ನವದೆಹಲಿ: ಅಫ್ಘಾನ್‍ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.
ಭಾರತೀಯರನ್ನು ವಾಪಸ್ ದೇಶಕ್ಕೆ ತರುವ ಕಾರ್ಯ ಭರದಿಂದ ಸಾಗುತ್ತಿದೆ. ದಿನಕ್ಕೆ ಎರಡು ವಿಮಾನಗಳು ಕಾಬೂಲ್ ಏರ್ಪೋರ್ಟ್ ನಿಂದ ಹೊರಟು ಭಾರತ ತಲುಪುತ್ತಿದೆ. ವಿವಿಧ ಬ್ಯಾಚ್‍ಗಳ ಮೂಲಕ ಜನರನ್ನು ಕರೆತರಲಾಗುತ್ತಿದೆ. ಆದರೀಗ ಈ ಸ್ಥಳಾಂತರದ ಮಧ್ಯೆ ಕೊರೊನಾ ಆತಂಕ ಶುರುವಾಗಿದೆ.
ಇಂದು ಬೆಳಗ್ಗೆ ಅಫ್ಘಾನ್‍ನಿಂದ ದೆಹಲಿಗೆ ಬಂದ 146 ಭಾರತೀಯ ಪ್ರಯಾಣಿಕರಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಎಲ್‍ಎನ್‍ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ
ಇಂದು ದೆಹಲಿಗೆ ಬಂದು ಇಳಿದಿದ್ದು 146 ಜನರ ಎರಡನೇ ಬ್ಯಾಚ್ ಆಗಿದೆ. ಇಷ್ಟೂ ಜನ ಸ್ವಲ್ಪ ದಿನಗಳ ಹಿಂದೆ ಯುಎಸ್ ಮತ್ತು ಉತ್ತರ ಅಟ್ಲಾಂಟಿಕ ಒಪ್ಪಂದ ಸಂಸ್ಥೆಗಳ (NATO) ಯುದ್ಧ ವಿಮಾನದ ಮೂಲಕ ಕಾಬೂಲ್‍ನಿಂದ ದೋಹಾಕ್ಕೆ ಹೋಗಿದ್ದರು. ಅಲ್ಲಿಂದ ನಾಲ್ಕು ವಿವಿಧ ವಿಮಾನಗಳ ಮೂಲಕ ದೆಹಲಿಗೆ ಬಂದಿಳಿದಿದ್ದಾರೆ. ಹಾಗೇ ಭಾನುವಾರ ಸುಮಾರು 400 ಜನರನ್ನು ವಿವಿಧ ವಿಮಾನಗಳ ಮೂಲಕ ಅಪ್ಘಾನ್‍ನಿಂದ ಭಾರತಕ್ಕೆ ಕರೆತರಲಾಗಿದೆ. ಅದರಲ್ಲಿ 329 ಮಂದಿ ಭಾರತೀಯರೇ ಆಗಿದ್ದಾರೆ. ಅಫ್ಘಾನ್‍ನಲ್ಲಿರುವ ಹಿಂದು ಮತ್ತು ಸಿಖ್ ಸಮುದಾಯದವರನ್ನೂ ಭಾರತಕ್ಕೆ ಕರೆತರಲಾಗುತ್ತಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಸರ್ಕಾರ ರಚನೆಯಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ ಎಂದಿರುವ ವಕ್ತಾರರು ಷರಿಯತ್ ಕಾನೂನಿನ ಅಡಿಯಲ್ಲಿ ಆಡಳಿತ ನಡೆಸುವುದಾಗಿ ಹೇಳಿದ್ದಾರೆ. 1996 ಮಾದರಿಯಲ್ಲಿ ಈಗ ತಾಲಿಬಾನ್ ಈಗ ಇರುವುದಿಲ್ಲ, ಷರಿಯತ್ ವ್ಯಾಪ್ತಿಯಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡುವುದಾಗಿಯೂ ತಾಲಿಬಾನ್ ವಕ್ತಾರರು ಹೇಳಿದ್ದಾರೆ.
ಆದರೆ ಈ ಹೇಳಿಕೆ ನಡುವೆಯೇ ಅಫ್ಘಾನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಸರ್ಕಾರಿ ಸಾಮ್ಯದ ಸುದ್ದಿ ವಾಹಿನಿವೊಂದರ ಪ್ರಮುಖ ನಿರೂಪಕಿಯನ್ನೂ ಈಗ ಕೆಲಸದಿಂದ ತೆಗೆದು ಹಾಕಲಾಗಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದಾಗಿ ಹೇಳಿದ್ದ ತಾಲಿಬಾನ್ ಷರಿಯತ್ ಕಾನೂನು ಹೇಗೆ ಅರ್ಥೈಸಿ ಕೊಳ್ಳುತ್ತಿದೆ ಎನ್ನುವುದು ಇಲ್ಲಿಯವರೆಗೂ ಗೊಂದಲಮಯವಾಗಿದೆ. ಈ ಹಿನ್ನೆಲೆಯಲ್ಲಿ ಷರಿಯತ್ ಕಾನೂನು ಎಂದರೇನು? ಇದನ್ನು ಅಫ್ಘಾನ್ ನಲ್ಲಿ ತಾಲಿಬಾನ್ ಅರ್ಥೈಸಿಕೊಂಡಿದೆ. ಈ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ.
ಷರಿಯಾ ಎಂದರೇನು?
ಷರಿಯತ್ ಅಥಾವ ಶರಿಯಾ ಖುರಾನ್, ಪ್ರವಾದಿ ಮುಹಮ್ಮದ್ ಅವರ ಜೀವನ ಕಥೆಗಳು ಮತ್ತು ಧಾರ್ಮಿಕ ವಿದ್ವಾಂಸರ ತೀರ್ಪುಗಳನ್ನು ಆಧರಿಸಿದೆ. ಇದು ಇಸ್ಲಾಂನ ನೈತಿಕ ಮತ್ತು ಕಾನೂನು ಚೌಕಟ್ಟನ್ನು ರೂಪಿಸುತ್ತದೆ. ಖುರಾನ್ ನೈತಿಕ ಜೀವನಕ್ಕೆ ಒಂದು ಮಾರ್ಗವನ್ನು ವಿವರಿಸುತ್ತದೆ, ಆದರೆ ಇಲ್ಲಿ ಒಂದು ನಿರ್ದಿಷ್ಟ ಕಾನೂನುಗಳಿಲ್ಲ. ಷರಿಯತ್‍ನ ಒಂದು ವ್ಯಾಖ್ಯಾನವು ಮಹಿಳೆಯರಿಗೆ ವ್ಯಾಪಕವಾದ ಹಕ್ಕುಗಳನ್ನು ನೀಡಬಲ್ಲದು, ಇನ್ನೊಂದು ಮಹಿಳೆಯರಿಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡಬಹುದು. ಆದರೆ ತಾಲಿಬಾನ್ ಹೇರುವ ಕೆಲವು ನಿಯಮಗಳು ಷರಿಯತ್ ಕಾನೂನುಗಳನ್ನು ಮೀರಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಷರಿಯತ್ ನ ವ್ಯಾಖ್ಯಾನಗಳು ಮುಸ್ಲಿಂ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಮತ್ತು ಎಲ್ಲಾ ಹಲವು ಸರ್ಕಾರಗಳು ತಮ್ಮ ಕಾನೂನು ವ್ಯವಸ್ಥೆಯನ್ನು ಷರಿಯಾದ ಮೇಲೆ ಆಧರಿಸಿವೆ. ತಾಲಿಬಾನ್ ಷರಿಯಾ ಕಾನೂನಿನ ಅಡಿಯಲ್ಲಿ ಸರ್ಕಾರ ಸ್ಥಾಪಿಸುತ್ತಿದ್ದಾರೆ ಎಂದರೆ ಅವರು ಇಸ್ಲಾಮಿಕ್ ವಿದ್ವಾಂಸರು ಅಥವಾ ಇತರ ಇಸ್ಲಾಮಿಕ್ ಅಧಿಕಾರಿಗಳು ಒಪ್ಪುವ ರೀತಿಯಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಅರ್ಥವಲ್ಲ.
ಷರಿಯಾ ಏನು ಸೂಚಿಸುತ್ತದೆ?
ಕಳ್ಳತನ ಮತ್ತು ವ್ಯಭಿಚಾರದಂತಹ ಕೆಲವು ನಿರ್ದಿಷ್ಟ ಅಪರಾಧಗಳನ್ನು ಷರಿಯತ್ ಪಟ್ಟಿ ಮಾಡುತ್ತದೆ ಮತ್ತು ಆರೋಪಗಳ ಪರಿಸ್ಥಿತಿಯ ಮಾನದಂಡಗಳ ಆಧಾರದಲ್ಲಿ ಶಿಕ್ಷೆಗಳನ್ನು ವಿಧಿಸುತ್ತದೆ. ಅಲ್ಲದೇ ಇದು ಯಾವಾಗ ಮತ್ತು ಹೇಗೆ ಪ್ರಾರ್ಥನೆ ಮಾಡಬೇಕು, ಮದುವೆ ಅಥಾವ ವಿಚ್ಛೇದನ ಹೇಗೆ ಮಾಡಬೇಕು ಎನ್ನುವುದನ್ನು ನೈತಿಕ ನೆಲೆಗಟ್ಟಿನಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತದೆ. ಪುರುಷ ಬೆಂಗಾವಲು ಇಲ್ಲದೆ ಮಹಿಳೆಯರು ಮನೆಯಿಂದ ಹೊರಬರುವುದನ್ನು ಅಥವಾ ಹೆಚ್ಚಿನ ಉದ್ಯೋಗಗಳಲ್ಲಿ ಕೆಲಸ ಮಾಡುವುದನ್ನು ಷರಿಯತ್ ಕಾನೂನು ತಡೆಯುವುದಿಲ್ಲ.
ತಾಲಿಬಾನ್ ಈ ಹಿಂದೆ ಷರಿಯಾವನ್ನು ಹೇಗೆ ಅರ್ಥೈಸಿತು?
1996 ರಿಂದ 2001 ರವರೆಗೆ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಿಸಿದಾಗ, ಅವರು ದೂರದರ್ಶನ ಮತ್ತು ಸಂಗೀತ ಉಪಕರಣಗಳನ್ನು ನಿಷೇಧಿಸಿದರು. ನಡವಳಿಕೆ, ಉಡುಗೆ ಮತ್ತು ಚಲನೆಯ ಮೇಲಿನ ನಿರ್ಬಂಧಗಳನ್ನು ಹೇರಿದರು. ಪರಿಶೀಲನೆಗೆ ನೈತಿಕತೆ ಪೊಲೀಸ್ ಅಧಿಕಾರಿಗಳು ನೇಮಿಸಿದರು, ತಮ್ಮ ನಿಯಮಗಳನ್ನು ಪಾಲಿಸದ ಮಹಿಳೆಯರನ್ನು ಅವಮಾನಿಸಿದರು ಮತ್ತು ಚಾವಟಿ ಏಟಿನಿಂದ ಶಿಕ್ಷಿಸಿದರು. 1996 ರಲ್ಲಿ, ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಮಹಿಳೆಯೊಬ್ಬಳು ಉಗುರು ಬಣ್ಣ ಧರಿಸಿದ್ದಕ್ಕಾಗಿ ಹೆಬ್ಬೆರಳಿನ ತುದಿಯನ್ನು ಕತ್ತರಿಸಿದ್ದರು. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಯಿತು. ಮಹಿಳೆಯರು ಮನೆಯ ಹೊರಗೆ ಕೆಲಸ ಮಾಡುವುದನ್ನು ಅಥವಾ ಪುರುಷ ರಕ್ಷಕರಿಲ್ಲದೆ ಮನೆಯಿಂದ ಹೊರ ಹೋಗುವುದನ್ನು ನಿಷೇಧಿಸಿದರು, ಹುಡುಗಿಯರ ಶಾಲೆಗೆ ಹೋಗದಂತೆ ತಡೆದರು ಮತ್ತು ನಿಯಮ ಉಲ್ಲಂಘಿಸಿದ ಜನರನ್ನು ಸಾರ್ವಜನಿಕವಾಗಿ ಹೊಡೆದು ಶಿಕ್ಷಿಸಿದರು. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ
ಈಗಿನ ಪರಿಸ್ಥಿತಿ ಏನು?
ಮಹಿಳೆಯರಿಗೆ ಷರಿಯತ್ ಕಾನೂನು ಅಡಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮಹಿಳಾ ನಿರೂಪಕಿ ತಾಲಿಬಾನ್ ವಕ್ತಾರರ ಸಂದರ್ಶನ ನಡೆಸುವ ಮೂಲಕ ಭರವಸೆ ಹುಟ್ಟಿಸುವ ಪ್ರಯತ್ನ ಮಾಡಲಾಯಿತು. ಆದರೆ ಇದಾದ ಒಂದೆರಡು ದಿನಗಳಲ್ಲಿ ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸದಂತೆ ಒತ್ತಡ ಹೇರಲಾಗಿದೆ. ಮಹಿಳೆಯರನ್ನು ಪ್ರವೇಶ ನೀಡದ ಬಗ್ಗೆ ಮಹಿಳಾ ನಿರೂಪಕಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ
ಸದ್ಯ ಕಾಬೂಲ್‍ನ ಹೊರಗೆ, ಕೆಲವು ಮಹಿಳೆಯರಿಗೆ ಪುರುಷ ಸಂಬಂಧಿಕರ ಸಹಾಯವಿಲ್ಲದೆ ಮನೆಯಿಂದ ಹೊರಹೋಗಬೇಡಿ ಎಂದು ಹೇಳಲಾಗಿದೆ ಮತ್ತು ತಾಲಿಬಾನ್ ಮಹಿಳೆಯರನ್ನು ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ತಾಲಿಬಾನಿಗಳು ಕೆಲವು ಮಹಿಳಾ ಚಿಕಿತ್ಸಾಲಯಗಳು ಮತ್ತು ಬಾಲಕಿಯರ ಶಾಲೆಗಳನ್ನು ಮುಚ್ಚಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ “ಇಸ್ಲಾಮಿಕ್ ಕಾನೂನಿನ ಮಿತಿಯೊಳಗೆ” ಅಥವಾ ತಮ್ಮ ಹೊಸದಾಗಿ ಸ್ಥಾಪಿತವಾದ ಆಡಳಿತದ ಅಡಿಯಲ್ಲಿ ಶರಿಯಾ ಹಕ್ಕುಗಳನ್ನು ಹೊಂದಿರುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಇದರ ಅರ್ಥವೇನೆಂದು ಈವರೆಗೂ ಸ್ಪಷ್ಟವಾಗುತ್ತಿಲ್ಲ. ಇದನ್ನೂ ಓದಿ:“ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”
ಕಾಬೂಲ್: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ ಎಂದು ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರಿಫಾ ಗಫಾರಿ ಆತಂಕವನ್ನು ಕ್ಯಕ್ತಪಡಿಸಿದ್ದಾರೆ.
ಜರಿಫಾ ಗಫಾರಿ ತನ್ನ 27ನೇ ವಯಸ್ಸಿನಲ್ಲಿ ಮೇಯರ್ ಹುದ್ದೆಗೇರಿ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಎನ್ನುವ ಖ್ಯಾತಿಗೆ ಪಾತ್ರರಾದವರು. 2018ರಲ್ಲಿ ಮೇಯರ್ ಗಾದಿಗೆ ಏರಿದ್ದ ಜರಿಫಾ ತನ್ನ ದೇಶದ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದವರು.
ಕೆಲ ವಾರಗಳ ಹಿಂದೆ ತಾಲಿಬಾನ್ ದೇಶದ ಜಿಲ್ಲೆಗಳನ್ನು ವಶಪಡಿಸಿಕೊಳ್ಳುವುದರಲ್ಲಿ ತೊಡಗಿದ್ದಾಗಲೂ ಅವರು ಆಶಾಭಾವವನ್ನು ಹೊಂದಿದ್ದರು. ಆಫ್ಘನ್ ಸೇನೆ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಲಿದೆ ಎಂದೇ ನಂಬಿದ್ದರು. ಕೇವಲ ಎರಡೇ ವಾರಗಳ ಅವಧಿಯಲ್ಲಿ ಅವರ ಆಶಾಗೋಪುರ ಕುಸಿದು ಧರಾಶಾಯಿಯಾಗಿದೆ. ಈ ಸಮಯದಲ್ಲಿ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನ ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ
ತಾಲಿಬಾನಿಗಳು ನಾನಿರುವಲ್ಲಿಗೇ ಬಂದು ನನ್ನನ್ನು ಕೊಲ್ಲುವುದನ್ನೇ ಎದುರು ನೋಡುತ್ತಿದ್ದೇನೆ. ಏಕೆಂದರೆ ತಾಲಿಬಾನಿಗಳ ಕಣ್ಣು ಮೊದಲು ಬೀಳುವುದೇ ನನ್ನಂಥವಳ ಮೇಲೆ. ತಾಲಿಬಾನಿಗಳ ರಾಜ್ಯದಲ್ಲಿ ಶಿಕ್ಷೆಗೆ ಒಳಗಾಗಲು ದೇಶದ್ರೋಹದ ಕೆಲಸವನ್ನೇ ಮಾಡಬೇಕೆಂದಿಲ್ಲ. ಇಲ್ಲಿ ಹೆಣ್ಣಾಗಿ ಹುಟ್ಟಿದರೆ ಸಾಕು. ನನ್ನನ್ನಾಗಲಿ ನನ್ನ ಕುಟುಂಬವನ್ನಾಗಲಿ ರಕ್ಷಣೆ ಮಾಡಲು ಯಾರೂ ಇಲ್ಲ. ನನ್ನ ಸಹಾಯಕ್ಕೆ ಯಾರೂ ಬಾರರು. ಅದು ನನಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು ನಾನು ಓಡಿಹೋಗಲು ಆಗುವುದಿಲ್ಲ. ಓಡಿ ಹೋದರೂ ಎಲ್ಲಿಗೇ ಎಂದು ಓಡಲಿ. ಎಲ್ಲೆಡೆ ಅವರೇ ತುಂಬಿಕೊಂಡಿರುವಾಗ ಎಲ್ಲಿ ಅವಿತುಕೊಳ್ಳಲಿ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?
ದನಿಯೆತ್ತರಿಸಿ ಮಾತನಾಡುವ, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿರುವ ಹೆಣ್ನನ್ನು ತಾಲಿಬಾನಿಗಳು ಎಂದಿಗೂ ಉಳಿಸುವುದಿಲ್ಲ. ನನ್ನ ಸೇನೆಯಲ್ಲಿ ಜನರಲ್ ಹುದ್ದೆಯ ಅಧಿಕಾರಿಯಾಗಿದ್ದವರು. ಅವರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದುವರೆಗೂ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನಗಳು ನಡೆದಿವೆ. ಪ್ರಜಾಪ್ರಭುತ್ವ ಸರ್ಕಾರ ಇದ್ದ ಸಮಯದಲ್ಲೇ ತಾಲಿಬಾನಿಗಳು ಅವರ ಕಡೆಯವರಿಮ್ದ ನನ್ನನ್ನು ಕೊಲ್ಲಲು ಶತಪ್ರಯತ್ನ ನಡೆಸಿದ್ದರು. ಈ ಬಾರಿ ಅವರದೇ ಸರ್ಕಾರ ಬರುತ್ತಿದೆ. ರಾಜಧಾನಿಗೆ ತಾಲಿಬಾನ್ ಮುತ್ತಿಗೆ ಹಾಕುತ್ತಿದ್ದಂತೆಯೇ ಸರ್ಕಾರ ಹಾಗೂ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಮುಳುಗುತ್ತಿದ್ದ ಹಡಗನ್ನು ತ್ಯಜಿಸಿದಂತೆ ಸುರಕ್ಷಿತ ಸ್ಥಳಗಳಿಗೆ ತಪ್ಪಿಸಿಕೊಂಡು ಹೋದರು. ಆದರೆ ನನ್ನಂಥವರಿಗೆ ಬೇರೆಲ್ಲೂ ಹೋಗಿ ಅವಿತುಕೊಳ್ಳುವ ಶಕ್ತಿ ಇಲ್ಲ. ಇದನ್ನೂ ಓದಿ: ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಮಕ್ಕಳಂತೆ ಆಟವಾಡಿದ ತಾಲಿಬಾನಿಗಳು
ಅಫ್ಘಾನಿಸ್ತಾನಕ್ಕೆ ತಾಲಿಬಾನ್ ಬಂಡುಕೋರರು ನುಗ್ಗಿ ದಾಂಧಲೆ ಶುರುವಿಟ್ಟುಕೊಂಡ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳಿಂದ ಜನರು ವಲಸೆ ಬಂದಿದ್ದು ರಾಜಧಾನಿ ಕಾಬೂಲಿಗೆ. ದೇಶದ ಯಾವುದೇ ಮೂಲೆಯಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಇಡೀ ದೇಶ ಅವರ ತೆಕ್ಕೆಗೆ ಜಾರುವುದಿಲ್ಲ ಎನ್ನುವ ಒಂದೇ ಒಂದು ನಂಬಿಕೆಯಿಂದ ಅವರು ಕಾಬೂಲಿಗೆ ಬಂದಿದ್ದರು. ಅವರು ಕಾಬೂಲಿನ ಬೀದಿಗಳಲ್ಲಿ ಕುಟುಂಬ ಸಹಿತ ಬಿಡಾರ ಹೂಡಿದ್ದರು. ಇದನ್ನೂ ಓದಿ: ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್
ಅವರೆಲ್ಲರ ಪ್ರಾರ್ಥನೆ ಅಲ್ಲಾಹ್ ಕಿವಿ ಮುಟ್ಟಿಲ್ಲ. ದೇಶ ತಾಲಿಬಾನ್ ತೆಕ್ಕೆಗೆ ಜಾರಿದೆ. ಕಾಬೂಲಿನ ಬೀದಿಗಳಲ್ಲಿ ನೆಲೆನಿಂತಿರುವ ಮಂದಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಮ್ಮ ಊರುಗಳಿಗೆ ಮರಳುತ್ತಾರೆ. ತಾಲಿಬಾನಿ ರಾಜ್ಯಭಾರಕ್ಕೆ ತಲೆಬಾಗುತ್ತಾರೆ. ಇಲ್ಲವೇ ಅವರ ವಿರೋಧ ಕಟ್ಟಿಕೊಂಡು ಮಸಣ ಸೇರುತ್ತಾರೆ. ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ನಮ್ಮ ಆಡಳಿತದಲ್ಲಿ ಯಾವುದೇ ಅಪಾಯ ಒದಗುವುದಿಲ್ಲ ಎಂದು ತಾಲಿಬಾನ್ ಹೇಳಿದೆ ಎಂಬುದೇನೋ ನಿಜ. ಆದರೆ ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ತಾಲಿಬಾನ್ ತನ್ನ ಯಾವ ಮಾತನ್ನು ಪಾಲಿಸಿದೆ ಎನ್ನುವುದರ ಲೆಕ್ಕ ಸಿಗುವುದಿಲ್ಲ. ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು
ಅಫ್ಘಾನ್ ಸರ್ಕಾರ ಮತ್ತು ಸೇನೆ ಜೊತೆ ಕೆಲಸ ನಿರ್ವಹಿಸಿದವರಿಗೆ ಕ್ಷಮೆ ನೀಡಲಾಗುವುದು ಎಂದು ತಾಲಿಬಾನ್ ತಿಳಿಸಿದೆ. ಆದರೆ ಇನ್ನೊಂದೆಡೆ ಈಗಾಗಲೇ ತಾಲಿಬಾನ್ ತನ್ನ ವಿರೋಧಿಗಳನ್ನು ಮಟ್ಟ ಹಾಕುವ ಸಲುವಾಗಿ ಮಾರಣಹೋಮ ಶುರು ಮಾಡಿದೆ ಎನ್ನುವ ವರದಿಗಳು ಕೇಳಿಬರುತ್ತಿವೆ.