Tag: ಅಭಯ ಪಾಟೀಲ್

  • ಕಾಯಕಯೋಗಿಗಳಿಂದ ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜು

    ಕಾಯಕಯೋಗಿಗಳಿಂದ ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜು

    ಬೆಳಗಾವಿ: ಇಂದು (ಸೋಮವಾರ) ನಗರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಐವರು ಕಾಯಕಯೋಗಿಗಳು ಸ್ವಾಗತಿಸಲಿದ್ದಾರೆ. ಆಟೋ ಚಾಲಕ, ಪೌರ ಕಾರ್ಮಿಕ ಮಹಿಳೆ, ನೇಕಾರ, ರೈತ ಮಹಿಳೆ, ಕಟ್ಟಡ ಕಾರ್ಮಿಕರನ್ನು ಗುರುತಿಸಿ ಮೋದಿಯವರ ಸ್ವಾಗತಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಬೆಳಗಾವಿ (Belagavi) ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ (Abhay Patil) ನೇತೃತ್ವದಲ್ಲಿ ಐವರು ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಐವರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

    ಮಧ್ಯಾಹ್ನ ಆಗಮಿಸಲಿರುವ ಪ್ರಧಾನಿಗೆ ಆಟೋ ಚಾಲಕ ಮಯೂರ್ ಚೌಹಾಣ್, ಪೌರಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ್, ರೈತ ಮಹಿಳೆ ಶೀಲಾ ಬಾಬಾರುವಾಕ್ ಖನ್ನುಕರ್ ಹಾಗೂ ನೇಕಾರ ಕಲ್ಲಪ್ಪ ಟೋಪಗಿ ಅವರಿಂದ ಸ್ವಾಗತ ಸಿಗಲಿದೆ.

    ಕಾರ್ಯಕ್ರಮದಲ್ಲಿ ಭಾಗವಹಿಸುವ ಲಕ್ಷಾಂತರ ಜನರಿಗೆ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಹಾಲು ಗಿಣ್ಣ, ಬದನೆಕಾಯಿ ಪಲ್ಯ, ಅನ್ನ-ಸಾಂಬಾರಿನ ವ್ಯವಸ್ಥೆ ಮಾಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆಯಿದೆ. ಅಲರವಾಡ ಹಾಗೂ ಹಲಗಾ ರಸ್ತೆಯ ಯಡಿಯೂರಪ್ಪ (B.S.Yediyurappa) ಮಾರ್ಗದ ಎಡ ಮತ್ತು ಬಲ ಭಾಗದಲ್ಲಿ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 30 ಜನ ಅಡುಗೆ ತಯಾರಕರಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಕೇಸರಿಮಯವಾದ ಕುಂದಾನಗರಿ ಬೆಳಗಾವಿ- ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಬಾವುಟ ಹಾರಾಟ

  • ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ: ಅಭಯ ಪಾಟೀಲ್

    ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ: ಅಭಯ ಪಾಟೀಲ್

    ಬೆಳಗಾವಿ: ಹಿಜಬ್ ಕುರಿತು ಹೈಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟವಾಗಿದ್ದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಸ್ವಾಗತಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಗೊತ್ತಿದ್ದರೂ ಹಿಜಬ್ ಪರ ನಿಂತು ಕರ್ನಾಟಕದಲ್ಲಿ ಕಾಂಗ್ರೆಸ್ ಅಶಾಂತಿ ನಿರ್ಮಾಣ ಮಾಡುವ ಪಯತ್ನ ಮಾಡುತ್ತಿದ್ದಾರೆ. ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ ಸಿಎಫ್‍ಐ ಕೆಲ ವಿದ್ಯಾರ್ಥಿ ಸಂಘಟನೆಗಳ ಜೊತೆ ಕಾಂಗ್ರೆಸ್ ಸಹ ಒಂದು. ಹೀಗಾಗಿ ಇನ್ನಾದರೂ ಕಾಂಗ್ರೆಸ್‍ಗೆ ಬುದ್ದಿ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳತ್ತೇನೆ ಎಂದರು. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ

    ಇವತ್ತು ಹೈಕೋರ್ಟ್ ತನ್ನ ನಿರ್ಣಯ ಹೇಳಿದೆ. ಹಿಜಬ್ ಪ್ರಕರಣ ಮಾಡೋರಿಗೆ ನೇರ ಸಂದೇಶ ಹೋಗಿದೆ. ಅದಕ್ಕಿಂತ ಹೆಚ್ಚು ಕಾಂಗ್ರೆಸ್ ನವರಿಗೆ ಸಂದೇಶ ಹೋಗಿದೆ. ಒಂದು ಸಮಾಜವನ್ನು ಎತ್ತಿ ಕಾನೂನು ವಿರುದ್ಧವಾಗಿ ತಲೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದರು. ಇದ್ದಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ ಎಂದು ಹೇಳಿದರು. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಹಿಜಬ್ ಪ್ರಕರಣ ಪ್ರಾರಂಭವಾದಾಗಿನಿಂದ ಹಿಂದೂತ್ವ ಸಂಘಟನೆ, ಹಿಂದೂಗಳ ಬಗ್ಗೆ ಅನಾಚಾರ ಮಾಡುವ ಕೆಲಸ ಕಾಂಗ್ರೆಸ್ ಪ್ರಾರಂಭ ಮಾಡಿತ್ತು. ಅದಕ್ಕೆ ಇವತ್ತು ಹೈಕೋರ್ಟ್ ಉತ್ತರ ಕೊಟ್ಟಿದೆ. ಇನ್ನಾದರೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಾಬ್ ಅಂತ ಘೋಷನೆ ಕೂಗುವವರ ಜೊತೆ ಕಾಂಗ್ರೆಸ್ ಸಹ ಆದೇಶ ಪಾಲನೆ ಮಾಡಬೇಕು ಎಂದರು.