Tag: ಅಬಾಕಸ್

  • ಧಾರವಾಡದ ಪೋರ ದುಬೈನಲ್ಲಿ ಅಬಾಕಸ್ ಚಾಂಪಿಯನ್

    ಧಾರವಾಡದ ಪೋರ ದುಬೈನಲ್ಲಿ ಅಬಾಕಸ್ ಚಾಂಪಿಯನ್

    ಧಾರವಾಡ: ಕಳೆದ ವಾರವಷ್ಟೇ ಜಿಲ್ಲೆಯ ಯುವತಿಯೋರ್ವಳು ಭಾರತೀಯ ಸೈನ್ಯಕ್ಕೆ ಸೇರಿದ್ದು ಸುದ್ದಿಯಾಗಿತ್ತು. ಈಗ ಇದೇ ವಿದ್ಯಾಕಾಶಿ ಧಾರವಾಡದ ಬಾಲಕನೋರ್ವ ದುಬೈನಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಬಂದಿದ್ದಾನೆ.

    ಹೌದು, ನಗರದ ತಡಸಿನಕೊಪ್ಪದ ಗ್ಲೋಬಲ್ ಸ್ಕೂಲ್ ಆಫ್ ಎಕ್ಸಲೆನ್ಸಿ ಶಾಲೆಯ ನಾಲ್ಕನೇ ತರಗತಿ ಬಾಲಕ ವೇದ ರಾಯ್ಕರ್, ದುಬೈ ಚಾಂಪಿಯನ್‍ಶಿಪ್ ಗೆದ್ದು ಬಂದಿದ್ದಾನೆ. 16 ರಾಷ್ಟ್ರದ 2000 ಮಕ್ಕಳ ನಡುವೆ ಸ್ಪರ್ಧಿಸಿ ಪ್ರಶಸ್ತಿ ಜಯಿಸಿ ಶಾಲೆಗೆ ಹೆಮ್ಮೆ ತಂದಿದ್ದಾನೆ.

    ಕಳೆದ ಮೂರು ವರ್ಷಗಳಿಂದ ನಗರದ ಶಿಕ್ಷಕಿ ತನುಜಾ ಬಳಿ ಅಬಾಕಸ್ ತರಬೇತಿ ಪಡೆಯಿತ್ತಿರುವ ವೇದ, ದುಬೈ ಚಾಂಪಿಯನ್ ಆಗುವ ಮೊದಲು ಕೂಡಾ ಹಲವು ಟ್ರೋಫಿ ಗೆದ್ದು ಬಂದಿದ್ದಾನೆ.

    ಚೆನ್ನೈ, ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಅಬಾಕಸ್ ಸ್ಪರ್ಧೆಯಲ್ಲಿ ವೇದ ಚಾಂಪಿಯನ್ ಆಗಿದ್ದ. ಈ ಬಾರಿ ಅವನ ಜ್ಞಾನವನ್ನು ನೋಡಿದ ಪೋಷಕರು ದುಬೈಗೆ ಕಳಿಸಿದ್ದರು. ಕಳೆದ ತಿಂಗಳು ನಡೆದ ಈ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ ಚಾಂಪಿಯನ್‍ಶಿಪ್ ಟ್ರೋಫಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾನೆ.

  • ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆ ಹಾರಿಸಿದ ಕನ್ನಡದ ಪೋರ

    ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆ ಹಾರಿಸಿದ ಕನ್ನಡದ ಪೋರ

    ಬೆಂಗಳೂರು: ಸಿಲಿಕಾನ್ ಸಿಟಿಯ ಬಾಲಕನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದಾನೆ. ಬಾಲಕನ ಸಾಧನೆ ತನ್ನ ವಯಸ್ಸನ್ನೇ ಮೀರಿಸಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾನೆ.

    ಬೆಂಗಳೂರಿನ ಬಾಗಲಗುಂಟೆಯ ನಿವಾಸಿಗಳಾದ ಶಿವಲಿಂಗ ಮತ್ತು ಮಂಜುಳ ದಂಪತಿಯ ಪುತ್ರ ನಿಶಾಂತ್ ಸಾಧನೆಗೈದ ಬಾಲಕ. ಶಿವಲಿಂಗ ಮತ್ತು ಮಂಜುಳ ಪುತ್ರನನ್ನು ಎಲ್ಲರಂತೆಯೇ ಅಬಾಕಸ್ ತರಗತಿಗೆ ಸೇರಿಸಿದ್ದರು. ನಿಶಾಂತ್ ಪುಟ್ಟ ವಯಸ್ಸಿನಲ್ಲಿಯೇ ಅಬಾಕಸ್ ತರಗತಿಗೆ ಸೇರಿಕೊಂಡು, ಪರಿಣಿತಿ ಹೊಂದಿದ್ದು ಅಬಾಕಸ್ ಲೆವೆಲ್ ನಲ್ಲಿ ಶಾಲಾ ಮಟ್ಟ, ವಿಭಾಗ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ರಾಷ್ಟ್ರ ಮಟ್ಟವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾನೆ.

    ಚೀನಾದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಹಲವು ದೇಶದ ಪುಟಾಣಿಗಳು ಭಾಗವಹಿಸಿದ್ದರು. ಅಂತರಾಷ್ಟ್ರೀಯಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಶಾಂತ್ ತನ್ನ ಪರಿಣಿತಿಯ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.

    ಅಬಾಕಾಸ್ ಸ್ಪರ್ಧೆಯಲ್ಲಿ ಭಾರತ ಚೀನಾ, ಜಪಾನ್, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ 40 ದೇಶಗಳು ಭಾಗವಹಿಸಿದ್ದವು. 40 ದೇಶಗಳಿಂದ 1000 ಕ್ಕೂ ಹೆಚ್ಚು ಅಬಾಕಾಸ್ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ 5 ನಿಮಿಷ ಸಮಯಾವಕಾಶ ನೀಡಿ 80 ಹಂತದ ಲೆಕ್ಕಗಳನ್ನ ನೀಡಲಾಗಿತ್ತು. ಕ್ಲಿಷ್ಟಕರ ಲೆಕ್ಕಗಳನ್ನ ಯಾವುದೇ ಡಿಜಿಟಲ್ ಉಪಕರಣಗಳನ್ನು ಬಳಸದೇ, ತನ್ನ ಕೈ ಬೆರಳಿನ ಏಣಿಕೆಯ ಮುಖಾಂತರವೇ ಕೇವಲ ಮೂರು ನಿಮಿಷಕ್ಕೆ ಸಂಪೂರ್ಣ ಮಾಡಿದ ಖ್ಯಾತಿ ಪೋರ ನಿಶಾಂತ್‍ಗೆ ಸಲ್ಲಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರ್ಯಾಂಡ್ ಚಾಂಪಿಯನ್ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಭಾರತದ ಕೀರ್ತಿ ಪತಾಕೆಯನ್ನ ಎತ್ತಿ ಹಿಡಿದಿದ್ದಾನೆ.