– ತುಂಡರಿಸಿದ ಕೈ, ತಲೆ, ಕಸದ ಲಾರಿಗೆ ಎಸೆದಿದ್ದ ಬಟ್ಟೆ ಪತ್ತೆ
– ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಡಿಎನ್‍ಎ ಪರೀಕ್ಷೆ
ನವದೆಹಲಿ: ರಾಷ್ಟ್ರ ರಾಜ್ಯಧಾನಿಯಲ್ಲಿ ಲೀವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದ ಗೆಳತಿಯನ್ನು ಭೀಕರವಾಗಿ ಹತ್ಯೆಗೈದು 35 ಪೀಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ವಿಷಯಗಳು ಹೊರಬರುತ್ತಿವೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಹತ್ಯೆ ಬಳಿಕ ಡೇಟಿಂಗ್ ಆ್ಯಪ್ ಮೂಲಕ ಹಲವು ಯುವತಿಯರ ಜೊತೆ ಮಾತನಾಡುತ್ತಿದ್ದ. ಅದಾದ ಬಳಿಕ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಸಿಗಬಾರದು ಎಂದು ತನ್ನ ಫೋನ್‍ನನ್ನು ಒಎಲ್‍ಎಕ್ಸ್‌ನಲ್ಲಿ ಮಾಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ಅಫ್ತಾಬ್ (Aaftab Ameen Poonawala) ಮತ್ತು ಶ್ರದ್ಧಾ (Shraddha) ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಸ್ಪರ ಭೇಟಿಯಾಗಿದ್ದರು. ಅದಾದ ಬಳಿಕ ಕಳೆದ 3 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಆದರೆ ಮದುವೆ ವಿಚಾರಕ್ಕೆ ಜಗಳವಾಗಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅದಾದ ಬಳಿಕ ಶ್ರದ್ಧಾಳ ದೇಹವನ್ನು 35 ಪೀಸ್ ಮಾಡಿ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟು ಆ ಬಳಿಕ ಆ ಎಲ್ಲ ದೇಹದ ಪೀಸ್‍ನ್ನು ಕಾಡಿನಲ್ಲಿ (Forest) ವಿಲೇವಾರಿ ಮಾಡಿದ್ದ.

ಇನ್ನೂ ಶ್ರದ್ಧಾಳನ್ನು ಕೊಲೆ ಮಾಡಿದ ನಂತರ ಅಫ್ತಾಬ್ ಡೇಟಿಂಗ್ ಅಪ್ಲಿಕೇಶನ್‍ಗಳಲ್ಲಿ ಸಕ್ರಿಯರಾಗಿದ್ದ. ಕಳೆದ ಆರು ತಿಂಗಳಲ್ಲಿ ಅನೇಕ ಯುವತಿಯರನ್ನು ಭೇಟಿಯಾಗಿ, ಅವರ ಜೊತೆ ಸಂಬಂಧವನ್ನು ಹೊಂದಿದ್ದ. ಅದಾದ ಬಳಿಕ ಅಫ್ತಾಬ್ ಯಾರಿಗೂ ಸಂಶಯ ಬರಬಾರದು ಎಂದು ತನ್ನ ಫೋನ್‍ನನ್ನು ಒಎಲ್‍ಎಕ್ಸ್‌ನಲ್ಲಿ ಮಾರಾಟ ಮಾಡಿದ್ದಾನೆ ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಸಂಬಂಧ ಇಲ್ಲ: ಕೈ ಆರೋಪಕ್ಕೆ ಅಶ್ವಥ್ ನಾರಾಯಣ್ ತಿರುಗೇಟು
ಇನ್ನೂ ಶ್ರದ್ಧಾ ವಾಕರ್ ಹತ್ಯೆ ಬಳಿಕ ಅಫ್ತಾಬ್ ಆಕೆಯ ಬಟ್ಟೆಗಳನ್ನು ಕಸದ ವಾಹನಕ್ಕೆ ಎಸೆದಿದ್ದ ಬಟ್ಟೆಗಳನ್ನು ಪತ್ತೆ ಹಚ್ಚುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ದೆಹಲಿ ಹೊರವಲಯದಲ್ಲಿರುವ ಡಪ್ಪಿಂಗ್ ಯಾರ್ಡ್‍ನಲ್ಲಿ ತೀವ್ರ ಹುಡುಕಾಟದ ನಂತರ ರಕ್ತದ ಕಲೆಗಳಿರುವ ಬಟ್ಟೆಗಳು ದೊರೆತಿದ್ದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪೂರ್ವ ದೆಹಲಿ ಭಾಗದಲ್ಲಿ ತುಂಡರಿಸಿ ಕೈ ಮೂಳೆಗಳು ಮತ್ತು ತಲೆ ಭಾಗ ಪತ್ತೆಯಾಗಿದ್ದು, ಇವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಡಿಎನ್‍ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ಡಿಎನ್‍ಎ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಶ್ರದ್ಧಾ ತಂದೆ ವಿಕಾಸ್ ವಾಕರ್ ಡಿಎನ್‍ಎ ಸ್ಯಾಂಪಲ್ಸ್ ಪಡೆಯಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಆಟೋದಿಂದ ಜಂಪ್ – ಬಾಲಕಿ ತಲೆಗೆ ಗಂಭೀರ ಗಾಯ

ಮನೆಯಲ್ಲಿ ರಕ್ತದ ಕಲೆಗಳನ್ನು ಅಳಿಸಲು ಬಳಸಿದ ಕೆಮಿಕಲ್ ಮತ್ತು ಗೋಡೆಯ ಮೇಲಿರುವ ರಕ್ತದ ಕಲೆಯೂ ಪತ್ತೆಯಾಗಿದ್ದು ಎಫ್‍ಎಸ್‍ಎಲ್ ತಂಡ ಪರಿಶೀಲನೆ ನಡೆಸುತ್ತಿದೆ. ಇದರ ಜೊತೆಗೆ ಶ್ರದ್ಧಾ ಹತ್ಯೆ ಬಳಿಕ ಆಕೆಯ ಮೂಬೈಲ್ ನಿಂದ ಹಣ ವರ್ಗಾವಣೆ ಮತ್ತು ಲೋಕೆಷನ್ ಮೇಲೆ ಹತ್ಯೆಯನ್ನು ನಿರೂಪಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.










