Tag: ಅಬಕಾರಿ ಪೊಲೀಸರು

  • ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ – 400 ಲೀಟರ್ ಸೇಂದಿ ಜಪ್ತಿ

    ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ – 400 ಲೀಟರ್ ಸೇಂದಿ ಜಪ್ತಿ

    ರಾಯಚೂರು: ಅಬಕಾರಿ ಪೊಲೀಸರು (Excise Police) ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಬಂಧಿಸಿ 400 ಲೀ. ಸೇಂದಿ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಹಿಂದೂಗಳ ಸುರಕ್ಷತೆ ಖಚಿತಪಡಿಸಿ: ಚಿನ್ಮಯ್‌ ಕೃಷ್ಣ ದಾಸ್ ಬಂಧಿಸಿದ್ದಕ್ಕೆ ಬಾಂಗ್ಲಾಗೆ ಭಾರತ ತರಾಟೆ

    ಇತ್ತೀಚಿಗೆ ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದು, ಇದೀಗ ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಸ್ವಾಮಿ ದೇವಸ್ಥಾನ ಬಳಿಯಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 400 ಲೀಟರ್ ಕಲಬೆರಕೆ ಸೇಂದಿ ಜಪ್ತಿ ಮಾಡಿದ್ದಾರೆ. ಅಕ್ರಮ ಮಾರಾಟದಲ್ಲಿ ತೊಡಗಿದ್ದ ಹಣಮಂತ, ಲಕ್ಷ್ಮಿ ದಂಪತಿಯನ್ನ ವಶಕ್ಕೆ ಪಡದಿದ್ದಾರೆ.

    ದಂಪತಿ ಪಾತ್ರೆ, ಸಾಮಾನುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಬಳಿಕ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸೇಂದಿ ಮಾರಾಟ ಮಾಡುತ್ತಿದ್ದರು. ದಿನನಿತ್ಯದಂತೆ ಬೆಳಿಗ್ಗೆ ಸೇಂದಿ ಪ್ಯಾಕ್ ಮಾಡುವಾಗ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕಲಬೆರಕೆ ಸೇಂದಿ ಹಾಗೂ ರಾಸಾಯನಿಕ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಡಿವೋರ್ಸ್ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು: ಸಮಂತಾ

  • ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ

    ಅಬಕಾರಿ ಪೊಲೀಸರ ಭರ್ಜರಿ ಬೇಟೆ – 40,000ಕ್ಕೂ ಅಧಿಕ ಕಲಬೆರಕೆ ಮದ್ಯ ಜಪ್ತಿ

    ಬೀದರ್: ಅಕ್ರಮವಾಗಿ ವಿವಿಧ ಪ್ರತಿಷ್ಠಿತ ಬ್ರ್ಯಾಂಡ್‌ನ ಖಾಲಿ ಬಾಟಲ್‌ಗಳಲ್ಲಿ ಕಲಬೆರಕೆ ಮದ್ಯ ತುಂಬಿ ಮಾರಾಟ ಮಾಡುತ್ತಿದ್ದ ದಂಧೆಗೆ ಬೀದರ್ (Bidar) ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಬ್ರೇಕ್ ಹಾಕಿದ್ದಾರೆ.ಇದನ್ನೂ ಓದಿ: ಸರ್ಕಾರಿ ಶಾಲೆಗೆ 25 ಎಕರೆ ದಾನ ಮಾಡಲು ಮಹಾರಾಜರ ವಂಶಸ್ಥರಾ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಕೆಂಡ

    ಅಬಕಾರಿ ಉಪ ಅಧೀಕ್ಷಕರಾದ ಆನಂದ್ ಉಕ್ಕಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿಫೆನ್ಸ್ ಸರ್ವಿಸ್ ಎಂದು ಇರುವ ಪ್ರತಿಷ್ಠಿತ ಬ್ರಾಂಡ್‌ನ ಖಾಲಿ ಬಾಟಲ್‌ಗಳಲ್ಲಿ ಕಲಬೆರಕೆ ಮದ್ಯ ತುಂಬಿ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿ, ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಬೀದರ್ ನಗರದ ಲೇಬರ್ ಕಾಲೋನಿಯಲ್ಲಿರುವ ಅಂಬದಾಸ್ ಇಸ್ಮಾಯಿಲ್ ಮನೆ ಮೇಲೆ ದಾಳಿ ಮಾಡಿ 40 ಸಾವಿರ ರೂ.ಗೂ ಅಧಿಕ ಕಲಬೆರಕೆ ಮದ್ಯ ಜಪ್ತಿ ಮಾಡಿದ್ದಾರೆ. ಕಲಬೆರಕೆ ಹಾಗೂ ಪ್ರತಿಷ್ಠಿತ ಬ್ರಾಂಡ್‌ನ ಖಾಲಿ ಬಾಟಲ್‌ಗಳ ಜಪ್ತಿಯ ಜೊತೆಗೆ ಅಕ್ರಮ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಇದನ್ನೂ ಓದಿ: ಮೇಲೂರು ಕೆರೆಯಲ್ಲಿ ತಾಯಿ-ಮಗನ ಶವ ಪತ್ತೆ; ಆತ್ಮಹತ್ಯೆ ಶಂಕೆ

  • ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

    ರಾಯಚೂರು ಅಬಕಾರಿ ಪೊಲೀಸರ ದಾಳಿ – 2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

    ರಾಯಚೂರು: ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಯನ್ನ ಅಬಕಾರಿ ಪೊಲೀಸರು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.

    ರಾಯಚೂರು ತಾಲೂಕಿನ ಚಿಕ್ಕಮಂಚಾಲಿ ಬಳಿ ಮದ್ಯ ಸಾಗಾಟ ಮಾಡುತ್ತಿದ್ದ ಆಟೋ ಜಪ್ತಿ ಮಾಡಿದ್ದಾರೆ. ತಲಮಾರಿ ಗ್ರಾಮದ ಖಾಜಾ ಹುಸೇನ್ ಎಂಬಾತ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ. ದಾಳಿ ವೇಳೆ ಅಬಕಾರಿ ಪೊಲೀಸರು 2,41,920 ಲೀಟರ್ ಮದ್ಯ ಮತ್ತು 78 ಸಾವಿರ ಲೀಟರ್ ಬಿಯರ್ ಜಪ್ತಿಮಾಡಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    ಸುಮಾರು 2,77,996 ರೂ.ಮೌಲ್ಯದ ಮದ್ಯ ಜಪ್ತಿಯಾಗಿದೆ. ದಾಳಿ ಹಿನ್ನೆಲೆ ರಾಯಚೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧಿಸಿದ ವೃದ್ಧೆಯ ಖಾಸಗಿ ಅಂಗಗಳ ಮೇಲೆ ಹಲ್ಲೆ ನಡೆಸಿ ಕೊಲೆಗೈದ!

  • ಅಕ್ರಮ ಮದ್ಯ ಮಾರಾಟ ಪರಿಶೀಲನೆ- ಬೀದಿಯಲ್ಲೇ ಬಡಿದಾಡಿಕೊಂಡ ಅಬಕಾರಿ ಪೊಲೀಸರು

    ಅಕ್ರಮ ಮದ್ಯ ಮಾರಾಟ ಪರಿಶೀಲನೆ- ಬೀದಿಯಲ್ಲೇ ಬಡಿದಾಡಿಕೊಂಡ ಅಬಕಾರಿ ಪೊಲೀಸರು

    ಮಡಿಕೇರಿ: ಅಕ್ರಮ ಮದ್ಯ ಮಾರಾಟ ಪರಿಶೀಲನೆ ಮಾಡಲು ಹೋಗಿದ್ದ ಅಬಕಾರಿ ಪೊಲೀಸರು ಅಶ್ಲೀಲ ಪದಗಳಿಂದ ಒಬ್ಬರನೊಬ್ಬರು ನಿಂದಿಸಿ, ನಡು ಬೀದಿಯಲ್ಲೇ ಬಡಿದಾಡಿಕೊಂಡಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಮತ್ತು ಉಪ ಅಧೀಕ್ಷಕ ಶಿವಪ್ಪ ನಡುಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಲಾಕ್‍ಡೌನ್ ಆಗಿರುವುದರಿಂದ ಎಲ್ಲಿಯೂ ಮದ್ಯ ಮಾರುವಂತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರು ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಉಪ ಅಧೀಕ್ಷಕ ಶಿವಪ್ಪ ಮತ್ತು ತಂಡ ಪರಿಶೀಲನೆಗೆ ಹೋಗಿತ್ತು.

    ಈ ವೇಳೆ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್ ಪೆಕ್ಟರ್ ನಟರಾಜ್ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರೂ ಕೈ ಕೈ ಮಿಲಾಸಿ ಹಾದಿ ರಂಪ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಎನ್ನುವುದನ್ನೂ ಮರೆತು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.