Tag: ಅಭಿಜಿತ್

  • ವಿನೋದ್‌ ಇಲ್ಲದೇ ಇರೋದು ಕಿರುತೆರೆಗೆ ದೊಡ್ಡ ನಷ್ಟ: ನಟ ಅಭಿಜಿತ್ ಭಾವುಕ

    ವಿನೋದ್‌ ಇಲ್ಲದೇ ಇರೋದು ಕಿರುತೆರೆಗೆ ದೊಡ್ಡ ನಷ್ಟ: ನಟ ಅಭಿಜಿತ್ ಭಾವುಕ

    ನಿರ್ದೇಶಕ ವಿನೋದ್ ದೊಂಡಾಳೆ (Vinod Dondale) ನಾಗರಭಾವಿಯಲ್ಲಿರುವ ನಿವಾಸಕ್ಕೆ ಹಿರಿಯ ನಟ ಅಭಿಜಿತ್ (Actor Abhijith) ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವಿನೋದ್ ಅವರ ಸಾವು ನೋವು ಕೊಟ್ಟಿದೆ. ಅವರು ಹೀಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ ಎಂದು ನಟ ಅಭಿಜಿತ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ಇದು ದುಃಖಕರ ಸನ್ನಿವೇಶ ಆಗಿದೆ. ವಿನೋದ್ ನಿರ್ದೇಶನದಲ್ಲಿ ‘ಗಂಗೆ ಗೌರಿ’ ಸೀರಿಯಲ್‌ನಲ್ಲಿ (Gange Gowri Serial) ಆ್ಯಕ್ಟ್ ಮಾಡ್ತಿದ್ದೇನೆ. ಅವರು ಸೌಮ್ಯ ಸ್ವಭಾವದವರಾಗಿದ್ದರು. ಸೆಟ್‌ನಲ್ಲಿ ಸಿಟ್ಟು  ಮಾಡಿಕೊಂಡಿರೋದನ್ನು ನಾನು ನೋಡೇ ಇಲ್ಲ. ಇಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿರೋದನ್ನ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಅವರ ಸಾವು ಇಡೀ ಫ್ಯಾಮಿಲಿಗೆ ತುಂಬಾ ನೋವಾಗಿದೆ. ವಿನೋದ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ವಿನೋದ್‌ ಇಲ್ಲದೇ ಇರೋದು ಕಿರುತೆರೆ ಮತ್ತು ಹಿರಿತೆರೆಗೆ ದೊಡ್ಡ ಲಾಸ್ ಎಂದು ಹಿರಿಯ ನಟ ಅಭಿಜಿತ್ ಮಾತನಾಡಿದ್ದಾರೆ.

    ‘ಗಂಗೆ ಗೌರಿ’ಯಲ್ಲಿ ಮದುವೆ ಸೀನ್ ಶೂಟಿಂಗ್ ಮಾಡುವಾಗ ಹೆಚ್ಚು ಸಮಯ ಕಳೆದಿದ್ದೇನೆ. ನನಗೆ ತುಂಬಾ ಗೌರವ ಕೊಡುತ್ತಿದ್ದರು. ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇನ್ನೂ ಅವರು ಒಂದು ಸಿನಿಮಾ ಮಾಡ್ತಿದ್ದರು ಅದು ಇತ್ತೀಚೆಗೆ ಸ್ಟಾಪ್ ಆಗಿತ್ತು ಅನ್ನೋ ವಿಚಾರ ಗೊತ್ತಿತ್ತು ಎಂದಿದ್ದಾರೆ. ಯಾಕೆ ಏನು ಎಂದು ಹಿಂದಿನ ಸತ್ಯ ನಮಗೂ ಗೊತ್ತಿಲ್ಲ ಎಂದು ನಟ ಅಭಿಜಿತ್ ಮಾತನಾಡಿದ್ದಾರೆ.

    ಅಂದಹಾಗೆ, ನಿರ್ದೇಶಕ ವಿನೋದ್ ದೊಂಡಾಳೆ ಜು.20ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಜು.21) ಚಾಮರಾಜಪೇಟೆ ಟಿ.ಆರ್ ಮಿಲ್‌ನಲ್ಲಿ ವಿನೋದ್ ದೊಂಡಾಳೆ ಅಂತ್ಯಕ್ರಿಯೆ ನಡೆಯಲಿದೆ.

  • ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ನವದೆಹಲಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನಾರೋಗ್ಯಕ್ಕೂ ಮುನ್ನ ಹಳ್ಳಿಯಲ್ಲಿ ಸಿಗುವ ಹಲಸಿನ ಹಣ್ಣು ತರಿಸಿಕೊಂಡು ತಿಂದಿದ್ದರು.

    ಪಶ್ಚಿಮ ಬಂಗಾಳದ ರಾಜಕಾರಣಿಯಾಗಿರುವ ಮಗ ಅಭಿಜಿತ್ ಜೊತೆ ಮಾಜಿ ರಾಷ್ಟ್ರಪತಿಯವರು ತನಗೆ ಹಲಸಿನ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತಿದೆ. ಹೀಗಾಗಿ ಅದನ್ನು ತಂದುಕೊಡುವಂತೆ ಹೇಳಿದ್ದರು. ಅಂತೆಯೇ ಅಭಿಜಿತ್ ಕೂಡ ತಮ್ಮ ತಂದೆಗೆ ಹಲಸಿನ ಹಣ್ಣು ತಂದು ಕೊಟ್ಟಿದ್ದರು.

    ತಂದೆ ಮನವಿಯಂತೆ ನಾನು ಪಶ್ಚಿಮ ಬಂಗಾಳದ ಬಿರ್‍ಭುಮ್ ಜಿಲ್ಲೆಯ ಮಿರಾತಿ ಎಂಬ ಗ್ರಾಮಕ್ಕೆ ತೆರಳಿ ಹಲಸಿನ ಹಣ್ಣು ತೆಗೆದುಕೊಂಡು ಬಂದಿದ್ದೆ. 25 ಕೆ.ಜಿಯಷ್ಟು ಹಣ್ಣು ಹಿಡಿದುಕೊಂಡು ಆಗಸ್ಟ್ 3 ರಂದು ದೆಹಲಿ ರೈಲು ಹತ್ತಿ ಅವರನ್ನು ಭೇಟಿಯಾಗಿ ಅವರ ಆಸೆಯಂತೆ ಹಣ್ಣನ್ನು ನೀಡಿದ್ದೆ. ತಂದೆ ಹಾಗೂ ನನಗೆ ರೈಲು ಪ್ರಯಾಣ ಅಂದರೆ ಅಚ್ಚುಮೆಚ್ಚು ಎಂದು ಅಭಿಜಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ತಂದು ಕೊಟ್ಟ ದಿನವೇ ತಂದೆ ಹಣ್ಣು ತಿಂದಿದ್ದಾರೆ. ಅದೃಷ್ಟವಶಾತ್ ಅವರ ಶುಗರ್ ಲೆವೆಲ್ ನಲ್ಲಿ ಏನೂ ಬದಲಾವಣೆಯಾಗಿಲ್ಲ. ಹಣ್ಣನ್ನು ನೋಡುತ್ತಿದ್ದಂತೆಯೇ ತಂದೆಗೆ ತುಂಬಾನೆ ಖುಷಿಯಾಗಿತ್ತು. ಆಗ ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೆ ವಾರದ ಬಳಿಕ ಅವರು ಹಠಾತ್ ಅನಾರೋಗ್ಯಕ್ಕೀಡಾದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ ಅವರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಅವರು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೂವರೆಗೆ ನನಗೆ 4 ಬಾರಿ ಅವರನ್ನು ನೋಡಲು ಅವಕಾಶ ಸಿಕ್ಕಿತ್ತು. ಅವರನ್ನು ನೋಡಲು ತೆರಳುವಾಗ ನಾನು ಪಿಪಿಇ ಕಿಟ್ ಧರಿಸಿ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಾನು ನಾಲ್ಕನೇ ಬಾರಿ ನೋಡಲು ಹೋದಾಗ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದರು ಎಂದು ಅಭಿಜಿತ್ ತಿಳಿಸಿದರು.