಲ ಶುರುವಾಗಿ ಒಂದಷ್ಟು ವರ್ಷಗಳು ಕಳೆದಿವೆ. ಈಗ ಎಲ್ಲರ ಗಮನವಿರುವುದು ಹೊಸ ವರ್ಷವನ್ನು ಯಾವೆಲ್ಲ ಬಗೆಯ ಸಿನಿಮಾಗಳು ಕಳೆಗಟ್ಟಿಸಲಿವೆಯೆಂಬ ಪುಳಕದಂತಹ ನಿರೀಕ್ಷೆ ಮಾತ್ರ. ಆ ದೃಷ್ಟಿಯಲ್ಲಿ ಒಂದಷ್ಟು ಕಣ್ಣಾಡಿಸಿದರೆ ಕೆಲವಾರು ಸಿನಿಮಾಗಳು ಗಮನ ಸೆಳೆಯುತ್ತವೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ.

    ಈಗಾಗಲೇ ಹಾಡುಗಳೂ ಸೇರಿದಂತೆ ನಾನಾ ರೀತಿಯಲ್ಲಿ ಸಂಚಲನ ಸೃಷ್ಟಿಸಿರುವ ಈ ಚಿತ್ರ, ಇದೇ ಫೆಬ್ರವರಿ 9ರಂದು ತೆರೆಗಾಣುತ್ತಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ಸಿನಿಮಾ ಅಂದರೆ, ಬೇರೆಯದ್ದೇ ದಿಕ್ಕಿನಲ್ಲಿ ಕೌತುಕ ಮುಡೋದು ಸಹಜ. ಯಾಕೆಂದರೆ, ನಿರ್ದೇಶಕನಾಗಿ ಇದುವರೆಗಿನ ನಡಿಗೆಯಲ್ಲಿಯೇ ಅವರು ಅಂಥದ್ದೊಂದು ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ತಮ್ಮ ಇದುವರೆಗಿನ ಯಾನದಲ್ಲೇ ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ ಮಹತ್ತರವಾದ ಅನುಭೂತಿಯೊಂದನ್ನು ಮೊಗೆದು ಕೊಡಲು ವೆಂಕಟ್ ಭಾರದ್ವಾಜ್ ತಯಾರಾದಂತಿದೆ.

    ಇಲ್ಲಿರೋದು ಪರಿಶುದ್ಧ ಪ್ರೇಮದ ನಾನಾ ಮಜಲುಗಳನ್ನು ತೆರೆದಿಡುವ ವಿಶಿಷ್ಟ ಕಥಾನಕ. ಪರಿಶುದ್ಧವಾದ, ಪ್ರಾಮಾಣಿಕವಾದ ಪ್ರೇಮವೆಂಬುದು ಯಾವತ್ತಿದ್ದರೂ ಪ್ರಕೃತಿಗೆ ಹತ್ತಿರವಾದದ್ದು. ಅದನ್ನು ಕೃತಕವಾದವುಗಳಿಂದ ಸಿಂಗರಿಸುವ ಯಾವ ದರ್ದೂ ಇಲ್ಲ. ಒಂದು ವೇಳೆ ಸಿಂಗರಿಸಿದರೂ ಕೂಡಾ ಅದು ಪ್ರೇಮವೆಂಬ ಅಸಲೀ ಹೊಳಪಿನ ಮುಂದೆ ಮಂಕಾಗುತ್ತದೆ. ಈ ಸೂಕ್ಷ್ಮವನ್ನು ಅರಿತಿರುವ ವೆಂಕಟ್ ಭಾರದ್ವಾಜ್, ಅತ್ಯಂತ ಸಹಜವಾಗಿ ಈ ಸಿನಿಮಾವನ್ನು ದೃಶ್ಯೀಕರಿಸಿದ್ದಾರೆ.

    ಸಾಮಾನ್ಯವಾಗಿ, ಯಾವುದೇ ಸಿನಿಮಾಗಳಿಗೆ ದೃಶ್ಯ ರೂಪ ಕೊಡುವಾಗಲ ದುಬಾರಿ ಸೆಟ್ಟುಗಳತ್ತ ಗಮನ ಹರಿಸಲಾಗುತ್ತೆ. ಅದರ ಮೇಲೆಯೇ ಸಿನಿಮಾವೊಂದರ ಕಿಮ್ಮತ್ತನ್ನು ಅಳೆಯುವ ಮಾನದಂಡಗಳೂ ಇವೆ. ಆದರೆ, ವೆಂಕಟ್ ಭಾರದ್ವಾಜ್ ಸೆಟ್ಟುಗಳ ಗೊಡವೆಯಿಲ್ಲದೆ, ಸಹಜ ಸುಂದರವಾದ ತಾಣಗಳಲ್ಲಿ ಇಲ್ಲಿನ ದೃಶ್ಯಗಳನ್ನು ರೂಪಿಸಿದ್ದಾರಂತೆ. ಕಣ್ಣಿಗೆ ಹಬ್ಬವೆನಿಸುವಂಥಾ, ಕಥೆಗೆ ಪೂರಕವಾಗಿ, ಒಮ್ಮೊಮ್ಮೆ ದೃಶ್ಯಗಳೇ ಕಥೆಯಾಗುವಂತಹ ಕಲಾವಂತಿಕೆಯಿಂದ ಈ ಚಿತ್ರವನ್ನು ರೂಪಿಸಿರುವ ಖುಷಿ ನಿರ್ದೇಶಕರಲ್ಲಿದೆ. ಇಲ್ಲಿ ದೃಶ್ಯರೂಪ ಧರಿಸಿರುವ ಸಹಜ ಪ್ರಾಕೃತಿಕ ವೈಭವ ಕಥೆಯ ಜೊತೆ ಜೊತೆಗೇ ಪ್ರೇಕ್ಷಕರನ್ನು ಥ್ರಿಲ್ ಮಾಡಲಿದೆ ಎಂಬುದು ಚಿತ್ರತಂಡದ ಭರವಸೆ.

     

    `ನಗುವಿನ ಹೂಗಳ ಮೇಲೆ’ ಚಿತ್ರ ಶೀರ್ಷಿಕೆಯಷ್ಟೇ ಮೆಲುವಾಗಿ ಪ್ರೇಕ್ಷಕರನ್ನು ತಾಕಿ, ಸಮ್ಮೋಹಕ ಗೆಲುವಿನ ಮೂಲಕ ವರ್ಷಾರಂಭಕ್ಕೊಂದು ಕಳೆ ತಂದು ಕೊಡುವ ಸಾಧ್ಯತೆಗಳಿವೆ. ಅಂದಹಾಗೆ, ಈ ಚಿತ್ರವನ್ನು ತೆಲುಗಿನ ಪ್ರಸಿದ್ದ ನಿರ್ಮಾಪಕರಾದ ಕೆ.ಕೆ ರಾಧ ಮೋಹನ್ ನಿರ್ಮಾಣ ಮಾಡಿದ್ದಾರೆ. ಅಭಿದಾಸ್ ಹಾಗೂ ಶರಣ್ಯಾ ನಾಯಕ ನಾಯಕಿಯರು. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ `ನಗುವಿನ ಹೂಗಳ ಮೇಲೆ’ ನಳನಳಿಸಿದೆ.

  • ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

    ಸಿ.ವಿ ಶಿವಶಂಕರ್ (C.v Shivashankar) ಕನ್ನಡ ಚಿತ್ರರಂಗ ಕಂಡ ಖ್ಯಾತ ಗೀತರಚನೆಕಾರರು. ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿಯೂ ಜನಪ್ರಿಯತೆ ಗಳಿಸಿದ್ದರು. ಮಿನುಗುತಾರೆ ಕಲ್ಪನಾ, ಮಂಜುಳಾ, ಉದಯ್ ಕುಮಾರ್, ನರಸಿಂಹರಾಜು, ತೂಗುದೀಪ್ ಶ್ರೀನಿವಾಸ್, ರಾಜೇಶ್ ಹೀಗೆ ಅವತ್ತಿನ ಘಟಾನುಘಟಿ ತಾರೆಯರಿಗೆ ಆ್ಯಕ್ಷನ್ ಕಟ್ ಹೇಳಿದವರು. ಮನೆಕಟ್ಟಿ ನೋಡು, ಪದವೀಧರ, ನಮ್ಮ ಊರು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟವರು. ಅಷ್ಟಕ್ಕೂ, ಇವತ್ತು ಸಿ.ವಿ ಶಿವಶಂಕರ್ ಅವರ ಬಗ್ಗೆ ಮಾತನಾಡೋದಕ್ಕೆ ಕಾರಣ ಅವರ ಪುತ್ರ ವೆಂಕಟ್ ಭಾರದ್ವಾಜ್.

    ವೆಂಕಟ್ ಭಾರದ್ವಾಜ್ (Venkat Bharadwaj)ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಸಿ.ವಿ ಶಿವಶಂಕರ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಐಟಿ ಕಂಪೆನಿಗಳಲ್ಲಿ ಸೇಲ್ಸ್ ಹೆಡ್ ಆಗಿ ಕೆಲಸ ಮಾಡಿಕೊಂಡು ನೂರಾರು ದೇಶ ಸುತ್ತಿರೋ ಇವರು, ಕೊನೆಗೆ ಸಿನಿಮಾ ಫೀಲ್ಡಿಗೆ ಬಂದಿಳಿದಿದ್ದಾರೆ. ತಂದೆಯಂತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಂಪಿರ್ವೆ, ಆಮ್ಲೆಟ್, ಎ ಡೇ ಇನ್ ದಿ ಸಿಟಿ, ಬಬ್ಲೂಷ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಡೈರೆಕ್ಟ್ ಮಾಡಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್, ಕೆಂಪಿರ್ವೆ ಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ‘ನಗುವಿನ ಹೂಗಳ ಮೇಲೆ’ ಎಂಬ ಪ್ರೇಮಕಥಾಹಂದರವುಳ್ಳ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

    ‘ಭಾಗ್ಯವಂತರು’ ಚಿತ್ರದ ಹಾಡಿನ ಚರಣದ ಸಾಲನ್ನ ಸಿನಿಮಾ ಶೀರ್ಷಿಕೆಯನ್ನಾಗಿಸಿದ ನಿರ್ದೇಶಕರು, ಅಣ್ಣಾವ್ರ ಸಾಕ್ಷಾತ್ಕಾರ ಸಿನಿಮಾದಿಂದ ಸ್ಪೂರ್ತಿ ಪಡೆದು ‘ನಗುವಿನ ಹೂಗಳ ಮೇಲೆ’ ಸಿನಿಮಾದ ಕಥೆ ಹೆಣೆದರಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನಿಜವಾದ ಪ್ರೀತಿ ಅಂದರೆ ಯಾವುದು? ಹೇಗಿರುತ್ತೆ ಅನ್ನೋದನ್ನ ತೆರೆಮೇಲೆ ಕಟ್ಟಿಕೊಟ್ಟಿರುವುದಾಗಿ ಹೇಳಿಕೊಂಡರು. ಸೆನ್ಸಾರ್ ಮಂಡಳಿಯಿಂದ ಕ್ಲೀನ್ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ. ಕಂಟೆಂಟ್, ಮೇಕಿಂಗ್, ಸಾಂಗ್ಸ್, ಆರ್ಟಿಸ್ಟ್‌ಗಳ ಪರ್ಫಾಮೆನ್ಸ್ ಎಲ್ಲವೂ ಅದ್ಭುತವಾಗಿರುವುದಾಗಿ ತಿಳಿಸಿದರು. ಇದನ್ನೂ ಓದಿ:ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

    ಇನ್ನೂ ‘ನಗುವಿನ ಹೂಗಳ ಮೇಲೆ’ ಚಿತ್ರ ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದು ಮಟ್ಟಿಗೆ ಸೌಂಡ್ ಮಾಡುತ್ತಿದೆ. ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಪ್ರೇಮಿಗಳನ್ನ ರೀಚ್ ಆಗುವಲ್ಲಿ ಯಶಸ್ವಿ ಕೂಡ ಆಗಿದೆ. ಗೊತ್ತಿಲ್ಲ ಯಾರಿಗೂ, ಇರಲಿ ಬಿಡು ಈ ಜೀವ ನಿನಗಾಗಿ ಗೀತೆಗಳು ಚಿತ್ರಪ್ರೇಮಿಗಳ ಹೃದಯ ಗೆದ್ದಿವೆ. ಹೀರೋ ಅಭಿದಾಸ್, ಹೀರೋಯಿನ್ ಶರಣ್ಯಾ ಶೆಟ್ಟಿ (Sharanya Shetty) ಕಾಂಬಿನೇಷನ್ ಕಿಕ್ಕೇರಿಸುತ್ತಿದ್ದು, ಬಿಗ್ ಸ್ಕ್ರೀನ್ ಮೇಲೆ ಈ ಜೋಡಿ ನೋಡೋದಕ್ಕೆ ಯುವಪ್ರೇಮಿಗಳು ಮಾತ್ರವಲ್ಲ ಸಿನಿಮಾ ಪ್ರೇಮಿಗಳು ಕೂಡ ಕಾತುರದಿಂದ ಕಾಯ್ತಿದ್ದಾರೆ. ಇವರಿಬ್ಬರಿಗೂ ಇದು ಸ್ಪೆಷಲ್ ಸಿನಿಮಾ. ಯಾಕಂದ್ರೆ, ಅಭಿದಾಸ್ ಹಾಗೂ ಶರಣ್ಯಾ ಇಬ್ಬರು ಕೂಡ ಈ ಚಿತ್ರದಿಂದ ಸೋಲೋ ಹೀರೋ, ಹೀರೋಯಿನ್ ಆಗಿ ಪರಿಚಯ ಆಗ್ತಿದ್ದಾರೆ. ಹಾಡುಗಳ ಮೂಲಕವೇ ಚಿತ್ರಪ್ರೇಮಿಗಳನ್ನ ಅಟ್ರ‍್ಯಾಕ್ಟ್ ಮಾಡುವಲ್ಲಿ ಗೆಲುವು ಕಂಡಿದ್ದಾರೆ.

    ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಪ್ರಮೋದ್ ಮರವಂತೆ, ಕಬ್ಬಡಿ ನರೇಂದ್ರ ಬಾಬು, ಚಿದಂಬರ ನರೇಂದ್ರ, ಕಿರಣ್ ನಾಗರಾಜ್ ಸಾಹಿತ್ಯ ಗೀಚಿದ್ದಾರೆ. ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ ಸಂಯೋಜಿಸಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ. ಸಂಕಲನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ತ್ರಾಸಿ ಬೀಚ್, ಹುಲಿಕಲ್ ಘಾಟ್, ಮಾಸ್ತಿಗುಡಿ, ಶಿವಮೊಗ್ಗ, ತೀರ್ಥಹಳ್ಳಿ, ಮಲೆನಾಡು, ಮರವಂತೆ ಬೀಚ್ ಸೇರಿದಂತೆ ಹಲೆವೆಡೆ ‘ನಗುವಿನ ಹೂಗಳ ಮೇಲೆ’ ಸಿನಿಮಾ ಚಿತ್ರೀಕರಣಗೊಂಡಿದೆ.

    ಅಭಿದಾಸ್ (Abhidas) ಮತ್ತು ಶರಣ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ಟಾಲಿವುಡ್‌ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರ ಮೂಡಿಬಂದಿದೆ. ಈ ಸಂಸ್ಥೆಯಲ್ಲಿ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಇದೇ ಫೆ.9ರಂದು ಈ ಚಿತ್ರ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

  • ಟ್ರೈಲರ್ ನಲ್ಲೇ ಮೋಡಿ ಮಾಡಿದೆ ‘ನಗುವಿನ ಹೂಗಳ ಮೇಲೆ’

    ಟ್ರೈಲರ್ ನಲ್ಲೇ ಮೋಡಿ ಮಾಡಿದೆ ‘ನಗುವಿನ ಹೂಗಳ ಮೇಲೆ’

    ಶ್ರೀಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ನಿರ್ಮಿಸಿರುವ, ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ (Venkat Bharadwaj)ನಿರ್ದೇಶನದ ಹಾಗೂ ಅಭಿ ದಾಸ್ –  ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ನಗುವಿನ ಹೂಗಳ ಮೇಲೆ’ (Naguvina hugala mele)ಚಿತ್ರದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿದೆ.  ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಮನೆಮಾತಾಗಿರುವ ಈ ಕನ್ನಡ ಮಣ್ಣಿನ ನಿಜ ಪ್ರೇಮ ಕಥೆ  ಫೆಬ್ರವರಿ 9 ರಂದು ತೆರೆಗೆ ಬರುತ್ತಿದೆ.

    ನಿರ್ದೇಶಕ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ  ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ, ಚದಂಬರ ನರೇಂದ್ರ, ಕಬ್ಬಡಿ ನರೇಂದ್ರ‌ಬಾಬು ಹಾಗೂ ಕಿರಣ್ ನಾಗರಾಜ್ ಅವರು ರಚಿಸಿರುವ ಹಾಡುಗಳಿಗೆ ಲವ್ ಪ್ರಾಣ್ ಮೆಹ್ತಾ ಸಂಗೀತ ಸಂಯೋಜಿಸಿದ್ದಾರೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಲರ್ವಿನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

    ಅಭಿದಾಸ್ (Abhidas), ಶರಣ್ಯ ಶೆಟ್ಟಿ (Sharanya Shetty), ಗಿರೀಶ್ ಬೆಟ್ಟಪ್ಪ, ಹರ್ಷ ಗೋ ಭಟ್, ಬಾಲ ರಾಜವಾಡಿ, ಬೆನಕ ನಂಜಪ್ಪ, ಜ್ಯೋತಿ ಮರೂರ್, ಆಶಾ ಸುಜಯ್ ಮುಂತಾದವರು “ನಗುವಿನ ಹೂಗಳ ಮೇಲೆ” ಚಿತ್ರದಲ್ಲಿ ನಟಿಸಿದ್ದಾರೆ.

  • ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ಔಟ್- ಚಿತ್ರತಂಡಕ್ಕೆ ಎ.ಹರ್ಷ ಸಾಥ್

    ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ಔಟ್- ಚಿತ್ರತಂಡಕ್ಕೆ ಎ.ಹರ್ಷ ಸಾಥ್

    ವೆಂಕಟ್ ಭಾರದ್ವಾಜ್ ನಿರ್ದೇಶನದ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ಇದೇ ಫೆ.9ರಂದು ರಿಲೀಸ್ ಈಗಾಗಲೇ ಹಾಡುಗಳ ಮೂಲಕ, ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾ ಟ್ರೈಲರ್ ಅನ್ನು ಇಂದು (ಜ.29) ಖ್ಯಾತ ನಿರ್ದೇಶಕ ಎ.ಹರ್ಷ (A.Harsha) ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:ರಜನಿ ಸಂಘಿ ಅಲ್ಲ: ಮಗಳ ಮಾತಿಗೆ ಅಪ್ಪನ ಪ್ರತಿಕ್ರಿಯೆ

    ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಎ.ಹರ್ಷ ಶುಭಕೋರಿದ್ದಾರೆ. ಈಗಾಲೇ ಒಂದಷ್ಟು ಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್. ಅವರೀಗ ‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಪರಿಶುದ್ಧವಾದ ಪ್ರೇಮಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಪ್ರೇಮ ಕಥನದ ಚಿತ್ರಗಳೆಂದರೇನೇ ಯಾವತ್ತಿಗೂ ಮುಸುಕಾಗದಂಥಾ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೈಲರ್, ಮೂಲಕ ಈ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ.

    ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಅಭಿದಾಸ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ ಶೆಟ್ಟಿ (Sharanya Shetty) ನಾಯಕಿಯಾಗಿ ಜೊತೆಯಾಗಿದ್ದಾರೆ. ಎಲ್ಲ ವಯೋಮಾನದವರನ್ನೂ ತಾಕುವ ಗುಣ ಹೊಂದಿರುವ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ.ಕೆ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದ ಗಾಯಕ ಜುಬಿನ್ ನೌಟಿಯಾಲ್

    ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯ್ಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣವಿದೆ. ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ನಿರ್ದೇಶನ ಮತ್ತು ಚಂದನ್ ಪಿ. ಸಂಕಲನ ಈ ಚಿತ್ರಕ್ಕಿದೆ.

  • ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

    ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

    ಕಿರುತೆರೆಯ ‘ಗಟ್ಟಿಮೇಳ'(Gattimela) ಖ್ಯಾತಿಯ ಅಭಿದಾಸ್(Abhidas), ನಟಿ ಶರಣ್ಯಾ ಶೆಟ್ಟಿ ಜೋಡಿಯಾಗಿ ಅಭಿನಯಿಸಿರುವ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಎಸ್‌ಆರ್‌ವಿ ಥಿಯೇಟರ್‌ನಲ್ಲಿ ‘ಗೊತ್ತಿಲ್ಲ ಯಾರಿಗೂ’ (Gottilla Yarigu) ಎಂಬ ರೊಮ್ಯಾಂಟಿಕ್ ಹಾಡೊಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಸದ್ಯ ಶರಣ್ಯ ಶೆಟ್ಟಿ-ಅಭಿ ಜೋಡಿ ನೋಡುಗರನ್ನ ಮೋಡಿ ಮಾಡ್ತಿದೆ.

    ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ‘ನಗುವಿನ ಹೂಗಳ ಮೇಲೆ’ ಹೆಸರು ತುಂಬಾ ಚೆನ್ನಾಗಿದೆ ಮತ್ತು ತುಂಬಾ ತೂಕವಾದ ಹೆಸರು. ಡಾ.ರಾಜ್ ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ಸಿನಿಮಾದ ಹಾಡಿನ ಎರಡನೇ ಚರಣದಲ್ಲಿ ಬರುವ ತೂಕವಿರುವ ಪದ ಇದು. ಹೀಗಾಗಿ ನಮ್ಮ ಕಂಟೆಂಟ್ ಚೆನ್ನಾಗಿ ಮಾಡುವ ಜವಾಬ್ದಾರಿ ಹೆಚ್ಚಿತ್ತು. ಶರಣ್ಯ ಶೆಟ್ಟಿ- ಅಭಿ ಕಾಂಬಿನೇಷನ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ನಗುವಿನ ಹೂಗಳ ಮೇಲೆ ಒಂದೊಳ್ಳೆ ಪ್ರೇಮಕಥೆ. 18 ವರ್ಷದಿಂದ 80 ವರ್ಷದವರು ನೋಡಬಹುದು. ಪ್ರೇಮ ಅನ್ನೋದಕ್ಕೆ ಸಾವಿಲ್ಲ. ವಯಸ್ಸಿಲ್ಲ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ನಮಗೆ ಬೆಂಬಲವಾಗಿ ನಿಂತಿದ್ದರು. 27 ದಿನಗಳು ಶೂಟಿಂಗ್ ಮಾಡಿ ಮುಗಿಸಿದ್ದೇವೆ ಎಂದು ತಿಳಿಸಿದರು.

    ನಟ ಅಭಿದಾಸ್ ಮಾತನಾಡಿ, ಸೋಲೋ ಹೀರೋ ಆಗಿ ಇದು ನನ್ನ ಮೊದಲ ಸಿನಿಮಾ. ವೆಂಕಟ್ ಸರ್, ರಾಧಾ ಮೋಹನ್ ಸರ್ ಧನ್ಯವಾದ ನನ್ನ ಸೆಲೆಕ್ಟ್ ಮಾಡಿದ್ದಕ್ಕೆ. ನಾಲ್ಕು ಮೆಲೋಡಿ ಹಾಡು ಕೊಟ್ಟಿದ್ದಾರೆ. ಇರಲಿ ಬಿಡು, ಗೊತ್ತಿಲ್ಲ ಯಾರಿಗೂ ನನ್ನ ಫೇವರೇಟ್ ಹಾಡುಗಳು ಎಂದರು. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ಶರಣ್ಯ ಶೆಟ್ಟಿ (Sharanya Shetty) ಮಾತನಾಡಿ, ನಗುವಿನ ಹೂಗಳ ಮೇಲೆ ನನಗೆ ತುಂಬಾ ಸ್ಪೆಷಲ್ ಸಿನಿಮಾ. ಸೋಲೋ ಹೀರೋಯಿನ್ ಆಗಿ ಫಸ್ಟ್ ಸೈನ್ ಮಾಡಿದ ಮೂವಿ. ಎರಡು ವರ್ಷದ ಹಿಂದೆ ಶೂಟ್ ಮಾಡಿದ್ದು ಇದು. ಸ್ಕ್ರೀನ್‌ನಲ್ಲಿ ನನ್ನ ಮುಗ್ದತೆ ಕಾಣಿಸುತ್ತದೆ. ಶೂಟಿಂಗ್ ಪ್ರೋಸೆಸ್ ತುಂಬಾ ಚೆನ್ನಾಗಿತ್ತು. ಈ ಸಿನಿಮಾ ಟ್ರೂ ಲವ್ ಸ್ಟೋರಿ ಬೆಸೆಡ್ ಇದೆ. ತನು ಮನುವಿನ ಪ್ರೇಮಕಥೆ ನಗುವಿನ ಹೂಗಳ ಮೇಲೆ. ನಾನು ತೆರೆಮೇಲೆ ಚಿತ್ರ ನೋಡಲು ಕಾತುರಳಾಗಿದ್ದೇನೆ ಎಂದರು.

    ಗೊತ್ತಿಲ್ಲ ಯಾರಿಗೂ ಎಂಬ ಪ್ರೇಮಗೀತೆಗೆ ಲವ್ ಪ್ರಾನ್ ಮೆಹತಾ ಟ್ಯೂನ್ ಹಾಕಿದ್ದು, ಚಿದಂಬರ ನರೇಂದ್ರ ಸಾಹಿತ್ಯ ಬರೆದಿದ್ದು, ತಜೀಂದರ್ ಸಿಂಗ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಶರಣ್ಯ ಹಾಗೂ ಅಭಿದಾಸ್ ಮಿಂಚಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇರಲಿ ಬಿಡು ಈ ಜೀವ ನಿನಗಾಗಿ ಗಾನಲಹರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

    ಆಮ್ಲೆಟ್, ಕೆಂಪಿರ್ವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿದ್ದು, ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.

    ಟಾಲಿವುಡ್ ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೆಂಕಟ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ‘ಯು’ ಪ್ರಮಾಣಪತ್ರ

    ವೆಂಕಟ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ‘ಯು’ ಪ್ರಮಾಣಪತ್ರ

    ರೋಮ್ಯಾಂಟಿಕ್ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ನಗುವಿನ ಹೂಗಳ ಮೇಲೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದುಕೊಂಡಿದೆ. ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು ಪ್ರಮಾಣ ಪತ್ರ  ತನ್ನದಾಗಿಸಿಕೊಂಡಿದೆ.

    ಶ್ರೀರಂಗ , ಕೆಂಪಿರ್ವೆ ಮತ್ತು  ಆಮ್ಲೆಟ್  ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ (Venkat Bharadwaj) ಆಕ್ಷನ್ ಕಟ್ ಹೇಳಿರುವ ನಗುವಿನ ಹೂಗಳ ಮೇಲೆ  (Naguvin Hugala mele) ಸಿನಿಮಾದಲ್ಲಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್ (Abhidas), ಶರಣ್ಯ ಶೆಟ್ಟಿ (Sharanya Shetty)ಜೋಡಿಯಾಗಿ ನಟಿಸುತ್ತಿದ್ದು, ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ಈಗಾಗಲೇ ಬಿಡುಗಡೆಯಾಗಿರುವ ಇರಲಿ ಬಿಡು ಈ ಜೀವ ನಿನಗಾಗಿ ಎಂಬ ರೋಮ್ಯಾಂಟಿಕ್ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ವೆಂಕಟ್‌ ಭಾರದ್ವಾಜ್‌ ಕಥೆ, ಚಿತ್ರಕಥೆ ಬರೆದು‌ ನಿರ್ದೇಶಿಸಿರುವ ನಗುವಿನ ಹೂಗಳ ಮೇಲೆ ಸಿನಿಮಾವನ್ನು ಟಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳಾದ  ಬೆಂಗಾಲ್ ಟೈಗರ್, ಪಂಥಂ, ಒರೆ ಬುಜ್ಜುಗ , ಒಡೇಲ ರೈಲ್ವೆ ಸ್ಟೇಷನ್  ಮತ್ತು ಪ್ಯಾರ್  ಮೇ ಪಡೀಪೊಯಾನು ಚಿತ್ರಗಳನ್ನು ನಿರ್ಮಾಣ ಮಾಡಿರುವ  ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ.

    ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸವಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.