Tag: ಅಬ ಜಬ ದಬ

  • ಮಯೂರ ರಾಘವೇಂದ್ರ ನಿರ್ದೇಶನದ ‘ಅಬ ಜಬ ದಬ’ ಸಿನಿಮಾದ ಹೊಸ ಅಪ್ ಡೇಟ್

    ಮಯೂರ ರಾಘವೇಂದ್ರ ನಿರ್ದೇಶನದ ‘ಅಬ ಜಬ ದಬ’ ಸಿನಿಮಾದ ಹೊಸ ಅಪ್ ಡೇಟ್

    ಳೆದವರ್ಷ “ಕನ್ನಡ್ ಗೊತ್ತಿಲ್ಲ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ (Mayuru Raghavendra) ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ (Prithvi Amber) ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ “ಅಬ ಜಬ ದಬ” (Aba Jaba Daba) ಚಿತ್ರರ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಇನ್ನು ಹತ್ತು ದಿನಗಳ ಚಿತ್ರೀಕರಣವಾದರೆ ಚಿತ್ರೀಕರಣ ಮುಕ್ತಾಯವಾಗಲಿದೆ.

    “ಕನ್ನಡ್ ಗೊತ್ತಿಲ್ಲ” ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ಸಿದ್ದಾವಾಯಿತು. ಕಥೆಗೆ ಒಳ್ಳೆಯ ಟೈಟಲ್ ಬೇಕಿತ್ತು. ಮನೆಯಲ್ಲಿ ನನ್ನ ಅಣ್ಣ, ಅವಳ ಮಗಳಿಗೆ ಅದೇನು ಹೇಳುತ್ತಾಳೊ.. ಗೊತ್ತೆ ಆಗಲ್ಲ “ಅಬ ಜಬ ದಬ” ಅಂತಾಳೆ ಎಂದ. ನಾನು ತಕ್ಷಣ ಈ ಶೀರ್ಷಿಕೆ ಚೆನ್ನಾಗಿದೆ ಅಂತ ಅದೇ ಇಟ್ಟಿದ್ದೀನಿ. ಆನಂತರ ಸ್ನೇಹಿತ ಅನಂತ ಕೃಷ್ಣ ನಿರ್ಮಾಣಕ್ಕೆ ಮುಂದಾದರು. ಪೃಥ್ವಿ ಅಂಬರ್ – ಅಂಕಿತ ಅಮರ್ ನಾಯಕ – ನಾಯಕಿ ಅಂತ ನಿಗದಿಯಾದರು. ಅಚ್ಯುತಕುಮಾರ್ ಕುಮಾರ್, ಸುಧಾರಾಣಿ, ಹಿರಿಯ ನಟಿ ಊರ್ವಶಿ, ಬಾಬು ಹಿರಣ್ಣಯ್ಯ, ಸಂಗೀತಾ ಭಟ್ ನಮ್ಮ ಚಿತ್ರದಲ್ಲಿ ‌ಅಭಿನಯಿಸಲು ಒಪ್ಪಿದ್ದರು.‌ ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಮೀರ ಸಿಂಹ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.‌ ಎಲ್ಲರ ಸಹಕಾರದಿಂದ “ಅಬ ಜಬ ದಬ” ಒಳ್ಳೆಯ ಚಿತ್ರವಾಗಿ ಹೊರಹೊಮ್ಮಲಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದರು ನಿರ್ದೇಶಕ ಮಯೂರ ರಾಘವೇಂದ್ರ.

    ನನಗೆ ಮಯೂರ ರಾಘವೇಂದ್ರ ಕಥೆ  ಇಷ್ಟವಾಯಿತು. ಇದು ಬರೀ ಕಾಮಿಡಿ ಸಿನಿಮಾ ಅಲ್ಲ. ಫ್ಯಾಂಟಸಿ ಕಾಮಿಡಿ ಸಿನಿಮಾ. ಚಿತ್ರದ ಹಾಡುಗಳು ಚೆನ್ನಾಗಿದೆ. ಊರ್ವಶಿ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು ಸಂತೋಷವಾಗಿದೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನನ್ನ ಪಾತ್ರ ಕೂಡ ಸುಂದರವಾಗಿದೆ ಎಂದರು ನಾಯಕ ಪೃಥ್ವಿ ಅಂಬರ್. ಇದು ನಾನು ಬಣ್ಣ ಹಚ್ಚಿದ ಮೊದಲ ಚಿತ್ರ. ಪ್ರಿಯ ನನ್ನ ಪಾತ್ರದ ಹೆಸರು. ನಾನು ಈ ಚಿತ್ರದಲ್ಲಿ ಗಾಯಕಿ. ಎಸ್.ಪಿ.ಬಿ ಅವರ ಅಭಿಮಾನಿ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಅಂಕಿತ ಅಮರ್ ಮಾಹಿತಿ ನೀಡಿದರು. ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    ಮೂರು ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸುನಂದಾ ಕಾಂಬ್ರೇಕರ್ ನನ್ನ ಪಾತ್ರದ ಹೆಸರು. ವಿಶೇಷ ಪಾತ್ರ ಅಂತ ಹೇಳಬಹುದು ಎಂದರು ನಟಿ ಸಂಗೀತಾ ಭಟ್. ನಿರ್ಮಾಪಕ ಅನಂತ ಕೃಷ್ಣ, ಛಾಯಾಗ್ರಾಹಕ ಗಿರಿಧರ್ ದಿವಾನ್ ಹಾಗೂ ನಟ ಬಾಬು ಹಿರಣ್ಣಯ್ಯ ಚಿತ್ರದ ಕುರಿತು ಮಾತನಾಡಿದರು. ಸತೀಶ್ ರಘುನಾಥನ್ ಈ ಚಿತ್ರದ ಸಂಗೀತ ನಿರ್ದೇಶಕರು.

    Live Tv
    [brid partner=56869869 player=32851 video=960834 autoplay=true]