Tag: ಅಬ್ದುಲ್ ಕಲಾಂ

  • 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್‌

    10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್‌

    ಭೋಪಾಲ್‌: ಕಳೆದ 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ (Transgender) ವೇಷದಲ್ಲಿದ್ದ ಬಾಂಗ್ಲಾ ಪ್ರಜೆಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆ ವೇಳೆ ಭೋಪಾಲ್ ಪೊಲೀಸರು (Bhopal Police) ‘ನೇಹಾ’ ಎಂಬ ನಕಲಿ ಗುರುತಿನಡಿ ನಗರದಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬಾತನನ್ನ ಬಂಧಿಸಿದ್ದಾರೆ.

    10ನೇ ವಯಸ್ಸಿಗೇ ಬಾಂಗ್ಲಾದೇಶದಿಂದ (Bangladesh) ಭಾರತಕ್ಕೆ ಬಂದಿದ್ದ ಅಬ್ದುಲ್, 20 ವರ್ಷಗಳನ್ನು ಮುಂಬೈನಲ್ಲಿ ಕಳೆದಿದ್ದಾನೆ. ಕಳೆದ 8 ವರ್ಷದಿಂದ ಭೋಪಾಲ್‌ನ ಬುದ್ವಾರಾದಲ್ಲಿ ನೆಲೆಸಿರುವ ಅವನು ಮಂಗಳಮುಖಿ ಎಂದು ಹೇಳಿಕೊಂಡು ಸ್ಥಳೀಯ ಹಿಜಡಾ ಸಮುದಾಯದ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

    ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಧಾರ್, ಪಡಿತರ ಚೀಟಿ, ಪಾಸ್‌ಪೋರ್ಟ್‌ ಸೇರಿದಂತೆ ಪ್ರಮುಖ ದಾಖಲೆಗಳನ್ನ ಪಡೆದುಕೊಂಡಿದ್ದಾರೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ – ಕೆಲಸದ ಒತ್ತಡವೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟು ಸೂಸೈಡ್

    ‘ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದಲ್ಲದೇ, ನಕಲಿ ಪಾಸ್‌ಪೋರ್ಟ್‌ ಬಳಸಿಕೊಂಡು ವಿದೇಶಕ್ಕೂ ಪ್ರಯಾಣ ಮಾಡಿದ್ದಾನೆ. ಬುದ್ವಾರಾದಲ್ಲಿ ಹಲವು ಮನೆಗಳನ್ನು ಬದಲಾಯಿಸಿರುವ ಈತ, ನೇಹಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ. ಮಹಾರಾಷ್ಟ್ರದಲ್ಲೂ ಮಂಗಳಮುಖಿಯಾಗಿ ಸಕ್ರಿಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಗುರುತನ್ನು ಮರೆಮಾಚಲು ಮಂಗಳಮುಖಿಯಾಗಿ ವೇಷ ಮರೆಸಿಕೊಂಡಿದ್ದಾನಾ? ಅಥವಾ ಜೈವಿಕವಾಗಿ ಲಿಂಗತ್ವ ಅಲ್ಪಸಂಖ್ಯಾತನಾ? ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

  • ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

    ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ – ಆಯ್ದ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ

    ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಶನಿವಾರ ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ (APJ Abdul Kalam) ದ್ವೀಪದಲ್ಲಿ ದೀರ್ಘ-ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿ (Hypersonic missile) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

    DRDO ಪರೀಕ್ಷಿಸಿದ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಸೇವೆಗಳಿಗಾಗಿ 1,500 ಕಿಮೀಗಿಂತ ಹೆಚ್ಚಿನ ವ್ಯಾಪ್ತಿಯ ವಿವಿಧ ಸಿಡಿತಲೆಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಚೀನಾ, ರಷ್ಯಾ, ಅಮೆರಿಕ ಈಗಾಗಲೇ ಹೈಪರ್‌ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದು ಈ ಪಟ್ಟಿಗೆ ಈಗ ಭಾರತ ಸೇರ್ಪಡೆಯಾಗಿದೆ.

     

    ಕ್ಷಿಪಣಿಯನ್ನು ಹೈದರಾಬಾದ್‌ನ ಡಾ ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಪ್ರಯೋಗಾಲಯ,  ಇತರ ಡಿಆರ್‌ಡಿಒ ಪ್ರಯೋಗಾಲಯಗಳು ಮತ್ತು ಇತ ಉದ್ಯಮ ಪಾಲುದಾರರಿಂದ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. DRDO ಮತ್ತು ಸಶಸ್ತ್ರ ಪಡೆಗಳ ಹಿರಿಯ ವಿಜ್ಞಾನಿಗಳ ಸಮ್ಮುಖದಲ್ಲಿ ಪ್ರಯೋಗವನ್ನು ನಡೆಸಲಾಯಿತು.

     

    ಕ್ಷಿಪಣಿಯ ಯಶಸ್ವಿ ಹಾರಾಟದ ಪ್ರಯೋಗಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಡಿಆರ್‌ಡಿಒವನ್ನು ಅಭಿನಂದಿಸಿದ್ದಾರೆ. ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ದೀರ್ಘ ವ್ಯಾಪ್ತಿಯ ಹೈಪರ್‌ ಸಾನಿಕ್‌ ಕ್ಷಿಪಣಿಯ ಹಾರಾಟವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭಾರತವು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಮಹತ್ವದ ಸಾಧನೆಯಿಂದ ಆಯ್ದ ದೇಶಗಳ ಸಾಲಿನಲ್ಲಿ ನಮ್ಮ ದೇಶವು ಸ್ಥಾನ ಪಡೆದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಹೈಪರ್‌ಸಾನಿಕ್‌ ಕ್ಷಿಪಣಿಗಳು ಮೇಲಿನ ವಾತಾವರಣದಲ್ಲಿ ಶಬ್ದಕ್ಕಿಂತ ಐದು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತವೆ ಅಥವಾ ಗಂಟೆಗೆ 6,200 ಕಿಮೀ (3,850 mph) ವೇಗದಲ್ಲಿ ಹೋಗುತ್ತದೆ. ಆದರೆ ಇದು  ಖಂಡಾಂತರ ಕ್ಷಿಪಣಿಗಿಂತ ನಿಧಾನವಾಗಿರುತ್ತದೆ.

     

  • Manipur: ಅಬ್ದುಲ್‌ ಕಲಾಂರಿಂದ ಗೌರವಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಸಜೀವ ದಹನ

    Manipur: ಅಬ್ದುಲ್‌ ಕಲಾಂರಿಂದ ಗೌರವಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಸಜೀವ ದಹನ

    ಇಂಫಾಲ್‌: ಮಣಿಪುರದಲ್ಲಿ ಹಿಂಸಾಚಾರ (Manipur Violence) ದಿನದಿಂದ ದಿನಕ್ಕೆ ಭುಗಿಲೇಳುತ್ತಿದೆ. ಮಹಿಳೆಯರನ್ನ ಬೆತ್ತಲೆ ಮೆರವಣಿಗೆ (Manipur Women Paraded) ನಡೆಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅದೇ ದಿನ ಮತ್ತಿಬ್ಬರು ಯುವತಿಯರ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಇದೀಗ ಸ್ವಾತಂತ್ರ್ಯ ಹೋರಾಟಗಾರನೊಬ್ಬರ ಪತ್ನಿಯನ್ನ ಸಜೀವ ದಹನ ಮಾಡಿರುವ ಘಟನೆ ಜನರನ್ನ ಬೆಚ್ಚಿ ಬೀಳಿಸಿದೆ.

    ಕಾಕ್ಚಿಂಗ್‌ ಜಿಲ್ಲೆಯ ಸೆರೋ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರನ (Freedom Fighter) ಪತ್ನಿ 80‌ ವರ್ಷದ ಮಹಿಳೆಯನ್ನ ಮನೆಯೊಳಗೆ ಕೂಡಿಹಾಕಿಕೊಂಡು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಮೇ 28ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸೆರೋ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಕೇಸ್‌ ದಾಖಲಾಗಿದೆ.

    ಮೃತ ಮಹಿಳೆ ಸ್ವಾತಂತ್ರ್ಯ ಹೋರಾಟಗಾರ ಎಸ್‌.ಚೂರಚಂದ್‌ ಸಿಂಗ್‌ ಅವರ ಪತ್ನಿ. ಚೂರಚಂದ್‌ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಂದ ಗೌರವಿಸಲ್ಪಟ್ಟಿದ್ದರು. ಇದನ್ನೂ ಓದಿ: ಬೆತ್ತಲೆ ಮೆರವಣಿಗೆ ದಿನವೇ ಮತ್ತಿಬ್ಬರು ಯುವತಿಯರ ಮೇಲೆ ರೇಪ್, ಮರ್ಡರ್ ಆರೋಪ – ಮಣಿಪುರ ಧಗ ಧಗ

    ಕಳೆದ ಮೇ 3 ರಂದು ಹಿಂಸಾಚಾರ ಭುಗಿಲೇಳುವುದಕ್ಕೂ ಮುನ್ನ ರಾಜಧಾನಿ ಇಂಫಾಲ್‌ನಿಂದ 45 ಕಿಮೀ ದೂರದಲ್ಲಿ ಸುಂದರ ಗ್ರಾಮವಾಗಿದ್ದ ಸೆರೋ ಈಗ ಸ್ಮಶಾನದಂತೆ ಕಾಣುತ್ತಿದೆ. ಕೇವಲ ಸುಟ್ಟ ಮನೆಗಳಷ್ಟೇ ಕಣ್ಣಿಗೆ ಗೋಚರವಾಗುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

    ಪರಿಶಿಷ್ಟ ಪಂಗಡಗಳ ಸ್ಥಾನಮಾನಕ್ಕಾಗಿ ಮಿಟೈಸ್‌ ಮತ್ತು ಕುಕಿ ಬುಡಕಟ್ಟಿನ ನಡುವೆ ಘರ್ಷಣೆ ಪ್ರಾರಂಭವಾದ ಕೆಲ ದಿನಗಳ ನಂತರ ಶಸ್ತ್ರಸಜ್ಜಿತ ಗುಂಪೊಂದು ದಾಳಿ ನಡೆಸಿ 80 ವರ್ಷದ ಮಹಿಳೆಯನ್ನ ಜೀವಂತವಾಗಿ ಸುಟ್ಟುಹಾಕಿತ್ತು. ಆಕೆಯನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ಮೊಮ್ಮಗ ಪ್ರೇಮಕಾಂತ ಕಣ್ಣಾರೆ ಕಂಡ ದೃಶ್ಯವನ್ನ ವಿವರಿಸಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ನಡೆದ ಘಟನೆ ದುಃಖಕರ – ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಬ್ರಿಜ್‌ ಭೂಷಣ್‌ ಸಿಂಗ್‌ ಖಂಡನೆ

    ಸುಮಾರು ಎರಡೂವರೆ ತಿಂಗಳಿನಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಶಾಂತಿ ಎಂಬುದಿಲ್ಲಿ ಮರೀಚಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಮನುಕುಲ ತಲೆತಗ್ಗಿಸುವಂತಹ ವೀಡಿಯೋ ಒಂದು ಹೊರಬಂದಿತ್ತು. ಆದಿವಾಸಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲೆ ಮಾಡಿದ ರಾಕ್ಷಸಿ ಗುಂಪೊಂದು, ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿತ್ತು. ಈ ದೃಶ್ಯಾವಳಿ ಇದು ಇಡೀ ದೇಶದ ಮನಕಲಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಶಸ್ತ್ರ ಪಡೆಯಲ್ಲಿ ಮುಸ್ಲಿಮರಿಗೆ 30% ಮೀಸಲಾತಿ ನೀಡಿ: ಜೆಡಿಯು

    ಸಶಸ್ತ್ರ ಪಡೆಯಲ್ಲಿ ಮುಸ್ಲಿಮರಿಗೆ 30% ಮೀಸಲಾತಿ ನೀಡಿ: ಜೆಡಿಯು

    ಪಾಟ್ನಾ: ಮುಸ್ಲಿಮರಿಗೆ ಸಶಸ್ತ್ರ ಪಡೆಯಲ್ಲಿ ಕನಿಷ್ಟ 30% ಆದರೂ ಮೀಸಲಾತಿ ನೀಡಬೇಕು ಎಂದು ಜೆಡಿಯು (JDU)ನಾಯಕ ಗುಲಾಮ್ ರಸೂಲ್ (Gulam Rasool Balywai ) ಬಲ್ಯಾವಿ ಮಂಗಳವಾರ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.

    2019ರ ಪುಲ್ವಾಮ ಭಯೋತ್ಪಾದನಾ (PulwamaA Attack) ದಾಳಿಗೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೈನಿಕರ ತ್ಯಾಗ ಬಲಿದಾನದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಕಿಸ್ತಾನಕ್ಕೆ ಹಾಗೂ ಭಯೋತ್ಪಾದಕರಿಗೆ ಹೆದರುತ್ತಾರೆ. ಮುಸಲ್ಮಾನರಿಗೆ 30% ಮೀಸಲಾತಿ ಕೊಟ್ಟು ನೋಡಲಿ. ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುವಾಗ ಬಂದಿದ್ದು ಅಬ್ದುಲ್ ಕಲಾಂ (APJ Abdul Kalam) ಎಂಬ ಮುಸಲ್ಮಾನ್ ವ್ಯಕ್ತಿಯೇ ಹೊರತು ನಾಗ್ಪುರದ ಯಾವ ಬಾಬಾನೂ ಬರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ತಿಂಗಳಾದ್ರೂ ಪತ್ನಿಗೆ ಸಂಬಳ ಬಂದಿಲ್ಲ ಎಂದ ವ್ಯಕ್ತಿಗೆ ಸೊಂಟ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಸಚಿವ

    ಬಿಜೆಪಿ ಸೈನಿಕರ ಹೆಸರಿನಲ್ಲಿ ಮತಯಾಚನೆ ಮಾಡಿದೆ. ಬಿಜೆಪಿ ತನ್ನ ಅಪರಾಧಗಳನ್ನು ಮರೆಮಾಚಲು ಸೇನೆಯ ಹೆಸರನ್ನು ಬಳಸಿಕೊಳ್ಳುತ್ತಿದೆ. ಸೈನಿಕರ ರಕ್ತವನ್ನು ರಾಜಕೀಯಕ್ಕೆ ಬಳಕೆ ಮಾಡಿ ತನ್ನ ತಪ್ಪುಗಳನ್ನು ಅಡಗಿಸುವ ಪ್ರಯತ್ನ ಮಾಡಿದೆ ಎಂದು ಅವರು ದೂರಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರದ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ನಿತೀಶ್ ಕುಮಾರ್, ಬುಲ್ಯಾವಿಯವರ ಬೇಡಿಕೆಯನ್ನು ಖಂಡಿಸಿದ್ದಾರೆ. ಅವರ ಹೇಳಿಕೆಯ ಬಗ್ಗೆ ವಿವರಣೆಯನ್ನು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ‘ಪಠಾಣ್’ ಚಿತ್ರಕ್ಕೆ ಮತ್ತೊಂದು ಜಯ : ಹಾಡು ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಬ್ದುಲ್ ಕಲಾಂ ಪ್ರಶಸ್ತಿಗೆ ತಂದೆ ಹೆಸರಿಟ್ಟ ಜಗನ್ – ವಿರೋಧಕ್ಕೆ ಮಣಿದು ಆದೇಶ ವಾಪಾಸ್

    ಅಬ್ದುಲ್ ಕಲಾಂ ಪ್ರಶಸ್ತಿಗೆ ತಂದೆ ಹೆಸರಿಟ್ಟ ಜಗನ್ – ವಿರೋಧಕ್ಕೆ ಮಣಿದು ಆದೇಶ ವಾಪಾಸ್

    ಹೈದರಾಬಾದ್: ಆಂಧ್ರಪ್ರದೇಶ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ್ ಅವಾರ್ಡ್ ಹೆಸರನ್ನು ವೈಎಸ್‌ಆರ್ ವಿದ್ಯಾ ಪುರಸ್ಕಾರ ಎಂದು ಬದಲಿಸಿದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿರೋಧಕ್ಕೆ ಮಣಿದ ಸಿಎಂ ಪ್ರಶಸ್ತಿಗೆ ಮತ್ತೆ ಕಲಾಂ ಅವರ ಹೆಸರನ್ನೇ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿ ಹೆಸರನ್ನು ವೈಎಸ್‌ಆರ್ ಸರ್ಕಾರ ಬದಲಿಸಿತ್ತು. ‘ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ್ ಅವಾರ್ಡ್’ ಹೆಸರನ್ನು ಬದಲಿಸಿ ‘ವೈಎಸ್‌ಆರ್ ವಿದ್ಯಾ ಪುರಸ್ಕಾರ’ ಎಂಬುದಾಗಿ ಬದಲಾವಣೆ ಮಾಡಿತ್ತು. ಸರ್ಕಾರ ಈ ಬದಲಾವಣೆ ಮಾಡುತ್ತಿದ್ದಂತೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯಿತು. ಸರ್ಕಾರದ ನಡೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದರು. ಜೊತೆಗೆ ಸಾರ್ವಜನಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು.

    ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಆಂಧ್ರ ಸರ್ಕಾರ ಆದೇಶವನ್ನು ರದ್ದುಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಅಬ್ದುಲ್ ಕಲಾಂ ಪ್ರಶಸ್ತಿ ಹೆಸರು ಬದಲಾಯಿಸದಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

    ‘ಮಿಸೈಲ್ ಮ್ಯಾನ್’ ಅಬ್ದುಲ್ ಕಲಾಂ ಹುಟ್ಟುಹಬ್ಬದ ಪ್ರಯುಕ್ತ ಪ್ರತಿವರ್ಷ ನವೆಂಬರ್ 1ರಂದು ಆಂಧ್ರ ಸರ್ಕಾರದಿಂದ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಡಾ. ಎಪಿಜೆ. ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ ಪ್ರಶಸ್ತಿ’ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಜಗನ್ ಮೋಹನ್ ರೆಡ್ಡಿ ಅವರು ಪ್ರಶಸ್ತಿಗೆ ತಮ್ಮ ತಂದೆ ವೈ.ಎಸ್ ರಾಜಶೇಖರ್ ರೆಡ್ಡಿ ಹೆಸರಿಟ್ಟಿದ್ದು ಎಲ್ಲರ ಕೆಂಗಣ್ಣಿಗೆ ಕಾರಣವಾಯ್ತು.

    ಸರ್ಕಾರ ಆದೇಶದ ವಿರುದ್ಧ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಿಡಿದೆದ್ದರು. ಅಬ್ದುಲ್ ಕಲಾಂ ವಿಜ್ಞಾನ, ಶಿಕ್ಷಣ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ತನ್ನ ತಂದೆ ಹೆಸರು ಇಟ್ಟಿದ್ದಾರೆ. ಇದು ಸಿಎಂಗೆ ಶೋಭೆ ತರುವಂತದಲ್ಲ ಎಂದು ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.

  • ‘ಮಿಸೈಲ್ ಮ್ಯಾನ್’ ಕಲಾಂರ 88ನೇ ಹುಟ್ಟುಹಬ್ಬ – ನಮೋ ವಿಡಿಯೋ ನಮನ

    ‘ಮಿಸೈಲ್ ಮ್ಯಾನ್’ ಕಲಾಂರ 88ನೇ ಹುಟ್ಟುಹಬ್ಬ – ನಮೋ ವಿಡಿಯೋ ನಮನ

    ನವದೆಹಲಿ: ಇಂದು ಭಾರತ ಕಂಡ ಅದ್ಭುತ ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ 88 ವರ್ಷದ ಜಯಂತೋತ್ಸವ. ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಿಸಲಾಗುತ್ತದೆ.

    ದೇಶ ಕಂಡ ಪ್ರೀತಿಯ ಮಾಜಿ ರಾಷ್ಟ್ರಪತಿಗಳಿಗೆ ಪ್ರಧಾನಿ ಮೋದಿ ನಮಿಸಿದ್ದಾರೆ. ಕಲಾಂರನ್ನು ನೆನೆದು ವಿಡಿಯೋ ಶೇರ್ ಮಾಡಿ, ನೀವು ಎಂದಿಗೂ ನಮಗೆ ಪ್ರೇರಣೆ ಎಂದು ಗೌರವ ಸಲ್ಲಿಸಿದ್ದಾರೆ.

    ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ವಿನಮ್ರ ಶೃದ್ಧಾಂಜಲಿ. ಅವರು 21ನೇ ಶತಮಾನದಲ್ಲಿ ಸಮರ್ಥ ಮತ್ತು ಸಮೃದ್ಧ ಭಾರತದ ಕನಸು ಕಂಡು, ದೇಶಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿ ಎಲ್ಲರ ಪ್ರೀತಿ ಗಳಿಸಿದ್ದರು. ಅವರ ಆದರ್ಶ ಜೀವನ ಸದಾ ದೇಶವಾಸಿಗಳಿಗೆ ಸ್ಪೂರ್ತಿದಾಯಕ. ಕಲಾಂ ಅವರ ಜಯಂತೋತ್ಸವದಂದು ಇಡೀ ಭಾರತವೇ ಅವರಿಗೆ ನಮಿಸುತ್ತಿದೆ ಎಂದು ಮೋದಿ ಹಾಡಿ ಹೊಗಳಿದ್ದಾರೆ.

    ಜೊತೆಗೆ ಅಬ್ದುಲ್ ಕಲಾಂ ಅವರ ಸಾಧನೆಯನ್ನು ಹೊಗಳಿ ವಿಶೇಷ ವಿಡಿಯೋವನ್ನು ಮೋದಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಇಡೀ ವಿಶ್ವವೇ ಮಿಸೈಲ್ ಮ್ಯಾನ್ ಜಯಂತಿ ದಿನದಂದು ಅವರಿಗೆ ಗೌರವ ಸಲ್ಲಿಸುತ್ತಿದೆ. ನೆಟ್ಟಿಗರು ಕಲಾಂ ಅವರ ಕೆಲವು ಕೋಟ್‍ಗಳನ್ನು ನೆನೆದು ಕಲಾಂ ಅವರಿಗೆ ಗೌರವ ಸಲ್ಲಿಸಿದ್ದಾರೆ.

    ಅಕ್ಟೋಬರ್ 15, 1931ರಲ್ಲಿ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ್ದರು. ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ ಅವರು ಮನೆ ಮನೆಗಳಿಗೆ ಪೇಪರ್ ಹಾಕುತ್ತ, ದುಡಿಯುತ್ತ ನಮ್ಮ ವಿದ್ಯಾಭ್ಯಾಸ ಮುಗಿಸಿದರು. ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಲಾಂ ಸಾಧನೆ ಮಾಡಿದರು. 1958ರಲ್ಲಿ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಮ್ಮ ಏರೋನಾಟಿಕ್ ಎಂಜಿನಿಯರಿಂಗ್ ಪೂರ್ಣಗೊಳಿಸಿ ಕಲಾಂ, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ(ಡಿಆರ್‌ಡಿಒ), ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಲ್ಲಿ(ಇಸ್ರೋ) ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಗಳಿಸಿದರು.

    ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಅವರು ಮಿಸೈಲ್ ಮ್ಯಾನ್ ಎಂದೇ ಖ್ಯಾತಿಗಳಿಸಿದರು. ಕೊನೆಗೆ ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಪದವಿ ಏರಿ, ಪೀಪಲ್ಸ್ ಪ್ರೆಸಿಡೆಂಟ್ ಆಗಿ ದೇಶವಾಸಿಗಳ ಪ್ರೀತಿ ಪಾತ್ರರಾದರು.

    ಕಲಾಂ ಅವರಿಗೆ ವಿದ್ಯಾರ್ಥಿಗಳೆಂದರೆ ವಿಶೇಷ ಕಾಳಜಿ, ಅಕ್ಕರೆ. ಹೀಗಾಗಿ ಭವ್ಯ ಭಾರತದ ಭವಿಷ್ಯವಾದ ವಿದ್ಯಾರ್ಥಿಗಳೊಂದಿಗೆ ಅವರು ಹೆಚ್ಚಿನ ಸಮಯ ಕಳೆಯುತ್ತಿದ್ದರು. 2015ರ ಜುಲೈ 27 ರಂದು ಶಿಲ್ಲಾಂಗ್ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ಕಲಾಂ ಎಲ್ಲರನ್ನು ಅಗಲಿದರು.

    ವಿದ್ಯಾರ್ಥಿಗಳ ಮೇಲಿನ ಕಲಾಂ ಅವರ ಪ್ರೀತಿ, ಕಾಳಾಜಿ ಇಡೀ ವಿಶ್ವದ ಗಮನ ಸೆಳೆದಿತ್ತು. ದೇಶ ಕಂಡ ಒಂದೊಳ್ಳೆ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಉನ್ನತ ಜವಾಬ್ದಾರಿಯನ್ನು ನಿಭಾಯಿಸಿ ಮೆಚ್ಚುಗೆ ಪಡೆದಿದ್ದರೂ, ತಮ್ಮನ್ನು ತಾವು ಮೊದಲು ಶಿಕ್ಷಕನಾಗಿ ಗುರುತಿಸಿಕೊಳ್ಳಲು ಅವರು ಬಯಸುತ್ತಿದ್ದರು. ಆದ್ದರಿಂದ ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಬೇಕೆಂದು 2015ರಲ್ಲಿ ವಿಶ್ವಸಂಸ್ಥೆ ಕರೆ ನೀಡಿತ್ತು.

  • ಅಬ್ದುಲ್ ಕಲಾಂರನ್ನು ಸ್ಮರಿಸಿ ಬಿಎಸ್‍ವೈಯಿಂದ ದಿನಚರಿ ಬಗ್ಗೆ ಟ್ವೀಟ್

    ಅಬ್ದುಲ್ ಕಲಾಂರನ್ನು ಸ್ಮರಿಸಿ ಬಿಎಸ್‍ವೈಯಿಂದ ದಿನಚರಿ ಬಗ್ಗೆ ಟ್ವೀಟ್

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದ ನಂತರ ಬಿಎಸ್‍ವೈ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

    ಮೊದಲಿಗೆ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಸಿಎಂ ಯಡಿಯೂರಪ್ಪ ಅವರು ಸ್ಮರಿಸಿದ್ದಾರೆ. “ದೇಶ ಕಂಡ ಜನಸಾಮಾನ್ಯರ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಂದು ಸ್ಮರಿಸೋಣ” ಎಂದು ಟ್ವೀಟ್ ಮಾಡಿದ್ದು, ಅವರ ಫೋಟೋ ಹಾಕಿ ಜೊತೆಗೆ #missileman ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

    ನಂತರ ತಮ್ಮ ದಿನಚರಿಯನ್ನೂ ಟ್ವಿಟ್ಟರ್ ಮೂಲಕವೇ ಹಂಚಿಕೊಂಡಿದ್ದಾರೆ. “ಇಂದು ಗವಿಮಠ ಶ್ರೀ ಸಿದ್ದಲಿಂಗೇಶ್ವರ ಸವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಬೂಕನಕೆರೆ ಗ್ರಾಮದೇವತೆ ದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಅಲ್ಲಿಂದ ಮೇಲುಕೋಟೆಯ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.

    ಶುಕ್ರವಾರ ಸಂಜೆ “ನನ್ನ ಮೇಲೆ ಇಟ್ಟಿರುವ ನಂಬಿಕೆ ಅಪಾರ. ಪ್ರಗತಿ, ಸಮೃದ್ಧಿ, ಸರ್ವರ ಭಾಗಿತ್ವ, ಅಭಿವೃದ್ಧಿಯ 4 ಅಂಶಗಳನ್ನು ಆಡಳಿತದ ಆಧಾರವಾಗಿಸಿ ಕರ್ನಾಟಕದ ಜನತೆಯನ್ನು ಪ್ರತಿನಿಧಿಸಿ, ಅವರ ಅಶೋತ್ತರಗಳನ್ನು ಪೂರೈಸುತ್ತೇನೆ. ಬಿಜೆಪಿ ಶಾಸಕರ, ಪ್ರತಿಯೊಬ್ಬ ಕಾರ್ಯತರ್ಕರನ್ನು ಅವರ ಅವಿರತ ಶ್ರಮ, ದೃಢ ಪ್ರಯತ್ನ ಮತ್ತು ಸಮರ್ಪಣಾ ಭಾವಕ್ಕಾಗಿ ವಂದಿಸುತ್ತೇನೆ” ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದರು.

     

  • ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

    ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

    ನವದೆಹಲಿ: ಮಾಜಿ ರಾಷ್ಟ್ರಪತಿ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸಲು ಮಾಜಿ ರಾಜ್ಯಸಭಾ ಸಂಸದ ಮತ್ತು ಬಿಜೆಪಿ ಮುಖಂಡ ಆನಂದ್ ಭಾಸ್ಕರ್ ರಾಪೋಲು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಅಕ್ಟೋಬರ್ 15 ರಂದು ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಅವರಿಗೆ ಆನಂದ್ ಭಾಸ್ಕರ್ ರಾಪೋಲು ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ವಿಶ್ವಸಂಸ್ಥೆ ಕಲಾಂರ ಹುಟ್ಟುಹಬ್ಬದ ದಿನವನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿದೆ. ಹೀಗಾಗಿ ದೇಶಾದ್ಯಂತ ವಿದ್ಯಾರ್ಥಿ ದಿನಾಚರಣೆಯಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಪ್ರಸ್ತಾಪಿಸಿದ್ದಾರೆ.

    ಜೂನ್ 21ರಂದು ಇದೇ ರಾಷ್ಟ್ರವು ವಿಶ್ವ ಯೋಗ ದಿನಾಚರಣೆ ಮತ್ತು ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಆಚರಿಸುವಂತೆಯೇ, ಕಲಾಂ ಅವರ ಜನ್ಮದಿನವನ್ನು ಅದೇ ಉತ್ಸಾಹದಿಂದ ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಆಚರಿಸಬೇಕೆಂದು ಆನಂದ್ ಭಾಸ್ಕರ್ ಒತ್ತಾಯಿಸಿದ್ದಾರೆ.

    ಅಕ್ಟೋಬರ್ 15 ರಂದು ರಾಷ್ಟ್ರೀಯ ವಿದ್ಯಾರ್ಥಿ ದಿನವೆಂದು ಘೋಷಿಸಬೇಕು. ಹಾಗೆಯೇ ಎಲ್ಲಾ ಹಂತದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತವಾಗಿ ಈ ದಿನವನ್ನು ಆಚರಿಸುವಂತೆ ಸೂಚಿಸಲು ನಾನು ಪ್ರಾರ್ಥಿಸುತ್ತೇನೆ. ಇದರಿಂದಾಗಿ ಕ್ಷಿಪಣಿ ವ್ಯಕ್ತಿ ಕನಸು ಕಂಡಂತೆ, ನೀವು ಈ ದಿನವನ್ನು ನಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವ ಕ್ಷಣವನ್ನಾಗಿ ಬಳಸಿಕೊಳ್ಳಬಹುದು ಎಂದು ಆನಂದ್ ಭಾಸ್ಕರ್ ಅವರು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿಕೊಂಡಿದ್ದಾರೆ.

  • ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸಿದ್ದಗಂಗಾ ಶ್ರೀಗಳ 99ನೇ ಜನ್ಮದಿನೋತ್ಸವಕ್ಕೆ ಗುರುವಂದನಾ ಕಾರ್ಯಕ್ರಮ ನಡೆದಿತ್ತು. ಮಾನವ ಮಾನವ ಸಂಬಂಧಗಳೇ ನುಚ್ಚು ನೂರಾಗುತ್ತಿರುವ ನಿರಾಸೆಯ ಸನ್ನಿವೇಶದಲ್ಲಿ ಮಾನವ ಸೇವೆಯೇ ಮಹಾದೇವನ ಸೇವೆ ಎಂದು ಭಾವಿಸಿ ನೂರು ದಾಟಿರುವ ವಯಸಿನಲ್ಲಿಯೂ ಆಯಾಸ ಎನ್ನದೇ ದುಡಿಯುತ್ತಿರುವ ಇಂತಹ ಲೋಕ ಜಂಗಮನಿಗಿಲ್ಲದೇ ಮತ್ಯಾರಿಗೆ ಗುರುವಂದನೆ ಸಲ್ಲಬೇಕು ಅಂತಾ ಹೇಳಿಕೊಂಡು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಅಂದಿನ ರಾಷ್ಟ್ರಪತಿ ಆಗಿದ್ದ ಎಪಿಜೆ ಅಬ್ದುಲ್ ಕಲಾಂ ಆಗಮಿಸಿದ್ದರು.

    ವಿಮಾನದಲ್ಲಿ ಪ್ರಯಾಣಿಸುವಾಗಲೇ ಕಲಾಂ ಶ್ರೀಗಳಿಗೆ ಕವನವೊಂದನ್ನು ಬರೆದರು. ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಸುತ್ತೂರು ಶ್ರೀಗಳಿಗೆ ಫೋನ್ ಮಾಡಿ, ಸಾಹೇಬ್ರು ಸಿದ್ದಗಂಗಾ ಶ್ರೀಗಳ ಬಗ್ಗೆ ಕವಿತೆ ಬರೆಯುತ್ತಾರೆ. ಅದನ್ನು ಫ್ಯಾಕ್ಸ್ ಮಾಡಲಾಗುವುದು. ತಕ್ಷಣಕ್ಕೆ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿಸಿ ಗುರುವಂದನೆ ಕಾರ್ಯಕ್ರಮದಲ್ಲಿ ಹಾಡಿಸಲು ಸಾಧ್ಯವೇ ಎಂದು ಕೇಳಿದರು.

    ಕಲಾಂ ಬರೆದ ಕವಿತೆಯನ್ನು ಗೊ.ರು ಚನ್ನಬಸಪ್ಪ ಅವರು ಕನ್ನಡಕ್ಕೆ ತರ್ಜುಮೆ ಮಾಡುತ್ತಾರೆ. ಅಂದು ಗುರುವಂದನಾ ಕಾರ್ಯಕ್ರಮದಲ್ಲಿ ಸುಶ್ರಾವ್ಯವಾಗಿ ಇದನ್ನು ಹಾಡಲಾಗುತ್ತದೆ. ಕಲಾಂ ತನ್ನ ಸ್ಫೂರ್ತಿಯ ಸೆಲೆಯನ್ನು ಕಣ್ತುಂಬಿಸಿಕೊಂಡು ಕವನವನ್ನು ಅರ್ಪಿಸಿ ಖುಷಿಪಟ್ರಂತೆ.

    ಕಲಾಂ ಬರೆದ ಕವಿತೆ:
    ನೀವು ನಿಮ್ಮೆದುರಿಗೆ ನೋಡಿ ಒಬ್ಬ ರಸಋಷಿ
    ಸುಂದರ ಅನುಭಾವದ ಹಾರೈಕೆ ಹೊತ್ತ ಯೋಗಋಷಿ
    ಅನುದಿನವೂ ಭಗವಂತ ನಿಮಗೆ ಕರುಣಿಸಿದ ಈ ಯೋಗಿ
    ಬೆಲೆಯುಳ್ಳ ಜೀವನದ ವೈಢೂರ್ಯವಾಗಿ

    ತಪದ ಬದುಕಿನ ಅಮೂಲ್ಯ ಹಾರವಾಗಿ
    ಮೂವತ್ತಾರು ಸಾವಿರ ವಜ್ರಗಳ ಸಂಯೋಗಿ
    ಮಾನವೀಯತೆಯೇ ಈ ಋಷಿಯ ಸಂದೇಶ
    ಓ ನನ್ನ ನಾಗರೀಕ ಬಂಧುಗಳೇ
    ಕೊಡುವಲ್ಲಿ ಪಡೆಯಿರಿ ನೆಮ್ಮದಿಯ ದೇಹಾತ್ಮಗಳಲ್ಲಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv