Tag: ಅಫ್ತಾಬ್ ಶಿವದಾಸನಿ

  • ‘ಕೋಟಿಗೊಬ್ಬ-3’ ಟೀಂಗೆ ಸುದೀಪ್ ಗೆಳೆಯ ಎಂಟ್ರಿ

    ‘ಕೋಟಿಗೊಬ್ಬ-3’ ಟೀಂಗೆ ಸುದೀಪ್ ಗೆಳೆಯ ಎಂಟ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟರು ಬಾಲಿವುಡ್‍ನ ಅನೇಕ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್ ನಟರು ಸಿನಿಮಾಗಾಗಿ ಸ್ಯಾಂಡಲ್‍ವುಡ್‍ಗೆ ಆಗಮಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಸಿನಿಮಾಗೆ ಬಾಲಿವುಡ್ ನಟ ಎಂಟ್ರಿಯಾಗಿದ್ದಾರೆ. ಈಗಾಗಲೇ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಲನ್ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಕಿಚ್ಚನ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಶಿವದಾಸನಿ ಅವರು ಸುದೀಪ್ ಅವರ ಆಪ್ತ ಸ್ನೇಹಿತರಾಗಿದ್ದು, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೊಂದು ಪಕ್ಕಾ ಮಾಸ್ ಆ್ಯಂಡ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಮುಖ ಪಾತ್ರದಲ್ಲಿ ಶಿವದಾಸನಿ ಮಿಂಚಲಿದ್ದಾರೆ.

    “ಕೋಟಿಗೊಬ್ಬ-3′ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾವಾಗಿದೆ. ನಾನು ಮೊದಲ ಬಾರಿಗೆ ಸುದೀಪ್ ಜೊತೆ ನಟಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ನಮ್ಮಿಬ್ಬರಿಗೆ ಸುಮಾರು 8 ವರ್ಷಗಳ ಹಿಂದೆ ಸೆಲೆಬ್ರೆಟಿ ಟಿ-20 ಕ್ರಿಕೆಟ್ ಮ್ಯಾಚಿನಲ್ಲಿ ಪರಿಚಯವಾಗಿತ್ತು. ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಸುದೀಪ್ ಅವರು ಯಾವಾಗಲೂ ಕನ್ನಡ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳುತ್ತಿದ್ದರು. ಆದರೆ ಇಷ್ಟುಬೇಗ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಈ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಹೀಗಾಗಿ ನೀನೇ ಅಭಿನಯಿಸಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಸುದೀಪ್ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದೇನೆ” ಎಂದು ಶಿವದಾಸನಿ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ‘ಕೋಟಿಗೊಬ್ಬ-3’ ಸಿನಿಮಾದ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಟ ಅಫ್ತಾಬ್ ಶಿವದಾಸನಿ ಚಿತ್ರತಂಡ ಸೇರಲಿದ್ದಾರೆ. ಇದೊಂದು ಹೈ ಬಜೆಟ್ ಸಿನಿಮಾವಾಗಿದ್ದು, ಶಿವಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಸಿನಿಮಾಗೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದು, ಸದ್ಯಕ್ಕೆ ಹೈದರಾಬಾದ್‍ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಿದೆ.

  • ಬಾಲಿವುಡ್ ನಟನಿಗೆ ದೃಷ್ಟಿ ತೆಗೆಸಿಕೊಳ್ಳಿ ಎಂದ್ರು ಪ್ರಿಯಾ ಸುದೀಪ್

    ಬಾಲಿವುಡ್ ನಟನಿಗೆ ದೃಷ್ಟಿ ತೆಗೆಸಿಕೊಳ್ಳಿ ಎಂದ್ರು ಪ್ರಿಯಾ ಸುದೀಪ್

    ಬೆಂಗಳೂರು: ನಟ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಬಾಲಿವುಡ್ ನಟ ಹಾಗೂ ಮಾಡೆಲ್ ಅಫ್ತಾಬ್ ಶಿವದಾಸನಿ ಅವರಿಗೆ ದೃಷ್ಟಿ ತೆಗೆಸಿಕೊಳ್ಳಿ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ಹೌದು.. ಇತ್ತೀಚೆಗೆ ನಟ ಅಫ್ತಾಬ್ ಶಿವದಾಸನಿ ಕುಟುಂಬದ ಮದುವೆಯ ಕಾರ್ಯಕ್ರಮ ರಾಜಸ್ಥಾನದಲ್ಲಿ ನಡೆದಿದೆ. ಈ ಸಂಭ್ರಮದಲ್ಲಿ ಪತ್ನಿ ನಿನ್ ದುಸಾಂಜ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋ ಮತ್ತು ಒಂಟಿಯಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ “ರಾಜ ಮತ್ತು ರಾಣಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಯಾವುದೇ ಮನೆಯಾದರೂ ಅದು ಕೋಟೆಯಾಗುತ್ತದೆ” ಎಂದು ಬರೆದುಕೊಂಡಿದ್ದರು.

    ಅಫ್ತಾಬ್ ಶಿವದಾಸನಿ ಟ್ವೀಟ್ ಮಾಡಿದ್ದ ಫೋಟೋಗೆ ಪ್ರಿಯಾ ಅವರು, ತುಂಬಾ ಲವ್ಲಿಯಾಗಿದೆ. ದೃಷ್ಟಿ ತೆಗೆಸಿಕೊಳ್ಳಿ ಎಂದು ಎರಡು ನಗುವಿನ ಎಮೋಜಿಯನ್ನು ಹಾಕಿ ರೀಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಅಫ್ತಾಬ್ ಶಿವದಾಸನಿ ಅವರ ಹುಟ್ಟುಹಬ್ಬಕ್ಕಾಗಿ ಸರ್ಪ್ರೈಸ್ ಕೊಡಲು ಪ್ರಿಯಾ ಹಾಗೂ ಸುದೀಪ್ ಸರ್ಬಿಯಾ ದೇಶಕ್ಕೆ ಹೋಗಿದ್ದರು. ಅಲ್ಲಿ ಕೇಕ್ ತಂದು ಕಟ್ ಮಾಡಿಸಿ ಆಚರಣೆ ಮಾಡಿದ್ದರು. ಅಂದು ಕೂಡ ಸವಿ ನೆನಪುಗಳ ಸುಂದರ ಫೋಟೋಗಳನ್ನು ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.

    ಅಫ್ತಾಬ್ ಶಿವದಾಸನಿ ಬಾಲ್ಯದಿಂದಲೂ ಸಿನಿಮಾರಂಗದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಒಬ್ಬ ಪರಿಪೂರ್ಣ ನಟರಾಗಿದ್ದು, ಜೊತೆಗೆ ಮಾಡೆಲ್ ಹಾಗೂ ನಿರ್ಮಾಪಕರೂ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ – ಸರ್ಬಿಯಾಕ್ಕೆ ಹೋಗಿ ಸುದೀಪ್ ದಂಪತಿಯಿಂದ ವಿಶ್

    ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ – ಸರ್ಬಿಯಾಕ್ಕೆ ಹೋಗಿ ಸುದೀಪ್ ದಂಪತಿಯಿಂದ ವಿಶ್

    ಬೆಂಗಳೂರು: ಇತ್ತೀಚೆಗೆ ಸುದೀಪ್ ದಂಪತಿ ಎಲ್ಲ ಕಾರ್ಯಕ್ರಮಗಳಲ್ಲೂ ಜೊತೆ ಜೊತೆಯಾಗಿ ಭಾಗವಹಿಸುತ್ತಿದ್ದಾರೆ. ಅದರಲ್ಲೂ ಸುದೀಪ್ ತಮ್ಮ ಸಿನಿಮಾಗಳ ಬ್ಯುಸಿಯಲ್ಲಿಯೂ ಕುಟುಂಬದವರ ಜೊತೆ ಪ್ರವಾಸ ಮಾಡಿದ್ದಾರೆ.

    ಜೂನ್ 25ರಂದು ಬಾಲಿವುಡ್ ನಟ, ಮಾಡೆಲ್ ಅಫ್ತಾಬ್ ಶಿವದಾಸನಿ ಅವರ ಹುಟ್ಟುಹಬ್ಬ ಇತ್ತು. ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಡಲು ಸುದೀಪ್ ದಂಪತಿ ಸರ್ಬಿಯಾ ದೇಶಕ್ಕೆ ಹೋಗಿದ್ದರು.

    ಸರ್ಬಿಯಾ ದೇಶದ ಕ್ವೈಂಟ್ ನಗರವಾದ ಬಿಲ್ ಗ್ರೇಡ್‍ಗೆ ಪ್ರವಾಸ ಬೆಳೆಸಿದ್ದರು. ಸರ್ಬಿಯಾದಲ್ಲಿ ಹಲವು ಪ್ರವಾಸಿ ತಾಣಗಳಿಗೆ ಸುದೀಪ್ ದಂಪತಿ ಭೇಟಿ ನೀಡಿದ್ದಾರೆ. ಬಳಿಕ ಅಫ್ತಾಬ್ ಶಿವದಾಸನಿ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಬರ್ತ್ ಡೇ ಸರ್ಪ್ರೈಸ್ ಕೊಟ್ಟಿದ್ದಾರೆ. ಕೇಕ್ ತಂದು ಕಟ್ ಮಾಡಿಸಿ ಆಚರಣೆ ಮಾಡಿದ್ದಾರೆ.

    ಈ ಎಲ್ಲ ಸವಿ ನೆನಪುಗಳ ಸುಂದರ ಫೋಟೋಗಳನ್ನು ಪ್ರಿಯಾ ಸುದೀಪ್ ಇಂದು ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸುದೀಪ್ ಜೊತೆ ಕಾಫಿ ಬ್ರೇಕ್ ಹಾಗೂ ರಿಲ್ಯಾಕ್ಸ್ ವಾಕ್ ಜೊತೆಗೆ ಅಫ್ತಾಬ್ ಹುಟ್ಟುಹಬ್ಬದ ಸರ್ಪ್ರೈಸ್  ಎಲ್ಲಾ ಕ್ಷಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ ನ್ನು ಸುದೀಪ್ ಗೆ ಮತ್ತು ಅಫ್ತಾಬ್ ಶಿವದಾಸನಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಅಫ್ತಾಬ್ ಶಿವದಾಸನಿ ಬಾಲ್ಯದಿಂದಲೂ ಸಿನಿಮಾರಂಗದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇಂದು ಒಬ್ಬ ಪರಿಪೂರ್ಣ ನಟರಾಗಿದ್ದು, ಜೊತೆಗೆ ಮಾಡೆಲ್ ಹಾಗು ನಿರ್ಮಾಪಕರೂ ಆಗಿದ್ದಾರೆ.