Tag: ಅಬುಧಾಬಿ ಬಾಲಕ

  • 2 ಕೋಟಿ ವ್ಯೂ, 3 ಲಕ್ಷ ಮಂದಿ ಶೇರ್ ಮಾಡಿರೋ ವಿಮಾನ ಹಾರಿಸುತ್ತಿರೋ ಬಾಲಕನ ವಿಡಿಯೋ ನೋಡಿ

    2 ಕೋಟಿ ವ್ಯೂ, 3 ಲಕ್ಷ ಮಂದಿ ಶೇರ್ ಮಾಡಿರೋ ವಿಮಾನ ಹಾರಿಸುತ್ತಿರೋ ಬಾಲಕನ ವಿಡಿಯೋ ನೋಡಿ

    ಅಬುಧಾಬಿ: 6 ವರ್ಷದ ಬಾಲಕ ಒಂದು ದಿನಕ್ಕೆ ಇತಿಹಾದ್ ಏರ್‍ವೇಸ್ ಕಂಪೆನಿಯ ವಿಮಾನದ ಪೈಲೆಟ್ ಆಗಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾನೆ. ಬಾಲಕ ವಿಮಾನವನ್ನು ಹಾರಿಸುತ್ತಿರುವ ವಿಡಿಯೋ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

    ಬಾಲಕ ಆದಮ್ ಸಮವಸ್ತ್ರ ಧರಿಸಿ ಎ380 ವಿಮಾನನದ ಕಾಕ್ ಪಿಟ್‍ನಲ್ಲಿ ಕುಳಿತು ಸಂಭ್ರಮಿಸಿದ್ದಾನೆ. ವಿಮಾನ ಕಾರ್ಯಾಚರಣಾ ವ್ಯವಸ್ಥೆ ಹಾಗೂ ತುರ್ತು ಕಾರ್ಯವಿಧಾನಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದು, ಅನೇಕ ಜನರ ಅಚ್ಚರಿಗೆ ಕಾರಣವಾಗಿದೆ ಎಂದು ಇತಿಹಾದ್ ಏರ್‍ವೇಸ್ ಹೇಳಿಕೊಂಡಿದೆ.

    ಕಾಕ್ ಪಿಟ್‍ನಲ್ಲಿ ಕುಳಿತು ಪೈಲೆಟ್ ಸಮೀರ್ ಯಾಕ್ಲಿಫ್ ಜೊತೆಗೆ ಆದಮ್ ಕುಳಿತಿರುವ ವಿಡಿಯೋವನ್ನು ಇತಿಹಾದ್ ಕಂಪೆನಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಕ್ಟೋಬರ್ 12 ರಂದು ಅಪ್ಲೋಡ್ ಮಾಡಿದ್ದು, ಇದೂವರೆಗೂ 2.1 ಕೋಟಿ ವ್ಯೂ ಕಂಡಿದ್ದು, 3 ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಈ ವಿಡಿಯೋ ನೋಡಿದ ಮಂದಿ ಈ ಬಾಲಕ ಭವಿಷ್ಯದಲ್ಲಿ ನಿಜವಾಗಿಯೂ ಇತಿಹಾದ್ ಏರ್‍ವೇಸ್ ಗೆ ಅರ್ಹನಾದ ಕ್ಯಾಪ್ಟನ್ ಆಗುತ್ತಾನೆ. ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಕಮೆಂಟ್ ಹಾಕಿದ್ದಾರೆ.